Connect with us

ಮಂಗಳೂರು

Medical Seat Scam | ಕಣಚೂರು ಮೆಡಿಕಲ್‌ ಕಾಲೇಜ್‌ ನಲ್ಲಿ ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ : ವಂಚಕ ಉತ್ತರ ಪ್ರದೇಶದ ಇಫ್ತಿಕಾರ್‌ ಅಹಮ್ಮದ್‌ ನ ಹೆಡೆಮುರಿ ಕಟ್ಟಿದ ಪೊಲೀಸರು

Published

on

Ad Widget

Ad Widget

Ad Widget

Ad Widget

ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ (Medical Seat Scam) ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಅಮಾಯಕರನ್ನು ಮೋಸ ಮಾಡಿರುವ ಪ್ರಕರಣದ ಆರೋಪಿ ಉತ್ತರ ಪ್ರದೇಶ ಮೂಲದ ಇಪ್ತಿಕಾರ್ ಅಹಮ್ಮದ್ (31) ಎಂಬಾತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಪ್ರಸ್ತುತ ಈತನನ್ನು ಬಾಡಿ ವಾರೆಂಟ್ ಮೂಲಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ತರಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀದರ್ ಮೂಲದ ಶಶಿಕಾಂತ್ ದೀಕ್ಷಿತ್ ಎಂಬವರು ಆರೋಪಿಯು ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ 22.5 ಲ. ರೂ ಹಣ ನಗದಾಗಿ ಪಡೆದು ವಂಚಿಸಿರುವ ಕುರಿತು ದೂರು ನೀಡಿದ್ದರು ತಿಂಗಳ ಹಿಂದೆ ಮಾರ್ಚ್ ತಿಂಗಳಿನಲ್ಲಿ ಪ್ರಕರಣ ದಾಖಲಾಗಿತ್ತು.

Ad Widget

Ad Widget alt="Ad Widget"/>

Ad Widget


ಕಳೆದ ಡಿ .16 ರಂದು ಶಶಿಕಾಂತ್ ದೀಕ್ಷಿತ್ ಅವರನ್ನು ಸಂಪರ್ಕಿಸಿದ ಆರೋಪಿ ಇಫ್ತಿಕಾರ್ ಅಹಮ್ಮದ್ ಹಾಗೂ ಮತ್ತಿತ್ತರರು 50. ಲ.ರೂ ನೀಡಿದಲ್ಲಿ ಮಗ ಉತ್ತಮ್ ದೀಕ್ಷಿತ್ ಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಭರವಸೆ ನೀಡಿದರು. 15 ಲಕ್ಷ ಕ್ಯಾಪಿಟೇಷನ್ ಫೀಸ್ ಹಾಗೂ 7.5 ಲ.ರೂ ಟ್ಯೂಷನ್ ಪೀಸ್ ಎಂದು ತಿಳಿಸಿ ಒಟ್ಟು 22.5 ಲ. ರೂ. ಯನ್ನು ಆರೋಪಿಗಳು ವಸೂಲಿ ಮಾಡಿದ್ದರು.ಉಳಿದ ದಾಖಲಾತಿ ಬಳಿಕ ನೀಡುವಂತೆ ತಿಳಿಸಿದ ಅವರು ಜನವರಿ ತಿಂಗಳ ಮೊದಲ ವಾರದಲ್ಲಿ ಮಗನ ಎಡ್ಮಿಷನ್ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಆಗುವುದಾಗಿಯೂ ತಿಳಿಸಿದ್ದರು.

Ad Widget

Ad Widget <> Ad Widget


ಜ.5 ರಂದು ಶಶಿಕಾಂತ್ ದೀಕ್ಷಿತ್ ಹಾಗೂ ಅವರ ಪುತ್ರ ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜಿಗೆ ಭರ್ತಿ ಆಗುವ ಉದ್ದೇಶದಿಂದ ಆಗಮಿಸಿದ್ದು ಆದರೇ ಅಲ್ಲಿ ಉತ್ತಮ್ ದೀಕ್ಷಿತ್ ಆಡ್ಮಿಷನ್ ಆಗಿರಲಿಲ್ಲ. ಕಾಲೇಜಿನವರು ತಮಗೆ ಯಾರೋ ಬ್ರೋಕರ್ ಮೋಸ ಮಾಡಿರುವುದಾಗಿ ತಿಳಿಸಿರುತ್ತಾರೆ.


ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ವಿಶಾಖ ಪಟ್ಟಣದ ಚಪ್ಪಗಾಡಿ ಎರುಕ್ಕು ನಾಯ್ಡು ಎಂಬವರಿಗೆ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಡರ್ಮಟಾಲಜಿ ಸೀಟು ದೊರಕಿಸುವುದಾಗಿ ಹೇಳಿ ಇದೇ ಆರೋಪಿಗಳು 50 ಲ. ರೂ ವಂಚಿಸಿರುವುದಾಗಿ ಆರೋಪಿಸಲಾಗಿತ್ತು.

Ad Widget

Ad Widget


ಇನ್ನು ಈ ಪ್ರಕರಣದ ಕುರಿತು ಕಣಚೂರು ಮೆಡಿಕಲ್ ಕಾಲೇಜಿನವರು ಮಂಗಳೂರು ಸೈಬರ್ ಕ್ರೈಮ್ ಸಿಇ ಎನ್ ಗೆ ದೂರು ನೀಡಿದರು . ಇದೀಗ ಆರೋಪಿ ಉತ್ತರ ಪ್ರದೇಶದ ಗೌತಮ್ ಬುದ್ದ ನಗರ ನೊಯ್ಡ ದ ಇಪ್ತಿಕಾರ್ ಅಹಮ್ಮದ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ಬಾಡಿ ವಾರೆಂಟ್ ಮೂಲಕ ಉಳ್ಳಾಲ ಠಾಣೆಗೆ ಕರೆ ತರಲಾಗಿದೆ.

Ad Widget
Click to comment

Leave a Reply

ಮಂಗಳೂರು

Mangalore-ಮಂಗಳೂರು: ರಾತ್ರಿ 11:45ರಿಂದ ಬೆಳಗ್ಗೆ 5:30ರವರೆಗೆ ವ್ಯಾಪಾರ ನಿರ್ಬಂಧ; ಪೊಲೀಸ್ ಆಯುಕ್ತರಿಂದ ಹೊಸ ಆದೇಶ

Published

on

Ad Widget

Ad Widget

Ad Widget

Ad Widget

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳ ವ್ಯಾಪಾರ ವಹಿವಾಟಿಗೆ ರಾತ್ರಿ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು, ನ.23: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳ ವ್ಯಾಪಾರ ವಹಿವಾಟಿಗೆ ರಾತ್ರಿ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಆದೇಶದ ಪ್ರಕಾರ, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ವ್ಯಾಪಾರಿಕ ಸಂಸ್ಥೆಗಳು ಪ್ರತಿದಿನ ರಾತ್ರಿ 11:45ರಿಂದ ಮಾರನೇ ದಿನ ಬೆಳಗ್ಗೆ 5:30ರವರೆಗೆ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಈ ನಿರ್ಬಂಧವು ಸಿಎಲ್-4, ಸಿಎಲ್-6(ಎ) ಹಾಗೂ ಸಿಎಲ್-7 ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಅಂತಹ ಸಂಸ್ಥೆಗಳು ತಮ್ಮ ಪರವಾನಗಿಯಲ್ಲಿ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Ad Widget

Ad Widget <> Ad Widget

ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಉಪಯೋಗಿತಾ ಸೇವೆಗಳು ಹಾಗೂ ಸರಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ಪಡೆದ ಸಂಸ್ಥೆಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ನಿರ್ಬಂಧಕ್ಕೆ ಕಾರಣವೇನು?
ಮಂಗಳೂರು ನಗರವು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಬಂದರು ನಗರವಾಗಿದ್ದು, ವಿವಿಧ ಧರ್ಮ, ಜಾತಿ ಮತ್ತು ಸಮುದಾಯಗಳ ಜನರು ಸಹಬಾಳ್ವೆಯಿಂದ ನೆಲೆಸಿರುವ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ನಗರದ ಹಲವು ಭಾಗಗಳಲ್ಲಿ ತಡರಾತ್ರಿಯವರೆಗೂ, ಕೆಲವೆಡೆ ಬೆಳಗಿನ ಜಾವದವರೆಗೂ ವ್ಯಾಪಾರ ವಹಿವಾಟು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Ad Widget

Ad Widget

ರಾತ್ರಿ ವೇಳೆ ಅನಗತ್ಯವಾಗಿ ಜನರು ಗುಂಪುಗೂಡುವುದು, ಓಡಾಟ ನಡೆಸುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ವದಂತಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ವ್ಯಾಪಾರ ಕೇಂದ್ರಗಳು ರಾತ್ರಿ ಪೂರ್ತಿ ತೆರೆದಿರುವುದರಿಂದ ಜನಸಂದಣಿ ಹೆಚ್ಚಾಗಿ ಅಹಿತಕರ ಘಟನೆಗಳಿಗೆ ಕಾರಣವಾಗುವ ಅಪಾಯವೂ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ರಾತ್ರಿ ವೇಳೆ ಅಂಗಡಿಗಳು, ಹೋಟೆಲ್‌ಗಳು ಹಾಗೂ ಇತರ ವ್ಯಾಪಾರ ಕೇಂದ್ರಗಳ ಸುತ್ತಮುತ್ತ ಮಾದಕ ವ್ಯಸನಿಗಳು, ಸಮಾಜಘಾತಕ ವ್ಯಕ್ತಿಗಳು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಅನಗತ್ಯವಾಗಿ ಓಡಾಡುವುದು, ಕಾಲಹರಣ ಮಾಡುವುದು ಕಂಡುಬರುತ್ತಿದ್ದು, ಇಂತಹ ಪರಿಸ್ಥಿತಿಗಳು ಅಪರಾಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ವ್ಯಾಪಾರ ಕೇಂದ್ರಗಳ ಸುತ್ತ ವಾಹನಗಳ ನಿಲುಗಡೆ, ಜೋರಾದ ಶಬ್ದ, ರಸ್ತೆಗಳಲ್ಲಿ ಅನಗತ್ಯ ಗುಂಪುಗೂಡುವಿಕೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ವಸತಿ ಪ್ರದೇಶಗಳ ನಿವಾಸಿಗಳ ನೆಮ್ಮದಿ ಮತ್ತು ಶಾಂತಿಗೆ ಭಂಗ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾತ್ರಿ 11:45ರಿಂದ ಬೆಳಗ್ಗೆ 5:30ರವರೆಗೆ ವ್ಯಾಪಾರ ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Ad Widget
Continue Reading

ಅಪರಾಧ

Mangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ

Published

on

Ad Widget

Ad Widget

Ad Widget

Ad Widget

ಮಂಗಳೂರು ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget alt="Ad Widget"/>

Ad Widget

ಮಂಗಳೂರು ಸರ್ಕೀಟ್ ಹೌಸ್ ಮುಂಭಾಗದ ಕದ್ರಿ ಯುದ್ಧ ಸ್ಮಾರಕದ ಬಳಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದ ಟಿ-55 ಯುದ್ಧ ಟ್ಯಾಂಕ್‌ನ್ನು ಸಾರ್ವಜನಿಕರ ವೀಕ್ಷಣೆಗಾಗಿ ಎತ್ತರದ ವೇದಿಕೆಯಲ್ಲಿ ಇರಿಸಲಾಗಿದೆ.

Ad Widget

Ad Widget <> Ad Widget

ರಾತ್ರಿ ವೇಳೆ ಇಬ್ಬರು ಯುವಕರು ಟ್ಯಾಂಕ್ ಮೇಲೆ ಹತ್ತಿ, ಅದರ ಹ್ಯಾಚ್ ತೆರೆದು ಒಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಿಡಿಗೇಡಿತನದ ವರ್ತನೆಯನ್ನು ವಿಡಿಯೋ ಮಾಡಿಕೊಂಡಿರುವ ಯುವಕರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ದೇಶದ ಯುದ್ಧ ಇತಿಹಾಸ ಹಾಗೂ ಸೈನಿಕರ ಶೌರ್ಯ, ತ್ಯಾಗದ ಸಂಕೇತವಾಗಿ ಇರಿಸಲಾಗಿರುವ ಟ್ಯಾಂಕ್ ಬಳಿ ಯುವಕರು ಇಂತಹ ವರ್ತನೆ ತೋರಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಕದ್ರಿ ಪೊಲೀಸ್ ಠಾಣೆಯ ಎದುರಿನಲ್ಲೇ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ, ವಿಡಿಯೋದಲ್ಲಿರುವ ಯುವಕರನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.

Ad Widget
Continue Reading

ಶಿಕ್ಷಣ

Sahyadri-ಸಹ್ಯಾದ್ರಿಯಲ್ಲಿ ವಿಟಿಯು ಕನ್ಸೋರ್ಟಿಯಂ ಇ-ಸಂಪನ್ಮೂಲಗಳ ಪ್ರಾದೇಶಿಕ ತರಬೇತಿ ಕಾರ್ಯಕ್ರಮ

Published

on

Ad Widget

Ad Widget

Ad Widget

Ad Widget

ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (SCEM),ಮಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಸಹಯೋಗದೊಂದಿಗೆ, ನವೆಂಬರ್ 20 ರಂದು ಕಾಲೇಜಿನ ನೆಲ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ VTU ಕನ್ಸೋರ್ಟಿಯಂ ಇ-ಸಂಪನ್ಮೂಲ ತರಬೇತಿ ಕಾರ್ಯಕ್ರಮ 2026–27 ಅನ್ನು ಆಯೋಜಿಸಲಾಯಿತು.

Ad Widget

Ad Widget

Ad Widget

Ad Widget

ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (SCEM),ಮಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಸಹಯೋಗದೊಂದಿಗೆ, ನವೆಂಬರ್ 20 ರಂದು ಕಾಲೇಜಿನ ನೆಲ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ VTU ಕನ್ಸೋರ್ಟಿಯಂ ಇ-ಸಂಪನ್ಮೂಲ ತರಬೇತಿ ಕಾರ್ಯಕ್ರಮ 2026–27 ಅನ್ನು ಆಯೋಜಿಸಲಾಯಿತು.

Ad Widget

Ad Widget alt="Ad Widget"/>

Ad Widget

ವಿಟಿಯು ಕನ್ಸೋರ್ಟಿಯಂ ಮೂಲಕ ಲಭ್ಯವಿರುವ ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಜಾಗೃತಿಯನ್ನು ಹೆಚ್ಚಿಸಲು ಕರ್ನಾಟಕದಾದ್ಯಂತ ಎಂಜಿನಿಯರಿಂಗ್ ಸಂಸ್ಥೆಗಳ ಗ್ರಂಥಪಾಲಕರು, ಅಧ್ಯಾಪಕರು ಮತ್ತು ಶೈಕ್ಷಣಿಕ ವೃತ್ತಿಪರರನ್ನು ಪ್ರಾದೇಶಿಕ ಮಟ್ಟದ ಕಾರ್ಯಕ್ರಮವು ಒಟ್ಟುಗೂಡಿಸಿತು.

Ad Widget

Ad Widget <> Ad Widget

ಉದ್ಘಾಟನಾ ಸಮಾರಂಭವು ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಕುಮಾರಿ ಪೂರ್ವಿ ಶೆಟ್ಟಿ ಪಿ. ಜಿ. ಮತ್ತು ಕುಮಾರಿ ಗೌತಮಿ ಆರ್. ಅವರು ನಡೆಸಿಕೊಟ್ಟ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣ ಮಾಡಿದರು.

ನಂತರ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಸಿಇಎಂ (SCEM) ನ ಸಹಾಯಕ ಗ್ರಂಥಪಾಲಕರಾದ ಡಾ. ಶ್ವೇತಾ ಕುಮಾರಿ ಕೆ. ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮಂಗಳೂರಿನ ವಿಟಿಯು (VTU) ವಿಸ್ತರಣಾ ಕೇಂದ್ರದ ವಿಶೇಷ ಅಧಿಕಾರಿ ಡಾ. ದಾಮೋದರ ನಾರಲ್ ಅವರು ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

Ad Widget

Ad Widget

ಎಸ್‌ಸಿಇಎಂನ ಸಹ ಪ್ರಾಧ್ಯಾಪಕರಾದ ಡಾ. ಚಂದನಾ ಬಿ. ಆರ್. ಅವರು ಮುಖ್ಯ ಅತಿಥಿಗಳಾದ ಎನ್‌ಐಟಿಕೆ (NITK) ಸುರತ್ಕಲ್‌ನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಅಂಗಡಿ ಅವರನ್ನು ಪರಿಚಯಿಸಿದರು; ಬಳಿಕ ಡಾ. ಮಲ್ಲಿಕಾರ್ಜುನ ಅಂಗಡಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಎಸ್‌ಸಿಇಎಂನ ಆಡಳಿತಾಧಿಕಾರಿ ಹಾಗೂ ಟ್ರಸ್ಟಿ ಶ್ರೀ ಕೃಷ್ಣ ಹೆಗಡೆ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಗ್ರಂಥಪಾಲಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಭಾರತಿ ಕೆ. ಅವರು ವಂದನಾರ್ಪಣೆ ಸಲ್ಲಿಸಿದರು. ತಾಂತ್ರಿಕ ಅವಧಿಗಳಲ್ಲಿ IEEE, PAT ಟೆಕ್ನಾಲಜಿ, GATEtutor, ProQuest, Elsevier ScienceDirect, Taylor & Francis, Emerald Publishing, Cambridge University Press, Pearson, DrillBit ಮತ್ತು Quiklrn ಸೇರಿದಂತೆ ಪ್ರಮುಖ ಶೈಕ್ಷಣಿಕ ಪ್ರಕಾಶಕರು ಮತ್ತು ಡಿಜಿಟಲ್ ಸಂಪನ್ಮೂಲ ಪೂರೈಕೆದಾರರ ಪ್ರತಿನಿಧಿಗಳಿಂದ ಪ್ರಸ್ತುತಿಗಳು ಮತ್ತು ಪ್ರದರ್ಶನಗಳು ನಡೆದವು. ಅವಧಿಗಳಲ್ಲಿ ಎಲ್ಸೆವಿಯರ್ ಅವರ ಸ್ಕೋಪಸ್ ಡೇಟಾಬೇಸ್ ಕುರಿತು ಪ್ರಸ್ತುತಿ ಮತ್ತು MAP ಸಿಸ್ಟಮ್ಸ್ ಅವರ MAP My Access System ನ ಅವಲೋಕನವೂ ಸೇರಿತ್ತು.

ಸಂಪನ್ಮೂಲ ವ್ಯಕ್ತಿಗಳು ವಿದ್ವತ್ಪೂರ್ಣ ಜರ್ನಲ್‌ಗಳು, ಇ-ಪುಸ್ತಕಗಳು, ಸಂಶೋಧನಾ ಡೇಟಾಬೇಸ್‌ಗಳು, ಪರೀಕ್ಷಾ ತಯಾರಿ ಸಂಪನ್ಮೂಲಗಳು, ಕೃತಿಚೌರ್ಯ ಪತ್ತೆ ಪರಿಕರಗಳು ಮತ್ತು ಡಿಜಿಟಲ್ ಕಲಿಕಾ ವೇದಿಕೆಗಳನ್ನು ಪ್ರವೇಶಿಸುವ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು. ಬೋಧನೆ, ಕಲಿಕೆ ಮತ್ತು ಸಂಶೋಧನೆಯಲ್ಲಿ ಈ ಸಂಪನ್ಮೂಲಗಳ ವೈಶಿಷ್ಟ್ಯಗಳು, ಹುಡುಕಾಟ ಸೌಲಭ್ಯಗಳು ಮತ್ತು ಪ್ರಾಯೋಗಿಕ ಅನ್ವಯಿಕೆಗಳನ್ನು ಅರ್ಥಮಾಡಿಕೊಳ್ಳಲು ಭಾಗವಹಿಸುವವರಿಗೆ ಸಂವಾದಾತ್ಮಕ ಅವಧಿಗಳು ಸಹಾಯ ಮಾಡಿದವು.

ಈ ಕಾರ್ಯಕ್ರಮದಲ್ಲಿ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳನ್ನು ಪ್ರತಿನಿಧಿಸುವ ಗ್ರಂಥಪಾಲಕರು ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸಿದ್ದರು. ಇದು ಜ್ಞಾನ ಹಂಚಿಕೆ, ವೃತ್ತಿಪರ ಸಂವಹನ ಮತ್ತು ಡಿಜಿಟಲ್ ಸಂಪನ್ಮೂಲಗಳೊಂದಿಗೆ ಶೈಕ್ಷಣಿಕ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಈ ವಿಟಿಯು ಒಕ್ಕೂಟದ ಪ್ರಾದೇಶಿಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಸಹ್ಯಾದ್ರಿ ಕಾಲೇಜು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು, ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಶೈಕ್ಷಣಿಕ ಇ-ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯ ಮೂಲಕ
ಗುಣಮಟ್ಟದ ಉನ್ನತ ಶಿಕ್ಷಣವನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.
ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜಿನ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಡಾ. ಭಾರತಿ ಕೆ. ಸಂಯೋಜಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!