Connect with us

ಪುತ್ತೂರು

ನ.2 ಕ್ಕೆ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ‘ದೀಪಾವಳಿ ವಸ್ತ್ರ ವಿತರಣೆ’ : 75000 ಜನರಿಗೆ 3.5 ಕೋಟಿ ವೆಚ್ಚದ ವಸ್ತ್ರ ವಿತರಣೆ : ಈ ಬಾರಿ ಸಿಎಂ ಸಿದ್ದರಾಮಯ್ಯ ಮುಖ್ಯ ಅತಿಥಿ – ಶಾಸಕ ಅಶೋಕ್ ರೈ

Published

on



Ad Widget

Ad Widget

Ad Widget

Ad Widget

ಪುತ್ತೂರು : ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಪ್ರತಿವರ್ಷದಂತೆ ಜರಗುವ ದೀಪಾವಳಿಯ ವಸ್ತ್ರವಿತರಣೆ ಈ ಬಾರಿ ನ.2ರಂದು ಜರುಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

Ad Widget

Ad Widget

Ad Widget

Ad Widget

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅಶೋಕ್ ರೈ, ಈ ಬಾರಿ 75000 ಜನಕ್ಕೆ ವಸ್ತ್ರ ವಿತರಣೆ ಹಾಗೂ 45 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಇರಲಿದೆ ಎಂದರು.

Ad Widget

Ad Widget

Ad Widget alt="Ad Widget"/>

Ad Widget

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಷ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನ.2ರಂದು ಪುತ್ತೂರಿನ ಕೊಂಬೆಟ್ಟು ಗ್ರೌಂಡ್ ನಲ್ಲಿ ವಸ್ತ್ರವಿತರಣೆ ಜರುಗಲಿದೆ.

Ad Widget

Ad Widget <> Ad Widget

ಕಾರ್ಯಕ್ರಮಕ್ಕೆ ಹೊಸ ಹೆಸರನ್ನು ಇಡಲಾಗುತ್ತದೆ ಈ ಬಾರಿ ಕೇವಲ ವಸ್ತ್ರಕ್ಕೆ 3.5 ಕೋಟಿ ವೆಚ್ಚವಾಗಲಿದೆ ಅವೆಲ್ಲವೂ ನಮ್ಮ ಸ್ವಂತ ಹಣದಲ್ಲಿ ಖರೀದಿಸುವುದು ಎಂದು ಅಶೋಕ್ ರೈ ತಿಳಿಸಿದರು.



Ad Widget

ಮಹಾಲಿಂಗೇಶ್ವರ ದೇವಸ್ಥಾನದಿಂದ ಕೊಂಬೆಟ್ಟು ವಯಸ್ಕರಿಗೆ ಅಟೋ ರಿಕ್ಷಾ ಅಥವಾ ಬಗ್ಗಿ ವಾಹನ ವ್ಯವಸ್ಥೆ ಇರಲಿದೆ.ಗೂಡುದೀಪ ಸ್ಪರ್ಧೆಗೆ ಬಹುಮಾನವಿದೆ ಎಂದು ರೈ ತಿಳಿಸಿದರು.

Ad Widget

Ad Widget

ಇದು ಕಾಂಗ್ರೇಸ್‍ ಪಕ್ಷದ ಸಮಾವೇಶವಲ್ಲ. ಇದು ದೀಪಾವಳಿಯ ವಸ್ತ್ರವಿತರಣೆ ಎಲ್ಲರ ಸಹಕಾರ ಅಗತ್ಯ ಎಂದು ಸಭೆಯಲ್ಲಿ ಸೇರಿದ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆಮಂತ್ರಣವನ್ನು ವಾಟ್ಸಾಪ್ ನಲ್ಲಿ ಎಲ್ಲರಿಗೂ ಕಳುಹಿಸಿ. ಶಾಸಕರ ನೆಲೆಯಲ್ಲಿ ನಿಲ್ಲುವ ಯೋಗ್ಯತೆ ಬಂದಿದೆ ಅಂದರೆ ಅದರಲ್ಲಿ ಒಂದು ವಸ್ತ್ರವಿತರಣಾ ಕಾರ್ಯಕ್ರಮದ ಪಾಲು ಇದೆ ಎಂದು ಎಂದರು.

ಸಮಾಜದಲ್ಲಿ ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರನ್ನು ಹುಡುಕಿ ಸನ್ಮಾನ ಮಾಡುವುದು ಎಂದು ತೀರ್ಮಾನಿಸಲಾಗಿದೆ ಎಂದರು.

ದರ್ಬೆ ರೈ ಎಸ್ಟೇಟ್ ಟ್ರಸ್ಟ್ ನ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ
ಕಾವು ಹೇಮನಾಥ ಶೆಟ್ಟಿ,ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ನಿಹಾಲ್ ರೈ, ಅಮಳ ರಾಮಚಂದ್ರ, ಮುರಳೀಧರ ರೈ ಮಠಂದಬೆಟ್ಟು,ನಿರಂಜನ ರೈ ಮಠಂದಬೆಟ್ಟು, ಜಯಪ್ರಕಾಶ ಬದಿನಾರು, ಕೃಷ್ಣ ಪ್ರಸಾದ್ ಬೊಳ್ಳಾವು ವೇದಿಕೆ ಉಪಸ್ಥಿತರಿದ್ದರು.

ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆ ವತಿಯಿಂದ ಕ್ಯಾಂಪಸ್ ಸಂದರ್ಶನ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಕಂಪನಿಯ ಹೆಚ್.ಆರ್. ಅಧಿಕಾರಿ ಸುನಿಲ್ ಹಾಗೂ ನೇಮಕಾತಿ ಅಧಿಕಾರಿ ಸಂತೋಷ್.ವಿ.ಜೋಸ್ ಸಂದರ್ಶನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Ad Widget

Ad Widget <> Ad Widget

ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂತೋಷ್.ವಿ.ಜೋಸ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಿದರು.



Ad Widget

ಈ ಸಂದರ್ಭದಲ್ಲಿ ಸಂಸ್ಥೆಯ ಪ್ಲೇಸ್‌ಮೆಂಟ್ ವಿಭಾಗದ ಅಧಿಕಾರಿ ಉಷಾಕಿರಣ್ ಹಾಗೂ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Continue Reading

ಅಪರಾಧ

Uppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ

Published

on



Ad Widget

Ad Widget

Ad Widget

Ad Widget

ತೋಟದ ಕೆಲಸಕ್ಕೆ ಬರುತ್ತೇನೆಂದು ಹೇಳಿ ತೋಟದ ಮಾಲಕರೊಬ್ಬರಿಂದ ₹2 ಸಾವಿರ ಪಡೆದು ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಕೋಡಿಂಬಾಡಿ ಪರಿಸರದಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹೇಳಿ ತೋಟದ ಮಾಲಕರೊಬ್ಬರಿಂದ ₹2 ಸಾವಿರ ಪಡೆದು ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಕೋಡಿಂಬಾಡಿ ಪರಿಸರದಲ್ಲಿ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೋಡಿಂಬಾಡಿ ಪರಿಸರದ ಪ್ರಗತಿಪರ ಕೃಷಿಕರೊಬ್ಬರ ಮನೆಗೆ ನಾಲ್ಕು ದಿನಗಳ ಹಿಂದೆ ತೆರಳಿದ ಅಪರಿಚಿತ ವ್ಯಕ್ತಿ, ತಾನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವನು ಎಂದು ಪರಿಚಯಿಸಿಕೊಂಡಿದ್ದಾನೆ. ತೋಟದ ಕೆಲಸಕ್ಕೆ ಶಾಶ್ವತವಾಗಿ ಕಾರ್ಮಿಕರು ಬೇಕೇ ಎಂದು ವಿಚಾರಿಸಿದ್ದಾನೆ. ಕೆಲಸಗಾರರ ಅಗತ್ಯವಿದ್ದ ಹಿನ್ನೆಲೆಯಲ್ಲಿ ಕೃಷಿಕರು ಬೇಕು ಎಂದು ತಿಳಿಸಿದಾಗ, ತಾನು ಸದ್ಯ ಗೇರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ತನ್ನ ಬಟ್ಟೆ-ಬರೆ ಹಾಗೂ ಇತರ ಸಾಮಗ್ರಿಗಳನ್ನು ತೆಗೆದುಕೊಂಡು, ಹೆಂಡತಿ-ಮಕ್ಕಳೊಂದಿಗೆ ಬರುವುದಾಗಿ ಹೇಳಿದ್ದಾನೆ.

Ad Widget

Ad Widget <> Ad Widget

ಆದರೆ ರಿಕ್ಷಾ ಮಾಡಿಕೊಂಡು ಬರಲು ತನ್ನ ಬಳಿ ಹಣವಿಲ್ಲ ಎಂದು ಹೇಳಿ ಮೊದಲಿಗೆ ₹1 ಸಾವಿರ ಕೇಳಿದ್ದಾನೆ. ಆತನ ಮಾತನ್ನು ನಂಬಿದ ತೋಟದ ಮಾಲಕರು ಹಣ ನೀಡಿದ್ದಾರೆ. ಬಳಿಕ ಅಂಗಡಿಯಲ್ಲಿ ಸ್ವಲ್ಪ ಸಾಲವಿದ್ದು, ಅದನ್ನು ತೀರಿಸಲು ಮತ್ತೊಂದು ₹1 ಸಾವಿರ ನೀಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೂ ಒಪ್ಪಿದ ಕೃಷಿಕರು ಒಟ್ಟು ₹2 ಸಾವಿರ ನೀಡಿದ್ದಾರೆ.



Ad Widget

ಹಣ ಪಡೆದುಕೊಂಡು ತೆರಳಿದ ವ್ಯಕ್ತಿ ನಾಲ್ಕು ದಿನ ಕಳೆದರೂ ಮತ್ತೆ ಕೃಷಿಕರ ಮನೆಗೆ ಬಂದಿಲ್ಲ. ಆತನ ಮೊಬೈಲ್‌ ನಂಬರ್ ಕೇಳಿದಾಗ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದ ಎನ್ನಲಾಗಿದೆ.

Ad Widget

Ad Widget

ತೋಟದ ಕೆಲಸಗಾರರ ಕೊರತೆಯನ್ನು ಬಳಸಿಕೊಂಡು ಇಂತಹ ರೀತಿಯಲ್ಲಿ ಕೃಷಿಕರನ್ನು ವಂಚಿಸುವ ಸಾಧ್ಯತೆಯಿದ್ದು, ಇದೇ ವ್ಯಕ್ತಿ ಇತರ ಕೃಷಿಕರನ್ನೂ ಸಂಪರ್ಕಿಸಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಅಪರಿಚಿತ ವ್ಯಕ್ತಿಗಳ ಮಾತನ್ನು ನಂಬಿ ಹಣ ನೀಡುವ ಮುನ್ನ ಕೃಷಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Ad Widget
Continue Reading

ಶಿಕ್ಷಣ

Ambika-ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆಯಲ್ಲಿ ಯೋಧ ಗೌರವ ಕಾರ್ಯಕ್ರಮ; ಸೈನಿಕರ ಪ್ರಾಣರಕ್ಷಣೆಗೆ ಆಧುನಿಕ ತಂತ್ರಜ್ಞಾನಗಳಿವೆ – ಸುಂದರ ಪೂಜಾರಿ

Published

on



Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಅವರು ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಈಗಿನ ದಿನಮಾನಗಳಲ್ಲಿ ಸೈನ್ಯದ ಎಲ್ಲಾ ವಿಭಾಗಗಳಲ್ಲೂ ಸೈನಿಕರ ಪ್ರಾಣಕ್ಕೆ ಅಪಾಯವಾಗದಂತೆ ತಡೆಯಲು ತಂತ್ರಜ್ಞಾನ ಸಹಾಯಕವಾಗಿದೆ. ಸೈನಿಕರ ಪ್ರಾಣಕ್ಕೆ ತೊಂದರೆಯಾಗಬಾರದೆನ್ನುವ ಕಾರಣದಿಂದ ಕರ್ತವ್ಯದ ಸಮಯದಲ್ಲಿ ಸೈನಿಕರು ಎಲ್ಲಿದ್ದರೂ ಮಿಲಿಟರಿ ವ್ಯವಸ್ಥೆಗೆ ಸೂಚನೆ ಸಿಗುವ ತಂತ್ರಜ್ಞಾನವಿದೆ ಎಂದು ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಜುಲೈ 31ರಂದು ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Ad Widget

Ad Widget <> Ad Widget

ದೇಶಸೇವೆ ಮಾಡಲು ಸೈನ್ಯಕ್ಕೆ ಸೇರುವುದು ಒಂದು ಉತ್ತಮ ಸಾಧ್ಯತೆ. ಹಾಗೆಂದು ಸೈನ್ಯಕ್ಕೆ ಸೈನಿಕರಾಗಿಯೇ ಸೇರಬೇಕೆಂದಿಲ್ಲ. ವೈದ್ಯರಾಗಿಯೂ, ಅಭಿಯಂತರರಾಗಿಯೂ, ತಂತ್ರಜ್ಞರಾಗಿಯೂ ಕೂಡ ಸೇವೆಯನ್ನು ಸಲ್ಲಿಸಲು ಅವಕಾಶಗಳಿವೆ ಎಂದರಲ್ಲದೆ ತಮ್ಮ ದೀರ್ಘಕಾಲದ ಅನುಭವದ ಸಾರವನ್ನು ವಿದ್ಯಾಥಿಗಳೊಂದಿಗೆ ಹಂಚಿಕೊಂಡರು.



Ad Widget

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಸೈನಿಕರು ಕೇವಲ ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ಸಮಾಜದ ವಿವಿಧ ಕುಟುಂಬಗಳ ರಕ್ಷಣೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಳ್ಳುತ್ತಾರೆ. ಹಾಗಾಗಿ ನಾವು ಎಲ್ಲೇ ಹೋಗಲಿ, ಎಷ್ಟೇ ದೂರ ಪ್ರಯಾಣಿಸಲಿ ನಮ್ಮ ಹೆಮ್ಮೆಯ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಆದ್ದರಿಂದ ಅಂಬಿಕಾ ವಿದ್ಯಾಸಂಸ್ಥೆಯು ಕೇವಲ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಿಲ್ಲ. ನಮ್ಮ ದೇಶದ ಸೈನಿಕರನ್ನೂ ಒಡಗೂಡಿ ಅಂಬಿಕಾ ಪರಿವಾರವೆನಿಸಿಕೊಂಡಿದೆ ಎಂದು ನುಡಿದರು.
ಸುಂದರ ಪೂಜಾರಿ ದಂಪತಿಯನ್ನು ಅಂಬಿಕಾ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.

Ad Widget

Ad Widget

ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.

6ನೇ ತರಗತಿಯ ಆರಾಧ್ಯ ಸ್ವಾಗತಿಸಿದರು. 9ನೇ ತರಗತಿಯ ಮಾನ್ಯಲಕ್ಷೀ ಎನ್ ಪಿ ಯೋಧರ ಪರಿಚಯಗೈದರು. 9ನೇ ತರಗತಿಯ ಕುವೀರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿದ್ಯಾರ್ಥಿನಿ ದೀಪ್ತಿ ಬಿ ಪಿ ಸಹಕರಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading