ಕ್ರೀಡೆ
Pro Kabaddi-2024ರ ಹರಾಜು ಪ್ರಕ್ರಿಯೆ ಮುಗಿಸಿದ ಪ್ರೋ ಕಬಡ್ಡಿ ಸೀಸನ್ 11!: ಯಾವ ಆಟಗಾರರಯ ಯಾವ ತಂಡಕ್ಕೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಅದ್ದೂರಿ ಕಬಡ್ಡಿ ಲೀಗಿನ 11ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದೆ. ಈ ನಡುವೆ ಶುಕ್ರವಾರವಷ್ಟೇ ಈ ಸೀಸನ್‌ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹರಾಜು ಕಣದಲ್ಲಿದ್ದ 500 ಮಂದಿ ಆಟಗಾರರಲ್ಲಿ 2 ದಿನಗಳಲ್ಲಿ ಒಟ್ಟಾರೆ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಸದ್ಯ, 1 2 ತಂಡಗಳ ಆಟಗಾರರ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ನಿಖರ ನ್ಯೂಸ್ :- ಮಣ್ಣಿನ ಕ್ರೀಡೆ ಕಬಡ್ಡಿಗೆ ರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಪ್ರೋ ಕಬಡ್ಡಿ ಲೀಗ್ ಮತ್ತೊಮ್ಮೆ ಗರಿ ಬಿಚ್ಚಲು ಸಜ್ಜಾಗಿದೆ. ಈ ಅದ್ದೂರಿ ಕಬಡ್ಡಿ ಲೀಗಿನ 11ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದೆ. ಈ ನಡುವೆ ಶುಕ್ರವಾರವಷ್ಟೇ ಈ ಸೀಸನ್‌ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹರಾಜು ಕಣದಲ್ಲಿದ್ದ 500 ಮಂದಿ ಆಟಗಾರರಲ್ಲಿ 2 ದಿನಗಳಲ್ಲಿ ಒಟ್ಟಾರೆ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಸದ್ಯ, 1 2 ತಂಡಗಳ ಆಟಗಾರರ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಕಬಡ್ಡಿ ಪ್ರೀಯರು ಗಮನಿಸಬಹುದಾಗಿದೆ.
ಬೆಂಗಳೂರು ಬುಲ್ಸ್
ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಶೀಲ್, ರೋಹಿತ್ ಕುಮಾರ್, ಸೌರಭ್ ನಂದಲ್, ಆದಿತ್ಯ ಪೊವಾರ್, ಅಕ್ಷಿತ್, ಅರುಳ್ನಂತಬಾಬು, ಪರ್ತೀಕ್, ಅಜಿಂಕ್ಯ ಪವಾರ್ ಪರ್ದೀಪ್ ನರ್ವಾಲ್, ಲಕ್ಕಿ ಕುಮಾರ್, ಮಂಜೀತ್, ಚಂದ್ರನಾಯಕ್ ಎಂ, ಹಸುನ್ ಥೋಂಗ್‌ಕ್ರೂಯಾ, ಪ್ರಮೋತ್ ಸೈಸಿಂಗ್, ನಿತಿನ್ ರಾವಲ್, ಜೈ ಭಗವಾನ್
ಯು.ಪಿ ಯೋಧಾಸ್
ಸುಮಿತ್, ಸುರೇಂದರ್ ಗಿಲ್, ಅಶು ಸಿಂಗ್, ಗಗನ ಗೌಡ ಎಚ್.ಆರ್, ಹಿತೇಶ್, ಶಿವಂ ಚೌಧರಿ, ಭರತ್ ಹೂಡಾ, ಸಾಹುಲ್ ಕುಮಾರ್, ಜಯೇಶ್ ಮಹಾಜನ್, ಗಂಗಾರಾಮ್, ಸಚಿನ್, ಕೇಶವ್ ಕುಮಾರ್, ಮೊಹಮ್ಮದ್ರೇಜಾ ಕಬೌದ್ರಹಂಗಿ, ಹೈದರಾಲಿ ಎಕ್ರಮಿ, ಮಹೇಂದರ್ ಸಿಂಗ್, ಭವಾನಿ ರಜಪೂತ್, ವಿವೇಕ್, ಅಕ್ಷಯ್ ಆರ್.
ಬೆಂಗಾಲ್ ವಾರಿಯರ್ಸ್
ವಿಶ್ವಾಸ್ ಎಸ್, ನಿತಿನ್ ಕುಮಾರ್, ಶ್ರೇಯಸ್ ಉಂಬರದಾಂಡ್, ಆದಿತ್ಯ ಎಸ್. ಶಿಂಧೆ, ದೀಪಕ್ ಅರ್ಜುನ್ ಶಿಂಧೆ, ಮಹಾರುದ್ರ ಗರ್ಜೆ, ಫಜೆಲ್ ಅತ್ರಾಚಲಿ, ಮಣಿಂದರ್ ಸಿಂಗ್, ಚಾಯ್-ಮಿಂಗ್ ಚಾಂಗ್, ನಿತೇಶ್ ಕುಮಾರ್, ಮಯೂರ್ ಜಗನ್ನಾಥ್ ಕದಮ್, ಪ್ರವೀಣ್ ಠಾಕೂರ್, ಸಂಭಾಜಿ ವಾಬಾಲೆ, ಹೇಮ್ ರಾಜ್, ಆಕಾಶ್ ಬಿ ಚವ್ಹಾಣ್, ಅರ್ಜುನ್ ರಾಠಿ, ವೈಭವ್ ಭೌಸಾಹೇಬ್ ಗರ್ಜೆ, ಸಾಗರ್ ಕುಮಾರ್, ಪ್ರಣಯ್ ವಿನಯ್ ರಾಣೆ, ಸುಶೀಲ್ ಕಾಂಬ್ರೇಕರ್, ಯಶ್ ಮಲಿಕ್, ಮಂಜೀತ್, ದೀಪ್ ಕುಮಾರ್.
ಯು ಮುಂಬಾ
ಅಮೀರ್ ಮೊಹಮ್ಮದ್ ಜಫರ್ದಾನೇಶ್, ರಿಂಕು, ಶಿವಂ, ಬಿಟ್ಟು, ಗೋಕುಲಕಣ್ಣನ್ ಎಂ, ಮುಕಿಲನ್ ಷಣ್ಮುಗಂ, ಸೋಂಬೀರ್, ಸುನೀಲ್ ಕುಮಾರ್, ಮಂಜೀತ್, ಸನ್ನಿ, ದೀಪಕ್ ಕುಂದು, ಲೋಕೇಶ್ ಗೋಸ್ಲಿಯಾ, ಅಜಿತ್ ಚೌಹಾಣ್, ಅಮೀನ್ ಘೋರ್ಬಾನಿ, ಪರ್ವೇಶ್ ಭೈನ್‌ವಾಲ್, ಶುಭಂ ಕುಮಾರ್, ಎಂ ಚೋವರ್ ಧನಶೇಖರ್, ವಿಶಾಲ್ ಸಿಂಗ್ ಧನಶೇಖರ್, ಆಶಿಶ್ ಕುಮಾರ್, ಸತೀಶ್ ಕಣ್ಣನ್
ದಬಾಂಗ್ ದೆಹಲಿ
ಅಶು ಮಲಿಕ್, ವಿಕ್ರಾಂತ್, ನವೀನ್ ಕುಮಾರ್, ಆಶಿಶ್, ಹಿಮ್ಮತ್ ಅಂತಿಲ್, ಮನು, ಯೋಗೇಶ್, ಆಶಿಶ್, ಸಿದ್ಧಾರ್ಥ್ ದೇಸಾಯಿ, ಮೋಹಿತ್, ಸಂದೀಪ್, ಎಂಡಿ ಮಿಜನೂರ್ ರೆಹಮಾನ್, ಮೊಹಮ್ಮದ್, ಬಾಬಾ ಅಲಿ, ನಿತಿನ್ ಪನ್ವಾರ್, ಬ್ರಿಜೇಂದ್ರ ಸಿಂಗ್ ಚೌಧರಿ, ಗೌರವ್ ಛಿಲ್ಲರ್, ಹಿಮಾಂಶು, ರಾಹುಲ್ ಪರ್ವೀನ್, ರಿಂಕು ನರ್ವಾಲ್, ವಿನಯ್.
ತೆಲುಗು ಟೈಟನ್ಸ್
ಶಂಕರ್ ಗಡಾಯಿ, ಅಜಿತ್ ಪವಾರ್, ಅಂಕಿತ್, ಓಂಕಾರ್ ಪಾಟೀಲ್, ಪ್ರಫುಲ್ ಜವಾರೆ, ಸಂಜೀವಿ ಎಸ್, ಪವನ್ ಸೆಹ್ರಾವತ್, ಕ್ರಿಶನ್ ಧುಲ್, ವಿಜಯ್ ಮಲಿಕ್, ರೋಹಿತ್, ಸಾಗರ್, ಚೇತನ್ ಸಾಹು, ನಿತಿನ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್, ಮಂಜೀತ್, ಆಶಿಶ್ ನರ್ವಾಲ್, ಅಮಿತ್ ಕುಮಾರ್
ತಮಿಳ್ ತಲೈವಾಸ್
ನರೇಂದರ್, ಸಾಹಿಲ್, ಮೋಹಿತ್, ಆಶಿಶ್, ಸಾಗರ್, ಹಿಮಾಂಶು, ಎಂ. ಅಭಿಷೇಕ್, ನಿತೇಶ್ ಕುಮಾರ್, ನಿತಿನ್ ಸಿಂಗ್, ರೋನಕ್, ವಿಶಾಲ್ ಚಾಹಲ್, ಸಚಿನ್ ತನ್ವರ್, ಅನುಜ್ ಗಾವಡೆ, ಧೀರಜ್ ಬೈಲ್ಮಾರೆ, ರಾಮ್‌ಕುಮಾರ್ ಮಾಯಾಂಡಿ, ಮೊಯಿನ್ ಸಫಾಗಿ, ಅಮೀರ್ಹೋಸೇನ್ ಬಸ್ತಾಮಿ, ಸೌರಭ್ ಫಾಗಾರೆ.
ಪಾಟ್ನಾ ಪೈರೇಟ್ಸ್
ಅಂಕಿತ್, ಸಂದೀಪ್ ಕುಮಾರ್, ಮನೀಶ್, ಅಬಿನಂದ್ ಸುಭಾಷ್, ಕುನಾಲ್ ಮೆಹ್ತಾ, ಸುಧಾಕರ್ ಎಂ, ಶುಭಂ ಶಿಂಧೆ, ಅಯಾನ್, ಸಾಹಿಲ್ ಪಾಟೀಲ್, ದೀಪಕ್, ನವದೀಪ್ ಹಮೀದ್ ಮಿರ್ಜಾಯಿ ನಾಡರ್, ಜಂಗ್ ಕುನ್ ಲೀ, ಗುರುದೀಪ್, ತ್ಯಾಗರಾಜನ್ ಯುವರಾಜ್, ದೀಪಕ್ ರಾಜೇಂದರ್ ಸಿಂಗ್, ಪ್ರಶಾಂತ್ ಕುಮಾರ್ ರಾಠಿ, ಮೀಟೂ , ದೇವಾಂಕ್, ಸಾಗರ್, ಅಮನ್, ಪ್ರವೀಂದರ್ ಬಾಬು ಮುರುಗಸನ್.
ಜೈಪುರ್ ಪಿಂಕ್ ಪ್ಯಾಂಥರ್ಸ್
ಅರ್ಜುನ್ ದೇಶ್ವಾಲ್, ರೆಜಾ ಮಿರ್ಬಘೇರಿ, ಅಂಕುಶ್, ಅಭಿಷೇಕ್ ಕೆಎಸ್, ಅಭಿಜೀತ್ ಮಲಿಕ್, ಸುರ್ಜೀತ್ ಸಿಂಗ್, ರಿತಿಕ್ ಶರ್ಮಾ, ರೋನಕ್ ಸಿಂಗ್, ಸೋಂಬಿರ್, ನಿತಿನ್ ಕುಮಾರ್, ಅಮೀರ್ ಹೊಸೈನ್ ಮೊಹಮ್ಮದ್ಮಲೇಕಿ, ಅರ್ಪಿತ್ ಸರೋಹಾ, ಶ್ರೀಕಾಂತ್ ಜಾಧವ್, ವಿಕಾಶ್ ಕಂಡೋಲಾ, ಮಯನಕ್ ನರ್ವಾಲ್, ನೀರಜ್ ನರ್ವಾಲ್ ರವಿ ಕುಮಾರ್, ಲಕ್ಕಿ ಶರ್ಮಾ, ಕೆ ಧರಣೀಧರನ್, ನವನೀತ್.
ಗುಜರಾತ್ ಜೈಂಟ್ಸ್
ಬಾಲಾಜಿ ಡಿ, ಜಿತೇಂದರ್ ಯಾದವ್, ಪರ್ತೀಕ್ ದಹಿಯಾ, ರಾಕೇಶ್, ನಿತಿನ್, ಗುಮಾನ್ ಸಿಂಗ್, ಸೋಂಬಿರ್, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ವಾಹಿದ್ ರೆಜಾ ಐಮೆಹರ್, ನೀರಜ್ ಕುಮಾರ್, ಮೋನು, ರಾಜ್ ಡಿ ಸಾಲುಂಖೆ, ಹಿಮಾಂಶು, ಹಿಮಾಂಶು ಸಿಂಗ್, ಆದೇಶ್ ಸಿವಾಚ್, ಹರ್ಷ್ ಮಹೇಶ್ ಲಾಡ್, ರೋಹನ್ ಸಿಂಗ್ ಮೋಹಿತ್, ಮನುಜ್, ನಿತೇಶ್.
ಹರಿಯಾಣ ಸ್ಟೀಲರ್ಸ್
ರಾಹುಲ್ ಸೇಠಪಾಲ್, ಘನಶ್ಯಾಮ್ ಮಗರ್, ಜೈದೀಪ್, ಮೋಹಿತ್, ವಿನಯ್, ಜಯ ಸೂರ್ಯ ಎನ್.ಎಸ್, ಹರ್ದೀಪ್, ಶಿವಂ ಅನಿಲ್ ಪತಾರೆ, ವಿಶಾಲ್ ಎಸ್. ತಾಟೆ, ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆ, ಜ್ಞಾನ ಅಭಿಷೇಕ್, ಮಣಿಕಂದನ್ ಎಸ್, ಸಾಹಿಲ್, ವಿಕಾಸ್ ಜಾಧವ್, ಸಂಜಯ್, ಮಣಿಕಂದನ್, ಎಸ್ ನವೀನ್, ಸಂಸ್ಕರ್ ಮಿಶ್ರಾ.
ಕ್ರೀಡೆ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಭುವನ್‌ರಾಮ್ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಟಿಯು ತಂಡಕ್ಕೆ ಆಯ್ಕೆ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್‌ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್‌ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ ಇವರು ಚೆನ್ನೈನ ವಿನಾಯಕ ಮಿಶನ್ಸ್ ರೀಸರ್ಚ್ ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 21 ರಿಂದ 23 ರವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ತಿಳಿಸಿದ್ದಾರೆ.
ಕ್ರೀಡೆ
IPL 2027-ಐಪಿಎಲ್ 2027 ಮಿನಿ ಹರಾಜು ಡಿ.16ಕ್ಕೆ ಫಿಕ್ಸ್: ಆರ್‌ಸಿಬಿ ಸೇರಿ 10 ತಂಡಗಳ ಪರ್ಸ್ ವಿವರ ಇಲ್ಲಿದೆ..
ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಬೆಂಗಳೂರು, ನ.18: ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಬಳಿ ಅತಿ ಹೆಚ್ಚು ಹಣ!
ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ತಂಡದ ಪರ್ಸ್‌ನಲ್ಲಿ ಬರೋಬ್ಬರಿ ₹47.45 ಕೋಟಿ ಉಳಿದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ ಹಣದೊಂದಿಗೆ ನಂತರದ ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ₹39.50 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ ₹32.60 ಕೋಟಿ ಹಣವಿದೆ.
ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ ₹8.75 ಕೋಟಿ ಮಾತ್ರ ಉಳಿದಿದ್ದು, 10 ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಹೊಂದಿರುವ ತಂಡವಾಗಿದೆ.
ಡೆಲ್ಲಿ, ಮುಂಬೈಗೆ ಹೆಚ್ಚು ಆಟಗಾರರ ಖರೀದಿ ಅವಕಾಶ
ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಲು ಅವಕಾಶ ಹೊಂದಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ 8, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ 7 ಆಟಗಾರರನ್ನು ಖರೀದಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ತಲಾ 6 ಸ್ಥಾನಗಳು ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ.
10 ತಂಡಗಳ ಪರ್ಸ್ ಮೊತ್ತ ಮತ್ತು ಖಾಲಿ ಸ್ಥಾನಗಳ ವಿವರ
ತಂಡ ಉಳಿದ ಹಣ ಖಾಲಿ ಸ್ಥಾನ ವಿದೇಶಿ ಆಟಗಾರರ ಸ್ಥಾನ
ಲಕ್ನೋ ಸೂಪರ್ ಜೈಂಟ್ಸ್ ₹47.45 ಕೋಟಿ 7 3
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ 8 3
ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ 7 3
ಡೆಲ್ಲಿ ಕ್ಯಾಪಿಟಲ್ಸ್ ₹39.50 ಕೋಟಿ 9 4
ಮುಂಬೈ ಇಂಡಿಯನ್ಸ್ ₹32.60 ಕೋಟಿ 9 2
ಚೆನ್ನೈ ಸೂಪರ್ ಕಿಂಗ್ಸ್ ₹28.05 ಕೋಟಿ 6 2
ರಾಜಸ್ಥಾನ್ ರಾಯಲ್ಸ್ ₹27.05 ಕೋಟಿ 6 2
ಪಂಜಾಬ್ ಕಿಂಗ್ಸ್ ₹18.60 ಕೋಟಿ 6 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ₹14.15 ಕೋಟಿ 6 1
ಗುಜರಾತ್ ಟೈಟಾನ್ಸ್ ₹8.75 ಕೋಟಿ 3 2
ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು
ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ.
2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗಾಗಿ ₹120 ಕೋಟಿ ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಸೇರ್ಪಡೆಯಾಗುತ್ತದೆ. ಹೀಗಾಗಿ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ ₹130 ಕೋಟಿಗೆ ಏರಿಕೆಯಾಗಲಿದೆ.
ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾವ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಮತ್ತು ಯಾವ ತಂಡ ಬಲಿಷ್ಠ ಪಡೆಯನ್ನು ಕಟ್ಟಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.
ಅಂತರ ರಾಜ್ಯ
Mohammed Shami: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
ಹೊಸದಿಲ್ಲಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
‘ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ’ ಎಂದು ಶಮಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಭಾರತದ ಟೆಸ್ಟ್ ಜೆರ್ಸಿಯನ್ನು ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ನೆನಪಿಸಿಕೊಂಡಿರುವ ಅವರು, ‘ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನಲ್ಲಿದ್ದದ್ದು ಒಂದೇ ಕನಸು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದಾಗಿತ್ತು. ಅಂದಿನಿಂದ ಪ್ರತಿಯೊಂದು ವಿಕೆಟ್, ಪ್ರತಿಯೊಂದು ಹೋರಾಟ, ಪ್ರತಿಯೊಂದು ಗಾಯ ಹಾಗೂ ಪ್ರತಿಯೊಂದು ಪುನರಾಗಮನವೂ ನನಗೆ ಹೊಸ ಪಾಠ ಕಲಿಸಿದೆ’ ಎಂದು ಬರೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನನ್ನ ಜೀವನದ ವಿಶೇಷ ಭಾಗವಾಗಿತ್ತು
‘ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯಾಗಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತ ಸಹ ಆಟಗಾರರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಮಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಒಳ್ಳೆಯ ಹಾಗೂ ಕಷ್ಟದ ಸಮಯಗಳಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.
ತಮ್ಮ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಅವಕಾಶ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಸಂಸ್ಥೆಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಈ ಸಂಸ್ಥೆಗಳು ನೀಡಿದ ಬೆಂಬಲ ಹಾಗೂ ವಿಶ್ವಾಸ ಸದಾ ತಮ್ಮ ಪಾಲಿಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.















