ಕ್ರೈಂ
Prajwal Revanna Sex Scandal: ತಕ್ಷಣ ತನಿಖೆಗೆ ಹಾಜರಾಗಿ : ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ಮನೆಗೆ ನೋಟಿಸ್ ಅಂಟಿಸಿದ SIT
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಾಸಲೀಲೆ ಪ್ರಕರಣದ ತನಿಖೆ ಕಳೆದೆರಡು ದಿನಗಳಿಂದ ಎಸ್‍ಐಟಿ ಹೆಗಲೇರಿದೆ. ತನಿಖೆಯ ಮೂರನೇಯ ದಿನವಾದ ಇಂದು ಇಳಿದಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಮಾಜಿ ಸಚಿವ ಎಚ್.ಡಿ ರೇವಣ್ಣ ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದು, ಎಚ್‌ಡಿ ರೇವಣ್ಣ ಅವರು ಉತ್ತರ ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಹೆಣ್ಣು ಮುಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಲೈಂಗಿಕ ಆರೋಪ ಎದುರಿಸುತ್ತಿದ್ದಾರೆ. ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT)ಕ್ಕೆ ಪ್ರಕರಣದ ತನಿಖೆ ಹಸ್ತಾಂತರಿಸಿತ್ತು.
ಪ್ರಕರಣ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು ಐದು ಮಂದಿ ಸಂತ್ರಸ್ತರನ್ನು ಸೋಮವಾರ ವಿಚಾರಣೆ ಮಾಡಿದ್ದಾರೆ. ಎಸ್ ಐ ಟಿ ಒಟ್ಟು 3 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದೆ.
ನೋಟಿಸ್ ನಲ್ಲಿ ಏನಿದೆ ?
ಸ್ಥಳೀಯ
Kalaburagi-ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಹತ್ಯೆ; ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಪತಿ ಬಂಧನ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ಹಡಪದ್ (30) ಎಂದು ಗುರುತಿಸಲಾಗಿದೆ.
ಆಕೆಯ ಪತಿ ಸೂರ್ಯಕಾಂತ್ ಹಡಪದ್ ಕೊಲೆ ಆರೋಪಿಯಾಗಿದ್ದು, ವಕೀಲ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಕ್ಕಳಾಗದಿರುವ ವಿಚಾರ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಸಂಬಂಧಿಸಿ ಸೂರ್ಯಕಾಂತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಬಳಿಕ ಸೂರ್ಯಕಾಂತ್ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಂತರ ರಾಜ್ಯ
Murder-ಆಸ್ತಿಗಾಗಿ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂನ ಚೆರುಮೂಡು ಮೂಲದ ರಾಜು ಕೊಲೆಯಾದ ವ್ಯಕ್ತಿ.
ಕೊಲ್ಲಂ: ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಂನ ಚೆರುಮೂಡು ಮೂಲದ ರಾಜು (53) ಅವರು ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ರಾಜು ಹಾಗೂ ಅವರ ಪತ್ನಿ ಲೇಖಾ ಮೇರಿ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆಸ್ತಿ ಮೂಲತಃ ರಾಜು ಕುಟುಂಬಕ್ಕೆ ಸೇರಿದ್ದಾಗಿದ್ದು, ಬಳಿಕ ರಾಜು ಅವರ ಹೆಸರಿಗೆ ವರ್ಗಾವಣೆಯಾಗಿತ್ತು. ಆದರೆ ಸಂಪೂರ್ಣ ಆಸ್ತಿಯ ಮಾಲೀಕತ್ವ ತನಗೇ ಬೇಕೆಂದು ಲೇಖಾ ಪಟ್ಟು ಹಿಡಿದಿದ್ದರಿಂದ ದಂಪತಿ ನಡುವೆ ನಿರಂತರವಾಗಿ ಮನಸ್ತಾಪ ಉಂಟಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೆಲಕಾಲ ಬೇರೆ ಬೇರೆಯಾಗಿದ್ದ ದಂಪತಿ, ಕಳೆದ ಒಂದು ವರ್ಷದಿಂದ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದರು.
ಅ.2ರಂದು ಬೆಳಗ್ಗೆ ಸುಮಾರು 5.30ಕ್ಕೆ ರಾಜು ಮನೆಯಲ್ಲಿ ದಿಢೀರ್ ಕುಸಿದುಬಿದ್ದಿದ್ದಾರೆ ಎಂದು ಹೇಳಲಾಗಿತ್ತು. ತಕ್ಷಣ ಸಹೋದರ ಹಾಗೂ ನೆರೆಹೊರೆಯವರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ರಾಜು ಮೃತಪಟ್ಟಿರುವುದಾಗಿ ಘೋಷಿಸಿದರು.
ಆದರೆ ಮರಣೋತ್ತರ ಪರೀಕ್ಷೆ ವೇಳೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ರಾಜು ಸಾಮಾನ್ಯವಾಗಿ ಕುಸಿದುಬಿದ್ದು ಮೃತಪಟ್ಟಿಲ್ಲ ಎಂದು ಶಂಕಿಸಿರುವ ವೈದ್ಯರು, ಅವರ ಕುತ್ತಿಗೆಯ ಭಾಗದಲ್ಲಿ ಅನುಮಾನಾಸ್ಪದ ಗುರುತುಗಳು ಕಂಡುಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ರಾಜು ಅವರ ಪತ್ನಿ ಲೇಖಾ ಮೇರಿಯನ್ನು ವಿಚಾರಣೆ ನಡೆಸಿದಾಗ, ಆಸ್ತಿ ವಿಚಾರವಾಗಿ ಅ.2ರಂದು ಮತ್ತೆ ಜಗಳ ನಡೆದಿತ್ತು ಎಂದು ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಜಗಳದ ವೇಳೆ ಕೋಪಗೊಂಡು ಬೆಲ್ಟ್‌ನಿಂದ ಪತಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಮೂಲಗಳು ಹೇಳಿವೆ.
ಬಳಿಕ ರಾಜು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಅವರ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಳು ಎನ್ನಲಾಗಿದೆ.
ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡಿ ಬಳಿಕ ವಾಪಸ್ ಬಂದಿದ್ದ ಲೇಖಾ ಮೇರಿ ಸದ್ಯ ಗೃಹಿಣಿಯಾಗಿದ್ದು, ದಂಪತಿಗೆ ಒಬ್ಬ ಮಗಳಿದ್ದಾಳೆ. ಪ್ರಕರಣದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬ ಬಗ್ಗೆಯೂ ಕುಂದರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕ್ರೈಂ
Honeytrap-ಹಳೆಯ ದ್ವೇಷಕ್ಕೆ ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಅಸ್ತ್ರ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರ ಬಂಧನ
ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಬೆಳಗಾವಿ: ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.
ಹಣಕಾಸಿನ ವಿಚಾರದ ದ್ವೇಷವೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ನಡೆದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶ ಅವರು ಶಶಿ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಹೆಸರಿನಲ್ಲಿ ನಕಲಿ ಖಾತೆ
ಕೊಲೆಗೆ ಆರೋಪಿಗಳು ಇನ್‌ಸ್ಟಾಗ್ರಾಂ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅದರ ಮೂಲಕ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಇದೇ ಪರಿಚಯವನ್ನು ಬಳಸಿಕೊಂಡು ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
-
ಬಿಗ್ ನ್ಯೂಸ್23 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್23 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ23 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ22 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ22 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಪರಾಧ4 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು
-
ಅಂತರ ರಾಜ್ಯ23 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಮಂಗಳೂರು21 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















