Uncategorized
MESCOM Recruitment 2023: ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ ? ಮೆಸ್ಕಾಂನ 200 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
MESCOM Recruitment 2023: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (Mangalore Electricity Supply Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 200 ಅಪ್ರೆಂಟಿಸ್ (Apprentice) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು ಸೆಪ್ಟೆಂಬರ್ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್
ಹುದ್ದೆ : ಅಪ್ರೆಂಟಿಸ್
ಒಟ್ಟು ಹುದ್ದೆ : 200
ವಿದ್ಯಾರ್ಹತೆ : ಬಿಇ/ಬಿ.ಟೆಕ್, ಡಿಪ್ಲೊಮಾ
ವೇತನ ಮಾಸಿಕ : ₹ 9,000
ಉದ್ಯೋಗದ ಸ್ಥಳ : ಮಂಗಳೂರು
ಸಂದರ್ಶನ ನಡೆಯುವ ದಿನ :ಸೆಪ್ಟೆಂಬರ್ 12, 2023
ಹುದ್ದೆಯ ಮಾಹಿತಿ:
ಗ್ರಾಜುಯೇಟ್ ಅಪ್ರೆಂಟಿಸ್- 70
ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- 65
ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- 65
ವಿದ್ಯಾರ್ಹತೆ:
ಗ್ರಾಜುಯೇಟ್ ಅಪ್ರೆಂಟಿಸ್- ಬಿಇ/ಬಿ.ಟೆಕ್
ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- ಡಿಪ್ಲೊಮಾ
ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- ಬಿಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ
ವೇತನ:
ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹ 9,000
ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- ಮಾಸಿಕ ₹ 8,000
ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹ 9,000
ಉದ್ಯೋಗದ ಸ್ಥಳ: ಮಂಗಳೂರು
ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ :
https://docs.google.com/forms/d/e/1FAIpQLSfOBcDWiITU4xZYeXmrZv_T3MyItXFa3KrHcScf1Z2LH8BDkw/viewform
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/08/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 12, 2023
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿಗೆ ‘ಅಂಬಿಯೋರ- 2026’; ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ
ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸ್ವಿನಿಕಾ ವಿಯೋಲಾ ಕ್ರಾಸ್ತಾ ಹಾಗೂ ಧ್ಯಾನ್ ಬಿ ಪ್ರಥಮ, ಪ್ರಾಡಕ್ಟ್ ಇನ್ನೊವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಿವಾನಿ ಹಾಗೂ ಗಾನವಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅದ್ವಿತಿ ಜಿ ಹಾಗೂ ಎ ಜಿ ಕೃತಿಕಾ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವೇದಿತಾ ಕೆ ಮತ್ತು ತನುಶ್ರೀ ಬಿ ದ್ವಿತೀಯ, ಬಿಸ್ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ಹೆಫ್ಜಿಬಾ ಎಂ ರಿನ್ಸಾನ್ ಹಾಗೂ ಪ್ರೀತಾ ಎ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಜ್ನಾಜ್ ಮತ್ತು ಹಲೀಮತ್ ಸೌಧ ದ್ವಿತೀಯ ಹಾಗೂ ಮಿನಿ ಮಿಲಿಟಿಯ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಹಾದ್ ಅಜಾರ್ ಮತ್ತು ಮೊಹಮ್ಮದ್ ರಫಾಜ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.
Uncategorized
Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಮಾತನಾಡಿದರು.

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ ಬಗ್ಗೆ ಮಾತ್ರವಲ್ಲ. ಇಲ್ಲಿ ವಿದ್ಯಾರ್ಥಿಗಳು ಉದ್ಯಮ ನಡೆಸುವಾಗ ಇರಬೇಕಾದ ಕೌಶಲ್ಯಗಳು, ಗ್ರಾಹಕರ ಮನಸ್ಥಿತಿ ಮತ್ತು ಅವರೊಂದಿಗೆ ವ್ಯವಹರಿಸಬೇಕಾದ ರೀತಿಯನ್ನು ಮೇಳಗಳಿಂದ ತಿಳಿದುಕೊಳ್ಳಬಹುದು. ಇದರ ನಡುವೆ ಬರುವ ಸೋಲು-ಗೆಲುವುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಬೇಕು ಎಂದು ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಗೌರವ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಉದ್ದಿಮೆಯ ಬಗ್ಗೆ ಸೈದ್ಧಾಂತಿಕವಾಗಿ ಕಲಿತ ವಿಚಾರಗಳು ಇಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಒಂದು ಉದ್ದಿಮೆಯನ್ನು ನಡೆಸಬೇಕಾದರೆ ಅದರಲ್ಲಿರುವಂತಹ ಕಷ್ಟ-ಸುಖಗಳನ್ನು ಅರಿಯಲು ಇಂತಹ ಮೇಳಗಳು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಉಪಸ್ಥಿತರಿದ್ದರು.
ಸ್ವಾದಸಂಭ್ರಮ ಆಹಾರ ಮೇಳ-2026ರ ವಿಜೇತರು:
ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಫ್ರೋಜನ್ ಡಿಲೈಟ್ ತಂಡ ಪ್ರಥಮ ಸ್ಥಾನ, ಬೈಟ್ ಬೈ ಬೈಟ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ನೈರ್ಮಲ್ಯ ಕಾಪಾಡುವಿಕೆ ವಿಭಾಗದಲ್ಲಿ ಸ್ವದೇಶೀ ಸ್ವಾದ್ ತಂಡ, ಗ್ರಾಹಕರೊಂದಿಗೆ ಉತ್ತಮ ಸಂವಹನ ವಿಭಾಗದಲ್ಲಿ ಫ್ಲೇವರ್ ತಂಡ, ಉತ್ತಮ ಪೋಸ್ಟರ್ ವಿಭಾಗದಲ್ಲಿ ಫ್ಲೇವರ್ ಹಂಟರ್ಸ್ ತಂಡ ಹಾಗೂ ಉತ್ತಮ ರೀಲ್ಸ್ ವಿಭಾಗದಲ್ಲಿ ಸ್ವದ್ಘಾಮ್ ತಂಡ ಪ್ರಶಸ್ತಿ ಪಡೆದಿಕೊಂಡಿದೆ.
ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ಕೆ. ಕೃತಿಕಾ ನಿರ್ವಹಿಸಿದರು.
Uncategorized
Ashok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.

ಪುತ್ತೂರು: ಈ ಭಾಗದ ಜನರು ರಸ್ತೆಯಿಲ್ಲದೆ ಸುಮಾರು 50 ವರ್ಷಗಳಿಂದ ತೊಂದರೆಯಲ್ಲಿದ್ದರು, ಇಲ್ಲಿ ಸುಮಾರು ಹತ್ತು ಮನೆಗಳಿದೆ, ಮನೆ ಕಟ್ಟುವಾಗ ಇವರೆಲ್ಲಾ ಕಲ್ಲನ್ನು ಕಾಲು ದಾರಿಯ ಮೂಲಕ ಹೊತ್ತುಕೊಂಡೇ ಹೋಗಿದ್ದು, ವಾಹನ ಹತ್ತ ಬೇಕಾದರೆ ಒಂದಷ್ಟು ದೂರ ನಡೆದುಕೊಂಡೇ ಬರಬೇಕಾದ ಸ್ಥಿತಿ. ಇದು ಪೆರುವಾಯಿ ಗ್ರಾಮದ ಬದ್ಯಾರಿನ ಕಥೆ.
ಇವರು ರಸ್ತೆಗಾಗಿ ಮನವಿ ಹಾಗೂ ಹೋರಾಟವನ್ನು ಮಾಡುತ್ತಲೇ ಇದ್ದರು. ಆದರೆ ರಸ್ತೆ ನಿರ್ಮಾಣವಾಗುವಲ್ಲಿ ಖಾಸಗಿ ಜಾಗದ ತಕರಾರಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಅನೇಕ ಜನಪ್ರತಿನಿಧಿಗಳು ಪ್ರಯತ್ನ ಮಾಡಿದ್ದರು ಆದರೆ ಯಾರಿದಂಲೂ ಸಾಧ್ಯವಾಗಿಲ್ಲ, ಕೆಲವರು ಭರವಸೆಯನ್ನು ಮಾತ್ರ ಕೊಟ್ಟಿದ್ದರು.
ಶಾಸಕ ಅಶೋಕ್ ರೈ ಭೇಟಿ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.
ಶಾಸಕರಿಗೆ ಸನ್ಮಾನ
ವಿವಾದ ಇತ್ಯರ್ಥಪಡಿಸಿ ೫೦ ವರ್ಷಗಳ ಹಿಂದಿನ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಬದ್ಯಾರು ರಸ್ತೆ ಫಲಾನುಭವಿಗಳು ಸನ್ಮಾನವನ್ನು ಮಾಡಿದ್ದಾರೆ.
ಬದ್ಯಾರ್‌ನಿವಾಸಿಗಳು ತಮ್ಮ ಕಷ್ಟವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ರಸ್ತೆ ಇಲ್ಲದೆ ಹತ್ತು ಕುಟುಂಬಗಳು ಸಂಕಷ್ಟದಲ್ಲಿತ್ತು ಮಾತ್ರವಲ್ಲದೆ ಪಕ್ಕದಲ್ಲೇ ಒಂದು ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಜಾಗದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿದಾಗ ಅವರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಮೂಲಕ ದೊಡ್ಡ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಬೇಡಿಕೆ ಈಡೇರಿಸಿದ್ದೇನೆ, ಅನುದಾನವನ್ನು ನೀಡಿದ್ದೇನೆ ಮುಂದೆ ಅವರೆಲ್ಲರೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು
ರಸ್ತೆ ಸಂಪರ್ಕ ಇಲ್ಲದೆ 50 ವರ್ಷದಿಂದ ಪರದಾಡುತ್ತಿದ್ದೇವೆ, ನಾವು ಬಿಜೆಪಿ ಶಾಸಕರಿಗೆ, ಮುಖಂಡರಿಗಳಿಗೆ ಮನವಿ ಮಾಡಿದ್ದೆವು, ನಾವು ಬಿಜೆಪಿ ಕಾರ್ಯಕರ್ತರಾದರೂ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿರಲಿಲ್ಲ. ನಾವು ಶಾಸಕ ಅಶೋಕ್ ರೈ ಕಚೇರಿಗೆ ಈ ವಿಚಾರವನ್ನು ತಿಳಿಸಲು ಹೋದಾಗ ಕೆಲವರು ನಮ್ಮನ್ನು ಛೇಡಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರಾದ ಕಾರಣ ನಿಮ್ಮ ಕೆಲಸ ಶಾಸಕರು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ನಾವು ಮುಂದೆ ಅಶೋಕ್ ರೈ ಜೊತೆ ಇರುತ್ತೇವೆ, ಶಾಸಕರು ಮಾಡಿದ ಈ ಉಪಕಾರವನ್ನು ಮರೆಯುವುದೇ ಇಲ್ಲ.
ಜಯರಾಮ, ಬದ್ಯಾರ್ ಫಲಾನುಭವಿ
ಯಾವ ಜನಪ್ರತಿನಿಧಿಯಿಂದಲೂ ಮಾಡಲಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಪಕ್ಷ ಬೇದವಿಲ್ಲದೆ ಬೇಡಿಕೆಯನ್ನು ಈಡೇರಿಸಿದ್ದಾರೆ, ಇವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವು ಖಂಡಿತಾ ಕೆಲಸ ಮಾಡುತ್ತೇವೆ.
ಶೀಲಾ ರೈ , ಫಲಾನುಭವಿ
-
ಬಿಗ್ ನ್ಯೂಸ್19 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು22 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
ನಿಧನ ವಾರ್ತೆ23 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
Uncategorized23 hours agoAshok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ಅಪರಾಧ24 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ22 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್23 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ
-
ಅಪರಾಧ24 hours agoMangalore-ಮಂಗಳೂರು: ನಕಲಿ ಪಾಸ್ಪೋರ್ಟ್ ಪ್ರಕರಣ; 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ


















