ಕ್ರೀಡೆ
Philomena-ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಫಿಲೋಮಿನಾ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಸಂಘದ ಆಶ್ರಯದಲ್ಲಿ ಮೈಸೂರಿನ ಎಪಿಜೆ ಅಬ್ದುಲ್ ಕಲಾಂ ಇಂಡೋರ್ ಸ್ಟೇಡಿಯಂ ಮಹಾಜನ ಕಾಲೇಜಿನಲ್ಲಿ ಆಗಸ್ಟ್ 16 ರಿಂದ 18ರವರೆಗೆ ನಡೆದ ರಾಜ್ಯಮಟ್ಟದ ಯುವ ಕಿರಿಯ ಮತ್ತು ಹಿರಿಯ ವಿಭಾಗದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎರಡು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಸಂಘದ ಆಶ್ರಯದಲ್ಲಿ ಮೈಸೂರಿನ ಎಪಿಜೆ ಅಬ್ದುಲ್ ಕಲಾಂ ಇಂಡೋರ್ ಸ್ಟೇಡಿಯಂ ಮಹಾಜನ ಕಾಲೇಜಿನಲ್ಲಿ ಆಗಸ್ಟ್ 16 ರಿಂದ 18ರವರೆಗೆ ನಡೆದ ರಾಜ್ಯಮಟ್ಟದ ಯುವ ಕಿರಿಯ ಮತ್ತು ಹಿರಿಯ ವಿಭಾಗದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎರಡು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ದ್ವಿತೀಯ ಕಲಾ ವಿಭಾಗದ ಧ್ರುವ ಜೆ ಭಂಡಾರಿ ಬೆಳ್ಳಿ ಪದಕವನ್ನು ಹಾಗೂ ಪ್ರಥಮ ಕಲಾ ವಿಭಾಗದ ದಿಶಾನ್ ಎಂ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಅಶ್ವತ್ ಕೆ ಎಸ್ ಮತ್ತು ಜಯಪ್ರಸಾದ್ ರೈ ತರಬೇತಿ ನೀಡಿರುತ್ತಾರೆ. ಧ್ರುವ ಜೆ ಭಂಡಾರಿ ಇವರು ಪಾಂಗಳಾಯಿ ನಿವಾಸಿ ನಯನಾ ಕೆ ಎಸ್ ರವರ ಪುತ್ರ. ದಿಶಾನ್ ಎಂ ಆರ್ಯಾಪು ನಿವಾಸಿ ಬಾಬು ಮರಿಕೆ ಮತ್ತು ಪವಿತ್ರ ದಂಪತಿಗಳ ಪುತ್ರ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ಕ್ರೀಡೆ
Vaibhav Suryavamshi-52 ಎಸೆತಗಳಲ್ಲಿ ದ್ವಿಶತಕ, 28 ಸಿಕ್ಸರ್ಗಳ ಅಬ್ಬರ; ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ
ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ದೋಹಾದಲ್ಲಿ ನಡೆದ ‘ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ್ದಾರೆ.
ದೋಹಾ: ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ದೋಹಾದಲ್ಲಿ ನಡೆದ ‘ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ್ದಾರೆ.
28 ಸಿಕ್ಸರ್, 7 ಬೌಂಡರಿಗಳೊಂದಿಗೆ 204 ರನ್..!
ಯುಎಇ ನಾಯಕ ಬಾಸಿಲ್ ಹಮೀದ್ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ವೈಭವ್ ತಮ್ಮ ಐತಿಹಾಸಿಕ ದ್ವಿಶತಕ ಪೂರೈಸಿದರು. ಆದರೆ, ದ್ವಿಶತಕದ ಸಂಭ್ರಮದ ಬೆನ್ನಲ್ಲೇ ಮುಂದಿನ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಕೇವಲ 53 ಎಸೆತಗಳನ್ನು ಎದುರಿಸಿದ ಅವರು 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಸಿಡಿಸಿದರು.
2024ರಲ್ಲಿ ನ್ಯೂಜಿಲೆಂಡ್ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಬಾರಿಸಿ ನಿರ್ಮಿಸಿದ್ದ ದಾಖಲೆಯನ್ನು ವೈಭವ್ ಇದೀಗ ಹಿಂದಿಕ್ಕಿದ್ದಾರೆ.
ಅತಿ ವೇಗದ ಶತಕದ ದಾಖಲೆಯೂ ವೈಭವ್ ಹೆಸರಿಗೆ
ದ್ವಿಶತಕದ ಜೊತೆಗೆ ವೈಭವ್ ಮತ್ತೊಂದು ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಲಿಸ್ಟ್-ಎ ಕ್ರಿಕೆಟ್ನ ಅತಿ ವೇಗದ ಶತಕದ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ 29 ಎಸೆತಗಳಲ್ಲಿ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಈ ಇಬ್ಬರ ದಾಖಲೆಗಳನ್ನು ವೈಭವ್ ಮುರಿದಿದ್ದಾರೆ.
ಹರ್ಪ್ರೀತ್ ಭಾಟಿಯಾ ಶತಕ ವ್ಯರ್ಥ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಭಾರತದ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಅರ್ಷದ್ ಖಾನ್ ದಾಳಿಗೆ ತತ್ತರಿಸಿದ ಯುಎಇ 20 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಭಾರತದ ಮಾಜಿ ದೇಶೀಯ ಕ್ರಿಕೆಟಿಗ ಹರ್ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಸಿಡಿಸಿ ಗಮನ ಸೆಳೆದರು. ಅವರಿಗೆ ಮುಹಮ್ಮದ್ ಶಹದಾದ್ (28) ಹಾಗೂ ಇಥಾನ್ ಡಿಸೋಜಾ (25) ಉತ್ತಮ ಸಾಥ್ ನೀಡಿದರು.
ಕೊನೆಯಲ್ಲಿ ನಾಯಕ ಬಾಸಿಲ್ ಹಮೀದ್ ಅಜೇಯ 36 ರನ್ ಗಳಿಸುವ ಮೂಲಕ ಯುಎಇ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿತು.
ಭಾರತ ‘ಎ’ ಪರ ಅರ್ಷದ್ ಖಾನ್ 43 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಹರ್ಷ್ ದುಬೆ, ಶಹಬಾಜ್ ಅಹ್ಮದ್, ಸೂರ್ಯಾಂಶ್ ಶೆಡ್ಗೆ ಹಾಗೂ ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಬ್ಯಾಟಿಂಗ್ಗೆ ಇಳಿದ ಭಾರತ ‘ಎ’ ತಂಡದ ಪರ ವೈಭವ್ ಸೂರ್ಯವಂಶಿ ನಡೆಸಿದ ಸಿಕ್ಸರ್ಗಳ ಅಬ್ಬರಕ್ಕೆ ಯುಎಇ ಬೌಲರ್ಗಳು ತತ್ತರಿಸಿದರು.
ಕ್ರೀಡೆ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಭುವನ್ರಾಮ್ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಟಿಯು ತಂಡಕ್ಕೆ ಆಯ್ಕೆ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ ಇವರು ಚೆನ್ನೈನ ವಿನಾಯಕ ಮಿಶನ್ಸ್ ರೀಸರ್ಚ್ ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 21 ರಿಂದ 23 ರವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ತಿಳಿಸಿದ್ದಾರೆ.
ಕ್ರೀಡೆ
IPL 2027-ಐಪಿಎಲ್ 2027 ಮಿನಿ ಹರಾಜು ಡಿ.16ಕ್ಕೆ ಫಿಕ್ಸ್: ಆರ್ಸಿಬಿ ಸೇರಿ 10 ತಂಡಗಳ ಪರ್ಸ್ ವಿವರ ಇಲ್ಲಿದೆ..
ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಬೆಂಗಳೂರು, ನ.18: ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಬಳಿ ಅತಿ ಹೆಚ್ಚು ಹಣ!
ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ತಂಡದ ಪರ್ಸ್ನಲ್ಲಿ ಬರೋಬ್ಬರಿ ₹47.45 ಕೋಟಿ ಉಳಿದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ₹40.15 ಕೋಟಿ ಹಣದೊಂದಿಗೆ ನಂತರದ ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ₹39.50 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ ₹32.60 ಕೋಟಿ ಹಣವಿದೆ.
ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ ₹8.75 ಕೋಟಿ ಮಾತ್ರ ಉಳಿದಿದ್ದು, 10 ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಹೊಂದಿರುವ ತಂಡವಾಗಿದೆ.
ಡೆಲ್ಲಿ, ಮುಂಬೈಗೆ ಹೆಚ್ಚು ಆಟಗಾರರ ಖರೀದಿ ಅವಕಾಶ
ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಲು ಅವಕಾಶ ಹೊಂದಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ 8, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಲಾ 7 ಆಟಗಾರರನ್ನು ಖರೀದಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ತಲಾ 6 ಸ್ಥಾನಗಳು ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ.
10 ತಂಡಗಳ ಪರ್ಸ್ ಮೊತ್ತ ಮತ್ತು ಖಾಲಿ ಸ್ಥಾನಗಳ ವಿವರ
ತಂಡ ಉಳಿದ ಹಣ ಖಾಲಿ ಸ್ಥಾನ ವಿದೇಶಿ ಆಟಗಾರರ ಸ್ಥಾನ
ಲಕ್ನೋ ಸೂಪರ್ ಜೈಂಟ್ಸ್ ₹47.45 ಕೋಟಿ 7 3
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ 8 3
ಸನ್ರೈಸರ್ಸ್ ಹೈದರಾಬಾದ್ ₹40.15 ಕೋಟಿ 7 3
ಡೆಲ್ಲಿ ಕ್ಯಾಪಿಟಲ್ಸ್ ₹39.50 ಕೋಟಿ 9 4
ಮುಂಬೈ ಇಂಡಿಯನ್ಸ್ ₹32.60 ಕೋಟಿ 9 2
ಚೆನ್ನೈ ಸೂಪರ್ ಕಿಂಗ್ಸ್ ₹28.05 ಕೋಟಿ 6 2
ರಾಜಸ್ಥಾನ್ ರಾಯಲ್ಸ್ ₹27.05 ಕೋಟಿ 6 2
ಪಂಜಾಬ್ ಕಿಂಗ್ಸ್ ₹18.60 ಕೋಟಿ 6 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ₹14.15 ಕೋಟಿ 6 1
ಗುಜರಾತ್ ಟೈಟಾನ್ಸ್ ₹8.75 ಕೋಟಿ 3 2
ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು
ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ.
2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗಾಗಿ ₹120 ಕೋಟಿ ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಸೇರ್ಪಡೆಯಾಗುತ್ತದೆ. ಹೀಗಾಗಿ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ ₹130 ಕೋಟಿಗೆ ಏರಿಕೆಯಾಗಲಿದೆ.
ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾವ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಮತ್ತು ಯಾವ ತಂಡ ಬಲಿಷ್ಠ ಪಡೆಯನ್ನು ಕಟ್ಟಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.
-
ಸ್ಥಳೀಯ23 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ಅಪರಾಧ23 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಅಂತರ ರಾಜ್ಯ23 hours agoSabarimala-ಶಬರಿಮಲೆ: ದೇವಸ್ಥಾನ ಹಾಗೂ ಅಂಗಡಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; ಅಂಗಡಿಗಳಿಗೆ ₹1 ಲಕ್ಷ ದಂಡ
-
ಅಪರಾಧ23 hours agoCyber scam-ಟೀ ಶರ್ಟ್ ಖರೀದಿಸಿದರೆ ಐ-ಫೋನ್ ಗಿಫ್ಟ್..! ಮಂಗಳೂರಿನ ವೈದ್ಯನಿಗೆ 1.65 ಲಕ್ಷ ರೂ. ಸೈಬರ್ ವಂಚನೆ
-
ಮಂಗಳೂರು21 hours agoSoujanya case: Big Breaking: ಸೌಜನ್ಯ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ಗಳ ಮಸಾಲಾ ಸುದ್ದಿಗೆ ಖರ್ಗೆ ಗರಂ! ವೈಜ್ಞಾನಿಕ ದಾಖಲೆಗಳ ಆಧಾರದಲ್ಲೆ ತನಿಖೆ
-
ಬಿಗ್ ನ್ಯೂಸ್24 hours agoChetan Prakash-ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ಕಜೆ ಯವರಿಗೆ ಗೋವಾ – ಕರ್ನಾಟಕ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಧಕರಿಗೆ ನೀಡುವ ‘ವೈದ್ಯಕೀಯ ಸೇವಾರತ್ನ ಪ್ರಶಸ್ತಿ – 2026’ ಪ್ರಶಸ್ತಿ ಪ್ರಧಾನ
-
ಬಿಗ್ ನ್ಯೂಸ್6 hours agoRain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
-
ಬಿಗ್ ನ್ಯೂಸ್23 hours agoHeavy rain-ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ಚಿಂತಾಮಣಿಯಲ್ಲಿ 54 ಮಿ.ಮೀ. ಮಳೆ ದಾಖಲು; ಕೋಲಾರ, ಬೆಂಗಳೂರು ಭಾಗದಲ್ಲೂ ವರ್ಷಧಾರೆ..!















