ರಾಷ್ಟ್ರೀಯ
Back Pain: ಬೆನ್ನು ನೋವಿಗೆ ಕಾರಣ – ಸುಲಭ ಪರಿಹಾರೋಪಾಯ ಹಾಗೂ ಮನೆಮದ್ದು | ಇಲ್ಲಿದೆ ಸಂಪೂರ್ಣ ಮಾಹಿತಿ
ಲೇಖನ : ಅಧುನಿಕ ಜೀವನ ಶೈಲಿ, ಅಹಾರ ಪದ್ದತಿ, ಆರಾಮ ಖುರ್ಚಿಯಲ್ಲಿ ಕೂತು ಮಾಡುವ ದೇಹ (body) ಶ್ರಮವಿಲ್ಲದ ಉದ್ಯೋಗ, ಅತಿಯಾದ ದ್ವಿಚಕ್ರ ವಾಹನ ಬಳಕೆ, ನಮ್ಮ ಚಟುವಟಿಕೆಗಳು (Activities) ಇತ್ಯಾದಿಗಳಿಂದ ಬೆನ್ನು ನೋವು (back pain) ಎನ್ನುವುದು ಸರ್ವೆ ಸಾಮಾನ್ಯವಾದ ಸಂಗತಿಯಾಗಿದೆ. ಈ ಹಿಂದೆ 50 -60 ವರ್ಷ ದಾಟಿದ ಮುದುಕರಿಗೆ ಮಾತ್ರ ಈ ಖಾಯಿಲೆ ಬರುತಿತ್ತು. ಆದರೇ ಈಗ ಇದು ಮಧ್ಯ ವಯಸ್ಕರಲ್ಲಿ ಸಾಮಾನ್ಯ ಎಂಬಾಂತಾಗಿದೆ. ಅಲ್ಲದೇ, ಬಹುತೇಕ ಯುವಕರು ಕೂಡ ಈ ರೋಗದಿಂದ (Diseases) ಬಳಲುತ್ತಿರುವುದು ಕಾಣ ಬಹುದಾಗಿದೆ. ಪ್ರಸ್ತುತ ಶೇ. 84ರಷ್ಟು ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುತ್ತಾದೆ ಒಂದು ಅಧ್ಯಯನ.
ಬ್ಯಾಕ್ ಪೆಯಿನ್ ಎನ್ನುವುದು ನಿತ್ಯ ಹಿಂಸೆ ಕೊಡುವ ಖಾಯಿಲೆಯಾಗಿದೆ. ಬೆನ್ನಿನ ಮಧ್ಯ ಭಾಗದಲ್ಲಿ (back) ಕಾಣಿಸಿಕೊಳ್ಳುವ ಇದು ಬಳಿಕ ನಿಧಾನಕ್ಕೆ ಇಡಿ ಬೆನ್ನನ್ನೇ ವ್ಯಾಪಿಸುತ್ತದೆ. ಇದು ಒಮ್ಮೆ ಬಂದರೆ ಸುಲಭದಲ್ಲಿ ಬಿಟ್ಟು ಹೋಗುವ ಖಾಯಿಲೆಯಲ್ಲ. ಏನೇ ಚಿಕಿತ್ಸೆ ಪಡಕೊಂಡರು ಸಂಪೂರ್ಣ ಗುಣಮುಖವಾಗುವ (Cure) ಖಾಯಿಲೆಯಂತು ಅಲ್ಲವೇ ಅಲ್ಲ. ಅದು ಒಮ್ಮೆ ನಮ್ಮನ್ನು ಕಾಡಲು ಆರಂಭಿಸಿತ್ತು ಎಂದಾದರೇ ಬಳಿಕ ನಾವು ಅದರ ಜತೆಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಆದರೇ ನಾವು ಒಂದಷ್ಟು ಮುಂಜಾಗರೂಕತೆ ತೆಗೆದುಕೊಳ್ಳುವುದರ ಮೂಲಕ ಹಾಗೂ ಕೆಲ ಮನೆ ಮದ್ದಿನ ಸಹಾಯದಿಂದ ಇದನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯ.
ಬೆನ್ನು ನೋವು ಸಾಮಾನ್ಯವಾದ ಸಮಸ್ಯೆ ಎನಿಸಿದರೂ ಇದನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವಂತಿಲ್ಲ. . ಆರಂಭದಲ್ಲಿ ಸಣ್ಣ ಆರೋಗ್ಯ ಸಮಸ್ಯೆ ಎನಿಸುತ್ತದೆ. ಆದರೇ ಕಾಲಕ್ರಮೇಣ ಇನ್ನಿತರ ಆರೋಗ್ಯ ಸಮಸ್ಯೆಗಳೊಂದಿಗೆ ಇದು ಉಲ್ಭಣಗೊಳ್ಳುತ್ತಾದೆ. ಇದಕ್ಕೆ ನಮ್ಮ ಉದ್ಯೋಗ, ದಿನನಿತ್ಯದ ನಮ್ಮ ಚಟುವಟಿಕೆಗಳನ್ನು ಕುಂಠಿತಗೊಳಿಸುವ ಸಾಮಾರ್ಥ್ಯವಿದೆ. ಇನ್ನು ಬೆನ್ನು ನೋವು ಇಂದೊಂದೆ ಕಾರಣದಿಂದ ಬಂದಿದೆ ಎಂದು ಇದಮಿಥಂ ಆಗಿ ಹೇಳಲು ಸಾಧ್ಯವಿಲ್ಲ. ಹಲವು ಕಾರಣಗಳ ಸಂಗಮದಿಂದ ಈ ಖಾಯಿಲೆ ನಮ್ಮನ್ನು ಕಾಡಲು ಆರಂಭಿಸುತ್ತದೆ. ಬೆನ್ನು ನೋವು ಹೆಚ್ಚಾದರೆ, ನಂತರ ವ್ಯಕ್ತಿಯು ಹಾಸಿಗೆಯಲ್ಲಿಯೇ ವಿಶ್ರಾಂತಿ ಪಡೆಯಬೇಕಾಗುತ್ತದೆ. ಕೆಲಸವನ್ನು ಬಿಟ್ಟು ಬಿಡಬೇಕಾಗುತ್ತದೆ. ನಡೆಯಲು ಸಹ ಕಷ್ಟ ಪಡಬೇಕಾಗಬಹುದು.

ಬೆನ್ನು ನೋವಿಗೆ ಕಾರಣಗಳು (back pain causes)
ದ್ವಿಚಕ್ರ ವಾಹನ ಚಾಲನೆ
ಅತಿಯಾದ ದ್ವಿಚಕ್ರ ವಾಹನ ಚಾಲನೆ ಮಾಡುವುದರಿಂದ ಬೆನ್ನು ನೋವು ಬರುತ್ತದೆ. ಅದರಲ್ಲೂ ಎತ್ತರದ ಸೀಟಿನ ಈಗಿನ ನವೀನ ಮಾದರಿಯ ಬೈಕ್ ಗಳಂತೂ ಬೆನ್ನು ನೋವಿಗೆ ಪ್ರಮುಖ ಕಾರಣಗಳಲ್ಲಿ ಒಂದು. ಇಂತಹವರು ಬೈಕ್ ಚಾಲನೆಯನ್ನು ಕಡಿಮೆ ಮಾಡುವುದೇ ಪರಿಹಾರ.
ಪ್ಯಾಂಟಿನ ಹಿಂಬಂದಿಯ ಕಿಸೆಯಲ್ಲಿ ಪರ್ಸ್
ಇನ್ನು ಪ್ರಮುಖವಾಗಿ ಪ್ಯಾಂಟಿನ ಹಿಂಬಂದಿಯ ಕಿಸೆಯಲ್ಲಿ ಪರ್ಸ್ ಇತ್ಯಾದಿ ದಪ್ಪದ ವಸ್ತುಗಳನ್ನು ಇಟ್ಟುಕೊಂಡು ಚಯರ್ ಅಥಾವ ದ್ವಿ ಚಕ್ರ ವಾಹನದಲ್ಲಿ ಕುಳಿತು ಕೊಳ್ಳುವುದರಿಂದಲೂ ದೇಹದ ಅಸಮತೋಲನದಿಂದಾಗಿ ನ್ನು ನೋವು ಕಾಡಲು ಆರಂಭಿಸುತ್ತದೆ. ಇದರ ಬಗ್ಗೆ ಅತಿಯಾದ ಎಚ್ಚರಿಕೆ ವಹಿಸಬೇಕು. ಪ್ಯಾಂಟ್ ಕಿಸೆಯಲ್ಲಿ ಏನನ್ನೂ ಇಟ್ಟುಕೊಳ್ಳದಿರುವುದನ್ನು ಅಭ್ಯಾಸಮಾಡಿಕೊಳ್ಳಬೇಕು.
Kidney Stone Disease : ಬಾರದಂತೆ ತಡೆಯಲು ಈ ಐದು ಆಹಾರಗಳ ಬಗ್ಗೆ ನಿಗಾ ಇರಲಿ
ದೇಹದ ತೂಕ
ಮನುಷ್ಯನ ದೇಹದ ತೂಕ ಅವನ ಎತ್ತರಕ್ಕೆ ಸರಿಯಾದ ಅನುಪಾತದಲ್ಲಿರಬೇಕು. ದೇಹದ ತೂಕ ಈ ಅನುಪಾತವನ್ನು ಮೀರಿ ಬೆಳೆದರೆ ಆಗಲೂ ನಮ್ಮನ್ನು ಬೆನ್ನು ನೋವು ಕಾಡಬಹುದು. ಇದಕ್ಕಿರುವ ಉಪಾಯ ದೇಹದ ತೂಕವನ್ನು ನಿಯಂತ್ರಿಸುವುದು.
ಹಾಸಿಗೆ
ಇನ್ನು ನೀವು ಮಲಗುವ ಹಾಸಿಗೆಯ ಬಗ್ಗೆಯೂ ಗಮನ ಹರಿಸುವುದು ಉತ್ತಮ . ಅತ್ಯಾಧುನಿಕ ಶೈಲಿಯ ಹಾಸಿಗೆಗಳು ಮಲಗುವಾಗ ಖುಷಿ ಕೊಡುತ್ತದೆ. ಆದರೇ ಕಾಲ ಕ್ರಮೇಣ ಇದುವೇ ನಮಗೆ ಮಾರಕವಾಗಿ ಪರಿಣಮಿಸುತ್ತದೆ.
ಕುಳಿತುಕೊಳ್ಳುವ ಭಂಗಿ
ಚಯರ್ ನಲ್ಲಿ ಅನುಚಿತವಾದ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದಲೂ ಬೆನ್ನು ನೋವು ಭಾದಿಸುತ್ತದೆ. ಅದರಲ್ಲೂ ವರ್ಕ್ ಫ್ರಂ ಹೋಮ್ ಪ್ರಾರಂಭವಾದ ಬಳಿಕವಂತೂ ಇದು ವಿಪರೀತ ಎನಿಸುವಷ್ಟು ಹೆಚ್ಚಾಗಿದೆ. ನೆಲದ ಮೇಲೆ, ಸೋಫಾದ ಮೇಲೆ ಕುಳಿತು ಕೆಲಸ ಮಾಡುವುದು, ಹಾಸಿಗೆ ಅಥವಾ ಮಂಚದ ಮೇಲೆ ಮಲಗಿ ಕೆಲಸ ಮಾಡುವುದು, ಕುರ್ಚಿಯಲ್ಲಿ ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳದೇ ಇರುವುದು ಬೆನ್ನು ನೋವಿನ ಸಮಸ್ಯೆ ಹೆಚ್ಚಲು ಕಾರಣಗಳು. ಅವರು ಈ ಕೆಳಗೆ ನೀಡಿದ ಟಿಪ್ಸ್ ಗಳನ್ನು ಅನುಸರಿಸಿದರೇ ಈ ಭಾಧೆಯಿಂದ ಪಾರಾಗಬಹುದು.
ಬೆನ್ನಿನ ಕೆಳಭಾಗಕ್ಕೆ ಆಧಾರ ನೀಡಿ
ಕುರ್ಚಿಯಲ್ಲಿ, ಹಾಸಿಗೆ ಮೇಲೆ ಅಥವಾ ನೆಲದ ಮೇಲೆ ಕುಳಿತು ಕೆಲಸ ಮಾಡುವ ಮುನ್ನ ಬೆನ್ನಿನ ಕೆಳಭಾಗಕ್ಕೆ ಟವಲ್‌ನಿಂದ ಸುತ್ತಿಕೊಳ್ಳಿ. ಕುರ್ಚಿ ಅಥವಾ ನೆಲ ಯಾವುದೇ ಆಗಿರಲಿ, ಕೆಳಬೆನ್ನಿಗೆ (lower back ) ಆಧಾರ ನೀಡುವಂತೆ ಚೌಕಾಕಾರದ ದಿಂಬು ಇರಿಸಿಕೊಳ್ಳಿ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು ಉಂಟಾಗುವುದನ್ನು ಕಡಿಮೆ ಮಾಡಬಹುದು. ಜೊತೆಗೆ ಆದಷ್ಟು ನೇರವಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಡೆಸ್ಕ್‌ಟಾಪ್ ಸರಿಯಾಗಿ ಸೆಟ್‌ಮಾಡಿ
ಕೆಲಸ ಮಾಡುವ ಮುನ್ನ ಡೆಸ್ಕ್‌ಟಾಪ್ ಅನ್ನು ಸರಿಯಾಗಿ ಸೆಟ್ ಮಾಡಿಕೊಳ್ಳುವುದು ಅವಶ್ಯ. ಇದರಿಂದ ಕತ್ತು ಹಾಗೂ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕಂಪ್ಯೂಟರ್ ಸ್ಕ್ರೀನ್ ನಿಮ್ಮ ತೋಳಿನ ಉದ್ದಕ್ಕೆ ಸಮವಾಗಿರಬೇಕು. ಕಂಪ್ಯೂಟರ್ನ ಮೇಲಿನ ತುದಿಯು ನಿಮ್ಮ ಕಣ್ಣಿನ ದೃಷ್ಟಿಗೆ ಸಮವಾಗಿರಬೇಕು.

ಗಂಟೆಗೊಮ್ಮೆ ಎದ್ದು ತಿರುಗಾಡಿ :
ಕೆಲಸ ಮಾಡುವಾಗ ಆಗಾಗ ಕುಳಿತುಕೊಳ್ಳುವುದು, ಎದ್ದು ನಿಲ್ಲುವುದು ಮಾಡಬೇಕು. ಅದರೊಂದಿಗೆ ಗಂಟೆಗೊಮ್ಮೆ ಎದ್ದು ತಿರುಗಾಡುವುದು ಅಗತ್ಯ. ಒಂದೇ ಭಂಗಿಯಲ್ಲಿ ಬಹಳ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದರಿಂದ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಮನೆಯ ಒಳಗೆ ಅಥವಾ ಟೆರೇಸ್ ಮೇಲೆ 5 ನಿಮಿಷ ತಿರುಗಾಡಿದ ನಂತರ ಮತ್ತೆ ಕೆಲಸ ಆರಂಭಿಸಿ.
ಸರಿಯಾದ ಕ್ರಮದಲ್ಲಿ ಉಸಿರಾಟ
ಸರಿಯಾದ ಕ್ರಮದಲ್ಲಿ ಉಸಿರಾಟ ನಡೆಸುವುದರಿಂದಲೂ ದೇಹಕ್ಕೆ ಆರಾಮ ಸಿಗುತ್ತದೆ. ಅಲ್ಲದೇ ಇದರಿಂದ ಮಧ್ಯ ಹಾಗೂ ಕೆಳ ಬೆನ್ನಿನ ಭಾಗದ ಸ್ನಾಯುಗಳಿಗೂ ಆರಾಮ ಎನ್ನಿಸುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಕೆಲವೊಂದು ವ್ಯಾಯಾಮಗಳು ಕೆಳ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಒದಗಿಸುತ್ತವೆ.
ಕುಳಿತುಕೊಳ್ಳುವ ರೀತಿ ಬದಲಿಸಿ
ನಿಮಗೆ ಪದೇ ಪದೇ ಬೆನ್ನುನೋವು ಕಾಣಿಸಿಕೊಳ್ಳುತ್ತಿದೆ ಎನ್ನಿಸಿದರೆ ನೀವು ಕುಳಿತುಕೊಳ್ಳುವ ರೀತಿ ಸರಿಯಿಲ್ಲ ಎಂದು ಅರ್ಥ. ಆ ಕಾರಣಕ್ಕೆ ಕುಳಿತುಕೊಳ್ಳುವ ರೀತಿಯನ್ನು ಬದಲಿಸಿ ನೋಡಿ. ದೀರ್ಘಕಾಲದವರೆಗೆ ಒಂದೇ ರೀತಿ ಕುಳಿತುಕೊಳ್ಳುವುದು ಹಾಗೂ ಮುಂದಕ್ಕೆ ಬಾಗಿ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಕಾಣಿಸಬಹುದು. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಮೊಣಕಾಲನ್ನು 90 ಡಿಗ್ರಿಗೆ ಬಗ್ಗಿಸಿ ನೆಲಕ್ಕೆ ಪಾದಗಳನ್ನು ಒರಗಿಸಿ ಇರಿಸಿಕೊಳ್ಳಬೇಕು.
ಹಾಸಿಗೆ ಮೇಲೆ ಮಲಗಿ ಕೆಲಸ ಮಾಡುವ ಅಭ್ಯಾಸ ಬೇಡ
ಹಾಸಿಗೆ ಮೇಲೆ ಮಲಗಿಕೊಂಡು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು ನಿಮಗೆ ಆರಾಮ ಎನ್ನಿಸಬಹುದು. ಆದರೆ ಮಲಗಿಕೊಂಡು ಕೆಲಸ ಮಾಡುವುದು ಕುಳಿತುಕೊಂಡು ಕೆಲಸ ಮಾಡುವುದಕ್ಕಿಂತಲೂ ಅಪಾಯಕಾರಿ. ಹೀಗಾಗಿ ಆದಷ್ಟು ಹಾಸಿಗೆ ಮೇಲೆ ಕೆಲಸ ಮಾಡುವುದಕ್ಕೆ ಕಡಿವಾಣ ಹಾಕಿ.

ಮನೆ ಮದ್ದು (Back Pain Relief)
ಐಸ್ ಅಥವಾ ಶಾಖದ ಪ್ಯಾಡ್ ಬಳಕೆ
ಬೆನ್ನು ನೋವು ನಿವಾರಣೆಗೆ ಐಸ್ ಅಥವಾ ಶಾಖದ ಪ್ಯಾಡ್ ಬಳಸುವ ಮೂಲಕ ನೋವನ್ನು ನಿವಾರಿಸಬಹುದು. ಈ ಎರಡು ಕ್ರಮಗಳನ್ನು ಪರ್ಯಾಯವಾಗಿ ಬಳಸುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಜೊತೆಗೆ ನೋವು ನಿವಾರಣೆಯು ಸುಲಭವಾಗಿ ಆಗುವುದು. ಉತ್ತಮ ಫಲಿತಾಂಶ ಪಡೆಯಲು ಈ ಎರಡು ಕ್ರಮಗಳನ್ನು ಕಡಿಮೆ ಎಂದರೂ 25 ನಿಮಿಷಗಳ ಕಾಲ ಅನುಸರಿಸಬೇಕು.
ಎಪ್ಸಮ್ ಉಪ್ಪಿನ ಸ್ನಾನ:
ಬೆಚ್ಚಗಿನ ಎಪ್ಸಮ್ ಉಪ್ಪಿನಲ್ಲಿ ಸ್ನಾನ ಮಾಡುವುದರ ಮೂಲಕವು ಬೆನ್ನು ನೋವನ್ನು ನಿವಾರಿಸಬಹುದು. ಈ ಸ್ನಾನವು ಬೆನ್ನುನೋವು ಹಾಗೂ ಉರಿಯೂತವನ್ನು ಗಣನೀಯವಾಗಿ ಕಡಿಮೆ ಮಾಡುವುದು. ನೀರನ್ನು ಹೆಚ್ಚು ಬಿಸಿಮಾಡದೆ 30 ನಿಮಿಷಗಳ ಕಾಲ ಸ್ನಾನ ಮಾಡಬೇಕು. ಇದಕ್ಕಿಂತ ಹೆಚ್ಚಿನ ಅವಧಿಗೆ ಮಾಡಬಾರದು.
ಧ್ಯಾನ ಮತ್ತು ವ್ಯಾಯಮ
ಸೂಕ್ತ ರೀತಿಯ ವ್ಯಾಯಾಮ ಮಾಡುವುದರ ಮೂಲಕ ನೋವನ್ನು ನಿವಾರಣೆ ಮಾಡಬಹುದು .ಇದಕ್ಕೆ ದೈಹಿಕ ತಜ್ಣ ಸಲಹೆಯನ್ನು ಪಡೆದುಕೊಳ್ಳಿ. ಅತಿಯಾದ ಟೆನ್ಷನ್ ನಿಂದಲೂ ಬೆನ್ನು ನೋವು ಬರುತ್ತದೆ. ಮಾನಸಿಕ ಹಾಗೂ ದೈಹಿಕ ನೋವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವ ಅತ್ಯುತ್ತಮ ವಿಧಾನವೆಂದರೆ ಯೋಗ ಮತ್ತು ಧ್ಯಾನ. ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಈ ಚಿಕಿತ್ಸಕ ವಿಧಾನವನ್ನು ಅನುಸರಿಸುವುದರಿಂದ ಬೆನ್ನುನೋವನ್ನು ಶಮನ ಮಾಡಬಹುದು

ಉತ್ತಮ ಆಹಾರ
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಅದಕ್ಕಾಗಿ ಹಸಿರು ಸೊಪ್ಪುಗಳು, ಚೀಸ್, ಮೊಸರು, ಮೊಟ್ಟೆ, ಕಿತ್ತಳೆ, ಸೋಯಾ ಹಾಲು, ಮೀನು ಸೇರಿದಂತೆ ಇನ್ನಿತರ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ಶುಂಠಿ ಸೇವಿಸಿ
ಶುಂಠಿಯು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ನೈಸರ್ಗಿಕ ಔಷಧೀಯ ಮೂಲ. ಇದನ್ನು ಗಣನೀಯವಾಗಿ ಬಳಕೆ ಮಾಡುವುದರಿಂದ ಬೆನ್ನು ನೋವನ್ನು ನಿವಾರಿಸಬಹುದು. ಶುಂಠಿಯ ಚೂರನ್ನು ನೀರಿಗೆ ಸೇರಿಸಿ, 30 ನಿಮಿಷಗಳ ಕಾಲ ಕುದಿಸಿ. ಬಳಿಕ ಸೋಸಿ ತಣಿಯಲು ಬಿಡಿ. ನಂತರ ಸೇವಿಸುವುದು ಸೂಕ್ತ.
ಈ ಎಲ್ಲ ಮನೆ ಮದ್ದಿನ ಬಳಿಕವೂ ನೋವು ಉಲ್ಭಣಗೊಳ್ಳುತ್ತಿದೆ ಅಥವಾ ಕಡಿಮೆಯಾಗುತ್ತಿಲ್ಲ ಎಂದಾಗ ವೈದ್ಯರಲ್ಲಿ ಸೂಕ್ತ ತಪಾಸಣೆ ಮಾಡಿಸುವುದು ಅಥವಾ ಚಿಕಿತ್ಸೆ ಪಡೆದುಕೊಳ್ಳುವುದನ್ನು ಮರೆಯಬಾರದು
ಕ್ರೀಡೆ
India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ
ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.
ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.
ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.
ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.
ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.
ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.
ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.
ರಾಷ್ಟ್ರೀಯ
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ಆಹ್ವಾನಿಸಿದ್ದರು..! ನಿವೃತ್ತ ಐಎಎಸ್ ಅಧಿಕಾರಿ ಬಹಿರಂಗ
ತಿರುವನಂತಪುರ: ‘2019ರ ಲೋಕಸಭಾ ಚುನಾವಣೆಯಲ್ಲಿ ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ತಮಗೆ ಆಹ್ವಾನ ನೀಡಿದ್ದರು’ ಎಂದು ಕೇರಳಂನ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಜಿಜಿ ಥಾಮ್ರನ್ ಬಹಿರಂಗಪಡಿಸಿದ್ದಾರೆ.
ಬಿಜೆಪಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಡುವಿನ ಮೈತ್ರಿಯ ಕುರಿತು ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಥಾಮ್ಸ್‌ನ್ ಅವರ ಹೇಳಿಕೆ ಹೊರಬಿದ್ದಿದೆ.
‘ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿಯು ಆರಂಭದಲ್ಲಿ ಪಕ್ಷದ ನೇಮಕಾತಿ ಪ್ರಕ್ರಿಯೆಗೆ ಬಳಸಿಕೊಂಡಿತ್ತು. ನಂತರ ಅವರನ್ನು ‘ಅಂಪೈರ್’ ರೀತಿ ಮಾಡಿ, ಭಾರತದ ಚುನಾವಣೆಗಳನ್ನು `ಫಿಕ್ಸಿಂಗ್’ ಮಾಡುವ ಉಸ್ತುವಾರಿ ವಹಿಸಲಾಯಿತು’ ಎಂದು ಲೋಕಸಭೆಯ ವಿರೋಧ ಪಕ್ಷದ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
2016ರಲ್ಲಿ ವಿಮಾನ ಪ್ರಯಾಣವೊಂದರ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾದೆ. ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಅವರು ನನಗೆ ಸೂಚಿಸಿದರು. ನಾನು ಅದೇ ವರ್ಷ ನಿವೃತ್ತಿಯಾಗಲಿದ್ದೆ. ಕೇಂದ್ರ ಸಚಿವ ಕೂಡ ಆಗಲು ಅವಕಾಶವಿದೆ ಎಂದು ಅವರು ಹೇಳಿದರು. ಆದರೆ, ನನಗೆ ಆಸಕ್ತಿ ಇಲ್ಲದ ಕಾರಣ, ಆ ಆಹ್ವಾನವನ್ನು ನಿರಾಕರಿಸಿದೆ.
ಬಿಜೆಪಿ ಮುಖಂಡರ ಬದಲು ಮುಖ್ಯ ಚುನಾವಣಾ ಆಯುಕ್ತರೇ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದು ಆಶ್ಚರ್ಯ ತಂದಿತ್ತು’ ಎಂದು ಥಾಮ್ರನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಷ್ಟ್ರೀಯ
Crude oil-100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ : ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ ₹23 ನಷ್ಟ..!
ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ಜುಲೈ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದೆ.
ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ಜುಲೈ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಪ್ರಮುಖ ಮಾನದಂಡವಾಗಿರುವ ಬ್ರೆಂಟ್ ಕ್ರೂಡ್ ಬೆಲೆ ಶೇ.2ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 100 ಡಾಲರ್ ಮಟ್ಟ ತಲುಪಿದೆ.
ಕಚ್ಚಾ ತೈಲದ ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಹಾಗೂ ಜೆಟ್ ಇಂಧನದ ಬೆಲೆಗಳ ಮೇಲೂ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಪ್ರಯಾಣ ವೆಚ್ಚ ಹೆಚ್ಚುವುದರ ಜೊತೆಗೆ, ತಾಜಾ ಆಹಾರ ಪದಾರ್ಥಗಳು ಸೇರಿದಂತೆ ತ್ವರಿತವಾಗಿ ಸಾಗಿಸಬೇಕಾದ ಸರಕುಗಳ ಬೆಲೆಯೂ ಏರಿಕೆಯಾಗಬಹುದು. ದೂರದ ಪ್ರದೇಶಗಳಿಗೆ ಸಾಗಿಸುವ ಪೀಠೋಪಕರಣ, ವಿದ್ಯುತ್ ಉಪಕರಣ ಸೇರಿದಂತೆ ವಿವಿಧ ವಸ್ತುಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ ₹23 ನಷ್ಟ!
ಕಚ್ಚಾ ತೈಲದ ಬೆಲೆ 100 ಡಾಲರ್ ದಾಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ ಸುಮಾರು ₹5 ಹಾಗೂ ಡೀಸೆಲ್ ಮಾರಾಟದಲ್ಲಿ ₹23ರಷ್ಟು ನಷ್ಟ ಉಂಟಾಗುತ್ತಿದೆ ಎಂದು ವರದಿಯಾಗಿದೆ.
-
ಪುತ್ತೂರು20 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್23 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು23 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್22 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ23 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ಅಪರಾಧ21 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ22 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
-
ಶಿಕ್ಷಣ22 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ


















