Connect with us

ದಕ್ಷಿಣ ಕನ್ನಡ

ನಗರಸಭೆ ಉಪಚುನಾವಣೆ ಬಳಿಕ ಬದಲಾಗಿದೆಯೇ ಪುತ್ತೂರಿನ ರಾಜಕೀಯ ಸಮೀಕರಣ ?  

Published

on

Ad Widget

Ad Widget

Ad Widget

Ad Widget

ವಿಧಾನಸಭೆ ಚುನಾವಣೆ ಘೋಷಣೆ ಬಳಿಕ ಪುತ್ತೂರಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ರಾಜ್ಯದಾದ್ಯಂತ  ಚರ್ಚೆಯ ವಿಷಯವಾಗಿದೆ. ಪ್ರಭಾವಿ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಆಸೆಂಬ್ಲಿ ಎಲೆಕ್ಷನ್‌ ಗೆ ಪಕ್ಷೇತರರಾಗಿ ಸ್ಪರ್ಧಿಸಿದ ಬಳಿಕ ಪುತ್ತೂರಿನಲ್ಲಿ ನಡೆದ ಪ್ರತಿ ರಾಜಕೀಯ ನಡೆಗಳು ಕುತೂಹಲದ ಕೇಂದ್ರವಾಗಿದ್ದವು. ಆ ಬಳಿಕ ನಡೆದ ಗ್ರಾಮ ಪಂಚಾಯತ್‌ ಉಪ ಚುನಾವಣೆಯು ತ್ರಿಕೋನ ಸ್ಪರ್ಧೆಯ ಕಾರಣಕ್ಕೆ ಎಲ್ಲರ ಗಮನ ಸೆಳೆದಿತ್ತು. ಆದಾದ ಬಳಿಕ ಮೊನ್ನೆ ನಡೆದ ನಗರ ಸಭೆ ಚುನಾವಣೆಯೂ ಜಿದ್ದಾಜಿದ್ದಿನ ಕಣವಾಗಿ ಕುತೂಹಲ ಕೆರಳಿಸಿತ್ತು.

Ad Widget

Ad Widget

Ad Widget

Ad Widget

ವಿಧಾನಸಭೆ ಚುನಾವಣೆಯಲ್ಲಿ ಶೇ 38.5 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಇಲ್ಲಿ ಜಯಭೇರಿ ಭಾರಿಸಿದರೇ 36.15% ಮತಗಳ ಮೂಲಕ ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ದ್ವಿತೀಯ ಸ್ಥಾನಿಯಾದರು. 21.74% ಮತಗಳ ಮೂಲಕ ಬಿಜೆಪಿ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು .

Ad Widget

Ad Widget alt="Ad Widget"/>

Ad Widget

 ಆ ಬಳಿಕ ನಡೆದ ನಾಲ್ಕು ಸ್ಥಳೀಯ ವಾರ್ಡ್‌ ಗಳ ಉಪಚುನಾವಣೆ ಫಲಿತಾಂಶ ಇಂತಿದೆ.

Ad Widget

Ad Widget <> Ad Widget

ನಿಡ್ಪಳ್ಳಿ:

ಕಾಂಗ್ರೆಸ್‌ – 235

Ad Widget

Ad Widget

ಪುತ್ತಿಲ ಪರಿವಾರ – 208

ಬಿಜೆಪಿ – 85

ಆರ್ಯಾಪು:

ಪುತ್ತಿಲ ಪರಿವಾರ – 499

ಕಾಂಗ್ರೆಸ್‌ – 353

ಬಿಜೆಪಿ – 140

ನೆಲ್ಲಿಕಟ್ಟೆ :

ಬಿಜೆಪಿ – 431

ಕಾಂಗ್ರೆಸ್‌ – 400

ಪುತ್ತಿಲ ಪರಿವಾರ – 216

ರಕ್ತೇಶ್ವರಿ ವಠಾರ:

ಕಾಂಗ್ರೇಸ್‍ – 427

ಪುತ್ತಿಲ ಪರಿವಾರ – 308

ಬಿಜೆಪಿ – 219

ನಾಲ್ಕು ವಾರ್ಡ್‌ ಗಳಲ್ಲಿ  ಒಟ್ಟು ಪಕ್ಷಗಳು ಪಡೆದ ಮತಗಳ ವಿವರ :

ಕಾಂಗ್ರೇಸ್‍ :  1415 – 40.18%

ಪುತ್ತಿಲ ಪರಿವಾರ : 1231 – 34.96%

ಬಿಜೆಪಿ : 875 – 24.85%

ಈ ಎಲ್ಲ  ಅಂಕಿ ಅಂಶಗಳ ಆಧಾರದಲ್ಲಿ ವೋಟ್‌ ಶೇರ್‌ ಗಮನಿಸುವಾಗ  7 ತಿಂಗಳ ಅವಧಿಯಲ್ಲಿ ರಾಜಕೀಯ ಆಖಾಡದಲ್ಲಿ ಹೇಳಿಕೊಳ್ಳುವಂತಹ ಮಹತ್ತರ ಬದಲಾವಣೆ ಆಗಿರುವುದು ಕಾಣಿಸುತ್ತಿಲ್ಲ. +/- 2ರಿಂದ 3 ಶೇ ಮತ ಬದಲಾವಣೆಯಷ್ಟೆ ಆಗಿರುವುದು ನಿಚ್ಚಳವಾಗಿ ಕಾಣುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಮತ ಬ್ಯಾಂಕನ್ನು ತುಸು ಹೆಚ್ಚಿಸಿಕೊಂಡಿದ್ದಾರೆ, ಪುತ್ತಿಲ ಪರಿವಾರ ಶೇ 1 ರಷ್ಟು ವೋಟ್‌ ಶೇರ್‌ ಕಳಕೊಂಡಿದೆ. ಇದು ರಾಜಕೀಯವಾಗಿ ದೊಡ್ಡ ಸ್ಥಿತ್ಯಂತರವಲ್ಲ.ಒಟ್ಟಾರೆ ಸಾರ ಎನೂ ಅಂದರೇ ಕಳೆದ ವಿಧಾನಸಭೆ ಚುನಾವಣೆಯ ಬಳಿಕ ಯಾರ ಬಲವು ತೀರಾ ಹೆಚ್ಚು ಆಗಿಲ್ಲ ತೀರಾ ಕುಸಿದು ಇಲ್ಲ.

ಅಚ್ಚರಿಗೆ ಕಾರಣವಾದ ನೆಲ್ಲಿಕಟ್ಟೆ ಫಲಿತಾಂಶ

ಕಳೆದ ವಿಧಾನಸಭೆ ಚುನಾವಣೆಯ ಬಳಿಕ ಪುತ್ತೂರಿನಲ್ಲಿ ನೇರ ಹಣಾಹಣಿಯಿದ್ದದ್ದು ಕಾಂಗ್ರೆಸ್‌ ಹಾಗೂ ಪುತ್ತಿಲ ಪರಿವಾರದ ನಡುವೆ. ಆದರೇ ಇದಕ್ಕೆ ವ್ಯತಿರಿಕ್ತ  ಫರಿಣಾಮ ಬಂದಿರುವುದು ಕೇವಲ ನೆಲ್ಲಿಕಟ್ಟೆ ವಾರ್ಡ್‌ ನ ಮಾತ್ರ. ಇಂತಹದೊಂದು ಭಿನ್ನ ಫಲಿತಾಂಶ ಬರಲು  ಬಿಜೆಪಿಯ  ಮತ ಬ್ಯಾಂಕಿನ ಜತೆಗೆ ರಮೇಶ್‌ ರೈಯವರ ವೈಯುಕ್ತಿಕ ವರ್ಚಸ್ಸು ಕೆಲಸ ಮಾಡಿರುವುದು ನಿಚ್ಚಳ . ರಮೇಶ್‌ ರೈಯವರನ್ನು ಮರಳಿ ಕಣಕ್ಕಿಳಿಸುವ ಮೂಲಕ ಬಿಜೆಪಿ ತೋರಿಸಿದ ಜಾಣತನ ಆ ಪಕ್ಷಕ್ಕೆ ಗೆಲುವನ್ನು ತಂದು ಕೊಟ್ಟಿದೆ. ಅವರು ಒಂದಷ್ಟು ಪಾರಂಪರಿಕ ಕಾಂಗ್ರೆಸ್‌ ಮತಗಳನ್ನು ತನ್ನ ವೈಯುಕ್ತಿಕ ವರ್ಚಸ್ಸಿನ ಮೂಲಕ ಎಳೆದಿರುವುದು ಅವರ ಗೆಲುವಿಗೆ ಪೂರಕವಾದ ಅಂಶ. ಅಲ್ಲದೇ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ರೋಹಿತ್‌ ನೆಲ್ಲಿಕಟ್ಟೆಯವರು ಪಕ್ಷ ತ್ಯಜಿಸಿ ಬಿಜೆಪಿಗೆ ತೆರಳಿದ್ದು ಕಾಂಗ್ರೆಸ್ಸಿನಿಂದ ಗೆಲುವನ್ನು ಕಸಿಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

 ಇನ್ನು ಪುತ್ತಿಲ ಪರಿವಾರ ಇಲ್ಲಿ  ಅಭ್ಯರ್ಥಿ ಆಯ್ಕೆಯಲ್ಲಿ ಸಂಪೂರ್ಣವಾಗಿ ಎಡವಿರುವುದು ಅದು ಮೂರನೇ ಸ್ಥಾನಕ್ಕೆ ಕುಸಿಯಲು ಪ್ರಮುಖ ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಎರಡು ಘಟಾನುಘಟಿ ಹಾಗೂ ನಗರಸಭೆಯ ಒಳ ಹೊರಗನ್ನು ಬೆನ್ನಾಗಿ ಬಲ್ಲ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಮಧ್ಯೆ, ಸ್ಥಳೀಯ ಆಡಳಿತದ ಬಗೆಗಿನ ಅನನುಭವಿ ಹಾಗೂ ರಾಜಕೀಯಕ್ಕೂ ಹೊಸಬರಾದ, ವಾರ್ಡ್ಗೂ ಹೆಚ್ಚು ಪರಿಚಿತರಾಗಿರದ  ವ್ಯಕ್ತಿಯನ್ನು ಪುತ್ತಿಲ ಪರಿವಾರ ಆಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ  ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿತ್ತು ಎನ್ನಲು ಹೆಚ್ಚಿನ ರಾಜಕೀಯ ಜಾಣ್ಮೆಯ ಅವಶ್ಯಕತೆಯಿಲ್ಲ.

ಜಾತಿ ಸಮೀಕರಣ

ವಿಧಾನಸಭೆ ಚುನಾವಣೆ ಹಾಗೂ ಆ ಬಳಿಕ ನಡೆದ ಉಪಚುನಾವಣೆಯನ್ನು ಗಮನಿಸಿದರೆ ಕಾಂಗ್ರೆಸ್‌ ಕೇವಲ ರಕ್ತೇಶ್ವರಿ ವಾರ್ಡ್‌ ನಲ್ಲಿ ಮಾತ್ರ ಹಿಂದಿಗಿಂತ ಹೆಚ್ಚು ಮತ ಪಡೆದಿದೆ.ಇಲ್ಲಿ ಕಳೆದ ಬಾರಿ ದಿನೇಶ್‌ ಶೇವಿರೆಯವರು 370 ಮತಗಳನ್ನು ಪಡೆದಿದ್ದರೇ ಈ ಬಾರಿ ಅದು 427 ಮತಕ್ಕೆ ಏರಿಕೆಯಾಗಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಮತ ಏರಿಕೆಯ ಹಿಂದೆ ಜಾತಿ  ತನ್ನದೇ ಆದ ಪಾತ್ರ ವಹಿಸಿರುವುದು ಕಾಣುತ್ತಿದೆ. ಇದು ಮುಂದಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯದಲ್ಲೂ ದೊಡ್ಡ ಪಾತ್ರ ನಿರ್ವಹಿಸುವ  ಸಾಧ್ಯತೆಯಿದೆ ಎನ್ನುವ ಮಾತುಗಳು ರಾಜಕೀಯ ವಲಯ ಕೇಳಿ ಬರುತ್ತಿದೆ.

ಮೂರು ಪಕ್ಷಕ್ಕೂ ಇದೆ ಪಾಠ

ಸದ್ಯದ ಫಲಿತಾಂಶಗಳನ್ನು ಗಮನಿಸಿದಾಗ  ಬಿಜೆಪಿಯ ಮತ ವಿಭಜನೆಗೊಂಡ ಬಳಿಕವು ಕಾಂಗ್ರೆಸ್‌ ಅದರ ಸಂಪೂರ್ಣ ಲಾಭ ಎತ್ತುವಲ್ಲಿ ವಿಫಲವಾಗಿರುವುದು ಕಂಡು ಬರುತ್ತಿದೆ. ಮೂರನೇ ಅಭ್ಯರ್ಥಿ ಗೆದ್ದ ಅಭ್ಯರ್ಥಿಯ ಅರ್ಧದಷ್ಟು ಮತವನ್ನು ಸೆಳೆದ ಬಳಿಕವು ಕಾಂಗ್ರೆಸ್‌ ನೆಲ್ಲಿಕಟ್ಟೆ  ಸ್ಥಾನವನ್ನು ಉಳಿಸಿಕೊಳ್ಳಲಾಗದಿರುವುದು ಆ ಪಕ್ಷದ ಸಂಘಟನಾತ್ಮಕ ದೌರ್ಭಲ್ಯದ ದ್ಯೂತಕ.

ಇನ್ನು ಬಿಜೆಪಿ  ಕಳೆದ ಕೆಲ ಸಮಯದಿಂದ ನಿರಂತರವಾಗಿ ಸೋಲು ಅನುಭವಿಸುತ್ತಿದ್ದು  ಆ ಬಳಿಕ ಸಿಕ್ಕ ಈ ಒಂದು ಗೆಲುವು ಅದರ ಕುಸಿದು ಹೋಗಿದ್ದ ವಿಶ್ವಾಸವನ್ನು ಹೆಚ್ಚಿಸಿರುವುದು ಸತ್ಯ. ಹಾಗಾಗಿಯೂ ರಕ್ತೇಶ್ವರಿ ವಾರ್ಡ್‌ ನಲ್ಲಿ ಅದು ಮೂರನೇ ಸ್ಥಾನಕ್ಕೆ ಕುಸಿದಿರುವುದು ಪಕ್ಷದ ವರ್ಚಸ್ಸು ವೃದ್ದಿಯಾಗಿರದ ಸೂಚನೆ. ನೆಲ್ಲಿಕಟ್ಟೆ ವಾರ್ಡ್‌ ಹೊರತುಪಡಿಸಿದರೆ ಬಿಜೆಪಿ ಈಗಲೂ ಪುತ್ತೂರಿನಲ್ಲಿ ತೃತೀಯ ಸ್ಥಾನಕ್ಕೆ ಮೇಲೆ ಬಂದಿಲ್ಲ. ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಲ್ಲಿ  ಮಾತ್ರ ಬಿಜೆಪಿಗೆ ಉಳಿಗಾಲ ಎನ್ನುವ ಸಂದೇಶ ಈ ಚುನಾವಣೆ ನೀಡಿದೆ.

ಸಂಕ್ರಮಣ ಕಾಲದಲ್ಲಿ ಪುತ್ತಿಲ ಪರಿವಾರ

ಇನ್ನು ಪುತ್ತಿಲ ಪರಿವಾರ  ʼಒಂದು ಚುನಾವಣೆಯ ಮ್ಯಾಜಿಕ್‌ ʼ ಅಲ್ಲ ಅನ್ನುವುದನ್ನು ನಿರೂಪಿಸುವಲ್ಲಿ ಅದು ಕಳೆದ ಎಲ್ಲ ಚುನಾವಣೆಗಳಲ್ಲಿ  ಯಶಸ್ವಿಯಾಗಿದೆ. ಪುತ್ತೂರಿನ ರಾಜಕೀಯ ರಂಗಕ್ಕೆ ತೃತೀಯ ರಾಜಕೀಯ ಪೋರ್ಸ್‌ ಎಂಬ ಕಲ್ಪನೆ ಹೊಸತು. 1985 ಕೊನೆ ಆ ಬಳಿಕ ಇಲ್ಲಿ ತೃತೀಯ ರಾಜಕೀಯ ಪೋರ್ಸ್‌ ಎರಡು ರಾಜಕೀಯ ಪಕ್ಷಗಳಿಗೆ  ಚಾಲೇಂಜ್‌ ನೀಡಿದಿಲ್ಲ. 2008ರಲ್ಲಿ ಶಕುಂತಳಾ ಶೆಟ್ಟಿಯವರು ಪಕ್ಷೇತರರಾಗಿ ಸ್ಪರ್ಧಿಸಿದ್ದರೂ, ಆ ಬಳಿಕ ತನ್ನದೇ ಆದ ರಾಜಕೀಯ ಪೋರ್ಸ್‌ ವೊಂದನ್ನು ಅವರು  ಬೆಳೆಸಲಿಲ್ಲ. ಆದರೇ ಪುತ್ತಿಲ ಪರಿವಾರ ಎರಡು ರಾಜಕೀಯ ಪಕ್ಷಗಳಿಗೆ  ಪರ್ಯಾಯ ರಾಜಕೀಯ ಶಕ್ತಿ ಎನ್ನುವುದು ಕಳೆದ 7 ತಿಂಗಳುಗಳ ಚುನಾವಣಾ ಫಲಿತಾಂಶಗಳು ರುಜುವಾತುಪಡಿಸಿದೆ.

ಆದರೇ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯೋ, ಧಾರ್ಮಿಕ  ಸಂಘಟನೆಯೋ ಅಥಾವ ರಾಜಕೀಯ ಶಕ್ತಿಯೋ ಎಂಬ ಬಗ್ಗೆ ಕ್ಲ್ಯಾರಿಟಿ ಅದರ ಮುಖಂಡರಿಗೆ ಇದ್ದಂತಿಲ್ಲ, ಕಾರ್ಯಕರ್ತರಲ್ಲೂ ಈ ಕುರಿತು ಸ್ಪಷ್ಟತೆಯಿಲ್ಲ. ಹೀಗಾಗಿ ಮತದಾರರಿಗೂ ಈ ಬಗ್ಗೆ ಗೊಂದಲವಿದೆ. ಈ ಕುರಿತ ಸ್ಪಷ್ಟತೆಯನ್ನು ಅದು ಸಾರ್ವಜನಿಕಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅದಕ್ಕೆ ಹಿನ್ನಡೆಯಾಗುವುದು ಸ್ಪಷ್ಟ. ಇನ್ನು ಅತಿಯಾದ ಆತ್ಮವಿಶ್ವಾಸದಲ್ಲಿ ಹಾಗೂ ಸಂಘಟನಾತ್ಮಕವಾಗಿ ಒಂದಷ್ಟು ಗೊಂದಲಗಳ ಮಧ್ಯೆ ಪುತ್ತಿಲ ಪರಿವಾರ ಈ ಚುನಾವಣೆಯನ್ನು ಎದುರಿಸಿದ್ದು ಅದು ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ  ಹಿನ್ನಡೆ ಹೊಂದಲು ಪ್ರಮುಖ ಕಾರಣ.  ಕಳೆದ ಗ್ರಾ. ಪಂ ಉಪ ಚುನಾವಣೆ ಸಂದರ್ಭ ಎರಡು ಸಶಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಪುತ್ತಿಲ ಪರಿವಾರ ಈ ಬಾರಿ ಎಡವಿರುವುದು ಸ್ಪಷ್ಟ

ರಾಜಕೀಯ ರಂಗದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿರಬೇಕು ಮೈಯೆಲ್ಲಾ ಎಚ್ಚರವಾಗಿರಬೇಕು  ಹಾಗೂ ಯಾವುದೇ ಕ್ಷಣದಲ್ಲಿ ಮೈಮರೆವಿಗೆ ಅವಕಾಶವಿಲ್ಲ ಎನ್ನುವುದನ್ನು ಅರಿತುಕೊಂಡರೆ ಹಾಗೂ ರಾಜಕೀಯ ಫೊರ್ಸ್‌ ಗಳಿಗೆ ಧಾರ್ಮಿಕ ಕಾರ್ಯಕ್ರಮಕ್ಕಿಂತ ಚುನಾವಣಾ ರಾಜಕೀಯವೇ ಪ್ರಮುಖ ಎನ್ನುವುದನ್ನು ಮನಗಂಡರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೆರವಿಗೆ ನಿಂತ ಎಲ್ಲ ಕಾರ್ಯಕರ್ತರನ್ನು ಹಿತೈಷಿಗಳನ್ನು ಸಮೂಹವಾಗಿ ಕರೆದೊಯ್ಯಲು ಪುತ್ತಿಲ ಪರಿವಾರ ಯಶಸ್ವಿಯಾದರೇ ಅದಕ್ಕೆ ರಾಜಕೀಯ ಭವಿಷ್ಯವಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಾದೆ.

ಆದರೇ ಕೇವಲ ಹಿಂದೂತ್ವ ನರೇಟಿವ್‌ ಹಾಗೂ ಜಿಲ್ಲಾ  ಬಿಜೆಪಿ ನಾಯಕ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಸಹನೆ ವ್ಯಕ್ತಪಡಿಸುವುದರಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ರಾಜಕೀಯವಾಗಿ ಹಾಗೂ ಬೀದಿಯಲ್ಲಿ ಕಾಂಗ್ರೆಸ್‌ ಸರಕಾರವನ್ನಾಗಲಿ ಹಾಗೂ ಸ್ಥಳೀಯ ಶಾಸಕರ ವಿರುದ್ದವಾಗಲಿ ಜನಾಭಿಪ್ರಾಯ ಮೂಡಿಸುವಲ್ಲಿ ಪುತ್ತಿಲ ಪರಿವಾರ ಯಾವುದೇ ಪ್ರಯತ್ನ ಮಾಡಿಲ್ಲ. ಕೇವಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ತನ್ನ ಅಸ್ತಿತ್ವ ಪ್ರದರ್ಶಿಸುವ ಕಾರ್ಯ ಮಾಡಿದ್ದು, ಇದರಿಂದ ರಾಜಕೀಯ ಲಾಭ ಆದಂತಿಲ್ಲ. ಅದು ಇನ್ನೊಂದಷ್ಟು ಅಸ್ತ್ರಗಳನ್ನು ಶಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಜೋಡಿಸಿದಲ್ಲಿ ಮಾತ್ರ ಗೆಲುವು ಪಡೆಯಬಹುದು. ಅಲ್ಲದೇ  ತನ್ನ ರಾಜಕೀಯ ಗೊಂದಲಗಳಿಗೆ  ಅದಷ್ಟು ಬೇಗ ಉತ್ತರ ಕಂಡುಕೊಂಡು, ಕಾರ್ಯಕರ್ತರಿಗೆ ಆ ಬಗ್ಗೆ ಕ್ಯಾರಿಟಿ ನೀಡದಿದ್ದಲ್ಲಿ  ಮುಂದಿನ ಚುನಾವಣೆಗಳು ಕಬ್ಬಿಣ್ಣದ ಕಡಲೆಯಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ನಗರಸಭೆ ಚುನಾವಣೆ ಪುತ್ತಿಲ ಪರಿವಾರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು ಆತ್ಮಾವಲೋಕನಕ್ಕೆ ಪ್ರಶಸ್ತ ಸಮಯ. ರಾಜಕೀಯ ಕ್ಷೇತ್ರದಲ್ಲಿ ಸೋಲು ಹಿನ್ನಡೆ ಸಹಜ. ಆದರೇ ತಪ್ಪುಗಳಿಂದ ಪಾಠ ಕಲಿತರೇ ಮತ್ತೆ ಗೆಲುವಿನ ಟ್ರ್ಯಾಕ್‌ ಗೆ ಮರಳಬಹುದು  

Ad Widget
Click to comment

Leave a Reply

ದಕ್ಷಿಣ ಕನ್ನಡ

Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್‌ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

Published

on

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸುವ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, 2027-28ನೇ ಶೈಕ್ಷಣಿಕ ಸಾಲಿನಲ್ಲಿ ಮೊದಲ ಹಂತವಾಗಿ 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಿಟ್ಟಿನಲ್ಲಿ ಕಾಲೇಜಿನ ಮೂಲಸೌಕರ್ಯ, ಬೋಧನಾ ವ್ಯವಸ್ಥೆ, ಆಸ್ಪತ್ರೆಯ ಸೌಲಭ್ಯಗಳು ಹಾಗೂ ಅಗತ್ಯ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ತಪಾಸಣಾ ಸಮಿತಿ ಶನಿವಾರ ಪುತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿತು. ಪುತ್ತೂರಿನಲ್ಲಿರುವ ಹಳೇಯ ಕೋರ್ಟ್‌ ಕಟ್ಟಡ ಹಾಗೂ ಪುತ್ತೂರು ಸರಕಾರಿ ಆಸ್ಫತ್ರೆಗೆ ತಂಡವು ತೆರಳಿ ಪರಿಶೀಲಿಸಿತ್ತು

Ad Widget

Ad Widget

Ad Widget

Ad Widget

ಶಾಸಕ ಅಶೋಕ್ ಕುಮಾರ್ ರೈ ಅವರ ನಿರಂತರ ಪ್ರಯತ್ನ ಮತ್ತು ಕಾಲೇಜು ಸ್ಥಾಪನೆಯ ನಿಟ್ಟಿನಲ್ಲಿನ ಚಟುವಟಿಕೆಗಳ ನಡುವೆ ನಡೆದಿರುವ ಈ ಪರಿಶೀಲನೆ, ಪುತ್ತೂರು ಮೆಡಿಕಲ್ ಕಾಲೇಜಿನ ಆರಂಭದ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹಂತವೆಂದು ಪರಿಗಣಿಸಲಾಗಿದೆ. ನಿಯೋಗವು ಹಳೇಯ ಕೋರ್ಟ್‌ ಕಟ್ಟಡಕ್ಕೆ ಭೇಟಿ ನೀಡಿದ ವೇಳೆ ಶಾಸಕ ಅಶೋಕ್‌ ರೈಯವರು ಅಲ್ಲಿಗೆ ಆಗಮಿಸಿ ನಿಯೋಗಕ್ಕೆ ಅಗತ್ಯ ಮಾಹಿತಿ ನೀಡಿದರು.

Ad Widget

Ad Widget alt="Ad Widget"/>

Ad Widget

ಮೂರು ಮಂದಿ ತಜ್ಞರಿಂದ ಸಮಗ್ರ ಪರಿಶೀಲನೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಆದೇಶದಂತೆ ಆಗಮಿಸಿದ ಮೂರು ಮಂದಿ ತಜ್ಞರ ತಂಡ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿತು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಸುರೇಶ್ ಎಸ್. ಕನಕಣ್ಣವರ್ ತಂಡದ ಅಧ್ಯಕ್ಷರಾಗಿದ್ದು, ಶಿವಮೊಗ್ಗದ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಿಥುನ್ ಕೆ.ಎಂ. ಹಾಗೂ ಶಿವಮೊಗ್ಗದ ಎಸ್.ಐ.ಎಂ.ಎಸ್.ನ ಡಾ. ರಮೇಶ್ ಬಾಬು ಸದಸ್ಯರಾಗಿದ್ದರು.

Ad Widget

Ad Widget <> Ad Widget

ಕಾಲೇಜಿನ ಬೋಧನಾ ವಿಭಾಗಗಳಿಗೆ ಅಗತ್ಯವಿರುವ ಕೊಠಡಿಗಳು, ಪ್ರಯೋಗಾಲಯಗಳು, ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ, ವೈದ್ಯಕೀಯ ಉಪಕರಣಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ವಸತಿ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ಶಿಕ್ಷಣ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ತಂಡ ಪರಿಶೀಲಿಸಿತು.

ನವೆಂಬರ್ 21ರೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಸಮಗ್ರ ವರದಿಯನ್ನು 24 ಗಂಟೆಗಳ ಒಳಗೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಸಲ್ಲಿಸುವಂತೆ ಕುಲಪತಿಗಳು ಸೂಚನೆ ನೀಡಿದ್ದಾರೆ.

Ad Widget

Ad Widget

6 ಮೃತದೇಹಗಳ ವ್ಯವಸ್ಥೆ; ಮಾನವ ಅಂಗಾಂಗಗಳ ಆಗಮನ

ಮೆಡಿಕಲ್ ಕಾಲೇಜಿನ ಆರಂಭಿಕ ಸಿದ್ಧತೆಗಳ ಭಾಗವಾಗಿ ಅಗತ್ಯ ವೈದ್ಯಕೀಯ ಪರಿಕರಗಳು ಮತ್ತು ಉಪಕರಣಗಳನ್ನು ಪುತ್ತೂರಿಗೆ ತರಿಸಲಾಗುತ್ತಿದೆ. ಶಿವಮೊಗ್ಗ, ಹಾಸನ ಹಾಗೂ ಮಡಿಕೇರಿ ವೈದ್ಯಕೀಯ ಕಾಲೇಜುಗಳಿಂದ ಒಟ್ಟು ಆರು ಮೃತದೇಹಗಳನ್ನು ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರದ ಅಧ್ಯಯನಕ್ಕೆ ಅಗತ್ಯವಿರುವ ಮಾನವ ದೇಹದ ವಿವಿಧ ಅಂಗಾಂಗಗಳೂ ಪುತ್ತೂರಿಗೆ ಆಗಮಿಸಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಡುವ ವ್ಯವಸ್ಥೆ ಮಾಡಲಾಗುತ್ತಿದೆ.

ವಿವಿಧ ವಿಭಾಗಗಳಿಗೆ ಕೊಠಡಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಸನ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ. ಈಗಾಗಲೇ ಆಗಮಿಸಿರುವ ವೈದ್ಯಕೀಯ ಉಪಕರಣಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಷ್ಟು ಉಪಕರಣಗಳು ಹಂತ ಹಂತವಾಗಿ ಬರಲಿವೆ.

92 ವೈದ್ಯರು, 175 ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ

ಮೆಡಿಕಲ್ ಕಾಲೇಜಿನ ಜೊತೆಗೆ ಆಸ್ಪತ್ರೆಯ ಸಾಮರ್ಥ್ಯವನ್ನೂ ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆಗೆ 92 ವೈದ್ಯರು, 175 ಸಿಬ್ಬಂದಿ ಹಾಗೂ 80 ನರ್ಸಿಂಗ್ ಸಿಬ್ಬಂದಿ ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ನೇಮಕಾತಿಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.

ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಸೇಡಿಯಾಪು ನಿವೇಶನದಲ್ಲಿ ಕಟ್ಟಡಗಳು ಸಿದ್ಧಗೊಂಡ ಬಳಿಕ ಕಾಲೇಜಿನ ವಿವಿಧ ಚಟುವಟಿಕೆಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಯೋಜನೆಯಿದೆ.

ಇದರಿಂದ ಪುತ್ತೂರು ಮಾತ್ರವಲ್ಲದೆ ವಿಟ್ಲ, ಕಡಬ, ಬೆಳ್ತಂಗಡಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣದ ಅವಕಾಶಗಳು ಲಭ್ಯವಾಗುವ ನಿರೀಕ್ಷೆಯಿದೆ.

ಎಲ್ಲವೂ ಸರಾಗವಾಗಿ ನಡೆದರೆ ಸೆಪ್ಟೆಂಬರ್ 2027ರಲ್ಲಿ ದಾಖಲಾತಿ

ಪರಿಶೀಲನೆ ಬಳಿಕ ಮಾತನಾಡಿದ ತಪಾಸಣಾ ತಂಡದ ಅಧ್ಯಕ್ಷ ಡಾ. ಸುರೇಶ್ ಎಸ್. ಕನಕಣ್ಣವರ್, “ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕೆಂಬ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸಾಕಷ್ಟು ಪ್ರಯತ್ನ ಮತ್ತು ಹೋರಾಟ ನಡೆಸಿದ್ದಾರೆ. ಅದರ ಫಲವಾಗಿ ಇಂದು ತಪಾಸಣಾ ಪ್ರಕ್ರಿಯೆ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ಬೋಧನಾ ವ್ಯವಸ್ಥೆ, ಆಸ್ಪತ್ರೆಯ ಸೌಕರ್ಯ, ವಿದ್ಯಾರ್ಥಿಗಳ ವಸತಿ, ಬೋಧಕರ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುತ್ತದೆ.

ಎಲ್ಲವೂ ಸರಾಗವಾಗಿ ನಡೆದರೆ 2027ರ ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಸೋಮವಾರ ಸಿಂಡಿಕೇಟ್ ಸಭೆ ನಿಗದಿಯಾಗಿದ್ದು, ಅನುಮೋದನೆಗೆ ಸಂಬಂಧಿಸಿದಂತೆ ಆಂತರಿಕ ಸಮಿತಿಯೂ ಇದೆ. ಪ್ರಸ್ತುತ 75 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಥಳಾವಕಾಶವಿದೆ” ಎಂದು ತಿಳಿಸಿದರು.

ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ. ಲೋಹಿತ್ ಕುಮಾರ್ ಮಾತನಾಡಿ, “ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಕ್ಟೋಬರ್ 8ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದೀಗ ತಜ್ಞರ ತಂಡ ಮೂಲಸೌಕರ್ಯಗಳ ಪರಿಶೀಲನೆ ನಡೆಸುತ್ತಿದೆ. ತಂಡದ ವರದಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಮುಂದೆ ಮಂಡನೆಯಾಗಲಿದೆ.

ಸಿಂಡಿಕೇಟ್‌ನಿಂದ ಸಮ್ಮತಿ ಪತ್ರ ದೊರೆತ ಬಳಿಕ ಕೇಂದ್ರ ಸರ್ಕಾರಕ್ಕೆ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ನವೆಂಬರ್ 30ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ನಂತರ ಫಾರ್ಮ್ ಬಿ ಪ್ರಕಾರ ಸಿಬ್ಬಂದಿ ಹಾಗೂ ಕ್ಲಿನಿಕಲ್ ಮೆಟೀರಿಯಲ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂತ ಹಂತವಾಗಿ ಭರ್ತಿ ಮಾಡಬೇಕಿದೆ. ಸುಮಾರು 63 ದಾಖಲೆಗಳನ್ನು ಡಿಸೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ. ಜನವರಿ ಮೊದಲ ವಾರದಿಂದ ಕೇಂದ್ರ ಸರ್ಕಾರದ ಪರಿಶೀಲನಾ ತಂಡ ಆಗಮಿಸುವ ನಿರೀಕ್ಷೆಯಿದೆ” ಎಂದು ವಿವರಿಸಿದರು.

ಪುತ್ತೂರಿನ ವೈದ್ಯಕೀಯ ಶಿಕ್ಷಣದ ಕನಸಿಗೆ ಹೊಸ ವೇಗ

ಪುತ್ತೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೊಸ ಅವಕಾಶ ಸಿಗಲಿದೆ. ಅದೇ ರೀತಿ ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಸ್ಥಳೀಯವಾಗಿಯೇ ಲಭ್ಯವಾಗುವ ನಿರೀಕ್ಷೆಯಿದೆ.

ಸದ್ಯ ವಿಶ್ವವಿದ್ಯಾಲಯದ ತಪಾಸಣೆ ಪೂರ್ಣಗೊಂಡು ವರದಿ ಸಲ್ಲಿಕೆ, ಸಿಂಡಿಕೇಟ್ ಅನುಮೋದನೆ, ಕೇಂದ್ರ ಸರ್ಕಾರದ ಅನುಮತಿ ಹಾಗೂ ಅಂತಿಮ ಪರಿಶೀಲನೆಗಳ ಹಂತಗಳು ಬಾಕಿಯಿವೆ. ಈ ಎಲ್ಲ ಪ್ರಕ್ರಿಯೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ 2027ರ ಶೈಕ್ಷಣಿಕ ವರ್ಷದಲ್ಲಿ ಪುತ್ತೂರು ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್ ಆರಂಭವಾಗುವ ನಿರೀಕ್ಷೆ ಗರಿಗೆದರಲಿದೆ.

ಶಾಸಕ ಅಶೋಕ್ ಕುಮಾರ್ ರೈ, ವಿಶೇಷ ಅಧಿಕಾರಿ ಡಾ. ಲೋಹಿತ್ ಕುಮಾರ್, ಡಾ. ಶಶಾಂಕ್, ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದು ರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರದೀಪ್, ರಂಜಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ad Widget
Continue Reading

ಮಂಗಳೂರು

Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ

Published

on

Ad Widget

Ad Widget

Ad Widget

Ad Widget

ಬಂಟ್ವಾಳ: ಮಹಿಳೆಗೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ , ಜೀವ ಬೆದರಿಕೆ ಹಾಕಿದ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54 ಸಾವಿರ ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

Ad Widget

Ad Widget

Ad Widget

Ad Widget

Bantwal rape case verdict: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆಯ ಮನೆಯ ನೆರೆಮನೆಯ ನಿವಾಸಿಯಾಗಿದ್ದ ಅನಿಲ್ ಎಂಬಾತ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 92/2021ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376, 448, 323, 504 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget

Ad Widget alt="Ad Widget"/>

Ad Widget

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಆರೋಪಿಯನ್ನು ಪತ್ತೆಹಚ್ಚಿದ್ದರು. ಬಳಿಕ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Ad Widget

Ad Widget <> Ad Widget

ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ರಾಜೇಶ ಮಾರುತಿ ಕಾಮಟೆ ಅವರು ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮೋತಿಲಾಲ ಚೌಧರಿ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.

Continue Reading

ಶಿಕ್ಷಣ

Puttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ

Published

on

Ad Widget

Ad Widget

Ad Widget

Ad Widget

ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ
ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

Ad Widget

Ad Widget alt="Ad Widget"/>

Ad Widget

ಇವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ರಾವ್ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮನಾ ರಾವ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!