ಸುಳ್ಯ
Murder At Bellare : ಬೆಳ್ಳಾರೆ : ತಲೆ ಒಡೆದು ಹಾಕಿದ ರೀತಿಯಲ್ಲಿ ಮಹಿಳೆಯ ಶವ ಪತ್ತೆ – ಕಲ್ಲು ಎತ್ತಿ ಹಾಕಿ ಕೊಂದಿರುವ ಶಂಕೆ
ಬೆಳ್ಳಾರೆ: ತಲೆ ಒಡೆದು ಹಾಕಿದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಸುಳ್ಯ ತಾಲೂಕಿನ ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ. ಇದೊಂದು ಕೊಲೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಬಯಲಾಗಬೇಕಿದೆ.
ಬೆಳ್ಳಾರೆ ಗ್ರಾಮದ ನಳಿನಿ ಪಾಟಾಜೆ ಮೃತ ಮಹಿಳೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬೆಳ್ಳಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳ್ಳಾರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಮತ್ತು ಸಿಬ್ಬಂದಿಗಳು ಪರಿಶೀಲನ ನಡೆಸುತ್ತಿದ್ದು, ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬಂತೆ ಗೋಚರಿಸುತ್ತಿದೆ. ಮಹಿಳೆಯ ತಲೆ ಒಡೆದು ರಕ್ತ ಹರಿದುಹೋಗಿದೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಕೆಂಪು ಕಲ್ಲು ಇದ್ದು, ಅದನ್ನೇ ತಲೆಗೆ ಎತ್ತಿಹಾಕಿ ಕೊಲೆಮಾಡಿರಬಹುದೆಂದು ಶಂಕಿಸಲಾಗಿದೆ
ಮಹಿಳೆಗೆ ಕುಡಿತದ ಚಟವಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು , ಕುಡಿದ ಮತ್ತಿನಲ್ಲಿ ಜಗಳ ನಡೆದು ಹತ್ಯೆ ನಡೆಸಿರಬಹುದೇ ಎಂಬ ಅನುಮಾನ ಮೂಡಿದೆ.
ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಳ್ಯ
Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ
ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.
ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.
ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.
ಸುಳ್ಯ
Areca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ಸುಳ್ಯ, ನ.12: ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ನ.11 ಮತ್ತು ನ.12ರ ಮಾರುಕಟ್ಟೆ ದರಗಳನ್ನು ಹೋಲಿಸಿದಾಗ ಹೊಸ ಅಡಿಕೆಯ ಗರಿಷ್ಠ ಧಾರಣೆ ₹350ರಿಂದ ₹360ಕ್ಕೆ ಏರಿಕೆಯಾಗಿದೆ. ಆದರೆ ಕನಿಷ್ಠ ಧಾರಣೆ ₹280ರಲ್ಲೇ ಸ್ಥಿರವಾಗಿದೆ. ಕನಿಷ್ಠ ದರದಲ್ಲಿ ಬದಲಾವಣೆಯಾಗದಿದ್ದರೂ ಗರಿಷ್ಠ ದರದಲ್ಲಿ ಕಂಡುಬಂದಿರುವ ಏರಿಕೆ ಮಾರುಕಟ್ಟೆಯಲ್ಲಿ ಚೇತರಿಕೆಯ ಮುನ್ಸೂಚನೆ ನೀಡಿದೆ.
ಡಬಲ್ ಚೋಲ್ ಅಡಿಕೆಗೂ ಬೆಲೆ ಏರಿಕೆ
ಡಬಲ್ ಚೋಲ್ ಅಡಿಕೆಯ ಮಾರುಕಟ್ಟೆಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಹಿಂದಿನ ದಿನ ₹525ರಷ್ಟಿದ್ದ ಕನಿಷ್ಠ ಧಾರಣೆ ₹530ಕ್ಕೆ ಏರಿಕೆಯಾಗಿದ್ದರೆ, ಗರಿಷ್ಠ ಧಾರಣೆ ₹550ರಿಂದ ₹560ಕ್ಕೆ ತಲುಪಿದೆ. ಈ ಮೂಲಕ ಕನಿಷ್ಠ ದರದಲ್ಲಿ ₹5 ಹಾಗೂ ಗರಿಷ್ಠ ದರದಲ್ಲಿ ₹10ರಷ್ಟು ಹೆಚ್ಚಳ ದಾಖಲಾಗಿದೆ.
ಸಿಂಗಲ್ ಚೋಲ್ ಸೇರಿದಂತೆ ಇತರ ಅಡಿಕೆ ದರ ಸ್ಥಿರ
ಹೊಸ ಅಡಿಕೆ ಮತ್ತು ಡಬಲ್ ಚೋಲ್ ಹೊರತುಪಡಿಸಿ ಮಾರುಕಟ್ಟೆಯ ಇತರ ಪ್ರಮುಖ ಅಡಿಕೆ ವರ್ಗಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಂಗಲ್ ಚೋಲ್ ಅಡಿಕೆ ಕೆ.ಜಿ.ಗೆ ಕನಿಷ್ಠ ₹450 ಹಾಗೂ ಗರಿಷ್ಠ ₹480ರ ದರದಲ್ಲಿ ವಹಿವಾಟು ನಡೆಸಿದೆ.
ಬೆಳೆಗಾರರ ಕಣ್ಣು ಮುಂದಿನ ಮಾರುಕಟ್ಟೆ ದರದತ್ತ
ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ಕಂಡುಬರುತ್ತಿರುವ ಏರಿಳಿತಗಳು ಬೆಳೆಗಾರರಲ್ಲಿ ಗೊಂದಲ ಮೂಡಿಸಿದ್ದವು. ಅದರಲ್ಲೂ ಉತ್ಪಾದನಾ ವೆಚ್ಚ, ಕೂಲಿ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಾರುಕಟ್ಟೆ ದರದ ನಿರೀಕ್ಷೆ ಬೆಳೆಗಾರರಲ್ಲಿದೆ.
ಇದೀಗ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯಲ್ಲಿ ದಾಖಲಾಗಿರುವ ಏರಿಕೆ ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಆದರೆ ಈ ಏರಿಕೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆಯೇ ಅಥವಾ ಮತ್ತೆ ಧಾರಣೆ ಸ್ಥಿರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ಅಡಿಕೆ ಬೆಳೆಗಾರರ ಚಿತ್ತ ಮುಂದಿನ ಮಾರುಕಟ್ಟೆ ವಹಿವಾಟಿನತ್ತ ನೆಟ್ಟಿದೆ.
-
ಬಿಗ್ ನ್ಯೂಸ್11 hours agoBail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
-
ಅಂತರ ರಾಜ್ಯ9 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ನಿಧನ ವಾರ್ತೆ10 hours agoHeart attack-ಸಾಲಿಗ್ರಾಮ: ಕಚೇರಿಯಲ್ಲೇ ಹೃದಯಾಘಾತ; ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ
-
ನಿಧನ ವಾರ್ತೆ10 hours agoMudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
-
ಸಿನೆಮಾ9 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ನಿಧನ ವಾರ್ತೆ9 hours agoOne-sided love-ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಮೇಲಿನ ಒನ್ಸೈಡೆಡ್ ಲವ್; ಹಲ್ಲೆಗೊಳಗಾದ ಯುವಕ ಸಾವು
-
ಮಂಗಳೂರು4 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಅಂತರ ರಾಜ್ಯ3 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!















