ಈ ಕಳ್ಳತನ ಪ್ರಕರಣವನ್ನು ಭೇಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ.ಎಂ.ವೈ ಮತ್ತು ರಾಮಕೃಷ್ಣ ರವರ ನೇತೃತ್ವದ ತಂಡ […]" /> ಈ ಕಳ್ಳತನ ಪ್ರಕರಣವನ್ನು ಭೇಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ.ಎಂ.ವೈ ಮತ್ತು ರಾಮಕೃಷ್ಣ ರವರ ನೇತೃತ್ವದ ತಂಡ […]"> Puttur | ದ.ಕದಲ್ಲಿ ಹಲವು ಕಡೆ ಮನೆಕಳ್ಳತನ ಮಾಡಿರುವ ಅಂತರರಾಜ್ಯ ಕಳ್ಳ ಕಣ್ಣೂರಿನ ಮಹಮ್ಮದ್ ನ ಹೆಡೆಮುರಿ ಕಟ್ಟಿದ ಸಂಪ್ಯ ಪೊಲೀಸರು : ಕೇರಳದಲ್ಲಿ ಈತನ ಮೇಲಿದೆ 120 ಪ್ರಕರಣ - Nikhara News | Kannada News Website
Connect with us

ಪುತ್ತೂರು

Puttur | ದ.ಕದಲ್ಲಿ ಹಲವು ಕಡೆ ಮನೆಕಳ್ಳತನ ಮಾಡಿರುವ ಅಂತರರಾಜ್ಯ ಕಳ್ಳ ಕಣ್ಣೂರಿನ ಮಹಮ್ಮದ್ ನ ಹೆಡೆಮುರಿ ಕಟ್ಟಿದ ಸಂಪ್ಯ ಪೊಲೀಸರು : ಕೇರಳದಲ್ಲಿ ಈತನ ಮೇಲಿದೆ 120 ಪ್ರಕರಣ

Published

on

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸರು ಕೇರಳದಲ್ಲಿ 120 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣ ಹೊಂದಿರುವ ಅಂತರರಾಜ್ಯ ಆರೋಪಿಯನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 2021ನೇ ಜುಲೈ ತಿಂಗಳಿನಲ್ಲಿ ಕೆಯ್ಯೂರು ಗ್ರಾಮದ ಕಟ್ಟತ್ತಾರು, ಕೆಯ್ಯೂರು, ಮಾಡಾವು ಪರಿಸರದಲ್ಲಿ ಸರಣಿ ಮನ ಕಳ್ಳತನ ನಡೆದಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

Ad Widget

Ad Widget alt="Ad Widget"/>

Ad Widget

ಈ ಕಳ್ಳತನ ಪ್ರಕರಣವನ್ನು ಭೇಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ.ಎಂ.ವೈ ಮತ್ತು ರಾಮಕೃಷ್ಣ ರವರ ನೇತೃತ್ವದ ತಂಡ ಆರೋಪಿ ಕಣ್ಣೂರು ತಲಿಪರಂಬ ದ ಯೂಸುಫ್ ಎಂಬಾತನ ಪುತ್ರ ಮಹಮ್ಮದ್.ಕೆ.ಯು, (42 ವ) ಎಂಬಾತನ ಬಂಧಿಸಿತು.

Ad Widget

Ad Widget <> Ad Widget

ವಿಚಾರಣೆ ವೇಳೆ ಆರೋಪಿಯು ಕಳೆದ ವರ್ಷ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಹಾಗೂ ಬೆಳಂದೂರಿನ ಪಳ್ಳತ್ತಾರು ಪರಸರಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ ಸುಮಾರು ರೂ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕಳವುಗೈದ ಮೋಟಾರು ಸೈಕಲ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಲ್ಲದೇ ಈತನು ಕೊಣಾಜೆ, ವಿಟ್ಲ, ಬಂಟ್ವಾಳ, ಪುಂಜಾಲಕಟ್ಟೆ, ಪರಸರಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈತನ ವಿರುದ್ಧ ಈಗಾಗಲೇ ಕೇರಳ ರಾಜ್ಯದಲ್ಲಿ 120 ಕ್ಕಿಂತಲೂ ಹೆಚ್ಚು ಮನೆ ಕಳ್ಳತನ ಪಕರಣಗಳು ದಾಖಲಾಗಿರುತ್ತದೆ.

Ad Widget

Ad Widget

ಈ ಪ್ರಕರಣವನ್ನು ಭೇದಿಸುವಲ್ಲಿ
ಪೊಲೀಸ್‌ ಅಧೀಕ್ಷಕರಾದ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಕುಮಾರ್ ಚಂದ್ರು, ಪುತ್ತೂರು ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಡಾ.ವೀರಯ್ಯ ಹಿರೇಮಠ, ಡಿ.ಸಿ.ಆರ್.ಬಿ ಪೊಲೀಸ್‌ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ.ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ ಮತ್ತು ರಾಮಕೃಷ್ಣ ಸಿಬ್ಬಂದಿಗಳಾದ ಪ್ರೊ.ಪಿಎಸ್‌ಐ ಗಳಾದ ಕಾರ್ತಿಕ್ ಮತ್ತು ಭವಾನಿ, ಎಎಸ್‌ಐ ಮುರುಗೇಶ್, ಹೆಚ್ ಸಿಗಳಾದ ವರ್ಗೀಸ್, ದೇವರಾಜ್, ಅದ್ರಾಮ್, ಪ್ರವೀಣ್, ಪ್ರಶಾಂತ್, ಸ್ಕರಿಯ, ಪ್ರಶಾಂತ್ , ಪಿಸಿ ಹರ್ಷಿತ್ ರವರು ಸಹಕರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget
Click to comment

Leave a Reply

ಮಂಗಳೂರು

Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ

Published

on

Ad Widget

Ad Widget

Ad Widget

Ad Widget

ಬಂಟ್ವಾಳ: ಮಹಿಳೆಗೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ , ಜೀವ ಬೆದರಿಕೆ ಹಾಕಿದ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54 ಸಾವಿರ ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

Ad Widget

Ad Widget

Ad Widget

Ad Widget

Bantwal rape case verdict: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆಯ ಮನೆಯ ನೆರೆಮನೆಯ ನಿವಾಸಿಯಾಗಿದ್ದ ಅನಿಲ್ ಎಂಬಾತ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 92/2021ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376, 448, 323, 504 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget

Ad Widget alt="Ad Widget"/>

Ad Widget

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಆರೋಪಿಯನ್ನು ಪತ್ತೆಹಚ್ಚಿದ್ದರು. ಬಳಿಕ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Ad Widget

Ad Widget <> Ad Widget

ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ರಾಜೇಶ ಮಾರುತಿ ಕಾಮಟೆ ಅವರು ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮೋತಿಲಾಲ ಚೌಧರಿ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.

Continue Reading

ಶಿಕ್ಷಣ

Puttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ

Published

on

Ad Widget

Ad Widget

Ad Widget

Ad Widget

ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ
ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

Ad Widget

Ad Widget alt="Ad Widget"/>

Ad Widget

ಇವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ರಾವ್ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮನಾ ರಾವ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

Ad Widget

Ad Widget <> Ad Widget

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು

Published

on

Ad Widget

Ad Widget

Ad Widget

Ad Widget

ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.

Ad Widget

Ad Widget alt="Ad Widget"/>

Ad Widget

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Ad Widget

Ad Widget <> Ad Widget

ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!