Connect with us

ಬೆಂಗಳೂರು

Punith Kerehalli | ಗೋವು ಸಾಗಟದ ವಾಹನ ತಡೆದು ಹಲ್ಲೆ – ಓರ್ವ ಸಾವು : ಬಂಧಿತ ಪುನೀತ್ ಕೆರೆಹಳ್ಳಿ ಮೇಲೆ 2 ಲಕ್ಷ ಬೇಡಿಕೆ ಆರೋಪ – ಎಫ್ಐಆರ್ ನಲ್ಲಿ ದಾಖಲು

Published

on



Ad Widget

Ad Widget

Ad Widget

Ad Widget

ಕನ​ಕ​ಪುರ (ಏ.6) : ಗೋವು​ಗ​ಳನ್ನು ಸಾಗಿ​ಸು​ತ್ತಿದ್ದ ಇದ್ರೀಸ್‌ ಪಾಷಾ ಅನುಮಾ​ನ​ಸ್ಪದವಾಗಿ ಸಾವ​ನ್ನ​ಪ್ಪಿದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ತಲೆಮೆರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ (Punith Kerehalli) ತಂಡ ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು. ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಗೋವು ಸಾಗಿಸುವುದನ್ನು ತಡೆದು 2 ಲಕ್ಷ ಬೇಡಿಕೆ ಇಟ್ಟಿದ್ದಾನೆ ಎಂದು ಎಫ್ಐಆರ್ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮಂಡ್ಯ ನಗ​ರದ ಗುತ್ತಲು ಬಡಾ​ವಣೆ ವಾಸಿ ಯೂನಸ್‌ ಪಾಷಾ ನೀಡಿದ ದೂರಿನ ಮೇರೆಗೆ ಪೊಲೀ​ಸರು ಐಪಿಸಿ 1860ರ ಅನ್ವಯ 341, 504, 506, 324, 302 ಸೆಕ್ಷೆನ್‌ ಅಡಿ​ಯಲ್ಲಿ ಆರೋ​ಪಿ​ಗಳ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕ​ರಣ ದಾಖಲಿಸಿ​ದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಏಪ್ರಿಲ್‌ 1ರಂದು ರಾತ್ರಿ 12.30ರ ಸಮ​ಯ​ದಲ್ಲಿ ಸಾತ​ನೂರು ಗ್ರಾಮದ ಸಂತೆ​ಮಾಳ ಸರ್ಕಲ್‌ ಬಳಿ ಜಾನು​ವಾ​ರು​ಗ​ಳನ್ನು ಸಾಗಿ​ಸು​ತ್ತಿದ್ದ ನಮ್ಮ ವಾಹ​ನ​ವನ್ನು ಅಡ್ಡ ಹಾಕಿದ ಪುನಿತ್‌ ಕೆರೆ​ಹಳ್ಳಿ ಮತ್ತು ಅವನ ಸಹ​ಚ​ರರು ಬಂದು ಗೋಹತ್ಯೆ ನಿಷೇಧ ಕಾಯ್ದೆ ನೆಪ​ದಲ್ಲಿ ಏಕಾ​ಏಕಿ ನಮ್ಮ ಮೇಲೆ ಹಲ್ಲೆ ಮಾಡಿದ​ರು. ನಾವು ರಾಸು​ಗ​ಳನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂ​ಕಿನ ಶಿವ​ಪುರದ ತೆಂಡೆ​ಕೆರೆ ಸಂತೆ​ಯಲ್ಲಿ ಕಾನೂನು ಬದ್ಧ​ವಾಗಿ ಖರೀ​ದಿ ಮಾಡಿದ್ದು, ನಮ್ಮ ಹತ್ತಿರ ಖರೀದಿ ಮಾಡಿದ ರಶೀದಿ ಕೂಡ ಇದೆ​ಯೆಂದು ಹೇಳಿ​ದರೂ ನಮ್ಮ ಮಾತನ್ನು ಪರಿ​ಗ​ಣಿ​ಸದೆ ಮನ​ಬಂದಂತೆ ಥಳಿ​ಸಿದರು. ನೀವು 2 ಲಕ್ಷ ಹಣ ಕೊಟ್ಟರೆ ಮಾತ್ರ ನಿಮ್ಮನ್ನು ಬಿಡು​ತ್ತೇನೆ. ಇಲ್ಲ​ವಾ​ದರೆ ನಿಮ್ಮನ್ನು ಬಿಡು​ವು​ದಿಲ್ಲ. ನಿಮ್ಮನ್ನು ಕೊಲೆ ಮಾಡಿ ಸಾಯಿ​ಸು​ತ್ತೇನೆ ಎಂದು ಅವಾ​ಚ್ಯ​ ಶ​ಬ್ದ​ಗ​ಳಿಂದ ನಿಂದಿ​ಸಿ​ದ್ದ​ಲ್ಲದೆ ಮಾರ​ಕಾ​ಸ್ತ್ರ​ಗ​ಳನ್ನು ತೋರಿಸಿ ಹೆದ​ರಿ​ಸಿ​ದರು.

Ad Widget

Ad Widget <> Ad Widget

ನಂತರ ನಾವು ಪ್ರಾಣ ಭಯ​ದಿಂದ ಓಡಿ ಹೋಗುವ ಸಂದ​ರ್ಭ​ದಲ್ಲಿ ನಮ್ಮ ಜೊತೆ​ಯಿದ್ದ ಇರ್ಫಾನ್‌ ಮತ್ತು ನನ್ನನ್ನು ಮಾರ​ಣಾಂತಿ​ಕ​ವಾಗಿ ಹಲ್ಲೆ ಮಾಡಿದರು. ನಂತರ ಪೊದೆ​ಯೊ​ಳಗೆ ಅವಿ​ತು​ಕೊಂಡಿದ್ದ ಇದ್ರೀಸ್‌ ಪಾಷಾನನ್ನು ಪುನೀತ್‌ ಕೆರೆ​ಹಳ್ಳಿ ಮತ್ತು ಆತನ ಸಹ​ಚ​ರರು ಹಲ್ಲೆ ನಡೆಸಿ ಕೊಲೆ ಮಾಡಿ ಹೋಗಿ​ದ್ದಾರೆಂದು ನನ್ನ ಸ್ನೇಹಿ​ತ​ನಾದ ಸೈಯದ್‌ ಜಾಹೀರ್‌ ನೀಡಿದ ಮಾಹಿತಿ ಮೇರೆಗೆ ಪ್ರಕ​ರಣ ದಾಖ​ಲಿ​ಸಿ​ರು​ವು​ದಾಗಿ ಯೂನಸ್‌ ಪಾಷಾ ದೂರಿನಲ್ಲಿ ತಿಳಿ​ಸಿ​ದ್ದಾರೆ.



Ad Widget

ಅಲ್ಲದೆ, ಸೈಯದ್‌ ಜಾಹೀರ್‌ ನನ್ನು ಠಾಣೆಗೆ ಎಳೆ​ದು​ಕೊಂಡ ಬಂದ ಆರೋ​ಪಿ​ಗಳು ಇದ್ರೀಸ್‌ ಪಾಷಾ ಅವ​ರನ್ನು ಕೊಲೆ ಮಾಡಿ​ರುವ ವಿಚಾ​ರ​ವನ್ನು ಮರೆ​ಮಾ​ಚುವ ಉದ್ದೇ​ಶ​ದಿಂದ ನಮ್ಮ ಮೇಲೆಯೇ ದೂರು ನೀಡಿ​ದ್ದಾರೆ. ನಂತರ ಪೊಲೀಸ್‌ ಠಾಣೆ​ಯಲ್ಲಿ ನಾನು ಇದ್ರೀಸ್‌ ಪಾಷ​ನನ್ನು ಪುನೀತ್‌ ಕೆರೆ​ಹಳ್ಳಿ ಮತ್ತು ಆತನ ಸಹ​ಚ​ರರು ಕೊಲೆ ಮಾಡಿ​ರುವ ವಿಚಾ​ರ​ವನ್ನು ತಿಳಿ​ಸಿ​ರು​ವು​ದಾಗಿ ಉಲ್ಲೇಖಿ​ಸಿ​ದ್ದಾರೆ. ಕೋಮು ಸಂಘ​ರ್ಷಕ್ಕೆ ಕಾರ​ಣ​ವಾ​ಗಿ​ರುವ ಪುನೀತ್‌ ಕೆರೆ​ಹಳ್ಳಿ ಹಾಗೂ ಆತನ ಸಹ​ಚ​ರರ ಮೇಲೆ ಕಾನೂನು ರೀತ್ಯಾ ಕ್ರಮ ಜರು​ಗಿಸಿ ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ನ್ಯಾಯ ದೊರ​ಕಿ​ಸಿ​ಕೊ​ಡ​ಬೇ​ಕೆಂದು ಯೂನಸ್‌ ಪಾಷಾ ದೂರಿ​ನಲ್ಲಿ ಮನವಿ ಮಾಡಿ​ದ್ದಾ​ರೆ.

Click to comment

Leave a Reply

ಬಿಗ್ ನ್ಯೂಸ್

Half helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್‌ ಸಂಪೂರ್ಣ ನಿಷೇಧ

Published

on



Ad Widget

Ad Widget

Ad Widget

Ad Widget

ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಥವಾ ಐಎಸ್‌ಐ ಗುಣಮಟ್ಟದ ಮಾನದಂಡ ಹೊಂದಿರುವ ಸುರಕ್ಷಿತ ಹೆಲ್ಮೆಟ್‌ಗಳನ್ನೇ ಧರಿಸಬೇಕು. ತಪಾಸಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳಪೆ ಗುಣಮಟ್ಟದ ಅಥವಾ ಹಾಫ್ ಹೆಲ್ಮೆಟ್‌ಗಳನ್ನು ಬಳಸುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಂಭೀರ ತಲೆಪೆಟ್ಟಾಗುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Ad Widget

Ad Widget <> Ad Widget

ಹಾಫ್ ಹೆಲ್ಮೆಟ್‌ಗಳನ್ನು ಬಳಸುವ ಸವಾರರ ವಿರುದ್ಧ ಮಾತ್ರವಲ್ಲದೆ, ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸುವ ಘಟಕಗಳು ಹಾಗೂ ಅವುಗಳನ್ನು ಮಾರಾಟ ಮಾಡುವ ಅಂಗಡಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತವಾಗಿ ಇಂತಹ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವವರ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.



Ad Widget

ಸರ್ಕಾರದ ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Ad Widget

Ad Widget

ಸವಾರರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.

Ad Widget
Continue Reading

ಅಪರಾಧ

FIR-ಮತದಾರರ ಹೆಸರು ಅಳಿಸಲು ಫಾರಂ-7 ಅರ್ಜಿ ದುರ್ಬಳಕೆ; ಬೆಂಗಳೂರಿನಲ್ಲಿ ಐವರ ವಿರುದ್ಧ FIR

Published

on



Ad Widget

Ad Widget

Ad Widget

Ad Widget

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಕ್ಷೇತ್ರದ ವಿವಿಧ ಭಾಗಗಳಲ್ಲಿನ 5,698 ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Ad Widget

Ad Widget <> Ad Widget

ಪ್ರಕರಣದಲ್ಲಿ ಬಿಜೆಪಿ ಸಂಪರ್ಕ ಹೊಂದಿರುವ ಬೂತ್‌ ಮಟ್ಟದ ಏಜೆಂಟ್‌ಗಳಾದ ರಾಮಕೃಷ್ಣ ಹಾಗೂ ಯೋಗೇಶ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಅರ್ಜಿಗಳಲ್ಲಿ ಕೆಲವರ ವೈಯಕ್ತಿಕ ವಿವರಗಳನ್ನು ಅವರ ಅನುಮತಿಯಿಲ್ಲದೆ ಬಳಸಲಾಗಿದೆ ಹಾಗೂ ಕೆಲವು ಅರ್ಜಿಗಳಲ್ಲಿನ ಸಹಿಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.



Ad Widget

ಫಾರಂ-7 ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಅರ್ಜಿಗಳಲ್ಲಿನ ಸಹಿಗಳು ನಕಲಿಯಾಗಿವೆಯೇ ಹಾಗೂ ಮತದಾರರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಲಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳು ತನಿಖೆಯ ಹಂತದಲ್ಲಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

Continue Reading

ಬಿಗ್ ನ್ಯೂಸ್

Athletes-ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ಸರ್ಕಾರಿ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ; ಸರ್ಕಾರದಿಂದ ಅಧಿಸೂಚನೆ

Published

on



Ad Widget

Ad Widget

Ad Widget

Ad Widget

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ರಾಜ್ಯ ಸಿವಿಲ್‌ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ‘ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ) ನೇಮಕಾತಿ (ತಿದ್ದುಪಡಿ) ನಿಯಮ’ಗಳಿಗೆ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿತ್ತು. 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದರು.

Ad Widget

Ad Widget <> Ad Widget

ಎಲ್ಲ ವರ್ಗಗಳಿಗೂ ಅನ್ವಯ
ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಲ್ಲೂ ಶೇ.2ರಷ್ಟು ಮೀಸಲಾತಿ ಅನ್ವಯವಾಗಲಿದೆ.



Ad Widget

ಮೀಸಲಾತಿ ಪಡೆಯಲು ಅರ್ಹರಾಗುವ ಕ್ರೀಡಾಪಟುಗಳು ನಿರ್ದಿಷ್ಟ ಕ್ರೀಡೆ ಅಥವಾ ಸ್ಪರ್ಧೆಯಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಯಕ್ತಿಕವಾಗಿ ಅಥವಾ ತಂಡದ ಸದಸ್ಯರಾಗಿ ಭಾಗವಹಿಸಿರಬೇಕು. ಇತರ ರಾಜ್ಯಗಳು ಅಥವಾ ಭಾರತೀಯ ರೈಲ್ವೆಯಂತಹ ಸಂಸ್ಥೆಗಳನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಕನಿಷ್ಠ ಒಂದು ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸಿರುವುದು ಅಗತ್ಯವಾಗಿರುತ್ತದೆ.

Ad Widget

Ad Widget

ಅರ್ಹ ಕ್ರೀಡಾಪಟುಗಳಿಗೆ ಅವರ ಕ್ರೀಡಾ ಸಾಧನೆಗೆ ಅನುಗುಣವಾಗಿ ಕೃಪಾಂಕಗಳನ್ನು ನೀಡಲಾಗುತ್ತದೆ. ಒಲಿಂಪಿಕ್ಸ್‌ ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದವರಿಗೆ 50, ಬೆಳ್ಳಿ ಪದಕ ಪಡೆದವರಿಗೆ 49 ಹಾಗೂ ಕಂಚಿನ ಪದಕ ವಿಜೇತರಿಗೆ 48 ಕೃಪಾಂಕಗಳನ್ನು ನಿಗದಿಪಡಿಸಲಾಗಿದೆ. ಇದೇ ರೀತಿ ಅಧಿಸೂಚಿತ 34 ಕ್ರೀಡೆಗಳಲ್ಲಿ ಸಾಧನೆಗೆ ಅನುಗುಣವಾಗಿ ಕೃಪಾಂಕ ನೀಡಲಾಗುತ್ತದೆ.

‘ಕ್ರೀಡಾ ಪಯಣದ ಪ್ರತಿ ಹಂತದಲ್ಲೂ ಸರ್ಕಾರ ಬೆಂಬಲ’
ಈ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಜಿ. ಪರಮೇಶ್ವರ, “ಕ್ರೀಡಾಪಟುಗಳು ಪದಕ ಗೆಲ್ಲುವ ಕ್ಷಣದಲ್ಲಿ ಮಾತ್ರವಲ್ಲ, ಅವರ ಕ್ರೀಡಾ ಪಯಣದ ಪ್ರತಿ ಹಂತದಲ್ಲೂ ಸರ್ಕಾರ ಅವರ ಜೊತೆಗೆ ನಿಲ್ಲಲಿದೆ. ಪ್ರತಿಭೆಗೆ ಅವಕಾಶ, ಸಾಧನೆಗೆ ಗೌರವ ಮತ್ತು ಭವಿಷ್ಯಕ್ಕೆ ಭದ್ರತೆ ನೀಡುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದಾರೆ.

ಇದೇ ವೇಳೆ ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನದ ಮೊತ್ತವನ್ನು ಇತರ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಮೊತ್ತಕ್ಕೆ ಹೋಲಿಕೆ ಮಾಡಿ ಪರಿಷ್ಕರಿಸಲಾಗುವುದು ಎಂದು ಜಿ. ಪರಮೇಶ್ವರ್ ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading