Connect with us

ಬಿಗ್ ನ್ಯೂಸ್

‘Ice Cream’-ಐಸ್‌ಕ್ರೀಮ್’ ಎನ್ನುವ ‘ಕ್ರಿಮಿ’ನಲ್‌ನ ಕಥೆ

Published

on

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget
ಲೇಖಕರು : ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ̧̧ ̧ ಮೊ. ನಂ : 9740545979

ಗೆಳೆಯರೊಂದಿಗೋ, ಬಂಧುಗಳೊಂದಿಗೋ ಕುಳಿತು ಐಸ್‌ಕ್ರೀಮ್ ಚಪ್ಪರಿಸುವುದೆಂದರೆ ಎಲ್ಲಿಲ್ಲದ ಆನಂದ! ಹಾಗೆಂದು ಅದರಲ್ಲಿ ಏನೆಲ್ಲ ಇದೆಯೆಂದು ನಾವು ಹುಡುಕಿದರೆ-“ತಾಜಾ ಹಾಲು, ಸಕ್ಕರೆ, ಬಾದಾಮಿ, ಸೋಯಾಬೀಜದ ಪ್ರೊಟೀನ್, ಲೆಸಿಥಿನ್, ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ, ಕ್ಲೋರೋಫಿಲ್, ನಿಂಬೆ ಮುಂತಾದ ನೈಸರ್ಗಿಕ ಪರಿಮಳ, ಡೆಕ್ಟೋಸ್, ಕ್ರೀಮ್, ಗ್ಲುಕೋಸ್, ಹಾಲಿನ ಹುಡಿ, ಲೋಕಸ್ಟ್ ಬೀನ್‌ಗಮ್-ಗುವಾರ್‌ಗಮ್,- ಕ್ಯಾರಾಜೀನನ್ ಮುಂತಾದ ಸ್ಥಿರತೆಕಾರಕ ಸ್ಟೇಬಿಲೈಸರ್‌ಗಳು, ಎಮಲ್ಸಿಫಯರ್(mono and diglycerides of fatty acids), ಸಮುದ್ರದ ಉಪ್ಪು”- ಇತ್ಯಾದಿ ಇದರಲ್ಲಿ ಇರುವ ಬಹುತೇಕ ದ್ರವ್ಯಗಳು ಅತಿಸಂಸ್ಕರಿತ ಆಹಾರದ ಪ್ರಮುಖ ಭಾಗಗಳು. ಅಥವಾ ಅಡುಗೆಕೋಣೆಯಲ್ಲಿ ಕಾಣಸಿಗದ ವಸ್ತು ಯಾವುದಾದರೂ ಆಹಾರದಲ್ಲಿ ಇದ್ದರೆ ಅದು ಅತಿಯಾಗಿ ultra processed food. ಇದು ಅದರ ಸರಳವ್ಯಾಖ್ಯೆ. ಆದರೆ ಐಸ್‌ಕ್ರೀಮ್‌ನ್ನು ಉದಾಹರಣೆಯಾಗಿಟ್ಟುಕೊಂಡು ಎಲ್ಲಾ ಅತಿ ಸಂಸ್ಕರಿಸಿದ ಆಹಾರಗಳ ಬಗ್ಗೆ ವಿವರಿಸಬಹುದು.

Ad Widget

Ad Widget alt="Ad Widget"/>

Ad Widget

ಎಮಲ್ಸಿ ಫಯರ್‌ಗಳು ಹಾಗೂ ಗಮ್ ನಂತಹ ಪದಾರ್ಥಗಳನ್ನು ಹಾಕಿ ಹೇಗೆ ಐಸ್‌ಕ್ರೀಮ್ ತಯಾರಾಗುತ್ತದೆ ಮತ್ತು ಅದು ಉತ್ಪಾದನಾ ವೆಚ್ಚವನ್ನು ತಗ್ಗಿಸುವಲ್ಲಿ ಹೇಗೆ ಸಹಕಾರಿಯಾಗುತ್ತದೆ ಎಂಬುದು ಅಧ್ಯಯನದ ವಿಷಯ. ಮೊದಲನೆಯದಾಗಿ, ಅವುಗಳು ಐಸ್‌ಕ್ರೀಮ್‌ನ್ನು ಬಿಸಿಯನ್ನು ಸಹಿಸುವ ವಸ್ತುವಾಗಿ ರೂಪಿಸುತ್ತದೆ. ಮತ್ತುಅದರ ಸಾಗಣಿಕೆ ಕೂಡ ಸುಲಭವಾಗುತ್ತದೆ. ಕಾರ್ಖಾನೆಗಳಿಂದ ವಾಹನಗಳಿಗೆ, ವಾಹನಗಳಿಂದ ಸೂಪರ್‌ಮಾರ್ಕೆಟ್‌ಗಳಿಗೆ, ಅಲ್ಲಿಂದ ನಿಮ್ಮ ಮನೆಯ ಫ್ರೀಜರ್‌ಗೆ. ಗಮ್, ಗ್ಲಿಸರಿನ್ ಹಾಗೂ ಎಮಲ್ಸಿಫಯರ್‌ಗಳು ಮಂಜು ಹರಳುಗಟ್ಟದಂತೆ ತಡೆಯುತ್ತದೆ; ನೀರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಕಾರಣದಿಂದ. ಸುಲಭಸಾಗಾಣಿಕೆ ಮತ್ತುಅತ್ಯಂತ ಕಡಿಮೆ ಉಷ್ಟತೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ.

Ad Widget

Ad Widget <> Ad Widget

ಜನರು ಐಸ್‌ಕ್ರೀಮ್‌ನ ಕ್ರೀಮ್ ಹೆಚ್ಚು ಇಷ್ಟಪಡುತ್ತಾರೆ, ಮಂಜುಗಡ್ಡೆಯ ತುಣುಕುಗಳನ್ನು ಅಲ್ಲತಾನೇ? ಐಸ್‌ಕ್ರೀಮ್‌ ತಯಾರು ಮಾಡುವ ಪ್ರಯೋಗದ ಹಂತದಲ್ಲಿಯೇ ಉದ್ದೇಶ ಸ್ಪಷ್ಟವಾಗಿತ್ತು. ನೊರೆಯ ಮುದ್ದೆ (blocks of foam) ಯೊಂದು ರೂಮಿನ ಸಾಮಾನ್ಯ ಉಷ್ಣತೆಯಲ್ಲಿ ಸ್ಥಿರವಾಗಿರುವಂತೆ ನೋಡಿಕೊಳ್ಳುವುದು, ಜಗತ್ತಿನ ನಾನಾ ಭಾಗಗಳಿಗೆ ಸಾಗಿಸುವುದು ಮತ್ತು ಆಯಾ ಸ್ಥಳಗಳಲ್ಲಿ ಫ್ರೀಜರ್‌ಗಳಲ್ಲಿ ಸಂಗ್ರಹಿಸಿಡುವುದು. ಇದನ್ನು ಸಾಧಿಸಿದರೆ ಖರ್ಚುಕಮ್ಮಿ, ಉಳಿತಾಯ ಅಧಿಕ. ಹೆಚ್ಚಿನ ಐಸ್‌ಕ್ರೀಮುಗಳು ಇದಕ್ಕೆ ಹೊರತಾಗಿಲ್ಲ. ಆದರೆ ಸೂಕ್ಷ್ಮಾಣುಗಳು ಒಂದೇ ಉಳಿದಿರುವ ಸಮಸ್ಯೆ. ಅವು ಕೂಡಾ ಐಸ್‌ಕ್ರೀಮನ್ನು ಬಹುವಾಗಿ ಪ್ರೀತಿಸುತ್ತವೆ. ಆದುದರಿಂದ ಅವುಗಳಿಂದ ತಪ್ಪಿಸಿ ಕೆಡದಂತೆ ಇಡಲು ಫ್ರೀಜರ್‌ ಅವಶ್ಯಕ. ಸ್ವಲ್ಪಉತ್ತಮ, ನೈಸರ್ಗಿಕವೆಂದು ಹೇಳಿಕೊಳ್ಳುವ ಐಸ್‌ಕ್ರೀಮ್‌ ತಯಾರಿಕಾ ಕಂಪೆನಿಗಳು ಸ್ವಲ್ಪ ಭಿನ್ನವಾದ ವಸ್ತುಗಳನ್ನು ಬಳಸಬಹುದು. ಪಾಮ್ ಸ್ಟಿಯರಿನ್, ಪಾಮ್‌ಆಯಿಲ್, ಎಮಲ್ಸಿಫಯರ್, ಸ್ಟೇಬಿಲೈಸರ್, ಪರಿಮಳ ದ್ರವ್ಯಗಳು, ಬಣ್ಣಗಳು ಇತ್ಯಾದಿ.

ಇವು ಕಂಪೆನಿಗಳಿಗೆಹಣ ಉಳಿತಾಯ ಮಾಡಿಕೊಡುತ್ತದೆ. ಏಕೆಂದರೆ ಹಾಲು, ಬೆಣ್ಣೆ, ಸಕ್ಕರೆ, ನಿಜವಾದ ವೆನಿಲ್ಲಾ ಹಾಕಿ ಐಸ್‌ಕ್ರೀಮ್‌ ತಯಾರಿಸಬೇಕಾದರೆ ಅದು ಅತ್ಯಂತ ದುಬಾರಿಯಾಗುತ್ತದೆ. ಸಾಗಾಟದ ಸಮಯವನ್ನು ತಾಳಿಕೊಳ್ಳುವ ಗುಣವೂ ಅದಕ್ಕೆ ಇರುವುದಿಲ್ಲ. ಮಾರಾಟದ ವೆಚ್ಚವೂ ಅತ್ಯಂತ ಹೆಚ್ಚಾಗಿರುತ್ತದೆ. ಆದುದರಿಂದ ಬದಲಿ ವಸ್ತುಗಳನ್ನು ಬಳಸುವುದು ಇಂತಹ ಅತಿ ಸಂಸ್ಕರಿಸಿದ ಕೃತಕ ಹಾಗೂ ಮಾರಕ ಆಹಾರಗಳ ಕ್ರಮ. ನಾವು “ಆಹಾರ”ವೆಂದು ಕರೆಯುವ ಸಾಂಪ್ರದಾಯಿಕ ಆಹಾರಗಳಲ್ಲಿ ರುಚಿ, ರಚನೆ, ಮತ್ತು ಶಕ್ತಿ ನೀಡುವ ವರ್ಗದ ಪಿಷ್ಟ (ಕಾರ್ಬೋಹೈಡ್ರೆಟ್), ಸಸಾರಜನಕ (ಪ್ರೊಟೀನ್), ಕೊಬ್ಬು(fat) ಹಾಗೂ ಜೀವಸತ್ವ (ವಿಟಾಮಿನ್), ಖನಿಜಾಂಶಗಳು ಇರುತ್ತವೆ. ಅಂದರೆ ಅತಿಸಂಸ್ಕರಿಸಿದ ಆಹಾರಗಳ ಉದ್ದೇಶವೇ ಬೇರೆ. ಅದು ನಿಮಗೆ ಶಕ್ತಿ ಹಾಗೂ ಪೋಷಕಾಂಶಗಳನ್ನು ನೀಡುವುದು ಅಲ್ಲ ಎಂಬುದು ನಿಮ್ಮ ಗಮನದಲ್ಲಿ ಗಟ್ಟಿಯಾಗಿರಲಿ. ಬದಲಿಗೆ ಸಾಂಪ್ರದಾಯಿಕಆಹಾರ ಪದರ್ಥಗಳನ್ನು ದೂರತಳ್ಳಿ, ಅಗ್ಗದ ಬದಲಿ ವಸ್ತುಗಳನ್ನು ಬಳಸಿ ನಿಮ್ಮ ರುಚಿಯನ್ನು ಹೆಚ್ಚಿಸುವುದು (ಅಂದರೆ ರುಚಿಕೆಡಿಸುವುದು!) ಮತ್ತು ಕೆಲವೊಂದು ವಸ್ತುಗಳನ್ನು (additives) ಸೇರಿಸಿ ದೀರ್ಘಕಾಲ ಅವುಗಳನ್ನು ಕೆಡದಂತೆ ಉಳಿಸುವುದು ಮತ್ತು ಹೊರಗೆ ಅತಿಯಾಗಿ ಬಳಕೆಯಾಗುವಂತೆ ಉತ್ತೇಜನ ನೀಡುವುದು.

Ad Widget

Ad Widget

ಬೆಣ್ಣೆ, ಪಿಜ್ಜಾ, ಪೇಸ್ಟಿಂಗಳು ಎಲ್ಲವೂ ಕೂಡಾ ನೈಜ ಆಹಾರಗಳಾಗಿಯೇ ಶುರುವಾದವುಗಳು. ಆದರೆ Utraprocesse ಅಲ್ಲದ ನೈಜರೂಪದಲ್ಲಿ ಅವು ದುಬಾರಿ. ಆದುದರಿಂದ ಅವುಗಳ ಪಾರಂಪರಿಕ ವಸ್ತುಗಳ ಸ್ಥಾನವನ್ನುಕೃತಕ ರಾಸಾಯನಿಕಗಳು ಆಕ್ರಮಿಸಿಕೊಂಡವು. ಈ ಬದಲಿ ವಸ್ತುಗಳು, ಪ್ರಾಣಿಗಳಿಗಾಗಿ ಬೆಳೆದ ಆಹಾರಗಳಿಂದ ಸಂಗ್ರಹಿಸಿ ಶೇಖರಣೆ ಮಾಡಿದ್ದುಆಗಿರುತ್ತವೆ. ಆ ವಸ್ತುಗಳನ್ನು ಸಂಸ್ಕರಣ ( refined )ಗೊಳಿಸಿ, ರೂಪಾಂತರ ಗೊಳಿಸಿ ಬಳಸಲಾಗುತ್ತವೆ. ಆ ಹೊತ್ತಿಗೆ ಆ ವಸ್ತುಗಳು ಆಹಾರವಾಗಿ ಉಳಿಯದೆ, ಏತಕ್ಕೂ ಬೇಡದ ಕಸದ ಮೌಲ್ಯವನ್ನಷ್ಟೇ ಉಳಿಸಿಕೊಂಡಿರುತ್ತವೆ.

ಬಹುಶಃ ಇಂದು ಯಾವುದೇ ಆಹಾರದ ಘಟಕವನ್ನಾದರೂ, ಅದನ್ನೇ ಹೋಲುವ ಇನ್ನೊಂದುಕಡಿಮೆ ವೆಚ್ಚದ, ಕೃತಕತಯಾರಿಕೆಯ ವಸ್ತುಗಳನ್ನು ಬದಲಿಯಾಗಿ ಉಪಯೋಗಿಸಿ, ನೈಜವೆಂಬಂತೆ ಮಾರಾಟ ಮಾಡಬಹುದು. ತಂತ್ರಜ್ಞಾನ ಮತ್ತು ಮಾನವ ಬುದ್ಧಿಮತ್ತೆಯ ಪರಾಕಾಷ್ಠೆ ಅಷ್ಟನ್ನು ಸಾಧಿಸಿದೆ. ನಮ್ಮ ನೈಜ, ನೈಸರ್ಗಿಕಆಹಾರ ಸೇವಿಸುವ ಹಕ್ಕು ಮತ್ತು ಅವಕಾಶಗಳನ್ನು ಕಸಿದುಕೊಂಡಿದೆ. ತಯಾರಿಸುತ್ತದೆ.

ಬೇರೆ ಬೇರೆ ಸಸ್ಯಗಳು ಬೇರೆ ಬೇರೆ ರೀತಿಯ ಪಿಷ್ಠವನ್ನು (Starch) ತಯಾರಿಸುತ್ತದೆ. ಕೆಲವು ಸಲ ಪರಸ್ಪರ ವಿರುದ್ಧ ಗುಣಗಳನ್ನೂ ಹೊಂದಿರುತ್ತವೆ. ವಿಧವಿಧದಜೆಲ್‌ಮತ್ತು Pasteಗಳನ್ನು ತಯಾರಿಸಲು, ಬೇರೆ ಬೇರೆ ಉಷ್ಣತೆಗಳಲ್ಲಿ ಮತ್ತು ವಿನ್ಯಾಸಗಳಲ್ಲಿ, ಅವುಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಬಹುದು. 19 ನೆಯ ಶತಮಾನದಲ್ಲಿ ರಸಾಯನಶಾಸ್ತ್ರಜ್ಞರಿಗೆ ಒಂದು ವಿಚಾರ ಗೊತ್ತಾಯಿತು. Starch ಅಥವಾ ಪಿಷ್ಠವನ್ನು ಬೇರೆ ಬೇರೆ ರೀತಿಗಳಲ್ಲಿ ರೂಪಾಂತರಿಸುವುದರ ಮೂಲಕ, ನಮಗೆ ಬೇಕಾದಂತಹ ಗುಣಧರ್ಮಗಳ ವಸ್ತುಗಳನ್ನು ರೂಪಿಸಬಹುದು. ನೀವು ಗಮನಿಸಿದರೆ, ಅತಿಯಾಗಿ ಸಂಸ್ಕರಿಸಿದ ಆಹಾರಗಳಲ್ಲಿ ಇರುವ ವಸ್ತುಗಳು, ಹಾಲು ಮತ್ತು ಹಾಲಿನ ಕೊಬ್ಬನ್ನು ಒಳಗೊಳ್ಳದೇ, ಇದ್ದು, ಫ್ರೀಜಿಂಗ್ ಸಮಯದಲ್ಲಿ ನೀರನ್ನು ಹಿಡಿದಿಟ್ಟುಕೊಂಡು, ಸೋಸ್ ( sauce) ರೂಪದಲ್ಲಿ ಹೊರಹೊಮ್ಮುತ್ತವೆ. 1930 ರ ಹೊತ್ತಿನಲ್ಲಿ ಮೆಚೆ ಮೌರಿಸ್‌ ಎಂಬಾತ, ಜೋಳದ ಹಿಟ್ಟು ಮತ್ತು ಅರಾರೋಟಿನ ಹಿಟ್ಟನ್ನು ಮಿಶ್ರಮಾಡಿ (ಎಣ್ಣೆ-ಮೊಟ್ಟೆಯ ಸಾರ ಭಾಗ-ನಿಂಬೆರಸ-ಉಪ್ಪು ಸೇರಿಸಿ ತಯಾರಿಸುವ ತಿನಿಸು ಅತ್ಯಂತ ಅಗ್ಗವೆಂದು ಪ್ರಚಾರ ಪಡೆಯಿತು. ಅದರ ತಯಾರಿಕೆಗೆ ಮೊಟ್ಟೆ ಮತ್ತು ಎಣ್ಣೆಗಿಂತ ಕಡಿಮೆ ಬೆಲೆಯ ವಸ್ತುಗಳನ್ನು ಬಳಸಲು ಆರಂಭವಾಯಿತು.

ಆದರೆ ನೈಜವಾಗಿ ತಯಾರಿಸಿದ ತಾಜಾ ತಿನಿಸಿನಂತೆಯೇ ಕ್ರೀಮಿನಅನುಭವವನ್ನು ಅದು ನೀಡಿತು. 1950 ರ ಹೊತ್ತಿಗೆ, ಈ ರಿತಿಯರೂಪಾಂತರ ಮಾಡಿದ ಪಿಷ್ಟಗಳು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದವು. ಒಮ್ಮೆ ಹೀಗೆ ಮಾಡಿದರೆ, ಮತ್ತಿನ ಕೆಲಸ ಅತ್ಯಂತ ಸುಲಭ! Starch ನ್ನು acidಹಾಕಿ ತೆಳ್ಳಗೆ ಮಾಡಿದರೆ ಬಟ್ಟೆಗಳನ್ನು ತೊಳೆಯುವಲ್ಲಿ ಬಳಕೆಯಾಗುತ್ತದೆ. Propylene oxide ಎಂಬುದರೊಂದಿಗೆ ಮಿಶ್ರಮಾಡಿದರೆಜಾರುವಅಥವಾಜಿಗುಟು ಗುಣವುಳ್ಳ ಸಲಾಡ್‌ತಯಾರಾಗುತ್ತದೆ. Starch ನ್ನು ನೊಂದಿಗೆ ಸೇರಿಸಿದರೆ Pie ತಿನಿಸುಗಳನ್ನು ತಯಾರಿಸಬಹುದು. Maltodextrins ಎಂಬುದರ ಬಳಕೆಯಿಂದ ತಿನಿಸುಗಳಿಗೆ ನುಣ್ಣನೆಯ creaminess milkshake ಎಂದು ಹೆಸರಿಸಬಹುದು! ಹಾಲು ಮತ್ತು ಹಾಲಿನ ಉತ್ಪನ್ನಗಳನ್ನುಬಳಸದೇ ಇಷ್ಟೆಲ್ಲ ಕಿತಾಪತಿಗಳನ್ನು ಮಾಡಬಹುದು! ವೈಜ್ಞಾನಿಕವಾಗಿ ಜನರನ್ನು ವಂಚಿಸಬಹುದು! ಐಸ್‌ಕ್ರೀಮ್‌ನಲ್ಲಿ ಬಳಕೆಯಾಗುವ guar, gym, locust, bean gum, alginate, carragreen, xanthan, gum ಇತ್ಯಾದಿಗಳನ್ನು ಕೂಡಾ ನೋಡಬಹುದು. ಕೊನೆಯದಾದ xanthan gum ಬ್ಯಾಕ್ಟಿರಿಯಾ ಸೂಕ್ಷಾಂಣು ಹೊರಸೂಸಿದ ದ್ರವ. ಬ್ಯಾಕ್ಟಿರಿಯಾಗಳು ಅಂಟಿಕೊಳ್ಳುವುದಕ್ಕೆ ಅನುಕೂಲ ಆಗುವ ಹಾಗೆ ಸೂಸುವ ಅಂಟಾದ ದ್ರವ. ಇವುಗಳನ್ನು ಕಡಿಮೆ ವೆಚ್ಚದಲ್ಲಿ, ಆಹಾರವು ದೀರ್ಘಕಾಲ ಬಾಳಿಕೆ ಬರಲು ಬಳಸಲಾಗುತ್ತವೆ.

1970 ರಲ್ಲಿ ಕಡಿಮೆ ಕೊಬ್ಬು ಇರುವ ಉತ್ಪನ್ನಗಳ ಬಗ್ಗೆ ಮಾರ್ಗದರ್ಶನಗಳು ಬಂದು, ಜನರೆಲ್ಲ ಅವುಗಳನ್ನು ಸೇವಿಸುವಂತೆ ಪ್ರೋತ್ಸಾಹ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಇಂದಿಗೂ ಕೂಡ, ಕೊಬ್ಬಿನ ಸ್ಥಾನವನ್ನು ಪಿಷ್ಟಪದಾರ್ಥಗಳು ಆಕ್ರಮಿಸಿವೆ. ಕೊಬ್ಬು ಎನ್ನುವುದು ಸಮಸ್ಯೆಯ ವಿಷಯವೆಂದು ಜನರು ಬಗೆದಿರುವುದರಿಂದಾಗಿ, ಅದರ ಆಧಾರದ ಮೇಲೆ ದೊಡ್ಡ ವ್ಯಾಪಾರ ನಡೆಯುತ್ತಿದೆ! ಸರಿಯಾಗಿ ಬಳಕೆ ಮಾಡಿದರೆ ಹೆಸರಿಸಿದಂತಹ ಗಮ್‌ಗಳು, ಹೆಚ್ಚು ನುಣುಪು ಮತ್ತು ಸ್ನಿಗ್ಧತೆಯನ್ನು ನೀಡುತ್ತದೆ. ಏಕೆಂದರೆ ಬಾಯಿಗೆ ಹಾಕಿದ ತಕ್ಷಣ ಅದು ಎಣ್ಣೆಯ (oily)ಅನುಭವ ನೀಡುತ್ತದೆ. ಪಿಷ್ಟ ಮತ್ತು ಗಮ್- ಎರಡುಕೂಡಾ, ಕೊಬ್ಬು ಇಲ್ಲದ ಕಾರಣ ಆರೋಗ್ಯ ಕಾಪಾಡುವುದೆಂಬ ಭ್ರಮೆಯನ್ನು ಬಳಕೆದಾರನಲ್ಲಿ ಹುಟ್ಟಿಸುವುದರ ಜೊತೆಗೆ, ತಯಾರಕರಿಗೆ ಉತ್ಪಾದನಾ ವೆಚ್ಚವನ್ನುಕೂಡಾ ಕಡಿಮೆಮಾಡುವುದು. ಈ ತರದ ಉತ್ಪನ್ನಗಳು, ಕೊಬ್ಬು ಕಡಿಮೆ ಇದೆಯೆಂದು ಹೇಳುತ್ತಲೇ, ತೂಕ ಹೆಚ್ಚಿಸುವುದರ ಜೊತೆಗೆ, ಆಹಾರದಿಂದ ಉಂಟಾಗುವ ಇತರ ಕಾಯಿಲೆಗಳನ್ನು ಹೆಚ್ಚಿಸುತ್ತವೆ. ನಿಜ ಹೇಳಬೇಕೆಂದರೆ, ಇವುಗಳ ಬಳಕೆ ಆದ ನಂತರ, ಬೊಜ್ಜಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಪರಿಮಳ (flavour) ಯುಕ್ತ ಆಹಾರಗಳು ಬಾಯಿಗೆ ಹಾಕಿದಾಗ ಕೊಬ್ಬಿನಲ್ಲಿ ಕರಗುವಂತದ್ದು ಆಗಿರುತ್ತವೆ. ಬೆಣ್ಣೆಯ ಬ್ರೆಡ್ಡನ್ನು, ಎಣ್ಣೆಯು ಸಲಾಡ್‌ನ್ನು ರುಚಿಕರವಾಗಿಸುತ್ತದೆ. ಇದರ ಜೊತೆಗೆ ಗಟ್ಟಿಯಾಗಿರುವ ಕೊಬ್ಬು ಆಹಾರಕ್ಕೆಒಂದು ವಿನ್ಯಾಸವನ್ನು ನೀಡುತ್ತದೆ. ಬೆಣ್ಣೆ ಇದಕ್ಕೆ ಉತ್ತಮ ಉದಾಹರಣೆ. ಅಷ್ಟೇ ಅಲ್ಲ, ಬ್ಯಾಕ್ಟಿರಿಯಾಗಳು ಹೊಗುವುದಕ್ಕೆ ಅಸಾಧ್ಯ ಆಗಿರುವುದರಿಂದ ಬೆಣ್ಣೆಗೆ ಫ್ರೀಜರ್‌ನ ಅಗತ್ಯವಿಲ್ಲ.

ಅದರಲ್ಲಿ ಕೊಬ್ಬಿನಲ್ಲಿ ಕರಗುವ ಎಲ್ಲಾ ವಿಟಾಮಿನ್ ಹಾಗೂ ಅಗತ್ಯವಿರುವ ಮೇದೋ ಅಮ್ಲಗಳು ಇರುತ್ತವೆ. ಹಿಂದಿನಿಂದಲೂ, ಹಾಲನ್ನು ಹಾಳಾಗದಂತೆ ಇಡುವ ವಿಧಾನ ಮಜ್ಜಿಗೆಯ ತಯಾರಿ ಆಗಿತ್ತು. ಬೆಣ್ಣೆ ಕೂಡಾ ಅಷ್ಟೇ. ಬಹಳ ಸಮಯ ಹಾಳಾಗದಂತೆ ಇಡಬಹುದು. ಆದರೆ ಬೆಣ್ಣೆ ವೆಚ್ಚದ ವಿಷಯ. ಅದೂಅಲ್ಲದೆ, ಹಾಲಿಗಾಗಿ ಪ್ರಾಣಿಗಳನ್ನು ಸಾಕಿ, ಹಾಲು ಕರೆಯುವ ಕೆಲಸವೂ ಇದೆ. ಸಸ್ಯಜನ್ಯ ಕೊಬ್ಬು ಕಡಿಮೆ ವೆಚ್ಚದ್ದು, ಆದರೆ ದ್ರವರೂಪದ್ದು. ಆಹಾರಕ್ಕೆ ವಿನ್ಯಾಸಕೊಡುವಲ್ಲಿ ಅದರ ಪಾತ್ರ ಕಡಿಮೆ. ಇದಕ್ಕಾಗಿ
1864ರಲ್ಲಿ, ಬೆಣ್ಣೆಯ ಬದಲಿಗೆ, ಕೃತಕ-ಕಡಿಮೆ ವೆಚ್ಚದ ವಸ್ತುವಿನ ಅನ್ವೇಷಣೆ ಆರಂಭವಾಯಿತು . ಅದೇ ವರ್ಷ, ನೆಪೋಲಿಯನ್ನನ ಅಳಿಯ, ಬೆಣ್ಣೆಯೆಂಬ ಈ ಕೊಬ್ಬಿನ ರಸಾಯನಶಾಸ್ತ್ರದರಹಸ್ಯ ಬಗೆದವರಿಗೆ ಬಹುಮಾನಘೋಷಣೆ ಮಾಡಿದ. ಫ್ರೆಂಚ್ ರಸಾಯನಶಾಸ್ತ್ರಜ್ಞಾ ಹಾಗೂ ಔಷಧಶಾಸ್ತ್ರಜ್ಞಾ ಹಿಪ್ಪೋಲೈಟ್ ಮೆಜೆಮೌರಿಸ್‌ ಎಂಬಾತ ಆ ಪಾರಿತೋಷಕವನ್ನು ಪಡೆದ. ಬೇಕರಿತಂತ್ರಜ್ಞಾನದ ಸಾಧನೆಗೆಆತ ಈಗಾಗಲೇ ಗೌರವಪ್ರಶಸ್ತಿ ಪಡೆದಿದ್ದ. ಬೆಣ್ಣೆಗೆ ಬದಲಿ ವಸ್ತುವಿನ ಸಂಶೋಧನೆ ಹಾಗೂ ವಿವರಣೆಗಳು ಆತ ಮಾಡಿದ್ದು, ಬಹುಶಃ ಅದು ಮೊದಲ Ultra-process (ಅತಿ ಸಂಸ್ಕರಣೆ).

ಮೆಚೆ ಮೌರಿಸ್‌ ಅತಿಕಡಿಮೆ ವೆಚ್ಚದ, ದನಗಳ ಕಿಡ್ನಿಗಳ ಸುತ್ತ ಸಂಗ್ರಹವಾದ ಕೊಬ್ಬನ್ನು ಸಂಗ್ರಹಿಸಿ ಅದನ್ನು ನೀರಿನೊಂದಿಗೆ ಬೆರೆಸಿ ಬಿಸಿಮಾಡಿದ. ಕುರಿಗಳ ಜಠರದಿಂದ ತೆಗೆದ ಕೆಲವು ಕಿಣ್ವಗಳೊಂದಿಗೆ ಅದನ್ನು ಮಿಶ್ರಮಾಡಿದ. ಕೊಬ್ಬನ್ನು ಮುದ್ದೆಯಾಗಿಡುವ ಕೋಶಗಳನ್ನು ಪ್ರತ್ಯೇಕಿಸಲು ಅದು ಸಹಕಾರಿ. ಆಮೇಲೆ ಅದನ್ನು ಸೋಸಿ, ಆ್ಯಸಿಡ್ ಹಾಕಿ ಬೀಚ್ ಮಾಡಿದ. ನಂತರ ನೀರಿನಿಂದ ತೊಳೆದು ಬಿಸಿಮಾಡಿದ. ಕೊ ಬೈಕಾರ್ಬೊನೇಟ್, ಹಾಲಿನ ಪ್ರೊಟೀನ್, ದನಗ ಕೆಚ್ಚಲಿನ ಅಂಗಾಂಶ ಹಾಗೂ ಅಚಿಯೋಟೆ (ಉರುಕು) ಎಂಬ ಮರದ
ಹಳದಿಬಣ್ಣದ ವಸ್ತು (ಆಹಾರಗಳಿಗೆ ಬಣ್ಣಕೊಡಲು ಬಳಸಲಾಗುತ್ತದೆ) ಎಲ್ಲವನ್ನೂ ಸೇರಿಸಿದ ಒಂದನ್ನು ತಯಾರಿಸಿದ. ಇದು ಬೆಣ್ಣೆಯನ್ನೇ ಹೋಲುವ ಒಂದು ಪರ್ಯಾಯವಾಗಿ ಬಂತು. ಇದಕ್ಕೆಆತ “oleomargarine” ಎಂಬ ಹೆಸರನ್ನು ಕೊಟ್ಟ. ಕೈಗಾರಿಕಾ ರಸಾಯನಶಾಸ್ತ್ರದ ಬೆಳವಣಿಗೆಯಿಂದ ನಂತರ 19ನೆಯ ಶತಮಾನದಲ್ಲಿ, ಸಸ್ಯಜನ್ಯ ತೈಲಗಳಿಂದ ಮಾರ್ಗಾರಿನ್‌ ತಯಾರಿಕೆಯ ಹೊಸ ಬಾಗಿಲು ತೆರೆಯಿತು. 20ನೆಯ ಶತಮಾನದಲ್ಲಿ, ಸಸ್ಯಜನ್ಯ ತೈಲಗಳನ್ನು ಗಟ್ಟಿಯಾಗಿಯೇ ಉಳಿಸುವ “ಹೈಡೋಜನೇಷನ್” ಎಂಬ ಹೊಸ ವಿಧಾನ ಬಂತು. ತೈಲವನ್ನುಜಲಜನಕದ ಉಪಸ್ಥಿತಿಯಲ್ಲಿ, ಅಧಿಕ ಒತ್ತಡದಲ್ಲಿ ಬಿಸಿಮಾಡಿದರೆ, ತೈಲದರಚನೆ ಮತ್ತು ಕರಗುವ ಗುಣಗಳಲ್ಲಿ ಬದಲಾವಣೆಗಳಾಗುತ್ತವೆ. ತೈಲವನ್ನು ಸಂರ್ಪೂಣವಾಗಿ ಹೈಡೋಜನೇಟ್ ಮಾಡಿದರೆ, ಬೇಕಾದಂತೆ ಕರಗುವ ಗುಣವನ್ನು ಪಡೆಯಬಹುದು. ರೂಮಿನ ಉಷ್ಣತೆಯಲ್ಲಿ ಗಟ್ಟಿಯಾಗಿಯೇ ಉಳಿಸಬಹುದು (ಫ್ರೀಜರ್‌ಅಗತ್ಯವಿಲ್ಲದೇ), ಅದರ ಜೊತೆಗೆ ಅದರ “ಟ್ರಾನ್ಸ್” ಕೊಬ್ಬು ಹೃದಯದ ಕಾಯಿಲೆಗಳನ್ನು ತರಬಹುದು!

ನಂತರದ ಹಂತ, ಅಗ್ಗದ ತೈಲವನ್ನು ಪಡೆಯುವಂತದ್ದು. ಹತ್ತಿಯ ಬೀಜಗಳು ಹತ್ತಿಉದ್ಯಮದ ಉಪಯೋಗವಿಲ್ಲದ ಪಳೆಯುಳಿಕೆಗಳು. 1860 ರ ವರೆಗೆ ಅದನ್ನು ತ್ಯಾಜ್ಯವೆಂದೇ ಪರಿಗಣಿಸಲಾಗಿತ್ತು. 1907 ರಲ್ಲಿ ಪ್ರೊಕ್ಟರ್ ಮತ್ತುಗ್ಯಾಂಬಲ್ ಎಂಬ ಕಂಪೆನಿಯು, ಹತ್ತಿಬೀಜದಎಣ್ಣೆಯನ್ನು ಸೇವಿಸಬಹುದಾದಕೊಬ್ಬನ್ನಾಗಿ ಪರಿವರ್ತಿಸುವುದು ಹೇಗೆಂಬ ಯೋಚನೆಗೆ ಒಳಗಾಯಿತು. ಅದಕ್ಕೆ ಎದುರಾದ ಕಷ್ಟವೆಂದರೆ ಗಾಸಿಪಾಲ್ (Gossypol) ಎಂಬ ವಿಷಪದಾರ್ಥ ಇರುವಂಥದ್ದು. ಸಸ್ಯಗಳನ್ನು ಅದು ಕೀಟಗಳಿಂದ ರಕ್ಷಿಸುವುದಾದರೂ, ಪುರುಷರಲ್ಲಿ ವಂಶಾಭಿವೃದ್ಧಿ ಸಾಮರ್ಥ್ಯವನ್ನು ಕುಂಠಿತಗೊಳಿಸುವಂಥದ್ದು. ತೈಲ ಶುದ್ದಿಕರಣದ ವಿಧಾನಗಳು ಬಳಕೆಗೆ ಬಂದವು. RBD ಅಂದರೆ Refinining (d), bleached (ಬಣ್ಣತೆಗೆಯುವುದು) ಮತ್ತು deodourised (ಅದರ ವಾಸನೆಯನ್ನು ನಿವಾರಿಸುವುದು. ಉದಾಹರಣೆಗೆ palm oil (ಪಾಮಾಯಿಲ್) . ಆಕರ್ಷಕ ನಿಸರ್ಗ ಸಹಜ ಬಣ್ಣ ಮತ್ತು ಪರಿಮಳ ಟೋಕೋಟ್ರೈನಾಲ್ ಎಂಬ ಕೋಶಗಳ ಕೊಳೆತೆಗೆಯುವ ಔಷಧೀಯ ಜಾಡಮಾಲಿ ಅಂಶಗ ಒಳಗೊಂಡಿರುವುದು. ಆದರೆಆಹಾರ ಸಂಸ್ಕರಣೆ ಮಾಡುವವರಿಗೆ ಈ ಪರಿಮಳ, ಬಣ್ಣಗಳು ಸಮಸ್ಯೆ!

Ultra process ಮಾಡಿ ಮಾರಾಟಮಾಡುವವರಿಗೆ, ಯಾವುದೇಆಹಾರ ಉತ್ಪನ್ನಗಳಿಗೆ ಬಳಸುವಂತೆ ಬಣ್ಣರಹಿತ, ಪರಿಮಳವಿಲ್ಲದ ರೀತಿಯಲ್ಲಿ ಅದುಇರಬೇಕು! ಆದಕಾರಣ ಹೆಚ್ಚು ಬಿಸಿಮಾಡಿ ಅದನ್ನುರಿಫೈನ್ ಮಾಡಿ, ಗಮ್ ಮತ್ತುಅಂಟನ್ನುತೆಗೆಯಲು ಫಾಸ್ಪಾರಿಕ್ ಆ್ಯಸಿಡ್ ಬಳಸಿ, ಕಾಸ್ಟಿಕ್‌ಸೋಡಾ ಬಳಸಿ ನ್ಯೂಟ್ರಲ್ ಮಾಡಿ, ಬೆಂಟೋನೈಟ್‌ಪ್ಲೇ ಬಳಸಿ ಬೀಚ್ ಮಾಡಿಅಧಿಕಒತ್ತಡ ಆವಿ ಬಳಸಿ ವಾಸನೆರಹಿತ ಮಾಡುವುದು ಇದರ ಪ್ರಕ್ರಿಯೆ, ಸರಕಾಂತಿಎಣ್ಣೆ, ಸೋಯಾಬೀಜದಎಣ್ಣೆ, ರೇಪ್‌ಸೀಡ್ ಆಯಿಲ್‌ ತಯಾರಿಕೆಗೂ ಇದೇ ವಿಧಾನ.

ಪ್ರೊಕ್ಟರ್‌ ಮತ್ತು ಗ್ಯಾಂಬಲ್ ಕಂಪೆನಿ ಸಂಸ್ಕರಣಗೊಳಿಸಿದ, ವಿಷರಹಿತವೆಂದು ಘೋಷಿಸಿದ ಈ ತೈಲಗಳ ಬಗ್ಗೆ ಪ್ರಚಾರ ಭರದಿಂದ ನಡೆಯಿತು. 1920ರ ಹೊತ್ತಿಗೆ, ಇವುಗಳ ಬಳಕೆ ವಿಸ್ತಾರವಾಗಿ, ವಿಶ್ವಮಾರುಕಟ್ಟೆಯ 90% ಭಾಗವನ್ನು ಆಕ್ರಮಿಸಿಕೊಂಡಿತು. ಎಲ್ಲಾ ಕೊಬ್ಬುಗಳನ್ನು (ಪಾಮ್ ಸ್ಟಿಯರೇಟ್, ಕೊಬ್ಬರಿಎಣ್ಣೆ) RBD ವಿಧಾನದಲ್ಲಿ – ಸಂಸ್ಕರಿಸಿ, ಬಿಸ್ಕಿಟ್‌ಗಳಿಂದ ತೊಡಗಿಐಸ್‌ಕ್ರೀಮ್‌ತನಕ ತಂತ್ರಜ್ಞಾನದ ಸಾಧ್ಯತೆಗಳನ್ನು ಉದ್ಯಮವು ಬಳಸಿಕೊಂಡಿತು. ಅತಿ ಸಂಸ್ಕರಿಸಿದ ಆಹಾರದತಯಾರಕರೆಲ್ಲರಿಗೂ ಇದು ಅನುಕೂಲ ಮಾಡಿಕೊಟ್ಟಿತು; ಐಸ್‌ಕ್ರೀ ಮಾತ್ರವಲ್ಲ. ಯಾವುದು ಕಡಿಮೆ ಬೆಲೆಗೆ ಸಿಗುವುದೋ ಅದು ಅವುಗಳ ಆದ್ಯತೆ! ಸಿದ್ದ ಮಾದರಿಯ ಲೇಬಲ್‌ಗಳನ್ನು ಎಲ್ಲಾ ಉತ್ಪನ್ನಗಳ ಪ್ಯಾಕೇಜುಗಳ ಮೇಲೆ ಮುದ್ರಿಸಿ, ಲೇಬಲ್ ತಯಾರಿಕೆಯ ವೆಚ್ಚವನ್ನು ಕೂಡಾ ಇದರ ತಯಾರಿಕಾ ಕಂಪೆನಿಗಳು ಉಳಿಕೆ ಮಾಡಿದವು! ಆದರೆ ನೆನಪಿರಲಿ. ಈ ಮೇಲೆ ಹೇಳಿದ ಯಾವುದೇ ತೈಲ ಅಥವಾ ಕೊಬ್ಬು, ಯಾವುದೇ ಪ್ಯಾಕ್‌ನ ಲೇಬಲ್‌ಗಳಲ್ಲಿ ಕಂಡುಬಂದರೆ ಆ ಆಹಾರವು ultra process (ಅತಿ ಸಂಸ್ಕರಿಸಿದ, ಶುಷ್ಕ, ಸತ್ವಹೀನ). ಆದರೆ ಅವೆಲ್ಲದರ ಬದಲಾಗುತ್ತಿರುವ ಮಾರುಕಟ್ಟೆ ದರಗಳ ನಡುವೆ ಇನ್ನೂ ಕೆಲವು ಅಸಹಜವಾದ ದ್ರವ್ಯಗಳನ್ನು ಕೂಡಾ ಅವುಗಳು ಒಳಗೊಳ್ಳಬಹುದು! ಯುಕ್ರೇನ್‌ನಲ್ಲಿ ಯುದ್ಧಆರಂಭವಾದಾಗ, ಸರಕಾಂತಿಎಣ್ಣೆಯ ಬೆಲೆ ಗಗನಕ್ಕೇರಿತು. ಇಂಡೋನೇಷಿಯವುತನ್ನ ದಿನಬಳಕೆಯ ಆಹಾರ ವಸ್ತುಗಳ ಬೆಲೆಯೇರಿಕೆಯನ್ನು ತಡೆಯಲು, ಪಾಮ್‌ಆಯಿಲ್‌ ರಫ್ತು ಮಾಡುವುದರ ಮೇಲೆ ನಿರ್ಬಂಧ ಹೇರಿತು. ಇಂತಹ ಸನ್ನಿವೇಶಗಳಿಂದಾಗಿ, ಸಸ್ಯಜನ್ಯ ತೈಲಗಳ ಬೆಲೆ, ಬೆಣ್ಣೆಯ ಬೆಲೆಯಷ್ಟೇ ಆಗುವ ದಿನ ಕೂಡಾದೂರವಿಲ್ಲ. “ಈಗಾಗಲೇ ದನಗಳ ಕಿಡ್ನಿಯಿ ಸುತ್ತಲಿನ “ಕ್ರೀಂ” ವಿನ್ಯಾಸ ಹೊಂದಿದ ಹಾಗೂ ಮಾಂಸಗಳ ನಡುವಿನ ಕೊಬ್ಬು ಮಾತ್ರವಲ್ಲದೆ, ಕೋಳಿಗಳ ಶರೀರದ ಕೊಬ್ಬು ಕೂಡಾ ಆಹಾರ ಉತ್ಪನಗಳನ್ನು ಪ್ರವೇಶಿಸಿದೆ.

ಆದುದರಿಂದ ಐಸ್‌ಕ್ರೀಮುಗಳಲ್ಲಿ ಕೋಳಿಗಳ ಕೊಬ್ಬನ್ನು ಸದ್ಯದಲ್ಲೇ ಊಹಿಸಿಕೊಳ್ಳಿ ಎಂದು ಆಹಾರೋದ್ಯಮವನ್ನು ಆಳವಾಗಿ ಬಲ್ಲ, ಪೌಲ್‌ಹಾರ್ಟ್‌ ಎಂಬಾತ ವಿವರಿಸುತ್ತಾನೆ. ಆತ ಶಾಲಾ ನಂತರದ ದಿನಗಳಿಂದಲೇ ಆಹಾರೋದ್ಯಮದ ದೈತ್ಯ ಯುನಿಲೆವೆರ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ, ಅದರಲ್ಲಿ 20 ವರ್ಷ ಉದ್ಯೋಗ ಮಾಡಿದ. ಆರಂಭದಲ್ಲಿ ಜೀವ ರಸಾಯನಿಕ ತಜ್ಞನಾಗಿ, ನಂತರ ಆಹಾರೋತ್ಪಾದನಾ ವ್ಯವಸ್ಥೆಯ ವಿನ್ಯಾಸಕಾರನಾಗಿ, ಆತ ಸುಳ್ಳು ಹೇಳಿರಲಾರ. ಅಲ್ಲವೇ?

Ad Widget
Click to comment

Leave a Reply

ಬಿಗ್ ನ್ಯೂಸ್

Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ

Published

on

Ad Widget

Ad Widget

Ad Widget

Ad Widget

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Ad Widget

Ad Widget alt="Ad Widget"/>

Ad Widget

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.

Ad Widget

Ad Widget <> Ad Widget

ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Ad Widget

Ad Widget

ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.

ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.

Ad Widget
Continue Reading

ಬಿಗ್ ನ್ಯೂಸ್

Girish Mattannavar-ಧರ್ಮಸ್ಥಳ ಪ್ರಕರಣ: ಗಿರೀಶ್ ಮಟ್ಟಣ್ಣನವರ್‌ಗೆ ಹೈಕೋರ್ಟ್‌ನಲ್ಲಿ ಹಿನ್ನಡೆ; ಎಫ್‌ಐಆರ್ ರದ್ದುಪಡಿಸಲು ನಿರಾಕರಣೆ

Published

on

Ad Widget

Ad Widget

Ad Widget

Ad Widget

ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಸಾಕ್ಷ್ಯ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್‌ಐಆರ್ ಹಾಗೂ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಸಾಕ್ಷ್ಯ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್‌ಐಆರ್ ಹಾಗೂ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

Ad Widget

Ad Widget alt="Ad Widget"/>

Ad Widget

ಈ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಎಸ್‌ಐಟಿ ನೀಡಿರುವ ನೋಟಿಸ್ ಹಾಗೂ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

Ad Widget

Ad Widget <> Ad Widget

ಏನಿದು ಪ್ರಕರಣ?
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಸತ್ಯಾಸತ್ಯತೆ ಪರಿಶೀಲಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ, ತನಿಖೆಯ ವೇಳೆ ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿ ಗೊಂದಲಗಳು ಕಂಡುಬಂದ ಹಿನ್ನೆಲೆಯಲ್ಲಿ, ಸುಳ್ಳು ಸಾಕ್ಷ್ಯ ಸೃಷ್ಟಿ ಮತ್ತು ನಕಲಿ ದಾಖಲೆ ತಯಾರಿಕೆಯ ಸಂಘಟಿತ ಪಿತೂರಿಯ ಆರೋಪದಡಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತಾ ಭಟ್ ಸೇರಿದಂತೆ ಆರು ಜನರ ವಿರುದ್ಧ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಟ್ಟಣ್ಣನವರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವೇಳೆ, ಗಿರೀಶ್‌ ಮಟ್ಟಣ್ಣನವರ್ ಪರ ಹಿರಿಯ ವಕೀಲ ಎಸ್. ಬಾಲನ್ ಅವರು, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ನೀಡಬೇಕಿತ್ತು; ಆದರೆ ಸರ್ಕಾರಿ ನೌಕರನಲ್ಲದ ಮುಸುಕುಧಾರಿ ಚಿನ್ನಯ್ಯ ದೂರು ನೀಡಿದ್ದಾರೆ ಎಂದು ವಾದಿಸಿ, ಅಸಂಜ್ಞೆಯ ಅಪರಾಧಕ್ಕೆ ಪೊಲೀಸರು ನೇರ ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರವಾಗಿದ್ದು, ದೂರುದಾರರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗುವಂತೆ ತಿಳಿಸಬೇಕಿತ್ತು ಎಂದರು. ಜೊತೆಗೆ, ವಿಚಾರಣೆಯ ನೆಪದಲ್ಲಿ ಅರ್ಜಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಎಸ್‌ಐಟಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿದರು.

Ad Widget

Ad Widget

ಮತ್ತೊಂದೆಡೆ, ಎಸ್‌ಐಟಿ ಪರವಾಗಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ತನಿಖೆಯ ಹಂತದಲ್ಲಿ ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದಿಲ್ಲ; ಅವು ಆರೋಪಪಟ್ಟಿ ಸಲ್ಲಿಕೆಯಾದ ನಂತರ ಅನ್ವಯವಾಗುತ್ತವೆ. ಹಿಂದೆ ತನಿಖೆ ಸರಿಯಾಗಿ ನಡೆಯಲಿ ಎಂದು ಕೋರಿದ್ದ ಅರ್ಜಿದಾರರು, ಈಗ ತನಿಖೆ ತಮ್ಮ ಕಡೆ ತಿರುಗುತ್ತಿದ್ದಂತೆ ಎಫ್‌ಐಆರ್ ರದ್ದತಿಗೆ ಕೋರುತ್ತಿದ್ದಾರೆ ಎಂದು ವಾದಿಸಿದರು.

ಹೈಕೋರ್ಟ್ ಹೇಳಿದ್ದೇನು?
ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರು, “ಒಂದೆಡೆ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ನೀವೇ ಒತ್ತಾಯಿಸುತ್ತೀರಿ, ಮತ್ತೊಂದೆಡೆ ತನಿಖೆ ನಡೆಯುತ್ತಿರುವಾಗಲೇ ಎಫ್‌ಐಆರ್ ರದ್ದುಗೊಳಿಸುವಂತೆ ಕೋರುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಜೊತೆಗೆ, ಮೂಲ ಎಫ್‌ಐಆರ್ ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದು, ತನಿಖೆಯಲ್ಲಿ ದೊರೆತ ಸಾಕ್ಷ್ಯದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಫ್‌ಐಆರ್ ರದ್ದು ಕೋರುವುದು ಅಕಾಲಿಕ ಎಂದು ಪೀಠ ಸ್ಪಷ್ಟಪಡಿಸಿತು. ಇದೆ ವೇಳೆ, ನ್ಯಾಯಾಧೀಶರ ಕರ್ತವ್ಯವು ತಾವರೆ ಎಲೆಯ ಮೇಲಿನ ನೀರಿನಂತಿರಬೇಕು; ನೈತಿಕ ವಿಚಾರಗಳಿಂದ ಪ್ರಭಾವಿತವಾಗದೆ ಕೇವಲ ಕಾನೂನುಬದ್ಧ ದಾಖಲೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಶ್ರೀಶಾನಂದ ಅಭಿಪ್ರಾಯಪಟ್ಟರು.

Ad Widget
Continue Reading

ಮಂಗಳೂರು

Savanuru Cooperative Society-ʻಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘʼಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘ’; ಸವಣೂರು ಸೀತಾರಾಮ ರೈ ಅವರಿಗೆ ಜಿ.ಟಿ. ದೇವೇಗೌಡರಿಂದ ಪ್ರಶಸ್ತಿ ಪ್ರಧಾನ

Published

on

Ad Widget

Ad Widget

Ad Widget

Ad Widget

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ 73ನೇ ಅಖಿಲ ಕರ್ನಾಟಕ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Ad Widget

Ad Widget

Ad Widget

Ad Widget

ಮಂಗಳೂರು: ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ 73ನೇ ಅಖಿಲ ಕರ್ನಾಟಕ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Ad Widget

Ad Widget alt="Ad Widget"/>

Ad Widget

ಕರ್ನಾಟಕ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಸೀತಾರಾಮ ರೈ ಕೆ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಹಕಾರ ಸಚಿವ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.

ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಸಂಘದ ನಿರ್ದೇಶಕರಾದ ಮಹಾಬಲ ರೈ ಬೋಳಂತೂರು, ಸೀತಾರಾಮ ಶೆಟ್ಟಿ ಮಂಗಳೂರು, ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ, ಸಹಾಯಕ ಮಹಾಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!