ಸುಳ್ಯ
Sullia BJP | ಸುಳ್ಯದಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ ಸ್ವಾಭಿಮಾನಿ ಬಣ – ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಖ್ಯಾತರಾಗಿದ್ದ 6 ಬಾರಿ ಗೆದ್ದ ಅಂಗಾರರೇ ಅಭ್ಯರ್ಥಿ ಬದಲಾವಣೆ ಆಗುತಿದ್ದಂತೆ ಪ್ರಚಾರದಿಂದ ದೂರ..! – ಅಂಗಾರ ಬಣ ಸೈಲೆಂಟ್, ಓರ್ವ ರಾಜಿನಾಮೆ : ಭಾಗೀರಥಿ ಮುರುಳ್ಯ ಪರ ಫೀಲ್ಡಿಗಿಳಿದ ತಟಸ್ಥವಾಗಿದ್ದ ಹಳೆ ತಲೆಗಳು
ಸುಳ್ಯ: ದಕ್ಷಿಣ ಕನ್ನಡದ ಮೀಸಲು ಕ್ಷೇತ್ರ ಸುಳ್ಯದಲ್ಲಿ 1994 ರಿಂದ 3 ದಶಕಗಳಿಂದ 6 ಬಾರಿ ಶಾಸಕರಾಗಿರುವ, ಮೀನುಗಾರಿಕಾ ಸಚಿವ ಎಸ್.ಅಂಗಾರರ ಬದಲಾಯಿಸಿ ಹೊಸ ಮುಖಕ್ಕೆ ಬಿಜೆಪಿ(Sullia BJP) ಮಣೆ ಹಾಕಿದೆ.
ಇದೀಗ ಅಧಿಕೃತ ಅಭ್ಯರ್ಥಿ ಬಿಜೆಪಿಯ ಇನ್ನೊಂದು ತಂಡ ಸ್ವಾಭಿಮಾನಿ ಬಳಗದವರ ತಂಡದವರಾಗಿರುವುದರಿಂದ ಅಂಗಾರರು ಮುನಿಸಿಕೊಂಡು ಪ್ರಚಾರದಿಂದ ದೂರ ಇರುವುದಾಗಿ ಹೇಳಿದ್ದಾರೆ. ಅಂಗಾರರ ಬಣದ ಪ್ರಮುಖ ವ್ಯಕ್ತಿಯಾಗಿರುವ ವೆಂಕಟ್ ವಳಲಂಬೆ ರಾಜಿನಾಮೆ ನೀಡಿದ್ದು , ತಂಡ ತಟಸ್ಥವಾದಂತೆ ಕಾಣುತ್ತಿದೆ. ಸ್ವಾಭಿಮಾನಿ ಬಳಗ ಸಂಭ್ರಮಾಚರಣೆಯಲ್ಲಿದೆ.
ಅಂಗಾರರ ಬದಲಾವಣೆಯ ಬಗ್ಗೆ ಬಿಜೆಪಿ ಕಾರ್ಯಕರ್ತರಿಂದಲೇ ಕೂಗು ಪ್ರಾರಂಭವಾಗಿತ್ತು. ಸುಳ್ಯ (Sullia) ಕ್ಷೇತ್ರದ ಹಲವು ಕಡೆ ಬ್ಯಾನರ್ ಕೂಡ ಪ್ರತ್ಯಕ್ಷಗೊಂಡಿದ್ದವು.
ಸತತ ಗೆಲುವು ಕಂಡ ರಾಜಕಾರಣಿಗಳಲ್ಲಿ ಅಂಗಾರರು ಒಬ್ಬರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅಂಗಾರರ ಬದಲಾವಣೆಯ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಈ ಬಾರಿ ಕಾರ್ಯಕರ್ತರಿಂದಲೇ ವಿರೋಧ ಪ್ರಾರಂಭವಾಗಿ ಕೊನೆಗೆ ಬದಲಾವಣೆಯಾಗಿದೆ.
ಸುಳ್ಯ ಅಮರ ಪಟ್ಟೂರಿನಲ್ಲಿ ಅಂಗಾರ ಸಾಕು ಹೊಸಬರು ಬೇಕು ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ನಮ್ಮಮತ’ ಎನ್ನುವ ಬ್ಯಾನರ್ ಹಾಕಲಾಗಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕಿನ ಚುನಾವಣೆಯ ಸಂದರ್ಭ ಡಾ.ರಾಜೇಂದ್ರ ಕುಮಾರ್ ಬಣದ ಪರ ಮತ ಹಾಕಿದವರನ್ನು ಬಿಜೆಪಿಯ ಚಟುವಟಿಕೆಯಿಂದ ಹೊರಗಿಡಲಾಗಿತ್ತು. ಆಗ ಪ್ರಾರಂಭವಾದ ಬಿಜೆಪಿಯ ಮತ್ತೊಂದು ತಂಡವೇ ಬಿಜೆಪಿ ಸ್ವಾಭಿಮಾನಿ ಬಳಗ.
ಬಿಜೆಪಿಯಲ್ಲಿ 2 ಬಣಗೊಳೊಳಗೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಗ್ರಾಮಪಂಚಾಯತ್ , ಸ್ಥಳೀಯ ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಸ್ವಾಭಿಮಾನಿ ತಂಡ ಬಿಜೆಪಿಯ ಹಲವು ಪ್ರಮುಖರನ್ನು ಸೊಲಿಸಿತು.
ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ನಡೆದ ನೇಮೋತ್ಸವದಲ್ಲಿ ಎರಡು ಬಣಗಳು ಕಾಣಿಸಿಕೊಂಡಿದ್ದವು.
ಇತ್ತಿಚೆಗೆ 2 ಬಣಗಳೊಳಗೆ ಸಂಘದ ಪ್ರಮುಖರಲ್ಲಿ ರಾಜಿ ಪಂಚಾಯ್ತಿಗೆ ನಡೆದು ಸರಿ ಆಗಿತ್ತು. ಮತ್ತೇ ಆ ತಂಡ ಬಿಜೆಪಿಯೊಳಗೆ ಸೇರಿಕೊಂಡಿತ್ತಾದರೂ ಅವರನ್ನು ಸಭೆಗಳಿಗೆ ಸೇರಿಸಿಕೊಳ್ಳಲಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತು.
ಸುಳ್ಯ ವಿಧಾನಸಭಾ ಕ್ಷೇತ್ರದ 20ಕ್ಕೂ ಹೆಚ್ಚು ಗ್ರಾಮಗಳಿಂದ ಸ್ವಾಭಿಮಾನಿ ಬಿಜೆಪಿ ಮತ್ತು ಸಮಾನ ಮನಸ್ಕರ ತಂಡ ಮಾ.22 ಯುಗಾದಿಯಂದು ಸುಳ್ಯದಲ್ಲಿ ಗೌಪ್ಯ ಸಭೆ ನಡೆಸಿದರು.
ಗ್ರಾಮ ಪಂಚಾಯತ್ ಸದಸ್ಯರು, ಬಿಜೆಪಿ ವಾರ್ಡ್ ಸಮಿತಿ, ಪೇಜ್ ಪ್ರಮುಖರು ಸೇರಿದಂತೆ 150 ಕ್ಕೂ ಮಿಕ್ಕಿ ಈ ಸಭೆಯಲ್ಲಿ ಸೇರಿದ್ದರು. ಈ ಸಭೆಯಲ್ಲಿ ಅಭ್ಯರ್ಥಿ ಬದಲಾವಣೆ ಬೇಕು ಹಾಗೂ ಭಾಗೀರಥಿ ಮುರುಳ್ಯ ತಮ್ಮ ಅಭ್ಯರ್ಥಿ ಎನ್ನುವ ಒಗ್ಗಟ್ಟಿನ ನಿರ್ಣಯ ಕೈಗೊಳ್ಳಲಾಗಿತ್ತು.
ಇದೀಗ ಸ್ವಾಭಿಮಾನಿ ಬಳಗದವರ ಕಡೆಯ ಅಭ್ಯರ್ಥಿ ಎಂದೇ ಪ್ರಚಾರ ಪಡೆದಿದ್ದ ಭಾಗೀರಥಿ ಮುರುಳ್ಯರಿಗೆ ಟಿಕೇಟ್ ದೊರಕಿದೆ. ಹೊಸ ಮುಖಕ್ಕೆ ಅಭ್ಯರ್ಥಿ ನೀಡಿರುವ ಹೈಕಮಾಂಡ್ ತೀರ್ಮಾನಕ್ಕೆ ಬಗ್ಗೆ ಉತ್ತಮ ಆಯ್ಕೆ ಎಂದು ಬಿಜೆಪಿ ಸುಳ್ಯ ಮಂಡಲದ ಮಾಜಿ ಅಧ್ಯಕ್ಷ, ಸ್ವಾಭಿಮಾನಿ ಬಳಗದ ಪ್ರಮುಖರರಾದ ಎಸ್.ಎನ್ ಮನ್ಮಥ ತಿಳಿಸಿದ್ದಾರೆ. ಸುಳ್ಯ ಬಿಜೆಪಿ ನಾಯಕರ ನಡೆಯಿಂದ ಬೇಸರಗೊಂಡು ತಟಸ್ಥರಾಗಿದ್ದ ಹಳೆಯ ನಾಯಕರು , ಕಾರ್ಯಕರ್ತರು ಇದೀಗ ಹೊಸ ಮುಖವಾದ ಭಾಗೀರಥಿ ಮುರುಳ್ಯ ಪರ ಪ್ರಚಾರಕ್ಕೆ ದುಮುಕಿದ್ದಾರೆ. ಪಿಯುಸಿ ವಿದ್ಯಾಭ್ಯಾಸ ಹೊಂದಿರುವ ಭಾಗೀರಥಿಯವರು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು.
ಆದರೆ ಸಚಿವ ಅಂಗಾರರು , ಪ್ರಚಾರಕ್ಕೂ ಹೋಗಲ್ಲ ನಾನೆಂದೂ ಸೀಟ್‌ಗಾಗಿ ಲಾಬಿ ಮಾಡಿಲ್ಲ. ಕಳೆದ 30 ವರ್ಷಗಳಲ್ಲಿ ಜನಪರ, ನ್ಯಾಯಯುತ ರಾಜಕೀಯ ಮಾಡಿದ್ದೇನೆ. ನಾನು ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೇನೆ. ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅಂಗಾರ ಹೇಳಿದರು.
ರಾಜಕೀಯವಾಗಿ ಈಗಿನಿಂದಲೇ ನಿವೃತ್ತಿ ಪಡೆದುಕೊಳ್ಳುತ್ತೇನೆ. ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲ. ರಾಜಕೀಯ ಚಟುವಟಿಕೆಗಳಲ್ಲೂ ಭಾಗವಹಿಸುವುದಿಲ್ಲ. ನಮ್ಮ ಮೇಲೆ ವಿಶ್ವಾಸ ಇಲ್ಲದ ಮೇಲೆ ನಾನೇನು ಮಾಡಲು ಸಾಧ್ಯ? ಇನ್ನು ರಾಜಕೀಯ ಸಾಕು ಎಂದರು.
ಅಂಗಾರರ ಬಣದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ಸೈಲೆಂಟ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ ರಾಜಿನಾಮೆಯನ್ನು ಘೋಷಿಸಿದ್ದಾರೆ.
ಸುಳ್ಯ
Suresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು. ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.
ಸುಳ್ಯ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು.
ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ನಾರಾಯಣ ಕೇಕಡ್ಕ ಹಾಗೂ ಸಿಬ್ಬಂದಿ ಸುರೇಶ್ ರೈನಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಇತ್ತಿಚೆಗಷ್ಟೇ ರಸಪಾಕ ಗ್ರಾಂಡ್ ಗೆ ಇನ್ಫೋಸೀಸ್ ಪ್ರತಿಷ್ಠಾನದ ಸುಧಾಮೂರ್ತಿ ಸಹಿತ ಹಲವು ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.
ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಳ್ಯ
Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ
ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.
ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.
ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.
-
Uncategorized2 hours ago
ಪುತ್ತೂರು : ಅಡಿಕೆ ತೆಗೆಯುವಾಗ ಕಂಗಿನಿಂದ ಬಿದ್ದು ಗಂಭೀರ ಗಾಯ: ಚಿಕಿತ್ಸೆಗೆ ₹8 ಲಕ್ಷದ ಅಗತ್ಯ; ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
-
Uncategorized9 hours ago
ಕಾರ್ಯಕರ್ತರ ಶ್ರಮದಲ್ಲಿ ನೆಲಪ್ಪಾಲು ವೀರಾಂಜನೇಯ ಕ್ಷೇತ್ರ ನಿರ್ಮಾಣ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ | ಶ್ರೀ ಪಂಚಮುಖಿ ಆಂಜನೇಯ ಯಾಗದ ಅಂಗವಾಗಿ ಧರ್ಮಸಭೆ
-
Uncategorized2 hours ago
ಗ್ರಾಮೀಣ ವಿದ್ಯಾರ್ಥಿಗಳಿಗೆ ಮಡಿಯಾಲದಲ್ಲಿ ಉಚಿತ ಎಐ ಪದವಿ ಶಿಕ್ಷಣ ಕೇಂದ್ರ; ನ. 30ರಂದು ನಾರಾಯಣ ಭಟ್ ಜನ್ಮಶತಾಬ್ದಿ ಸ್ಮರಣಾರ್ಥ ಭೂಮಿಪೂಜೆ; 2027–28ರಿಂದ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಯೋಜನೆ















