Connect with us

ಜೀವನಶೈಲಿ

Gold Rate Today : ಭಾರತದಲ್ಲಿ ಗೋಲ್ಡ್‌ ರೇಟ್ ಎಷ್ಟಿದೆ? ಇಳಿದ ಬೆಳ್ಳಿ ದರ

Todays Gold rate : ಆಗಸ್ಟ್ 5 2023(August 5 2023) ಇಂದು ವಿದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rates) ತುಸು ಇಳಿಕೆಯಾಗಿದೆ. ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ.

Published

on

Ad Widget

Ad Widget

Ad Widget

Ad Widget

Gold Silver Price Today ಬೆಂಗಳೂರು : ಚಿನ್ನವೆಂದರೆ (Gold) ಭಾರತೀಯ ಮಹಿಳೆಯರಿಗೆ (Indian Women) ಅಚ್ಚುಮೆಚ್ಚು. ಹೀಗಾಗಿ ಬಹುತೇಕ ಮಧ್ಯಮ ವರ್ಗದವರು , ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಉಳಿಕೆ ಹಣವನ್ನು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಕುಟುಂಬದ ಅಪತ್‌ ಕಾಲದಲ್ಲಿ ಅದು ತಮ್ಮ ಕೈ ಹಿಡಿಯುತ್ತದೆ ಎಂಬ ನಂಬಿಕೆ ಒಂದೆಡೆಯಾದರೆ, ಸಭೆ ಸಮಾರಂಭಗಳಲ್ಲಿ ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸುತ್ತದೆ ಎನ್ನುವುದು ಇನ್ನೊಂದು ಕಾರಣ. ಇದರ ಜತೆಗೆ ಭಾರತೀಯ ನಾರಿ ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಸೀರೆ ಉಡುತ್ತಿದ್ದು, ಇದಕ್ಕೆ ಚಿನ್ನಾಭರಣಗಳು ವಿಶೇಷ ಮೆರಗನ್ನು ನೀಡುತ್ತದೆ. ಇವೆಲ್ಲಾ ಕಾರಣಗಳು ಭಾರತೀಯರನ್ನು ಹಳದಿ ಲೋಹದೆಡೆಗೆ ಅಕರ್ಷಿಸಿದೆ.

Ad Widget

Ad Widget

Ad Widget

Ad Widget

ಭಾರತವು ತನ್ನ ಚಿನ್ನದ ಬೇಡಿಕೆಯ ಶೇಕಡಾ 90 ಕ್ಕಿಂತ ಹೆಚ್ಚನ್ನು ಆಮದುಗಳ ಮೂಲಕ ಪೂರೈಸುತ್ತದೆ. ಹೀಗಾಗಿ ಇದರ ದರವು ಬಹುತೇಕ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಡಾಲರ್‌ ದರ ಹೆಚ್ಚು ಕಡಿಮೆ ಆಗುವುದು ಅಥಾವ ಷೇರು ಮಾರುಕಟ್ಟೆಯಲ್ಲಿ ಆಗುವ ವ್ಯತ್ಯಾಸ ಚಿನ್ನದ ರೇಟ್‌ ಅನ್ನು ಹೆಚ್ಚು ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನ ಬದಲಾಗುವ ಚಿನ್ನದ ದರವನ್ನು ಕೊಡುವ ಪ್ರಯತ್ನ ಇಲ್ಲಿ ಮಾಡುತ್ತೇವೆ. ದೇಶದ ಮಹಾನಗರಗಳ ಹಾಗೂ ರಾಜ್ಯದ ಪ್ರಮುಖ ನಗರಗಳ ದರವನ್ನು ನಿತ್ಯ ಬೆಳಿಗ್ಗೆ ಇಲ್ಲಿ ಪ್ರಕಟಿಸಲಾಗುವುದು.

Ad Widget

Ad Widget alt="Ad Widget"/>

Ad Widget

Todays Gold rate : ಆಗಸ್ಟ್ 5 2023(August 5 2023) ಇಂದು ವಿದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rates) ತುಸು ಇಳಿಕೆಯಾಗಿದೆ. ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಇಂದು ಭಾರತದಲ್ಲಿ ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ನಿನ್ನೆ ಕೂಡ ಚಿನ್ನದ ದರ ಕುಸಿದಿತ್ತು.

Ad Widget

Ad Widget <> Ad Widget

ಇದನ್ನೂ ಓದಿ : Cooking Food iN pressure cooker : ಅನ್ನ, ಮೊಟ್ಟೆ ಹಾಲಿನ ಉತ್ಪನ್ನಗಳನ್ನು ಈ ಪಾತ್ರೆಯಲ್ಲಿ ಬೇಯಿಸಲೇ ಬಾರದು…! ರುಚಿಯು ಹಾಳು- ಆರೋಗ್ಯಕ್ಕೂ ತೀವ್ರ ಹಾನಿ

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 59,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 54,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,600 ರುಪಾಯಿಯಲ್ಲಿ ಇದೆ.

Ad Widget

Ad Widget

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 5ಕ್ಕೆ):
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,950 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 748 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,950 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 54,950 ರೂ
ಚೆನ್ನೈ: 55,350 ರೂ
ಮುಂಬೈ: 54,950 ರೂ
ದೆಹಲಿ: 55,100 ರೂ
ಕೋಲ್ಕತಾ: 54,950 ರೂ
ಕೇರಳ: 54,950 ರೂ
ಅಹ್ಮದಾಬಾದ್: 55,000 ರೂ
ಜೈಪುರ್: 55,100 ರೂ
ಲಕ್ನೋ: 55,100 ರೂ
ಭುವನೇಶ್ವರ್: 54,950 ರೂ

ಇದನ್ನೂ ಓದಿ : India Post GDS Recruitment 2023 : ದೇಶದಾದ್ಯಂತ 30,041 ಹುದ್ದೆಗಳು : ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 7,400 ರೂ
ಚೆನ್ನೈ: 7,820 ರೂ
ಮುಂಬೈ: 7,480 ರೂ
ದೆಹಲಿ: 7,480 ರೂ
ಕೋಲ್ಕತಾ: 7,480 ರೂ
ಕೇರಳ: 7,820 ರೂ
ಅಹ್ಮದಾಬಾದ್: 7,480 ರೂ
ಜೈಪುರ್: 7,480 ರೂ
ಲಕ್ನೋ: 7,480 ರೂ
ಭುವನೇಶ್ವರ್: 7,480 ರೂ

ಗಮನಿಸಿ: ಪ್ರಕಟಿಸಲಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ವಿಶ್ವಾಸಪೂರ್ಣವಾಗಿದ್ದರೂ ನಿಖರ ಎಂದು ಹೇಳಲು ಸಾಧ್ಯವಿಲ್ಲ. ದೇಶದ ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದಾಗಿದೆ. ಖರೀದಿ ಸಂದರ್ಭಇದರ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.

ಇದನ್ನೂ ಓದಿ : Home remedies For Throat Pain : ಗಂಟಲು ನೋವು ಶಮನಕ್ಕೆ ಇಲ್ಲಿದೆ ಸುಲಭ ಮನೆ ಮದ್ದು

Ad Widget
Click to comment

Leave a Reply

ಆರೋಗ್ಯ

Bantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ

Published

on

Ad Widget

Ad Widget

Ad Widget

Ad Widget

ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Ad Widget

Ad Widget

Ad Widget

Ad Widget

ಬಂಟ್ವಾಳ: ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Ad Widget

Ad Widget alt="Ad Widget"/>

Ad Widget

ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಈ ವ್ಯಕ್ತಿಗೆ ‘ಬೈಲ್ಯಾಟರಲ್ ಹಿಪ್ ಅವಾಸ್ಕುಲರ್ ನೆಕ್ರೋಸಿಸ್’ (Bilateral Hip Avascular Necrosis) ಎಂಬ ಕಾಯಿಲೆ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಇದರಿಂದ ಎರಡೂ ಸೊಂಟದ ಮೂಳೆಗಳು ಹಾನಿಗೊಳಗಾಗಿದ್ದು, ಬಲಭಾಗಕ್ಕಿಂತ ಎಡಭಾಗದ ಮೂಳೆಯ ಸ್ಥಿತಿ ಗಂಭೀರವಾಗಿತ್ತು.

Ad Widget

Ad Widget <> Ad Widget

ಈ ಹಿಂದೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ಮೂಳೆ ತಜ್ಞರನ್ನು ಸಂಪರ್ಕಿಸಿದ್ದ ರೋಗಿಗೆ ಶಸ್ತ್ರಚಿಕಿತ್ಸೆಯೊಂದೇ ಶಾಶ್ವತ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

ರೋಗಿಯ ಆರ್ಥಿಕ ಹಾಗೂ ಆರೋಗ್ಯದ ಸಂಕಷ್ಟವನ್ನು ಅರಿತ ಆಸ್ಪತ್ರೆಯ ವೈದ್ಯಕೀಯ ತಂಡವು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ನವೆಂಬರ್ 4ರಂದು ಯೋಜನೆಯಡಿ ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್ 11ರಂದು ಅನುಮತಿ ದೊರೆತಿತ್ತು. ಬಳಿಕ ನವೆಂಬರ್ 17ರಂದು ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದೆ.

Ad Widget

Ad Widget

ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಶೆಟ್ಟಿ ಹಾಗೂ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಚೇತನ್‌ರಾಜ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತು.

ಅರವಳಿಕೆ ತಜ್ಞರಾದ ಡಾ. ವಿದ್ಯಾಸಾಗರ್ ಹಾಗೂ ಡಾ. ತುಷಾರ್ ಕೆ., ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಾಧಿಕಾರಿಗಳಾದ ವಾಣಿ, ಪುಷ್ಪಾ, ಕೀರ್ತಿಶಾಲಿನಿ, ತಂತ್ರಜ್ಞರಾದ ಧನ್ಯಾ ಮತ್ತು ಶಶಿಕಲಾ ಹಾಗೂ ಡಿ-ದರ್ಜೆ ನೌಕರರಾದ ಸವಿತಾ, ಜಲಜಾ ಮತ್ತು ಚಂದ್ರಾವತಿ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲೇ ಯಾವುದೇ ವೆಚ್ಚವಿಲ್ಲದೆ ಗುಣಮಟ್ಟದ ಚಿಕಿತ್ಸೆ ದೊರೆತಿರುವುದಕ್ಕೆ ರೋಗಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ತಿಳಿಸಿದ್ದಾರೆ.

Ad Widget
Continue Reading

ಆರೋಗ್ಯ

Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ

Published

on

Ad Widget

Ad Widget

Ad Widget

Ad Widget

ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget alt="Ad Widget"/>

Ad Widget

ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.

Ad Widget

Ad Widget <> Ad Widget

ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.

ಇನ್ನರ್‌ ವೀಲ್‌ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್.‌ ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.

Continue Reading

ಲೇಖನಗಳು

Rahu-Ketu-18 ತಿಂಗಳ ಬಳಿಕ ರಾಹು-ಕೇತು ರಾಶಿ ಬದಲಾವಣೆ; 12 ರಾಶಿಗಳ ಭವಿಷ್ಯ ಹೇಗಿರಲಿದೆ?

Published

on

Ad Widget

Ad Widget

Ad Widget

Ad Widget

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಡಿಸೆಂಬರ್ 5ರಂದು ರಾಹು ಮತ್ತು ಕೇತು ಗ್ರಹಗಳು ಸುಮಾರು 18 ತಿಂಗಳ ಬಳಿಕ ರಾಶಿ ಬದಲಾವಣೆ ಮಾಡಲಿವೆ. ಈ ಸಂಚಾರದ ವೇಳೆ ರಾಹು ಮಕರ ರಾಶಿಗೆ ಪ್ರವೇಶಿಸಿದರೆ, ಕೇತು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಗ್ರಹಗಳ ಸಂಚಾರವು ವೃತ್ತಿಜೀವನ, ಆರ್ಥಿಕ ಸ್ಥಿತಿ, ಕುಟುಂಬ, ಸಂಬಂಧಗಳು ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ವೈದಿಕ ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

Ad Widget

Ad Widget

Ad Widget

Ad Widget

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಡಿಸೆಂಬರ್ 5ರಂದು ರಾಹು ಮತ್ತು ಕೇತು ಗ್ರಹಗಳು ಸುಮಾರು 18 ತಿಂಗಳ ಬಳಿಕ ರಾಶಿ ಬದಲಾವಣೆ ಮಾಡಲಿವೆ. ಈ ಸಂಚಾರದ ವೇಳೆ ರಾಹು ಮಕರ ರಾಶಿಗೆ ಪ್ರವೇಶಿಸಿದರೆ, ಕೇತು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಗ್ರಹಗಳ ಸಂಚಾರವು ವೃತ್ತಿಜೀವನ, ಆರ್ಥಿಕ ಸ್ಥಿತಿ, ಕುಟುಂಬ, ಸಂಬಂಧಗಳು ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ವೈದಿಕ ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

Ad Widget

Ad Widget alt="Ad Widget"/>

Ad Widget

ಈ ಸಂಚಾರವು 2028ರ ಜೂನ್‌ವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ರಾಹುವನ್ನು ಮಹತ್ವಾಕಾಂಕ್ಷೆ, ಭೌತಿಕ ಆಸೆ ಮತ್ತು ಅನಿರೀಕ್ಷಿತ ಬೆಳವಣಿಗೆಗಳ ಸಂಕೇತವಾಗಿ ಪರಿಗಣಿಸಿದರೆ, ಕೇತುವನ್ನು ಆಧ್ಯಾತ್ಮಿಕತೆ, ವೈರಾಗ್ಯ ಮತ್ತು ಅಂತಃಪ್ರಜ್ಞೆಯ ಸಂಕೇತವೆಂದು ನಂಬಲಾಗಿದೆ. ಹಾಗಾದರೆ ಈ ಸಂಚಾರವು 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ನೋಡೋಣ.

Ad Widget

Ad Widget <> Ad Widget

ಮೇಷ ರಾಶಿ
ಮೇಷ ರಾಶಿಯವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಉದ್ಯೋಗ ಬದಲಾವಣೆ, ಬಡ್ತಿ ಹಾಗೂ ವ್ಯಾಪಾರ ವಿಸ್ತರಣೆಗೆ ಅನುಕೂಲಕರ ಸಮಯವಾಗಬಹುದು. ಕೆಲಸದ ಜವಾಬ್ದಾರಿ ಹೆಚ್ಚಾದರೂ ಅದಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆಯಿದೆ. ಮನೆ, ವಾಹನ ಮತ್ತು ಆಸ್ತಿ ಖರೀದಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬಹುದು. ಹಳೆಯ ವಾಹನ ಬದಲಿಸಿ ಹೊಸ ವಾಹನ ಖರೀದಿಸುವ ಯೋಗವೂ ಇದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಬಹುದು. ಬಹುಕಾಲದಿಂದ ಮುಂದೂಡಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯ ನೆಲೆಸುವ ನಿರೀಕ್ಷೆಯಿದೆ. ಅನಿರೀಕ್ಷಿತ ಆರ್ಥಿಕ ಲಾಭದ ಅವಕಾಶಗಳು ಎದುರಾಗಬಹುದು. ದೂರದ ಪ್ರಯಾಣ, ಧಾರ್ಮಿಕ ಕಾರ್ಯಗಳು ಹಾಗೂ ಹೊಸ ಅನುಭವಗಳಿಗೆ ಅವಕಾಶ ದೊರೆಯಬಹುದು.

Ad Widget

Ad Widget

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಜೀವನದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಸಂಭವಿಸಬಹುದು. ವಿದೇಶಿ ಸಂಪರ್ಕಗಳು ಹೆಚ್ಚಾಗುವ ಜೊತೆಗೆ ಉದ್ಯೋಗ ಅಥವಾ ವ್ಯಾಪಾರದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಗಬಹುದು. ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ಆದರೆ ಕೆಲವು ಕೆಲಸಗಳಲ್ಲಿ ವಿಳಂಬ ಮತ್ತು ಅಡೆತಡೆಗಳು ಎದುರಾಗಬಹುದು. ಕುಟುಂಬದ ವಿಚಾರದಲ್ಲಿ ಮಾತನಾಡುವಾಗ ಸಂಯಮ ಇರಲಿ. ಆರೋಗ್ಯದ ಕಡೆಗೂ ಗಮನ ನೀಡುವುದು ಅಗತ್ಯ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುವ ಸಾಧ್ಯತೆಯಿದೆ. ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡುಬರಬಹುದು. ಹೊಸ ಸ್ನೇಹಿತರು ಮತ್ತು ಪರಿಚಯಗಳು ಬೆಳೆಯಲಿವೆ. ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಪಾರ ಆರಂಭಿಸಲು ಅವಕಾಶಗಳು ದೊರೆಯಬಹುದು. ಆದರೆ ವೈವಾಹಿಕ ಜೀವನ ಮತ್ತು ವ್ಯಾಪಾರ ಪಾಲುದಾರಿಕೆಯಲ್ಲಿ ಪರಸ್ಪರ ನಂಬಿಕೆ ಹಾಗೂ ಉತ್ತಮ ಸಂವಹನಕ್ಕೆ ಆದ್ಯತೆ ನೀಡಬೇಕು.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಕಳೆದ ಒಂದೂವರೆ ವರ್ಷಗಳಿಂದ ಎದುರಾಗುತ್ತಿದ್ದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ದೊರೆಯುವ ಸಾಧ್ಯತೆಯಿದೆ. ವಿರೋಧಿಗಳು ಹಾಗೂ ಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸಬಹುದು. ಬಾಕಿ ಉಳಿದಿರುವ ಕಾನೂನು ವಿವಾದಗಳು ಮತ್ತು ಆಸ್ತಿ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ನಿರೀಕ್ಷಿಸಬಹುದು. ವಿದೇಶಿ ಉದ್ಯೋಗದ ಪ್ರಯತ್ನಗಳಿಗೂ ಉತ್ತಮ ಅವಕಾಶಗಳು ಸಿಗಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಉದ್ಯೋಗ, ಆರ್ಥಿಕ ಸ್ಥಿತಿ ಮತ್ತು ಕುಟುಂಬದ ವಿಚಾರಗಳಲ್ಲಿ ಶುಭ ಬೆಳವಣಿಗೆಗಳು ಕಂಡುಬರಬಹುದು. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳು ದೊರೆಯಬಹುದು. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ಮಕ್ಕಳಿಂದ ಸಂತೋಷದ ಸುದ್ದಿ ಸಿಗಬಹುದು. ಬಹುಕಾಲದಿಂದ ಬಾಕಿ ಉಳಿದಿರುವ ಹಣಕಾಸು ಮತ್ತು ಆಸ್ತಿ ಸಂಬಂಧಿತ ವಿಚಾರಗಳು ಬಗೆಹರಿಯುವ ನಿರೀಕ್ಷೆಯಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಮನೆ, ವಾಹನ ಮತ್ತು ವೃತ್ತಿಜೀವನದಲ್ಲಿ ಬದಲಾವಣೆಗಳು ಸಂಭವಿಸಬಹುದು. ಸ್ವಂತ ಮನೆ ಖರೀದಿಸುವ ಅಥವಾ ಹೊಸ ಆಸ್ತಿ ಪಡೆಯುವ ಯೋಜನೆಗಳು ಈಡೇರಬಹುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಮತ್ತು ಹೊಸ ಜವಾಬ್ದಾರಿಗಳು ದೊರೆಯಬಹುದು. ಆದರೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕುಟುಂಬದ ಅಗತ್ಯಗಳಿಗಾಗಿ ಹೆಚ್ಚುವರಿ ಖರ್ಚು ಎದುರಾಗುವ ಸಾಧ್ಯತೆಯಿದೆ.

ಧನು ರಾಶಿ
ಧನು ರಾಶಿಯವರಿಗೆ ಆರ್ಥಿಕವಾಗಿ ಪ್ರಗತಿ ಸಾಧಿಸುವ ಅವಕಾಶಗಳು ದೊರೆಯಬಹುದು. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಬಹುದು. ವಿದೇಶಿ ಸಂಪರ್ಕಗಳಿಂದ ಲಾಭವಾಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ವೇತನ ಹೆಚ್ಚಳದ ನಿರೀಕ್ಷೆಯಿದೆ. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ದೊರೆಯಬಹುದು. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಹೆಚ್ಚಾಗಲಿದ್ದು, ಶುಭಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಮಾತಿನ ಮೇಲೆ ಹಿಡಿತವಿರಲಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಧೈರ್ಯ, ಆತ್ಮವಿಶ್ವಾಸ ಮತ್ತು ಕೆಲಸ ಮಾಡುವ ಉತ್ಸಾಹ ಹೆಚ್ಚಾಗಬಹುದು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹೊಸ ಪ್ರಯತ್ನಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಬಹುದು. ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ವೃತ್ತಿಜೀವನದಲ್ಲಿ ಅನುಕೂಲವಾಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆಯಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಈ ಸಂಚಾರದಲ್ಲಿ ಮಹತ್ವದ ಬದಲಾವಣೆಗಳು ಎದುರಾಗಬಹುದು. ಉದ್ಯೋಗ ಮತ್ತು ವೃತ್ತಿಜೀವನದ ಕಾರಣದಿಂದ ಸ್ಥಳಾಂತರಗೊಳ್ಳುವ ಸಂದರ್ಭ ಬರಬಹುದು. ಹೊಸ ಕೆಲಸ ಅಥವಾ ವೃತ್ತಿ ಆರಂಭಿಸುವ ಆಲೋಚನೆಗಳು ಮೂಡಬಹುದು. ಆರಂಭದಲ್ಲಿ ಕೆಲವು ಗೊಂದಲಗಳು ಎದುರಾದರೂ ಮುಂದಿನ ದಿನಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ವ್ಯಾಪಾರ ಪಾಲುದಾರಿಕೆ ಮತ್ತು ವೈವಾಹಿಕ ಸಂಬಂಧಗಳಲ್ಲಿ ಎಚ್ಚರಿಕೆ ಹಾಗೂ ಪರಸ್ಪರ ತಿಳುವಳಿಕೆ ಅಗತ್ಯ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಕಳೆದ ಒಂದೂವರೆ ವರ್ಷಗಳಿಂದ ಎದುರಾಗುತ್ತಿದ್ದ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ. ಜಮೀನು ಅಥವಾ ನಿವೇಶನ ಖರೀದಿಸಿ ಮನೆ ನಿರ್ಮಿಸುವ ಯೋಜನೆಗಳು ಮುಂದುವರಿಯಬಹುದು. ವಾಹನ ಖರೀದಿಸುವ ಯೋಗವೂ ಇದೆ. ಮಕ್ಕಳಿಂದ ಸಂತೋಷದ ಸುದ್ದಿ ದೊರೆಯಬಹುದು. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುವ ನಿರೀಕ್ಷೆಯಿದೆ. ವಿದೇಶಿ ಉದ್ಯೋಗದ ಪ್ರಯತ್ನಗಳು ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಬಹುದು.

ಮೀನ ರಾಶಿ
ಮೀನ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಬೆಳವಣಿಗೆಗಳು ಕಂಡುಬರಬಹುದು. ಅನಿರೀಕ್ಷಿತ ಮೂಲಗಳಿಂದ ಹಣ ಲಭಿಸುವ ಸಾಧ್ಯತೆಯಿದೆ. ಆಸ್ತಿ-ಪಾಸ್ತಿ ಸಂಬಂಧಿತ ವಿಚಾರಗಳಲ್ಲಿ ಅನುಕೂಲಕರ ಫಲಿತಾಂಶ ದೊರೆಯಬಹುದು. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ಮತ್ತು ಸಂಪರ್ಕಗಳಿಂದ ಲಾಭವಾಗಬಹುದು. ಮಕ್ಕಳ ಸಾಧನೆಯಿಂದ ಸಂತೋಷ ಸಿಗಬಹುದು. ವಿದೇಶದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಹೊಸ ಅವಕಾಶಗಳು ಎದುರಾಗಬಹುದು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!