Connect with us

ಆರೋಗ್ಯ

ಪೋಷಕರೇ ಗಮನಿಸಿ !!! ಮಕ್ಕಳಲ್ಲಿ ಹೇಗಿರಬೇಕು ನಿದ್ರಾ ವಿಧಾನ? ನಿದ್ರಾಹೀನತೆಯಿಂದ ಯಾವ ಸಮಸ್ಯೆಯು ಕಾಡುತ್ತದೆ? ಈ ಸ್ಟೋರಿ ಓದಿ

Published

on



Ad Widget

Ad Widget

Ad Widget

Ad Widget

ರಾತ್ರಿ ಊಟದ ಬಳಿಕ ನಾವೆಲ್ಲಾ ನಿದ್ರೆಗೆ ಜಾರುತ್ತೇವೆ. ನಿದ್ರೆ ಎಂಬುದು ಮನುಷ್ಯನ ಆರೋಗ್ಯಕ್ಕೆ ಇರುವ ಪ್ರಮುಖ ಕೀಲಿ ಕೈ. ದಿನದ ಕೆಲಸವೆಲ್ಲಾ ಮುಗಿಸಿ ಧಣಿವಾರಿಸುವ ವಿಧಾನ ಈ ನಿದ್ರೆ. ನಿದ್ರಾಹೀನತೆಯಿಂದ ಮನುಷ್ಯನಿಗೆ ಹಲವಾರು ಆರೋಗ್ಯ ಸಮಸ್ಯೆ ಎದುರಾಗಲಿದೆ. ಹೀಗಾಗಿ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ.

Ad Widget

Ad Widget

Ad Widget

Ad Widget

ಮನುಷ್ಯನಿಗೆ ಸರಾಸರಿ ಎಂದರೂ 7-8 ಗಂಟೆಗಳ ನಿದ್ರೆ ಬೇಕೇಬೇಕು. ಸಾಮಾನ್ಯವಾಗಿ ಮಕ್ಕಳು 7- 8 ಗಂಟೆಗಳಷ್ಟು ನಿದ್ರೆ ಮಾಡುತ್ತಾರೆ. ವಯಸ್ಕರು 6 ಗಂಟೆಗಳಷ್ಟು ನಿದ್ರೆ ಮಾಡುತ್ತಾರೆ. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಶಿಶುವಿನ ಆರೋಗ್ಯವು ಅದು ನಿದ್ರಿಸುವ ಅವಧಿಯಿಂದ ನಿರ್ಧಾರವಾಗುತ್ತದೆ ಎಂದೂ ಕೂಡ ಹೇಳಲಾಗುತ್ತದೆ.

Ad Widget

Ad Widget

Ad Widget alt="Ad Widget"/>

Ad Widget

ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಯಾವ ಹಂತದಲ್ಲಿ ಎಷ್ಟು ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ?
*1-4 ವಾರಗಳ ಮಗು : ನವಜಾತ ಶಿಶುಗಳು ಸಾಮಾನ್ಯವಾಗಿ ದಿನಕ್ಕೆ 15-18 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಆದರೆ. ಈ ನಿದ್ರೆ ನಿರಂತರವಾಗಿರುವುದಿಲ್ಲ. ಬರಬರುತ್ತಾ ಕಡಿಮೆಯಾಗುತ್ತದೆ. ಆಗಾಗೆ ನಿದ್ರೆಯಿಂದ ಏಳುವುದು ಆಟವಾಡಿ ಮತ್ತೆ ಮಲಗುತ್ತಿರುತ್ತವೆ 1-4 ತಿಂಗಳ ಮಗು. ಮಕ್ಕಳಿಗೆ ಬೆಳೆಯಲು, ಕಲಿಯಲು ಮತ್ತು ಫಿಟ್ ಆಗಿರಲು ಹೆಚ್ಚಿನ ನಿದ್ರೆಯು ಅತ್ಯವಶ್ಯಕ. ಈ ಶಿಶುಗಳು ದಿನಕ್ಕೆ 14-15 ಗಂಟೆ ನಿದ್ರೆ ಮಾಡುತ್ತವೆ.
*4-12 ತಿಂಗಳ ಮಗು: ಈ ಶಿಶುಗಳು 14-15 ಗಂಟೆಗಳ ನಿದ್ರೆ ಮಾಡುತ್ತವೆ. ಆದರೆ ಕೆಲ ಮಕ್ಕಳು 11 ತಿಂಗಳ ತನಕ ಕೇವಲ 12 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತವೆ.
*1-3 ವರ್ಷದ ಮಗು: ಈ ಮಕ್ಕಳು ದಿನಕ್ಕೆ 12-14 ಗಂಟೆಗಳು ನಿದ್ರೆ ಮಾಡುತ್ತವೆ.
*3-6 ವರ್ಷದ ಮಕ್ಕಳು: ಈ ಮಕ್ಕಳು ದಿನಕ್ಕೆ 12 ಗಂಟೆಗಳ ನಿದ್ರೆ ಮಾಡುತ್ತವೆ. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆ ಮಧ್ಯೆ ನಿದ್ರೆಗೆ ಜಾರಿ ಬೆಳಗ್ಗೆ 6ರಿಂದ 8 ಗಂಟೆ ಮಧ್ಯೆ ಎದ್ದೇಳುವರು.
*7-12 ವರ್ಷದ ಮಕ್ಕಳು ಈ ಮಕ್ಕಳು 10-11 ಗಂಟೆಗಳು ನಿದ್ರೆ ಮಾಡುವರು.ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಆಟವಾಡುವುದು, ಬೇರೆ ಮಕ್ಕಳೊಂದಿಗೆ ಬೆರೆಯುವುದರಿಂದ ನಿದ್ರೆ ಮಾಡುವುದು ವಿಳಂಬವಾಗುತ್ತದೆ.
*12-18 ವರ್ಷದ ಮಕ್ಕಳು ದಿನಕ್ಕೆ 8-9 ಗಂಟೆಗಳ ಕಾಲ ನಿದ್ರೆ ಮಾಡುತ್ತಾರೆ. ಹದಿಹರೆಯದಲ್ಲಿ ನಿದ್ರೆಯು ದೇಹಕ್ಕೆ ಅತೀ ಅನಿವಾರ್ಯ. ಹದಿಹರೆಯದಲ್ಲಿ ಕೆಲವರಿಗೆ ಹೆಚ್ಚಿನ ಗಂಟೆಗಳ ನಿದ್ರೆಯು ಬೇಕಾಗುತ್ತದೆ.

Ad Widget

Ad Widget <> Ad Widget

ಆದರೆ, ಹೆಚ್ಚಿನ ಹದಿಹರೆಯದ ಮಕ್ಕಳು ಈ ಅವಧಿಯಲ್ಲಿ ತಮ್ಮ ಗೆಳೆಯ ಗೆಳೆತಿಯರ ಬಳಗದಲ್ಲಿ ಇರುವ ಕಾರಣದಿಂದಾಗಿ ಉತ್ತಮ ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದಲ್ಲಿ ನಿದ್ರೆ ಸಿಗದು.



Ad Widget

ಸಾಮಾನ್ಯವಾಗಿ ನವಜಾತ ಶಿಶುಗಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದು ಕಡಿಮೆಯಾಗಿರುತ್ತದೆ. ಇದರಿಂದ ಪೋಷಕರು 5 ರಿಂದ 6 ತಿಂಗಳ ಕಾಲ ಸಮಸ್ಯೆ ಎದುರಿಸಬೇಕಾಗುತ್ತದೆ. ಮಕ್ಕಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡದಿರಲು ಕೆಲವು ಕಾರಣಗಳಿವೆ.

Ad Widget

Ad Widget

ಅವುಗಳನ್ನು ಸರಿಪಡಿಸಿದರೆ ಮಕ್ಕಳು ಸುಖವಾಗಿ ನಿದ್ರೆ ಮಾಡುತ್ತಾರೆ. ಹಸಿವು ಎದೆಹಾಲು ಬೇಡಿಕೆಯ ಮೇರೆಗೆ ಅಥವಾ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಆಹಾರವನ್ನು ನೀಡದಿದ್ದರೆ, ಮಗುವಿಗೆ ರಾತ್ರಿಯಲ್ಲಿ ಹಸಿವು ಉಂಟಾಗುತ್ತದೆ. ಬದಲಾದ ಮಲಗುವ ಸಮಯ ಮಗುವಿಗೆ ನಿದ್ರೆಯ ದಿನಚರಿಯಲ್ಲಿ ಆಗುವ ಬದಲಾವಣೆಗಳು ಅವುಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಇದರಿಂದ ಮಗುವಿಗೆ ಉತ್ತಮ ನಿದ್ರೆಯನ್ನು ಆನಂದಿಸಲು ಕಷ್ಟವಾಗುತ್ತದೆ. ಹಾಗಾಗಿ ಶಿಶುವಿನ ನಿದ್ರೆಗೆ ಭಂಗ ಬರದಂತೆ ನೋಡಿಕೊಳ್ಳಬೇಕಾಗಿದೆ.

ಹೆಚ್ಚಿದ ಒತ್ತಡ ಮಕ್ಕಳು ತುಂಬಾ ದಣಿದಿರುವಾಗ ಉತ್ತಮವಾಗಿ ನಿದ್ರಿಸುವುದಿಲ್ಲ. ಅತಿಯಾದ ಆಯಾಸಗೊಂಡಾಗ ಕಡಿಮೆ ನಿದ್ರೆ ಮಾಡುತ್ತಾರೆ ಹಾಗೂ ಆಗಾಗ ಎಚ್ಚರಗೊಳ್ಳುತ್ತಿರುತ್ತಾರೆ.
ಇದು ಮಗುವಿನ ತೊದಲು ನುಡಿ, ಮಕ್ಕಳಿಗೆ ಮಾತು ಬರಲು ವಿಳಂಬಕ್ಕೆ ಕಾರಣವಾಗಬಹುದು. ಇತ್ತೀಚೆಗೆ ಪೋಷಕರು ಮಕ್ಕಳ‌ನ್ನು ನಿಯಂತ್ರಿಸುವ ವಿಧಾನವನ್ನು ಕಂಡುಕೊಳ್ಳದೆ ತಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟು ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾರೆ. ನಿದ್ರಾ ಭಂಗಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಕೆಲವೊಮ್ಮೆ ಹೊಟ್ಟೆ ನೋವು, ಗ್ಯಾಸ್, ಆಯಸಿಡ್ ರಿಫ್ಲಕ್ಸ್, ನೆಗಡಿ ಮತ್ತು ಕೆಮ್ಮು, ಹಲ್ಲಿನ ಸಮಸ್ಯೆಯಿಂದ ಮಕ್ಕಳಲ್ಲಿ ನಿದ್ರೆಯ ಸಮಸ್ಯೆಗಳು ಉಂಟಾಗುತ್ತವೆ. ಪೋಷಕರು ಹತ್ತಿರವಿರುವಂತೆ ಬಯಸುತ್ತಾರೆ ಮಗು ಎಚ್ಚರವಾದಾಗ ಪೋಷಕರನ್ನು ಹುಡುಕುತ್ತದೆ. ಸಿಗದೇ ಇದ್ದಾಗ ಭಯಪಡುತ್ತದೆ. ಅಹಿತಕರ ಪರಿಸರ ಶಿಶುಗಳು ಮಲಗಿದ ಸ್ಥಳಕ್ಕಿಂತ ವಿಭಿನ್ನ ವಾತಾವರಣದಲ್ಲಿ ಎಚ್ಚರಗೊಂಡರೆ, ಗೊಂದಲಕ್ಕೊಳಗಾಗುತ್ತಾರೆ ಮತ್ತು ಭಯಭೀತರಾಗುತ್ತಾರೆ.

ಹಗಲಿನಲ್ಲಿ ನಿದ್ರೆ ಮಾಡದಿರುವುದು ನಿಮ್ಮ ಮಗು ಹಗಲಿನಲ್ಲಿ ನಿದ್ರೆಯಿಲ್ಲದೆ, ಹೆಚ್ಚು ದಣಿದಿದ್ದರೆ, ಮುಂಗೋಪಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಲ್ಲದೆ ರಾತ್ರಿ ಸಮಯದಲ್ಲಿ ನಿದ್ರೆ ಮಾಡದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೊಸ ಕೌಶಲ್ಯಗಳು ತೆವಳುವ, ಒದೆಯುವ, ಉರುಳುವ, ಕುಳಿತುಕೊಳ್ಳುವ ಅಥವಾ ನಿಂತಿರುವ ಕಲೆಯನ್ನು ಕರಗತ ಮಾಡಿಕೊಂಡಿದ್ದರೆ ರಾತ್ರಿಯಲ್ಲೂ ಅದು ಮುಂದುವರೆಯುವ ಸಾಧ್ಯತೆಯಿರುತ್ತದೆ.

Ad Widget
Click to comment

Leave a Reply

ಆರೋಗ್ಯ

Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ

Published

on



Ad Widget

Ad Widget

Ad Widget

Ad Widget

ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.

Ad Widget

Ad Widget <> Ad Widget

ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.



Ad Widget

ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.

Continue Reading

ಆರೋಗ್ಯ

HIV test-ಯುವಜನರಲ್ಲಿ ಹೆಚ್ಚುತ್ತಿದೆ HIV ಸೋಂಕು; ರಾಜ್ಯದ ಪದವಿ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ

Published

on



Ad Widget

Ad Widget

Ad Widget

Ad Widget

ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ದೇಶದಲ್ಲೇ ಮೂರನೇ ಸ್ಥಾನ:
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ವರದಿ ಪ್ರಕಾರ, ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2.60 ಲಕ್ಷ ಸೋಂಕಿತರಿದ್ದು, ಈ ಪೈಕಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ತಗುಲಿರುವ ಅರಿವೇ ಇಲ್ಲದಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ 18 ರಿಂದ 35 ವರ್ಷದೊಳಗಿನವರಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆ ಸೊಸೈಟಿ (KSAPS) ಕಳವಳ ವ್ಯಕ್ತಪಡಿಸಿದೆ.

Ad Widget

Ad Widget <> Ad Widget

ಕಾಲೇಜುಗಳಲ್ಲಿ ಆರೋಗ್ಯ ಶಿಬಿರ ಮತ್ತು ಜಾಗೃತಿ:
ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಆರೋಗ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯು ಜಂಟಿಯಾಗಿ ‘ಸಂಯೋಜಿತ ಆರೋಗ್ಯ ಶಿಬಿರ’ಗಳನ್ನು (IHC) ಆಯೋಜಿಸುತ್ತಿವೆ.
ವಿಟಿಯು (VTU) ವ್ಯಾಪ್ತಿಯಲ್ಲೂ ತಪಾಸಣೆ: ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ವಿವಿಧ ಸ್ಪರ್ಧೆಗಳು: 2026ರ ಜುಲೈನಿಂದ 2027ರ ಫೆಬ್ರವರಿವರೆಗೆ ಕಾಲೇಜುಗಳಲ್ಲಿ ಬೀದಿ ನಾಟಕ, ರಸಪ್ರಶ್ನೆ ಮತ್ತು ತಜ್ಞರ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂಕಗಳ ಆಧಾರದ ಮೇಲೆ ಮಾರ್ಗಸೂಚಿಯನ್ನೂ ನೀಡಲಾಗಿದೆ.



Ad Widget

ಮಾಹಿತಿಯ ಗೌಪ್ಯತೆಗೆ ಆದ್ಯತೆ (QR Code ಸೌಲಭ್ಯ):
ವಿದ್ಯಾರ್ಥಿಗಳು ತಮ್ಮ ಎಚ್‌ಐವಿ ಸ್ಥಿತಿಯನ್ನು ಅತ್ಯಂತ ಗೌಪ್ಯವಾಗಿ ತಿಳಿದುಕೊಳ್ಳಲು ಸರ್ಕಾರವು ವಿಶೇಷ ತಂತ್ರಜ್ಞಾನದ ಮೊರೆ ಹೋಗಿದೆ.
ಕ್ಯೂಆರ್ ಕೋಡ್ (QR Code): ಕಾಲೇಜುಗಳಲ್ಲಿ ಕಡ್ಡಾಯವಾಗಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ಸ್ವಯಂ-ಅಪಾಯ ಮೌಲ್ಯಮಾಪನ ಮಾಡಿಕೊಳ್ಳಬಹುದು.
ವೆಬ್‌ಸೈಟ್: ಗೌಪ್ಯ ಮಾರ್ಗದರ್ಶನಕ್ಕಾಗಿ www.breakfreeindia.org ಜಾಲತಾಣವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

Ad Widget

Ad Widget

ಸರ್ಕಾರದ ಮುಂದಿರುವ ಸವಾಲು:
ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ, ಈಗ ಎಚ್‌ಐವಿ ಹರಡದಂತೆ ತಡೆಯುವುದು ದೊಡ್ಡ ಸವಾಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಕೆಎಸ್‌ಎಪಿಎಸ್‌ ತಿಳಿಸಿದೆ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಈ ತಪಾಸಣಾ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.

Ad Widget
Continue Reading

ಆರೋಗ್ಯ

Puttur-ಪುತ್ತೂರು: ಜು.9ರಂದು ಡಾ. ನಝೀರ್ ಅಹಮ್ಮದ್ ರವರ ಕ್ಲಿನಿಕ್ ನಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ

Published

on



Ad Widget

Ad Widget

Ad Widget

Ad Widget

ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶಿಬಿರವು ಜು.9, ಗುರುವಾರದಂದು ಬೆಳಗ್ಗೆ 9-30ರಿಂದ ಮಧ್ಯಾಹ್ನ 12-30ರವರೆಗೆ ಪುತ್ತೂರಿನ ಕಲ್ಲಾರೆಯಲ್ಲಿರುವ ಡಾ. ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ನಡೆಯಲಿರುವುದು.

Ad Widget

Ad Widget <> Ad Widget

ಶಿಬಿರದಲ್ಲಿ ಸಿಗುವ ಸೌಲಭ್ಯಗಳು:
ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುವುದು.



Ad Widget

ಉಚಿತ ಪರೀಕ್ಷೆಗಳು: ಥೈರಾಯಿಡ್ (TSH), ರಕ್ತದ ಸಕ್ಕರೆ ಅಂಶ (Sugar), HBA1C ಮತ್ತು ಮೂಳೆ ಸಾಂದ್ರತೆ ಪರೀಕ್ಷೆ (BMD Test).

Ad Widget

Ad Widget

ರಿಯಾಯಿತಿ ದರದ ಪರೀಕ್ಷೆ: ಕೊಲೆಸ್ಟರಾಲ್ ಪರೀಕ್ಷೆಯನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾಡಿಸಿಕೊಳ್ಳಲು ಅವಕಾಶವಿದೆ.

ಈ ರೋಗನಿರ್ಣಯ ಶಿಬಿರದ ಪ್ರಯೋಜನವನ್ನು ಪುತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 94814 51929

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading