ಲೇಖನಗಳು
Honda Shine Bike : ಶೈನ್ ಬೈಕ್ ಮೇಲೆ ಕ್ಯಾಶ್ ಬ್ಯಾಕ್ ಸಹಿತ ಹಲವು ಆಫರ್ ಘೋಷಿಸಿದ ಹೋಂಡಾ – ದೀಪಾವಳಿ ಹಬ್ಬದ ಸಂದರ್ಭ ಅತೀ ಕಡಿಮೆ ಬೆಲೆಗೆ ದೊರಕುತ್ತಿದೆ ಭಾರತದ ಜನಪ್ರಿಯ ಬೈಕ್
ಖ್ಯಾತ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಹೆಚ್ಎಂಎಸ್ಐ) ತನ್ನ ಶೈನ್ ಬೈಕ್ ಮೇಲೆ ಹಬ್ಬದ ಸೀಸನಿಗೆ ವಿಶೇಷ ಆಪರ್ ಘೋಷಿಸಿದೆ. ಹೋಂಡಾ ಶೈನ್ ಮಾದರಿಯು ಭಾರತೀಯ ಮಾರುಕಟ್ಟೆಯ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ.
ಶೈನ್ ಬೈಕ್ ಹೋಂಡಾ ಕಂಪೆನಿಯು ಭಾರತದಲ್ಲಿ ಅತ್ಯಧಿಕ ಮಾರಾಟ ಮಾಡಿರುವ ಬೈಕ್ ಆಗಿದೆ. ಈ ಹೋಂಡಾ ಶೈನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 1 ಕೋಟಿ ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಕೂಡ ಸಾಧಿಸಿತು. ಭಾರತದಲ್ಲಿ 125 ಸಿಸಿ ಬೈಕ್ ವಿಭಾಗದಲ್ಲಿ ಈ ಹೋಂಡಾ ಶೈನ್ ಮಾದರಿಯು ಅಗ್ರ ಸ್ಥಾನವನ್ನು ಹೊಂದಿದೆ. ಅಲ್ಲದೇ ಬರೊಬ್ಬರಿ 1 ಕೋಟಿ ಗ್ರಾಹಕರ ಮೈಲಿಗಲ್ಲನ್ನು ತಲುಪಿದ ಮೊದಲ 125 ಸಿಸಿ ಬೈಕ್ ಇದಾಗಿದೆ.
ಕೊಡುಗೆ ಏನು ?
ಇಧಿಗ ಈ ಜನಪ್ರಿಯ ಹೋಂಡಾ ಶೈನ್ ಬೈಕ್ ಮೇಲೆ ರೂ. 5,000 ವರೆಗಿನ ಕ್ಯಾಶ್ಬ್ಯಾಕ್ ಅನ್ನು ಕಂಪೆನಿಯು ಘೋಷಿಸಿದೆ. ಜತೆಗೆ ಖರೀದಿದಾರರು ಜೀರೋ ಡೌನ್ ಪೇಮೆಂಟ್ ಮತ್ತು ನೋ-ಕಾಸ್ಟ್ EMI ಫೈನಾನ್ಸ್ ಯೋಜನೆಗಳ ಪ್ರಯೋಜನಗಳನ್ನು ತೆಗೆದುಕೊಳ್ಳಬಹುದು. ಈ ಆಫರ್ ಈ ತಿಂಗಳ ಅಂತ್ಯದವರೆಗೂ ಅಂದರೇ ಅ.31 ರವರೆಗೆ ಮಾತ್ರ ಲಭ್ಯವಿರುತ್ತದೆ.
ಇದಲ್ಲದೆ, ಆಯ್ದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ಮೂಲಕ ವಹಿವಾಟುಗಳಲ್ಲಿ ಮಾತ್ರ ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪಡೆಯಬಹುದು. ಅಲ್ಲದೆ, ನಿರ್ದಿಷ್ಟಪಡಿಸಿದ ಮಾನದಂಡಗಳಿಗೆ ಸರಿಹೊಂದುವ ಪ್ರೊಫೈಲ್ಗಳ ಗ್ರಾಹಕರಿಗೆ ಆಯ್ದ ಹಣಕಾಸು ಪಾಲುದಾರರ ಮೂಲಕ ಹಣಕಾಸು ಯೋಜನೆಗಳು ಲಭ್ಯವಿವೆ. ಕೊಡುಗೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ನಿಮ್ಮ ಹತ್ತಿರದ ಅಧಿಕೃತ ಹೋಂಡಾ ಡೀಲರ್ಶಿಪ್ಗೆ ಭೇಟಿ ನೀಡಿ. ನೀವು ದಕ್ಷಿಣ ಕನ್ನಡ ಜಿಲ್ಲೆಯವರಾದರೇ ಕಾಂಚಾನ ಹೋಂಡಾ(ಡೀಲರ್) ಅತ್ಯುತ್ತಮ ಆಫರ್ ಹಾಗೂ ಅತ್ಯುತ್ಕೃಷ್ಟ ಸೇವೆಯನ್ನು ಗಾಹಕರಿಗೆ ನೀಡುತ್ತಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅವರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಹೋಂಡಾ ಶೈನ್ ವರ್ಷದಿಂದ ವರ್ಷಕ್ಕೆ ಶೇ.29 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ. ಹೋಂಡಾ ಶೈನ್ ಬೈಕಿನಲ್ಲಿ 124 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್ಪಿಎಂನಲ್ಲಿ 10.7 ಬಿಹೆಚ್ಪಿ ಪವರ್ ಮತ್ತು 6000 ಆರ್ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
Scholarship : ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ – ಯಾರೆಲ್ಲ ಅರ್ಜಿ ಸಲ್ಲಿಸಬಹುದು? ನಿಯಮಗಳೇನು?
ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಹೋಂಡಾ ಶೈನ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಯುನಿಟ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಪ್ರಮುಖವಾಗಿ ಈ ಹೋಂಡಾ ಶೈನ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ನೀಡಲಗಿದೆ, ಇದರೊಂದಿಗೆ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ.
ಈ ಜನಪ್ರಿಯ ಹೋಂಡಾ ಶೈನ್ ಬೈಕ್ ಅನ್ನು 2006 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 2008 ರಲ್ಲಿ ಬಿಡುಗಡೆಯಾದ ಕೇವಲ ಎರಡು ವರ್ಷಗಳ ನಂತರ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ 125 ಸಿಸಿ ಬೈಕ್ ಎಂಬ ಖ್ಯಾತಿಯನ್ನು ಪಡೆದುಕೊಂಡಿತ್ತು. ಹೋಂಡಾ ಶೈನ್ ಬೈಕ್ 50 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ತಲುಪಿದ ಮೊದಲ 125 ಸಿಸಿ ಬೈಕ್ ಕೂಡ ಇದೇ ಆಗಿದೆ.

ಇದು 2020ರ ವೇಳೆಗೆ 90 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸಾಧಿಸಿದೆ ಮತ್ತು 90 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸಾಧಿಸಿದೆ ಮತ್ತು ನಂತರ ಬರೊಬ್ಬರಿ 1 ಕೋಟಿ ಮಾರಾಟಾದ ಮೈಲಿಗಲ್ಲನ್ನು ಸಾಧಿಸಿತು. ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್ಸೈಕಲ್ ಪೋರ್ಟ್ಫೋಲಿಯೊವನ್ನು ಬಲಪಡಿಸಲು ನೋಡುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಕಂಪನಿಯು ಸಜ್ಜಾಗಿದೆ.
ಹೀರೋ ಮೋಟೊಕಾರ್ಪ್ ಅನ್ನು ಹಿಂದಿಕ್ಕಿದ ಹೋಂಡಾ
ಇನ್ನು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2022ರ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಹಿಂದಿನ ಪಾಲುದಾರ ಮತ್ತು ಪ್ರತಿಸ್ಪರ್ಧಿ ಹೀರೋ ಮೋಟೊಕಾರ್ಪ್ ಕಂಪನಿಯನ್ನು ಹಿಂದಿಕ್ಕಿದೆ. ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ, ಈ ವರ್ಷಗಳಲ್ಲಿ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ.
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2022ರ ಆಗಸ್ಟ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಮೋಟಾರ್ಸೈಕಲ್ ಕಂಪನಿಯು 285,400 ಯುನಿಟ್ಗಳನ್ನು ಮಾರಾಟ ಮಾಡಿತು.
ಹೀರೋ ಮೋಟೋಕಾರ್ಪ್ ಮಾರಾಟ ಮಾಡಿದ 251,939 ಯುನಿಟ್ಗಳಿಗೆ ಹೋಲಿಸಿದರೆ. ಎರಡೂ ತಯಾರಕರ ನಡುವಿನ ವ್ಯತ್ಯಾಸವು 33,461 ಯುನಿಟ್ ಗಳಷ್ಟಿದೆ. ಹೀರೋ ಮತ್ತು ಹೋಂಡಾ ನಡುವಿನ ಚಿಲ್ಲರೆ ಮಾರಾಟದ ಅಂತರವು ಮೇ 2022 ರಲ್ಲಿ 1.70 ಲಕ್ಷದಷ್ಟಿತ್ತು, ಜೂನ್ನಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಮತ್ತು ಜುಲೈನಲ್ಲಿ ಸುಮಾರು 53,356 ಯುನಿಟ್ಗಳಿಗೆ ಇಳಿದಿದೆ.
ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್ ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಟಗಾರರಾದ 'ಕಾಂಚನ ಹೊಂಡಾ' ದ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ ಮಾಣಿ ಹಾಗೂ ಮುಡಿಪು ಶಾಖೆಗಳನ್ನು ಇಂದೇ ಸಂಪರ್ಕಿಸಬಹುದು: ಕರೆ ಮಾಡಿ: 7829789777
ಲೇಖನಗಳು
Mercury-ಬುಧನ ನಕ್ಷತ್ರ ಬದಲಾವಣೆ: ಈ 5 ರಾಶಿಯವರಿಗೆ ಇಂದಿನಿಂದ ‘ರಾಜಯೋಗ’, ಅದೃಷ್ಟದ ಬಾಗಿಲು ಓಪನ್..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಈ ನಕ್ಷತ್ರ ಬದಲಾವಣೆಯು ಮುಂದಿನ 13 ದಿನಗಳ ಕಾಲ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, 5 ರಾಶಿಯವರಿಗೆ ಮಾತ್ರ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕವಾಗಿ ಲಾಭ ಪಡೆಯಲಿರುವ ಆ ಅದೃಷ್ಟದ ರಾಶಿಗಳು ಇಲ್ಲಿವೆ:
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ವೃತ್ತಿಜೀವನದಲ್ಲಿ ಬಹುದಿನಗಳಿಂದ ಎದುರು ನೋಡುತ್ತಿದ್ದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುವುದರಿಂದ ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯಬಹುದು. ಇದರಿಂದ ವೃತ್ತಿಯಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಬಹುದು. ಉದ್ಯೋಗದ ಜೊತೆಗೆ ಕುಟುಂಬದ ವಿಚಾರದಲ್ಲೂ ಈ ಅವಧಿ ಖುಷಿ ನೀಡಬಹುದು. ಕುಟುಂಬದವರೊಂದಿಗೆ ಪ್ರವಾಸ ಅಥವಾ ಮಕ್ಕಳೊಂದಿಗೆ ವಿಶೇಷ ಸಮಯ ಕಳೆಯುವ ಅವಕಾಶ ಸಿಗಬಹುದು. ಒಟ್ಟಿನಲ್ಲಿ, ಕೆಲಸದಲ್ಲಿ ಪ್ರಗತಿ ಮತ್ತು ಕುಟುಂಬದಲ್ಲಿ ಸಂತೋಷ ಎರಡೂ ಒಟ್ಟಿಗೆ ಸಿಗುವ ಆಹ್ಲಾದಕರ ದಿನಗಳು ನಿಮ್ಮದಾಗಬಹುದು.
ಮಿಥುನ ರಾಶಿ
ಬುಧನ ಬದಲಾವಣೆ ಮಿಥುನ ರಾಶಿಯವರಿಗೆ ಹಣದ ವಿಚಾರದಲ್ಲಿ ಹೊಸ ದಾರಿ ತೋರಿಸಬಹುದು. ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸ ಯೋಜನೆಗಳು ಮತ್ತು ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸುವ ಅವಕಾಶ ಸಿಗಬಹುದು. ಈಗ ಮಾಡಿಕೊಳ್ಳುವ ಕೆಲವು ವ್ಯವಹಾರ ಸಂಪರ್ಕಗಳು ಮುಂದಿನ ದಿನಗಳಲ್ಲಿ ದೊಡ್ಡ ಲಾಭ ತಂದುಕೊಡುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ ಇದಾಗಿದ್ದು, ಆದಾಯ ಗಳಿಸಲು ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬರಬಹುದು. ವ್ಯವಹಾರ ವಿಸ್ತರಣೆ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವೂ ಒಟ್ಟಿಗೆ ಒಲಿದುಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದಿನಿಂದಲೇ ಶುಭ ಸುದ್ದಿಗಳ ನಿರೀಕ್ಷೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ವಿಶೇಷವಾಗಿರಬಹುದು. ವಿಶೇಷವಾಗಿ ಸೆಪ್ಟೆಂಬರ್ 13ರವರೆಗಿನ ಅವಧಿ ಹಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು. ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ನಡೆಯುವ ಸಾಧ್ಯತೆಯಿದ್ದು, ಮನಸ್ಸಿನಲ್ಲೂ ಹೊಸ ಉತ್ಸಾಹ ಮೂಡಬಹುದು. ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದ್ದು, ಕುಟುಂಬದವರಿಂದ ಉತ್ತಮ ಬೆಂಬಲ ಸಿಗಬಹುದು. ಹಣಕಾಸಿನ ವಿಚಾರಗಳಲ್ಲೂ ಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ. ಹಣದ ಚಿಂತೆ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಸ್ಪಷ್ಟತೆ ಸಿಗುವ ದಿನಗಳು ಆರಂಭವಾಗಬಹುದು.
ವೃಶ್ಚಿಕ ರಾಶಿ
ಮುಂದಿನ ದಿನಗಳು ವೃಶ್ಚಿಕ ರಾಶಿಯವರಿಗೆ ಹೊಸ ಅನುಭವಗಳ ಜೊತೆಗೆ ನೆಮ್ಮದಿಯನ್ನೂ ತರಬಹುದು. ಇಂದಿನಿಂದ ಸೆ.13ರವರೆಗಿನ ಅವಧಿ ನಿಮಗೆ ವಿಶೇಷವಾಗಿರಬಹುದು. ಹೊಸ ವಿಷಯಗಳನ್ನು ಕಲಿಯಲು ಮತ್ತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಬಹುದು. ಕುಟುಂಬದವರೊಂದಿಗೆ ಪ್ರವಾಸಕ್ಕೆ ಯೋಜನೆ ರೂಪಿಸುವ ಸಾಧ್ಯತೆಯಿದ್ದು, ಬಹುದಿನಗಳಿಂದ ಬಯಸುತ್ತಿದ್ದವರೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು. ಇದೇ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳತ್ತ ಆಸಕ್ತಿ ಹೆಚ್ಚಾಗಬಹುದು. ಕುಟುಂಬದ ಸಂತೋಷ, ಹೊಸ ಕಲಿಕೆ ಮತ್ತು ಮನಸ್ಸಿನ ನೆಮ್ಮದಿ-ಮೂರೂ ಒಂದೇ ಸಮಯದಲ್ಲಿ ಸಿಗುವ ಸಾಧ್ಯತೆಯಿದೆ.
ಧನು ರಾಶಿ
ಬುಧನ ನಕ್ಷತ್ರ ಬದಲಾವಣೆ ಧನು ರಾಶಿಯವರಿಗೆ ಪ್ರಗತಿಯ ಹೊಸ ಬಾಗಿಲು ತೆರೆಯಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಕ್ಷೇತ್ರದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರೆಯಬಹುದು. ವ್ಯವಹಾರಸ್ಥರಿಗೂ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದ್ದು, ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಯಿದ್ದು, ಆರ್ಥಿಕ ಲಾಭವೂ ದೊರೆಯಬಹುದು. ಯಶಸ್ಸಿನ ಅನುಭವದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸು, ಹಣದಲ್ಲಿ ಲಾಭ ಮತ್ತು ಆತ್ಮವಿಶ್ವಾಸದ ಹೆಚ್ಚಳ-ಧನು ರಾಶಿಯವರಿಗೆ ಶುಭ ದಿನಗಳು ಆರಂಭವಾಗಬಹುದು.
ಲೇಖನಗಳು
Shani Dev-ರೇವತಿ ನಕ್ಷತ್ರಕ್ಕೆ ಶನಿ ಪ್ರವೇಶ; ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ..!
ಗ್ರಹಗಳ ಚಲನೆಯಲ್ಲಿ ನ್ಯಾಯದ ದೇವತೆ ಎಂದು ಕರೆಯಲ್ಪಡುವ ಶನಿ ಮಹಾತ್ಮನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖವನ್ನು ತರಲಿದೆ.
ಜ್ಯೋತಿಷ್ಯ ಲೋಕ: ಗ್ರಹಗಳ ಚಲನೆಯಲ್ಲಿ ನ್ಯಾಯದ ದೇವತೆ ಎಂದು ಕರೆಯಲ್ಪಡುವ ಶನಿ ಮಹಾತ್ಮನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖವನ್ನು ತರಲಿದೆ.
ರೇವತಿ ನಕ್ಷತ್ರಕ್ಕೆ ಶನಿ ಪಾದಾರ್ಪಣೆ:
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 20, 2026ರ ಸಂಜೆ 07:45ಕ್ಕೆ ಶನಿಯು ರೇವತಿ ನಕ್ಷತ್ರದ ಮೊದಲ ಪಾದಕ್ಕೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 09, 2026ರವರೆಗೆ ಶನಿಯು ಇದೇ ನಕ್ಷತ್ರದಲ್ಲಿ ವಿರಾಜಮಾನನಾಗಿರುತ್ತಾನೆ. ಈ ಅವಧಿಯಲ್ಲಿ ಶನಿ ದೇವನು ನಾಲ್ಕು ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ.
ಯಾರಿಗೆ ಅದೃಷ್ಟ?
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಸಿಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ದೀರ್ಘಕಾಲದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.
ಸಿಂಹ ರಾಶಿ: ಅಕ್ಟೋಬರ್ ವರೆಗಿನ ಸಮಯವು ಸಿಂಹ ರಾಶಿಯವರಿಗೆ ‘ಸುವರ್ಣ ಅವಧಿ’ಯಾಗಲಿದೆ. ನೀವು ಕೈಹಾಕಿದ ಪ್ರಮುಖ ಕೆಲಸಗಳಲ್ಲಿ ಭರ್ಜರಿ ಯಶಸ್ಸು ಸಿಗಲಿದೆ. ಹಳೆಯ ಹೂಡಿಕೆಗಳಿಂದ ದೊಡ್ಡ ಲಾಭ ದೊರೆಯಲಿದ್ದು, ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲವಿದು.
ಕನ್ಯಾ ರಾಶಿ: ಈ ರಾಶಿಯವರು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆ ದಟ್ಟವಾಗಿದೆ. ನಿಮ್ಮ ಕಾರ್ಯಕ್ಷಮತೆಯನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದು, ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದೀರಿ.
ಮಕರ ರಾಶಿ: ಶನಿಯ ನಕ್ಷತ್ರ ಬದಲಾವಣೆಯು ಮಕರ ರಾಶಿಯವರ ಕೌಟುಂಬಿಕ ಜೀವನದಲ್ಲಿ ಸಂತೋಷ ತರಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ಜರುಗಲಿವೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ. ಬಾಕಿ ಉಳಿದಿದ್ದ ಕಾನೂನು ಕೆಲಸಗಳಲ್ಲಿ ಜಯ ಸಿಗಲಿದೆ.
ಒಟ್ಟಾರೆಯಾಗಿ, ಶನಿ ದೇವನ ಈ ನಕ್ಷತ್ರ ಪರಿವರ್ತನೆಯು ಈ ನಾಲ್ಕು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಲೇಖನಗಳು
Lakshmi Rajyoga-ಶುಕ್ರ-ಚಂದ್ರ ಸಂಯೋಗ: ಸೆ.13ರಿಂದ ಈ 5 ರಾಶಿಯವರಿಗೆ ಒಲಿಯಲಿದೆ ‘ಲಕ್ಷ್ಮಿ ರಾಜಯೋಗ’..!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಅಪರೂಪದ ಗ್ರಹ ಸಂಯೋಗ ನಡೆಯಲಿದ್ದು, ಇದು ಹಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಅಪರೂಪದ ಗ್ರಹ ಸಂಯೋಗ ನಡೆಯಲಿದ್ದು, ಇದು ಹಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಸೆ.13ರಂದು ಸೃಷ್ಟಿಯಾಗಲಿದೆ ಲಕ್ಷ್ಮಿ ರಾಜಯೋಗ
ಸೆಪ್ಟೆಂಬರ್ 13 ರಂದು ಕಲೆ, ಪ್ರೀತಿ ಮತ್ತು ವೈಭವದ ಕಾರಕನಾದ ಶುಕ್ರ ಹಾಗೂ ಮನಸ್ಸಿನ ಕಾರಕನಾದ ಚಂದ್ರ ತುಲಾ ರಾಶಿಯಲ್ಲಿ ಒಂದಾಗಲಿದ್ದಾರೆ. ಈ ಎರಡು ಪ್ರಬಲ ಗ್ರಹಗಳ ಮಿಲನದಿಂದಾಗಿ ‘ಲಕ್ಷ್ಮಿ ರಾಜಯೋಗ’ ಸೃಷ್ಟಿಯಾಗಲಿದೆ. ಈ ಯೋಗವು ಸೃಜನಶೀಲತೆ ಮತ್ತು ಉತ್ಸಾಹವನ್ನು ಹೆಚ್ಚಿಸುವುದಲ್ಲದೆ, ಕೆಲವು ರಾಶಿಗಳಿಗೆ ಆರ್ಥಿಕವಾಗಿ ಅಪಾರ ಲಾಭವನ್ನು ತಂದುಕೊಡಲಿದೆ. ಆ ಅದೃಷ್ಟವಂತ 5 ರಾಶಿಗಳು ಇಲ್ಲಿವೆ:
ಕಟಕ ರಾಶಿ
ಇನ್ನೊಂದು ತಿಂಗಳಲ್ಲಿ ಕಟಕ ರಾಶಿಯವರ ಬಾಳು ಬೆಳಗುವುದು. ಕಟಕ ರಾಶಿಯವರ ಆತ್ಮ ವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲಿದೆ. ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬಲವಾದ ಪ್ರಭಾವ ಬೀರುವುದು. ಕಚೇರಿಯಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚಾಗಬಹುದು. ಕೆಲವರಿಗೆ ಹೊಸ ಜವಾಬ್ದಾರಿಗಳನ್ನು ನೀಡಬಹುದು. ಬಡ್ತಿಗೆ ಅವಕಾಶಗಳು ಸಿಗಲಿವೆ. ಅಲ್ಲದೆ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ನೀವು ಕಾಣುವಿರಿ. ವಿವಾಹಿತ ದಂಪತಿಗಳ ನಡುವೆ ಅನ್ಯೋನ್ಯತೆ ದ್ವಿಗುಣವಾಗಲಿದೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿರುತ್ತದೆ. ಯಾಕೆಂದರೆ ನೀವು ನಿಮ್ಮ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ನಿಮ್ಮ ಭರವಸೆಗಳನ್ನು ಪೂರೈಸಲು ಸಾಧ್ಯವಾಗುವ ಸಮಯ ಇದು. ಆಸ್ತಿಗಳಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ನೆಮ್ಮದಿಯನ್ನು ತರಲಿದೆ. ಶುಕ್ರ ಚಂದ್ರ ಗ್ರಹ ಸಂಚಾರವು ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಬಹುದು. ಬಹುನಿರೀಕ್ಷಿತ ಹಣ ಈ ಸಮಯದಲ್ಲಿ ಉಪಯೋಗಕ್ಕೆ ಬರಬಹುದು. ಹೂಡಿಕೆಗಳು ಅನಿರೀಕ್ಷಿತ ಲಾಭವನ್ನು ನೀಡುತ್ತವೆ. ಐಷಾರಾಮಿ ವಸ್ತುಗಳ ಮೇಲಿನ ವೆಚ್ಚಗಳು ಹೆಚ್ಚಾಗಲಿವೆ. ಆದರೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಕಂಡುಬರುವ ಸಾಧ್ಯತೆಗಳು ಇವೆ. ಇದಲ್ಲದೆ ಹೆಚ್ಚಿದ ಆತ್ಮವಿಶ್ವಾಸ ನಿಮ್ಮ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯುವ ಸಮಯ. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳು ದುಪ್ಪಟ್ಟು ಲಾಭವನ್ನು ನೀಡುತ್ತವೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಇದಲ್ಲದೆ ಉದ್ಯೋಗದಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ವೃದ್ಧಿಯಾಗುತ್ತವೆ. ಇದು ವ್ಯವಹಾರ ಮತ್ತು ವೈಯಕ್ತಿಕ ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಸಮಯ. ಹೀಗಾಗಿ ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಕಾಣುವಿರಿ. ನೆಮ್ಮದಿಯ ಜೀವನ ನಿಮ್ಮದಾಗಲಿದೆ. ದೀರ್ಘಕಾಲದಿಂದ ನಿಂತುಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗಲಿವೆ.
ತುಲಾ ರಾಶಿ
ಲಕ್ಷ್ಮಿ ರಾಜಯೋಗದಿಂದಾಗಿ ಸೆಪ್ಟೆಂಬರ್ 13ರಿಂದ ತುಲಾ ರಾಶಿಯವರ ಆದಾಯ ದ್ವಿಗುಣವಾಗುವುದು. ವಿದೇಶದಲ್ಲಿ ವ್ಯಾಪಾರ ಅಥವಾ ಕೆಲಸದಲ್ಲಿ ತೊಡಗಿರುವವರು ಹೆಚ್ಚಿನ ಲಾಭವನ್ನು ಗಳಿಸಬಹುದು. ಶುಕ್ರ ಚಂದ್ರ ಗ್ರಹಗಳ ಸಂಯೋಗದಿಂದ ತುಲಾ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಹಳೆಯ ಹೂಡಿಕೆಗಳಿಂದ ಲಾಭವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಇರುತ್ತವೆ. ವಿಶೇಷವಾಗಿ ಶುಕ್ರನು ಹಣದ ಮನೆಯಲ್ಲಿ ಸಂಯೋಗದಲ್ಲಿರುವುದರಿಂದ, ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಹೆಚ್ಚು ಸುಧಾರಿಸುತ್ತದೆ. ಆರ್ಥಿಕ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳು ಬಹಳ ಕಡಿಮೆಯಾಗುವುದು. ಪ್ರಮುಖ ಅಗತ್ಯಗಳು ಈಡೇರುತ್ತವೆ. ಆರೋಗ್ಯ ಬಹಳಷ್ಟು ಸುಧಾರಣೆ ಕಾಣುವುದು. ನೀವು ವೈಯಕ್ತಿಕ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ವೃತ್ತಿ ಮತ್ತು ಕೆಲಸದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ನೀವಿರುವ ಸ್ಥಳದಲ್ಲಿ ಉದ್ಯೋಗ ಸಿಗಬಹುದು. ನಿರೀಕ್ಷಿತ ಶುಭ ಸುದ್ದಿ ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಶುಕ್ರ ಚಂದ್ರ ಸಂಯೋಗ ಅಪಾರ ಲಾಭವನ್ನು ತಂದುಕೊಡುವುದು. ಶುಕ್ರನ ಅನುಗ್ರಹದಿಂದ ಮನೆಯಲ್ಲಿ ಮದುವೆಯಂತಹ ಶುಭ ಘಟನೆಗಳು ನಡೆಯಲಿವೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಇಲ್ಲಿಯವರೆಗೆ ನಿಧಾನವಾಗಿ ಚಲಿಸುತ್ತಿರುವ ಯೋಜನೆಗಳು ವೇಗವನ್ನು ಪಡೆಯಲು ಪ್ರಾರಂಭಿಸಬಹುದು. ಬೆಳವಣಿಗೆ ಮತ್ತು ಆರ್ಥಿಕ ಲಾಭಗಳಿಗೆ ಅವಕಾಶಗಳನ್ನು ಸೃಷ್ಟಿಲಾಗಲಿವೆ. ವೃತ್ತಿಪರ ಮತ್ತು ವ್ಯವಹಾರ-ಸಂಬಂಧಿತ ಪ್ರಯತ್ನಗಳಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಉಂಟು. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲ ನಿಮ್ಮ ಮೇಲೆ ಇರುವುದರಿಂದ ನಿಮ್ಮೆಲ್ಲಾ ಕಾರ್ಯಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಆದರೆ ಸಮಾಜದಲ್ಲಿ ನಿಮ್ಮ ಖ್ಯಾತಿ ಮತ್ತು ಪ್ರಭಾವ ದ್ವಿಗುಣವಾಗಲಿದೆ.
-
ಮಂಗಳೂರು10 hours agoAuto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್
-
ಅಂತರ ರಾಜ್ಯ15 hours agoಕಾಸರಗೋಡು: ಆರ್ಎಸ್ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
-
ಮಂಗಳೂರು17 hours agoChouta-ಫಾರಂ 7 ಕೊಟ್ಟ ಮಾತ್ರಕ್ಕೆ ಮತ ಡಿಲೀಟ್ ಆಗಲ್ಲ; ಅಕ್ರಮ ಡಿಲೀಷನ್ಗೆ ದಾಖಲೆ ತೋರಿಸಿ: ಕಾಂಗ್ರೆಸ್ಗೆ ಚೌಟ ಸವಾಲು
-
ಸ್ಥಳೀಯ14 hours agoBeltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು
-
Uncategorized7 hours ago
Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ
-
ಅಂತರ ರಾಜ್ಯ9 hours agoBlackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್ಮೇಲ್..!
-
ಉದ್ಯೋಗ11 hours agoPuttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
-
ರಾಜಕೀಯ16 hours agoAshok Rai-ಪಕ್ಷ ಸಂಘಟನೆಗೆ ಅಶೋಕ್ ರೈ ಹೊಸ ಹೆಜ್ಜೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ ಬೊಲೆರೋ


















