Connect with us

ರಾಜಕೀಯ

Jitin Prasad-ಅಕ್ರಮ ಅಡಿಕೆ ಆಮದು ಹೆಚ್ಚಳ: 3 ತಿಂಗಳಲ್ಲಿ 3,009 ಟನ್ ಅಡಿಕೆ ವಶ; ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶ್ನೆಗೆ‌ ಜಿತಿನ್‌ಪ್ರಸಾದ್ ಲಿಖಿತ ಉತ್ತರ

Published

on



Ad Widget

Ad Widget

Ad Widget

Ad Widget

ಬೆಂಗಳೂರು: ವರ್ಷದಿಂದ ವರ್ಷ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚಾಗುತ್ತಿದ್ದು 2024-25 ವರ್ಷದ ಜೂನ್ ಅಂತ್ಯದವರೆಗೆ ಅಡಿಕೆ ಅಕ್ರಮ ಆಮದಿನ 84 ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಸದಸ್ಯ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

Ad Widget

Ad Widget

Ad Widget

Ad Widget

‘ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಸುಂಕ ಮಂಡಳಿಯ ತನಿಖಾ ತಂಡವು 2020-21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ಅಡಿಕೆ ವಶಪಡಿಸಿಕೊಂಡಿತ್ತು. 2021-22ರಲ್ಲಿ 260 ಪ್ರಕರಣಗಳಲ್ಲಿ 3,388‌ ಟನ್, 2022-23ರಲ್ಲಿ 454 ಪ್ರಕರಣಗಳಲ್ಲಿ, 3,400 ಟನ್‌ ಹಾಗೂ 2023-24 ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ತನಿಖಾ ತಂಡವು ವಿಮಾನ ನಿಲ್ದಾಣಗಳಲ್ಲಿ 2021-22ರಲ್ಲಿ 4 ಪ್ರಕರಣ ಪತ್ತೆ ಹಚ್ಚಿ 15,296 ಕೆ.ಜಿ, 2022-23ರಲ್ಲಿ 12 ಪ್ರಕರಣಗಳಲ್ಲಿ 14,188 ಕೆ.ಜಿ,2023-24ರಲ್ಲಿ 3 ಪ್ರಕರಣಗಳಲ್ಲಿ 2,116 ಕೆ.ಜಿ, 2024-25ರಲ್ಲಿ ಜೂನ್‌ವರೆಗೆ 3 ಪ್ರಕರಣಗಳಲ್ಲಿ 10,000 ಕೆ.ಜಿ ಅಡಿಕೆ ಸ್ವಾಧೀನಪಡಿಸಿಕೊಂಡಿದೆ. ತನಿಖಾ ತಂಡವು ಅಡಿಕೆಯ ಅಕ್ರಮಸಾಗಣೆ ಮೇಲೆ ನಿಗಾ ಇಟ್ಟಿದೆ. ದೇಶದ ರೈತರ ಹಿತ ರಕ್ಷಿಸಲು ಬದ್ಧವಾಗಿದೆ ಎಂದು ಸಚಿವ ಜಿತಿನ್ ಪ್ರಸಾದ್ ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

ಹೆಗ್ಗಡೆಯವರ ಪ್ರಶ್ನೆಗೆ ಜಿತಿನ್‌ಪ್ರಸಾದ್ ಲಿಖಿತ ಉತ್ತರ:
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಗಮನಿಸಿದ ಸಚಿವಾಲಯವು, ಅಡಿಕೆಯ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ ರೂ.251ಯಿಂದ ರೂ.351 ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ಜತೆಗೆ ಶೇ.100 ಅಡಿಕೆ ಆಮದು ಸುಂಕ ವಿಧಿಸಲಾಗುತ್ತಿದೆ. ನಮ್ಮ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ.



Ad Widget
Ad Widget
Click to comment

Leave a Reply

ರಾಜಕೀಯ

2027ರ ಜನವರಿ ಮೊದಲ ವಾರದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ : ಸಚಿವ ಸಂಪುಟದಲ್ಲಿ ಚರ್ಚೆ..!

Published

on



Ad Widget

Ad Widget

Ad Widget

Ad Widget

ಬೆಂಗಳೂರು : 2027 ಹೊಸ ವರ್ಷ ಆರಂಭದಲ್ಲಿಯೇ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗಿದೆ.

Ad Widget

Ad Widget

Ad Widget

Ad Widget

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆ ನಡೆಸಲಾಗಿದ್ದು, ಚುನಾವಣಾ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮೀಸಲಾತಿ ಪಟ್ಟಿಗೆ ಒಪ್ಪಿಗೆ ಸೂಚಿಸಿದರೆ ಜನವರಿ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಸರಕಾರ ಮುಂದಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಎರಡು ದಿನಗಳ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ವಾರ್ಡುವಾರು ಮೀಸಲಾತಿ ಪಟ್ಟಿಗೆ ಒಪ್ಪಿಗೆ ಕೋರಿ ರಾಜ್ಯ ಸರಕಾರ ಮನವಿ ಸಲ್ಲಿಸಿತ್ತು. ರಾಜ್ಯದಲ್ಲಿ ಪರಿಷತ್‌ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ.ಚುನಾವಣಾ ಆಯೋಗ ಮೀಸಲಾತಿ ಪಟ್ಟಿಗೆ ಒಪ್ಪಿಗೆ ಸೂಚಿಸಿದ ಬಳಿಕ ಆ ಸಂಬಂಧ ಕರಡು ಅಧಿಸೂಚನೆ ಹೊರಬೀಳಲಿದೆ.

Ad Widget

Ad Widget <> Ad Widget

ಸಾರ್ವಜನಿಕ ಆಕ್ಷೇಪ ಪರಿಗಣಿಸಿದ ಬಳಿಕ ಡಿಸೆಂಬರ್ ಮಧ್ಯದಲ್ಲಿ ವಾರ್ಡುವಾರು ಮೀಸಲಾತಿ ಪಟ್ಟಿಯ ಅಂತಿಮ ಅಧಿಸೂಚನೆ ಪ್ರಕಟವಾಗಲಿದ್ದು. ಜನವರಿ ಮೊದಲ ವಾರದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಮುಂದಾಗಿದ್ದೇವೆ. ಈ ಚುನಾವಣೆಯ 15 ದಿನಗಳ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಮಾಹಿತಿ ಹಂಚಿಕೊಂಡಿದ್ದಾರೆ.



Ad Widget
Ad Widget
Continue Reading

ಸ್ಥಳೀಯ

UT Khader-ಚನ್ನಪಟ್ಟಣ: ನಡುರಾತ್ರಿ 2 ಗಂಟೆಗೆ ಸರ್ಕಾರಿ ಆಸ್ಪತ್ರೆಗೆ ಯು.ಟಿ. ಖಾದರ್ ದಿಢೀರ್ ಭೇಟಿ: ಹೊರಗಡೆ ಔಷಧಿ ಬರೆಯುತ್ತಿದ್ದಕ್ಕೆ ಗರಂ

Published

on



Ad Widget

Ad Widget

Ad Widget

Ad Widget

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡುರಾತ್ರಿ 2 ಗಂಟೆ ಸುಮಾರಿಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಡರಾತ್ರಿ ಚನ್ನಪಟ್ಟಣಕ್ಕೆ ಆಗಮಿಸಿದ್ದ ಸಚಿವರು, ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

Ad Widget

Ad Widget

Ad Widget

Ad Widget

ಚನ್ನಪಟ್ಟಣ, ಅ.6: ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡುರಾತ್ರಿ 2 ಗಂಟೆ ಸುಮಾರಿಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Ad Widget

Ad Widget

Ad Widget alt="Ad Widget"/>

Ad Widget

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಡರಾತ್ರಿ ಚನ್ನಪಟ್ಟಣಕ್ಕೆ ಆಗಮಿಸಿದ್ದ ಸಚಿವರು, ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

Ad Widget

Ad Widget <> Ad Widget

ಈ ವೇಳೆ ಆಸ್ಪತ್ರೆಯ ಜನರಲ್ ವಾರ್ಡ್, ಐಸಿಯು ಹಾಗೂ ಶೌಚಾಲಯಗಳ ನೈರ್ಮಲ್ಯವನ್ನು ವೀಕ್ಷಿಸಿದ ಸಚಿವರು, ಸಿಬ್ಬಂದಿಯ ಹಾಜರಾತಿ ಪುಸ್ತಕವನ್ನೂ ಪರಿಶೀಲಿಸಿದರು. ಕರ್ತವ್ಯದಲ್ಲಿದ್ದ ವೈದ್ಯರಿಂದ ಆಸ್ಪತ್ರೆಯಲ್ಲಿನ ಚಿಕಿತ್ಸಾ ವ್ಯವಸ್ಥೆ ಹಾಗೂ ರೋಗಿಗಳ ಕುರಿತಂತೆ ಮಾಹಿತಿ ಪಡೆದುಕೊಂಡರು.



Ad Widget

ಹೊರಗಡೆ ಔಷಧಿ ಬರೆಯುತ್ತಿದ್ದಕ್ಕೆ ಅಸಮಾಧಾನ
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಿನ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ಔಷಧಿ ಖರೀದಿಸುವಂತೆ ಚೀಟಿ ಬರೆದುಕೊಡುತ್ತಿರುವ ವಿಚಾರ ಸಚಿವರ ಗಮನಕ್ಕೆ ಬಂದಿದೆ. ಇದರಿಂದ ಅಸಮಾಧಾನಗೊಂಡ ಖಾದರ್ ಅವರು ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

Ad Widget

Ad Widget

“ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ಹಾಗೂ ಔಷಧಿಗಳಿದ್ದರೂ ರೋಗಿಗಳಿಗೆ ಹೊರಗಡೆ ಔಷಧಿ ಬರೆದುಕೊಡುವುದು ಏಕೆ?” ಎಂದು ಪ್ರಶ್ನಿಸಿದ ಸಚಿವರು, ಈ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಯಿಂದ ಸ್ಪಷ್ಟನೆ ಪಡೆದರು.

ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಬಡ ಹಾಗೂ ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಹಾಗೂ ಸಮಯೋಚಿತ ಚಿಕಿತ್ಸೆ ಒದಗಿಸಬೇಕು. ರೋಗಿಗಳ ಸೇವೆಯಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸಂಬಂಧಪಟ್ಟ ಸಿಬ್ಬಂದಿಗೆ ಸಚಿವ ಯು.ಟಿ. ಖಾದರ್ ಖಡಕ್ ಸೂಚನೆ ನೀಡಿದರು.

Ad Widget
Continue Reading

ರಾಜಕೀಯ

DK Shivakumar-ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭರ್ಜರಿ ಬಹುಮಾನ: 8 ಕ್ರೀಡಾಪಟುಗಳಿಗೆ ₹8 ಕೋಟಿ ಘೋಷಿಸಿದ ಡಿಕೆಶಿ – ಭಾಗವಹಿಸಿದವರಿಗೆ 5 ಲಕ್ಷ

Published

on



Ad Widget

Ad Widget

Ad Widget

Ad Widget

ಏಷ್ಯನ್ ಗೇಮ್ಸ್‌ 2026ರಲ್ಲಿ ದೇಶ ಹಾಗೂ ಕರ್ನಾಟಕದ ಕೀರ್ತಿ ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದಲ್ಲಿ ಸನ್ಮಾನಿಸಿದರು. ಈ ವೇಳೆ 8 ಪದಕ ವಿಜೇತ ಕ್ರೀಡಾಪಟುಗಳಿಗೆ ಒಟ್ಟು ₹8 ಕೋಟಿ ನಗದು ಬಹುಮಾನ ಘೋಷಿಸಿದರು. ಇದೇ ವೇಳೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಲವು ಮಹತ್ವದ ಪ್ರೋತ್ಸಾಹಕ ಕ್ರಮಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಏಷ್ಯನ್ ಗೇಮ್ಸ್‌ 2026ರಲ್ಲಿ ದೇಶ ಹಾಗೂ ಕರ್ನಾಟಕದ ಕೀರ್ತಿ ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದಲ್ಲಿ ಸನ್ಮಾನಿಸಿದರು. ಈ ವೇಳೆ 8 ಪದಕ ವಿಜೇತ ಕ್ರೀಡಾಪಟುಗಳಿಗೆ ಒಟ್ಟು ₹8 ಕೋಟಿ ನಗದು ಬಹುಮಾನ ಘೋಷಿಸಿದರು. ಇದೇ ವೇಳೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಲವು ಮಹತ್ವದ ಪ್ರೋತ್ಸಾಹಕ ಕ್ರಮಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ
ಏಷ್ಯನ್ ಗೇಮ್ಸ್‌ 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗಿದೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗದ ಕ್ರೀಡಾಪಟುಗಳು ಇದರ ಫಲಾನುಭವಿಗಳಾಗಿದ್ದಾರೆ.

Ad Widget

Ad Widget <> Ad Widget

ಪದಕ ವಿಜೇತರ ಬಹುಮಾನ ಮೊತ್ತ ಭಾರೀ ಹೆಚ್ಚಳ
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನೀಡುತ್ತಿದ್ದ ನಗದು ಬಹುಮಾನವನ್ನು ಸರ್ಕಾರ ಹೆಚ್ಚಿಸಿದೆ. ಈ ಹಿಂದೆ ಚಿನ್ನದ ಪದಕಕ್ಕೆ ₹35 ಲಕ್ಷ, ಬೆಳ್ಳಿಗೆ ₹25 ಲಕ್ಷ ಹಾಗೂ ಕಂಚಿಗೆ ₹15 ಲಕ್ಷ ನೀಡಲಾಗುತ್ತಿತ್ತು.



Ad Widget

ಇನ್ನು ಮುಂದೆ ಚಿನ್ನದ ಪದಕ ವಿಜೇತರಿಗೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹50 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ.

Ad Widget

Ad Widget

ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಪದಕ ವಿಜೇತರಿಗೆ ನೇರ ನೇಮಕಾತಿ
ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಒಲಿಂಪಿಕ್ಸ್ ತಯಾರಿಗೆ ತಲಾ ₹10 ಲಕ್ಷ
ಮುಂದಿನ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೂ ಸರ್ಕಾರ ಪ್ರೋತ್ಸಾಹ ನೀಡಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್. ಹಾಗೂ ಶ್ರೇಯಾಂಕಾ ಪಾಟೀಲ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿನ ‘ಗುರಿ ಒಲಿಂಪಿಕ್ಸ್’ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಇವರಿಗೆ ಒಲಿಂಪಿಕ್ಸ್ ತಯಾರಿಗಾಗಿ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುತ್ತದೆ.

ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ
ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇರ ನೇಮಕಾತಿಗಳಲ್ಲಿ ಶೇ.2ರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ. ಗುಂಪು-ಎ, ಗುಂಪು-ಬಿ, ಗುಂಪು-ಸಿ ಹಾಗೂ ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈ ಕುರಿತು ಅಕ್ಟೋಬರ್ 3, 2026ರಂದು ಅಧಿಸೂಚನೆ ಹೊರಡಿಸಲಾಗಿದೆ.

8 ಪದಕ ವಿಜೇತ ಕ್ರೀಡಾಪಟುಗಳು
ಶ್ರೇಯಾಂಕ ಆರ್. ಪಾಟೀಲ್ – ಮಹಿಳಾ ಕ್ರಿಕೆಟ್ ತಂಡ, ಚಿನ್ನ
ಎಂ.ಆರ್. ಪೂವಮ್ಮ – 4×400 ಮೀ. ಮಿಶ್ರ ರಿಲೇ, 4×400 ಮೀ. ಮಹಿಳಾ ರಿಲೇ – ಚಿನ್ನ ಮತ್ತು ಬೆಳ್ಳಿ
ತಿಲೋತ್ತಮಾ ಸೇನ್ – ಮಹಿಳೆಯರ 50 ಮೀ. ರೈಫಲ್, ಬೆಳ್ಳಿ
ಆಯುಷ್ ಆರ್. ಶೆಟ್ಟಿ – ಪುರುಷರ ತಂಡ ಬ್ಯಾಡ್ಮಿಂಟನ್, ಬೆಳ್ಳಿ
ಸ್ನೇಹಾ ಎಸ್.ಎಸ್. – 4×100 ಮೀ. ಮಿಶ್ರ ರಿಲೇ, ಕಂಚು
ಅದಿತಿ ಅಶೋಕ್ – ಮಹಿಳಾ ತಂಡ ಗಾಲ್ಫ್, ಬೆಳ್ಳಿ
ಪ್ರಣವಿ ಎಸ್. ಅರಸ್ – ಮಹಿಳಾ ತಂಡ ಗಾಲ್ಫ್ ಹಾಗೂ ವೈಯಕ್ತಿಕ ಸ್ಪರ್ಧೆ, ಬೆಳ್ಳಿ ಮತ್ತು ಚಿನ್ನ
ಮೋಹಿತ್ ಎಚ್.ಎಸ್. – ಪುರುಷರ ಹಾಕಿ ತಂಡ, ಚಿನ್ನ

ತಲಾ ₹5 ಲಕ್ಷ ಪ್ರೋತ್ಸಾಹಧನ ಪಡೆದ 20 ಕ್ರೀಡಾಪಟುಗಳು
ಯಶಸ್ ಪಾಲಾಕ್ಷ, ಸುಪ್ರಿಯಾ ಸಿಂಡಿಗೆರೆ ಬಸವರಾಜು, ಉನ್ನತಿ ಅಯ್ಯಪ್ಪ, ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಆಯುಷ್ ಶೆಟ್ಟಿ, ಶ್ರೇಯಾಂಕ ಆರ್. ಪಾಟೀಲ್, ಕೀರ್ತಿ ರಂಗಸ್ವಾಮಿ, ಫವಾದ್ ಮಿರ್ಜಾ, ಅದಿತಿ ಅಶೋಕ್, ಪ್ರಣವಿ ಎಸ್. ಅರಸ್, ಮೋಹಿತ್ ಎಚ್.ಎಸ್., ತಿಲೋತ್ತಮಾ ಸೇನ್, ಆಕಾಶ್ ಮಣಿ, ಶ್ರೀಹರಿ ನಟರಾಜ್, ದಕ್ಷಣ್ ಎಸ್., ಅನೀಶ್ ಗೌಡ, ಯಶಸ್ವಿನಿ ಘೋರ್ಪಡೆ, ಸಿಂಧುಶ್ರೀ ಹಾಗೂ ದೀಪು ಮಲ್ಲೇಶ್ ಅವರು ತಲಾ ₹5 ಲಕ್ಷ ಪ್ರೋತ್ಸಾಹಧನ ಪಡೆದಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading