Connect with us

ಅಪರಾಧ

Honey Trap : ದುಷ್ಕರ್ಮಿಗಳ ತಂಡದಿಂದ ಮಂಗಳೂರಿನ ಯುವಕನ ದರೋಡೆ – ಕಡಬ ಠಾಣೆಯಲ್ಲಿ ಪ್ರಕರಣ ದಾಖಲು | ಮರ್ಧಾಳದ ಹನಿಟ್ರ್ಯಾಪ್‌ ಪ್ರಕರಣಕ್ಕೆ ತಿರುವು : ಸಾರ್ವಜನಿಕರ ಶಂಕೆ

Published

on



Ad Widget

Ad Widget

Ad Widget

Ad Widget

ಕಡಬ kadaba ಅ 7: : ಪರಿಚಿತ ವ್ಯಕ್ತಿಯ ಭೇಟಿಗೆ ಬಂದಿದ್ದ ವೇಳೆ ಯುವಕನ ಮೇಲೆ  ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿ ಪರ್ಸ್, ಮೊಬೈಲ್ ಫೋನ್ ಹಾಗೂ ಬೈಕ್‌ ಅನ್ನು  ದರೋಡೆಗೈದು ಜೀವ(Robbery)   ಬೆದರಿಕೆಯೊಡ್ಡಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಬಜಲ್ ನಿವಾಸಿ ಉಮರಬ್ಬ ಎಂಬವರ ಮಗ ಅಜರುದ್ದೀನ್(32ವ.)  ಎಂಬವರು ದೂರು ನೀಡಿದವರು.

Ad Widget

Ad Widget

Ad Widget

Ad Widget

ಮೂವರು ಅಪರಿಚಿತ ಆರೋಪಿಗಳ ವಿರುದ್ದ IPC ಸೆಕ್ಷನ್‌  341,323,392.506 ಜೊತೆಗೆ 34  ಹಾಗು 1860ರಂತೆ ಪ್ರಕರಣ ದಾಖಲಾಗಿದೆ. ಕೃತ್ಯವು ಅ 4ರಂದು ಬುಧವಾರ ನಡೆದಿದೆ. ಅದೇ ದಿನ ಮಂಗಳೂರು ಮೂಲದ ಯುವಕನನ್ನು ಮರ್ದಾಳದ ತಂಡವೊಂದು ಹನಿಟ್ರ್ಯಾಪ್‌ (honey Trap)  ಮಾಡಿತ್ತು ಎಂದು ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಅದೇ ಪ್ರಕರಣವೇ ಇದೀಗ ತಿರುವು  ಪಡೆದಿದೆ ಎಂದು  ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದರಾದರೂ  ಪೊಲೀಸರು ಅದನ್ನು ಖಚಿತ ಪಡಿಸಿಲ್ಲ.

Ad Widget

Ad Widget

Ad Widget alt="Ad Widget"/>

Ad Widget

ಅಜರುದ್ದೀನ್‌ ನೀಡಿದ ದೂರಿನಲ್ಲಿ ಏನಿದೆ ?

 ಅ.4ರಂದು ತನ್ನ ಪರಿಚಯದ ರಮೇಶ್ ಎಂಬಾತನನ್ನು ಭೇಟಿ ಮಾಡಲೆಂದು  ಅಜರುದ್ದೀನ್‌ ಕಡಬ ತಾಲೂಕಿನ  ಮರ್ದಾಳಕ್ಕೆ ಬೈಕಿನಲ್ಲಿ  ರಾತ್ರಿ ವೇಳೆ ಬಂದಿದ್ದರು. ಆದರೇ ರಮೇಶ್ ಸಿಕ್ಕಿರಲಿಲ್ಲ. ಹೀಗಾಗಿ ರಾತ್ರಿ 9.30 ರ ಸುಮಾರಿಗೆ  ಮಂಗಳೂರಿಗೆ ವಾಪಸ್ ಹೋಗಲೆಂದು ಸುಬ್ರಹ್ಮಣ್ಯ-ಉಪ್ಪಿನಂಗಡಿ ರಸ್ತೆಯಲ್ಲಿ  ತೆರಳುತ್ತಿದ್ದಾಗ   ಮರ್ದಾಳ ಜಂಕ್ಷನ್‌ನಿಂದ ಸುಮಾರು 1 ಕಿ.ಮೀ ದೂರದ ಬೊಳ್ಳೂರು ಕ್ರಾಸ್ ಬಳಿ ಮೂವರು ಅಪರಿಚಿತರ ತಂಡ  ಆತನನ್ನು ತಡೆದು ನಿಲ್ಲಿಸಿದೆ.

Ad Widget

Ad Widget <> Ad Widget

Mobile offer : ರೆಡ್‌ಮಿಯ ಈ ಮೊಬೈಲ್ ಖರೀದಿಸಿ ! ಬರೊಬ್ಬರಿ ರೂ. 4999 ಮೌಲ್ಯದ ಸ್ಮಾರ್ಟ್ ವಾಚ್ ತಮ್ಮದಾಗಿಸಿ !!!



Ad Widget

   ‘ನಿನ್ನಲ್ಲಿರುವ ಹಣವನ್ನು ಕೊಡು’ ಎಂದು  ಆ ತಂಡ ಬೆದರಿಸಿದ್ದು, ಅಜರುದ್ದೀನ್‌ ಹಣ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಆರೋಪಿಗಳು  ಗಟ್ಟಿಯಾಗಿ  ಹಿಡಿದುಕೊಂಡು ಕೈಯಿಂದ ಹಲ್ಲೆ ಮಾಡಿ ನನ್ನ ಪರ್ಸ್, ಮೊಬೈಲ್ ಫೋನ್ ಹಾಗೂ ಬೈಕ್‌ ಅನ್ನು ದರೋಡೆ ಮಾಡಿದ್ದಾರೆ. ಅಲ್ಲದೇ “  ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಅಥವಾ ಪೊಲೀಸ್  ಕೇಸು ಮಾಡಿದರೆ  ಜೀವ ಸಹಿತಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

Ad Widget

Ad Widget

 ಏನಿದು ಹನಿಟ್ರ್ಯಾಪ್‌ ಪ್ರಕರಣ ?

ಮರ್ದಾಳದ ಯುವಕರ ತಂಡವೊಂದು ಹುಡುಗಿಯ ಹೆಸರಿನಲ್ಲಿ  ಫೇಸ್‌ ಬುಕ್‌ ನಲ್ಲಿ ನಕಲಿ ಖಾತೆ ತೆರೆದು ಯುವಕರನ್ನು ಗುರಿಯಾಗಿಸಿಕೊಂಡು ಮೇಸೆಂಜರ್‌ ನಲ್ಲಿ ಮೆಸೇಜ್‌ ಕಳುಹಿಸುತಿತ್ತು ಎನ್ನಲಾಗಿದೆ. ಇದಕ್ಕೆ ರಿಪ್ಲೈ ಮಾಡುತ್ತಿದ್ದ ಯುವಕರನ್ನು, ಹುಡುಗಿಯ ಸೋಗಿನಲ್ಲಿ ಖೆಡ್ಡಾಕ್ಕೆ ಕೆಡವಲು ಯೋಜನೆ ರೂಪಿಸುತಿತ್ತು. ಇದೇ ರೀತಿ ಮಂಗಳೂರಿನ ಯುವಕನೊಬ್ಬ ಈ ಯುವಕರ ಬಲೆಗೆ ಬಿದ್ದಿದ್ದು, ಆತನನ್ನು ಅ 4 ರಂದು ರಾತ್ರಿ ಕಡಬದ ಮರ್ದಾಳಕ್ಕೆ ಬರುವಂತೆ ಆಮಂತ್ರಿಸಿತ್ತು. ಹುಡುಗಿ ಕರೆದಿದ್ದಾಳೆ  ಎಂಬ ಕಾರಣಕ್ಕೆ ಆತ ಬಂದಿದ್ದು , ಈ ವೇಳೆ ಆತನನ್ನು ಯುವಕರ ತಂಡ ಬೆದರಿಸಿದೆ ಎನ್ನಲಾಗಿದೆ. ಹಣ ನೀಡದಿದ್ದರೇ, ಆತ ಹುಡುಗಿಯ ಜತೆ ಮಾಡಿದ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.

Railway recruitment : ದಕ್ಷಿಣ ರೈಲ್ವೆಯಲ್ಲಿ ಖಾಲಿ ಇರುವ 3154 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ – SSLC, ITI ಆದವರಿಗೆ ಅವಕಾಶ

ಈ ವೇಳೆ ದುಷ್ಕ್ರಮಿಗಳ ತಂಡ   ಮಂಗಳೂರಿನ ಯುವಕನ ಬಳಿಯಿದ್ದ ಪರ್ಸ್, ಮೊಬೈಲ್ ಫೋನ್ ಹಾಗೂ ಬೈಕ್‌ ಅನ್ನು ಸುಲಿಗೆ ಮಾಡಿದೆ ಎಂದು ಹೇಳಲಾಗಿದೆ. ಬಳಿಕ ಸಂತ್ರಸ್ತ ಯುವಕ ಸ್ನೇಹಿತರ ಮೂಲಕ ಕಡಬ ಠಾಣೆಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಹಣ ನೀಡುವ ನೆಪದಲ್ಲಿ ಸಂತ್ರಸ್ತ ಯುವಕನಿಂದ ದುಷ್ಕರ್ಮಿಗಳಿಗೆ ಪೊಲೀಸರು ಕರೆ ಮಾಡಿಸಿದ್ದಾರೆ ಎನ್ಬಲಾಗಿದೆ.

ಹಣ ಕಲೆಕ್ಟ್‌ ಮಾಡಲು ದುಷ್ಕರ್ಮಿಗಳು ಬಂದ ವೇಳೆ ಪೊಲೀಸರು ಮಪ್ತಿಯಲ್ಲಿ ಯುವಕನ ಜತೆ ತೆರಳಿದ್ದಾರೆ. ಪೊಲೀಸರನ್ನು ದೂರದಿಂದಲೇ ಗಮನಿಸಿದ ಇಬ್ಬರು ಆರೋಪಿಗಳು ಓಡಿ ತಲೆ ಮರೆಸಿಕೊಂಡಿದ್ದು , ಇನ್ನೊರ್ವ ಬೈಕಿನಲ್ಲಿ ಓಡಿ ಹೋಗುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೇ ಪೊಲೀಸರು ಈ ಘಟನೆಯನ್ನು ಖಚಿತ ಪಡಿಸಿಲ್ಲ.

Gram panchayat : ಗ್ರಾಮ ಪಂಚಾಯತ್‌ ಅಧ್ಯಕ್ಷರ, ಸದಸ್ಯರ ಹಲವು ಅಧಿಕಾರ ಮೊಟಕು – ಬಹುತೇಕ ಅಧಿಕಾರ ಪಿಡಿಒಗೆ :  ಸರ್ಕಾರ ಆದೇಶಿಸಿರುವ ನಡಾವಳಿಯಲ್ಲಿರುವ ಅಂಶಗಳು ಯಾವಯ ಯಾವು ಗೊತ್ತೇ?

ಕಡಬ ಠಾಣೆಯಲ್ಲಿ ಹನಿಟ್ರ್ಯಾಪ್‌ ಪ್ರಕರಣ ದಾಖಲಾಗಿಲ್ಲ

ಅಲ್ಲದೇ ಕಡಬ ಠಾಣೆಯಲ್ಲಿ ಯಾವುದೇ ಹನಿ ಟ್ರ್ಯಾಪ್‌ ಪ್ರಕರಣ ಕೂಡ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಶಂಕಿತ  ಹನಿಟ್ರ್ಯಾಪ್‌ ಪ್ರಕರಣಕ್ಕೂ ಕಡಬ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸ್‌ ತನಿಖೆಯಿಂದ ಬಹಿರಂಗವಾಗಬೇಕಿದೆ

Ad Widget
Click to comment

Leave a Reply

ಅಪರಾಧ

Digital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ

Published

on



Ad Widget

Ad Widget

Ad Widget

Ad Widget

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಕೆ ಹಾಕಿ 75 ವರ್ಷದ ಮಹಿಳೆಯೊಬ್ಬರಿಂದ ಸೈಬರ್‌ ಖದೀಮರು ಬರೋಬ್ಬರಿ ₹2 ಕೋಟಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸ್‌ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ಈ ಕುರಿತು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಕೆ ಹಾಕಿ 75 ವರ್ಷದ ಮಹಿಳೆಯೊಬ್ಬರಿಂದ ಸೈಬರ್‌ ಖದೀಮರು ಬರೋಬ್ಬರಿ ₹2 ಕೋಟಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸ್‌ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ಈ ಕುರಿತು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸೆ.25ರಂದು ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ಕರೆ ಮಾಡಿ ತಾನು ಮುಂಬೈನ ಕೊಲಾಬಾ ಪೊಲೀಸ್‌ ಅಧಿಕಾರಿ ಸಂದೀಪ್‌ ರಾವ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ನರೇಶ್‌ ಗೋಯಲ್‌ ಜತೆ ಹಣ ವರ್ಗಾವಣೆ, ಮಾದಕವಸ್ತು ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಸೇರಿದಂತೆ ಹಲವು ಅಪರಾಧಗಳಲ್ಲಿ ನೀವು ಭಾಗಿಯಾಗಿದ್ದೀರಿ. ಈ ಸಂಬಂಧ ಮುಂಬೈ ಕೊಲಾಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ.

Ad Widget

Ad Widget <> Ad Widget

ಬಳಿಕ ಮತ್ತೊಂದು ಮೊಬೈಲ್‌ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಸಮಾಧಾನ್‌ ಪವಾರ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಅಪರಾಧದಲ್ಲಿ ನೀವು ಭಾಗಿಯಾಗಿದ್ದೀರಿ. ‘ನ್ಯಾಷನಲ್‌ ಸೀಕ್ರೆಸಿ ಆ್ಯಕ್ಟ್‌’ ಪಾಲಿಸಬೇಕು ಎಂದು ಹೇಳಿ ಮಹಿಳೆಯನ್ನು ಮತ್ತಷ್ಟು ಹೆದರಿಸಿದ್ದಾನೆ. ಅಲ್ಲದೆ, ತಾವು ಸರ್ವೇಲೈನ್ಸ್‌ನಲ್ಲಿರುವುದರಿಂದ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದಾನೆ.



Ad Widget

ನಂತರ ಮಹಿಳೆಯ ಆಸ್ತಿ ಹಾಗೂ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ಆರೋಪಿಗಳು ನಂಬಿಸಿದ್ದಾರೆ. ಈ ನೆಪದಲ್ಲಿ ಬ್ಯಾಂಕ್‌ ಖಾತೆ ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ತಮ್ಮ ಸೂಚನೆಯಂತೆ ನಿರ್ದಿಷ್ಟ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ.

Ad Widget

Ad Widget

ಆರೋಪಿಗಳ ಮಾತು ನಂಬಿದ ಮಹಿಳೆ, ಅವರ ಸೂಚನೆಯಂತೆ ₹60 ಲಕ್ಷವನ್ನು ಹಾಗೂ ಅ.3ರಂದು ₹1.40 ಕೋಟಿ ಹಣವನ್ನು ಆರ್‌ಟಿಜಿಎಸ್‌ ಮೂಲಕ ವರ್ಗಾಯಿಸಿದ್ದಾರೆ. ಸೆ.25ರಿಂದ ಅ.5ರವರೆಗೆ ಹಂತ ಹಂತವಾಗಿ ಒಟ್ಟು ₹2 ಕೋಟಿ ಹಣ ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಸೇರಿದಂತೆ ವಿವಿಧ ರೀತಿಯ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್‌ ಅಥವಾ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಬೆದರಿಸಿ, ಹಣ ವರ್ಗಾಯಿಸುವಂತೆ ಒತ್ತಡ ಹೇರುವುದು ವಂಚಕರ ಸಾಮಾನ್ಯ ತಂತ್ರವಾಗಿದೆ.

ಸೈಬರ್‌ ವಂಚನೆಗೆ ಒಳಗಾದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಮುಖ್ಯ. ವಂಚನೆಯಾದ ಕೂಡಲೇ ‘ಗೋಲ್ಡನ್ ಅವರ್’ನಲ್ಲಿ ದೂರು ನೀಡಿದರೆ ಹಣದ ವರ್ಗಾವಣೆಯನ್ನು ತಡೆಯಲು ಅಥವಾ ವಂಚಿತ ಹಣವನ್ನು ಫ್ರೀಜ್‌ ಮಾಡಲು ಪೊಲೀಸರು ಪ್ರಯತ್ನಿಸಬಹುದು. ದೂರು ನೀಡಲು ವಿಳಂಬವಾದಷ್ಟೂ ಹಣವನ್ನು ಮರಳಿ ಪಡೆಯುವುದು ಕಷ್ಟವಾಗುವ ಸಾಧ್ಯತೆ ಇದೆ.

Ad Widget
Continue Reading

ಅಪರಾಧ

Mangalore-ಮಂಗಳೂರು: ನಕಲಿ ಪಾಸ್‌ಪೋರ್ಟ್ ಪ್ರಕರಣ; 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Published

on



Ad Widget

Ad Widget

Ad Widget

Ad Widget

ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ. ಬಂಧಿತನನ್ನು ಕಾಸರಗೋಡು ಜಿಲ್ಲೆಯ ವೇಲಾಯುಧನ್ (54) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಬಂಧಿತನನ್ನು ಕಾಸರಗೋಡು ಜಿಲ್ಲೆಯ ವೇಲಾಯುಧನ್ (54) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

2010ರ ಜೂನ್ 22ರಂದು ನಕಲಿ ಪಾಸ್‌ಪೋರ್ಟ್ ಪಡೆದು ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ವೇಳೆ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದರು.



Ad Widget

ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 419, 420, 468 ಹಾಗೂ 34 ಮತ್ತು ಪಾಸ್‌ಪೋರ್ಟ್ ಕಾಯ್ದೆ-1967ರ ಕಲಂ 12(1)(b), (d), (e) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Ad Widget

Ad Widget

ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೇಷನ್ಸ್ ನ್ಯಾಯಾಲಯವು 2020ರ ಡಿಸೆಂಬರ್ 1ರಂದು ಆರೋಪಿಗೆ ಒಂದು ವರ್ಷ ಆರು ತಿಂಗಳ ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ವೇಲಾಯುಧನ್ ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ರಿವಿಷನ್ ಪಿಟಿಷನ್ ಸಂಖ್ಯೆ 104/2021 ಸಲ್ಲಿಸಿದ್ದ. ಆದರೆ ಹೈಕೋರ್ಟ್ ಆತನ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗದೆ ವೇಲಾಯುಧನ್ ತಲೆಮರೆಸಿಕೊಂಡಿದ್ದ.

ಸುಮಾರು ಆರು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆತನನ್ನು ಅಕ್ಟೋಬರ್ 8ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದೆ. ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Ad Widget
Continue Reading

ಅಪರಾಧ

Uppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ

Published

on



Ad Widget

Ad Widget

Ad Widget

Ad Widget

ತೋಟದ ಕೆಲಸಕ್ಕೆ ಬರುತ್ತೇನೆಂದು ಹೇಳಿ ತೋಟದ ಮಾಲಕರೊಬ್ಬರಿಂದ ₹2 ಸಾವಿರ ಪಡೆದು ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಕೋಡಿಂಬಾಡಿ ಪರಿಸರದಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹೇಳಿ ತೋಟದ ಮಾಲಕರೊಬ್ಬರಿಂದ ₹2 ಸಾವಿರ ಪಡೆದು ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಕೋಡಿಂಬಾಡಿ ಪರಿಸರದಲ್ಲಿ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೋಡಿಂಬಾಡಿ ಪರಿಸರದ ಪ್ರಗತಿಪರ ಕೃಷಿಕರೊಬ್ಬರ ಮನೆಗೆ ನಾಲ್ಕು ದಿನಗಳ ಹಿಂದೆ ತೆರಳಿದ ಅಪರಿಚಿತ ವ್ಯಕ್ತಿ, ತಾನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವನು ಎಂದು ಪರಿಚಯಿಸಿಕೊಂಡಿದ್ದಾನೆ. ತೋಟದ ಕೆಲಸಕ್ಕೆ ಶಾಶ್ವತವಾಗಿ ಕಾರ್ಮಿಕರು ಬೇಕೇ ಎಂದು ವಿಚಾರಿಸಿದ್ದಾನೆ. ಕೆಲಸಗಾರರ ಅಗತ್ಯವಿದ್ದ ಹಿನ್ನೆಲೆಯಲ್ಲಿ ಕೃಷಿಕರು ಬೇಕು ಎಂದು ತಿಳಿಸಿದಾಗ, ತಾನು ಸದ್ಯ ಗೇರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ತನ್ನ ಬಟ್ಟೆ-ಬರೆ ಹಾಗೂ ಇತರ ಸಾಮಗ್ರಿಗಳನ್ನು ತೆಗೆದುಕೊಂಡು, ಹೆಂಡತಿ-ಮಕ್ಕಳೊಂದಿಗೆ ಬರುವುದಾಗಿ ಹೇಳಿದ್ದಾನೆ.

Ad Widget

Ad Widget <> Ad Widget

ಆದರೆ ರಿಕ್ಷಾ ಮಾಡಿಕೊಂಡು ಬರಲು ತನ್ನ ಬಳಿ ಹಣವಿಲ್ಲ ಎಂದು ಹೇಳಿ ಮೊದಲಿಗೆ ₹1 ಸಾವಿರ ಕೇಳಿದ್ದಾನೆ. ಆತನ ಮಾತನ್ನು ನಂಬಿದ ತೋಟದ ಮಾಲಕರು ಹಣ ನೀಡಿದ್ದಾರೆ. ಬಳಿಕ ಅಂಗಡಿಯಲ್ಲಿ ಸ್ವಲ್ಪ ಸಾಲವಿದ್ದು, ಅದನ್ನು ತೀರಿಸಲು ಮತ್ತೊಂದು ₹1 ಸಾವಿರ ನೀಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೂ ಒಪ್ಪಿದ ಕೃಷಿಕರು ಒಟ್ಟು ₹2 ಸಾವಿರ ನೀಡಿದ್ದಾರೆ.



Ad Widget

ಹಣ ಪಡೆದುಕೊಂಡು ತೆರಳಿದ ವ್ಯಕ್ತಿ ನಾಲ್ಕು ದಿನ ಕಳೆದರೂ ಮತ್ತೆ ಕೃಷಿಕರ ಮನೆಗೆ ಬಂದಿಲ್ಲ. ಆತನ ಮೊಬೈಲ್‌ ನಂಬರ್ ಕೇಳಿದಾಗ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದ ಎನ್ನಲಾಗಿದೆ.

Ad Widget

Ad Widget

ತೋಟದ ಕೆಲಸಗಾರರ ಕೊರತೆಯನ್ನು ಬಳಸಿಕೊಂಡು ಇಂತಹ ರೀತಿಯಲ್ಲಿ ಕೃಷಿಕರನ್ನು ವಂಚಿಸುವ ಸಾಧ್ಯತೆಯಿದ್ದು, ಇದೇ ವ್ಯಕ್ತಿ ಇತರ ಕೃಷಿಕರನ್ನೂ ಸಂಪರ್ಕಿಸಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಅಪರಿಚಿತ ವ್ಯಕ್ತಿಗಳ ಮಾತನ್ನು ನಂಬಿ ಹಣ ನೀಡುವ ಮುನ್ನ ಕೃಷಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading