ಕಾರ್ಯಕ್ರಮಗಳು
ಸಾಮರಸ್ಯದ ಸ್ಥಾಪನೆಗೆ ಬೇಕಾದ ತೆರೆದ ಮನಸ್ಸನ್ನು ಸೃಷ್ಟಿಸುವ ‘ತುಡರ್’ ಕಾರ್ಯಕ್ರಮ
ಸಾಂಸ್ಕೃತಿಕವಾಗಿ ಜಗತ್ತೆಂಬ ಮನೆಯ ದೇವರಕೋಣೆ ಎಂದು ಸಂಬೋಧಿಸಲ್ಪಡುವ ರಾಷ್ಟ್ರ ಭಾರತ. ಈ ನೆಲದ ಸೊಗಡನ್ನು ಶ್ರೀಮಂತಗೊಳಿಸಿದ ಅಸಂಖ್ಯಾತ ಆಚರಣೆಗಳು ಇಲ್ಲಿವೆ. ವಿಶ್ವದ ಜನರನ್ನು ಮಂತ್ರಮುಗ್ಧರನ್ನಾಗಿಸುವ ಈ ಆಚರಣೆಗಳ ಸಾತ್ವಿಕ ಶಕ್ತಿಯ ಕಾರಣಕ್ಕಾಗಿಯೇ ಭಾರತ, ಭಾರತವಾಗಿಯೇ ಉಳಿದಿದೆ. ನಮ್ಮ ಸಂಸ್ಕೃತಿಯನ್ನು ನಾವು ಮರೆತಿದ್ದರೆ ಇಂದು ವಿದೇಶಿಗರ ದಾಳಿಗೆ ತುತ್ತಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ರಾಷ್ಟ್ರಗಳ, ಸಂಸ್ಕೃತಿಗಳ ಸಾಲಿಗೆ ನಾವೂ ಸೇರುತ್ತಿದ್ದೆವು. ಚಲನಶೀಲತೆ ಮತ್ತು ಪರಿವರ್ತನಾಶೀಲತೆ ನಮ್ಮ ಸಮಾಜದ ಗುಣಧರ್ಮವಾದ ಕಾರಣ ನಮ್ಮ ಸಂಸ್ಕೃತಿಯ ಮೇಲಾದ ನಿರಂತರ ದಾಳಿಯ ನಂತರವೂ ನಾವು ಜಗತ್ತಿನೆದುರು ಸಮರ್ಥವಾಗಿ ನಿಲ್ಲಲು ಸಾಧ್ಯವಾಗಿದೆ.
ಜಗತ್ತಿನ ಒಳಿತನ್ನು ಬಯಸುವ, ವಿಶ್ವದಲ್ಲಿರುವ ಒಳಿತುಗಳನ್ನು ಸ್ವೀಕರಿಸುವ ಈ ರಾಷ್ಟ್ರದ ಗುಣಧರ್ಮದೊಂದಿಗೆ ನಮ್ಮೊಳಗಿನ ಮೌಢ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಕಾಲಕಾಲಕ್ಕೆ ಕಿತ್ತೊಗೆಯುತ್ತಲೇ ಬಂದ ಪ್ರಕ್ರಿಯೆಯ ಕಾರಣ ನಮ್ಮ ರಾಷ್ಟ್ರದ ಅಂತಃಸತ್ವ ಸಮೃದ್ಧವಾಗುತ್ತಲೇ ಬಂದಿದೆ. ನಮ್ಮ ಸಮಾಜದಲ್ಲಿರುವ ಅನಿಷ್ಠ ಪದ್ಧತಿಗಳನ್ನು ಅಗಣಿತ ಸಮಾಜ ಸುಧಾರಕರು ವೈಯಕ್ತಿಕವಾಗಿ ಮತ್ತು ಸಂಘಟನೆಯ ರೂಪದಲ್ಲಿ ಕಿತ್ತೊಗೆಯಲು ಶ್ರಮಿಸಿದ್ದು ಮತ್ತು ಶ್ರಮಿಸುತ್ತಿರುವುದು ಸಾಮರಸ್ಯದ ಸಮಾಜವೊಂದರ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತ ನಿದರ್ಶನಗಳು. ಈ ಪ್ರಯತ್ನಗಳೆಲ್ಲವೂ ಜ್ಞಾನ ಮತ್ತು ಅನುಷ್ಠಾನ ಸಿದ್ಧಾಂತವನ್ನು ಸಮನಾಗಿ ಕಾಣುವ ಸಮರ್ಥ ರಾಷ್ಟ್ರವೊಂದರ ಗುರುತು.
ಭಾರತೀಯತೆ ವಿಶ್ವವನ್ನು ವ್ಯಾಪಿಸಿರಬಹುದು, ಆದರೆ ಜಾತಿಬೇಧ, ಅಸ್ಪೃಶ್ಯತೆಯ ವಿರುದ್ಧ ಹಲವು ಶತಮಾನಗಳ ಪ್ರಯತ್ನದ ತರುವಾಯವೂ ಭಾರತೀಯರೆಲ್ಲರೂ ನಮ್ಮವರೆಂಬ ಹೃದಯವೈಶಲ್ಯವನ್ನು ಮೆರೆಯುವಲ್ಲಿ ವಿಫಲರಾಗಿದ್ದೇವೆ. ಶೋಷಣೆಗೊಳಗಾದವರ ವೇದನೆಗೆ ಸಂವೇದನೆಯನ್ನು ವ್ಯಕ್ತಪಡಿಸದಿರುವಷ್ಟು ಮಾನವೀಯತೆ ಮರೆತ ಕಟುಕರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ವಿವಿಧತೆಯನ್ನೇ ಒಂದು ವಿಶೇಷತೆಯಾಗಿರಿಸಿಕೊಂಡಂತಹ ನಮ್ಮ ದೇಶಕ್ಕೆ ಆ ಎಲ್ಲಾ ವಿವಿಧತೆಗಳ ಮಧ್ಯೆ ಒಂದು ಏಕತೆಯನ್ನು ಸಾಧಿಸಲು ಸಾಮರಸ್ಯದ ಪರಿಕಲ್ಪನೆ ಬೇಕಾಗಿದೆ. ಸಮಾಜದ ಎಲ್ಲರನ್ನೂ ಒಗ್ಗೂಡಿಸುವ, ಎಲ್ಲರ ಮನಸ್ಸುಗಳನ್ನು ಒಂದುಗೂಡಿಸುವ, ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಯೋಚಿಸುತ್ತಾ ಹಾಗೂ ಸಮತೆ ಮತ್ತು ಸಮಾನತೆಯಿಂದ ನಡೆದುಕೊಳ್ಳುವುದೇ ಸಾಮರಸ್ಯ.

ಇಂತಹ ಸಾಮರಸ್ಯವನ್ನು ಬೆಸೆಯುವ ನಿದರ್ಶನಗಳು ರಾಷ್ಟ್ರವ್ಯಾಪಿ ಆಗುತ್ತಲೇ ಬಂದಿವೆ. ಅನಾದಿ ಕಾಲದಿಂದಲೂ ನಮ್ಮ ಹಲವು ಆಚರಣೆಗಳೇ ಎಲ್ಲರನ್ನೂ ಒಗ್ಗೂಡಿಸುವ ಕೇಂದ್ರಗಳಾದ ಕಾರಣ ಅಂತಹ ಆಚರಣೆಗಳ ಸಂದರ್ಭವನ್ನೇ ಸಾಮರಸ್ಯದ ಸಮಾಜವನ್ನು ಕಟ್ಟುವ ಅಸ್ತ್ರವನ್ನಾಗಿ ಬಳಸಿಕೊಂಡು ಕಳೆದ ವರ್ಷದಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವಿಭಾಗದ ನೇತೃತ್ವದಲ್ಲಿ ‘ತುಡರ್’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಏನಿದು ತುಡರ್?
ತುಡರ್ ಎಂದರೆ ತುಳು ಭಾಷೆಯಲ್ಲಿ ಬೆಳಕು ಎಂದರ್ಥ. ದೀಪಾವಳಿಯ ಸಂದರ್ಭದಲ್ಲಿ ಊರ ದೇವಾಲಯದ ಗರ್ಭಗುಡಿಯ ದೀಪದ ಬೆಳಕನ್ನು, ಊರಿನ ಎಲ್ಲಾ ವರ್ಗದ ಜನರ ಸಮ್ಮುಖದಲ್ಲಿ ಸೇವಾ ಬಸ್ತಿಯ ಪ್ರಮುಖರಿಗೆ ಹಸ್ತಾಂತರಿಸಿ, ಮೆರವಣಿಗೆಯ ಮೂಲಕ ದೀಪವನ್ನು ಅವರ ಮನೆಗಳಿಗೆ, ವಠಾರಕ್ಕೆ ಕೊಂಡೊಯ್ದು ಮನೆಯನ್ನು ಬೆಳಗುವುದು ಕಾರ್ಯಕ್ರಮದ ಸ್ವರೂಪ. ಇದೇ ಸಂದರ್ಭದಲ್ಲಿ ಸಾಮೂಹಿಕ ಭಜನೆ, ಗೋಪೂಜೆ, ಸೇವಾ ಬಸ್ತಿಯ ಸಾಧಕರಿಗೆ, ಪ್ರತಿಭಾವಂತರಿಗೆ ಗೌರವಾರ್ಪಣೆ, ಸಾಮರಸ್ಯದ ಸಂದೇಶ ರವಾನೆ, ಸೇವಾ ಬಸ್ತಿ ಬಂಧುಗಳ ಮನೆಗಳಲ್ಲಿ ತಯಾರಿಸಿದ ಭೋಜನವನ್ನು ಸಹಪಂಕ್ತಿಯಲ್ಲಿ ಸ್ವೀಕಾರ, ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮಗಳೂ ಜರುಗುತ್ತವೆ.

ಕಳೆದ ಬಾರಿಯ ಕಾರ್ಯಕ್ರಮದ ವಿಶೇಷತೆಗಳು: ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಹದಿನೇಳು ಕಡೆಗಳಲ್ಲಿ ಸಾಮರಸ್ಯದ ತುಡರ್ ಬೆಳಗಿತ್ತು. ಒಟ್ಟು 14 ಸೇವಾ ಬಸ್ತಿಯ 322 ಮನೆಗಳು ಪಾಲ್ಗೊಂಡಿದ್ದವು. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾ ಬಸ್ತಿಯ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಊರಿನ ಇತರ ಮಹಿಳೆಯರಿಂದಲೂ ಅಭೂತಪೂರ್ವ ಬೆಂಬಲ ದೊರೆಯಿತು. ಉಡುಪಿಯಲ್ಲಿ ಮಾಧ್ವ ಮಂಟಪಕ್ಕೆ ಸೇವಾ ಬಸ್ತಿಯ ಬಂಧುಗಳನ್ನು ಆಹ್ವಾನಿಸಿ ದೀಪ ಹಸ್ತಾಂತರ ಮಾಡಲಾಯಿತು. ಅದಮಾರು ಸ್ವಾಮಿಗಳ ಪರ್ಯಾಯದ ಸಂದರ್ಭದಲ್ಲಿ ಸ್ವಾಮಿಗಳೇ ಸೇವಾ ಬಸ್ತಿಯ ಬಂಧುಗಳಿಗೆ ಊಟ ಬಡಿಸಿ, ಕೃಷ್ಣನ ಭಾವಚಿತ್ರವನ್ನು ಹಸ್ತಾಂತರಿಸಿದರು. ತುಡರ್ ಕಾರ್ಯಕ್ರಮಕ್ಕಾಗಿ ಪೇಜಾವರ ಶ್ರೀಗಳು ಸೇವಾ ಬಸ್ತಿಯ ಬಂಧುಗಳ ಮನೆಗೆ ಆಗಮಿಸಿದರು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರಗಜ್ಜನ ಕಟ್ಟೆಯನ್ನು ಸೇರಿಸಿಕೊಂಡು ದೀಪಾವಳಿಯನ್ನು ಆಚರಿಸಲಾಯಿತು.
ಈ ಬಾರಿಯ ತುಡರ್: ಈ ಬಾರಿ ನೂರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿವೆ. ಕಾರ್ಯಕ್ರಮದ ಸ್ವರೂಪ ಕಳೆದ ಬಾರಿಯಂತೆಯೇ ಇದ್ದರೂ, ಕಳೆದ ಬಾರಿಯ ಕಾರ್ಯಕ್ರಮದ ಯಶಸ್ಸಿನ ಕಾರಣಕ್ಕಾಗಿ ಈ ಬಾರಿ ನೂರಕ್ಕೂ ಮಿಕ್ಕಿ ಕಡೆಗಳಲ್ಲಿ ಕಾರ್ಯಕ್ರಮಗಳಾಗುತ್ತಿರುವುದು ಗಮನಾರ್ಹ ಸಂಗತಿ. ಇದು ಹಿಂದೂ ಸಮಾಜ ಒಗ್ಗಟ್ಟಾಗುವುದಕ್ಕೆ ಮುಂದಾಗಿದೆ ಎನ್ನುವುದರ ಶುಭಸಂಕೇತ. ಕಾರಿಂಜ, ಪೊಳಲಿ, ಕದ್ರಿ, ಮಂಗಳದೇವಿ, ಕುಂದೇಶ್ವರ ದೇವಾಲಯಗಳು ಈ ಬಾರಿ ತುಡರ್ ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡ ಪ್ರಮುಖ ದೇವಾಲಯಗಳು.

ಒಟ್ಟಿನಲ್ಲಿ ಸಾಮರಸ್ಯವಿಲ್ಲದೆ ಸೋದರತೆ ಬಾರದು, ಸೋದರತೆ ಇಲ್ಲದೆ ಹಿಂದು ಸಮಾಜ ಗಟ್ಟಿಯಾಗದು, ಹಿಂದೂ ಸಮಾಜ ಗಟ್ಟಿಯಾಗದೆ ಭಾರತವೂ ಸದೃಢವಾಗದು ಎನ್ನುವ ಪ್ರಾಜ್ಞರ ನುಡಿಯನ್ನು ಅರಿತು ಹಿಂದೂ ಸಮಾಜ ತನ್ನ ಚಿಂತನೆ ಮತ್ತು ಅನುಷ್ಠಾನವನ್ನು ಹಿರಿಯರ ಅನುಭವಾಧಾರಿತವಾಗಿ, ಸಮಸ್ಯೆಯ ಮೂಲಕ್ಕೆ ಇಳಿದು, ನಾನು ಶ್ರೇಷ್ಠ ಎಂಬ ವ್ಯಸನವನ್ನು ಬಿಟ್ಟು ನಾವು ಶ್ರೇಷ್ಠ ಎನ್ನುವ ಶಾಸನದ ಸ್ಥಾಪನೆಗೆ ಸಿದ್ಧವಾಗಿದೆ. ಅಂತರಿಕ್ಷಕ್ಕೆ ಕಾಲಿಟ್ಟ ನಾವು, ಅಂತರವನ್ನು ತೋರುವುದು ಸರಿಯಲ್ಲ ಎಂಬ ರಾಷ್ಟ್ರಭಕ್ತ ಕವಿಯ ವಾಣಿಯಂತೆ ‘ನ ಹಿಂದುಃ ಪತಿತೋ ಭವೇತ್’ ಎನ್ನುವುದನ್ನು ಸಾಬೀತುಪಡಿಸಲು ಸನ್ನದ್ಧವಾಗಿದೆ
ಕಾರ್ಯಕ್ರಮಗಳು
Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Puttur-ಡಿ.8ರಂದು ಪುತ್ತೂರು ದೀಪೋತ್ಸವ: ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ಮುಹೂರ್ತ
ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.
ಪುತ್ತೂರು, ನ.18: ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಉದ್ಯಮಿ ವಾಮನ ಪೈ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ವ್ಯವಸ್ಥಾಪನಾ ಸಮಿತಿಯ ಸಂಪೂರ್ಣ ಸಹಕಾರ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ದೀಪೋತ್ಸವವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಐದು ಸಾವಿರಕ್ಕೂ ಅಧಿಕ ಮಂದಿ ದೀಪ ಬೆಳಗಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಉತ್ತಮ ಸಮಿತಿ ರಚಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳು
Puttur-ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್-2026
ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.
ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ಅಧೀನದಲ್ಲಿರುವ ದೇಶದ ವಿವಿಧ ರಾಜ್ಯಗಳ ಆರು ಕ್ಷೇತ್ರಗಳ ಒಟ್ಟು 162 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 30 ಎಸ್ಕಾರ್ಟ್‌ಗಳು ಹಾಗೂ ತರಬೇತುದಾರರು ಭಾಗವಹಿಸಲಿದ್ದು, ಒಟ್ಟು 104 ಸ್ಪರ್ಧಾ ವಿಭಾಗಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 20ರಂದು ಸಂಜೆ 6 ಗಂಟೆಗೆ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಈಜುಪಟು ರಾಧಾಕೃಷ್ಣ ನಾಯಕ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗ್ಡೆ ಭಾಗವಹಿಸಲಿದ್ದು, ಮನಮೋಹನ್ ರೈ ಚೆಲ್ಯಡ್ಕ, ವಸಂತ ಮಾಧವ, ಯು.ಪಿ. ಹರಿದಾಸ್ ಹಾಗೂ ಬಿ.ಡಿ. ಮಣಿ ಉಪಸ್ಥಿತರಿರಲಿದ್ದಾರೆ.
ನವೆಂಬರ್ 21ರಂದು ಪುತ್ತೂರಿನ ಬಾಲವನ ಈಜುಕೊಳದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ನವೆಂಬರ್ 22ರಂದು ಬೆಳಗ್ಗೆ 11.30ಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಕಾರ್ಯದರ್ಶಿ ವಸಂತ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಂಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಕಾಂತ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಸಂತಿ ಕೆ. ಹಾಗೂ ಪ್ರತಿಮಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ಭರತ್ ಪೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಪ್ರಸಾದ್ ಸಿ., ಪ್ರಾಂಶುಪಾಲೆ ಸಿಂಧು ವಿ.ಜಿ., ರವಿನಾರಾಯಣ, ಶ್ಯಾಮಲಾ ಹಾಗೂ ವೆಂಕಟರಮಣ ಮಂಕುಡೆ ಉಪಸ್ಥಿತರಿದ್ದರು
-
ದಕ್ಷಿಣ ಕನ್ನಡ22 hours ago
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
-
ಮಂಗಳೂರು23 hours ago
Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ















