Connect with us

ದಕ್ಷಿಣ ಕನ್ನಡ

ಮಾ. 23: ರೈ ಎಜುಕೇಶನಲ್ ಟ್ರಸ್ಟ್‌ನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Published

on

Ad Widget

Ad Widget

Ad Widget

Ad Widget

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (Rai charitable Educational Trust) ಹಾಗೂ ಶ್ರೀರಾಮಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟು ಇದರ ಜಂಟಿ ಆಶ್ರಯದಲ್ಲಿ ನಾಳೆ (ಮಾ. 23) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದು ಟ್ರಸ್ಟ್‌ನ ಕಾಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಮಾ. 23 ರಂದು ಬೆಳಿಗ್ಗೆ 11 ಗಂಟೆಗೆ ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಿಯುಸಿ ನಂತರ ವಿದ್ಯಾರ್ಥಿಗಳು ಯಾವ ಕೋರ್ಸು ಕಲಿತರೆ ಏನು ಉದ್ಯೋಗ ಪಡೆದುಕೊಳ್ಳಬಹುದು, ಕೋರ್ಸುಗಳು ಎಲ್ಲೆಲ್ಲಿ ಸಿಗುತ್ತದೆ, ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವೃತ್ತಿಪರ ಕೋರ್ಸುಗಳು ಹೇಗೆ ಪರಿಣಾಮಕಾರಿ ಎಂಬ ವಿಚಾರದ ಬಗ್ಗೆ ಕಾರ್ಯಾಗಾರ ನಡೆಯಲಿದೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಕಾರ್ಯಾಗಾರವನ್ನು ಉದ್ಘಾಟನೆ ಮಾಡಲಿದ್ದಾರೆ.ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ಳಾರೆ ಸಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಿ ವಿ ಸೂರ್ಯಾನಾರಾಯಣರವರು ಕಾರ್ಯಾಗಾರ ನಡೆಸಿಕೊಡಲಿದ್ದು, ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟು ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಕ್ಯಾಡೊಕಾನ್ ವಿದ್ಯಾ ಸಂಸ್ಥೆ ಬೆಂಗಳೂರು ಇದರ ಶ್ರದ್ದಾ ಎಂ ರವರು ಭಾಗವಹಿಸಲಿದ್ದಾರೆ.

Ad Widget

Ad Widget <> Ad Widget

Ad Widget
Click to comment

Leave a Reply

ಕಾರ್ಯಕ್ರಮಗಳು

Medland Cup-2026-ಮೆಡ್‌ಲ್ಯಾಂಡ್ ಆಸ್ಪತ್ರೆಯ ವಾರ್ಷಿಕ ಸಂಭ್ರಮ: ನ.29ರಂದು ‘ಮೆಡ್‌ಲ್ಯಾಂಡ್ ಕಪ್-2026’ ಕ್ರಿಕೆಟ್ ಪಂದ್ಯಾಟ

Published

on

Ad Widget

Ad Widget

Ad Widget

Ad Widget

ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್‌ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್‌ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.

Ad Widget

Ad Widget alt="Ad Widget"/>

Ad Widget

ಪುತ್ತೂರಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಎಂಟು ತಂಡಗಳು ಈ ಕ್ರೀಡಾಕೂಟದಲ್ಲಿ ಸೆಣಸಾಡಲಿವೆ. ಪುತ್ತೂರು ಪೊಲೀಸ್ ಎಲೆವೆನ್, ಫಾರೆಸ್ಟ್ ಎಲೆವೆನ್, ಮೆಡ್ಲ್ಯಾಂಡ್ ಫಾಲ್ಕನ್ಸ್, ಪುತ್ತೂರು ಬಾರ್ ಅಸೋಸಿಯೇಷನ್, ಮೆಸ್ಕಾಂ ಪುತ್ತೂರು ಪರ್ಲ್ಸ್, ಕ್ಯಾಂಪ್ಕೋ ಪುತ್ತೂರು, ಕೆಎಸ್‌ಆರ್‌ಟಿಸಿ ಪುತ್ತೂರು ಹಾಗೂ ಸಿಎಂಸಿ ಎಲೆವೆನ್ ಪುತ್ತೂರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ.

Ad Widget

Ad Widget <> Ad Widget

ಆಸ್ಪತ್ರೆಯ ಒಂದು ವರ್ಷದ ವೈದ್ಯಕೀಯ ಸೇವೆಯ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸುವುದರ ಜತೆಗೆ ಕ್ರೀಡಾಸ್ಫೂರ್ತಿ, ತಂಡದ ಒಗ್ಗಟ್ಟು ಹಾಗೂ ಸ್ನೇಹಭಾವವನ್ನು ಉತ್ತೇಜಿಸುವುದು ಪಂದ್ಯಾಟದ ಆಶಯವಾಗಿದೆ.

ಈ ಕುರಿತು ಮಾಹಿತಿ ನೀಡಿದ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಶಾಲ್ ಅವರು, ಆಸ್ಪತ್ರೆಯ ಪ್ರಥಮ ವರ್ಷದ ಸಂಭ್ರಮವನ್ನು ಕ್ರೀಡಾಕೂಟದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

Ad Widget

Ad Widget

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಝಾಕ್ ಸಾಲ್ಮರ ಹಾಗೂ ಅಖಿಲ್ ಉಪಸ್ಥಿತರಿದ್ದರು.

Ad Widget
Continue Reading

ಬಿಗ್ ನ್ಯೂಸ್

Rain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?

Published

on

Ad Widget

Ad Widget

Ad Widget

Ad Widget

ಕರಾವಳಿಯ ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ನಿನ್ನೆ ಸಂಜೆ ಮೋಡದ ವಾತಾವರಣದಿಂದ ಕೂಡಿದ್ದು ಪುತ್ತೂರು , ಕಡಬ, ಸುಳ್ಯದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ನ.25ರ ರಾತ್ರಿ ಕಡಬ ತಾಲೂಕಿನ ಕಾಣಿಯೂರು , ಪಂಜ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪುತ್ತೂರಿನ ಹಲವು ಕಡೆ ಸಾಧಾರಣ ಮಳೆಯಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು : ಕರಾವಳಿಯ ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ನಿನ್ನೆ ಸಂಜೆ ಮೋಡದ ವಾತಾವರಣದಿಂದ ಕೂಡಿದ್ದು ಪುತ್ತೂರು , ಕಡಬ, ಸುಳ್ಯದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

Ad Widget

Ad Widget alt="Ad Widget"/>

Ad Widget

ನ.25ರ ರಾತ್ರಿ ಕಡಬ ತಾಲೂಕಿನ ಕಾಣಿಯೂರು , ಪಂಜ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪುತ್ತೂರಿನ ಹಲವು ಕಡೆ ಸಾಧಾರಣ ಮಳೆಯಾಗಿದೆ.

Ad Widget

Ad Widget <> Ad Widget

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ ಕೋಲಾರ ರಾಮನಗರ ಬೆಂಗಳೂರು ತುಮಕೂರು ಜಿಲ್ಲೆಗಳ ಹಲವೆಡೆ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ದ.ಕ. ಉಡುಪಿ ಉ.ಕ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಅಥವಾ ರಾತ್ರಿ ಮಳೆ ಬರುವ ಸಾಧ್ಯತೆ ಇದೆ. ರಾತ್ರಿ ಗುಡುಗು ಮಳೆಯ ಮುನ್ಸೂಚನೆ ಇದ್ದರೂ ವಾತಾವರಣದ ಹ್ಯುಮಿಡಿಟಿ ಕಡಿಮೆ ಆದರೇ ಮಳೆ ಪ್ರಮಾಣ ಕಡಿಮೆ ಆಗಿ ಮೋಡದ ವಾತಾವರಣ ಮುಂದುವರೆಯಬಹುದು ಎನ್ನಲಾಗಿದೆ. ನವೆಂಬರ್ 28 ತನಕ ಸಂಜೆ ಮೋಡ – ಮಳೆಯ ಸಾಧ್ಯತೆ ಮುಂದುವರೆಯಬಹುದು ಎಂದು ಹವಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Ad Widget

Ad Widget

ಮಲೆನಾಡಿನಲ್ಲಿ ಸಂಜೆಯ ಮೋಡ ಬರಲಿದ್ದು ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ತುಂತುರು – ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 27 ತನಕ ಸಂಜೆ ಮಳೆಯ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ರಾಮನಗರ ಚಾಮರಾಜನಗರ ಮೈಸೂರು ಮಂಡ್ಯ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ತುಮಕೂರು ಚಿತ್ರದುರ್ಗ ದಾವಣಗೆರೆ ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಬಹುದು. ನ 28 ರಿಂದ ಮಳೆ ಪೂರ್ತಿ ಕಡಿಮೆ ಆಗಬಹುದು.

ಉತ್ತರ ಒಳನಾಡಿನಲ್ಲಿ ಮೋಡದ ವಾತಾವರಣ ಬರಬಹುದು.ಬಳ್ಳಾರಿ ರಾಯಚೂರು ಹಾವೇರಿ ಗದಗ ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ತುಂತುರು/ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮೋಡ ಮಧ್ಯ ಕರ್ನಾಟಕ ಚಲಿಸುವ ಕಾರಣ ಒಂದೆರಡು ದಿನ ಸಣ್ಣ ಮಳೆಯಾಗಲಿದ್ದು ನಂತರ ಚಳಿ ಮುಂದುವರೆಯಬಹುದು.

ಬಂಗಾಳಕೊಲ್ಲಿಯಿಂದ ಬೀಸುವ ಪೂರ್ವದ ಮಾರುತಗಳಿಂದ ತಮಿಳುನಾಡು ಕೇರಳ ಕರ್ನಾಟಕದಲ್ಲಿ ಮಳೆಯಾಗುತ್ತಿದ್ದು ಮುಂದಿನ 3-4 ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಡಿಸೆಂಬರ್ ಮೊದಲ ವಾರ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಇನ್ನೊಂದು ವಾಯುಭಾರ ಕುಸಿತವಾಗಿ ದಕ್ಷಿಣ ಶ್ರೀಲಂಕಾ ಮೂಲಕ ಅರಬ್ಬೀಸಮುದ್ರದತ್ತ ಚಲಿಸುವ ಸಾಧ್ಯತೆಯೂ ಇದೆ.

Ad Widget
Continue Reading

ದಕ್ಷಿಣ ಕನ್ನಡ

ಡಿ. 8ರ ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು: ಕಾರ್ಯಾಲಯ ಉದ್ಘಾಟನೆ -ಅದ್ದೂರಿ ದೀಪೋತ್ಸವಕ್ಕೆ ಭಕ್ತರ ಸಹಕಾರ ಅಗತ್ಯ: ಎಸ್. ರವೀಂದ್ರ ಶೆಟ್ಟಿ

Published

on

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಡಿ. 8ರಂದು ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಸಿದ್ಧತೆಗಳು ಚುರುಕುಗೊಂಡಿದ್ದು, ಇದರ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ದೀಪೋತ್ಸವದ ಕಾರ್ಯಾಲಯ ಉದ್ಘಾಟನೆಗೊಂಡಿತು.

Ad Widget

Ad Widget

Ad Widget

Ad Widget

ಮಂಗಳೂರಿನ ಉದ್ಯಮಿ ಜನಾರ್ದನ ಪೂಜಾರಿ ಪದಡ್ಕ ಅವರು ಕಾರ್ಯಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು.

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೀಪೋತ್ಸವ ಸಮಿತಿಯ ಅಧ್ಯಕ್ಷ ಎಸ್. ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಪುತ್ತೂರಿನಲ್ಲಿ ಅದ್ದೂರಿ ಹಾಗೂ ವಿಶಿಷ್ಟ ದೀಪೋತ್ಸವಕ್ಕೆ ಸಾಕ್ಷಿಯಾಗಬೇಕು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ದೀಪೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದ್ದು, ಪುತ್ತೂರಿನ ಭಕ್ತರನ್ನು ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ದೀಪೋತ್ಸವಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ತಿಳಿಸಿದರು.

Ad Widget

Ad Widget <> Ad Widget

ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿಗಳಾದ ಪ್ರಕಾಶ್ ಕಾಮತ್, ಶಿವರಾಮ ಆಳ್ವ ಬಳ್ಳಮಜಲು, ವೇಣುಗೋಪಾಲ ಪಿ.ಎಲ್., ವಿಜಯ ಬ್ಯಾಂಕ್‌ನ ನಿವೃತ್ತ ಎಜಿಎಂ ಜಗಜೀವನದಾಸ್ ರೈ, ನಿವೃತ್ತ ಮ್ಯಾನೇಜರ್ ಜೈರಾಜ್ ಭಂಡಾರಿ ನೋಣಾಲು ಹಾಗೂ ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಗೌರವ ಸಲಹೆಗಾರರಾದ ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪ್ರಸ್ತಾವನೆಗೈದು, ದೀಪೋತ್ಸವದ ಕಾರ್ಯಕ್ರಮಗಳ ರೂಪುರೇಷೆ, ಸ್ವಯಂಸೇವಕರ ನಿಯೋಜನೆ ಹಾಗೂ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಗಲಿರುವ ರಥದ ಕುರಿತು ಮಾಹಿತಿ ನೀಡಿದರು. ಕೋಶಾಧಿಕಾರಿ ಎಸ್. ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜೇಶ್ ಬೆಜ್ಜಂಗಳ ಹಾಗೂ ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು ಸಹಕರಿಸಿದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!