ಉದ್ಯೋಗ
Yuvanidhi Scheme : ನಿರುದ್ಯೋಗಿ ಯುವಕರ ಆಶಾಕಿರಣ ಯುವನಿಧಿ ಯೋಜನೆ ಯಾವಾಗ ಜಾರಿ ಗೊತ್ತೆ ? ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು ದಿನಾಂಕ
ನಿರುದ್ಯೋಗಿ ಯುವಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆ ಜಾರಿಗೆ ಬರಲು ಕ್ಷಣ ಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ನೇತ್ರತ್ವದ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದ್ದು , ಐ ದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಯನ್ನು ಈಗಾಗಲೇ ಜಾರಿಗೆ ತಂದಿದೆ ನಿರುದ್ಯೋಗಿ ಪದವೀಧರರು ಹಾಗು ಡಿಪ್ಲೋಮಾ ಹೋಲ್ಡರ್ ಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆ ಇಷ್ಟು ಸಮಯವಾದರೂ ಜಾರಿಗೆ ಬಂದಿರಲಿಲ್ಲ.
ಯುವನಿಧಿಯನ್ನು ಇನ್ನೂ ಜಾರಿಗೆ ತಾರದೇ ಇರುವುದಕ್ಕೆ ವಿಪಕ್ಷಗಳು ಸಿದ್ದರಾಮಯ್ಯ ನೇತ್ರತ್ವದ ಸರಕಾರವನ್ನು ಆಗಾಗ ಟೀಕಿಸುತ್ತಿದ್ದವು . ಇನ್ನು ರಾಜ್ಯದ ನಿರುದ್ಯೋಗಿ ಯುವಕರು ಕೂಡ ನಿರುದ್ಯೋಗ ಭತ್ಯೆ ಸಿಗದೆ ಆಕ್ರೋಶಗೊಂಡಿದ್ದರು. ಇದನ್ನು ಮನಗಂಡ ರಾಜ್ಯ ಸರಕಾರ ಅಡಿ 2022 – 23 ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಪದವೀಧರರಿಗೆ ಯುವನಿಧಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು ಜನವರಿಯಿಂದ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ನಿರುದ್ಯೋಗಿ ಎಂದು ಘೋಷಿಸಿಕೊಂಡ ಎಲ್ಲ ಜಾತಿಯ ಪದವೀಧರರಿಗೆ ಈ ಯೋಜನೆ ಅನ್ವಯ ಆಗಲಿದೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳೂ 3,000 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ ಪ್ರತಿ ತಿಂಗಳೂ 1,500 ರೂ. ಭತ್ಯೆ ಸಿಗಲಿದೆ. ಇದಲ್ಲದೇ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತದೆ . ಈ ಯೋಜನೆಯನ್ನು ಜನವರಿ 2024ರಿಂದ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇ 10ರಷ್ಟು ಭರವಸೆಗಳನ್ನಷ್ಟೇ ಈಡೇರಿಸಿತ್ತು. ಕರ್ನಾಟಕದಲ್ಲಿ ನಡೆದ ಚುನಾವಣೆ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಯೋಜನೆ ಜಾರಿಯೇ ಆಗುವುದಿಲ್ಲ. ಈ ರೀತಿಯ ಘೋಷಣೆಯಿಂದ ರಾಜ್ಯದ ಆರ್ಥಿಕತೆ ಕುಂಠಿತವಾಗುತ್ತದೆ ಎಂದಿದ್ದರು. ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದ ಬಳಿಕವೂ ರಾಜ್ಯದ ಆರ್ಥಿಕತೆ ಸದೃಢವಾಗಿದೆ’ ಎಂದರು.
ಉದ್ಯೋಗ
Constable recruitment: ಕಾನ್‌ಸ್ಟೆಬಲ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ; 3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳು
ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (ಪಿಎಸ್‌ಟಿ) ಹಾಗೂ ಸಹಿಷ್ಣುತೆ ಪರೀಕ್ಷೆ (ಇಟಿ) ಸೆ.28ರಿಂದ ಆರಂಭವಾಗಲಿದೆ. ಪೊಲೀಸ್ ನೇಮಕಾತಿ ವಿಭಾಗವು ವಲಯವಾರು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಬೆಂಗಳೂರು, ಸೆ.25: ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (ಪಿಎಸ್‌ಟಿ) ಹಾಗೂ ಸಹಿಷ್ಣುತೆ ಪರೀಕ್ಷೆ (ಇಟಿ) ಸೆ.28ರಿಂದ ಆರಂಭವಾಗಲಿದೆ. ಪೊಲೀಸ್ ನೇಮಕಾತಿ ವಿಭಾಗವು ವಲಯವಾರು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಉಳಿಕೆ ಮೂಲ ವೃಂದದ (ಆರ್‌ಪಿಸಿ) 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (ಕೆಕೆ) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಹಾಗೂ ಮಂಗಳೂರು ನಗರ ಘಟಕಗಳ ವ್ಯಾಪ್ತಿಯ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಈ ಅಭ್ಯರ್ಥಿಗಳಿಗೆ ಸೆ.28ರಿಂದ ಅ.3ರವರೆಗೆ ಮಂಗಳೂರಿನ ಲಾಲ್‌ಬಾಗ್‌ನ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಕರೆಪತ್ರ ಡೌನ್‌ಲೋಡ್‌ಗೆ ಸೂಚನೆ
ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಕರೆಪತ್ರದಲ್ಲಿ ನಮೂದಿಸಿರುವ ದಿನಾಂಕದಂದು ನಿಗದಿತ ಪರೀಕ್ಷಾ ಕೇಂದ್ರಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪೊಲೀಸ್ ನೇಮಕಾತಿ ವಿಭಾಗ ಸೂಚಿಸಿದೆ.
ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ
ಇದೇ ವೇಳೆ, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ ಹಾಗೂ ಐಆರ್‌ಬಿ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗಾಗಿ ಸೆ.20ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕೇವಲ ಐದು ದಿನಗಳಲ್ಲಿ ಕೆಇಎ ಪ್ರಕಟಿಸಿದೆ.
ಪರೀಕ್ಷೆಯ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಸೆ.27ರೊಳಗೆ ನಿಗದಿತ ಲಿಂಕ್ ಮೂಲಕ ಸಲ್ಲಿಸಬಹುದು ಎಂದು ಕೆಇಎ ತಿಳಿಸಿದೆ.
ಉಳಿಕೆ ಮೂಲ ವೃಂದದ 1,13,390 ಹಾಗೂ ಕಲ್ಯಾಣ ಕರ್ನಾಟಕ ವೃಂದದ 33,061 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆದ ದಿನವೇ ಎಲ್ಲ ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅಂತರ ರಾಜ್ಯ
Oracle-‘ಇಂದು ನಿಮ್ಮ ಕೊನೆಯ ಕೆಲಸದ ದಿನ’; Oracle ಉದ್ಯೋಗಿಗಳಿಗೆ ಮುಂಜಾನೆ ʻಇ-ಮೇಲ್ ʼಶಾಕ್
ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ (Oracle) ಸಂಸ್ಥೆಯ ಉದ್ಯೋಗಿಗಳಿಗೆ ಮಂಗಳವಾರ ಮುಂಜಾನೆ ಕಳುಹಿಸಲಾದ ಇ-ಮೇಲ್‌ವೊಂದು ಆತಂಕ ಮೂಡಿಸಿದೆ. “ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇಂದು ನಿಮ್ಮ ಕೊನೆಯ ಕೆಲಸದ ದಿನ” ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ಬಿಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ನವದೆಹಲಿ, ಸೆ.16: ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ (Oracle) ಸಂಸ್ಥೆಯ ಉದ್ಯೋಗಿಗಳಿಗೆ ಮಂಗಳವಾರ ಮುಂಜಾನೆ ಕಳುಹಿಸಲಾದ ಇ-ಮೇಲ್‌ವೊಂದು ಆತಂಕ ಮೂಡಿಸಿದೆ. “ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇಂದು ನಿಮ್ಮ ಕೊನೆಯ ಕೆಲಸದ ದಿನ” ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ಬಿಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಉದ್ಯೋಗಿಗಳಿಗೆ ಈ ಇ-ಮೇಲ್ ಕಳುಹಿಸಲಾಗಿದೆ ಎನ್ನಲಾಗಿದ್ದು, ಸಂಸ್ಥೆಯ ವ್ಯಾಪಕ ಸಾಂಸ್ಥಿಕ ಪುನರ್‌ರಚನೆಯ ಭಾಗವಾಗಿ ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ನಿರ್ದಿಷ್ಟ ಉದ್ಯೋಗಿಯನ್ನು ವೈಯಕ್ತಿಕವಾಗಿ ಕೆಲಸದಿಂದ ತೆಗೆದುಹಾಕಲು ಕಾರಣವೇನು ಎಂಬುದನ್ನು ಇ-ಮೇಲ್‌ನಲ್ಲಿ ವಿವರಿಸಲಾಗಿಲ್ಲ.
ಉದ್ಯೋಗಿಗಳ ಕಂಪ್ಯೂಟರ್, ಇ-ಮೇಲ್, ವಾಯ್ಸ್‌ಮೇಲ್ ಹಾಗೂ ಫೈಲ್‌ಗಳಿಗೆ ಇರುವ ಲಾಗಿನ್ ಪ್ರವೇಶವನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಪರಿಹಾರಧನ ಹಾಗೂ ಇತರ ಅಗತ್ಯ ದಾಖಲೆಗಳನ್ನು ಪಡೆಯಲು ವೈಯಕ್ತಿಕ ಇ-ಮೇಲ್ ವಿಳಾಸವನ್ನು ನೀಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ.
AI, ಕ್ಲೌಡ್ ಮೂಲಸೌಕರ್ಯ ವೆಚ್ಚದ ನಡುವೆ ಲೇಆಫ್
ಕೃತಕ ಬುದ್ಧಿಮತ್ತೆ (AI) ಹಾಗೂ ಕ್ಲೌಡ್ ಮೂಲಸೌಕರ್ಯ ಕ್ಷೇತ್ರದಲ್ಲಿ ಒರಾಕಲ್ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವ ಸಂದರ್ಭದಲ್ಲೇ ಈ ಹೊಸ ಸುತ್ತಿನ ಉದ್ಯೋಗ ಕಡಿತ ನಡೆದಿದೆ ಎಂದು ವರದಿ ತಿಳಿಸಿದೆ. ಆದರೆ, ಪ್ರಸ್ತುತ ಸುತ್ತಿನಲ್ಲಿ ಎಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬುದನ್ನು ಒರಾಕಲ್ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಈಗಾಗಲೇ 21 ಸಾವಿರ ಉದ್ಯೋಗಿಗಳ ಕಡಿತ
2026ರ ಆರ್ಥಿಕ ವರ್ಷದಲ್ಲಿ ಒರಾಕಲ್ ತನ್ನ ಜಾಗತಿಕ ಸಿಬ್ಬಂದಿ ಬಳಗದ ಸುಮಾರು ಶೇ.13ರಷ್ಟು, ಅಂದರೆ ಸುಮಾರು 21,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು ಎಂದು ವರದಿಯಾಗಿದೆ.
ಈ ಪುನರ್‌ರಚನಾ ಪ್ರಕ್ರಿಯೆಗಾಗಿ ಕಂಪನಿಯ ವೆಚ್ಚವು 2.8 ಬಿಲಿಯನ್ ಡಾಲರ್‌ವರೆಗೆ ಹೆಚ್ಚಾಗಿದೆ ಎನ್ನಲಾಗಿದೆ. ಉದ್ಯೋಗ ಕಡಿತಗಳ ಬಳಿಕ ಒರಾಕಲ್‌ನ ಜಾಗತಿಕ ಸಿಬ್ಬಂದಿ ಸಂಖ್ಯೆ ಸುಮಾರು 1.41 ಲಕ್ಷಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.
ಉದ್ಯೋಗ
Job opportunities-ಪುತ್ತೂರು-ಸುಳ್ಯದಲ್ಲಿ ಉದ್ಯೋಗಾವಕಾಶ; ಸೆ.13ರಂದು ವಿದ್ಯಾಮಾತಾ ಅಕಾಡೆಮಿಯಲ್ಲಿ ನೇರ ಸಂದರ್ಶನ
ಪುತ್ತೂರು ಮತ್ತು ಸುಳ್ಯ ಭಾಗದಲ್ಲಿ ಕಾರ್ಯನಿರ್ವಹಿಸಲು MSW ಹಾಗೂ ಯಾವುದೇ ಪದವೀಧರ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಿದ್ದು, ಬರುವ ಸೆಪ್ಟೆಂಬರ್ 13ರಂದು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಪುತ್ತೂರು: ಪುತ್ತೂರು ಮತ್ತು ಸುಳ್ಯ ಭಾಗದಲ್ಲಿ ಕಾರ್ಯನಿರ್ವಹಿಸಲು MSW ಹಾಗೂ ಯಾವುದೇ ಪದವೀಧರ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಿದ್ದು, ಬರುವ ಸೆಪ್ಟೆಂಬರ್ 13ರಂದು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಪ್ರತಿಷ್ಠಿತ NGO ಒಂದರ ‘ಪ್ರಾಜೆಕ್ಟ್ ಆಫೀಸರ್’ (Project Officer) ಹುದ್ದೆಗೆ MSW ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಸಂಸ್ಥೆಯ ‘ಕಚೇರಿ ಸಿಬ್ಬಂದಿ’ (Office Staff) ಹುದ್ದೆಗೆ ಅತ್ಯುತ್ತಮ ಕಂಪ್ಯೂಟರ್ ಜ್ಞಾನ ಹೊಂದಿರುವ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
ಸಂದರ್ಶನದ ವಿವರ:
ದಿನಾಂಕ: 13 ಸೆಪ್ಟೆಂಬರ್ 2026, ಭಾನುವಾರ
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ವಿದ್ಯಾಮಾತಾ ಅಕಾಡೆಮಿ, APMC ರಸ್ತೆ, ಪುತ್ತೂರು, ದ.ಕ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅಪ್‌ಡೇಟೆಡ್ ಬಯೋಡೇಟಾ (Resume) ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ (Photo) ನೇರ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
-
ಬಿಗ್ ನ್ಯೂಸ್20 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಪುತ್ತೂರು17 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಮಂಗಳೂರು19 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಅಂತರ ರಾಜ್ಯ23 hours agoECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
-
ಬಿಗ್ ನ್ಯೂಸ್18 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ19 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ರಾಜ್ಯ22 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!
-
ಅಪರಾಧ18 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ


















