ಸಾಮಾಜಿಕ ಮಾಧ್ಯಮ
King Cobra in bus ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಚಾಲಕನ ಕಾಲಿನಡಿ ಹೆಡೆ ಎತ್ತಿದ್ದ ಕಾಳಿಂಗ ಸರ್ಪ – ಮುಂದೇನಾಯಿತು ? ವಿಡಿಯೋ ನೋಡಿ
ಚಿಕ್ಕಮಗಳೂರು chikmagalur ಸೆ 6 : ಚಲಿಸುತ್ತಿದ್ದ ಬಸ್ ನಲ್ಲಿ ಡ್ರೈವರ್ ಸೀಟ್ ಹತ್ತಿರ ಬ್ರೇಕ್ ಹಾಗೂ ಕ್ಲಚ್ ಬಳಿ ಕಾಳಿಂಗ ಸರ್ಪವೊಂದು (king cobra) ಹೆಡೆ ಎತ್ತಿ ಬುಸುಗಟ್ಟಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ಇಂದು ( ಸೆ 6 ರಂದು) ನಡೆದಿದೆ. ಇದರಿಂದ ಚಾಲಕ ಹಾಗೂ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ (Viral Video )
ಶೃಂಗೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಘಟನೆ ನಡೆದಿದೆ. ಬಸ್ಸು ಕೊಪ್ಪ ತಾಲೂಕಿನ ಜಯಪುರ ಗ್ರಾಮದ ಬಳಿ ತಲುಪುವಾಗ ಬಸ್ಸಿನಲ್ಲಿ ಕಾಳಿಂಗ ಸರ್ಪ ಇರುವ ವಿಚಾರ ಚಾಲಕನ ಅರಿವಿಗೆ ಬಂದಿದೆ.
ಬ್ರೇಕ್ ಒತ್ತಲು ಚಾಲಕ ಇನ್ನೇನು ತನ್ನ ಕಾಲನ್ನು ಬ್ರೇಕ್ ಪ್ಯಾಡ್ ಬಳಿ ತೆಗೆದುಕೊಂಡು ಹೋಗಬೇಕು ಆಗ ಸರ್ಪ ಬುಸುಗುಟ್ಟಿದೆ. ಕೂಡಲೇ ಇದನ್ನು ಗಮನಿಸಿದ ಚಾಲಕ ಬಸ್ಸು ನಿಲ್ಲಿಸಿ, ಡ್ರೈವರ್ ಸೀಟಿನಿಂದ ಎದ್ದು ಹೊರಗೆ ಬಂದಿದ್ದಾರೆ.
ಬಸ್ಸಿನಲ್ಲಿ ಹಾವು ವಿಡಿಯೋ ನೋಡಿ
ಈ ವಿಷಯ ತಿಳಿಯುತ್ತಲೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಭೀತಿಗೆ ಒಳಗಾಗಿದ್ದಾರೆ. ಬಸ್ಸನ್ನು ನಿಲ್ಲಿಸಿ ಕೆಲ ಕಾಲ ಪ್ರಯಾಣಿಕರನ್ನು ಇಳಿಸಲಾಯಿತು. ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞರು ಹಾವನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮ
ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ : ಯುಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ – ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.
ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದರು.
ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ಏನ್ ದೊಡ್ಡ ದೊಡ್ಡ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ನೀವು ಹೀಗೆಲ್ಲಾ ತೋರಿಸಿದರೆ ಜನ ಒಪ್ತಾರಾ ಯೋಚನೆ ಮಾಡಿ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಸರ್ಕಾರ ಸದಾ ಸಿದ್ದ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದರು.
ಸಂಘದ ಬೇಡಿಕೆ
ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗಿದೆ. ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು. ಈ ಬೇಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸಿನೆಮಾ
Kiara Advani War 2 bikini look: ಕಿಯಾರಾ ಬಿಕಿನಿ ಕಿಡಿ – ಎಲ್ಲರ ಕಣ್ಣು ಅಲ್ಲೇ! ‘ವಾರ್ 2’ ಟೀಸರ್‌ನಿಂದ ಇಂಟರ್ನೆಟ್‌ನಲ್ಲಿ ಅಲ್ಲೋಲ ಕಲ್ಲೋಲ

ವಾರ್ 2′ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿಯವರ ಚಿನ್ನದ ಬಿಕಿನಿ ಲುಕ್ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅವರ ಕೇವಲ ಎರಡು ಸೆಕೆಂಡ್‌ಗಳ ಹಾಟ್ ದೃಶ್ಯವು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.
Kiara Advani War 2 bikini look ಬಾಲಿವುಡ್‌ನ ಬ್ಯೂಟಿ ಕ್ವೀನ್ ಕಿಯಾರಾ ಅಡ್ವಾಣಿ ಇದೀಗ ಇಂಟರ್ನೆಟ್‌ನಲ್ಲಿ ಅಕ್ಷರಶಃ ಬೆಂಕಿ ಹಚ್ಚಿದ್ದಾರೆ! “ವಾರ್ 2” ಚಿತ್ರದ ಟೀಸರ್‌ನಲ್ಲಿ ಅವರು ತೊಟ್ಟ ಚಿನ್ನದ ಬಿಕಿನಿ ಇದೀಗ ನ್ಯಾಷನಲ್ ಹಾಟ್ ಟಾಪಿಕ್. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಗಿಫ್ಟ್ ಆಗಿ ರಿಲೀಸ್ ಆದ ಈ ಟೀಸರ್‌ನಲ್ಲಿ ಹೃತಿಕ್ ರೋಷನ್‌ರವರ ಮೈ ಜುಮ್ಮೆನ್ನಿಸೋ ಆಕ್ಷನ್ ಸೀಕ್ವೆನ್ಸ್‌ಗಳಿವೆ, ನಿಜ. ಆದರೆ, ಎಲ್ಲರ ಕಣ್ಣು, ಮನಸ್ಸು ಕದ್ದಿದ್ದು ಮಾತ್ರ ಕಿಯಾರಾ ಅವರ ಹಾಟ್ ಅವತಾರ!
ಬರೀ ಎರಡೇ ಎರಡು ಸೆಕೆಂಡುಗಳ ಕಾಲ ಕಡಲತೀರದಲ್ಲಿ, ಚಿನ್ನದ ಬಿಕಿನಿಯಲ್ಲಿ ಕಂಗೊಳಿಸಿರುವ ಕಿಯಾರಾ, ತಮ್ಮ ಫಿಟ್ ದೇಹ ಮತ್ತು ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ರೆಡ್ಡಿಟ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಕಾಳ್ಗಿಚ್ಚಿನಂತೆ ಹಬ್ಬಿದೆ. ‘ಕಿಯಾರಾ ಎರಡೇ ಸೆಕೆಂಡ್‌ನಲ್ಲಿ ಇಡೀ ಶೋ ಕದ್ದಿದ್ದಾರೆ’ ಎಂದು ಕೆಲವರು ಹೊಗಳಿದರೆ, ‘ಗರ್ಭಿಣಿಯಾಗಿದ್ದರೂ ಕಿಯಾರಾ ದೇವತೆಯಂತೆ ಕಾಣುತ್ತಿದ್ದಾರೆ’ ಎಂದು ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.ಅವರ ಫಿಟ್ನೆಸ್, ಆಕರ್ಷಕ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸದ್ಯ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಿಯಾರಾಗೆ, ‘ವಾರ್ 2’ ಹಲವು ಪ್ರಥಮಗಳ ಚಿತ್ರ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೊದಲ ಸಿನಿಮಾ, ಮೊದಲ ಪಕ್ಕಾ ಆಕ್ಷನ್ ಸಿನಿಮಾ, ಮತ್ತು ಹೌದು, ತೆರೆಮೇಲೆ ಮೊದಲ ಬಿಕಿನಿ ದೃಶ್ಯ ಕೂಡಾ ಇದೇ! ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ 2025ರ ಆಗಸ್ಟ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ.

ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್! ಈ ಹಾಟ್ ಲುಕ್ ಕೆಲವರಲ್ಲಿ ಅನುಮಾನದ ಕಿಡಿಯನ್ನೂ ಹತ್ತಿಸಿದೆ. ಕೆಲವರು ಇದನ್ನು ಸಿಜಿಐ (ಕಂಪ್ಯೂಟರ್ ಜನರೇಟೆಡ್ ಇಮೇಜರಿ) ಇರಬೇಕು “ಇಲ್ಲ, ಬಾಡಿ ಡಬಲ್ ಇರಬಹುದು” ಅಂತೆಲ್ಲಾ ಕೆಲ ನೆಟ್ಟಿಗರು ಗುಸುಗುಸು ಶುರುಮಾಡಿದ್ದಾರೆ. ಆದರೆ, ಕಿಯಾರಾ ಅವರ ತಂಡ, “ಅದೆಲ್ಲಾ ಸುಳ್ಳು, ಕಿಯಾರಾ ಈ ಲುಕ್‌ಗಾಗಿ ಸಖತ್ ಆಗಿ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ” ಅಂತ ಸ್ಪಷ್ಟನೆ ಕೊಟ್ಟಿದೆ.
ಸಾಮಾಜಿಕ ಮಾಧ್ಯಮ
ದೂರು ನೀಡಲು ಬಂದ ಮಹಿಳೆಯ ಜತೆ ಡಿವೈಎಸ್ಪಿ ಬಲವಂತದ ಸೆಕ್ಸ್ ! ಕಛೇರಿಯಲ್ಲೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ವೈರಲ್ – ಗೃಹ ಸಚಿವರ ತವರು ಜಿಲ್ಲೆಯಲ್ಲಿ ಶಾಕಿಂಗ್ ಘಟನೆ

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.
ತುಮಕೂರು : ಜ 2ಡಿವೈಎಸ್ಪಿಯೊಬ್ಬರು ರಾಜ್ಯ ಪೊಲೀಸ್ ಇಲಾಖೆಯ ಮಾನ ಹಾಗೂ ಗೌರವವನ್ನು ಹರಾಜು ಹಾಕಿದ ಘಟನೆಯೊಂದು ಗೃಹ ಸಚಿವ ಡಾ| ಪರಮೇಶ್ವರ್ ಅವರ ತವರು ಜಿಲ್ಲೆಯಿಂದ ವರದಿಯಾಗಿದೆ. ದೂರು ನೀಡಲು ಬಂದ ಸಂತ್ರಸ್ತ ಮಹಿಳೆಯನ್ನು ತುಮಕೂರು ಜಿಲ್ಲೆಯ ಮಧುಗಿರಿಯ ಡಿವೈಎಸ್ಪಿ ತನ್ನ ಕಾಮತೃಷೆ ತೀರಿಸಲು ಬಲವಂತವಾಗಿ ಬಳಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ.ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಘಿದೆ.
ಏನಿದು ಪ್ರಕರಣ ?
ದೂರು ನೀಡಲು ಕಚೇರಿಗೆ ಬಂದ ಮಹಿಳೆಯೊಂದಿಗೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹದ್ದು ಮೀರಿದ ವರ್ತನೆಯ ವಿಡಿಯೊ ವೈರಲ್ ಆಗಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಪಾವಗಡದಿಂದ ಬಂದಿದ್ದ ಮಹಿಳೆಯನ್ನು ಏಕಾಂತ ಕೊಠಡಿಗೆ ಎಳೆದುಕೊಂಡು ಹೋದ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ.
ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.
ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್‌ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ಆರಂಭಿಸಿದ್ದಾರೆ. ಆದರೆ, ಡಿವೈಎಸ್‌ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ.
ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.
‘ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ನಾನೂ ವೀಕ್ಷಿಸಿದ್ದೇನೆ. ಅದರಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸಂತ್ರಸ್ತೆಯನ್ನು ಹುಡುಕುತ್ತಿದ್ದೇವೆ. ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತುಮಕೂರು ಜಿಲ್ಲೆ ಎಸ್‌ಪಿ ಕೆ.ವಿ. ಅಶೋಕ್ ಪ್ರತಿಕ್ರಿಯಿಸಿದ್ದಾರೆ
-
ಮಂಗಳೂರು10 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ14 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ15 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್15 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಬಿಗ್ ನ್ಯೂಸ್8 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಮಂಗಳೂರು9 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ8 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಸಿನೆಮಾ14 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು



















