Connect with us

ಆರೋಗ್ಯ

Visual impairment- ವಯೋ ಸಂಬಂಧಿ ದೃಷ್ಟಿ ಕ್ಷಯ

Published

on

Ad Widget

Ad Widget

Ad Widget

Ad Widget

“ಕಣ್ಣುನೋವು, ಉರಿ, ನೀರು ಬರುವುದು ಯವುದೂ ಇಲ್ಲ. ಆದರೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ನೋಡುವಾಗ ಒಂದು ಭಾಗದಲ್ಲಿ ಕಪ್ಪಾಗಿ ಕಾಣುತ್ತದೆ.” ಎಂದು ಕೆಲವು ಜನ ಹೇಳುವುದನ್ನು ನೀವು ಕೇಳಿರಬಹುದು. ಇದು ‘ಏಜ್ ರಿಲೇಟಡ್ ಮ್ಯಾಕ್ಯುಲಾರ್ ಡಿಜನರೇಷನ್’ ಎಂಬ, ಕಣ್ಣಿನ ನರಮಂಡಲ ರೆಟಿನಾದ ಸಮಸ್ಯೆ ಇರಬಹುದೆಂಬ ಗುಮಾನಿಯನ್ನು ಹುಟ್ಟಿಸುತ್ತದೆ. ನೋವು ಇಲ್ಲದ ನಿಧಾನವಾಗಿ ಆಗುವ ದೃಷ್ಟಿಕ್ಷಯ ಇದರ ಲಕ್ಷಣ. ಸಾಮಾನ್ಯವಾಗಿ ಎರಡೂ ಕಣ್ಣುಗಳಲ್ಲಿ, ಐವತ್ತು ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳುವುದರಿಂದ ಇದನ್ನು ವಯೋ ಸಂಬAಧಿತ ಎಂದು ಉಲ್ಲೇಖಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಕೂಡಾ ಇದು ಕುರುಡುತನದ ಪ್ರಮುಖ ಕಾರಣ.

Ad Widget

Ad Widget

Ad Widget

Ad Widget
ಲೇಖಕರು : ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ. ಬಿ.ಎ.ಎಂ.ಎಸ್.,ಎ.ಎಸ್.(ಆಯು)
ಅನುವಂಶೀಯತೆ, ಅಹಿತ ಆಹಾರ, ಪೌಷ್ಟಿಕತೆಯ ಕೊರತೆ, ಧೂಮಪಾನ, ಅಧಿಕ ರಕ್ತದೊತ್ತಡ, ಸರ‍್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದು, ಹತ್ತಿರದ ವಸ್ತುಗಳನ್ನು ಸರಿಯಾಗಿ ಕಾಣಲು ಆಗದಿರುವ ದೃಷ್ಟಿದೋಷ, ಕಣ್ಣಿನ ಪೊರೆ, ಮಾನಸಿಕ ಒತ್ತಡ, ಕಣ್ಣಿಗೆ ತ್ರಾಸ ನೀಡುವ ಕಂಪ್ಯೂಟರ್ ಕೆಲಸ ಇರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 

ಇದರಲ್ಲಿ ಎರಡು ವಿಧ. ನಾನ್ ಎಕ್ಸುಡೇಟಿವ್ (ಸ್ರಾವ ರಹಿತ) ಮತ್ತು ಎಕ್ಸುಡೇಟಿವ್ (ಸ್ರಾವಯುಕ್ತ). ಸ್ರಾವರಹಿತದಲ್ಲಿ ಸಾಧಾರಣದಿಂದ ಮಧ್ಯಮ ಮಟ್ಟದ ದೃಷ್ಟಿನಾಶ, ನಿಧಾನವಾಗಿ ಆಗುವಂತದ್ದು. ತೊಂಬತ್ತು ಶೇಕಡಾದಷ್ಟು ಈ ವಿಧದ್ದು. ಆರಂಭದಲ್ಲಿ  ಇದು ದೃಷ್ಟಿನಾಶ ಉಂಟುಮಾಡುವುದಿಲ್ಲ. ರೋಗಿಗಳು ದೃಷ್ಟಿಗೆ ಕಾಣುವ ವಸ್ತುಗಳನ್ನು ವಿಕಾರವಾಗಿ, ವಿರೂಪವಾಗಿ ಕಾಣಬಹುದು. ಅಥವಾ ದೃಷ್ಟಿಯ ಒಂದು ಭಾಗ ಕಪ್ಪಾಗಿ ನೆರಳಿನಂತೆ ಕಾಣಬಹುದು. ಮೊದಲ ಹಂತದಲ್ಲಿ, ರೆಟಿನಾದ ಮ್ಯಾಕ್ಯುಲಾ ಪ್ರದೇಶದಲ್ಲಿ ಹಳದಿ ಮಿಶ್ರಿತ ಬಿಳಿಯ ಉಬ್ಬಿದಂತಹ ಬಿಂದುವಿನಂತಹ ಜಾಗಗಳು ಕಾಣಿಸಿಕೊಳ್ಳುತ್ತವೆ. ಮಧ್ಯಮ ಹಂತದಲ್ಲಿ, ವರ್ತುಲಾಕಾರದ ಕಳಾಹೀನ ಪ್ರದೇಶಗಳು ಕಾಣಿಸಿಕೊಂಡು, ಸಣ್ಣ ರಕ್ತನಾಳಗಳು ನಾಶವಾಗುತ್ತವೆ. ಮುಂದುವರಿದ ಹಂತದಲ್ಲಿ, ಈ ರೀತಿ ಸವಕಳಿ ಹಂದಿದ ಪ್ರದೇಶಗಳು ದೊಡ್ಡದಾಗಿ, ಅದಕ್ಕೆ ತಾಗಿಕೊಂಡಿರುವ ಪದರದ ರಕ್ತನಾಳಗಳು ನಾಶವಾಗಿರುತ್ತವೆ. 

ಸ್ರಾವಯುಕ್ತದಲ್ಲಿ ಹೆಚ್ಚು ಪ್ರಮಾಣದ, ತೀವ್ರ ಹಾಗೂ ವೇಗವಾದ ದೃಷ್ಟಿನಾಶ ಉಂಟಾಗುವುದು. ಹತ್ತು ಶೇಕಡಾದಷ್ಟು ಈ ವಿಧದ್ದು. ಗೋರಿಗಳ ರೀತಿಯಲ್ಲಿ ಸ್ಪಷ್ಟವಾಗಿ ಕಾಣುವ ವರ್ತುಲಾಕಾರದ ಉಬ್ಬುಗಳು ಕಾಣಿಸಿಕೊಳ್ಳುವುದು. ರೆಟಿನಾದ ಹೊರಪದರ ಇತರ ಪದರಗಳಿಂದ ಬೇರ್ಪಡುವುದು. ಅತಿಯಾದ ಅನಗತ್ಯ ರಕ್ತನಾಳಗಳ ಹರಡುವಿಕೆ ಇರುವುದು. ರಕ್ತನಾಳಗಳು ಒಡೆಯಬಹುದು, ತನ್ನ ದ್ರವವನ್ನು ಹೊರಗೆ ಸ್ರವಿಸಬಹುದು. ರಕ್ತಸ್ರಾವದಿಂದ ಉಂಟಾದ ಉಬ್ಬುಗಳು ಇರುವವು. ಇವು ತಿಳಿಗೆಂಪು, ರ‍್ರಾಬರ‍್ರಿಯಾಗಿ ಕಾಣುವ ಕಲೆಗಳಾಗಿ ಕಾಣುತ್ತವೆ. 
ಆರಂಭಿಕ ರೋಗಿಪರೀಕ್ಷೆಯ ನಂತರ, ರೆಟಿನಾದ ಈ ಲಕ್ಷಣಗಳ ನಿಖರ ಪತ್ತೆಗೆ ಒ.ಸಿ.ಟಿ. ಎನ್ನುವ ಕಣ್ಣಿನ ನರಪದರಗಳ ಸ್ಕ್ಯಾನಿಂಗ್ ಬಳಸುತ್ತೇವೆ. ಆಮ್ಸರ್ ಗ್ರಿಡ್ ಟೆಸ್ಟ್ ಮೂಲಕ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯ. ಈ ಚಿತ್ರವನ್ನು ಗಮನಿಸಿ.‌

• ನಿಮಗೆ ಈಗಾಗಲೇ ಕನ್ನಡಕ ಇದ್ದಲ್ಲಿ ಅದನ್ನು ಹಾಕಿಕೊಂಡೇ ಇದನ್ನು ಮಾಡಿ.
• ಈ ಚಿತ್ರ(ಚಾರ್ಟ)ವನ್ನು ಮುಖದಿಂದ ಹದಿನಾಲ್ಕು ಇಂಚು ದೂರ ಹಿಡಿದುಕೊಳ್ಳಿ.
• ಒಂದು ಕಣ್ಣನ್ನು ಕೈಯಿಂದ ಮುಚ್ಚಿಕೊಳ್ಳಿ.
• ಕೇಂದ್ರದಲ್ಲಿನ ಬಿಂದುವನ್ನು ಗಮನಿಸಿ. ಆ ಬಿಂದುವಿನಿಂದ ಕಣ್ಣನ್ನು ಚಲಿಸಬೇಡಿ.
• ಯಾವುದೇ ನೇರಗೆರೆಗಳು ಓರೆಕೋರೆಯಾಗಿ ಕಂಡುಬಂದಲ್ಲಿ, ಚಿತ್ರದ ಒಳಗಿನ ಯಾವುದೇ ಚೌಕದ ಆಕಾರ ಅಥವಾ ಗಾತ್ರದಲ್ಲಿ ವ್ಯತ್ಯಾಸ ಕಂಡಲ್ಲಿ, ಯಾವುದೇ ಗೆರೆಗಳು ಕಾಣದೇ ಇದ್ದಲ್ಲಿ ಅಥವಾ ಮಬ್ಬಾಗಿ ಕಂಡಲ್ಲಿ ಅಥವಾ ಬಣ್ಣ ಬೇರೆಯಾಗಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

Ad Widget

Ad Widget alt="Ad Widget"/>

Ad Widget
ಆಧುನಿಕ ವೈದ್ಯಕೀಯದಲ್ಲಿ ಧೂಮಪಾನ ವರ್ಜಿಸುವುದು, ಜಾಡಮಾಲಿ ಅಂಶಗಳನ್ನು (ಆಂಟಿ ಓಕ್ಸಿಡೆಂಟ್), ವಿಟಾಮಿನ್, ಪೌಷ್ಟಿಕಾಂಶಗಳನ್ನು ನೀಡುವುದನ್ನು ಸ್ರಾವರಹಿತ ವಿಧಕ್ಕೆ ಸೂಚಿಲಾಗುತ್ತದೆ. ಸ್ರಾವಯುಕ್ತ ವಿಧಕ್ಕೆ ಆಂಟಿ-ವೆಜ್-ಎಫ್ ನಂತಹ ದುಬಾರಿ ಚುಚ್ಚುಮದ್ದುಗಳು ಇವೆಯೆಂದು ಹೇಳಲಾಗಿದೆಯಾದರೂ, ಸಮರ್ಪಕ ಗುಣಮುಖತೆ ಈ ವರೆಗೆ ಸಾಬೀತಾಗಿಲ್ಲ. ಆದರೆ ನಮ್ಮಲ್ಲಿ ಆಯುರ್ವೇದ ಪದ್ಧತಿಯಲ್ಲಿ ಘೃತಪಾನ, ನಸ್ಯ, ವಿರೇಚನ, ಬಸ್ತಿಕರ್ಮ, ಅಂಜನ, ತರ್ಪಣ, ಸೇಕ, ಸಿರಾವ್ಯಧ ವಿಧಾನಗಳ ಮೂಲಕ ಯಶಸ್ವಿಯಾಗಿ ದೃಷ್ಟಿಕ್ಷಯವನ್ನು ತಡೆಗಟ್ಟಬಹುದು. ತುಪ್ಪ, ಶತಾವರೀ, ಪಡುವಲ, ಹೆಸರು, ಜವೆಗೋಧಿ,ಮೂಲಂಗಿ, ಹಾಗಲಕಾಯಿ, ನೆಲ್ಲಿಕಾಯಿ, ಬದನೆ, ನುಗ್ಗೆ ಸೇವನೆ ಪ್ರಶಸ್ತ. ತಲೆ ಮತ್ತು ಪಾದಗಳಿಗೆ ಎಣ್ಣೆ ಹಚ್ಚಿ ಮಸ್ಸಾಜ್ ಮಾಡುವುದು ಕಣ್ಣಿಗೆ ಹಿತಕರ. 

ಮನೆಮದ್ದು:

Ad Widget

Ad Widget <> Ad Widget

• ತ್ರಿಫಲಾ ಚೂರ್ಣ ಅರ್ಧ ಚಮಚ, ಜ್ಯೇಷ್ಠಮಧು ಅರ್ಧ ಚಮಚ, ಜೇನು ಒಂದೂವರೆ ಚಮಚ- ಮಿಶ್ರ ಮಾಡಿ ರಾತ್ರೆ ಮಲಗುವ ಮುನ್ನ ಒಂದು ತಿಂಗಳು ಸೇವಿಸಬೆಕು.
• ತ್ರಿಫಲಾ, ಕಪ್ಪುದ್ರಾಕ್ಷೆ, ಜೇನು ಮತ್ತು ಕಂದು ಸಕ್ಕರೆ (ಬ್ಲೀಚ್ ಮಾಡದ ಸಕ್ಕರೆ) ಸೇರಿಸಿ ನಿತ್ಯ ಸೇವಿಸಬೇಕು. (ಸಕ್ಕರೆ ಕಾಯಿಲೆ ಇದ್ದವರು ಜೇನು, ಸಕ್ಕರೆ ಬಳಸಬಾರದು)

• ಕಣ್ಣಿನ ರಕ್ಷಣೆಗೆ ಇರುವ ವ್ಯಾಯಾಮಗಳನ್ನು ನಿತ್ಯ ಮಾಡಬೇಕು.

Ad Widget

Ad Widget

ಲೇಖಕರು

ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ. ಬಿ.ಎ.ಎಂ.ಎಸ್.,ಎ.ಎಸ್.(ಆಯು)
ಆಯುರ್ವೇದ ತಜ್ಞರು ಹಾಗೂ ಆಡಳಿತ ನಿರ್ದೇಶಕರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು.
ಮೊಬೈಲ್: 9740545979

         

Ad Widget
Click to comment

Leave a Reply

ಆರೋಗ್ಯ

Bantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ

Published

on

Ad Widget

Ad Widget

Ad Widget

Ad Widget

ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Ad Widget

Ad Widget

Ad Widget

Ad Widget

ಬಂಟ್ವಾಳ: ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Ad Widget

Ad Widget alt="Ad Widget"/>

Ad Widget

ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಈ ವ್ಯಕ್ತಿಗೆ ‘ಬೈಲ್ಯಾಟರಲ್ ಹಿಪ್ ಅವಾಸ್ಕುಲರ್ ನೆಕ್ರೋಸಿಸ್’ (Bilateral Hip Avascular Necrosis) ಎಂಬ ಕಾಯಿಲೆ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಇದರಿಂದ ಎರಡೂ ಸೊಂಟದ ಮೂಳೆಗಳು ಹಾನಿಗೊಳಗಾಗಿದ್ದು, ಬಲಭಾಗಕ್ಕಿಂತ ಎಡಭಾಗದ ಮೂಳೆಯ ಸ್ಥಿತಿ ಗಂಭೀರವಾಗಿತ್ತು.

Ad Widget

Ad Widget <> Ad Widget

ಈ ಹಿಂದೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ಮೂಳೆ ತಜ್ಞರನ್ನು ಸಂಪರ್ಕಿಸಿದ್ದ ರೋಗಿಗೆ ಶಸ್ತ್ರಚಿಕಿತ್ಸೆಯೊಂದೇ ಶಾಶ್ವತ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

ರೋಗಿಯ ಆರ್ಥಿಕ ಹಾಗೂ ಆರೋಗ್ಯದ ಸಂಕಷ್ಟವನ್ನು ಅರಿತ ಆಸ್ಪತ್ರೆಯ ವೈದ್ಯಕೀಯ ತಂಡವು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ನವೆಂಬರ್ 4ರಂದು ಯೋಜನೆಯಡಿ ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್ 11ರಂದು ಅನುಮತಿ ದೊರೆತಿತ್ತು. ಬಳಿಕ ನವೆಂಬರ್ 17ರಂದು ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದೆ.

Ad Widget

Ad Widget

ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಶೆಟ್ಟಿ ಹಾಗೂ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಚೇತನ್‌ರಾಜ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತು.

ಅರವಳಿಕೆ ತಜ್ಞರಾದ ಡಾ. ವಿದ್ಯಾಸಾಗರ್ ಹಾಗೂ ಡಾ. ತುಷಾರ್ ಕೆ., ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಾಧಿಕಾರಿಗಳಾದ ವಾಣಿ, ಪುಷ್ಪಾ, ಕೀರ್ತಿಶಾಲಿನಿ, ತಂತ್ರಜ್ಞರಾದ ಧನ್ಯಾ ಮತ್ತು ಶಶಿಕಲಾ ಹಾಗೂ ಡಿ-ದರ್ಜೆ ನೌಕರರಾದ ಸವಿತಾ, ಜಲಜಾ ಮತ್ತು ಚಂದ್ರಾವತಿ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲೇ ಯಾವುದೇ ವೆಚ್ಚವಿಲ್ಲದೆ ಗುಣಮಟ್ಟದ ಚಿಕಿತ್ಸೆ ದೊರೆತಿರುವುದಕ್ಕೆ ರೋಗಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ತಿಳಿಸಿದ್ದಾರೆ.

Ad Widget
Continue Reading

ಆರೋಗ್ಯ

Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ

Published

on

Ad Widget

Ad Widget

Ad Widget

Ad Widget

ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget alt="Ad Widget"/>

Ad Widget

ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.

Ad Widget

Ad Widget <> Ad Widget

ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.

ಇನ್ನರ್‌ ವೀಲ್‌ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್.‌ ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.

Continue Reading

ಆರೋಗ್ಯ

‘Ritu Taare’ scheme-35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯಕ್ಕೆ ‘ಋತು ತಾರೆ’ ಯೋಜನೆ; ದ.ಕ.ದಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ..! ನಟಿ ರಮ್ಯಾ ರಾಯಭಾರಿ

Published

on

Ad Widget

Ad Widget

Ad Widget

Ad Widget

35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: 35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.

Ad Widget

Ad Widget alt="Ad Widget"/>

Ad Widget

ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈ ಹಂತದ ಅನುಭವದ ಆಧಾರದಲ್ಲಿ ಬಳಿಕ ರಾಜ್ಯದಾದ್ಯಂತ ವಿಸ್ತರಿಸಲು ಸರಕಾರ ಉದ್ದೇಶಿಸಿದೆ.

Ad Widget

Ad Widget <> Ad Widget

ಮಹಿಳೆಯರ ಆರೋಗ್ಯವು ಕೇವಲ ತಾಯ್ತನಕ್ಕೆ ಸೀಮಿತವಾಗಿಲ್ಲ. ಮೆನೋಪಾಸ್ ಹಂತದಲ್ಲಿ ನಿದ್ರಾಹೀನತೆ, ದೇಹದಲ್ಲಿ ಏಕಾಏಕಿ ಬಿಸಿಯ ಅನುಭವ, ಕೀಲು ನೋವು, ಮೂಳೆಗಳ ದುರ್ಬಲತೆ, ಆತಂಕ ಹಾಗೂ ಮಾನಸಿಕ ಏರುಪೇರು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ನಿರ್ಲಕ್ಷಿಸದೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸರಕಾರ ತಿಳಿಸಿದೆ.

‘ಋತು ತಾರೆ’ ಯೋಜನೆಯಡಿ ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್‌ಗಳನ್ನು ತೆರೆಯಲಾಗುತ್ತದೆ. ಇಲ್ಲಿ ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸುವುದರ ಜೊತೆಗೆ, ಆರೋಗ್ಯದ ವಿವರಗಳನ್ನು ದಾಖಲಿಸಲು ‘ಮಿಡ್-ಲೈಫ್ ಹೆಲ್ತ್ ಕಾರ್ಡ್’ ವಿತರಿಸಲಾಗುತ್ತದೆ.

Ad Widget

Ad Widget

ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ. ಮೆನೋಪಾಸ್ ಹಾಗೂ ಮಧ್ಯವಯಸ್ಕ ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಕಾರ್ಯಕ್ರಮದ ಸಂದೇಶವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸಲು ಅವರು ಸಹಕರಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ ಪೂರ್ಣಗೊಂಡ ಬಳಿಕ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಮಹಿಳೆಯರ ಬದುಕಿನ ಪ್ರತಿಯೊಂದು ಹಂತದಲ್ಲೂ ಉತ್ತಮ ಆರೋಗ್ಯ ಸೇವೆ, ಸೂಕ್ತ ಆರೈಕೆ ಮತ್ತು ಘನತೆಯ ಬದುಕು ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!