ಕ್ರೈಂ
Chikkanna | ರೇಣುಕಾಸ್ವಾಮಿ ಕೊಲೆ ಪ್ರಕರಣ : ಹಾಸ್ಯ ನಟ ಚಿಕ್ಕಣ್ಣ ವಿಚಾರಣೆ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ನಟ ದರ್ಶನ್ ಸ್ನೇಹಿತರೂ ಆಗಿರುವ ನಟ ಚಿಕ್ಕಣ್ಣ (Chikkanna) ಅವರನ್ನು ಸೋಮವಾರ ಪಶ್ಚಿಮ ವಿಭಾಗದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದರು.
ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಸೂಚಿಸಿ ಸೋಮವಾರ ಬೆಳಿಗ್ಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಸಂಜೆ 4 ಗಂಟೆ ಸುಮಾರಿಗೆ ವಿಚಾರಣೆಗೆ ಬರುತ್ತಿದ್ದಂತೆ ಚಿಕ್ಕಣ್ಣ ಅವರನ್ನು ರಾಜರಾಜೇಶ್ವರಿ ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಆರೋಪಿ ದರ್ಶನ್ ಹಾಗೂ ಅದರ ಮಾಲೀಕರೂ ಆಗಿರುವ ಆರೋಪಿ ವಿನಯ್ ಜತೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.
ಅಲ್ಲಿಂದ ಚಿಕ್ಕಣ್ಣ ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆ ತಂದ ಪೊಲೀಸರು ವಿಚಾರಣೆ ನಡೆಸಿದರು.ಕೃತ್ಯ ಎಸಗುವುದಕ್ಕೂ ಮುನ್ನ ರಾಜರಾಜೇಶ್ವರಿ ನಗರದ ರೆಸ್ಟೋರೆಂಟ್‌ನಲ್ಲಿ ಜೂನ್ 8ರ ಸಂಜೆ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ದರ್ಶನ್ ಜತೆಗೆ ಚಿಕ್ಕಣ್ಣ ಇದ್ದರು ಎಂಬುದಕ್ಕೆ ಪುರಾವೆ ಲಭಿಸಿದ್ದು ಅದರ ಆಧಾರದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ಪಾರ್ಟಿ ವೇಳೆ ಕೃತ್ಯದ ಬಗ್ಗೆ ಏನಾದರೂ ಚರ್ಚೆ ನಡೆದಿತ್ತೇ?
ಪಾರ್ಟಿಯಲ್ಲಿ ಯಾರು ಭಾಗಿಯಾಗಿದ್ದರು ಎಂಬುದರ ಬಗ್ಗೆ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಪಾರ್ಟಿಯಲ್ಲಿ ಇದ್ದವರನ್ನು ಗುರುತಿಸುವಂತೆ ಬಂಧಿತ ಆರೋಪಿಗಳ ಚಿತ್ರ ತೋರಿಸಿ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.’ಶೆಡ್‌ಗೆ ಚಿಕ್ಕಣ್ಣ ತೆರಳಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ.
ಪಾರ್ಟಿಯಲ್ಲಿದ್ದರು ಎಂಬುದಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳು ಸಿಕ್ಕಿವೆ. ಅಲ್ಲದೇ ಬಂಧಿತರು ಚಿಕ್ಕಣ್ಣ ಹೆಸರು ಬಾಯ್ದಿಟ್ಟಿದ್ದರು’ ಎಂದು ತನಿಖಾ ಮೂಲಗಳು ಸಿಕ್ಕಿವೆ.
ಸ್ಥಳೀಯ
Kalaburagi-ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಹತ್ಯೆ; ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಪತಿ ಬಂಧನ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ಹಡಪದ್ (30) ಎಂದು ಗುರುತಿಸಲಾಗಿದೆ.
ಆಕೆಯ ಪತಿ ಸೂರ್ಯಕಾಂತ್ ಹಡಪದ್ ಕೊಲೆ ಆರೋಪಿಯಾಗಿದ್ದು, ವಕೀಲ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಕ್ಕಳಾಗದಿರುವ ವಿಚಾರ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಸಂಬಂಧಿಸಿ ಸೂರ್ಯಕಾಂತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಬಳಿಕ ಸೂರ್ಯಕಾಂತ್ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಂತರ ರಾಜ್ಯ
Murder-ಆಸ್ತಿಗಾಗಿ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂನ ಚೆರುಮೂಡು ಮೂಲದ ರಾಜು ಕೊಲೆಯಾದ ವ್ಯಕ್ತಿ.
ಕೊಲ್ಲಂ: ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಂನ ಚೆರುಮೂಡು ಮೂಲದ ರಾಜು (53) ಅವರು ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ರಾಜು ಹಾಗೂ ಅವರ ಪತ್ನಿ ಲೇಖಾ ಮೇರಿ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆಸ್ತಿ ಮೂಲತಃ ರಾಜು ಕುಟುಂಬಕ್ಕೆ ಸೇರಿದ್ದಾಗಿದ್ದು, ಬಳಿಕ ರಾಜು ಅವರ ಹೆಸರಿಗೆ ವರ್ಗಾವಣೆಯಾಗಿತ್ತು. ಆದರೆ ಸಂಪೂರ್ಣ ಆಸ್ತಿಯ ಮಾಲೀಕತ್ವ ತನಗೇ ಬೇಕೆಂದು ಲೇಖಾ ಪಟ್ಟು ಹಿಡಿದಿದ್ದರಿಂದ ದಂಪತಿ ನಡುವೆ ನಿರಂತರವಾಗಿ ಮನಸ್ತಾಪ ಉಂಟಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೆಲಕಾಲ ಬೇರೆ ಬೇರೆಯಾಗಿದ್ದ ದಂಪತಿ, ಕಳೆದ ಒಂದು ವರ್ಷದಿಂದ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದರು.
ಅ.2ರಂದು ಬೆಳಗ್ಗೆ ಸುಮಾರು 5.30ಕ್ಕೆ ರಾಜು ಮನೆಯಲ್ಲಿ ದಿಢೀರ್ ಕುಸಿದುಬಿದ್ದಿದ್ದಾರೆ ಎಂದು ಹೇಳಲಾಗಿತ್ತು. ತಕ್ಷಣ ಸಹೋದರ ಹಾಗೂ ನೆರೆಹೊರೆಯವರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ರಾಜು ಮೃತಪಟ್ಟಿರುವುದಾಗಿ ಘೋಷಿಸಿದರು.
ಆದರೆ ಮರಣೋತ್ತರ ಪರೀಕ್ಷೆ ವೇಳೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ರಾಜು ಸಾಮಾನ್ಯವಾಗಿ ಕುಸಿದುಬಿದ್ದು ಮೃತಪಟ್ಟಿಲ್ಲ ಎಂದು ಶಂಕಿಸಿರುವ ವೈದ್ಯರು, ಅವರ ಕುತ್ತಿಗೆಯ ಭಾಗದಲ್ಲಿ ಅನುಮಾನಾಸ್ಪದ ಗುರುತುಗಳು ಕಂಡುಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ರಾಜು ಅವರ ಪತ್ನಿ ಲೇಖಾ ಮೇರಿಯನ್ನು ವಿಚಾರಣೆ ನಡೆಸಿದಾಗ, ಆಸ್ತಿ ವಿಚಾರವಾಗಿ ಅ.2ರಂದು ಮತ್ತೆ ಜಗಳ ನಡೆದಿತ್ತು ಎಂದು ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಜಗಳದ ವೇಳೆ ಕೋಪಗೊಂಡು ಬೆಲ್ಟ್‌ನಿಂದ ಪತಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಮೂಲಗಳು ಹೇಳಿವೆ.
ಬಳಿಕ ರಾಜು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಅವರ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಳು ಎನ್ನಲಾಗಿದೆ.
ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡಿ ಬಳಿಕ ವಾಪಸ್ ಬಂದಿದ್ದ ಲೇಖಾ ಮೇರಿ ಸದ್ಯ ಗೃಹಿಣಿಯಾಗಿದ್ದು, ದಂಪತಿಗೆ ಒಬ್ಬ ಮಗಳಿದ್ದಾಳೆ. ಪ್ರಕರಣದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬ ಬಗ್ಗೆಯೂ ಕುಂದರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕ್ರೈಂ
Honeytrap-ಹಳೆಯ ದ್ವೇಷಕ್ಕೆ ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಅಸ್ತ್ರ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರ ಬಂಧನ
ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಬೆಳಗಾವಿ: ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.
ಹಣಕಾಸಿನ ವಿಚಾರದ ದ್ವೇಷವೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ನಡೆದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶ ಅವರು ಶಶಿ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಹೆಸರಿನಲ್ಲಿ ನಕಲಿ ಖಾತೆ
ಕೊಲೆಗೆ ಆರೋಪಿಗಳು ಇನ್‌ಸ್ಟಾಗ್ರಾಂ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅದರ ಮೂಲಕ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಇದೇ ಪರಿಚಯವನ್ನು ಬಳಸಿಕೊಂಡು ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
-
Uncategorized19 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್14 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು17 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
ನಿಧನ ವಾರ್ತೆ18 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
Uncategorized18 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ಅಪರಾಧ18 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ17 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್18 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















