Connect with us

ಅಂತರ ರಾಜ್ಯ

Trainee doctor-ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯಿಂದ ಬಯಲಾಯ್ತು ಆಘಾತಕಾರಿ ಅಂಶ

Published

on

Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಆ. 09ರಂದು ಕಲ್ಕತ್ತಾದ ಆರ್‌ಜಿಕಾರ್ ಮಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ವಿಚಾರ ಹೊರಬರುತ್ತಿದ್ದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ವಿಫಲರಾದ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಆಗ್ರಹ ಕೇಳಿ ಬರುತ್ತಿದೆ. ಇದೀಗ ಮರಣೋತ್ತರ ಪರೀಕ್ಷೆಯ ಕೆಲ ಅಂಶಗಳು ಬಯಲಾಗಿದ್ದು, ರಾಷ್ಟ್ರವ್ಯಾಪಿ ಮತ್ತಷ್ಟು ಪ್ರತಿಭಟನೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ.

Ad Widget

Ad Widget alt="Ad Widget"/>

Ad Widget

ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಹಲ್ಲೆ ನಡೆಸಿ, ಕೈಗಳಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ವಿದ್ಯಾರ್ಥಿನಿಯ ದೇಹದ ಮೇಲೆ 16 ಗಾಯಗಳು ಹಾಗೂ ಆಂತರಿಕವಾಗಿ 9 ಗಾಯಗಳಿವೆ ಎಂಬುದನ್ನು ಮರಣೋತ್ತರ ಪರೀಕ್ಷೆ ಖಚಿತಪಡಿಸಿದೆ.

Ad Widget

Ad Widget <> Ad Widget

ವಿದ್ಯಾರ್ಥಿನಿಯ ಜನನಾಂಗದಲ್ಲಿ ಬಲವಂತವಾಗಿ ಗಾಯ ಮಾಡಿರುವ ಗುರುತು ಕಂಡು ಬಂದಿದ್ದು ಲೈಂಗಿಕ ಶೋಷಣೆ ನಡೆದಿರುವುದನ್ನು ಸಾಬೀತುಪಡಿಸಿದೆ. ಕೊಲೆ ಹಾಗೂ ಅತ್ಯಾಚಾರದ ಹಿಂದೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಇದ್ದಾರೆ. ಸಂತ್ರಸ್ತೆ ದೇಹದಲ್ಲಿ 150 ಎಂಜಿ ವೀರ್ಯ ಕಂಡು ಬಂದಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.

ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಸುಪ್ರೀಂಕೋರ್ಟ್ ಸಹ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ವೈದ್ಯರು ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವ ಇತರ ವೃತ್ತಿಪರರ ಸುರಕ್ಷತೆಗಾಗಿ ನಿಯಮಗಳನ್ನು ರೂಪಿಸಲು 10 ಮಂದಿ ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಕೂಡ ಅದು ರಚಿಸಿದೆ. ಈ ಸಮಿತಿಯು ಮೂರು ವಾರಗಳಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕಿದೆ. ಅಂತಿಮ ವರದಿ ಸಲ್ಲಿಕೆಗೆ ಎರಡು ತಿಂಗಳ ಗಡುವು ನೀಡಲಾಗಿದೆ.

Click to comment

Leave a Reply

ಅಂತರ ರಾಜ್ಯ

Trisha-ವಿಜಯ್ ಸಿಎಂ ಬೆನ್ನಲ್ಲೇ ತ್ರಿಷಾ ರಾಜಕೀಯ ಎಂಟ್ರಿಗೆ ಸಿದ್ಧತೆ? ‘ಜಯಲಲಿತಾ ಉತ್ತರಾಧಿಕಾರಿ’ ಎಂದ ಅಭಿಮಾನಿಗಳು..!

Published

on

Ad Widget

Ad Widget

Ad Widget

Ad Widget

ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಖ್ಯಾತ ನಟಿ ತ್ರಿಷಾ ಕೃಷ್ಣನ್ ಕೂಡ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ವಿಜಯ್ ಮತ್ತು ತ್ರಿಷಾ ಸಾರ್ವಜನಿಕ ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಅವರಿಬ್ಬರ ನಡುವಿನ ಸಂಬಂಧದ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ತ್ರಿಷಾ ಅವರ ರಾಜಕೀಯ ಪ್ರವೇಶದ ಬಗ್ಗೆಯೂ ಅಭಿಮಾನಿಗಳ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.

Ad Widget

Ad Widget

Ad Widget

Ad Widget

ಚೆನ್ನೈ: ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಖ್ಯಾತ ನಟಿ ತ್ರಿಷಾ ಕೃಷ್ಣನ್ ಕೂಡ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ವಿಜಯ್ ಮತ್ತು ತ್ರಿಷಾ ಸಾರ್ವಜನಿಕ ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಅವರಿಬ್ಬರ ನಡುವಿನ ಸಂಬಂಧದ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ತ್ರಿಷಾ ಅವರ ರಾಜಕೀಯ ಪ್ರವೇಶದ ಬಗ್ಗೆಯೂ ಅಭಿಮಾನಿಗಳ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.

Ad Widget

Ad Widget alt="Ad Widget"/>

Ad Widget

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಅವರ ಆಪ್ತ ಸ್ನೇಹಿತೆ ಎಂದೇ ಗುರುತಿಸಿಕೊಂಡಿರುವ ತ್ರಿಷಾ ಕೂಡ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಈ ನಿರೀಕ್ಷೆಯೊಂದಿಗೆ ಅಭಿಮಾನಿಗಳ ಗುಂಪೊಂದು ‘ಇಳಯ ಪುರಟ್ಟಿ ತಲೈವಿ ತ್ರಿಷಾ’ ಹೆಸರಿನಲ್ಲಿ ಹೊಸ ವೇದಿಕೆಯನ್ನು ಆರಂಭಿಸಿದೆ.

Ad Widget

Ad Widget <> Ad Widget

ಸಾರ್ವಜನಿಕ ಹಿತಾಸಕ್ತಿ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ತ್ರಿಷಾ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆಸುವುದಾಗಿ ಸಂಘಟನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ತ್ರಿಷಾ ಕೂಡ ರಾಜಕೀಯ ಪಯಣ ಆರಂಭಿಸಿದರೆ ತಮಿಳುನಾಡಿನ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ಹಾದಿಯಲ್ಲಿ ತ್ರಿಷಾ?
ಅಭಿಮಾನಿಗಳು ತ್ರಿಷಾ ಅವರಿಗೆ ‘ಇಳಯ ಪುರಟ್ಟಿ ತಲೈವಿ’ (ಯುವ ಕ್ರಾಂತಿಕಾರಿ ನಾಯಕಿ) ಎಂಬ ಬಿರುದನ್ನೂ ನೀಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕಿ ದಿವಂಗತ ಜೆ. ಜಯಲಲಿತಾ ಅವರನ್ನು ‘ಪುರಟ್ಟಿ ತಲೈವಿ’ (ಕ್ರಾಂತಿಕಾರಿ ನಾಯಕಿ) ಎಂದು ಕರೆಯಲಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿ ತ್ರಿಷಾ ಅವರಿಗೂ ಅಂತಹದ್ದೇ ಬಿರುದು ನೀಡಿ, ಜಯಲಲಿತಾ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಲಾಗುತ್ತಿದೆ.

Ad Widget

Ad Widget

ಜಯಲಲಿತಾ ಅವರ ವ್ಯಕ್ತಿತ್ವ ಮತ್ತು ಆಡಳಿತ ಶೈಲಿಯನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು, ತಮಿಳುನಾಡಿಗೆ ಅವರಂತಹ ನಾಯಕಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪ್ರತಿಯೊಂದು ಬೆಳವಣಿಗೆಯ ಬಗ್ಗೆಯೂ ಜಯಲಲಿತಾ ಮಾಹಿತಿ ಹೊಂದಿದ್ದರು. ಸರಕಾರಿ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ನಿರಂತರ ನಿಗಾ ಇರಿಸುತ್ತಿದ್ದರು ಎಂದು ಸಂಘಟನೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದ ಜಯಲಲಿತಾ ಅವರ ಆಡಳಿತ ಶೈಲಿಯನ್ನು ಉಲ್ಲೇಖಿಸಿರುವ ಅಭಿಮಾನಿಗಳು, ತ್ರಿಷಾ ಅವರಲ್ಲೂ ಅಂತಹ ನಾಯಕತ್ವದ ಗುಣಗಳಿವೆ ಎಂದು ಪ್ರತಿಪಾದಿಸಿದ್ದಾರೆ.

ವಿಜಯ್-ತ್ರಿಷಾ ಜೋಡಿಯಿಂದ ಹೊಸ ರಾಜಕೀಯ ಅಧ್ಯಾಯ?
ವಿಜಯ್ ನೇತೃತ್ವದ ಟಿವಿಕೆ ಸರಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಅಭಿಮಾನಿಗಳು, ತ್ರಿಷಾ ಕೂಡ ರಾಜಕೀಯ ಪ್ರವೇಶಿಸಿದರೆ ಜಯಲಲಿತಾ ಅವರ ಆಡಳಿತವನ್ನು ಹೋಲುವ ಉತ್ತಮ ಆಡಳಿತವನ್ನು ತಮಿಳುನಾಡಿನಲ್ಲಿ ಕಾಣಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ತ್ರಿಷಾ ಅವರ ವ್ಯಕ್ತಿತ್ವ ಜಯಲಲಿತಾ ಅವರನ್ನು ಹೋಲುತ್ತದೆ. ವಿವಿಧ ಸಂದರ್ಭಗಳಲ್ಲಿ ಅವರ ಗುಣಗಳನ್ನು ಗಮನಿಸಿದ್ದೇವೆ. ಅವರ ಆಪ್ತರಿಗೂ ಈ ವಿಚಾರ ತಿಳಿದಿದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಈ ಅಭಿಯಾನದ ಮೊದಲ ಹೆಜ್ಜೆಯಾಗಿ ‘ಇಳಯ ಪುರಟ್ಟಿ ತಲೈವಿ ತ್ರಿಷಾ ಪೇರವೈ’ ಎಂಬ ಸಂಘಟನೆಯನ್ನು ಆರಂಭಿಸಲಾಗಿದೆ. ಈ ವೇದಿಕೆಯ ಮೂಲಕ ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿ, ಆ ಮೂಲಕ ತ್ರಿಷಾ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸುವುದು ಅಭಿಮಾನಿಗಳ ಉದ್ದೇಶವಾಗಿದೆ.

ಆದರೆ, ತ್ರಿಷಾ ಅವರು ರಾಜಕೀಯ ಪ್ರವೇಶಿಸುವ ಕುರಿತು ಈವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಸದ್ಯಕ್ಕೆ ಇದು ಅಭಿಮಾನಿಗಳ ಮಟ್ಟದಲ್ಲಿ ನಡೆಯುತ್ತಿರುವ ಅಭಿಯಾನ ಮತ್ತು ನಿರೀಕ್ಷೆಯಷ್ಟೇ ಆಗಿದೆ.

ಈ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಮುಂದೆ ತಾನು ತಮಿಳುನಾಡಿನ ಮುಖ್ಯಮಂತ್ರಿಯಾಗುವುದಾಗಿ ತ್ರಿಷಾ ಹೇಳಿದ್ದ ವಿಡಿಯೊ ಕೂಡ ವಿಜಯ್ ಮುಖ್ಯಮಂತ್ರಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿತ್ತು.

ಗಮನಾರ್ಹವೆಂದರೆ, ಜಯಲಲಿತಾ ಕೂಡ ಆರಂಭದಲ್ಲಿ ನಟಿಯಾಗಿಯೇ ಜನಪ್ರಿಯತೆ ಗಳಿಸಿದ್ದರು. ಬಳಿಕ 1982ರಲ್ಲಿ ಎಂ.ಜಿ. ರಾಮಚಂದ್ರನ್ ಅವರ ಎಐಎಡಿಎಂಕೆ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶಿಸಿ, 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ತ್ರಿಷಾ ಅವರ ರಾಜಕೀಯ ಪ್ರವೇಶದ ಕುರಿತು ಅಭಿಮಾನಿಗಳಲ್ಲಿ ಮೂಡಿರುವ ಕುತೂಹಲ ತಮಿಳುನಾಡಿನ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

Ad Widget
Continue Reading

ಅಂತರ ರಾಜ್ಯ

FIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್‌ಫ್ಲುಯೆನ್ಸರ್ ವಹಿದಾ ದೂರು – ಎಫ್‌ಐಆರ್ ದಾಖಲು..!

Published

on

Ad Widget

Ad Widget

Ad Widget

Ad Widget

ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಚೆನ್ನೈ: ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಇನ್‌ಫ್ಲುಯೆನ್ಸರ್ ವಹಿದಾ ಅಖ್ದರ್ (Wahidha Akdhar) ನೀಡಿದ ದೂರಿನ ಆಧಾರದಲ್ಲಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮುತ್ತುಕುಮಾರನ್ ಅವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಇದೇ ವೇಳೆ, ತಮ್ಮ ವಿರುದ್ಧ ದೂರು ನೀಡಿರುವ ವಹಿದಾ ವಿರುದ್ಧವೇ ಮುತ್ತುಕುಮಾರನ್ ಪ್ರತಿದೂರು ದಾಖಲಿಸಿದ್ದಾರೆ. ವಹಿದಾ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಏನಿದು ಪ್ರಕರಣ?
‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಇನ್‌ಸ್ಟಾಗ್ರಾಮ್ ಮೂಲಕ ಮುತ್ತುಕುಮಾರನ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು ಎಂದು ವಹಿದಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Ad Widget

Ad Widget

ದೈಹಿಕ ಸಂಪರ್ಕ ಬೆಳೆಸುವ ಮೊದಲು ಮುತ್ತುಕುಮಾರನ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ್ದಾರೆ ಎಂಬುದು ವಹಿದಾ ಅವರ ಆರೋಪವಾಗಿದೆ.

ಈ ಸಂಬಂಧ ವಹಿದಾ ಮೊದಲು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಬಳಿಕ ದೂರನ್ನು ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಿಎನ್‌ಎಸ್ ಸೆಕ್ಷನ್ 69ರ ಅಡಿಯಲ್ಲಿ, ಅತ್ಯಾಚಾರದ ವ್ಯಾಪ್ತಿಗೆ ಬಾರದಿದ್ದರೂ ಮದುವೆಯಾಗುವ ಸುಳ್ಳು ಭರವಸೆ ಸೇರಿದಂತೆ ವಂಚನೆಯ ಮಾರ್ಗಗಳ ಮೂಲಕ ದೈಹಿಕ ಸಂಪರ್ಕ ಬೆಳೆಸುವುದಕ್ಕೆ ಸಂಬಂಧಿಸಿದ ಅಪರಾಧವನ್ನು ಪರಿಗಣಿಸಲಾಗುತ್ತದೆ.

ನವೆಂಬರ್ 9ರಂದು ವಹಿದಾ ಅವರು ಮುತ್ತುಕುಮಾರನ್ ಜೊತೆಗಿನ ಸಂಬಂಧದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡ ಬಳಿಕ ಈ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಜೊತೆಯಾಗಿರುವ ವಿಡಿಯೊವನ್ನು ಪ್ರಕಟಿಸಿದ್ದ ಅವರು, ಮುತ್ತುಕುಮಾರನ್ ನೀಡಿದ್ದ ಭರವಸೆಗಳ ಬಗ್ಗೆ ಪ್ರಶ್ನಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ, “ನೀನು ಹೇಳಿದ್ದೆಲ್ಲವೂ ನಿನಗೆ ಕೇವಲ ತಮಾಷೆಯಾಗಿತ್ತು” ಎಂದು ಬರೆದುಕೊಂಡಿದ್ದರು.

ಇದರ ಬೆನ್ನಲ್ಲೇ ವಹಿದಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಈ ಪ್ರಕರಣದ ಕುರಿತು ಹಿರಿಯ ಗೀತರಚನೆಕಾರ ತಾಮರೈ ಕೂಡ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದು, ಮುತ್ತುಕುಮಾರನ್ ಅವರನ್ನು ಟೀಕಿಸಿ, ಆರೋಪಗಳ ಬಗ್ಗೆ ತಮ್ಮ ಕಡೆಯ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.

ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್-8’ರಲ್ಲಿ ಸ್ಪರ್ಧಿಸುವ ಮೂಲಕ ಮುತ್ತುಕುಮಾರನ್ ಜನಪ್ರಿಯತೆ ಗಳಿಸಿದ್ದರು. 2025ರ ಜನವರಿ 19ರಂದು ನಡೆದ ಫಿನಾಲೆಯಲ್ಲಿ ಅವರು ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದರು.

ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್ 8’ರಲ್ಲಿ ಭಾಗವಹಿಸುವ ಮೂಲಕ ಮುತ್ತುಕುಮಾರನ್ ಅಪಾರ ಜನಪ್ರಿಯತೆ ಗಳಿಸಿದ್ದರು. ಜನವರಿ 19, 2025ರಂದು ನಡೆದ ಫಿನಾಲೆಯಲ್ಲಿ ಅವರು ಶೋನ ವಿಜೇತರಾಗಿ ಹೊರಹೊಮ್ಮಿದ್ದರು.

Ad Widget
Continue Reading

ಅಂತರ ರಾಜ್ಯ

WhatsApp Web: WhatsApp Web ಬಳಕೆದಾರರೇ ಎಚ್ಚರ..! ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗದಿದ್ದರೆ ನಿಮ್ಮ ಖಾಸಗಿ ಚಾಟ್ ಬೇರೆಯವರ ಪಾಲು; ಕೇಂದ್ರ ಸರಕಾರದಿಂದ ಮಹತ್ವದ ಎಚ್ಚರಿಕೆ

Published

on

Ad Widget

Ad Widget

Ad Widget

Ad Widget

ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

Ad Widget

Ad Widget alt="Ad Widget"/>

Ad Widget

ಈ ಕುರಿತು ಹೊಸ ಸಲಹಾಸೂಚಿ ಬಿಡುಗಡೆ ಮಾಡಿರುವ ನ್ಯಾಷನಲ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್‌ನ ನ್ಯಾಷನಲ್ ಸೈಬರ್ ಕ್ರೈಂ ಥ್ರೆಟ್ ಅನಾಲಿಟಿಕ್ಸ್ ಯೂನಿಟ್, ಕಂಪ್ಯೂಟರ್‌ನಲ್ಲಿ WhatsApp Web ಲಾಗಿನ್ ಆಗಿಯೇ ಉಳಿದಿದ್ದರೆ ಅನಧಿಕೃತ ವ್ಯಕ್ತಿಗಳು ಬಳಕೆದಾರರ ಖಾಸಗಿ ಸಂದೇಶಗಳು, ಸಂಪರ್ಕ ಸಂಖ್ಯೆಗಳು ಹಾಗೂ ಗ್ರೂಪ್ ಚಾಟ್‌ಗಳನ್ನು ವೀಕ್ಷಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Ad Widget

Ad Widget <> Ad Widget

ಅಷ್ಟೇ ಅಲ್ಲದೆ, ಬಳಕೆದಾರರ ಖಾತೆಯನ್ನು ದುರುಪಯೋಗಪಡಿಸಿಕೊಂಡು ಅವರ ಹೆಸರಿನಲ್ಲಿ ಇತರರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಂಚನೆ ಹಾಗೂ ವಿವಿಧ ಸೈಬರ್ ಹಗರಣಗಳನ್ನು ನಡೆಸುವ ಅಪಾಯವೂ ಇದೆ ಎಂದು ಎಚ್ಚರಿಸಿದೆ.

ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗಲೇಬೇಕು!
ಬಹುತೇಕ ಬಳಕೆದಾರರು WhatsApp Web ಬಳಸಿದ ಬಳಿಕ ಬ್ರೌಸರ್ ವಿಂಡೋ ಅಥವಾ ಟ್ಯಾಬ್ ಮುಚ್ಚುವುದರಿಂದ ಖಾತೆ ಲಾಗೌಟ್ ಆಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಕೇವಲ ಟ್ಯಾಬ್ ಮುಚ್ಚುವುದರಿಂದ ಲಾಗಿನ್ ಅವಧಿ ಅಂತ್ಯಗೊಳ್ಳುವುದಿಲ್ಲ. ಹೀಗಾಗಿ ಪ್ರತಿ ಬಾರಿ ಬಳಕೆ ಮುಗಿದ ತಕ್ಷಣ ಖಾತೆಯಿಂದ ಲಾಗೌಟ್ ಆಗುವುದು ಕಡ್ಡಾಯ ಎಂದು ಸಲಹೆ ನೀಡಿದೆ.

Ad Widget

Ad Widget

ಇತರರೂ ಬಳಸಬಹುದಾದ ಕಚೇರಿ ಕಂಪ್ಯೂಟರ್‌ಗಳು, ಹಂಚಿಕೆಯ ಕಂಪ್ಯೂಟರ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಸಾಧನಗಳಲ್ಲಿ WhatsApp Web ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಇಂತಹ ಕಂಪ್ಯೂಟರ್‌ಗಳಲ್ಲಿ ಸರಕಾರಿ, ಸಾಂಸ್ಥಿಕ, ಹಣಕಾಸು, ಗೌಪ್ಯ ಅಥವಾ ಇತರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದೆ.

ಸೈಬರ್ ಕೆಫೆಗಳು, ಹೋಟೆಲ್‌ಗಳ ವ್ಯವಹಾರ ಕೇಂದ್ರಗಳು, ಸಾರ್ವಜನಿಕ ಸ್ಥಳಗಳು ಹಾಗೂ ಬಾಡಿಗೆಗೆ ಪಡೆದ ಕಂಪ್ಯೂಟರ್‌ಗಳಂತಹ ವಿಶ್ವಾಸಾರ್ಹವಲ್ಲದ ಸಾಧನಗಳಲ್ಲಿ WhatsApp Webಗೆ ಲಾಗಿನ್ ಆಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅನಿವಾರ್ಯವಾಗಿ ಬಳಸಬೇಕಾದರೆ ಇನ್‌ಕಾಗ್ನಿಟೊ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸುವಂತೆ ಶಿಫಾರಸು ಮಾಡಿದೆ.

ಈ ಲಕ್ಷಣಗಳು ಕಂಡುಬಂದರೆ ಎಚ್ಚರ!
ತಮ್ಮ ಖಾತೆಯಿಂದ ತಮಗೆ ತಿಳಿಯದೆಯೇ ಸಂದೇಶಗಳು ರವಾನೆಯಾಗುವುದು, ಸಂಪರ್ಕದಲ್ಲಿರುವವರಿಂದ ಅಸಹಜ ಪ್ರತಿಕ್ರಿಯೆಗಳು ಬರುವುದು ಅಥವಾ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಎಚ್ಚರಿಕೆ ವಹಿಸಬೇಕು. ಇವು ಖಾತೆಗೆ ಅನಧಿಕೃತ ಪ್ರವೇಶವಾಗಿರುವ ಸೂಚನೆಗಳಾಗಿರಬಹುದು ಎಂದು ತಿಳಿಸಿದೆ.

ಇದರೊಂದಿಗೆ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ಬ್ರೌಸರ್‌ಗಳು ಹಾಗೂ ಭದ್ರತಾ ಸಾಫ್ಟ್‌ವೇರ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಬೇಕು. ಅನುಮಾನಾಸ್ಪದ ಡೌನ್‌ಲೋಡ್‌ಗಳು, ಅಪರಿಚಿತ ಫೈಲ್‌ಗಳು ಹಾಗೂ ಕ್ರ್ಯಾಕ್ ಮಾಡಿದ ಸಾಫ್ಟ್‌ವೇರ್‌ಗಳನ್ನು ಬಳಸಬಾರದು ಎಂದು ಸಲಹೆ ನೀಡಿದೆ.

ಒಟ್ಟಿನಲ್ಲಿ, WhatsApp Web ಬಳಕೆ ಮುಗಿದ ಬಳಿಕ ಕಡ್ಡಾಯವಾಗಿ ಲಾಗೌಟ್ ಆಗುವುದು, ಅಪರಿಚಿತ ಹಾಗೂ ವಿಶ್ವಾಸಾರ್ಹವಲ್ಲದ ಕಂಪ್ಯೂಟರ್‌ಗಳಲ್ಲಿ ಲಾಗಿನ್ ಆಗುವುದನ್ನು ತಪ್ಪಿಸುವುದು ಮತ್ತು ಖಾತೆಯಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ನಿಗಾ ಇಡುವ ಮೂಲಕ ಖಾತೆ ದುರುಪಯೋಗ ಹಾಗೂ ಹಣಕಾಸು ವಂಚನೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು I4C ತಿಳಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!