Connect with us

ದಕ್ಷಿಣ ಕನ್ನಡ

Belthangady Triple murder: ನಿಧಿಯ ಆಮೀಷವೊಡ್ಡಿ ಲಕ್ಷಾಂತರ ರೂ ದೋಚಿ ತ್ರಿಬಲ್‌ ಮರ್ಡರ್‌ ! ಬೆಳ್ತಂಗಡಿಯಿಂದ ಚಿನ್ನ ತರಲೆಂದು ಹೋದವರು ತುಮಕೂರಿನಲ್ಲಿ ಸಜೀವ ದಹನವಾದರು..!

Published

on



Ad Widget

Ad Widget

Ad Widget

Ad Widget

ತೋಟದಲ್ಲಿ ಕೃಷಿ ಮಾಡುವಾಗ ನಿಧಿ ಸಿಕ್ಕಿದೆ,  ಕಡಿಮೆ ಬೆಲೆಗೆ ಪುರಾತನ ( Antiq)  ಚಿನ್ನಾಭರಣ ಕೊಡುತ್ತೇವೆ  ಎಂದು ಆಮೀಷವೊಡ್ಡಿ  ದಕ್ಷಿಣ ಕನ್ನಡ ಜಿಲ್ಲೆಯ ಮೂವರ ಬಳಿಯಿಂದ ಲಕ್ಷಾಂತರ ಹಣವನ್ನು ದೋಚಿ, ಬಳಿಕ  ಅವರನ್ನು ಕಾರಿನ ಸಮೇತ  ಸಜೀವ ಸುಟ್ಟು ಬರ್ಬರವಾಗಿ ಹತ್ಯೆ ಮಾಡಿದ ಘಟನೆ  ತುಮಕೂರು ಜಿಲ್ಲೆಯ ಕೋರಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.ತ್ರಿಬಲ್‌ ಮರ್ಡರ್‌  ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಪೊಲೀಸ್‌ ಇಲಾಖೆ ಇನ್ನಷ್ಟೆ ಸಾರ್ವಜನಿಕಗೊಳಿಸಬೇಕಿದೆ.

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್ (56) ಹಾಗೂ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ, ಶಾಹುಲ್ ಹಮೀದ್ (45) ಹಾಗೂ ಕಾರ್ಕಳ ತಾಲೂಕಿನ ಶಿರ್ಲಾಲು  ಬಳಿ ನಿವಾಸಿ ಇಮ್ತಿಯಾಜ್ ಸಿದ್ದೀಕ್ (34) ಕೊಲೆಯಾದವರು.  ಇವರ ಮೃತದೇಹ ಸಿಕ್ಕರೂ, ಅದು ಸುಟ್ಟು ಕರಕಲಾಗಿದ್ದೂ ಗುರುತು ಹಿಡಿಯುವ ಸ್ಥಿತಿಯಲ್ಲಿಲ್ಲ. ಹೀಗಾಗಿ  ಮೃತದೇಹವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದು ವರದಿ ಬಂದ ಬಳಿಕವಷ್ಟೆ ಹಸ್ತಾಂತರವಾಗಲಿದೆ. ಇದಕ್ಕೆ ಒಂದು ವಾರದಿಂದ ಹತ್ತು ದಿವಸ ಹಿಡಿಯಬಹುದು ಎಂದು  ಹೇಳಲಾಗುತ್ತಿದೆ

Ad Widget

Ad Widget

Ad Widget alt="Ad Widget"/>

Ad Widget

ಇಸಾಕ್‌ ರಿಯಲ್ ಎಸ್ಟೇಟ್ ಬ್ರೋಕರಿಂಗ್‌, ಸಾಹುಲ್ ಅಮೀದ್ ಆಟೋ ಚಾಲಕರಾಗಿ ಹಾಗೂ ಇಮ್ಮಿಯಾಜ್ ಸಿದ್ದಿಕ್ ಫುಟ್ ವೇರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ  ಸಂಬಂಧಪಟ್ಟಂತೆ ಪ್ರಮುಖ ಆರೋಪಿ ತುಮಕೂರು ಜಿಲ್ಲೆಯ  ಸ್ವಾಮಿ ಸೇರಿ 6 ಜನರನ್ನು ಕೋರಾ ಠಾಣೆ  ವಶಕ್ಕೆ ಪಡೆದಿದ್ದಾರೆ.

Ad Widget

Ad Widget <> Ad Widget

 “ ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆಯಲ್ಲಿ ನಿಧಿ ಸಿಕ್ಕಿದೆ. ಕಡಿಮೆ ಬೆಲೆಗೆ ಎಲ್ಲ ಚಿನ್ನವನ್ನು ಕೊಡುತ್ತೇವೆ”  ಎಂದು ಅಪರಿಚಿತರು ಕರೆ ಮಾಡಿ ಹೇಳುವುದನ್ನು ಬಹುತೇಕ ಮೊಬೈಲ್‌ ಫೋನ್‌ ಬಳಕೆದಾರರು ಕಳೆದ 2-3 ವರ್ಷಗಳಿಂದ  ಕೇಳಿಯೇ ಕೇಳಿರುತ್ತಾರೆ. ಇಂತಹದೊಂದು ಯಾಮಾರಿಸುವ ಕರೆಗೆ ಪಿಗ್ಗಿ ಬಿದ್ದು ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಮೂಲಗಳ ಪ್ರಕಾರ 2-3 ತಿಂಗಳ ಹಿಂದೆ ಇಸಾಖ್‌ ಅವರಿಗೆ ಇಂತಹದೊಂದು ಕರೆ ಬಂದಿದೆ. ಇದಕ್ಕೆ ಇಸಾಕ್‌ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.



Ad Widget

ದುಷ್ಕರ್ಮಿಗಳ ತಂಡ ಇಸಾಖ್‌ ಅವರಿಗೆ ಇನ್ನಷ್ಟು ನಂಬಿಕೆ ಬರಿಸಲು ಸಣ್ಣ ಮೊತ್ತಕ್ಕೆ  ಒಂದಷ್ಟು ಸ್ಯಾಂಪಲ್‌ ಚಿನ್ನವನ್ನು ನೀಡಿ ಅಸಲಿಯತ್ತು ಪರೀಕ್ಷಿಸುವಂತೆ ತಿಳಿಸಿದ್ದು ಅದು ಪರೀಕ್ಷಿಸಿದಾಗ ಅಸಲಿ ಚಿನ್ನವೇ ಆಗಿತ್ತು. ಇದೆಲ್ಲವನ್ನು ದುಷ್ಕರ್ಮಿಗಳ ತಂಡ ಬೆಳ್ತಂಗಡಿಯಲ್ಲೂ ಅಥಾವ ಬೇರೆ ಯಾವುದೋ ಜಾಗದಲ್ಲಿ   ಮಾಡಿತ್ತು ಎನ್ನಲಾಗುತ್ತಿದೆ. 

Ad Widget

Ad Widget

ಬಳಿಕ ದುಷ್ಕರ್ಮಿಗಳು ನಮ್ಮ ಬಳಿ  ಕೋಟ್ಯಂತರ ರೂ. ಚಿನ್ನದ ಗಟ್ಟಿಗಳಿವೆ. ನಮಗೆ ಅದನ್ನು ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ನೀವು ಬಂದರೆ ನಾವು ಅದನ್ನು ಕೇವಲ 50 ಲಕ್ಷ ರೂ. ಗಳಿಗೆ ನೀಡುತ್ತೇವೆ ಎಂದು ಇಸಾಖ್‌ ಅವರನ್ನು  ನಂಬಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಸಾಖ್‌ ಸಮ್ಮತಿ ಸೂಚಿಸಿರಬಹುದು. ಇಸಾಕ್ ಅವರು 2 ವರ್ಷದ ಹಿಂದೆ  ವಿದೇಶದಿಂದ ಮರಳಿದ್ದು, ಆರ್ಥಿಕವಾಗಿ  ತೊಂದರೆಯಲ್ಲಿ ಇದ್ದರೆಂದು ಹೇಳಲಾಗುತ್ತಿದೆ.  ಅವರು ಗುರುವಾಯನಕೆರೆಯ ಮನೆ ಮಾರಿ ಮದ್ದಡ್ಕದಲ್ಲಿ ಬಾಡಿಗೆ ಮನೆಯಲ್ಲಿ ಸದ್ಯಕ್ಕೆ ನೆಲೆಸಿದ್ದರು.

ಕಡಿಮೆ ಬೆಲೆಗೆ ಚಿನ್ನ ಸಿಕ್ಕರೇ, ಅದನ್ನು ಮಾರಾಟ ಮಾಡಿ ಸುಲಭದಲ್ಲಿ ಹಣ ಗಳಿಸ ಬಹುದೆಂಬ ಇರಾದೆಯಿಂದ ದುಷ್ಕರ್ಮಿಗಳು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾರೆ. ಅವರ ಬಳಿ ಮನೆ ಮಾರಿದ ಹಣ ಹಾಗೂ ಮಗಳ ಚಿನ್ನ ಅಡವಿಟ್ಟ ಹಣ ಒಟ್ಟು ಸೇರಿ ಸಮಾರು 35 ಲಕ್ಷ ಹಣವಿತ್ತು ಎನ್ನಲಾಗಿದೆ. ಮೂಲಗಳ ಪ್ರಕಾರ ಅವರು ಉಳಿದ ಹಣಕ್ಕಾಗಿ ಶಾಹುಲ್‌ ಹಾಗೂ ಇಮ್ತಿಯಾಜ್‌ ಸಿದ್ದಿಕ್‌  ನೆರವು ಪಡೆದಿದ್ದರು. ಆ ಉಳಿದಿಬ್ಬರು ಸೇರಿ ಸ್ನೇಹಿತರ ಬಳಿ ಕೈ ಸಾಲ ಪಡೆದು ಸುಮಾರ 15 ಲಕ್ಷದಷ್ಟು ಒಂದುಗೂಡಿಸಿದ್ದರು ಎನ್ನಲಾಗುತ್ತಿದೆ.

 ಇಷ್ಟು ಹಣವನ್ನು ಒಂದು ಗೂಡಿಸಿದ ಬಳಿಕ, 11 ದಿನಗಳ ಹಿಂದೆ ಸ್ನೇಹಿತ ಮದ್ದಡ್ಕ ರಫೀಕ್‌ ರವರ ಕಾರನ್ನು ಇಸಾಖ್‌  ಕೆಲ ದಿನಗಳಿಗಾಗಿ ಪಡೆದುಕೊಂಡಿದ್ದಾರೆ. ಬಳಿಕ ಮೂವರು ಸುಮಾರು 50 ಲಕ್ಷ ರೂ ನಗದಿನೊಂದಿಗೆ ತುಮಕೂರಿಗೆ ಪ್ರಯಾಣ ಬೆಳೆಸಿದ್ದಾರೆ. ಗುರುವಾರ (ಮಾ. 21) ಸಂಜೆಯವರೆಗೂ ಇಸಾಕ್ ತನ್ನ ಕುಟುಂಬಸ್ಥರ ಜೊತೆ  ಹಾಗೂ ಕಾರು ನೀಡಿದ ರಫೀಕ್‌ ಜತೆ ಸಂಪರ್ಕದಲ್ಲಿದ್ದರು. ಗುರುವಾರ ರಾತ್ರಿಯಿಂದ  ಇಸಾಕ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಏನಾಗಿರಬಹುದು?

  ಬೆಳ್ತಂಗಡಿಯಿಂದ ಹೊರಟ ಅವರು ತುಮಕೂರು ಅಥಾವ ಕೋಲಾರದಲ್ಲಿ  ಸ್ವಾಮಿಯನ್ನು ಕಂಡು ಹಣ ಹಸ್ತಾಂತರಿಸಿ ಚಿನ್ನ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೇ ಇದನ್ನು ಅವರು ಮಾರಾಟಕ್ಕೆ ಪ್ರಯತ್ನಿಸಿದಾಗ ಅದು  ನಕಲಿ ಚಿನ್ನ ಎಂದು ಗೊತ್ತಾಗಿ ಮತ್ತೆ ಅವರು ಸ್ವಾಮಿಯನ್ನು ಸಂಪರ್ಕಿಸಿ ತಮ್ಮ ಹಣ ವಾಪಸ್ಸು ನೀಡುವಂತೆ ಬೇಡಿಕೆ ಇಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಲ್ಲದಿದ್ದರೇ ಪೊಲೀಸರಿಗೆ ದೂರು ನೀಡುವ ಎಚ್ಚರಿಕೆ ನೀಡಿರಬಹುದು. ಹೀಗಾಗಿ ಅವರನ್ನು ಮತ್ತೆ ಕರೆಸಿಕೊಂಡ ದುಷ್ಕರ್ಮಿಗಳ ತಂಡ ಅವರ ಕೈಕಾಲು ಕಟ್ಟಿ ಹಲ್ಲೆ ನಡೆಸಿ ಹತ್ಯೆ ಮಾಡಿರಬಹುದು. ಹೀಗಾಗಿಯೇ ಅವರು ಬೆಳ್ತಂಗಡಿಯಿಂದ ತೆರಳಿ 11 ದಿನವಾದರೂ ವಾಪಸ್ಸು ಬಾರದಿರುವುದು. ಹಣ ಹಾಗೂ ನಕಲಿ ಚಿನ್ನ ಹಸ್ತಾಂತರ ಪ್ರಕ್ರಿಯೆ ಬೆಳ್ತಂಗಡಿಯಿಂದ ಹೋದ ಒಂದೆರಡು ದಿನದಲ್ಲಿ ನಡೆದಿರುವ ಸಾಧ್ಯತೆಯಿದೆ . ಅದಾದ ಬಳಿಕವು 9 ದಿನಗಳ ಕಾಲ ಅಲ್ಲಿಯೇ ಈ ಮೂವರು ಉಳಿದಿರುವುದರ ಹಿಂದೆ ಹಣ ವಾಪಸ್ಸು ಪಡೆಯುವುದೇ ಆಗಿತ್ತು ಎಂದು ಶಂಕಿಸಲಾಗುತ್ತಿದೆ.  

ಮೂವರ ಹತ್ಯೆ ಮಾಡಿದ   ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ  ಶವಗಳನ್ನು ಕಾರಿನೊಳಗಡೆ ಹಾಕಿ ಹುಚ್ಚಂಗಿ ಕೆರೆಯ ಬಳಿ ತಂದು ಪೆಟ್ರೋಲ್‌ ಸುರಿದು ಬೆಂಕಿ ಕೊಟ್ಟಿರಬಹುದೆಂದು ಶಂಕಿಸಲಾಗಿದೆ. ಬಳಿಕ ಕಾರಿನ ಕುರುಹು ಸಿಗಬಾರದೆಂಬ ಕಾರಣಕ್ಕೆ ಸುಟ್ಟ ಕಾರನ್ನು ಕೆರೆಗೆ ಎಸೆದಿರಬಹುದು. ಗುರುತು ಪತ್ತೆ ಹಚ್ಚಲು ಆಗದ ಸ್ಥಿತಿಯಲ್ಲಿ ಕಾರು ಸಮೇತ ಸುಟ್ಟು ಹಾಕುವುದೇ ಆರೋಪಿಗಳ ಉದ್ದೇಶವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಇದೊಂದು ಅಪಘಾತ ಎಂದು ಬಿಂಬಿಸುವ ಯತ್ನ ಹಂತಕರದಾಗಿತ್ತು.

ಆದರೆ ಕುಚ್ಚಂಗಿ ಕೆರೆಯ ಮಧ್ಯದಲ್ಲಿ ಕಾರೊಂದು ಸುಟ್ಟ ಸ್ಥಿತಿಯಲ್ಲಿರುವುದನ್ನು  ನೋಡಿದ ಜೆಸಿಬಿ ಕಾರ್ಮಿಕ ನಾಗರಾಜು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸ್ ಅಧಿಕಾರಿ, ಗುಪ್ತಚರ ವಿಭಾಗದ ಸಿಬಂದಿ ಚೇತನ್ ಕುಮಾರ್ ಅವರ ಜತೆ ಇಲಾಖಾ ವಾಹನದಲ್ಲಿ ತೆರಳಿ ಪರಿಶೀಲಿಸಿದಾಗ ತ್ರಿಬಲ್‌ ಮರ್ಡರ್‌ ಬೆಳಕಿಗೆ ಬಂದಿದೆ. ಕಾರಿನ ಢಿಕ್ಕಿಯಲ್ಲಿ ಇಬ್ಬರ ಮೃತದೇಹ ಹಾಗೂ ಹಿಂಬದಿ ಸೀಟಿನಲ್ಲಿ  ಒಬ್ಬರ ಶವ ಸಂಪೂರ್ಣ ಸುಟ್ಟ ರೀತಿಯಲ್ಲಿ  ಸಿಕ್ಕಿದೆ. ಢಿಕ್ಕಿಯಲ್ಲಿ ಮೃತದೇಹ ಸಿಕ್ಕ ಕಾರಣ ಇದೊಂದು ಕೊಲೆ ಎಂಬ ನಿರ್ಧಾರಕ್ಕೆ ಪೊಲೀಸರು ಸುಲಭದಲ್ಲಿ ಬಂದಿದ್ದಾರೆ  

ಕುಚ್ಚಂಗಿ ಕೆರೆಯಲ್ಲಿ ಸುಟ್ಟ ಕಾರಿನ ನಂಬರ್ ಪ್ಲೇಟ್ ಮಾಹಿತಿಗಾಗಿ ತಡಕಾಡಿದ ಪೊಲೀಸರಿಗೆ ಅದು ಬೆಳ್ತಂಗಡಿಯ ರಫೀಕ್ ಎಂಬುವರ ಕಾರು ಎಂಬುದು ಗೊತ್ತಾಗಿತ್ತು. ತನ್ನನ್ನು ಸಂಪರ್ಕಿಸಿದ ತುಮಕೂರು ಪೊಲೀಸರಿಗೆ ಈ ವೇಳೆ ಇಸಾಕ್ ಗೆ 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ಕಾರು ಮಾಲೀಕ ರಫೀಕ್ ಹೇಳಿದ್ದರು. ಒಂದು ಡೀಲ್ ಇದೆ ಎಂದು ಕಾರು ಪಡೆದು ಹೋಗಿದ್ದಾಗಿ ರಫೀಕ್ ಹೇಳಿದ್ದ.

ಇಸಾಕ್‌ ಅವರ ಮೊಬೈಲ್‌ ಕರೆಗಳು ಹಾಗೂ ಟವರ್‌ ಲೊಕೇಶನ್‌ ಪರಿಶೀಲಿಸಿದ ಪೊಲೀಸರಿಗೆ   ತುಮಕೂರಿನ ಸ್ವಾಮಿ ಇದರ ಹಿಂದಿರುವುದು ಗೊತ್ತಾಗಿದೆ. ಅತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಳಿಸರಿಗೆ ಅವನ ಇನ್ನು ಸಹಚರರು ಸಿಕ್ಕಿ ಬಿದ್ದಿದ್ದಾರೆ.  ಕೋರಾ ಪೊಲೀಸರಿಂದ ತನಿಖೆ ಮುಂದುವರಿದಿದೆ.

Ad Widget
Click to comment

Leave a Reply

ಮಂಗಳೂರು

Mangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್‌ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ

Published

on



Ad Widget

Ad Widget

Ad Widget

Ad Widget

ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅಫ್ಜಿಲಾ ಎಂಬವರು ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರವನ್ನು ಖರೀದಿಸಿದ್ದರು. ಬಳಿಕ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಸರವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟು ಇಳಿದಿದ್ದರು.

Ad Widget

Ad Widget <> Ad Widget

ರಿಕ್ಷಾ ಚಾಲಕ ಬಸವರಾಜ ಅವರಿಗೆ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ನೆಕ್ಲೇಸ್‌ ಇರುವುದನ್ನು ಗಮನಿಸಿದ್ದಾರೆ. ಬಳಿಕ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಬ್ಯಾಗನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸಿದ್ದಾರೆ.



Ad Widget

ಚಿನ್ನದ ಸರವನ್ನು ಮರಳಿ ಪಡೆದ ಅಫ್ಜಿಲಾ ಅವರು ರಿಕ್ಷಾ ಚಾಲಕ ಬಸವರಾಜ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಾಲಕನ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಶಿಕ್ಷಣ

Vivekananda-ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆ ವತಿಯಿಂದ ಕ್ಯಾಂಪಸ್ ಸಂದರ್ಶನ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಕಂಪನಿಯ ಹೆಚ್.ಆರ್. ಅಧಿಕಾರಿ ಸುನಿಲ್ ಹಾಗೂ ನೇಮಕಾತಿ ಅಧಿಕಾರಿ ಸಂತೋಷ್.ವಿ.ಜೋಸ್ ಸಂದರ್ಶನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Ad Widget

Ad Widget <> Ad Widget

ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂತೋಷ್.ವಿ.ಜೋಸ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಿದರು.



Ad Widget

ಈ ಸಂದರ್ಭದಲ್ಲಿ ಸಂಸ್ಥೆಯ ಪ್ಲೇಸ್‌ಮೆಂಟ್ ವಿಭಾಗದ ಅಧಿಕಾರಿ ಉಷಾಕಿರಣ್ ಹಾಗೂ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Continue Reading

ಅಪರಾಧ

Mangalore-ಮಂಗಳೂರು: ನಕಲಿ ಪಾಸ್‌ಪೋರ್ಟ್ ಪ್ರಕರಣ; 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Published

on



Ad Widget

Ad Widget

Ad Widget

Ad Widget

ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ. ಬಂಧಿತನನ್ನು ಕಾಸರಗೋಡು ಜಿಲ್ಲೆಯ ವೇಲಾಯುಧನ್ (54) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಬಂಧಿತನನ್ನು ಕಾಸರಗೋಡು ಜಿಲ್ಲೆಯ ವೇಲಾಯುಧನ್ (54) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

2010ರ ಜೂನ್ 22ರಂದು ನಕಲಿ ಪಾಸ್‌ಪೋರ್ಟ್ ಪಡೆದು ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ವೇಳೆ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದರು.



Ad Widget

ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 419, 420, 468 ಹಾಗೂ 34 ಮತ್ತು ಪಾಸ್‌ಪೋರ್ಟ್ ಕಾಯ್ದೆ-1967ರ ಕಲಂ 12(1)(b), (d), (e) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Ad Widget

Ad Widget

ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೇಷನ್ಸ್ ನ್ಯಾಯಾಲಯವು 2020ರ ಡಿಸೆಂಬರ್ 1ರಂದು ಆರೋಪಿಗೆ ಒಂದು ವರ್ಷ ಆರು ತಿಂಗಳ ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ವೇಲಾಯುಧನ್ ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ರಿವಿಷನ್ ಪಿಟಿಷನ್ ಸಂಖ್ಯೆ 104/2021 ಸಲ್ಲಿಸಿದ್ದ. ಆದರೆ ಹೈಕೋರ್ಟ್ ಆತನ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗದೆ ವೇಲಾಯುಧನ್ ತಲೆಮರೆಸಿಕೊಂಡಿದ್ದ.

ಸುಮಾರು ಆರು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆತನನ್ನು ಅಕ್ಟೋಬರ್ 8ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದೆ. ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading