ರಾಷ್ಟ್ರೀಯ
Nasa News : ಆಮೇರಿಕಾದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸದ ಗಗನಯಾತ್ರಿ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಭಾರತೀಯ ಮೂಲದ ಮಹಿಳೆ ಯಾರು ಗೊತ್ತೇ ? ಈ ಹೆಮ್ಮೆಯ ಭಾರತೀಯಳ ಬಗ್ಗೆ ನಿಮಗೆಷ್ಟು ಗೊತ್ತು?
ನವದೆಹಲಿ: ಆಮೇರಿಕಾದ ಪ್ರಖ್ಯಾತ ಬಾಹ್ಯಾಕಾಶ ಸಂಶೋಧನ ಸಂಸ್ಥೆ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ತನ್ನ ಗಗನಯಾತ್ರಿ (astronaut) ತರಬೇತಿ ಕಾರ್ಯಕ್ರಮಕ್ಕೆ ಭಾರತೀಯ ಮೂಲದ ಮಹಿಳೆಯನ್ನು ನೋಂದಾಯಿಸಲು ನಿರ್ಧರಿಸಿದೆ. 24 ರ ಹರೆಯದ ಅತಿರಾ ಪ್ರೀತಾ ರಾಣಿ (Athira Preetha Rani) ಅವಕಾಶ ಗಿಟ್ಟಿಸಿದ ಭಾರತೀಯ ಮೂಲದ ಮಹಿಳೆ. ಈಕೆ ಕೇರಳ ಮೂದವರು.
ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಆಮೇರಿಕಾದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆಯ ಕಾರ್ಯಕ್ರಮದಲ್ಲಿ ಸ್ಥಾನ ಪಡೆದ ಹಾಗೂ ಬಾಹ್ಯಾಕಾಶಕ್ಕೆ (spacex) ಪ್ರಯಾಣ ಬೆಳೆಸಲಿರುವ ಮೂರನೇ ಭಾರತೀಯ ಮೂಲದ ಮಹಿಳಾ ಗಗನಯಾತ್ರಿ ಎಂಬ ಕೀರ್ತಿಗೆ ಅತಿರಾ ಪ್ರೀತಾ ರಾಣಿ ಪಾತ್ರರಾಗಲಿದ್ದಾರೆ .
ಅಮೇರಿಕ ಸರ್ಕಾರದ ಅಧೀನಾ ಸಂಸ್ಥೆಯಾಗಿರುವ ನಾಸಾ (NASA) ದೇಶದ ಅಂತರಿಕ್ಷಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಹೊಣೆ ಹೊತ್ತಿದೆ. ಇಂತಹ ಅತ್ಯುನ್ನತ ಸಂಸ್ಥೆ ಭಾರತೀಯ ಮೂಲದ ಯುವತಿಯನ್ನು ತರಬೇತಿ ಕೋರ್ಸ್ಗೆ ಆಯ್ಕೆ ಮಾಡಿದೆ. ತರಭೇತಿ ಮುಗಿದ ಬಳಿಕ ಆಕೆ ನಾಸಾದ ಸಿಬ್ಬಂದಿಯೊಂದಿಗೆ ಬಾಹ್ಯಾಕಾಶಕ್ಕೆ (Space) ತೆರಳಲಿದ್ದಾರೆ.

ನಾಸಾ ಸಂಸ್ಥೆಯು ವಿಶ್ವದಾದ್ಯಂತದ ಅರ್ಹ ಅಭ್ಯರ್ಥಿಗಳಿಂದ ಈ ತರಭೇತಿ ಕೋರ್ಸ್ ಗೆ ಅರ್ಜಿಯನ್ನು ಅಹ್ವಾನಿಸಿತ್ತು. ಅರ್ಜಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಿಂದ ತರಭೇತಿ ಪಡೆಯಲು ಆರ್ಹರಾಗಿರುತ್ತಾರೆ. ಕೆನಡಾದ ಬಾಹ್ಯಾಕಾಶ ಸಂಸ್ಥೆಯ ಸಹಯೋಗದೊಂದಿಗೆ, ನಾಸಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋನಾಟಿಕಲ್ ಸೈನ್ಸ್ನ ಗಗನಯಾತ್ರಿ ತರಬೇತಿ ಕಾರ್ಯಕ್ರಮವನ್ನು ನೀಡುತ್ತದೆ. ಈ ತರಭೇತಿ ಅವಧಿ ಮೂರರಿಂದ ಐದು ವರ್ಷಗಳ ಕಾಲ ಇರಲಿದೆ.
ಮನೆಯಿಂದ ಇಲಿಯನ್ನು ಓಡಿಸುವ ಸುಲಭ ಟ್ರಿಕ್ಸ್ ಇಲ್ಲಿದೆ

ಅತಿರಾ ಪ್ರೀತಾ ರಾಣಿಯವರು ಕೆನಡಾದಲ್ಲಿ ಎಕ್ಸೋ ಜಿಯೋ ಏರೋಸ್ಪೇಸ್ ಕಂಪನಿ ಎಂಬ ಸ್ಟಾರ್ಟ್-ಅಪ್ ಅನ್ನು ತನ್ನ ಪತಿ ಗೋಕುಲ್ ಜತೆ ನಡೆಸುತ್ತಿದ್ದಾರೆ. ರಾಣಿಯವರು ಯಾವಾಗಲೂ ಬಾಹ್ಯಕಾಶದ ಬಗ್ಗೆ ಒಳನೋಟಗಳನ್ನು ಪಡೆಯಲು ಮತ್ತು ಆ ಬಗ್ಗೆ ಜ್ಞಾನವನ್ನು ವಿಸ್ತರಿಸಲು ಉತ್ಸುಕರಾಗಿದ್ದರು , ಹೀಗಾಗಿ ಆಕೆ ಕೇರಳ ಮತ್ತು ಸುತ್ತಮುತ್ತಲಿನ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಕ್ಲಬ್‌ಗಳಲ್ಲಿ ಬಾಹ್ಯಕಾಶದ ಬಗ್ಗೆ ತಿಳಿದುಕೊಳ್ಳಲು ನಿಯಮಿತವಾಗಿ ಹಾಜರಾಗುತ್ತಿದ್ದರು.
ಲಾಕ್ ಅಪ್ ಖ್ಯಾತಿಯ ನಟಿಯ MMS, Social Media ದಲ್ಲಿ ಲೀಕ್ – ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಅಂಜಲಿ

ಅತಿರಾ ಪ್ರೀತಾ ರಾಣಿಯವರು ಕೇರಳ ರಾಜ್ಯದ ರಾಜಧಾನಿ ತಿರುವನಂತಪುರ ಬಳಿಯ ಪೆಯಡ್ (peyad) ಎಂಬ ಪ್ರದೇಶದವರು. ಆಕೆ ಅಲ್ಲಿನ ವಿ ವೇಣು ಹಾಗು ಪ್ರೀತಾ ದಂಪತಿಗಳ ಪುತ್ರಿ. ಆಕೆಯ ಪತಿ ಗೋಕುಲ್ ಕೂಡ ಭಾರತೀಯ ಮೂಲದವರೆ. ರಾಣಿ ರೊಬೊಟಿಕ್ಸ್ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆದಿದ್ದರು. ಈ ವಿದ್ಯಾರ್ಥಿ ವೇತನದ ಮೂಲಕ ಒಟ್ಟಾವಾದ ಅಲ್ಗೊನ್‌ಕ್ವಿನ್ ಕಾಲೇಜಿನಲ್ಲಿ ವಿಮಾನಯಾನದ ಅಧ್ಯಯನ ಮಾಡಿದರು. ಆಕೆ ವಿಮಾನ ಹಾರಿಸುವ ಪರವಾನಗಿ ಹೊಂದಿದ್ದು ಆರ್ಹ ಪೈಲೆಟ್ ಆಗಿದ್ದಾರೆ.
Back Pain: ಬೆನ್ನು ನೋವಿಗೆ ಕಾರಣ – ಸುಲಭ ಪರಿಹಾರೋಪಾಯ ಹಾಗೂ ಮನೆಮದ್ದು | ಇಲ್ಲಿದೆ ಸಂಪೂರ್ಣ ಮಾಹಿತಿ
ಕ್ರೀಡೆ
India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ
ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.
ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.
ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.
ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.
ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.
ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.
ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.
ರಾಷ್ಟ್ರೀಯ
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ಆಹ್ವಾನಿಸಿದ್ದರು..! ನಿವೃತ್ತ ಐಎಎಸ್ ಅಧಿಕಾರಿ ಬಹಿರಂಗ
ತಿರುವನಂತಪುರ: ‘2019ರ ಲೋಕಸಭಾ ಚುನಾವಣೆಯಲ್ಲಿ ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ತಮಗೆ ಆಹ್ವಾನ ನೀಡಿದ್ದರು’ ಎಂದು ಕೇರಳಂನ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಜಿಜಿ ಥಾಮ್ರನ್ ಬಹಿರಂಗಪಡಿಸಿದ್ದಾರೆ.
ಬಿಜೆಪಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಡುವಿನ ಮೈತ್ರಿಯ ಕುರಿತು ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಥಾಮ್ಸ್‌ನ್ ಅವರ ಹೇಳಿಕೆ ಹೊರಬಿದ್ದಿದೆ.
‘ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿಯು ಆರಂಭದಲ್ಲಿ ಪಕ್ಷದ ನೇಮಕಾತಿ ಪ್ರಕ್ರಿಯೆಗೆ ಬಳಸಿಕೊಂಡಿತ್ತು. ನಂತರ ಅವರನ್ನು ‘ಅಂಪೈರ್’ ರೀತಿ ಮಾಡಿ, ಭಾರತದ ಚುನಾವಣೆಗಳನ್ನು `ಫಿಕ್ಸಿಂಗ್’ ಮಾಡುವ ಉಸ್ತುವಾರಿ ವಹಿಸಲಾಯಿತು’ ಎಂದು ಲೋಕಸಭೆಯ ವಿರೋಧ ಪಕ್ಷದ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
2016ರಲ್ಲಿ ವಿಮಾನ ಪ್ರಯಾಣವೊಂದರ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾದೆ. ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಅವರು ನನಗೆ ಸೂಚಿಸಿದರು. ನಾನು ಅದೇ ವರ್ಷ ನಿವೃತ್ತಿಯಾಗಲಿದ್ದೆ. ಕೇಂದ್ರ ಸಚಿವ ಕೂಡ ಆಗಲು ಅವಕಾಶವಿದೆ ಎಂದು ಅವರು ಹೇಳಿದರು. ಆದರೆ, ನನಗೆ ಆಸಕ್ತಿ ಇಲ್ಲದ ಕಾರಣ, ಆ ಆಹ್ವಾನವನ್ನು ನಿರಾಕರಿಸಿದೆ.
ಬಿಜೆಪಿ ಮುಖಂಡರ ಬದಲು ಮುಖ್ಯ ಚುನಾವಣಾ ಆಯುಕ್ತರೇ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದು ಆಶ್ಚರ್ಯ ತಂದಿತ್ತು’ ಎಂದು ಥಾಮ್ರನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಷ್ಟ್ರೀಯ
Crude oil-100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ : ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ ₹23 ನಷ್ಟ..!
ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ಜುಲೈ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದೆ.
ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ಜುಲೈ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಪ್ರಮುಖ ಮಾನದಂಡವಾಗಿರುವ ಬ್ರೆಂಟ್ ಕ್ರೂಡ್ ಬೆಲೆ ಶೇ.2ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 100 ಡಾಲರ್ ಮಟ್ಟ ತಲುಪಿದೆ.
ಕಚ್ಚಾ ತೈಲದ ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಹಾಗೂ ಜೆಟ್ ಇಂಧನದ ಬೆಲೆಗಳ ಮೇಲೂ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಪ್ರಯಾಣ ವೆಚ್ಚ ಹೆಚ್ಚುವುದರ ಜೊತೆಗೆ, ತಾಜಾ ಆಹಾರ ಪದಾರ್ಥಗಳು ಸೇರಿದಂತೆ ತ್ವರಿತವಾಗಿ ಸಾಗಿಸಬೇಕಾದ ಸರಕುಗಳ ಬೆಲೆಯೂ ಏರಿಕೆಯಾಗಬಹುದು. ದೂರದ ಪ್ರದೇಶಗಳಿಗೆ ಸಾಗಿಸುವ ಪೀಠೋಪಕರಣ, ವಿದ್ಯುತ್ ಉಪಕರಣ ಸೇರಿದಂತೆ ವಿವಿಧ ವಸ್ತುಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ ₹23 ನಷ್ಟ!
ಕಚ್ಚಾ ತೈಲದ ಬೆಲೆ 100 ಡಾಲರ್ ದಾಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ ಸುಮಾರು ₹5 ಹಾಗೂ ಡೀಸೆಲ್ ಮಾರಾಟದಲ್ಲಿ ₹23ರಷ್ಟು ನಷ್ಟ ಉಂಟಾಗುತ್ತಿದೆ ಎಂದು ವರದಿಯಾಗಿದೆ.
-
Uncategorized23 hours ago
ಪುತ್ತೂರು : ಪರವಾನಿಗೆ ರಹಿತವಾಗಿ ಹಿಂಸಾತ್ಮಕವಾಗಿ 11 ಗೋವುಗಳ ಸಾಗಾಟ; ಶಿವಪ್ರಸಾದ್ ಬಂಧನ
-
Uncategorized22 hours ago
ಪುತ್ತೂರು : ವಿಚಾರಣೆ ವೇಳೆ ನ್ಯಾಯಾಲಯದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ 2 ವರ್ಷ ಜೈಲು
-
Uncategorized10 hours ago
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ
-
ಸಿನೆಮಾ11 hours agoPrema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
-
ದಕ್ಷಿಣ ಕನ್ನಡ4 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ದಕ್ಷಿಣ ಕನ್ನಡ12 hours ago
ವಿಟ್ಲ :ಬ್ಯಾಂಕ್ ಉದ್ಯೋಗದ ಆಸೆ ತೋರಿಸಿ ಹಣ ವಂಚನೆ: 15 ವರ್ಷಗಳ ಬಳಿಕ ವಾರೆಂಟ್ ಆರೋಪಿ ಬಂಧನ
-
ಅಪರಾಧ11 hours agoMangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
-
ಬಿಗ್ ನ್ಯೂಸ್10 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು


















