Connect with us

Uncategorized

ಶೃಂಗೇರಿ: ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಜನರ ಜತೆ ಸಾಕು ಪ್ರಾಣಿಗಳಿಗೂ ನಿರ್ಬಂಧ: ದಸರಾ ಸಂದರ್ಭದಲ್ಲೇ ಒಂದಿಡೀ ದಿನ ಶಾರದಂಬೆಯ ದರ್ಶನಕ್ಕೆ ಅವಕಾಶ ಇಲ್ಲ

Published

on



Ad Widget

Ad Widget

Ad Widget

Ad Widget

ಶೃಂಗೇರಿ(ಚಿಕ್ಕಮಗಳೂರು): ರಾಷ್ಟ್ರಪತಿ ರಾಮನಾಥ ಕೋವಿಂದ್ ಅಕ್ಟೊಬರ್ 8, ಶುಕ್ರವಾರ ಶೃಂಗೇರಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ರಾಷ್ಟ್ರಪತಿಗಳ ಕಾರ್ಯಕ್ರಮ ಶೃಂಗೇರಿಯಲ್ಲಿ ನಿಗದಿಯಾಗಿದೆ.

Ad Widget

Ad Widget

Ad Widget

Ad Widget

ಶುಕ್ರವಾರ ಶೃಂಗೇರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಲಿರುವುದರಿಂದ ಅಂದು ಶೃಂಗೇರಿಯ ಶಾರದಾಂಬೆ ದೇಗುಲಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದಸರಾ ಸಂದರ್ಭ ಭಕ್ತರಿಂದ ತುಂಬಿರುವ ದೇವಾಲಯಕ್ಕೆ ರಾಷ್ಟ್ರಪತಿಗಳ ಆಗಮನದಿಂದ ಒಂದಿಡೀ ದಿನ ಪ್ರವೇಶ ನಿರ್ಬಂಧ ಮಾಡಿರುವುದರಿಂದ ಭಕ್ತರಿಗೆ ನಿರಾಸೆ ಉಂಟಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರಾಷ್ಟ್ರಪತಿಗಳ ಸುರಕ್ಷತಾ ಕ್ರಮವಾಗಿ ಜನರಿಗೆ ನಿರ್ಬಂಧ ಹೇರುವುದರ ಜತೆಗೆ ಸಾಕು ಪ್ರಾಣಿಗಳಿಗೂ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

Ad Widget

Ad Widget <> Ad Widget

ಈ ನಿರ್ಬಂಧದಿಂದ ಸ್ಥಳೀಯ ಜನರಿಗೆ ಸಂಕಷ್ಟವಾಗಿದ್ದು, ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದನಕರುಗಳು, ಕೋಳಿ, ಹಂದಿ ಸಹಿತ ಎಲ್ಲಾ ಸಾಕುಪ್ರಾಣಿಗಳಿಗೂ ನಾಳೆಯ ದಿನ ನಿರ್ಬಂಧ ಹೇರಲಾಗಿದೆ. ದನಕರುಗಳು, ಕೋಳಿ, ಹಂದಿ ಸಹಿತ ಸಾಕು ಪ್ರಾಣಿಗಳನ್ನು ಮನೆಯಲ್ಲೇ ಕೂಡಿ ಹಾಕುವಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸಾಕುಪ್ರಾಣಿಗಳು ಸಿಕ್ಕರೆ ವಶಕ್ಕೆ ಪಡೆಯುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ.



Ad Widget
Ad Widget
Click to comment

Leave a Reply

Uncategorized

Kural Tulu Touch-ತುಳು ಭಾಷೆಗೆ ಡಿಜಿಟಲ್‌ ಬಲ; ಆಂಡ್ರಾಯ್ಡ್‌ಗೆ ಬಂತು ‘ಕುರಲ್ ತುಳು ಟಚ್’ ಕೀಬೋರ್ಡ್‌

Published

on



Ad Widget

Ad Widget

Ad Widget

Ad Widget

ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್‌ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್‌ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ.6: ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್‌ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್‌ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಾಫ್ಟ್‌ವೇರ್‌ ಇಂಜಿನಿಯರ್‌ಗಳಾದ ಹರ್ಷಿತ್‌ ದೇವಾಡಿಗ ಹಾಗೂ ಚೈತ್ರಾ ಪೂಜಾರಿ ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್‌ ಅನ್ನು ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಲಾಯಿತು.

Ad Widget

Ad Widget <> Ad Widget

ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳಲ್ಲೂ ತುಳು ಲಿಪಿ
‘ಕುರಲ್ ತುಳು ಟಚ್’ ಕೀಬೋರ್ಡ್‌ ಸದ್ಯ ಆಂಡ್ರಾಯ್ಡ್‌ ಬಳಕೆದಾರರಿಗೆ ‘ಬಾರವು ಸಾರವು’ (Baravu Saravu) ಆ್ಯಪ್‌ ಮೂಲಕ ಲಭ್ಯವಿದೆ. ಆ್ಯಪ್‌ನಲ್ಲಿರುವ ‘New Keyboard’ ಆಯ್ಕೆಯನ್ನು ಸಕ್ರಿಯಗೊಳಿಸಿದ ಬಳಿಕ ವಾಟ್ಸಾಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ತುಳು ಲಿಪಿಯಲ್ಲಿ ಸಂದೇಶಗಳನ್ನು ಟೈಪ್‌ ಮಾಡಬಹುದು.



Ad Widget

ತುಳು ಕೀಬೋರ್ಡ್‌ನಿಂದ ಇತರ ಭಾಷೆಗಳ ಕೀಬೋರ್ಡ್‌ಗಳಿಗೆ ಸುಲಭವಾಗಿ ಬದಲಾಯಿಸುವ ಸೌಲಭ್ಯವೂ ಇದ್ದು, ಟೈಪ್‌ ಮಾಡಿದ ಪಠ್ಯವನ್ನು ಡಿಜಿಟಲ್‌ ಚಾಟ್‌ಗಳಲ್ಲಿ ಹಂಚಿಕೊಳ್ಳಬಹುದಾದ ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಆಯ್ಕೆಯೂ ಇದೆ.

Ad Widget

Ad Widget

ಅಕ್ಷರ, ಗುಣಿತಾಕ್ಷರ, ಒತ್ತಕ್ಷರಗಳಿಗೆ ಬೆಂಬಲ
ಸಾಮಾನ್ಯ ಮೊಬೈಲ್‌ ಕೀಬೋರ್ಡ್‌ಗಳ ಮಾದರಿಯಲ್ಲೇ ಸರಳವಾಗಿ ಬಳಸಬಹುದಾದ ವಿನ್ಯಾಸವನ್ನು ‘ಕುರಲ್ ತುಳು ಟಚ್’ ಹೊಂದಿದೆ. ತುಳು ಭಾಷೆಯ ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರಗಳು ಹಾಗೂ ಒತ್ತಕ್ಷರಗಳನ್ನು ಇದು ಬೆಂಬಲಿಸುತ್ತದೆ. ಹೀಗಾಗಿ ತುಳು ಲಿಪಿಯಲ್ಲಿ ಪದಗಳು ಹಾಗೂ ವಿವಿಧ ಅಕ್ಷರ ಸಂಯೋಜನೆಗಳನ್ನು ನಿಖರವಾಗಿ ಟೈಪ್‌ ಮಾಡಲು ಸಾಧ್ಯವಾಗಲಿದೆ.

ತುಳು ಲಿಪಿಯನ್ನು ಕೇವಲ ಶೈಕ್ಷಣಿಕ ಉದ್ದೇಶಗಳು ಅಥವಾ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್‌ ಸಂವಹನದಲ್ಲೂ ಪ್ರಾಯೋಗಿಕವಾಗಿ ಬಳಸುವಂತೆ ಮಾಡುವುದು ತಮ್ಮ ಉದ್ದೇಶ ಎಂದು ಡೆವಲಪರ್‌ಗಳು ತಿಳಿಸಿದ್ದಾರೆ.

ಆ್ಯಪ್‌ ಅಭಿವೃದ್ಧಿಗೆ ‘Flutter’ ಹಾಗೂ ಬ್ಯಾಕೆಂಡ್‌ ಬೆಂಬಲಕ್ಕೆ ‘Firebase’ ತಂತ್ರಜ್ಞಾನ ಬಳಸಲಾಗಿದ್ದು, ಕೀಬೋರ್ಡ್‌ ಅಭಿವೃದ್ಧಿಯನ್ನು ಕೇವಲ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗಿದೆ.

ಮೂರು ವರ್ಷಗಳ ಹಿಂದಿನ ತುಳು ಕಲಿಕಾ ಆ್ಯಪ್‌ ನೆರವು
ಮೂರು ವರ್ಷಗಳ ಹಿಂದೆ ರೂಪಿಸಿದ್ದ ‘ತುಳು ಕಲಿಕೆ ಆ್ಯಪ್‌’ ಈ ಯೋಜನೆಗೆ ಬಲವಾದ ಅಡಿಪಾಯವಾಯಿತು ಎಂದು ಹರ್ಷಿತ್‌ ದೇವಾಡಿಗ ತಿಳಿಸಿದ್ದಾರೆ. ಸಣ್ಣ ಮೊಬೈಲ್‌ ಪರದೆಯಲ್ಲಿ ತುಳು ಅಕ್ಷರಗಳನ್ನು ಸುಲಭವಾಗಿ ಗುರುತಿಸಿ ಟೈಪ್‌ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್‌ ಅನ್ನು ಕೀಬೋರ್ಡ್‌ ಲೇಔಟ್‌ಗೆ ನಿಖರವಾಗಿ ಮ್ಯಾಪ್‌ ಮಾಡುವುದು ಪ್ರಮುಖ ತಾಂತ್ರಿಕ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಜೈ ತುಳುನಾಡ್ ಸಂಸ್ಥಾಪಕ ಸದಸ್ಯ ಶರತ್‌ ಕೊಡವೂರು ಮಾತನಾಡಿ, ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ (CIIL) ಮಾನ್ಯತೆ ಪಡೆದ ತುಳು ಲಿಪಿಯನ್ನು ಡಿಜಿಟಲ್‌ ಜಗತ್ತಿಗೆ ತರುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಬಳಕೆದಾರರಿಗೆ ಗೊಂದಲವಾಗದಂತೆ ಅಕ್ಷರಗಳ ಸರಿಯಾದ ಮ್ಯಾಪಿಂಗ್‌ ಅತ್ಯಂತ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

‘ಬಾರವು ಸಾರವು’ನಲ್ಲಿ ತುಳು ಕಲಿಕೆಗೆ ಹಲವು ಸೌಲಭ್ಯ
‘ಬಾರವು ಸಾರವು’ ಆ್ಯಪ್‌ ಕೇವಲ ಕೀಬೋರ್ಡ್‌ ಒದಗಿಸುವುದಕ್ಕೆ ಸೀಮಿತವಾಗಿಲ್ಲ. ತುಳು ಕಲಿಯಲು ಆಸಕ್ತಿ ಹೊಂದಿರುವವರಿಗೆ ಸಮಗ್ರ ಕಲಿಕಾ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.

ಆ್ಯಪ್‌ನಲ್ಲಿ ತುಳು ನಿಘಂಟು, ಮೂಲಭೂತ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ತುಳು ಸಂಸ್ಕೃತಿಯನ್ನು ಪರಿಚಯಿಸುವ ಪಾರಂಪರಿಕ ಛಾಯಾಚಿತ್ರಗಳು ಲಭ್ಯವಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸುವ ಅವಕಾಶವೂ ಇದ್ದು, ಪರಿಶೀಲನೆಯ ಬಳಿಕ ಅವುಗಳನ್ನು ಸೇರಿಸಲಾಗುತ್ತದೆ.

ತುಳು ಲಿಪಿ ಕಲಿಕಾ ವಿಷಯಗಳು ಹಾಗೂ ವೀಡಿಯೊಗಳನ್ನು ಒದಗಿಸಿರುವ ಬನಶ್ರೀ ಅವಿನಾಶ್‌, ಪಾರಂಪರಿಕ ಲಿಪಿಯನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಆಸಕ್ತಿ ಹೊಂದಿರುವವರಿಗೆ ಈ ವೇದಿಕೆ ಪ್ರಾಯೋಗಿಕ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

ಯೂನಿಕೋಡ್‌ ಮಾನ್ಯತೆಯ ಬಳಿಕ ಮತ್ತೊಂದು ಮಹತ್ವದ ಹೆಜ್ಜೆ
ತುಳು-ತಿಗಳಾರಿ ಲಿಪಿಗೆ ಯೂನಿಕೋಡ್‌ ಮಾನ್ಯತೆ ದೊರೆತಿರುವುದು ಈ ತಾಂತ್ರಿಕ ಬೆಳವಣಿಗೆಗೆ ಪ್ರಮುಖ ಪ್ರೇರಣೆಯಾಗಿದೆ. 2024ರಲ್ಲಿ ಯೂನಿಕೋಡ್‌ ಕಾನ್ಸೋರ್ಟಿಯಂನ ‘ಯೂನಿಕೋಡ್‌ 16’ ಆವೃತ್ತಿಯಲ್ಲಿ 80 ತುಳು ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಇದರಿಂದ ಡಿಜಿಟಲ್‌ ವೇದಿಕೆಗಳಲ್ಲಿ ತುಳು ಲಿಪಿಗೆ ಬೆಂಬಲ ಕಲ್ಪಿಸಲು ಹಾಗೂ ಫಾಂಟ್‌ ಮತ್ತು ಕೀಬೋರ್ಡ್‌ ಅಭಿವೃದ್ಧಿಪಡಿಸಲು ತಾಂತ್ರಿಕ ಅಡಿಪಾಯ ಸೃಷ್ಟಿಯಾಯಿತು.

ತುಳು ವಿದ್ವಾಂಸರು ಹಾಗೂ ತುಳು ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಈ ತಾಂತ್ರಿಕ ಪ್ರಗತಿ ಸಾಧ್ಯವಾಗಿದೆ. ಇದೀಗ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿರುವ ಯುವ ಪೀಳಿಗೆಗೆ ಕನ್ನಡ ಅಥವಾ ಇಂಗ್ಲಿಷ್‌ ಲಿಪಿಯ ಬದಲು ತುಳು ಭಾಷೆಯನ್ನು ಅದರ ಮೂಲ ಲಿಪಿಯಲ್ಲೇ ಡಿಜಿಟಲ್‌ ಸಂವಹನದಲ್ಲಿ ಬಳಸಲು ಹೊಸ ಅವಕಾಶ ದೊರೆತಂತಾಗಿದೆ.

ಸದ್ಯ ‘ಕುರಲ್ ತುಳು ಟಚ್’ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ iOS ಬಳಕೆದಾರರಿಗೂ ಕೀಬೋರ್ಡ್‌ ಬಿಡುಗಡೆ ಮಾಡಲು ಡೆವಲಪರ್‌ಗಳು ಯೋಜಿಸಿದ್ದಾರೆ.

Ad Widget
Continue Reading

Uncategorized

Rahul Gandhi ;8 ಗಂಟೆಗಳ ಧರಣಿ ಬಳಿಕ ಪೊಲೀಸ್ ಆ್ಯಕ್ಷನ್: ರಾಹುಲ್–ಪ್ರಿಯಾಂಕಾ ಸೇರಿ 50 ಸಂಸದರು ವಶ

Published

on



Ad Widget

Ad Widget

Ad Widget

Ad Widget

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಕೈಗೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ಆಕಾಶವಾಣಿ ಭವನದ ಆವರಣದಲ್ಲಿ ಎಂಟು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಸುಮಾರು 250 ಮಂದಿಯನ್ನು ದೆಹಲಿ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ವಶಕ್ಕೆ ಪಡೆದವರಲ್ಲಿ ಸುಮಾರು 50 ಸಂಸದರೂ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರನ್ನು ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ನ್ಯೂ ಪೊಲೀಸ್ ಲೈನ್ಸ್‌ಗೆ ಕರೆದೊಯ್ಯಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಆಕಾಶವಾಣಿ ಭವನದ ಆವರಣವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ ಪೊಲೀಸರು, ರಾಹುಲ್ ಗಾಂಧಿ ಅವರೊಂದಿಗೆ ಕೆ.ಸಿ. ವೇಣುಗೋಪಾಲ್, ಪವನ್ ಖೇರಾ, ಕೆ. ಸುರೇಶ್, ಅಮರಿಂದರ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ಮತ್ತು ಮುಖಂಡರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದರು.

Ad Widget

Ad Widget <> Ad Widget

ಸಂಸತ್ ಭವನದ ರಸ್ತೆಯಲ್ಲಿರುವ ಆಕಾಶವಾಣಿ ಭವನದಿಂದ ಕೇವಲ 300 ಮೀಟರ್ ದೂರದಲ್ಲಿರುವ ಚುನಾವಣಾ ಆಯೋಗದ ಕಚೇರಿಯತ್ತ ವಿರೋಧ ಪಕ್ಷಗಳ ಸಂಸದರು ನಡೆಸುತ್ತಿದ್ದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದರು.



Ad Widget

ಇದರಿಂದಾಗಿ ರಾಹುಲ್ ಗಾಂಧಿ ಮತ್ತು ಇತರ ಮುಖಂಡರು ಆಕಾಶವಾಣಿ ಭವನದ ಆವರಣ ಪ್ರವೇಶಿಸಿ ಅಲ್ಲಿಯೇ ಧರಣಿ ಕುಳಿತಿದ್ದರು.

Ad Widget

Ad Widget

ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಎಸ್‌ಐಆರ್‌ನಲ್ಲಿ ಅಕ್ರಮಗಳು ನಡೆದಿವೆ ಎಂಬ ಮಾಧ್ಯಮ ವರದಿಗಳ ಆಧಾರದಲ್ಲಿ, ‘ವೋಟ್ ಚೋರಿ’ ಆರೋಪಿಸಿ ವಿರೋಧ ಪಕ್ಷಗಳ ಸಂಸದರು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದ ಧರಣಿಯ ಬಳಿಕ, ಪೊಲೀಸರು ಸ್ಥಳ ತೆರವುಗೊಳಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

Ad Widget
Continue Reading

Uncategorized

Puttur Piligobbu Season-4 : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮನ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು-2026 ಸೀಸನ್-4’ ಕಾರ್ಯಕ್ರಮಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿಜೆಪಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೀತಮ್ ಜೆ. ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ಹುಲಿವೇಷ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಸಮುದಾಯದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕಲೆಯ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೀಸನ್-4 ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹುಲಿವೇಷ ತಂಡಗಳು ಭಾಗವಹಿಸಲಿದ್ದು, ವಿಶೇಷ ಆಕರ್ಷಣೆಯಾಗಿ ಫುಡ್ ಫೆಸ್ಟ್ ಕೂಡ ನಡೆಯಲಿದೆ.

Ad Widget

Ad Widget <> Ad Widget

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.



Ad Widget

ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಶ್ರೀ ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪಿಲಿಗೊಬ್ಬು ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading