Connect with us

ದಕ್ಷಿಣ ಕನ್ನಡ

ದೇಶದ ಅಭಿವೃದ್ಧಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮದು: ಪ್ರೊ. ವಿಷ್ಣುಗಣಪತಿ ಭಟ್

Published

on



Ad Widget

Ad Widget

Ad Widget

Ad Widget

ಪುತ್ತೂರು. ಜ, ೨೫:- ಮತದಾನಕ್ಕಿಂತ ಹೆಚ್ಚು ಯಾವುದು ಇಲ್ಲ, ನಾನು ಖಂಡಿತವಾಗಿಯೂ ಮತದಾನ ಮಾಡುತ್ತೇನೆ ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿಯ ಮತದಾರರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಅಲ್ಲದೆ ಇದು ನಮ್ಮ ಹಕ್ಕು ಕೂಡ. ದೇಶದ ಭವಿಷ್ಯಕ್ಕಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಮತದಾನ ಮಾಡುವುದು ತುಂಬಾ ಅಗತ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ವಿಷ್ಣುಗಣಪತಿ ಭಟ್ ಹೇಳಿದರು.

Ad Widget

Ad Widget

Ad Widget

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಪೊಲಿಟಿಕಲ್ ಫಾರಂ ಇದರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

Ad Widget

Ad Widget

Ad Widget alt="Ad Widget"/>

Ad Widget

ಈ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಬಿ ಬೋಧಿಸಿದರು.

Ad Widget

Ad Widget <> Ad Widget

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Ad Widget

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್ ವಂದಿಸಿದರು. ದ್ವಿತೀಯ ಎಂ ಕಾಂ ವಿದ್ಯಾರ್ಥಿ ವರುಣ್ ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

ಮಂಗಳೂರು

Auto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್‌: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ನವೆಂಬರ್‌ 1ರಿಂದ ಮೊದಲ 1.5 ಕಿ.ಮೀಗೆ ಕನಿಷ್ಠ ₹40 ಹಾಗೂ ಬಳಿಕ ಪ್ರತಿ ಕಿ.ಮೀಗೆ ₹23 ದರ ನಿಗದಿಪಡಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ನವೆಂಬರ್‌ 1ರಿಂದ ಮೊದಲ 1.5 ಕಿ.ಮೀಗೆ ಕನಿಷ್ಠ ₹40 ಹಾಗೂ ಬಳಿಕ ಪ್ರತಿ ಕಿ.ಮೀಗೆ ₹23 ದರ ನಿಗದಿಪಡಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಆಗಸ್ಟ್‌ 28ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಮೊದಲ 1.5 ಕಿ.ಮೀಗೆ ಕನಿಷ್ಠ ದರವನ್ನು ₹35ರಿಂದ ₹40ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಪ್ರತಿ ಕಿ.ಮೀಗೆ ₹20ರಂತೆ ಇದ್ದ ದರವನ್ನು ಅದೇ ರೀತಿ ಮುಂದುವರಿಸಲಾಗಿತ್ತು. 2022ರ ನವೆಂಬರ್‌ 23ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ನಿಗದಿಪಡಿಸಿದ್ದ ಪ್ರತಿ ಕಿ.ಮೀಗೆ ₹20ರ ದರವನ್ನು ಆಗಸ್ಟ್‌ 28ರ ಅಧಿಸೂಚನೆಯಲ್ಲಿ ಪರಿಗಣಿಸಲಾಗಿರಲಿಲ್ಲ ಎಂದು ಅ.1ರಂದು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆಯಲ್ಲಿ ಆರ್‌ಟಿಎ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

Ad Widget

Ad Widget <> Ad Widget

ಆಟೊ ಚಾಲಕರು ಹಾಗೂ ಮಾಲೀಕರ ಪ್ರತಿನಿಧಿಗಳು ಕನಿಷ್ಠ ದರವನ್ನು ₹35ರಿಂದ ₹50ಕ್ಕೆ ಹಾಗೂ ಪ್ರತಿ ಕಿ.ಮೀ. ದರವನ್ನು ₹30ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇಂಧನ, ಬಿಡಿಭಾಗ ಸೇರಿದಂತೆ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ಅಗತ್ಯ ಎಂದು ಅವರು ಕೋರಿದ್ದರು.



Ad Widget

ಆದರೆ, ₹50 ಕನಿಷ್ಠ ದರ ಹಾಗೂ ಕಿ.ಮೀಗೆ ₹30ಕ್ಕೆ ದರ ಏರಿಸಿದರೆ ಸಾರ್ವಜನಿಕರು ಆಟೊರಿಕ್ಷಾ ಬಳಕೆಯಿಂದ ದೂರ ಸರಿದು ಪರ್ಯಾಯ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡುವ ಸಾಧ್ಯತೆಯಿದೆ. ಇದರಿಂದ ಆಟೊರಿಕ್ಷಾ ಚಾಲಕರು ಮತ್ತು ಮಾಲೀಕರಿಗೂ ತೊಂದರೆಯಾಗಬಹುದು ಎಂದು ಆರ್‌ಟಿಎ ಅಭಿಪ್ರಾಯಪಟ್ಟಿದೆ.

Ad Widget

Ad Widget

ಹೊಸ ದರ ಹೀಗಿದೆ

ಗರಿಷ್ಠ ಮೂರು ಪ್ರಯಾಣಿಕರನ್ನು ಕರೆದೊಯ್ಯುವ ಆಟೊರಿಕ್ಷಾಗಳಿಗೆ ಮೊದಲ 1.5 ಕಿ.ಮೀಗೆ ₹40 ಹಾಗೂ ನಂತರ ಪ್ರತಿ ಕಿ.ಮೀಗೆ ₹23 ದರ ನಿಗದಿಯಾಗಿದೆ.

  • ಮೊದಲ 10 ನಿಮಿಷ ಕಾಯುವಿಕೆಗೆ ಶುಲ್ಕವಿಲ್ಲ.
  • ನಂತರದ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ಶುಲ್ಕ.
  • 20 ಕೆ.ಜಿ.ವರೆಗೆ ಸಾಮಾನುಗಳಿಗೆ ಶುಲ್ಕವಿಲ್ಲ.
  • ಮುಂದಿನ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹25 ಶುಲ್ಕ.
  • ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು ಶುಲ್ಕ ವಿಧಿಸಬಹುದು.

ಪರಿಷ್ಕೃತ ದರದ ಪಟ್ಟಿಯನ್ನು ಪ್ರತಿಯೊಂದು ಆಟೊರಿಕ್ಷಾದಲ್ಲೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಆರ್‌ಟಿಎ ಸೂಚಿಸಿದೆ. ಅಲ್ಲದೆ, ಮೀಟರ್‌ಗಳನ್ನು ಪರಿಷ್ಕೃತ ದರಕ್ಕೆ ಮರುಹೊಂದಿಸಿ, ಶೀಘ್ರದಲ್ಲೇ ಸೀಲ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಮೀಟರ್‌ಗಳ ಮರುಹೊಂದಿಕೆ ಪೂರ್ಣಗೊಳ್ಳುವವರೆಗೆ ಚಾಲಕರಿಗೆ ಪ್ರದರ್ಶಿಸಲು ಅಗತ್ಯವಿರುವ ಹೋಲಿಕೆ ದರಪಟ್ಟಿಯನ್ನು ಚಾಲಕರ ಸಂಘಗಳಿಗೆ ನೀಡಲಾಗುವುದು. ಸಂಘಗಳು ಅದನ್ನು ಚಾಲಕರಿಗೆ ವಿತರಿಸಲಿವೆ ಎಂದು ಆರ್‌ಟಿಎ ತಿಳಿಸಿದೆ.

Ad Widget
Continue Reading

ಬಿಗ್ ನ್ಯೂಸ್

ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ – 9 ರಾಷ್ಟ್ರಗಳ 1500 ಈಜುಪಟುಗಳು ಭಾಗಿ : ಪುತ್ತೂರಿನ ಪಾರ್ಥ ವಾರಣಾಸಿಗೆ ಚಿನ್ನ

Published

on



Ad Widget

Ad Widget

Ad Widget

Ad Widget

ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್‌)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು:ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್‌)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಸಂಸ್ಥಾಪಕ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫ್ಲೈ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

9 ರಾಷ್ಟ್ರಗಳ 1,500ಕ್ಕೂ ಹೆಚ್ಚು ಈಜುಗಾರರು ಭಾಗಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಏಷ್ಯಾ ಅಕ್ವಾಟಿಕ್ ಮಾರ್ಗದರ್ಶನದಲ್ಲಿ, ಭಾರತೀಯ ಈಜು ಒಕ್ಕೂಟದ ಅಧೀನದಲ್ಲಿ ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಯೋಜನಾ ಪಾಲುದಾರಿಕೆಯಲ್ಲಿ ಚಾಂಪಿಯನ್‌ಶಿಪ್ ನಡೆಯುತ್ತಿದೆ.

Ad Widget

Ad Widget <> Ad Widget

ಭಾರತ ಸೇರಿದಂತೆ ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಜಪಾನ್, ಚೀನಾ, ಓಮನ್, ಮಲೇಷ್ಯಾ ಸೇರಿದಂತೆ ಒಟ್ಟು 9 ರಾಷ್ಟ್ರಗಳ 1,500ಕ್ಕೂ ಅಧಿಕ ಈಜುಗಾರರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.



Ad Widget

ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಪಾರ್ಥ ವಾರಣಾಸಿ ಚಿನ್ನದ ಪದಕ ಗೆದ್ದಿರುವುದು ಪುತ್ತೂರಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

Continue Reading

ಉದ್ಯೋಗ

Puttur-Sales‌ನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening

Published

on



Ad Widget

Ad Widget

Ad Widget

Ad Widget

ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

Ad Widget

Ad Widget

Ad Widget alt="Ad Widget"/>

Ad Widget

TVS ಸಂಸ್ಥೆಯ ಪ್ರೀಮಿಯಂ, EV ಹಾಗೂ IC ವಿಭಾಗಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ‘ಪುತ್ತೂರಿನ ಅತಿದೊಡ್ಡ 2-ವೀಲರ್ ಜಾಬ್ ಓಪನಿಂಗ್’ ಎಂಬ ಘೋಷಣೆಯೊಂದಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

Ad Widget

Ad Widget <> Ad Widget

ಸೇಲ್ಸ್ ವಿಭಾಗದಲ್ಲಿ ಹಲವು ಅವಕಾಶ



Ad Widget

ಪುತ್ತೂರು ಸೇಲ್ಸ್ ವಿಭಾಗದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸೇಲ್ಸ್ ಮ್ಯಾನೇಜರ್, ಎಕ್ಸ್‌ಚೇಂಜ್ ಕೋಆರ್ಡಿನೇಟರ್, ಸೇಲ್ಸ್ ಟೆಲಿಕಾಲಿಂಗ್ (CRE), ಅಕೌಂಟ್ಸ್ ಮ್ಯಾನೇಜರ್, ಫೈನಾನ್ಸ್ ಮ್ಯಾನೇಜರ್, ರಿಸೆಪ್ಷನಿಸ್ಟ್, RTO ಎಕ್ಸಿಕ್ಯೂಟಿವ್, ಇನ್‌ವಾಯ್ಸ್ ಎಕ್ಸಿಕ್ಯೂಟಿವ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ಫೈನಾನ್ಸ್ ಕೋಆರ್ಡಿನೇಟರ್ ಹಾಗೂ ಇನ್ಶೂರೆನ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Ad Widget

Ad Widget

ಸರ್ವೀಸ್ ವಿಭಾಗದಲ್ಲೂ ಭರ್ಜರಿ ನೇಮಕಾತಿ

ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಪಾರ್ಟ್ಸ್ ಮ್ಯಾನೇಜರ್, ವಾಷಿಂಗ್ ಸಿಬ್ಬಂದಿ, PDI ಟೆಕ್ನಿಷಿಯನ್, ಸರ್ವೀಸ್ ಮ್ಯಾನೇಜರ್, ನೆಟ್‌ವರ್ಕ್ ಕೋಆರ್ಡಿನೇಟರ್, ವಾರಂಟಿ ಇನ್‌ಚಾರ್ಜ್, ಅಕ್ಸಿಡೆಂಟ್ ಸೂಪರ್‌ವೈಸರ್, CRE ಟೆಲಿಕಾಲಿಂಗ್, CRM, PDI ಸೂಪರ್‌ವೈಸರ್ ಹಾಗೂ ಪೇಂಟರ್ ಮತ್ತು ಡೆಂಟಿಂಗ್ ಹುದ್ದೆಗಳಿಗೆ ಅವಕಾಶವಿದೆ.

ಬೆಳ್ಳಾರೆಯಲ್ಲೂ ಉದ್ಯೋಗದ ಬಾಗಿಲು ತೆರೆದಿದೆ

ಬೆಳ್ಳಾರೆ ಭಾಗದಲ್ಲಿಯೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್ ಹಾಗೂ ವಾಷಿಂಗ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸೇಲ್ಸ್ ವಿಭಾಗದಲ್ಲಿ 6 ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ 2 ರಿಸೆಪ್ಷನಿಸ್ಟ್ ಹುದ್ದೆಗಳಿಗೂ ಅವಕಾಶವಿದೆ.

PF, ESI ಜೊತೆಗೆ ₹25 ಸಾವಿರದವರೆಗೆ ಗಳಿಕೆ!

ಆಯ್ಕೆಯಾಗುವ ಅಭ್ಯರ್ಥಿಗಳಿಗೆ PF, ESI, ಸ್ಪಾಟ್ ಇನ್ಸೆಂಟಿವ್, ಮಾಸಿಕ ಹಾಗೂ ತ್ರೈಮಾಸಿಕ ಇನ್ಸೆಂಟಿವ್ ಸೌಲಭ್ಯಗಳು ದೊರೆಯಲಿವೆ. 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಪೆಟ್ರೋಲ್ ವೋಚರ್ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ವರೆಗೆ ಗಳಿಸುವ ಅವಕಾಶ ಇದೆ ಎಂದು ಸಂಸ್ಥೆ ತಿಳಿಸಿದೆ.

ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮಾತ್ರವಲ್ಲದೆ, ಸೇಲ್ಸ್, ಅಕೌಂಟ್ಸ್, ಫೈನಾನ್ಸ್, ಟೆಲಿಕಾಲಿಂಗ್, ಗ್ರಾಹಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿರುವವರೂ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಉದ್ಯೋಗಾವಕಾಶ ಸೀಮಿತವಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಬಹುದು.

📞 ಸಂಪರ್ಕ: +91 82965 79206

📍 ವಿಳಾಸ: ಶ್ರೀ ತಿರುಮಲಾ TVS, ಬೈಪಾಸ್ ಜಂಕ್ಷನ್, ಮಂಜಲ್ಪಡ್ಡು, ಮೇನ್ ರೋಡ್, ಬೋಳ್ವಾರ್ ವೆಸ್ಟ್, ಪುತ್ತೂರು–574201.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading