ವಿದೇಶ
Viral Video| ಮೇಯಲು ಬಿಟ್ಟ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ!; ಕೋಪಗೊಂಡ ಹಸು ಮಾಡಿದ್ದೇನು ಗೊತ್ತಾ!
ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಅತ್ಯಾಚಾರ ಮಾಡಲು ಹತ್ನಿಸಿದ್ದು, ಕೋಪಗೊಂಡ ಹಸು ಕಾಮುಕನನ್ನು ತಿವಿದು ಎತ್ತಿ ಬಿಸಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗೆಗಿನ ವರದಿ ಇಲ್ಲಿದೆ.
ನಿಖರ ನ್ಯೂಸ್ :- ದೇಶದಾದ್ಯಂತ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರತೀ ದಿನವೂ ಘನಘೋರ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ. ಕೇವಲ ಹೆಣ್ಣು ಮಕ್ಕಳ ಮೇಲಷ್ಟೆ ಅಲ್ಲದೇ ಕೆಲ ಕಾಮುಕರು ತಮ್ಮ ತೀಟೆ ತೀರಿಸಲು ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯ ಎಸಗುತ್ತಿದ್ದಾರೆ. ಸದ್ಯ, ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಅತ್ಯಾಚಾರ ಮಾಡಲು ಹತ್ನಿಸಿದ್ದು, ಕೋಪಗೊಂಡ ಹಸು ಕಾಮುಕನನ್ನು ತಿವಿದು ಎತ್ತಿ ಬಿಸಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗೆಗಿನ ವರದಿ ಇಲ್ಲಿದೆ.
ಹಸುವಿನ ಮೇಲೆ ಅತ್ಯಾಚಾರಕ್ಕೆ ಹತ್ನಿಸಿದ 26 ವರ್ಷದ ಯುವಕ!
ಈ ಘಟನೆ ನಡೆದಿರುವುದು ದೂರದ ಥೈಲ್ಯಾಂಡ್ ದೇಶದಲ್ಲಿ. ಇಲ್ಲಿಗೆ ಪ್ರವಾಸ ಬಂದಿದ್ದ ರಷ್ಯಾದ 26 ವರ್ಷದ ಯುವಕನೊಬ್ಬ ಕಂಠಪೂರ್ತಿ ಕುಡಿದು ಸಂಪೂರ್ಣ ಬೆತ್ತಲಾಗಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಅತ್ಯಾಚಾರ ನಡೆಸಲು ಹತ್ನಿಸಿದ್ದಾನೆ. ಹಸುವಿನ ಹಿಂದೆ ಮುಂದೆ ಓಡಾಡುತ್ತ
ತನ್ನ ಕಾಮ ತೀಟೆಗೆ ಬಳಸಿಕೊಳ್ಳಲು ನೋಡಿದ್ದಾನೆ. ಇದರಿಂದ ಕೋಪಗೊಂಡ ಹಸು ಪ್ರತಿ ದಾಳಿ ಮಾಡಿದ್ದು, ಕಾಮುಕನನ್ನು ತಿವಿದು ಎತ್ತಿಬಿಸಾಡಿದೆ.
ಕಾಮುಕನನ್ನು ರಕ್ಷಿಸಿದ ಪೊಲೀಸರು!
ಕುಡಿತದ ಅಮಲಿನಲ್ಲಿ ಮೂಕ ಪ್ರಾಣಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಕಾಮುಕನ ಚಳಿ ಬಿಡಿಸಿದ ಹಸು ಆತನನ್ನು ತನ್ನ ಕೊಂಬಿನಿಂದ ಸರಿಯಾಗಿ ತಿವಿದಿದೆ. ಹಸುವಿನ ದಾಳಿಯಿಂದ ಕಂಗಾಲಾದ ಯುವಕ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ. ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಕಾಮುಕನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆಯ ಸಂಪೂರ್ಣ ಚಿತ್ರಣ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾಮುಕನ ಮುಖಕ್ಕೆ ಕ್ಯಾಕರಿಸಿ ಉಗಿದ ನೆಟ್ಟಿಗರು!
ಈ ವಿಡಿಯೋವನ್ನು Beautiful Russia ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ ವಿಡಿಯಖ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಒಬ್ಬ ನೆಟ್ಟಿಗ,’ಈ ಕಾಮುಕನ್ನು ಪೊಲೀಸರು ರಕ್ಷಣೆ ಮಾಡಿದ್ದು ತಪ್ಪು’ ಎಂದರೆ. ಮತ್ತೋರ್ವ, ‘ಕಾಮುಕನ ಚಳಿ ಬಿಡಿಸಿದ ಹಸುವಿಗೆ ನನ್ನ ಸಲಾಂ’ ಎಂದಿದ್ದಾನೆ.
ಬಿಗ್ ನ್ಯೂಸ್
Meta CEO Zuckerberg-₹538 ಕೋಟಿಯ ಐತಿಹಾಸಿಕ ಕೋಟೆ ಖರೀದಿಸಿದ ಮೆಟಾ ಸಿಇಒ ಜುಕರ್ಬರ್ಗ್..!
ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್ನಲ್ಲಿ ಐತಿಹಾಸಿಕ ಕೋಟೆಯೊಂದನ್ನು ಖರೀದಿಸಿದ್ದಾರೆ. ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿರುವ ಐತಿಹಾಸಿಕ ‘ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್’ ಇದೀಗ ಜುಕರ್ಬರ್ಗ್ ದಂಪತಿಯ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ.
ವಾಷಿಂಗ್ಟನ್: ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್ನಲ್ಲಿ ಐತಿಹಾಸಿಕ ಕೋಟೆಯೊಂದನ್ನು ಖರೀದಿಸಿದ್ದಾರೆ. ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿರುವ ಐತಿಹಾಸಿಕ ‘ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್’ ಇದೀಗ ಜುಕರ್ಬರ್ಗ್ ದಂಪತಿಯ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ.
ಸುಮಾರು ₹538 ಕೋಟಿ ಮೌಲ್ಯದ ಈ ಭವ್ಯ ಎಸ್ಟೇಟ್ 440 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. 1830ರಲ್ಲಿ ನಿರ್ಮಾಣಗೊಂಡಿರುವ ಈ ಐತಿಹಾಸಿಕ ಕೋಟೆಯನ್ನು 2003ರಲ್ಲಿ ನವೀಕರಿಸಲಾಗಿತ್ತು.
ಮೂರು ಅಂತಸ್ತುಗಳನ್ನು ಹೊಂದಿರುವ ಮುಖ್ಯ ಬಂಗಲೆಯು ವಿಶೇಷ ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತದೆ. ಇತಿಹಾಸದ ಪ್ರಕಾರ, ಈ ಕಟ್ಟಡವನ್ನು ಅಂದಿನ ಸಂಸತ್ ಸದಸ್ಯ ಜಾನ್ ಕೀಲಿ ಅವರಿಗಾಗಿ ನಿರ್ಮಿಸಲಾಗಿತ್ತು.
ಐತಿಹಾಸಿಕ ಹಿನ್ನೆಲೆ, ವಿಶಾಲ ಪ್ರದೇಶ ಹಾಗೂ ಭವ್ಯ ವಿನ್ಯಾಸ ಹೊಂದಿರುವ ಈ ಕೋಟೆಯ ಖರೀದಿಯೊಂದಿಗೆ ಜುಕರ್ಬರ್ಗ್ ದಂಪತಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಬಿಗ್ ನ್ಯೂಸ್
Marriage-ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಜೊತೆ ಕಾವ್ಯಾ ಮಾರನ್ ಮದುವೆ: ಗ್ರೀಸ್ನಲ್ಲಿ ಅದ್ಧೂರಿ ಸಮಾರಂಭ..!
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹಮಾಲಕಿ ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನ.11ರಂದು ಗ್ರೀಸ್ನಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಅದ್ಧೂರಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.
ಗ್ರೀಸ್: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹಮಾಲಕಿ ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನ.11ರಂದು ಗ್ರೀಸ್ನಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಅದ್ಧೂರಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.
ಮದುವೆಯ ಮೊದಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನವಜೋಡಿ ಐವರಿ ಬಣ್ಣದ ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸಿದ್ದು, ಸುಂದರ ಕಸೂತಿ ವಿನ್ಯಾಸ ಹಾಗೂ ಮುತ್ತಿನ ಆಭರಣಗಳಿಂದ ಅಲಂಕರಿಸಿಕೊಂಡಿದ್ದಾರೆ. ಬಿಳಿ ಹೂವುಗಳಿಂದ ಸಿಂಗರಿಸಿದ ವೇದಿಕೆಯಲ್ಲಿ ಇಬ್ಬರೂ ನಗುಮುಖದಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಅನಿರುದ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡು, “ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪ್ರೀತಿ… ಜೀವನಪೂರ್ತಿ ಜೊತೆಯಾಗಿ… 11.11” ಎಂದು ಬರೆದುಕೊಂಡಿದ್ದಾರೆ.
ಗ್ರೀಸ್ನಲ್ಲಿ ನಿಶ್ಚಿತಾರ್ಥ, ಗಣ್ಯರ ಉಪಸ್ಥಿತಿ
ಗ್ರೀಸ್ನಲ್ಲಿ ನ.10ರಂದು ಈ ಜೋಡಿಯ ಸಾಂಪ್ರದಾಯಿಕ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅನಿರುದ್ ಅವರ ಮಾವ, ಸೂಪರ್ಸ್ಟಾರ್ ರಜನಿಕಾಂತ್, ಐಶ್ವರ್ಯಾ ರಜನಿಕಾಂತ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಹಲವು ಗಣ್ಯರು ಭಾಗವಹಿಸಿದ್ದರು.
ಅನಿರುದ್ ಮತ್ತು ಕಾವ್ಯಾ ತಮ್ಮ ಪ್ರೀತಿಯ ವಿಚಾರವನ್ನು ಸಾರ್ವಜನಿಕವಾಗಿ ಗೌಪ್ಯವಾಗಿಯೇ ಇರಿಸಿದ್ದರು. 2024ರಲ್ಲಿ ಲಾಸ್ ವೇಗಾಸ್ ಸೇರಿದಂತೆ ವಿದೇಶಿ ಪ್ರವಾಸಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಪ್ರೀತಿಯ ವದಂತಿಗಳು ಹರಡಿದ್ದವು. 2025ರ ಜೂನ್ನಲ್ಲಿ ಅನಿರುದ್ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಕುರಿತ ವದಂತಿಗಳನ್ನು ತಳ್ಳಿಹಾಕಿದ್ದರು. ಆದರೆ ಬಳಿಕ ಕುಟುಂಬದ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಅನಿರುದ್ ಸಾಧನೆ
‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಅನಿರುದ್, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ‘ಜೈಲರ್’, ‘ವಿಕ್ರಮ್’, ‘ಲಿಯೋ’, ‘ಜವಾನ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಕಾವ್ಯಾ ಮಾರನ್ ಅವರು ಸನ್ ಟಿವಿ ನೆಟ್ವರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದು, ಸನ್ ಗ್ರೂಪ್ ಸಂಸ್ಥಾಪಕ ಕಲಾನಿಧಿ ಮಾರನ್ ಅವರ ಪುತ್ರಿ. ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ನ.21ರಂದು ಚೆನ್ನೈನಲ್ಲಿ ಆರತಕ್ಷತೆ
ಗ್ರೀಸ್ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದ ಬಳಿಕ ನ.21ರಂದು ಚೆನ್ನೈನಲ್ಲಿ ಅದ್ಧೂರಿ ವಿವಾಹ ಆರತಕ್ಷತೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ, ರಾಜಕೀಯ, ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಬಿಗ್ ನ್ಯೂಸ್
Sheikh Hasina-ಮರಣದಂಡನೆ ಎದುರಿಸುವುದೇ ಶೇಖ್ ಹಸೀನಾಗೆ ಉಳಿದಿರುವ ಆಯ್ಕೆ ಎಂದ ಬಾಂಗ್ಲಾ ಪ್ರಾಸಿಕ್ಯೂಟರ್
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಎದುರಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾನೂನು ಆಯ್ಕೆಗಳು ಉಳಿದಿಲ್ಲ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ (ICT) ಮುಖ್ಯ ಅಭಿಯೋಜಕ ಮೊಹಮ್ಮದ್ ಅಮೀನುಲ್ ಇಸ್ಲಾಂ ಹೇಳಿದ್ದಾರೆ.
ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಎದುರಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾನೂನು ಆಯ್ಕೆಗಳು ಉಳಿದಿಲ್ಲ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ (ICT) ಮುಖ್ಯ ಅಭಿಯೋಜಕ ಮೊಹಮ್ಮದ್ ಅಮೀನುಲ್ ಇಸ್ಲಾಂ ಹೇಳಿದ್ದಾರೆ.
ಅಲ್ಲದೆ, ಶೇಖ್ ಹಸೀನಾ ಅವರಿಗೆ ಹೊಸ ಪಾಸ್ಪೋರ್ಟ್ ಅಥವಾ ಯಾವುದೇ ಪ್ರಯಾಣ ದಾಖಲೆಗಳನ್ನು ನೀಡುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.
ಶೇಖ್ ಹಸೀನಾ ಅವರಿಗೆ ಹೊಸ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡುವಂತೆ ಲಂಡನ್ ಮೂಲದ ಕಾನೂನು ಸಂಸ್ಥೆಯೊಂದು ದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ಗೆ ಮನವಿ ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಖ್ಯ ಅಭಿಯೋಜಕರು ಈ ಹೇಳಿಕೆ ನೀಡಿದ್ದಾರೆ.
79 ವರ್ಷದ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ಕಾನೂನು ಪ್ರಕ್ರಿಯೆಗಳನ್ನು ಎದುರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ತೀವ್ರ ಪ್ರತಿಭಟನೆ ಹಾಗೂ ಹಿಂಸಾಚಾರದ ಪರಿಣಾಮ 15 ವರ್ಷಗಳ ಅವರ ಆಡಳಿತ ಅಂತ್ಯಗೊಂಡಿತ್ತು. ಬಳಿಕ ದೇಶ ತೊರೆದಿದ್ದ ಹಸೀನಾ ಅಂದಿನಿಂದ ಭಾರತದಲ್ಲಿ ನೆಲೆಸಿದ್ದಾರೆ.
30 ದಿನಗಳಲ್ಲೇ ಮೇಲ್ಮನವಿ ಸಲ್ಲಿಸಬಹುದಿತ್ತು
ಈ ಕುರಿತು ಪ್ರತಿಕ್ರಿಯಿಸಿರುವ ಮೊಹಮ್ಮದ್ ಅಮೀನುಲ್ ಇಸ್ಲಾಂ, ಹಸೀನಾ ಅವರಿಗೆ ನಿಜವಾಗಿಯೂ ಬಾಂಗ್ಲಾದೇಶಕ್ಕೆ ಮರಳುವ ಇಚ್ಛೆ ಇದ್ದಿದ್ದರೆ ವಿಚಾರಣೆ ನಡೆಯುತ್ತಿದ್ದಾಗಲೇ ವಾಪಸಾಗಿ ಪ್ರಕರಣವನ್ನು ಎದುರಿಸಬಹುದಿತ್ತು. ತೀರ್ಪು ಪ್ರಕಟವಾದ 30 ದಿನಗಳೊಳಗೆ ದೇಶಕ್ಕೆ ಮರಳಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇತ್ತು ಎಂದು ತಿಳಿಸಿದ್ದಾರೆ.
‘ದಿ ಡೈಲಿ ಸ್ಟಾರ್’ ವರದಿಯ ಪ್ರಕಾರ, ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಪಾಸ್ಪೋರ್ಟ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
1973ರ ಪಾಸ್ಪೋರ್ಟ್ ಆದೇಶ ಉಲ್ಲೇಖ
1973ರ ಬಾಂಗ್ಲಾದೇಶ ಪಾಸ್ಪೋರ್ಟ್ ಆದೇಶವನ್ನು ಉಲ್ಲೇಖಿಸಿದ ಮುಖ್ಯ ಅಭಿಯೋಜಕರು, ನೈತಿಕ ಅಧಃಪತನಕ್ಕೆ ಸಂಬಂಧಿಸಿದ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರಿಗೆ, ವಿಶೇಷವಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಲಾದವರಿಗೆ ಪಾಸ್ಪೋರ್ಟ್ ಹಾಗೂ ಪ್ರಯಾಣ ದಾಖಲೆಗಳನ್ನು ನಿರಾಕರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳೂ ಈ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಹಸೀನಾ ಅವರ ಪಾಸ್ಪೋರ್ಟ್ ಮನವಿಯ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು, ಮಾಜಿ ಪ್ರಧಾನಿ ಸ್ವತಃ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂಬುದನ್ನು ಗಮನಸೆಳೆದಿದ್ದಾರೆ. ಈ ಪ್ರಕರಣವನ್ನು ನಿರ್ವಹಿಸುತ್ತಿರುವ ಲಂಡನ್ ಮೂಲದ ಕಾನೂನು ಸಂಸ್ಥೆಗೂ ಶೇಖ್ ಹಸೀನಾ ಅವರಿಗೂ ನಡುವೆ ಅಧಿಕೃತ ಕಾನೂನು ಒಪ್ಪಂದವಿದೆಯೇ ಎಂಬ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದ್ದಾರೆ.
-
ಶಿಕ್ಷಣ19 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಅಪರಾಧ13 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ಚಿನ್ನ-ಬೆಳ್ಳಿ ದರ18 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ರಾಜಕೀಯ13 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಸಿನೆಮಾ17 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಸ್ಥಳೀಯ18 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಅಪರಾಧ18 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಅಪರಾಧ18 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ















