ಅಪರಾಧ
Sri Ullati Kshetra ಕಾರಣೀಕ ಪ್ರಸಿದ್ದ ಕೇಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳ್ಳತನ
ವಿಟ್ಲ Vitla ನ 19: ತುಳುನಾಡಿನ ಕಾರಣಿ ದೈವ ಕ್ಷೇತ್ರಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕೇಲಿಂಜ (kelinja) ಶ್ರೀ ಉಳ್ಳಾಲ್ತಿ ಕ್ಷೇತ್ರದ (Ullalti Kshetra) ಕಾಣಿಕೆ ಡಬ್ಬಿಯನ್ನು ದುಷ್ಕರ್ಮಿಗಳು ದೋಚಿದ ಘಟನೆ ಅ .8 ರಂದು ರಾತ್ರಿ ನಡೆದಿದೆ. ಕೃತ್ಯವೂ ಅ .9 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ದೈವಸ್ಥಾನದ ಕಟ್ಟೆಯ ಬಳಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ನಿನ್ನೆ ರಾತ್ರಿ ಕದ್ದೊಯ್ಯಲಾಗಿದೆ. ಇತಿಹಾಸ ಪ್ರಸಿದ್ದವಾಗಿರುವ ಈ ದೈವ ಸ್ಥಾನಕ್ಕೆ ಅಪಾರ ಭಕ್ತರಿದ್ದಾರೆ. ಇದರ ಮುಂಭಾಗ ವಾಹನಗಳಲ್ಲಿ ಅಥಾವ ಪಾದಚಾರಿಗಳು ಹೋಗುವಾಗ ದೈವಸ್ಥಾನದ ಕಾಣಿಕೆ ಡಬ್ಬಿಗೆ ಕಾಣಿಕೆ ಹಾಕುವ ವಾಡಿಕೆಯನ್ನು ಭಕ್ತರು ಇಟ್ಟುಕೊಂಡಿದ್ದಾರೆ. ಇದರ ಅರಿವಿದ್ದ ದುಷ್ಕರ್ಮಿ ಹಣ ಲಪಟಾಯಿಸುವ ಉದ್ಧೇಶದಿಂದ ಕಾಣಿಕೆ ಡಬ್ಬಿ ಎಗರಿಸಿದ್ದಾನೆ.
ಕೇಲಿಂಜ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ಮೆಚ್ಚಿ ಜಾತ್ರೆ ನಡೆಯುತ್ತಿದ್ದು , ಇದರಲ್ಲಿ ಭಾಗವಹಿಸಲು ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೆಂಜೆಂತಿಮಾರ್ ಗುತ್ತು ಮೂಲ ಭಂಡಾರದ ಮನೆಯಿಂದ ಮೆಚ್ಚಿ ಜಾತ್ರೆಯ ಹಿಂದಿನ ದಿನ ಉಲ್ಲಾಳ್ತಿಯ ಭಂಡಾರ ಆಗಮಿಸುತ್ತದೆ. ಆಗ ಊರಿನವರು ತಮ್ಮ ಮನೆಗಳಿಗೆ ಬಾಗಿಲು ಹಾಕದೆ ಉಲ್ಲಾಳ್ತಿಯ ಭಂಡಾರ ಹೋಗುವ ಧರ್ಶನ ಪಡೆಯುತ್ತಾರೆ ಎಂಬ ಪ್ರತೀತಿ ಇದೆ. ಅಂಥಾ ಕಾರಣೀಕ ಶಕ್ತಿಯ ಕಾಣಿಕೆ ಡಬ್ಬಿ ಕದಿಯುವವ ದುಸ್ಸಾಹಸ ಮಾಡಿರುವುದು ಊರವರ ಆಕ್ರೋಶಕ್ಕೆ ಕಾರಣವಾಗಿದೆ.
Gold Rate Today : ಮತ್ತೆ ಇಳಿದ ಗೋಲ್ಡ್ ರೇಟ್ – ಖರೀದಿಸುವ ಮೊದಲು ಇಲ್ಲಿ ತಿಳಿಯಿರಿ ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ
ಅಂತರ ರಾಜ್ಯ
Fire truck-ಬಿಜೆಪಿ ಶಾಸಕನ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ; ವಿಡಿಯೋ ವೈರಲ್ ಬಳಿಕ ₹2,700 ದಂಡ
ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ದೇವಗಢ್ ಬಾರಿಯಾ ಪುರಸಭೆಯ ಅಗ್ನಿಶಾಮಕ ವಾಹನವು ಧನ್‌ಪುರ್ ತಾಲೂಕಿನಲ್ಲಿರುವ ಬಿಜೆಪಿ ಶಾಸಕ ಬಚುಭಾಯ್ ಖಬಾದ್ ಅವರ ನಿವಾಸದ ಬಳಿ ನಿಂತಿದ್ದು, ಸಿಬ್ಬಂದಿ ಬಂಗಲೆಯ ಆವರಣ ಹಾಗೂ ಗೋಡೆಗಳಿಗೆ ಪೈಪ್ ಮೂಲಕ ನೀರು ಸಿಂಪಡಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ತುರ್ತು ಸೇವೆಗೆ ಮೀಸಲಾಗಿರುವ ಅಗ್ನಿಶಾಮಕ ವಾಹನವನ್ನು ವೈಯಕ್ತಿಕ ಬಳಕೆಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಖಬಾದ್ ಅವರಿಂದ ₹2,700 ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಗಢ್ ಬಾರಿಯಾ ಪುರಸಭೆ ಅಧ್ಯಕ್ಷ ಘಮೇಶ್ ಕಲಾಲ್, ಅಗ್ನಿಶಾಮಕ ವಾಹನ ಕಳುಹಿಸುವಂತೆ ಶಾಸಕರು ಕರೆ ಮಾಡಿದ್ದರು. ಯಾವುದಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಿ ವಾಹನ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಆದರೆ, ಬಂಗಲೆ ಸ್ವಚ್ಛಗೊಳಿಸುವ ಉದ್ದೇಶಕ್ಕಾಗಿ ಅಗ್ನಿಶಾಮಕ ವಾಹನವನ್ನು ಬಳಸಲಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬಂಗಲೆ ತೊಳೆಯಲು ವಾಹನ ಬಳಸಲಾಗುತ್ತದೆ ಎಂಬ ಮಾಹಿತಿ ಮುಂಚಿತವಾಗಿ ನೀಡಲಾಗಿರಲಿಲ್ಲ. ಈ ಕಾರಣದಿಂದ ಅಚಾತುರ್ಯ ಸಂಭವಿಸಿದೆ. ಇದೀಗ ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಬಂಗಲೆಯೊಂದರ ಮುಂಭಾಗ ಅಗ್ನಿಶಾಮಕ ವಾಹನ ನಿಂತಿರುವುದು ಕಾಣಿಸುತ್ತದೆ. ಅಗ್ನಿಶಾಮಕ ಸಿಬ್ಬಂದಿ ಪೈಪ್‌ಗಳ ಮೂಲಕ ಬಂಗಲೆಯ ಕಂಪೌಂಡ್ ಹಾಗೂ ಗೋಡೆಗಳಿಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.
ಅಪರಾಧ
FIR-ಮತದಾರರ ಹೆಸರು ಅಳಿಸಲು ಫಾರಂ-7 ಅರ್ಜಿ ದುರ್ಬಳಕೆ; ಬೆಂಗಳೂರಿನಲ್ಲಿ ಐವರ ವಿರುದ್ಧ FIR
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಕ್ಷೇತ್ರದ ವಿವಿಧ ಭಾಗಗಳಲ್ಲಿನ 5,698 ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಬಿಜೆಪಿ ಸಂಪರ್ಕ ಹೊಂದಿರುವ ಬೂತ್ ಮಟ್ಟದ ಏಜೆಂಟ್‌ಗಳಾದ ರಾಮಕೃಷ್ಣ ಹಾಗೂ ಯೋಗೇಶ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಅರ್ಜಿಗಳಲ್ಲಿ ಕೆಲವರ ವೈಯಕ್ತಿಕ ವಿವರಗಳನ್ನು ಅವರ ಅನುಮತಿಯಿಲ್ಲದೆ ಬಳಸಲಾಗಿದೆ ಹಾಗೂ ಕೆಲವು ಅರ್ಜಿಗಳಲ್ಲಿನ ಸಹಿಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಫಾರಂ-7 ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಅರ್ಜಿಗಳಲ್ಲಿನ ಸಹಿಗಳು ನಕಲಿಯಾಗಿವೆಯೇ ಹಾಗೂ ಮತದಾರರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಲಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳು ತನಿಖೆಯ ಹಂತದಲ್ಲಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.
ಅಂತರ ರಾಜ್ಯ
YouTuber-89 ವರ್ಷದ ವೃದ್ಧನ 5 ಸವರನ್ ಚಿನ್ನದ ಸರ ಕಳವು ಆರೋಪ; 118 ಸವರನ್ ಚಿನ್ನ ಕಳವು ಪ್ರಕರಣದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು
ತಮ್ಮ ಮನೆಯಲ್ಲಿ 118 ಸವರನ್ ಚಿನ್ನಾಭರಣ ಕಳುವಾಗಿದ್ದ ಬಗ್ಗೆ ದೂರು ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಮಧುಮಿತಾ ಅವರ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. 2022ರಲ್ಲಿ 89 ವರ್ಷದ ವೃದ್ಧ ಕಟ್ಟಡ ಗುತ್ತಿಗೆದಾರರ 5 ಸವರನ್ ತೂಕದ ಚಿನ್ನದ ಸರ ಕಳವು ಮಾಡಿದ ಆರೋಪದಲ್ಲಿ ರಾಜಕ್ಕಮಂಗಲಂ ಪೊಲೀಸರು ಮಧುಮಿತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಾಗರಕೋಯಿಲ್, ಅ.6: ತಮ್ಮ ಮನೆಯಲ್ಲಿ 118 ಸವರನ್ ಚಿನ್ನಾಭರಣ ಕಳುವಾಗಿದ್ದ ಬಗ್ಗೆ ದೂರು ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಮಧುಮಿತಾ ಅವರ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. 2022ರಲ್ಲಿ 89 ವರ್ಷದ ವೃದ್ಧ ಕಟ್ಟಡ ಗುತ್ತಿಗೆದಾರರ 5 ಸವರನ್ ತೂಕದ ಚಿನ್ನದ ಸರ ಕಳವು ಮಾಡಿದ ಆರೋಪದಲ್ಲಿ ರಾಜಕ್ಕಮಂಗಲಂ ಪೊಲೀಸರು ಮಧುಮಿತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಿರುನಲ್ವೇಲಿ ಮೂಲದ 89 ವರ್ಷದ ಗುತ್ತಿಗೆದಾರರೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಬೆನ್ನುನೋವಿನ ಸಮಸ್ಯೆಗೆ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಧುಮಿತಾ ಅವರ ಪರಿಚಯವಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
2022ರಲ್ಲಿ ಮಧುಮಿತಾ ಕರೆ ಮಾಡಿ ತಿರುನಲ್ವೇಲಿ ನ್ಯಾಯಾಲಯದ ಬಳಿ ಕರೆದುಕೊಂಡು ಹೋಗಿ ಬಸ್ ನಿಲ್ದಾಣದಲ್ಲಿ ಬಿಡುವಂತೆ ಮನವಿ ಮಾಡಿದ್ದರು. ಅದರಂತೆ ಗುತ್ತಿಗೆದಾರರು ತಮ್ಮ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದರು. ಆದರೆ, ಮಧುಮಿತಾ ಕಾರಿನಿಂದ ಇಳಿದು ಹೋದ ಬಳಿಕ ತಮ್ಮ ಕತ್ತಿನಲ್ಲಿದ್ದ 5 ಸವರನ್ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಧುಮಿತಾ ಅವರನ್ನು ಪ್ರಶ್ನಿಸಿದಾಗ ಸರವನ್ನು ಹಿಂದಿರುಗಿಸದೆ ಜೀವ ಬೆದರಿಕೆ ಹಾಕಿದ್ದರು ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಮಾನಹಾನಿ ಹಾಗೂ ಅವಮಾನಕ್ಕೆ ಹೆದರಿ ಅಂದು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ರಾಜಕ್ಕಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಘಟನೆ ನಡೆದ ಸ್ಥಳ ತಿರುನಲ್ವೇಲಿ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ತಿರುನಲ್ವೇಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ. ಮಧುಮಿತಾ ವಿರುದ್ಧದ ಆರೋಪಗಳು ಸದ್ಯಕ್ಕೆ ಸಾಬೀತಾಗಿಲ್ಲ.
118 ಸವರನ್ ಚಿನ್ನ ಕಳವು ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ ಯೂಟ್ಯೂಬರ್
ನಾಗರಕೋಯಿಲ್ ಬಳಿಯ ತಂಬತುಕೋಣಂನಲ್ಲಿರುವ ಮಧುಮಿತಾ ಅವರ ಮನೆಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಸುಮಾರು 118 ಸವರನ್ ಚಿನ್ನಾಭರಣ ಕಳವಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿ 98 ಸವರನ್ ಚಿನ್ನವನ್ನು ವಶಪಡಿಸಿಕೊಂಡಿದ್ದರು.
ಮಧುಮಿತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿನ್ನಾಭರಣ ಹಾಗೂ ಹಣವನ್ನು ಪ್ರದರ್ಶಿಸುತ್ತಿದ್ದ ವೀಡಿಯೊಗಳನ್ನು ಗಮನಿಸಿದ್ದ ಕಳ್ಳರು, ಅದರಿಂದ ಪ್ರೇರಿತರಾಗಿ ಕಳ್ಳತನ ನಡೆಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು ಎನ್ನಲಾಗಿದೆ.
ತಮ್ಮ ಮನೆಯಲ್ಲಿನ ಭಾರೀ ಕಳ್ಳತನದ ಪ್ರಕರಣದಲ್ಲಿ ಸಂತ್ರಸ್ತೆಯಾಗಿ ಸುದ್ದಿಯಾಗಿದ್ದ ಮಧುಮಿತಾ ವಿರುದ್ಧವೇ ಇದೀಗ 2022ರ ಹಳೆಯ ಕಳವು ಆರೋಪದಡಿ ದೂರು ದಾಖಲಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
-
ದಕ್ಷಿಣ ಕನ್ನಡ21 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ20 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ನಿಧನ ವಾರ್ತೆ20 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಬಿಗ್ ನ್ಯೂಸ್15 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ಶಿಕ್ಷಣ18 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ20 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ19 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ರಾಜಕೀಯ20 hours agoDK Shivakumar-ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭರ್ಜರಿ ಬಹುಮಾನ: 8 ಕ್ರೀಡಾಪಟುಗಳಿಗೆ ₹8 ಕೋಟಿ ಘೋಷಿಸಿದ ಡಿಕೆಶಿ – ಭಾಗವಹಿಸಿದವರಿಗೆ 5 ಲಕ್ಷ




















