ವಿದೇಶ
Dubai princess-‘ಐ ಡಿವೋರ್ಸ್ ಯು’: ಇನ್‌ಸ್ಟಾಗ್ರಾಂನಲ್ಲಿ ಸಾರ್ವಜನಿಕವಾಗಿ ಪತಿಗೆ ವಿಚ್ಛೇದನ ನೀಡಿದ ದುಬೈ ರಾಜಕುಮಾರಿ!
ದುಬೈ: ದುಬೈ ಆಡಳಿತಗಾರ ಹಾಗೂ ಪ್ರಧಾನಿಯ ಮಗಳು ರಾಜಕುಮಾರಿ ಶೇಖಾ ಮಹ್ರಾ ಬಿಂಟ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪತಿಗೆ ಸಾರ್ವಜನಿಕವಾಗಿ ‘ವಿಚ್ಛೇದನ’ ಘೋಷಿಸಿದ್ದಾರೆ. ಪತಿ ಶೇಖ್ ಮಾನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇದನ ನೀಡಿರುವುದು ಸಂಚಲನ ಮೂಡಿಸಿದೆ.
ಈ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡನೇ ತಿಂಗಳಲ್ಲಿ ವಿಚ್ಛೇದನದ ಪ್ರಕಟಣೆ ಹೊರಬಂದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿರುವುದು ಹಾಗೂ ತಮ್ಮ ತಮ್ಮ ಪ್ರೊಫೈಲ್‌ಗಳಲ್ಲಿ ಇದ್ದ ತಮ್ಮಿಬ್ಬರ ಎಲ್ಲ ಚಿತ್ರಗಳನ್ನೂ ಡಿಲೀಟ್ ಮಾಡಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದಾರೆ. ಈ ಜೋಡಿ ಒಬ್ಬರನ್ನೊಬ್ಬರು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದೂ ಊಹಾಪೋಹ ಹರಡಿದೆ. ಈ ನಡುವೆ ರಾಜಕುಮಾರಿ ಶೇಖ್ ಮಹ್ರಾ ಅವರ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿರಬಹುದೇ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
“ಪ್ರಿಯ ಪತಿ, ನೀವು ಇತರೆ ಸಂಗಾತಿಗಳ ಜತೆ ತೊಡಗಿರುವ ಕಾರಣದಿಂದ, ನಾನು ನಮ್ಮ ವಿಚ್ಛೇದನವನ್ನು ಘೋಷಿಸುತ್ತಿದ್ದೇನೆ. ಐ ಡಿವೋರ್ಸ್ ಯು, ಐ ಡಿವೋರ್ಸ್ ಯು, ಆಂಡ್ ಐ ಡಿವೋರ್ಸ್ ಯು. ಟೇಕ್ ಕೇರ್. ನಿಮ್ಮ ಮಾಜಿ ಪತ್ನಿ” ಎಂದು ಶೇಖಾ ಮಹ್ರಾ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಗೂಢಾರ್ಥದ ಪೋಸ್ಟ್ ಹಾಕಿದ್ದ ಮಹ್ರಾ
ಶೇಖಾ ಮಹ್ರಾ ಮತ್ತು ಉದ್ಯಮಿ ಶೇಖ್ ಮಾನಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಮದುವೆಯಾಗಿದ್ದರು. 12 ತಿಂಗಳ ಬಳಿಕ ಅವರಿಗೆ ಮೊದಲ ಮಗಳು ಜನಿಸಿದ್ದಳು. ಜನ್ಮ ನೀಡುವ ಅತ್ಯಂತ ಸ್ಮರಣೀಯ ಅನುಭವದ ಬಗ್ಗೆ ಶೇಖಾ ಮಹ್ರಾ ಹಂಚಿಕೊಂಡಿದ್ದರು. ತನ್ನ ಆರೈಕೆ ಮಾಡಿದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದರು. ಅವರು ಪೋಸ್ಟ್ ಮಾಡಿದ್ದ ಫೋಟೋಗಳ ಪೈಕಿ, ಪತಿ ಶೇಖ್ ಮಾನಾ ಅವರು ಪುಟಾಣಿ ಮಗುವನ್ನು ತೋಳುಗಳಲ್ಲಿ ಇರಿಸಿಕೊಂಡ ಚಿತ್ರವೂ ಇತ್ತು. ಮಗುವಿನ ಲಿಂಗ ಬಹಿರಂಪಡಿಸಲೆಂದೇ ಈ ದಂಪತಿ ಫೆಬ್ರವರಿಯಲ್ಲಿ ಪಾರ್ಟಿ ಆಯೋಜಿಸಿದ್ದರು.
ಕೆಲವು ದಿನಗಳ ಹಿಂದಷ್ಟೇ, ಮಗುವನ್ನು ಎದೆಗೆ ಆನಿಸಿಕೊಂಡಿರುವ ಗೂಢಾರ್ಥದ ಪೋಸ್ಟ್ ಅನ್ನು ಶೇಖಾ ಮಹ್ರಾ ಹಂಚಿಕೊಂಡಿದ್ದರು. ಅದರಲ್ಲಿ ಅವರು ‘ಕೇವಲ ನಾವಿಬ್ಬರು’ ಎಂದು ಬರೆದುಕೊಳ್ಳುವ ಮೂಲಕ ಪತಿ ಜತೆಗಿನ ಸಂಬಂಧ ಹದಗೆಟ್ಟಿದೆ ಎಂಬುದರ ಸುಳಿವು ನೀಡಿದ್ದರು ಎಂದು ಈಗ ವಿಶ್ಲೇಷಿಸಲಾಗುತ್ತಿದೆ.
ಬ್ರಿಟನ್‌ನಲ್ಲಿ ಪದವಿ
ಶೇಖಾ ಮಹ್ರಾ ಅವರು ದುಬೈನ ಆಡಳಿತಗಾರ, ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮೌಕ್ತಮ್ ಅವರ ಮಗಳು. ಮಹಿಳಾ ಸಬಲೀಕರಣ ಹಾಗೂ ಸ್ಥಳೀಯ ವಿನ್ಯಾಸಗಾರರ ಪರ ಶೇಖಾ ಮಹ್ರಾ ಧ್ವನಿ ಎತ್ತುತ್ತಿರುತ್ತಾರೆ. ಬ್ರಿಟನ್‌ನಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪದವಿ ಪಡೆದಿರುವ ರಾಜಕುಮಾರಿ, ಹಲವಾರು ಉದ್ಯಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಬಿಗ್ ನ್ಯೂಸ್
Nepal-40 ದಿನಗಳ ಬಳಿಕ ನೇಪಾಳ ಪ್ರವಾಹದ ಶೋಧ ಕಾರ್ಯಾಚರಣೆ ಸ್ಥಗಿತ: 189 ಭಾರತೀಯರು ಸೇರಿ 5200 ಮಂದಿ ಇನ್ನೂ ನಾಪತ್ತೆ..!
ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.
ಕಠ್ಮಂಡು: ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.
ನಾಪತ್ತೆಯಾಗಿರುವವರಲ್ಲಿ 189 ಮಂದಿ ಭಾರತೀಯರಾಗಿದ್ದಾರೆ. ಅಲ್ಲದೆ, ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಮೂಲದ ನೂರಾರು ಮಂದಿ ಕೂಡ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ.
ಪ್ರಧಾನಿ ಬಾಲೇಂದ್ರ ಶಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ ಸಭೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳು, ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಂಡಗಳ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ, ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳಿಗಾಗಿ 559 ಕೋಟಿ ನೇಪಾಳಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಮಂಡಳಿ ಶಿಫಾರಸು ಮಾಡಿದೆ. ಇನ್ನೂ ಮೌಲ್ಯಮಾಪನ ಪೂರ್ಣಗೊಳ್ಳದ ಯೋಜನೆಗಳಿಗೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.
ನೇಪಾಳ ಪ್ರವಾಸೋದ್ಯಮ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 36 ದೇಶಗಳ 606 ವಿದೇಶಿ ಪ್ರವಾಸಿಗರು ಇನ್ನೂ ನಾಪತ್ತೆಯಾಗಿದ್ದಾರೆ. ಇವರಲ್ಲಿ 189 ಭಾರತೀಯರು, 65 ಅಮೆರಿಕನ್ನರು, 55 ಮಲೇಷಿಯನ್ನರು, 54 ಉಕ್ರೇನಿಯನ್ನರು, 37 ಚೀನೀಯರು, ಆಸ್ಟ್ರೇಲಿಯಾ ಮತ್ತು ಲಾಟ್ವಿಯಾದ ತಲಾ 33 ಮಂದಿ, 32 ಬ್ರಿಟಿಷರು ಹಾಗೂ 30 ಕೆನಡಾ ಪ್ರಜೆಗಳು ಸೇರಿದ್ದಾರೆ.
ಇದರ ಜೊತೆಗೆ 188 ಮಂದಿ ನೇಪಾಳಿ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ತಿಳಿಸಿದೆ.
ಬಿಗ್ ನ್ಯೂಸ್
Singapore-ಜನನ ಪ್ರಮಾಣ ಹೆಚ್ಚಿಸಲು ಸಿಂಗಾಪುರ ಸರ್ಕಾರದ ವಿನೂತನ ಯೋಜನೆ; ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಆ್ಯಪ್
ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಎಂಬ ಡೇಟಿಂಗ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.
ಸಿಂಗಾಪುರ: ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಎಂಬ ಡೇಟಿಂಗ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.
ಈ ಆ್ಯಪ್‌ನಲ್ಲಿ 21ರಿಂದ 35 ವರ್ಷದೊಳಗಿನ ಸರ್ಕಾರಿ ನೌಕರರು ಪರಸ್ಪರ ಪರಿಚಯವಾಗಿ, ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಯುವಜನರು ಸಂಬಂಧ ಬೆಳೆಸಿಕೊಂಡು ಕುಟುಂಬ ಆರಂಭಿಸಲು ಹಾಗೂ ಮಕ್ಕಳನ್ನು ಹೊಂದಲು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.
ಸಿಂಗಾಪುರದ ಸರ್ಕಾರಿ ತಂತ್ರಜ್ಞಾನ ಸಂಸ್ಥೆ ಗವ್‌ಟೆಕ್ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಆ್ಯಪ್ ಬಳಸುವವರು ತಮ್ಮ ಆಸಕ್ತಿಗಳು, ಅಭ್ಯಾಸಗಳು ಹಾಗೂ ವೈಯಕ್ತಿಕ ಆದ್ಯತೆಗಳಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಅದರ ಆಧಾರದ ಮೇಲೆ ಬಳಕೆದಾರರಿಗೆ ಸೂಕ್ತ ಸಂಗಾತಿಯನ್ನು ಆ್ಯಪ್ ಸೂಚಿಸುತ್ತದೆ.
ಸೂಚಿಸಲಾದ ವ್ಯಕ್ತಿಯೊಂದಿಗೆ ಸಂಪರ್ಕ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಕೊಂಡ ಬಳಿಕವಷ್ಟೇ ಸಂಪರ್ಕ ವಿವರಗಳನ್ನು ಪಡೆಯಲು ಅವಕಾಶವಿರುತ್ತದೆ. ಹೊಂದಾಣಿಕೆ ಆಗದಿದ್ದರೆ ಮತ್ತೊಬ್ಬ ವ್ಯಕ್ತಿಯನ್ನು ಆ್ಯಪ್ ಸೂಚಿಸುತ್ತದೆ.
ಬಿಗ್ ನ್ಯೂಸ್
Fly Dubai plane-ಫ್ಲೈ ದುಬೈ ವಿಮಾನದಲ್ಲಿ ಕಾಕ್‌ಪಿಟ್ ಗಲಾಟೆ; ಯುಎಇ ಅಧಿಕಾರಿಗಳಿಂದ ತನಿಖೆ ಆರಂಭ – ಪ್ರಯಾಣಿಕರ ಕರೆದೊಯ್ಯಲು ಇಸ್ರೇಲ್ ವಿಮಾನ ಪ್ರವೇಶಕ್ಕೆ ಸೌದಿ ಅನುಮತಿ ನಿರಾಕರಣೆ
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ಎಫ್‌ಝಡ್1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ತನಿಖೆಯನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ದುಬೈ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ಎಫ್‌ಝಡ್1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ತನಿಖೆಯನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬುಧವಾರ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಜಗಳದ ಹಿನ್ನೆಲೆಯಲ್ಲಿ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಬಳಿಕ ಒಮನ್ ಮೂಲದವನೆಂದು ಹೇಳಲಾಗಿರುವ ಸಹ-ಪೈಲಟ್‌ನನ್ನು ಸೌದಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ಯತ್ನಿಸಿದ್ದಾರೆ ಎನ್ನಲಾಗಿದ್ದು, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಡೆಯಲು ಮುಂದಾದಾಗ ಕಾಕ್‌ಪಿಟ್‌ನಲ್ಲಿ ಹೋರಾಟ ನಡೆದಿದೆ. ಈ ವೇಳೆ ಮಚ್ಚರ್ ಅವರಿಗೆ ಚಾಕುವಿನಿಂದ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದಾಗ ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರು ಇದ್ದರು. ವಿಮಾನದಲ್ಲಿದ್ದ ಫ್ಲೈ ದುಬೈ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತಗೊಳಿಸಿದರು ಎಂದು ಸಂಸ್ಥೆ ತಿಳಿಸಿದೆ.
ಘಟನೆಯ ಸಂಪೂರ್ಣ ಸಂದರ್ಭ ಹಾಗೂ ಕಾರಣಗಳನ್ನು ಪರಿಶೀಲಿಸಲು ಪಬ್ಲಿಕ್ ಪ್ರಾಸಿಕ್ಯೂಷನ್‌ನ ವಿಶೇಷ ಸದಸ್ಯರ ತಂಡವನ್ನು ರಚಿಸುವಂತೆ ಯುಎಇ ಅಟಾರ್ನಿ ಜನರಲ್ ಆದೇಶಿಸಿದ್ದಾರೆ. ವಿಮಾನವು ಯುಎಇಯಲ್ಲಿ ನೋಂದಣಿಯಾಗಿದ್ದು, ಯುಎಇ ಧ್ವಜವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅನ್ವಯವಾಗುವ ಕಾನೂನಿನಡಿ ತನಿಖೆ ನಡೆಸುವ ಅಧಿಕಾರ ಯುಎಇ ನ್ಯಾಯಾಂಗ ಪ್ರಾಧಿಕಾರಗಳಿಗೆ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಘಟನೆಯ ಹಿಂದೆ ಭಯೋತ್ಪಾದಕ ಚಟುವಟಿಕೆ ಅಥವಾ ಉದ್ದೇಶವಿದೆಯೇ, ಪೂರ್ವನಿಯೋಜಿತ ಕೃತ್ಯವೇ ಎಂಬುದೂ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ತನಿಖಾ ತಂಡ ಪರಿಶೀಲಿಸಲಿದೆ. ಯುಎಇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕೃತ ಮೂಲಗಳು ಬಿಡುಗಡೆ ಮಾಡುವ ಮಾಹಿತಿಯನ್ನು ಮಾತ್ರ ನಂಬಬೇಕು. ಊಹಾಪೋಹಗಳು ಹಾಗೂ ನಂಬಲರ್ಹವಲ್ಲದ ವರದಿಗಳನ್ನು ತಪ್ಪಿಸುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.
ಇಸ್ರೇಲ್‌ನ ಕೋರಿಕೆ ತಿರಸ್ಕಾರ
ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಫ್ಲೈ ದುಬೈ ವಿಮಾನದ ಪ್ರಯಾಣಿಕರನ್ನು ವಾಪಸ್ ಕರೆತರಲು ತನ್ನ ವಿಮಾನಗಳಿಗೆ ಸೌದಿ ವಾಯುಪ್ರದೇಶದಲ್ಲಿ ಹಾರಾಟ ನಡೆಸಲು ಅನುಮತಿ ನೀಡಬೇಕೆಂಬ ಇಸ್ರೇಲ್‌ನ ಕೋರಿಕೆಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಇಸ್ರೇಲಿ ಪ್ರಯಾಣಿಕರನ್ನು ಕರೆತರಲು ತನ್ನ ಮಿಲಿಟರಿ ವಿಮಾನಗಳಿಗೆ ಅನುಮತಿ ನೀಡುವಂತೆ ಇಸ್ರೇಲ್ ಮನವಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಕಾಕ್‌ಪಿಟ್‌ನಲ್ಲಿ ನಡೆದ ಘಟನೆಯ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫ್ಲೈ ದುಬೈ ಸಂಸ್ಥೆಯು ಇಸ್ರೇಲ್‌ಗೆ ಹಾಗೂ ಇಸ್ರೇಲ್‌ನಿಂದ ತನ್ನ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
-
Uncategorized20 hours ago
ಪುತ್ತೂರು : ಬಾಡಿಗೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಯುವಕ ಸಾವು
-
Uncategorized22 hours ago
Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ
-
ಅಂತರ ರಾಜ್ಯ24 hours agoBlackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್ಮೇಲ್..!
-
Uncategorized8 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಸ್ಥಳೀಯ24 hours agoKalaburagi-ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಹತ್ಯೆ; ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಪತಿ ಬಂಧನ
-
Uncategorized6 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ಅಪರಾಧ7 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ಮಂಗಳೂರು6 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ


















