Connect with us

ಅಪರಾಧ

ಮಂಗಳೂರು : ಪೊಲೀಸರು ಫೈರ್‌ ಮಾಡಿದ ನಟೋರಿಯಸ್ ಕ್ರಿಮಿನಲ್ ಮಿಸ್ಟಾ ಮುಸ್ತಾಕ್ ಕ್ರೈಮ್  ಹಿಸ್ಟ್ರಿ ನೋಡಿದ್ರೆ ದಂಗಾಗುತ್ತಿರ…! ಅಷ್ಟಕ್ಕೂ ಇವತ್ತು ಏನಾಯಿತು? ಕಮೀಷನರ್‌ ಹೇಳಿದ್ದೆನು ?

Published

on

Ad Widget

Ad Widget

Ad Widget

Ad Widget

ಮಂಗಳೂರು (Mangalore ಆ 22) : ರಾಜ್ಯದಲ್ಲಿ ಕ್ರಿಮಿನಲ್‌ ಗಳಿಗೆ ಗುಂಡಿನ ಭಾಷೆಯಲ್ಲಿ (Police Firing) ಬುದ್ದಿ ಹೇಳಲು ಪೊಲೀಸರು ನಿರ್ಧರಿಸಿದಂತಿದೆ. ಎರಡು ಮೂರು ತಿಂಗಳ ಹಿಂದೆ ಮಂಗಳೂರಿನಲ್ಲಿ (Mangalore) ಗುಂಡಿನ ಮೊರೆತ (fire) ಕೇಳಿಸಿತ್ತು.  ಕೆಲ ದಿನಗಳ ಹಿಂದೆಯಷ್ಟೇ ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರು ಫೈರ್‌ ಮಾಡಿದ್ರು. ಇಂದು ಮಂಗಳೂರಿನಲ್ಲಿ ಪೊಲೀಸರ (Police) ಪಿಸ್ತೂಲ್‌ ಸೌಂಡ್‌ ಮಾಡಿದೆ.  

Ad Widget

Ad Widget

Ad Widget

Ad Widget

ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ನಟೋರಿಯಸ್‌ ಕ್ರಿಮಿನಲ್‌ (natorius Criminal) ಒಬ್ಬನನ್ನು ಪೊಲೀಸರು  ಗುಂಡಿಕ್ಕಿ ಬಂಧಿಸಿದ್ದಾರೆ. ಮಂಗಳೂರು ನಗರ ಹೊರವಲಯದ ವಳಚ್ಚಿಲ್ ಎಂಬಲ್ಲಿ ಇಂದು ಗುಂಡಿನ ಸದ್ದು ಕೇಳಿದ ಅಲ್ಲಿನ ನಾಗರೀಕರು ಬೆಚ್ಚಿ ಬಿದ್ದಿದ್ದರು.ಮಿಸ್ಟಾ ಅಲಿಯಾಸ್ ಮುಸ್ತಾಕ್(26) ಗುಂಡೇಟು ತಿಂದ ನಟೋರಿಯಸ್ ಕ್ರಿಮಿನಲ್

Ad Widget

Ad Widget alt="Ad Widget"/>

Ad Widget

 ಅಗಸ್ಟ್ 19ರಂದು ಮಂಗಳೂರು ನಗರ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮಿಸ್ಟಾ ಹಾಗೂ ಆತನ ಗೆಳೆಯ ಆಶಿಕ್ ವಿದ್ಯಾರ್ಥಿ ಯೂಸೂಫ್ ಮಿರ್ಶಾದ್(19) ಮೊಬೈಲ್ ಕಸಿದುಕೊಂಡಿದ್ದಾನೆ‌‌. ಆತನ ಮಾವ ರಮ್ಲಾನ್ ಆಸೀಫ್ ಈ ಬಗ್ಗೆ ವಿಚಾರಿಸಿದ್ದಕ್ಕೆ ಮಿಸ್ಟಾ ಅಲಿಯಾಸ್ ಮುಸ್ತಾಕ್ ವಳಚ್ಚಿಲ್ ಬಳಿಯ ಬದ್ರಿಯಾ ಮದರಸಾ ಬಳಿ ಡ್ರ್ಯಾಗರ್ ನಿಂದ ಚುಚ್ಚಿ ಹಲ್ಲೆಗೈದಿದ್ದನು.  ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇಂದು ಈ ಬಗ್ಗೆ   ಸ್ಥಳ ಮಹಜರು ಮಾಡುತ್ತಿದ್ದ ವೇಳೆ ಆತ ಏಕಾಏಕಿ ಪೊಲೀಸ್ ಮೇಲೆ ದಾಳಿ ನಡೆಸಿದ್ದಾನೆ. ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ (Police Inspector) ವಿನಾಯಕ ಭಾವಿಕಟ್ಟೆಯವರಿಗೆ (Vinayaka bavikatte)  ತರಚಿದ ಗಾಯವಾಗಿದ್ದು, ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಗೆ ಕೈಗೆ ಗಾಯವಾಗಿದೆ‌

Ad Widget

Ad Widget <> Ad Widget

ಆಗ  ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಮತ್ತೊಂದು ಸುತ್ತು ಮಿಸ್ ಫೈರ್ ಆಗಿದ್ದು ಒಂದು ಗುಂಡು ಆತನ ಕಾಲಿಗೆ ಬಿದ್ದಿದೆ‌. ಆರೋಪಿ‌ ಮಿಸ್ಟಾ ಹಾಗೂ ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ವಿರುದ್ದ ಪ್ರಕರಣಗಳ ಸರಮಾಲೆ

ಆರೋಪಿ ಮಿಸ್ಬಾ ವಿರುದ್ಧ ಗಾಂಜಾ ಸಾಗಾಟ,ಗಾಂಜಾ ಸೇವನೆ,ಕೊಲೆಯತ್ನ,ಗಲಭೆ ಸೇರಿದಂತೆ ಹಲವು ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಿಸ್ಬಾ ಮಾಡುತ್ತಿದ್ದು ಪೊಲೀಸ್ ಇಲಾಖೆ ಆರೋಪಿ ಮಿಸ್ಬಾನನ್ನು ಗಡಿಪಾರು ಮಾಡುವ ಯೋಚನೆಯನ್ನೂ ಮಾಡಿತ್ತು..

Ad Widget

Ad Widget

ಸದ್ಯ ಮಿಸ್ಬಾ ಸೇರಿದಂತೆ ದಾಳಿಗೊಳಗಾದ ಪೊಲೀಸ್ ಸಿಬ್ಬಂದಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಮಂಗಳೂರು ನಗರ ಪೊಲೀಸ್ ಕಮೀಷನರ್ (Police commissioner ) ಎನ್ ಶಶಿಕುಮಾರ್ (N Shashi kumar) ಆಸ್ಪತ್ರೆ ಗೆ ಭೇಟಿ‌ ನೀಡಿದ್ದಾರೆ.

ಪೊಲೀಸ್‌ ಕಮೀಷನರ್‌ ಹೇಳಿದ್ದೆನು?

ಈ‌ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಮಿಸ್ಬಾ ಆಲಿಯಾಸ್ ಮುಶ್ತಾಕ್ ಮತ್ತು ಆಶೀಕ್ ಎಂಬ ಆರೋಪಿಗಳು ಅಗಸ್ಟ್  19 ರಂದು ರಮ್ಲಾನ್ ಆಸೀಫ್ ಎಂಬುವವರ ಮೇಲೆ ಏಕಾಏಕಿ ದಾಳಿ ಮಾಡಿದ್ದರು. ಈ ಘಟನೆಯನ್ನು ರಮ್ಲಾನ್ ಆಸೀಫ್ ಗಂಭೀರ ಸ್ವರೂಪದಲ್ಲಿ ದಾಳಿಗೆ ಒಳಗಾಗಿದ್ದಾರೆ.  ರಮ್ಲಾನ್ ಮೇಲೆ ಡ್ಯ್ರಾಗರ್ ನಿಂದ ಕಿವಿ,ಬಾಯಿ,ಎದೆಗೆ ಡ್ರ್ಯಾಗರ್ ನಿಂದ ಗಾಯ ಮಾಡಲಾಗಿದೆ.  ಇದೇ ಪ್ರಕರಣದ ವಾಹನ ಸೀಝ್ ಮಾಡುವ ಸಂಧರ್ಭದಲ್ಲಿ ಏಕಾಏಕಿ ಪೊಲೀಸರ‌ ಮೇಲೆ ಆರೋಪಿ ಮುಶ್ತಾಕ್ ದಾಳಿ ಮಾಡಿದ್ದು, ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಿನಾಯಕ‌ಭಾವಿಕಟ್ಟಿ ಆತ್ಮರಕ್ಷಣೆಗಾಗಿ ಮೂರು ರೌಂಡ್ ಫೈರ್ ಮಾಡಿದ್ದಾರೆ ಎಂದರು.

 ಆರೋಪಿ ಮುಶ್ತಾಕ್ ಮೇಲೆ 307 ಪ್ರಕರಣ, ಕೊಲೆ, ದರೋಡೆ, ಕಳ್ಳತನ ಪ್ರಕರಣಗಳಿವೆ.  ಮಲ್ಪೆ,ಕೋಣಾಜೆ ಪೊಲೀಸ್ ಠಾಣೆಯಲ್ಲೂ ಆರೋಪಿ ಮುಶ್ತಾಕ್ ಮೇಲೆ ಪ್ರಕರಣಗಳಿವೆ.  ಈತ ಅಡ್ಯಾರ್ ಭಾಗದಲ್ಲಿ ಭಯದ ವಾತವರಣ ನಿರ್ಮಾಣ ಮಾಡಿದ್ದು,ಗಾಂಜಾ ಸೇವಿಸಿ ಸಿಕ್ಕ ಸಿಕ್ಕವರ ಮೇಲೆ ಡ್ಯ್ರಾಗರ್ ದಾಳಿ ಮಾಡುತ್ತಿದ್ದ.  ಜನ ಈತನ ಮೇಲೆ ಹೆದರಿಕೆಯಿಂದ ಪೊಲೀಸ್ ದೂರು ನೀಡುತ್ತಿರಲಿಲ್ಲ. ದ.ಕ-ಕೇರಳದ. 40‌ಚೆಕ್ ಫೊಸ್ಟ್ ನಲ್ಲಿ ಈ ಹಿಂದೆ  ಎಂದೂ ಮಾಡದಿರುವ ತಪಾಸಣೆ ನಡೆಸಲಾಗುತ್ತಿದೆ. ಗಾಂಜಾ ಪ್ರಕರಣಗಳ ದಾಖಲಾತಿ ಕೂಡಾ ಹೆಚ್ಚಾಗಿದೆ  ಎಂದು ಅವರು ಮಾಹಿತಿ ನೀಡಿದರು.

Ad Widget
Click to comment

Leave a Reply

ಅಂತರ ರಾಜ್ಯ

Sreejit Ravi-ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು

Published

on

Ad Widget

Ad Widget

Ad Widget

Ad Widget

ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್ ನ್ಯಾಯಾಲಯ ತೀರ್ಪು ನೀಡಿದೆ.

Ad Widget

Ad Widget

Ad Widget

Ad Widget

ತ್ರಿಶೂರ್: ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್ ನ್ಯಾಯಾಲಯ ತೀರ್ಪು ನೀಡಿದೆ.

Ad Widget

Ad Widget alt="Ad Widget"/>

Ad Widget

2022ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್‌ನ ಫಾಸ್ಟ್‌ಟ್ರ್ಯಾಕ್ ವಿಶೇಷ ನ್ಯಾಯಾಲಯ-11ರ ನ್ಯಾಯಾಧೀಶೆ ರಮ್ಯಾ ಮೆನನ್ ಅವರು, ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಹಾಗೂ ಭಾರತೀಯ ದಂಡ ಸಂಹಿತೆ (IPC) 1860ರ ಸೆಕ್ಷನ್ 509ರ ಅಡಿಯಲ್ಲಿ ಶ್ರೀಜಿತ್ ರವಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ.

Ad Widget

Ad Widget <> Ad Widget

2022ರ ಜುಲೈ 4ರಂದು ಇಬ್ಬರು ಅಪ್ರಾಪ್ತ ಬಾಲಕಿಯರು ಶಾಲೆಯಿಂದ ತ್ರಿಶೂರ್‌ನ ಅರನಟ್ಟುಕರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಶ್ರೀಜಿತ್ ರವಿ ಕಾರಿನಲ್ಲಿ ಬಾಲಕಿಯರನ್ನು ಹಿಂಬಾಲಿಸಿ, ಅಪಾರ್ಟ್‌ಮೆಂಟ್‌ನ ಕಾರು ನಿಲುಗಡೆ ಪ್ರದೇಶದಲ್ಲಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು.

ವಿಚಾರಣೆ ವೇಳೆ ಬಾಲಕಿಯರು ನ್ಯಾಯಾಲಯದಲ್ಲಿ ಶ್ರೀಜಿತ್ ರವಿಯನ್ನು ಗುರುತಿಸಿದ್ದರು. ಆದರೆ, ಚಲನಚಿತ್ರ ನಟನಾಗಿದ್ದರೂ ಬಾಲಕಿಯರು ಆತನ ಹೆಸರನ್ನು ಗುರುತಿಸಲು ವಿಫಲರಾಗಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ನಟನ ಪರ ವಕೀಲರು ಗುರುತಿಸುವಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು.

Ad Widget

Ad Widget

ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಬಾಲಕಿಯರು ಆರೋಪಿಯನ್ನು ಗುರುತಿಸಿದ್ದು, ಅವರ ದೈಹಿಕ ಚಹರೆಯ ಬಗ್ಗೆಯೂ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ತಿಳಿಸಿದೆ.

ಪೊಲೀಸ್ ತನಿಖೆಯಲ್ಲಿನ ಕೆಲವು ಲೋಪಗಳ ಬಗ್ಗೆಯೂ ನ್ಯಾಯಾಲಯ ಗಮನ ಸೆಳೆದಿದೆ. ವಿಶೇಷವಾಗಿ, ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸದಿರುವುದನ್ನು ಉಲ್ಲೇಖಿಸಿದೆ. ಆದರೆ, ತನಿಖೆಯಲ್ಲಿನ ಇಂತಹ ಲೋಪಗಳು ಬಾಲಕಿಯರು ನೀಡಿದ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Ad Widget
Continue Reading

ಅಂತರ ರಾಜ್ಯ

FIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್‌ಫ್ಲುಯೆನ್ಸರ್ ವಹಿದಾ ದೂರು – ಎಫ್‌ಐಆರ್ ದಾಖಲು..!

Published

on

Ad Widget

Ad Widget

Ad Widget

Ad Widget

ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಚೆನ್ನೈ: ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಇನ್‌ಫ್ಲುಯೆನ್ಸರ್ ವಹಿದಾ ಅಖ್ದರ್ (Wahidha Akdhar) ನೀಡಿದ ದೂರಿನ ಆಧಾರದಲ್ಲಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮುತ್ತುಕುಮಾರನ್ ಅವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಇದೇ ವೇಳೆ, ತಮ್ಮ ವಿರುದ್ಧ ದೂರು ನೀಡಿರುವ ವಹಿದಾ ವಿರುದ್ಧವೇ ಮುತ್ತುಕುಮಾರನ್ ಪ್ರತಿದೂರು ದಾಖಲಿಸಿದ್ದಾರೆ. ವಹಿದಾ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಏನಿದು ಪ್ರಕರಣ?
‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಇನ್‌ಸ್ಟಾಗ್ರಾಮ್ ಮೂಲಕ ಮುತ್ತುಕುಮಾರನ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು ಎಂದು ವಹಿದಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Ad Widget

Ad Widget

ದೈಹಿಕ ಸಂಪರ್ಕ ಬೆಳೆಸುವ ಮೊದಲು ಮುತ್ತುಕುಮಾರನ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ್ದಾರೆ ಎಂಬುದು ವಹಿದಾ ಅವರ ಆರೋಪವಾಗಿದೆ.

ಈ ಸಂಬಂಧ ವಹಿದಾ ಮೊದಲು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಬಳಿಕ ದೂರನ್ನು ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಿಎನ್‌ಎಸ್ ಸೆಕ್ಷನ್ 69ರ ಅಡಿಯಲ್ಲಿ, ಅತ್ಯಾಚಾರದ ವ್ಯಾಪ್ತಿಗೆ ಬಾರದಿದ್ದರೂ ಮದುವೆಯಾಗುವ ಸುಳ್ಳು ಭರವಸೆ ಸೇರಿದಂತೆ ವಂಚನೆಯ ಮಾರ್ಗಗಳ ಮೂಲಕ ದೈಹಿಕ ಸಂಪರ್ಕ ಬೆಳೆಸುವುದಕ್ಕೆ ಸಂಬಂಧಿಸಿದ ಅಪರಾಧವನ್ನು ಪರಿಗಣಿಸಲಾಗುತ್ತದೆ.

ನವೆಂಬರ್ 9ರಂದು ವಹಿದಾ ಅವರು ಮುತ್ತುಕುಮಾರನ್ ಜೊತೆಗಿನ ಸಂಬಂಧದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡ ಬಳಿಕ ಈ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಜೊತೆಯಾಗಿರುವ ವಿಡಿಯೊವನ್ನು ಪ್ರಕಟಿಸಿದ್ದ ಅವರು, ಮುತ್ತುಕುಮಾರನ್ ನೀಡಿದ್ದ ಭರವಸೆಗಳ ಬಗ್ಗೆ ಪ್ರಶ್ನಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ, “ನೀನು ಹೇಳಿದ್ದೆಲ್ಲವೂ ನಿನಗೆ ಕೇವಲ ತಮಾಷೆಯಾಗಿತ್ತು” ಎಂದು ಬರೆದುಕೊಂಡಿದ್ದರು.

ಇದರ ಬೆನ್ನಲ್ಲೇ ವಹಿದಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಈ ಪ್ರಕರಣದ ಕುರಿತು ಹಿರಿಯ ಗೀತರಚನೆಕಾರ ತಾಮರೈ ಕೂಡ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದು, ಮುತ್ತುಕುಮಾರನ್ ಅವರನ್ನು ಟೀಕಿಸಿ, ಆರೋಪಗಳ ಬಗ್ಗೆ ತಮ್ಮ ಕಡೆಯ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.

ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್-8’ರಲ್ಲಿ ಸ್ಪರ್ಧಿಸುವ ಮೂಲಕ ಮುತ್ತುಕುಮಾರನ್ ಜನಪ್ರಿಯತೆ ಗಳಿಸಿದ್ದರು. 2025ರ ಜನವರಿ 19ರಂದು ನಡೆದ ಫಿನಾಲೆಯಲ್ಲಿ ಅವರು ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದರು.

ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್ 8’ರಲ್ಲಿ ಭಾಗವಹಿಸುವ ಮೂಲಕ ಮುತ್ತುಕುಮಾರನ್ ಅಪಾರ ಜನಪ್ರಿಯತೆ ಗಳಿಸಿದ್ದರು. ಜನವರಿ 19, 2025ರಂದು ನಡೆದ ಫಿನಾಲೆಯಲ್ಲಿ ಅವರು ಶೋನ ವಿಜೇತರಾಗಿ ಹೊರಹೊಮ್ಮಿದ್ದರು.

Ad Widget
Continue Reading

ಅಪರಾಧ

Mangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ

Published

on

Ad Widget

Ad Widget

Ad Widget

Ad Widget

ಮಂಗಳೂರು ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget alt="Ad Widget"/>

Ad Widget

ಮಂಗಳೂರು ಸರ್ಕೀಟ್ ಹೌಸ್ ಮುಂಭಾಗದ ಕದ್ರಿ ಯುದ್ಧ ಸ್ಮಾರಕದ ಬಳಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದ ಟಿ-55 ಯುದ್ಧ ಟ್ಯಾಂಕ್‌ನ್ನು ಸಾರ್ವಜನಿಕರ ವೀಕ್ಷಣೆಗಾಗಿ ಎತ್ತರದ ವೇದಿಕೆಯಲ್ಲಿ ಇರಿಸಲಾಗಿದೆ.

Ad Widget

Ad Widget <> Ad Widget

ರಾತ್ರಿ ವೇಳೆ ಇಬ್ಬರು ಯುವಕರು ಟ್ಯಾಂಕ್ ಮೇಲೆ ಹತ್ತಿ, ಅದರ ಹ್ಯಾಚ್ ತೆರೆದು ಒಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಿಡಿಗೇಡಿತನದ ವರ್ತನೆಯನ್ನು ವಿಡಿಯೋ ಮಾಡಿಕೊಂಡಿರುವ ಯುವಕರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ದೇಶದ ಯುದ್ಧ ಇತಿಹಾಸ ಹಾಗೂ ಸೈನಿಕರ ಶೌರ್ಯ, ತ್ಯಾಗದ ಸಂಕೇತವಾಗಿ ಇರಿಸಲಾಗಿರುವ ಟ್ಯಾಂಕ್ ಬಳಿ ಯುವಕರು ಇಂತಹ ವರ್ತನೆ ತೋರಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಕದ್ರಿ ಪೊಲೀಸ್ ಠಾಣೆಯ ಎದುರಿನಲ್ಲೇ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ, ವಿಡಿಯೋದಲ್ಲಿರುವ ಯುವಕರನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!