ವಿದೇಶ
Sheikh Hasina-ಬಾಂಗ್ಲಾ : ಪ್ರಧಾನಿ ಶೇಖ್ ಹಸೀನಾ ನಿವಾಸದಿಂದ ಒಳಉಡುಪು ಸಹಿತ ಕೈಗೆ ಸಿಕ್ಕಿದ್ದನ್ನು ದೋಚಿದ ಪ್ರತಿಭಟನಾಕಾರರು..!
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅತ್ತ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿದ್ದಂತೆ, ಇತ್ತ ಢಾಕಾದಲ್ಲಿ ಸಾವಿರಾರು ಪ್ರತಿಭಟನಾಕಾರರು ಪ್ರಧಾನಮಂತ್ರಿ ಅರಮನೆಗೆ ಮುತ್ತಿಗೆ ಹಾಕಿದ್ದಾರೆ. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆಗಳನ್ನೂ ದೋಚಿ ಕೊಂಡೊಯ್ದಿದ್ದಾರೆ. ಹಸೀನಾರ ನಿವಾಸದಲ್ಲಿನ ಬಟ್ಟೆ-ಬರೆ, ಆಭರಣ ಎಲ್ಲವನ್ನೂ ಪ್ರತಿಭಟನಾಕಾರರು ದೋಚಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿವೆ.
ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅತ್ತ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿದ್ದಂತೆ, ಇತ್ತ ಢಾಕಾದಲ್ಲಿ ಸಾವಿರಾರು ಪ್ರತಿಭಟನಾಕಾರರು ಪ್ರಧಾನಮಂತ್ರಿ ಅರಮನೆಗೆ ಮುತ್ತಿಗೆ ಹಾಕಿದ್ದಾರೆ.
ಹಸೀನಾ ಸೀರೆ ದೋಚಿದ ಪ್ರತಿಭಟನಾಕಾರರು:
ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆಗಳನ್ನೂ ದೋಚಿ ಕೊಂಡೊಯ್ದಿದ್ದಾರೆ. ಒಬ್ಬ ವ್ಯಕ್ತಿ ಸೂಟ್ಕೇಸ್ ತುಂಬಾ ಸೀರೆಗಳನ್ನು ತುಂಬಿಕೊಂಡು, “ನನ್ನ ಪತ್ನಿಯನ್ನು ಪಿಎಂ ಮಾಡುತ್ತೇನೆ’ ಎಂದು ಹೇಳಿಕೊಳ್ಳುತ್ತಾ ಹೋಗುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಮತ್ತೋರ್ವ ಯುವಕ ಹಸೀನಾ ಅವರ ಸೀರೆಯನ್ನೇ ಉಟ್ಟು, ಬಕೆಟ್ವೊಂದರಲ್ಲಿ ಬೇರೆ ಬಟ್ಟೆಗಳನ್ನೂ ತುಂಬಿಕೊಂಡು ಹೋಗುತ್ತಿದ್ದಾರೆ. ಈ ಫೋಟೋ ಕೂಡ ವೈರಲ್ ಆಗಿದೆ. ಹಸೀನಾರ ನಿವಾಸದಲ್ಲಿನ ಬಟ್ಟೆ-ಬರೆ, ಆಭರಣ ಎಲ್ಲವನ್ನೂ ಪ್ರತಿಭಟನಾಕಾರರು ದೋಚಿರುವ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ.
ಬಿಗ್ ನ್ಯೂಸ್
Meta CEO Zuckerberg-₹538 ಕೋಟಿಯ ಐತಿಹಾಸಿಕ ಕೋಟೆ ಖರೀದಿಸಿದ ಮೆಟಾ ಸಿಇಒ ಜುಕರ್ಬರ್ಗ್..!
ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್ನಲ್ಲಿ ಐತಿಹಾಸಿಕ ಕೋಟೆಯೊಂದನ್ನು ಖರೀದಿಸಿದ್ದಾರೆ. ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿರುವ ಐತಿಹಾಸಿಕ ‘ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್’ ಇದೀಗ ಜುಕರ್ಬರ್ಗ್ ದಂಪತಿಯ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ.
ವಾಷಿಂಗ್ಟನ್: ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್ನಲ್ಲಿ ಐತಿಹಾಸಿಕ ಕೋಟೆಯೊಂದನ್ನು ಖರೀದಿಸಿದ್ದಾರೆ. ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿರುವ ಐತಿಹಾಸಿಕ ‘ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್’ ಇದೀಗ ಜುಕರ್ಬರ್ಗ್ ದಂಪತಿಯ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ.
ಸುಮಾರು ₹538 ಕೋಟಿ ಮೌಲ್ಯದ ಈ ಭವ್ಯ ಎಸ್ಟೇಟ್ 440 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. 1830ರಲ್ಲಿ ನಿರ್ಮಾಣಗೊಂಡಿರುವ ಈ ಐತಿಹಾಸಿಕ ಕೋಟೆಯನ್ನು 2003ರಲ್ಲಿ ನವೀಕರಿಸಲಾಗಿತ್ತು.
ಮೂರು ಅಂತಸ್ತುಗಳನ್ನು ಹೊಂದಿರುವ ಮುಖ್ಯ ಬಂಗಲೆಯು ವಿಶೇಷ ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತದೆ. ಇತಿಹಾಸದ ಪ್ರಕಾರ, ಈ ಕಟ್ಟಡವನ್ನು ಅಂದಿನ ಸಂಸತ್ ಸದಸ್ಯ ಜಾನ್ ಕೀಲಿ ಅವರಿಗಾಗಿ ನಿರ್ಮಿಸಲಾಗಿತ್ತು.
ಐತಿಹಾಸಿಕ ಹಿನ್ನೆಲೆ, ವಿಶಾಲ ಪ್ರದೇಶ ಹಾಗೂ ಭವ್ಯ ವಿನ್ಯಾಸ ಹೊಂದಿರುವ ಈ ಕೋಟೆಯ ಖರೀದಿಯೊಂದಿಗೆ ಜುಕರ್ಬರ್ಗ್ ದಂಪತಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಬಿಗ್ ನ್ಯೂಸ್
Marriage-ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಜೊತೆ ಕಾವ್ಯಾ ಮಾರನ್ ಮದುವೆ: ಗ್ರೀಸ್ನಲ್ಲಿ ಅದ್ಧೂರಿ ಸಮಾರಂಭ..!
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹಮಾಲಕಿ ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನ.11ರಂದು ಗ್ರೀಸ್ನಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಅದ್ಧೂರಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.
ಗ್ರೀಸ್: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹಮಾಲಕಿ ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನ.11ರಂದು ಗ್ರೀಸ್ನಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಅದ್ಧೂರಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.
ಮದುವೆಯ ಮೊದಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನವಜೋಡಿ ಐವರಿ ಬಣ್ಣದ ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸಿದ್ದು, ಸುಂದರ ಕಸೂತಿ ವಿನ್ಯಾಸ ಹಾಗೂ ಮುತ್ತಿನ ಆಭರಣಗಳಿಂದ ಅಲಂಕರಿಸಿಕೊಂಡಿದ್ದಾರೆ. ಬಿಳಿ ಹೂವುಗಳಿಂದ ಸಿಂಗರಿಸಿದ ವೇದಿಕೆಯಲ್ಲಿ ಇಬ್ಬರೂ ನಗುಮುಖದಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಅನಿರುದ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡು, “ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪ್ರೀತಿ… ಜೀವನಪೂರ್ತಿ ಜೊತೆಯಾಗಿ… 11.11” ಎಂದು ಬರೆದುಕೊಂಡಿದ್ದಾರೆ.
ಗ್ರೀಸ್ನಲ್ಲಿ ನಿಶ್ಚಿತಾರ್ಥ, ಗಣ್ಯರ ಉಪಸ್ಥಿತಿ
ಗ್ರೀಸ್ನಲ್ಲಿ ನ.10ರಂದು ಈ ಜೋಡಿಯ ಸಾಂಪ್ರದಾಯಿಕ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅನಿರುದ್ ಅವರ ಮಾವ, ಸೂಪರ್ಸ್ಟಾರ್ ರಜನಿಕಾಂತ್, ಐಶ್ವರ್ಯಾ ರಜನಿಕಾಂತ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಹಲವು ಗಣ್ಯರು ಭಾಗವಹಿಸಿದ್ದರು.
ಅನಿರುದ್ ಮತ್ತು ಕಾವ್ಯಾ ತಮ್ಮ ಪ್ರೀತಿಯ ವಿಚಾರವನ್ನು ಸಾರ್ವಜನಿಕವಾಗಿ ಗೌಪ್ಯವಾಗಿಯೇ ಇರಿಸಿದ್ದರು. 2024ರಲ್ಲಿ ಲಾಸ್ ವೇಗಾಸ್ ಸೇರಿದಂತೆ ವಿದೇಶಿ ಪ್ರವಾಸಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಪ್ರೀತಿಯ ವದಂತಿಗಳು ಹರಡಿದ್ದವು. 2025ರ ಜೂನ್ನಲ್ಲಿ ಅನಿರುದ್ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಕುರಿತ ವದಂತಿಗಳನ್ನು ತಳ್ಳಿಹಾಕಿದ್ದರು. ಆದರೆ ಬಳಿಕ ಕುಟುಂಬದ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಅನಿರುದ್ ಸಾಧನೆ
‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಅನಿರುದ್, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ‘ಜೈಲರ್’, ‘ವಿಕ್ರಮ್’, ‘ಲಿಯೋ’, ‘ಜವಾನ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಕಾವ್ಯಾ ಮಾರನ್ ಅವರು ಸನ್ ಟಿವಿ ನೆಟ್ವರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದು, ಸನ್ ಗ್ರೂಪ್ ಸಂಸ್ಥಾಪಕ ಕಲಾನಿಧಿ ಮಾರನ್ ಅವರ ಪುತ್ರಿ. ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ನ.21ರಂದು ಚೆನ್ನೈನಲ್ಲಿ ಆರತಕ್ಷತೆ
ಗ್ರೀಸ್ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದ ಬಳಿಕ ನ.21ರಂದು ಚೆನ್ನೈನಲ್ಲಿ ಅದ್ಧೂರಿ ವಿವಾಹ ಆರತಕ್ಷತೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ, ರಾಜಕೀಯ, ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಬಿಗ್ ನ್ಯೂಸ್
Sheikh Hasina-ಮರಣದಂಡನೆ ಎದುರಿಸುವುದೇ ಶೇಖ್ ಹಸೀನಾಗೆ ಉಳಿದಿರುವ ಆಯ್ಕೆ ಎಂದ ಬಾಂಗ್ಲಾ ಪ್ರಾಸಿಕ್ಯೂಟರ್
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಎದುರಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾನೂನು ಆಯ್ಕೆಗಳು ಉಳಿದಿಲ್ಲ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ (ICT) ಮುಖ್ಯ ಅಭಿಯೋಜಕ ಮೊಹಮ್ಮದ್ ಅಮೀನುಲ್ ಇಸ್ಲಾಂ ಹೇಳಿದ್ದಾರೆ.
ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಎದುರಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾನೂನು ಆಯ್ಕೆಗಳು ಉಳಿದಿಲ್ಲ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ (ICT) ಮುಖ್ಯ ಅಭಿಯೋಜಕ ಮೊಹಮ್ಮದ್ ಅಮೀನುಲ್ ಇಸ್ಲಾಂ ಹೇಳಿದ್ದಾರೆ.
ಅಲ್ಲದೆ, ಶೇಖ್ ಹಸೀನಾ ಅವರಿಗೆ ಹೊಸ ಪಾಸ್ಪೋರ್ಟ್ ಅಥವಾ ಯಾವುದೇ ಪ್ರಯಾಣ ದಾಖಲೆಗಳನ್ನು ನೀಡುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.
ಶೇಖ್ ಹಸೀನಾ ಅವರಿಗೆ ಹೊಸ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡುವಂತೆ ಲಂಡನ್ ಮೂಲದ ಕಾನೂನು ಸಂಸ್ಥೆಯೊಂದು ದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ಗೆ ಮನವಿ ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಖ್ಯ ಅಭಿಯೋಜಕರು ಈ ಹೇಳಿಕೆ ನೀಡಿದ್ದಾರೆ.
79 ವರ್ಷದ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ಕಾನೂನು ಪ್ರಕ್ರಿಯೆಗಳನ್ನು ಎದುರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ತೀವ್ರ ಪ್ರತಿಭಟನೆ ಹಾಗೂ ಹಿಂಸಾಚಾರದ ಪರಿಣಾಮ 15 ವರ್ಷಗಳ ಅವರ ಆಡಳಿತ ಅಂತ್ಯಗೊಂಡಿತ್ತು. ಬಳಿಕ ದೇಶ ತೊರೆದಿದ್ದ ಹಸೀನಾ ಅಂದಿನಿಂದ ಭಾರತದಲ್ಲಿ ನೆಲೆಸಿದ್ದಾರೆ.
30 ದಿನಗಳಲ್ಲೇ ಮೇಲ್ಮನವಿ ಸಲ್ಲಿಸಬಹುದಿತ್ತು
ಈ ಕುರಿತು ಪ್ರತಿಕ್ರಿಯಿಸಿರುವ ಮೊಹಮ್ಮದ್ ಅಮೀನುಲ್ ಇಸ್ಲಾಂ, ಹಸೀನಾ ಅವರಿಗೆ ನಿಜವಾಗಿಯೂ ಬಾಂಗ್ಲಾದೇಶಕ್ಕೆ ಮರಳುವ ಇಚ್ಛೆ ಇದ್ದಿದ್ದರೆ ವಿಚಾರಣೆ ನಡೆಯುತ್ತಿದ್ದಾಗಲೇ ವಾಪಸಾಗಿ ಪ್ರಕರಣವನ್ನು ಎದುರಿಸಬಹುದಿತ್ತು. ತೀರ್ಪು ಪ್ರಕಟವಾದ 30 ದಿನಗಳೊಳಗೆ ದೇಶಕ್ಕೆ ಮರಳಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇತ್ತು ಎಂದು ತಿಳಿಸಿದ್ದಾರೆ.
‘ದಿ ಡೈಲಿ ಸ್ಟಾರ್’ ವರದಿಯ ಪ್ರಕಾರ, ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಪಾಸ್ಪೋರ್ಟ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
1973ರ ಪಾಸ್ಪೋರ್ಟ್ ಆದೇಶ ಉಲ್ಲೇಖ
1973ರ ಬಾಂಗ್ಲಾದೇಶ ಪಾಸ್ಪೋರ್ಟ್ ಆದೇಶವನ್ನು ಉಲ್ಲೇಖಿಸಿದ ಮುಖ್ಯ ಅಭಿಯೋಜಕರು, ನೈತಿಕ ಅಧಃಪತನಕ್ಕೆ ಸಂಬಂಧಿಸಿದ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರಿಗೆ, ವಿಶೇಷವಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಲಾದವರಿಗೆ ಪಾಸ್ಪೋರ್ಟ್ ಹಾಗೂ ಪ್ರಯಾಣ ದಾಖಲೆಗಳನ್ನು ನಿರಾಕರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳೂ ಈ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಹಸೀನಾ ಅವರ ಪಾಸ್ಪೋರ್ಟ್ ಮನವಿಯ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು, ಮಾಜಿ ಪ್ರಧಾನಿ ಸ್ವತಃ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂಬುದನ್ನು ಗಮನಸೆಳೆದಿದ್ದಾರೆ. ಈ ಪ್ರಕರಣವನ್ನು ನಿರ್ವಹಿಸುತ್ತಿರುವ ಲಂಡನ್ ಮೂಲದ ಕಾನೂನು ಸಂಸ್ಥೆಗೂ ಶೇಖ್ ಹಸೀನಾ ಅವರಿಗೂ ನಡುವೆ ಅಧಿಕೃತ ಕಾನೂನು ಒಪ್ಪಂದವಿದೆಯೇ ಎಂಬ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದ್ದಾರೆ.
-
ಬಿಗ್ ನ್ಯೂಸ್24 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಶಿಕ್ಷಣ8 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಸ್ಥಳೀಯ7 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಚಿನ್ನ-ಬೆಳ್ಳಿ ದರ7 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಸಿನೆಮಾ6 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಅಪರಾಧ7 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಅಪರಾಧ7 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಆರೋಗ್ಯ7 hours agoBantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ















