Connect with us

ಸುಳ್ಯ

Dowry harassment ಸುಳ್ಯ : ಡೈರಿ ರಿಚ್‌ ಐಸ್‌ ಕ್ರಿಂ ಕಂಪೆನಿಯ ಮಾಲಕರ ಸೊಸೆ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್ – ವರದಕ್ಷಿಣೆ ಕಿರುಕುಳ, ಮಾನಹಾನಿ ಆರೋಪ : ಪತಿ, ಮಾವ, ಅತ್ತೆ ಸಹಿತ ಐವರ ಬಂಧನ;

ಇನ್ನೂ ಐಶ್ವರ್ಯ ಸಾವಿನ ಬಳಿಕ ರಾಜೇಶ್‌ ಮತ್ತು ಆತನ ಮನೆ ಮಂದಿ ಗೋವಾ ಹಾಗೂ ಮುಂಬೈನಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಐಶ್ವರ್ಯ ತವರು ಮನೆಯವರು ಸಾಕಷ್ಟು ಅಸ್ತಿವಂತರಾಗಿದ್ದು, ಗಂಡನ ಮನೆಯವರು ಅರ್ಥಿಕವಾಗಿ ಸಬಲರೇ ಆಗಿದ್ದರು. ಅಲ್ಲದೇ ಐಶ್ವರ್ಯ ಒಳ್ಳೆ ಓದಿಕೊಂಡಿದ್ದು, ಸ್ವಂತ ಜೀವನ ನಡೆಸುವಷ್ಟು ಪ್ರಬುಧ್ದಳಾಗಿದ್ದಳು. ಇಷ್ಟಿದ್ದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿತ್ತು.

Published

on



Ad Widget

Ad Widget

Ad Widget

Ad Widget

ಬೆಂಗಳೂರು, ನ.3: ಸುಳ್ಯ ಮೂಲದ ಬೆಂಗಳೂರಿನ ಪ್ರಖ್ಯಾತ ಉದ್ಯಮಿಯ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಹತ್ವದ ತಿರುವು ಪಡೆದಿದೆ. ʼಡೈರಿ ರಿಚ್‌ʼ ಎಂಬ ಪ್ರಖ್ಯಾತ ಐಸ್ ಕ್ರಿಂ ತಯಾರಿಕ ಕಂಪೆನಿಯ ಮಾಲಕ, ಸುಳ್ಯದ ಗಿರಿಯಪ್ಪ ಎಂಬವರ ಸೊಸೆ ಐಶ್ವರ್ಯ ಆ 26 ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಐವರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

Ad Widget

Ad Widget

Ad Widget

Ad Widget

ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ಬಂಧಿತರು. ವರದಕ್ಷಿಣೆಗೆ ಕಿರುಕುಳ. ಮಾನಹಾನಿ ಹಾಗೂ ನಿರಂತರ ಮಾನಸಿಕ ಹಿಂಸೆ ನೀಡುವ ಮಾಡುವ ಮೂಲಕ ಆತ್ಮಹತ್ಯೆಗೆ ಪ್ರಚೋಧನೆ ನೀಡಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. ಐಶ್ವರ್ಯ ತಾಯಿ ಉಷಾರವರು ಮಗಳ ಸಾವಿಗೆ ಒಟ್ಟು 9 ಮಂದಿ ಕಾರಣ ಎಂದು ತಿಳಿಸಿ ಠಾಣೆಗೆ ದೂರು ನೀಡಿದ್ದರು

Ad Widget

Ad Widget

Ad Widget alt="Ad Widget"/>

Ad Widget

ಮೃತ ಐಶ್ವರ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ತಾಲೂಕಿನ ಉಬರಡ್ಕದ ಎಂ ಎಸ್‌ ಸುಬ್ರಹ್ಮಣ್ಯ ಮದುವೆಗದ್ದೆ ಮತ್ತು ಉಷಾ ದಂಪತಿ ಪುತ್ರಿ. ಈಕೆಯ ವಿವಾಹ 4 ವರ್ಷಗಳ ಹಿಂದೆ ಸುಳ್ಯ ತಾಲೂಕು ಕನಕಮಜಲು ಕಾಪಿಲ ನಿವಾಸಿ ಗಿರಿಯಪ್ಪ ಎಂಬವರ ಪುತ್ರ ರಾಜೇಶ್‌ ಎಂಬವರೊಂದಿಗೆ ನಡೆದಿತ್ತು. ಗಿರಿಯಪ್ಪನವರು ಆಗರ್ಭ ಶ್ರೀಮಂತರಾಗಿದ್ದು ಪ್ರತಿಷ್ಟಿತ ಡೈರಿ ರಿಚ್‌ ಕಂಪೆನಿಯ ಮಾಲಕರು. ಪ್ರಸ್ತುತ ಅದನ್ನು ರಾಜೇಶ್‌ ನೋಡಿಕೊಳ್ಳುತ್ತಿದ್ದರು. ಐಶ್ವರ್ಯವರು ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಕಲಿತು ಮತ್ತು ಅಮೇರಿಕಾದಲ್ಲಿ ವ್ಯಾಸಂಗ ಮಾಡಿ ಎಂಬಿಎ ಸ್ನಾತಕೋತರ ಪದವಿ ಪಡೆದಿದ್ದರು.‌

Ad Widget

Ad Widget <> Ad Widget

ಡೆತ್‌ ನೋಟ್‌ :



Ad Widget

ಪತಿಯ ಮನೆಯವರು ಹಾಗೂ ಐಶ್ವರ್ಯ ಮನೆಯವರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅ 1 ರಂದು ಆಕೆ ಪತಿಯ ಮನೆಯಿಂದ ಬೆಂಗಳೂರಿನ ತನ್ನ ತವರು ಮನೆಗೆ ಬಂದಿದ್ದರು. ಅ 26 ರಂದು ಆಕೆ 3 ಪುಟದ ಡೆತ್‌ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯ ಸಂಸ್ಕಾರ ಉಬರಡ್ಕದ ತಂದೆ ಮನೆಯಲ್ಲಿ ನೆರವೇರಿಸಲಾಗಿತ್ತು.

Ad Widget

Ad Widget

ಮದುವೆ ಮಾಡಿಸಿದವರೇ ಮನೆ ಮುರಿದರು :

ಡೈರಿ ರಿಚ್‌ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಈತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದ. ಆದರೆ ಆ ಬಳಿಕ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ಇದೆ ಕಾರಣಕ್ಕೆ ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ಸುಬ್ರಮಣಿ ಹುಳಿ ಹಿಂಡಿದ್ದಾರೆ ಎನ್ನಲಾಗುತ್ತಿದೆ

ರವೀಂದ್ರ ಕುಟುಂಬ ಐಶ್ಯರ್ಯ ಚಾರಿತ್ರ್ಯ ವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರಂತೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ.

ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್​ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ತಾನು ದುಡಿದ ಹಣದಲ್ಲಿ ಗಂಡನಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳಂತೆ. ಆದರೆ ಕುಟುಂಬಸ್ಥರ ಮಾತನ್ನ ಕೇಳಿ ಪತಿ ರಾಜೇಶ್ ಕೂಡ ಐಶ್ವರ್ಯಳನ್ನು ನಿಂದಿಸುತ್ತಿದ್ದನಂತೆ.

ಮನನೊಂದ ಐಶ್ವರ್ಯ, 20 ದಿನಗಳ ಹಿಂದೆ ತವರು ಸೇರಿದ್ದಳು. ಅಲ್ಲದೆ, ಅ. 26 ರಂದು ಮನನೊಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯತೆಗೆ ಶರಣಾಗಿದ್ದಳು. ಘಟನೆ ಸಂಬಂಧ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ, ಸಂಸಾರ ಒಡೆಯಲು ಹುಳಿ ಹಿಂಡಿದ ರವೀಂದ್ರ, ಗೀತಾ, ಶಾಲಿನ, ಓಂಪ್ರಕಾಶ್ ಎಂಬುವವರ ಮೇಲೂ ದೂರು ದಾಖಲಿಸಿದ್ದರು.

ಸಾವಿನ ಬಳಿಕ ಪಾರ್ಟಿ

ಇನ್ನೂ ಐಶ್ವರ್ಯ ಸಾವಿನ ಬಳಿಕ ರಾಜೇಶ್‌ ಮತ್ತು ಆತನ ಮನೆ ಮಂದಿ ಗೋವಾ ಹಾಗೂ ಮುಂಬೈನಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಐಶ್ವರ್ಯ ತವರು ಮನೆಯವರು ಸಾಕಷ್ಟು ಅಸ್ತಿವಂತರಾಗಿದ್ದು, ಗಂಡನ ಮನೆಯವರು ಅರ್ಥಿಕವಾಗಿ ಸಬಲರೇ ಆಗಿದ್ದರು. ಅಲ್ಲದೇ ಐಶ್ವರ್ಯ ಒಳ್ಳೆ ಓದಿಕೊಂಡಿದ್ದು, ಸ್ವಂತ ಜೀವನ ನಡೆಸುವಷ್ಟು ಪ್ರಬುಧ್ದಳಾಗಿದ್ದಳು. ಇಷ್ಟಿದ್ದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿತ್ತು.

Ad Widget
Click to comment

Leave a Reply

ಸುಳ್ಯ

Sevaratna-ಕಲ್ಪವೃಕ್ಷದ ಕಾಯಕಯೋಗಿಗೆ ‘ಸೇವಾರತ್ನ’ ಗೌರವ; 20 ವರ್ಷಗಳ ನಿರಂತರ ಕಾಯಕಕ್ಕೆ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget

Ad Widget

ಸುಳ್ಯ: ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ‘ಸೇವಾರತ್ನ ಪ್ರಶಸ್ತಿ’ಗೆ ಅಚ್ಚುತ ನಾಯಕ್ ಕಿಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ.
ಒಕ್ಟೊಬರ್ 9ರಂದು ಸಂಜೆ 4.30ಕ್ಕೆ ಮoಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Ad Widget

Ad Widget <> Ad Widget

ತೆಂಗಿನ ಮರವೇರುವುದು ಸುಲಭದ ಕೆಲಸವಲ್ಲ. ಮರದ ಎತ್ತರ, ಗಾಳಿಯ ವೇಗ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಮರದ ತುದಿಗೆ ಏರಿ ತೆಂಗಿನಕಾಯಿಗಳನ್ನು ಕೊಯ್ದು ಕೆಳಗಿಳಿಸುವ ಈ ಕಾಯಕಕ್ಕೆ ಧೈರ್ಯ, ದೈಹಿಕ ಸಾಮರ್ಥ್ಯ, ಕೌಶಲ್ಯ ಹಾಗೂ ಅಪಾರ ಅನುಭವದ ಅಗತ್ಯವಿದೆ. ಇಂತಹ ಅಪಾಯಭರಿತ ಕಾಯಕವನ್ನು ಅಚ್ಚುತ ನಾಯಕ್ ಅವರು ಕಳೆದ 20 ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕಳಂಜ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ವಿವಿಧ ಪ್ರದೇಶಗಳಿಗೆ ತೆರಳಿ, ರೈತರು ಮತ್ತು ಸಾರ್ವಜನಿಕರ ತೆಂಗಿನ ಮರಗಳಿಂದ ತೆಂಗಿನಕಾಯಿಗಳನ್ನು ಕೊಯ್ದು ತೆಗೆದು ಕೊಡುವ ಸೇವೆಯನ್ನು ಅವರು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತ್ಯಗತ್ಯವಾಗಿರುವ ಈ ಸೇವೆಯನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಮಾಡುತ್ತಿರುವುದು ಅವರ ಕಾಯಕದ ವಿಶೇಷತೆಯಾಗಿದೆ.



Ad Widget

ಮೌನ ಸಾಧಕರ ಸೇವೆಗೆ ಮತ್ತೊಂದು ಗೌರವ
ಅಚ್ಚುತ ನಾಯಕ್ ಅವರ ಸೇವೆಯನ್ನು ಈಗಾಗಲೇ ಹಲವು ಸಂಸ್ಥೆಗಳು ಗುರುತಿಸಿವೆ. ರೋಟರಿ ಕ್ಲಬ್ ಬೆಳ್ಳಾರೆ ಸಂಸ್ಥೆಯು 2018–19ನೇ ಸಾಲಿನಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿತ್ತು.
ಅದೇ ರೀತಿ ಜೆಸಿಐ ಬೆಳ್ಳಾರೆ ಸಂಸ್ಥೆಯು 2025ರಲ್ಲಿ ಅವರ ನಿರಂತರ ಹಾಗೂ ಶ್ರಮದಾಯಕ ಸೇವೆಯನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿತ್ತು.

Ad Widget

Ad Widget

ಯಾವುದೇ ಪ್ರಚಾರದ ಹಿಂದೆ ಹೋಗದೆ, ತನ್ನ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿದಿನವೂ ದುಡಿಯುತ್ತಿರುವ ಅಚ್ಚುತ ನಾಯಕ್ ಅವರು ನಿಜವಾದ ಮೌನ ಕಾಯಕಯೋಗಿ. ತೆಂಗಿನ ಮರದ ತುದಿಯಲ್ಲಿ ನಿಂತು ಅವರು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಧೈರ್ಯ, ಪರಿಶ್ರಮ, ಕೌಶಲ್ಯ ಮತ್ತು ಕುಟುಂಬದ ಬದುಕಿಗಾಗಿ ನಡೆಸುವ ಪ್ರಾಮಾಣಿಕ ಹೋರಾಟವಿದೆ.

ಕಲ್ಪವೃಕ್ಷದೊಂದಿಗೆ ಎರಡು ದಶಕಗಳ ಕಾಲ ನಂಟು ಬೆಳೆಸಿಕೊಂಡಿರುವ ಅಚ್ಚುತ ನಾಯಕ್ ಅವರ ಕಾಯಕವು ಗ್ರಾಮೀಣ ಶ್ರಮಜೀವಿಗಳ ಬದುಕಿನ ಪ್ರತೀಕವಾಗಿದೆ. ರೈತರ ಅಗತ್ಯಕ್ಕೆ ಸ್ಪಂದಿಸುತ್ತಾ, ಅಪಾಯವನ್ನು ಲೆಕ್ಕಿಸದೆ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಅವರ ಸೇವೆಗೆ ‘ಸೇವಾರತ್ನ’ ಪ್ರಶಸ್ತಿ ಮತ್ತೊಂದು ಸಾರ್ಥಕ ಗೌರವವಾಗಿದೆ.

ಕಾಯಕಕ್ಕೆ ಸಂದ ಸಾರ್ಥಕ ಗೌರವ
ಕಳೆದ 20 ವರ್ಷಗಳಿಂದ ತೆಂಗಿನ ಮರದ ತುದಿಯಲ್ಲಿ ಬೆವರು ಸುರಿಸಿ, ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಾದ ಸೇವೆಯನ್ನು ಸಲ್ಲಿಸುತ್ತಿರುವ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ದೊರೆಯುತ್ತಿರುವ ‘ಸೇವಾರತ್ನ’ ಪ್ರಶಸ್ತಿ, ಅವರ ಕಾಯಕನಿಷ್ಠೆಗೆ ಸಂದ ಗೌರವ ಮಾತ್ರವಲ್ಲದೆ, ಗ್ರಾಮೀಣ ಶ್ರಮಜೀವಿಗಳ ಪರಿಶ್ರಮಕ್ಕೂ ಸಂದ ಗೌರವವಾಗಿದೆ.

ಕಲ್ಪವೃಕ್ಷದ ಕಾಯಕಯೋಗಿಯ ಎರಡು ದಶಕಗಳ ನಿರಂತರ ಸೇವೆಗೆ ಇದೀಗ ‘ಸೇವಾರತ್ನ’ದ ಗೌರವದ ಕಿರೀಟ ದೊರೆತಿದೆ.

Ad Widget
Continue Reading

ಸುಳ್ಯ

ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.



Ad Widget

ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

ಸುಳ್ಯ

Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ

Published

on



Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading