ಕಾರ್ಕಳ
Pramod Muthalik | ಕಾರ್ಕಳ ಪಕ್ಷೇತರ ಅಭ್ಯರ್ಥಿಯಾಗಿ ಫೈರ್ ಬ್ರಾಂಡ್ ಹಿಂದೂ ನಾಯಕ ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ : ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು ಎಂದು ಸವಾಲು ಹಾಕಿದ ಮುತಾಲಿಕ್
ಉಡುಪಿ: ‘ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ (Pramod Muthalik) ಅಧಿಕೃತ ಘೋಷಣೆ ಮಾಡಿದ್ದಾರೆ.
ಕಾರ್ಕಳದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ ಮಾಡುತ್ತಿದ್ದೇನೆ. ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ ಜನ ಬೆಂಬಲಿಸಿದ್ದಾರೆ. ಕಾರ್ಕಳದಲ್ಲಿ ಹಿಂದೂಗಳಿಗೆ ನೋವಾಗಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವ ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.
‘ನಾನು ಬಿಜೆಪಿ, ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು’ ಎಂದು ಅವರು ಹೇಳಿದರು. ಈ ಮೂಲಕ ಕಾರ್ಕಳದಲ್ಲಿ ತನ್ನ ಶಿಷ್ಯ ಸುನಿಲ್ ಕುಮಾರ್ ಇದೀಗ ತನ್ನ ಗುರುವಿಗೆ ಈ ಸ್ಥಾನ ಬಿಟ್ಟುಕೊಡುತ್ತಾರ ನೋಡಬೇಕಾಗಿದೆ.
ಪತ್ರಿಕಾಗೋಷ್ಠಿ ಯಲ್ಲಿ ಶ್ರೀರಾಮಸೇನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಹರೀಶ್ ಅಧಿಕಾರಿ, ಸುಧೀರ್ ಹೆಬ್ರಿ, ಸುಂದರ, ಜಯರಾಮ್ ಉಪಸ್ಥಿತರಿದ್ದರು
ನಿಧನ ವಾರ್ತೆ
Karkala-ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು; ಸ್ನೇಹಿತನ ರಕ್ಷಣೆಗೆ ಧಾವಿಸಿ ಹರ್ಷನ್ ಸಾವು
ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಮೀಪ ಸೆ.29ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಹಿರ್ಗಾನ ಗ್ರಾಮದ ರಾಜೀವ ನಗರ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (22) ಎಂದು ಗುರುತಿಸಲಾಗಿದೆ.

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಮೀಪ ಸೆ.29ರಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಹಿರ್ಗಾನ ಗ್ರಾಮದ ರಾಜೀವ ನಗರ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (22) ಎಂದು ಗುರುತಿಸಲಾಗಿದೆ.
ಭರತ್ ಅವರು ಪೇಂಟಿಂಗ್ ಹಾಗೂ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಹರ್ಷನ್ ಮಂಗಳೂರಿನಲ್ಲಿ ಎಟಿಎಂ ಪಿನ್ ಜನರೇಟರ್ ಸಂಬಂಧಿತ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಭರತ್, ಹರ್ಷನ್, ವಿತೇಶ್ ಶೆಟ್ಟಿ ರಂಜಿತ್ ನಾಯಕ್, ಕೇತನ್ ನಾಯಕ್ ನದಿಗೆ ಈಜಲು ತೆರಳಿದ್ದು ಈ ವೇಳೆ ಭರತ್ ನೀರಿನ ಸುಳಿಗೆ ಸಿಲುಕಿ ಹೊರಬರಲು ಒದ್ದಾಡುತ್ತಿರುವುದನ್ನು ಗಮನಿಸಿದ ಹರ್ಷನ್, ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಹರ್ಷನ್ ಕೂಡ ನೀರಿನ ಸುಳಿಗೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಬಳಿಕ ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ಆರಂಭಿಸಿದರು.
ಘಟನಾ ಸ್ಥಳಕ್ಕೆ ವಾಹನಗಳು ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಕಿ.ಮೀ. ದೂರ ನಡೆದುಕೊಂಡೇ ಸ್ಥಳಕ್ಕೆ ತೆರಳಬೇಕಾಯಿತು. ಬಳಿಕ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಸಂಜೆ 6 ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿ ನದಿಯಿಂದ ಮೇಲಕ್ಕೆತ್ತಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ರೂಪೇಶ್, ಸುರೇಶ್, ದಿನೇಶ್, ನಿತ್ಯಾನಂದ, ಶಿವಾನಂದ ಹಾಗೂ ಸ್ಥಳೀಯರಾದ ರಂಜಿತ್ ಮತ್ತು ಕೇತನ್ ಭಾಗವಹಿಸಿದ್ದರು. ಎಎಸ್‌ಪಿ ಇಷಿತಾ ಗುಪ್ತ, ವೃತ್ತ ನಿರೀಕ್ಷಕ ರಾಘವೇಂದ್ರ ಹಾಗೂ ನಗರ ಠಾಣೆ ಎಸ್‌ಐ ಶಿವಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಬಡ ಕುಟುಂಬ
ಮೃತ ಭರತ್ ಪೂಜಾರಿ ಬಡ ಕುಟುಂಬದವರಾಗಿದ್ದು, ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದರು. ಕುಟುಂಬದ ಜವಾಬ್ದಾರಿ ಅವರ ಮೇಲಿತ್ತು ಎನ್ನಲಾಗಿದೆ. ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಕಾಮಗಾರಿ ಈಗಾಗಲೇ ಸ್ಲ್ಯಾಬ್ ಹಂತ ತಲುಪಿತ್ತು. ಹರ್ಷನ್ ಆಚಾರ್ಯ ಅವರ ತಂದೆ ನಿಧನರಾಗಿದ್ದು, ತಾಯಿ ಹಾಗೂ ಅಕ್ಕನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಾರ್ಕಳ
Sunil Kumar-ಸ್ಥಳೀಯ ಕಂಬಳ ಕಡೆಗಣಿಸಿ ಮೈಸೂರು ಕಂಬಳಕ್ಕೆ 8 ಕೋಟಿ ಖರ್ಚು -ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ಕಿಡಿ..! ಜಿಲ್ಲೆಯ ಕಂಬಳಕ್ಕೆ ತಲಾ 25 ಕೋಟಿ ಕೊಡಿ
ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಸರ್ಕಾರದ ನಿರ್ಧಾರದ ಬಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಕೇವಲ ಹಠಕ್ಕೆ ಬೀಳದೆ, ತಜ್ಞರ ಮತ್ತು ಅನುಭವಸ್ಥರ ಅಭಿಪ್ರಾಯ ಪಡೆಯುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಕಾರ್ಕಳ: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಸರ್ಕಾರದ ನಿರ್ಧಾರದ ಬಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಕೇವಲ ಹಠಕ್ಕೆ ಬೀಳದೆ, ತಜ್ಞರ ಮತ್ತು ಅನುಭವಸ್ಥರ ಅಭಿಪ್ರಾಯ ಪಡೆಯುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಸಮಾಲೋಚನೆ ಅತ್ಯಗತ್ಯ:
ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಮೈಸೂರಿಗೆ ‘ರಫ್ತು’ ಮಾಡುವಾಗ ಅದರಿಂದಾಗುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಕಂಬಳವನ್ನು ಕೇವಲ ಪ್ರದರ್ಶನದ ವಸ್ತುವನ್ನಾಗಿ ನೋಡಬಾರದು. ಹೀಗಾಗಿ, ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಕಂಬಳ ಆಯೋಜಕರು ಮತ್ತು ಕೋಣಗಳ ಮಾಲೀಕರ ಜೊತೆ ಸರ್ಕಾರ ವಿಸ್ತೃತವಾಗಿ ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅನುದಾನದ ತಾರತಮ್ಯಕ್ಕೆ ಆಕ್ರೋಶ:
ಮೈಸೂರು ಕಂಬಳಕ್ಕಾಗಿ ಸುಮಾರು 8 ಕೋಟಿ ರೂಪಾಯಿ ಖರ್ಚು ಮಾಡಲು ಚಿಂತಿಸುತ್ತಿರುವ ಸರ್ಕಾರ, ಕರಾವಳಿಯ ಮೂಲ ಕಂಬಳಗಳನ್ನು ಕಡೆಗಣಿಸುತ್ತಿದೆ ಎಂದು ಸುನಿಲ್ ಕುಮಾರ್ ದೂರಿದ್ದಾರೆ. “ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರ್ಷಾನುಗಟ್ಟಲೆ ನಡೆಯುತ್ತಿರುವ ಕಂಬಳಗಳಿಗೆ ತಲಾ 2.5 ಲಕ್ಷ ರೂಪಾಯಿ ನೀಡಲು ಈ ಸರ್ಕಾರ ಹಿಂದೇಟು ಹಾಕುತ್ತಿದೆ. ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು, ಕರಾವಳಿಯ 20 ಪ್ರಮುಖ ಜಿಲ್ಲಾಮಟ್ಟದ ಕಂಬಳಗಳಿಗೆ ತಲಾ 25 ಲಕ್ಷ ರೂಪಾಯಿ ಅನುದಾನ ನೀಡಲಿ” ಎಂದು ಅವರು ಸವಾಲು ಹಾಕಿದ್ದಾರೆ.
ಈ ಬಗ್ಗೆ ಈಗಾಗಲೇ ಸದನದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಲಾಗಿದ್ದು, ಸರ್ಕಾರ ಮೊದಲು ಸ್ಥಳೀಯ ಕಂಬಳಗಳ ವೈಭವ ಮತ್ತು ಅಸ್ತಿತ್ವವನ್ನು ಉಳಿಸಲು ಆದ್ಯತೆ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಪರಾಧ
Karkala-ಕಾರ್ಕಳ : ಪತಿ-ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಹೋದ ವಿವಾಹಿತೆ: ಪೊಲೀಸ್ ಠಾಣೆಯಲ್ಲಿ “ತಪ್ಪಿನ ಅರಿವಾಗಿ” ವಾಪಸ್ಸು ಪತಿ ಮನೆಗೆ ತೆರಳಿದ ಮಹಿಳೆ
ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯ ಪ್ರಕರಣವೊಂದು, ಪೊಲೀಸರ ಸಕಾಲಿಕ ಮಧ್ಯಸ್ಥಿಕೆ ಮತ್ತು ಸಮಾಲೋಚನೆಯಿಂದಾಗಿ ಸುಖಾಂತ್ಯ ಕಂಡಿದೆ.
ಕಾರ್ಕಳ: ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯ ಪ್ರಕರಣವೊಂದು, ಪೊಲೀಸರ ಸಕಾಲಿಕ ಮಧ್ಯಸ್ಥಿಕೆ ಮತ್ತು ಸಮಾಲೋಚನೆಯಿಂದಾಗಿ ಸುಖಾಂತ್ಯ ಕಂಡಿದೆ.
ಮಹಿಳೆಯೊಬ್ಬರು ತನ್ನ ಸಂಸಾರವನ್ನು ಬಿಟ್ಟು ಪ್ರಿಯಕರನೊಡನೆ ಕಾರ್ಕಳದಲ್ಲಿ ವಾಸವಿದ್ದರು. ಈ ವಿಷಯ ತಿಳಿದ ಪತಿ ಹಾಗೂ ಕುಟುಂಬಸ್ಥರು ತಕ್ಷಣ ಕಾರ್ಕಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ನೆರವು ಕೋರಿದ್ದರು. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮಹಿಳೆಗೆ ಸಂಸಾರದ ಮಹತ್ವ, ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಜವಾಬ್ದಾರಿಗಳ ಕುರಿತು ಗಂಭೀರವಾಗಿ ಬುದ್ಧಿವಾದ ಹೇಳಿದರು. ಕುಟುಂಬಸ್ಥರು ಕೂಡ ಮಹಿಳೆಯನ್ನು ಮರಳಿ ಮನೆಗೆ ಬರುವಂತೆ ಮನವೊಲಿಸಿದರು. ಕೊನೆಗೆ ತನ್ನ ತಪ್ಪಿನ ಅರಿವಾದ ಮಹಿಳೆ, ಪ್ರಿಯಕರನ ಸಹವಾಸ ತೊರೆದು ಪತಿ ಮತ್ತು ಮಕ್ಕಳೊಂದಿಗೆ ಸಂಸಾರ ನಡೆಸಲು ಒಪ್ಪಿಕೊಂಡರು.
ಇಬ್ಬರ ನಡುವಿನ ಮನಸ್ತಾಪವು ಮಾತುಕತೆಯ ಮೂಲಕ ರಾಜಿಯಾಗಿ ಬಗೆಹರಿದ ಕಾರಣ, ಯಾವುದೇ ಕಾನೂನು ಕ್ರಮ ಅಥವಾ ಕೇಸು ದಾಖಲಾಗದೆ ಪ್ರಕರಣವು ಠಾಣೆಯಲ್ಲೇ ಇತ್ಯರ್ಥವಾಯಿತು. ಈ ಮೂಲಕ ವಿಭಜನೆಯ ಅಂಚಿನಲ್ಲಿದ್ದ ಕುಟುಂಬವೊಂದು ಮತ್ತೆ ಒಂದಾಗಿದೆ.
-
ಬಿಗ್ ನ್ಯೂಸ್21 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
Uncategorized22 hours ago
ಶಿಕ್ಷೆಯ ವಿರುದ್ಧ ಹೈಕೋರ್ಟಿಗೆ ಅಪೀಲು; ನ್ಯಾಯಾಲಯಕ್ಕೆ ಗೈರು: ನೆಕ್ಕಿಲಾಡಿಯಲ್ಲಿ ಆರೋಪಿಯ ಬಂಧನ
-
ರಾಜಕೀಯ21 hours ago2027ರ ಜನವರಿ ಮೊದಲ ವಾರದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ : ಸಚಿವ ಸಂಪುಟದಲ್ಲಿ ಚರ್ಚೆ..!
-
Uncategorized21 hours ago
Rahul Gandhi ;8 ಗಂಟೆಗಳ ಧರಣಿ ಬಳಿಕ ಪೊಲೀಸ್ ಆ್ಯಕ್ಷನ್: ರಾಹುಲ್–ಪ್ರಿಯಾಂಕಾ ಸೇರಿ 50 ಸಂಸದರು ವಶ
-
ಮಂಗಳೂರು10 hours agoChouta-ಫಾರಂ 7 ಕೊಟ್ಟ ಮಾತ್ರಕ್ಕೆ ಮತ ಡಿಲೀಟ್ ಆಗಲ್ಲ; ಅಕ್ರಮ ಡಿಲೀಷನ್ಗೆ ದಾಖಲೆ ತೋರಿಸಿ: ಕಾಂಗ್ರೆಸ್ಗೆ ಚೌಟ ಸವಾಲು
-
ಅಂತರ ರಾಜ್ಯ8 hours agoಕಾಸರಗೋಡು: ಆರ್ಎಸ್ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
-
ರಾಜಕೀಯ9 hours agoAshok Rai-ಪಕ್ಷ ಸಂಘಟನೆಗೆ ಅಶೋಕ್ ರೈ ಹೊಸ ಹೆಜ್ಜೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ ಬೊಲೆರೋ
-
ಸ್ಥಳೀಯ7 hours agoBeltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು


















