Connect with us

ಬಂಟ್ವಾಳ

Kalladka | ಬಸ್ – ಬೈಕ್ ಡಿಕ್ಕಿ : ಪನೋಳಿಬೈಲು ಕ್ಷೇತ್ರಕ್ಕೆ ಹೋಗಿ ಮನೆಗೆ ಬರುತ್ತಿದ್ದ ಯುವಕ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತ್ಯು

Published

on



Ad Widget

Ad Widget

Ad Widget

Ad Widget

ಬಂಟ್ವಾಳ: ಖಾಸಗಿ‌ ಬಸ್ ಡಿಕ್ಕಿಯಾಗಿ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ (Kalladka).

Ad Widget

Ad Widget

Ad Widget

Ad Widget

ಕಲ್ಲಡ್ಕ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್ ( 28) ಮೃತಪಟ್ಟ ಯುವಕ .
ಮಂಗಳೂರಿನಲ್ಲಿ ಮ್ಯಾಕನಿಕ್ ಕೆಲಸ ಮಾಡುತ್ತಿದ್ದ ಈತ, ಇಂದು ಆದಿತ್ಯ ವಾರ ರಜಾದಿನವಾದ ಕಾರಣ ಬೆಳಿಗ್ಗೆ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ವಾಪಸು ಮನೆಗೆ ಬರುವ ವೇಳೆ ಕಲ್ಲಡ್ಕ ದಲ್ಲಿ ಅಪಘಾತ ನಡೆದಿದೆ .

Ad Widget

Ad Widget

Ad Widget alt="Ad Widget"/>

Ad Widget


ಕಲ್ಲಡ್ಕದಿಂದ ವಿಟ್ಲ ರಸ್ತೆಯಲ್ಲಿ ಹೋಗುವ ವೇಳೆ ವಿಟ್ಲದಿಂದ ಅತೀ ವೇಗದಿಂದ ಬರುತ್ತಿದ್ದ ಸೆಲಿನಾ ಖಾಸಗಿ‌ ಬಸ್ ಬೈಕ್ ಗೆ ಡಿಕ್ಕಿ ಯಾಗಿದೆ.
ಡಿಕ್ಕಿಯ ರಭಸಕ್ಕೆ ಲತೀಶ್ ಗೆ ಗಂಭೀರವಾಗಿ ಗಾಯವಾಗಿತ್ತು. ಈತನನ್ನು ಕೂಡಲೇ ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

Ad Widget

Ad Widget <> Ad Widget


ಚಿಂತಾಜನಕ ಸ್ಥಿತಿಯಲ್ಲಿದ್ದ ಈತ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಗಂಭೀರ ಸ್ಥಿತಿಯಲ್ಲಿದ್ದ ಲತೀಶ್ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಟ್ರಾಫಿಕ್ ಎಸ್. ಐ.ಸುತೇಶ್ ಸ್ಥಳಕ್ಕೆ ಬೇಟಿ ನೀಡಿದ್ದು,ಪ್ರಕರಣ ದಾಖಲಾಗಿದೆ.



Ad Widget

Click to comment

Leave a Reply

ಬಿಗ್ ನ್ಯೂಸ್

Prabhakar Bhat-ಭರತ್ ಕುಮ್ಡೇಲ್ ಗೆ ಮೊದಲು ಎಸ್ಪಿ ಮಂಪರು ಪರೀಕ್ಷೆ ಮಾಡಿಕೊಳ್ಳಲಿ : ಕಲ್ಲಡ್ಕ ಪ್ರಭಾಕರ ಭಟ್‌

Published

on



Ad Widget

Ad Widget

Ad Widget

Ad Widget

ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮ್ಡೇಲ್ ಹಾಗೂ ಇತರ ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಆರೋಪಪಟ್ಟಿ ಬಿಡುಗಡೆ ಮಾಡಿರುವ ವಿಚಾರಕ್ಕೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮ್ಡೇಲ್ ಹಾಗೂ ಇತರ ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಆರೋಪಪಟ್ಟಿ ಬಿಡುಗಡೆ ಮಾಡಿರುವ ವಿಚಾರಕ್ಕೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆರೋಪಪಟ್ಟಿ ಕುರಿತು ಪ್ರತಿಕ್ರಿಯಿಸಿದ ಅವರು, ಒಟ್ಟು 17 ಪ್ರಕರಣಗಳ ಪೈಕಿ 15 ಪ್ರಕರಣಗಳು ಬಿದ್ದುಹೋಗಿವೆ. ಇನ್ನುಳಿದ ಎರಡು ಪ್ರಕರಣಗಳಿಗೆ ಗೂಂಡಾ ಕಾಯ್ದೆ ಅನ್ವಯಿಸುವುದು ಸರಿಯೇ ಎಂದು ಪ್ರಶ್ನಿಸಿದರು. ನ್ಯಾಯಾಲಯದ ಸೂಚನೆಗಳಿಗೂ ಪೊಲೀಸರಿಗೆ ಒಪ್ಪಿಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

Ad Widget

Ad Widget <> Ad Widget

ತಮಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದ ಪ್ರಭಾಕರ್ ಭಟ್, ತಮ್ಮ ಮೇಲೂ ಗೂಂಡಾ ಕಾಯ್ದೆ ಜಾರಿಗೊಳಿಸುವ ಯೋಚನೆ ಇರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದರು. ದೇಶವಿರೋಧಿ ಅಥವಾ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿದ್ದರೆ ಪ್ರಕರಣ ದಾಖಲಿಸಲಿ ಎಂದು ಹೇಳಿದರು.



Ad Widget

“ಹಿಂದೂಗಳ ಮೇಲೆ ದಾಳಿ ಮಾಡುವುದು ಶಾಂತಿಯೇ? ಪೊಲೀಸರು ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆಯೇ? ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ಹೇಳಿದರು. ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಪೊಲೀಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಅವರು ಹೇಳಿದರು.

Ad Widget

Ad Widget

“ನಾವು ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆ. ಅವರ ಕ್ರಮಕ್ಕೆ ನಮ್ಮ ಸಣ್ಣ ಪ್ರತಿಕ್ರಿಯೆ” ಎಂದು ಪ್ರಭಾಕರ್ ಭಟ್ ಹೇಳಿದರು.

ಭರತ್ ಕುಮ್ಡೇಲ್ ಗೆ ಮಂಪರು ಪರೀಕ್ಷೆ
ಭರತ್ ಕುಮ್ಡೇಲ್ ಅವರಿಗೆ ಮಂಪರು ಪರೀಕ್ಷೆ ನಡೆಸುವ ಪ್ರಸ್ತಾಪದ ಬಗ್ಗೆಯೂ ಪ್ರಭಾಕರ್ ಭಟ್ ಪ್ರಶ್ನೆ ಎತ್ತಿದರು. “ಮಂಪರು ಪರೀಕ್ಷೆಗೆ ಏಕೆ ಒಪ್ಪಿಕೊಳ್ಳಬೇಕು? ಅದಕ್ಕೆ ಏನು ಆಧಾರವಿದೆ?” ಎಂದು ಪ್ರಶ್ನಿಸಿದ ಅವರು, ಮೊದಲು ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರೇ ಮಂಪರು ಪರೀಕ್ಷೆಗೆ ಒಳಗಾಗಲಿ ಎಂದು ಹೇಳಿದರು.

ತಾವು ಭರತ್ ಕುಮ್ಡೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವುದನ್ನು ಉಲ್ಲೇಖಿಸಿದ ಅವರು, ಕೇವಲ ಫೋನ್‌ನಲ್ಲಿ ಮಾತನಾಡಿದ್ದಕ್ಕೆ ತಮ್ಮನ್ನು ವಿಚಾರಣೆಗೆ ಕರೆಯಲಾಗುತ್ತದೆಯೇ ಎಂದು ಪ್ರಶ್ನಿಸಿದರು. “ಮಾಧ್ಯಮದವರೂ ಫೋನ್ ಮಾಡುತ್ತೀರಿ; ನಿಮಗೂ ವಿಚಾರಣೆಗೆ ಕರೆಯುತ್ತಾರೆಯೇ?” ಎಂದು ಪ್ರಶ್ನಿಸಿದರು.

ಈ ಹಿಂದೆ ತಾವು ಜೈಲಿಗೆ ಹೋಗಿದ್ದು, ತಮ್ಮ ಪತ್ನಿಯನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದ ಅವರು, “ಇನ್ನು ಏನಿದ್ದರೂ ಗಲ್ಲಿಗೆ ಹಾಕುವುದು ಮಾತ್ರ ಬಾಕಿ. ತಾಕತ್ತಿದ್ದರೆ ನನ್ನನ್ನು ಗಲ್ಲಿಗೆ ಹಾಕಲಿ” ಎಂದು ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Ad Widget
Continue Reading

ಬಿಗ್ ನ್ಯೂಸ್

Prabhakar Bhat-ನನ್ನ ಮೇಲೆ ಹಾಕಿದ ಕೇಸ್ ನನ್ನ ಕೂದಲಿಗೂ ಸಮ ಅಲ್ಲ : ಗುಡುಗಿದ ಕಲ್ಲಡ್ಕ ಪ್ರಭಾಕರ ಭಟ್

Published

on



Ad Widget

Ad Widget

Ad Widget

Ad Widget

ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ವೈಯಕ್ತಿಕ ಕಾರಣಗಳಿಂದ ನಡೆದಿದ್ದು, ಅದನ್ನು ಸಂಘಟನೆಯ ಮೇಲೆ ಹೊರಿಸುವುದು ಏಕೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ. ಬಿ.ಸಿ.ರೋಡ್ ಚಲೋ ಪ್ರತಿಭಟನೆಯ ಬಳಿಕ ಮಾತನಾಡಿದ ಅವರು, ಅಬ್ದುಲ್ ರೆಹಮಾನ್ ಹಾಗೂ ಹತ್ಯೆ ಆರೋಪಿಗಳ ನಡುವಿನ ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ವೈಯಕ್ತಿಕ ಕಾರಣಗಳಿಂದ ನಡೆದಿದ್ದು, ಅದನ್ನು ಸಂಘಟನೆಯ ಮೇಲೆ ಹೊರಿಸುವುದು ಏಕೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬಿ.ಸಿ.ರೋಡ್ ಚಲೋ ಪ್ರತಿಭಟನೆಯ ಬಳಿಕ ಮಾತನಾಡಿದ ಅವರು, ಅಬ್ದುಲ್ ರೆಹಮಾನ್ ಹಾಗೂ ಹತ್ಯೆ ಆರೋಪಿಗಳ ನಡುವಿನ ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿವರಣೆ ನೀಡುವುದಿಲ್ಲ. ಸಂಬಂಧಪಟ್ಟ ಊರಿಗೆ ಹೋದರೆ ಅಲ್ಲಿನವರೇ ವಿಚಾರವನ್ನು ಹೇಳುತ್ತಾರೆ ಎಂದರು.

Ad Widget

Ad Widget <> Ad Widget

“ವೈಯಕ್ತಿಕ ದ್ವೇಷವನ್ನು ಸಂಘಟನೆಯ ಮೇಲೆ ಹಾಕುವುದು ಏಕೆ? ಬೇರೆ ತಪ್ಪು ನಡೆದಿದ್ದರೆ ಪ್ರಕರಣ ದಾಖಲಿಸಿ” ಎಂದು ಅವರು ಹೇಳಿದರು.



Ad Widget

ಹತ್ಯೆಯನ್ನು ತಾವು ಪ್ರತಿಪಾದಿಸುವುದಿಲ್ಲ ಎಂದ ಪ್ರಭಾಕರ್ ಭಟ್, ಪ್ರಕರಣದಲ್ಲಿ ಸಂಬಂಧವಿಲ್ಲದ ಭರತ್ ಕುಮ್ಡೇಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು. ಭರತ್ ಕುಮ್ಡೇಲ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿರುವುದನ್ನೂ ಅವರು ಪ್ರಶ್ನಿಸಿದರು.

Ad Widget

Ad Widget

ಭರತ್ ಕುಮ್ಡೇಲ್ ಬಂಧನದ ಬಳಿಕ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಭರತ್ ಅವರ ಮಗುವಿಗೆ ಅನಾರೋಗ್ಯವಾದಾಗ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದರು.

ಕುಟುಂಬಕ್ಕೆ ಸಹಾಯ ಮಾಡಿದವರ ಮೇಲೆಯೂ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಹೇಳಿದ ಅವರು, ಕಾನೂನು ಪ್ರಕ್ರಿಯೆ ಬಿಟ್ಟು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಬಾರದು ಎಂದು ಹೇಳಿದರು.

ತಮ್ಮ ಮೇಲೂ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಹೇಳಿದ ಪ್ರಭಾಕರ್ ಭಟ್, “ಇದು ನನಗೆ ದೊಡ್ಡ ವಿಷಯವಲ್ಲ. ಈ ಪ್ರಕರಣ ನನ್ನ ಕೂದಲಿಗೆ ಸಮ” ಎಂದು ಪ್ರತಿಕ್ರಿಯಿಸಿದರು.

ಭರತ್ ಕುಮ್ದೇಲ್ ಅವರೊಂದಿಗೆ ತಾವು ದೂರವಾಣಿಯಲ್ಲಿ ಮಾತನಾಡಿರುವುದನ್ನು ಒಪ್ಪಿಕೊಂಡ ಅವರು, ʻʻನಾನು ಯಾರ ಹತ್ರ ಬೇಕಾದರೂ ಫೋನ್ ನಲ್ಲಿ ಮಾತನಾಡುತ್ತೇನೆ. ನನಗೆ ಅಂಬೇಡ್ಕರ್ ಕೊಟ್ಟ ಸಂವಿಧಾನ . ಭರತ್ ಜೊತೆ ನಾನು ಫೋನ್ ನಲ್ಲಿ ಮಾತನಾಡಿದ್ದೇನೆ. ನಾನು ಯಾರಿಗಾದರೂ ಹೊಡಿ ಅಥವಾ ಕೊಲ್ಲು ಎಂದು ಹೇಳಿದ್ದೇನಾ? ಅಂತಹ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆಯೇ?” ಎಂದು ಪ್ರಶ್ನಿಸಿದರು.

ಪೊಲೀಸರು ಈ ರೀತಿಯ ಕ್ರಮಗಳನ್ನು ಕೈಗೊಳ್ಳುವ ಮುನ್ನ ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಪೊಲೀಸರ ಈ ರೀತಿಯ ಹುಚ್ಚು ಸ್ವಲ್ಪ ಇಳಿಯಬೇಕು ಎಂದು ಅವರು ಆಗ್ರಹಿಸಿದರು.

Ad Widget
Continue Reading

ಬಿಗ್ ನ್ಯೂಸ್

Prabhakar Bhat-ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ: ಆರೋಪಿತರ ಜೊತೆ ನಿರಂತರ ಫೋನ್ ಸಂಪರ್ಕ ಆರೋಪ – ವಿಚಾರಣೆಗೆ ಕಲ್ಲಡ್ಕ ಪ್ರಭಾಕರ ಭಟ್ ಗೆ ನೋಟೀಸ್

Published

on



Ad Widget

Ad Widget

Ad Widget

Ad Widget

ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದ್ದಾರೆ.

Ad Widget

Ad Widget

Ad Widget

Ad Widget

ಬಂಟ್ವಾಳ: ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

2025ರ ಮೇ 25ರಂದು ಬಂಟ್ವಾಳ ತಾಲೂಕಿನ ಕುರಿಯಾಲ ಗ್ರಾಮದ ಇರಾಕೋಡಿ ಬಳಿ ಅಬ್ದುಲ್ ರಹ್ಮಾನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಕಪ್ ವಾಹನದಿಂದ ಮರಳು ಇಳಿಸುತ್ತಿದ್ದ ವೇಳೆ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಘಟನೆಯಲ್ಲಿ ರಹ್ಮಾನ್ ಅವರೊಂದಿಗೆ ಇದ್ದ ಕಲಂದರ್ ಶಾಫಿ ಅವರ ಮೇಲೂ ಗಂಭೀರ ಹಲ್ಲೆ ನಡೆದಿತ್ತು.

Ad Widget

Ad Widget <> Ad Widget

ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ದಿನಗಳ ಬಳಿಕ ಅಬ್ದುಲ್ ರಹ್ಮಾನ್ ಹತ್ಯೆ ನಡೆದಿದ್ದರಿಂದ, ಪ್ರಕರಣವು ಪ್ರತೀಕಾರದ ಹತ್ಯೆಯಾಗಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಈ ಘಟನೆ ರಾಜ್ಯಾದ್ಯಂತ ಗಮನ ಸೆಳೆದಿತ್ತು.



Ad Widget

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಹತ್ಯೆಯ ಸಂದರ್ಭದಲ್ಲಿ ಆರೋಪಿಗಳೊಂದಿಗೆ ಕಲ್ಲಡ್ಕ ಪ್ರಭಾಕರ್ ಭಟ್ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದರು ಎಂಬ ಅಂಶದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಪಡೆಯಲು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Ad Widget

Ad Widget

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಪ್ರತಿಕ್ರಿಯಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯ ಅ.ಕ್ರ. 54/2025ರ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆ ದಾಖಲಿಸುವುದು ಬಾಕಿಯಿದೆ. ಹೇಳಿಕೆ ಪಡೆಯುವ ಉದ್ದೇಶದಿಂದ ಸಾಕ್ಷಿದಾರರ ನೋಟಿಸ್ ಜಾರಿ ಮಾಡಲಾಗಿದೆ. ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading