Connect with us

Uncategorized

ಪ್ರವೀಣ್ ಹತ್ಯೆ ತನಿಖೆಯ ಸುತ್ತ ಒಂದು ಸುತ್ತು – ತನಿಖೆ ಯಾಕೀಷ್ಟು ಜಟಿಲ ? NIA ಬೆಳ್ಳಾರೆ ಗೆ ಈಗಾಗಲೇ ಬಂದಿರುವುದು ಹೌದಾ ? ಸಿಸಿಟಿವಿ ಕೊಟ್ಟ ಸುಳಿವೇನು ? ದೊಡ್ಡ ತಲೆಗಳ ಪಾತ್ರವಿದೆಯೇ? ಏನಿದು ಕೇರಳ ನೊಂದಣಿ ಬೈಕ್ ನ ಮರ್ಮ…!

Published

on



Ad Widget

Ad Widget

Ad Widget

Ad Widget

ಮಂಗಳೂರು : ರಾಜ್ಯದ್ಯಾಂತ ಸಂಚಲನ ಸೃಷ್ಟಿಸಿರುವ ದ.ಕ. ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಬೆಳ್ಳಾರೆ ನಿವಾಸಿ  ಪ್ರವೀಣ್  ನೆಟ್ಟಾರ್‌ ಹತ್ಯೆ ನಡೆದು 9 ದಿನ ಕಳೆದಿದ್ದು  ಪ್ರಕರಣ ಇನ್ನು ಕೂಡ  ರಾಜ್ಯ ಪೊಲೀಸರಿಗೆ  ಬಿಡಿಸಲಾಗದ ಒಗಟಾಗಿಯೆ ಉಳಿದಿದೆ. ಪ್ರಕರಣ ಸಂಬಂಧ 4 ಆರೋಪಿಗಳ ಬಂಧನವಾಗಿದ್ದರೂ  ಹತ್ಯೆಯಲ್ಲಿ ನೇರ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂಬ ಅಸಮಾಧನದ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Ad Widget

Ad Widget

Ad Widget

Ad Widget

ಜು.26ರಂದು ರಾತ್ರಿ 8 ಗಂಟೆ ಸುಮಾರಿಗೆ  ಬೆಳ್ಳಾರೆ ಪೇಟೆಯ ಮಾಸ್ತಿ ಕಟ್ಟೆಯಲ್ಲಿ ಪ್ರವೀಣ್ ಮೇಲೆ ಬೈಕ್‌ ನಲ್ಲಿ ಬಂದ ದುಷ್ಕರ್ಮಿಗಳು  ಮಾರಕಾಯುದ್ದಗಳಿಂದ ದಾಳಿ ನಡೆಸಿದ್ದರು. ಕೆಲ ಗಂಟೆಗಳ ಬಳಿಕ ಆಸ್ಪತ್ರೆಯಲ್ಲಿ ಪ್ರವೀಣ್‌ ಅಸುನೀಗಿದರು . ಅದಾದ ಬಳಿಕ ಈ ಹತ್ಯಾ ಪ್ರಕರಣದ ತನಿಖೆಯನ್ನು ದ.ಕ . ಜಿಲ್ಲಾ ಎಸ್ಪಿ ಋಷಿಕೇಷ್‌ ಸೋನಾವಣೆ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ಗಾನಾ ಪಿ ಕುಮಾರ್‌ ಅವರ ನೇತ್ರತ್ವದಲ್ಲಿ ಬೆಳ್ಳಾರೆ ಪೊಲೀಸರು ಕೈಗೆತ್ತಿ ಕೊಂಡಿದ್ದರು. ಹತ್ಯೆ ಘಟಿಸಿದ  ಒಂದು ದಿನದ ಬಳಿಕ ತನಿಖೆಗೆ ಮಾರ್ಗದರ್ಶನ ಮಾಡಲು ಸ್ವತ: ಎಡಿಜಿಪಿ ಅಲೋಕ್‌ ಕುಮಾರ್‌ ಬೆಂಗಳೂರಿನಿಂದ  ಬೆಳ್ಳಾರೆಗೆ ಬಂದಿಳಿದಿದ್ದರು. ಪಶ್ಚಿಮ ವಲಯ ಐಜಿಪಿ  ದೇವಜ್ಯೋತಿ ರೇ ಕೂಡ ತನಿಖೆಗೆ ಸಾಥ್‌ ನೀಡಿದ್ದರು

Ad Widget

Ad Widget

Ad Widget alt="Ad Widget"/>

Ad Widget

ಇದಾದ ಬಳಿಕ ಪ್ರವೀಣ್‌ ಮನೆಗೆ ಸಿಎಂ ಭೇಟಿಯ ಮುನ್ನಾದಿನ  ಸವಣೂರಿನ ಝಾಕೀರ್‌  ಹಾಗೂ ಬೆಳ್ಳಾರೆ ನಿವಾಸಿ ಶಫೀಕ್‌ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಒಂದು ದಿನದ ಬಳಿಕ ಅವರನ್ನು ಪೊಲೀಸರು  ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

Ad Widget

Ad Widget <> Ad Widget

ಪ್ರವೀಣ್‌ ಮನೆ ಭೇಟಿಯ ಮರುದಿನ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಹತ್ಯೆ ಪ್ರಕರಣದ  ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸಲಾಗುವುದು. ಅದಕ್ಕೆ ಬೇಕಾದ ಅಗತ್ಯ ದಾಖಲೆ ಪತ್ರಗಳನ್ನು ತಕ್ಷಣ ವರ್ಗಾಯಿಸಲಾಗುವುದು ಎಂದು ಘೋಷಿಸಿದ್ದರು. ಇದು ಹತ್ಯೆಯಾದ ಪ್ರವೀಣ್‌ ಕುಟುಂಬದ ಬೇಡಿಕೆಯೂ ಅಗಿತ್ತು. ಅಲ್ಲದೆ ಬಿಜೆಪಿ ಕಾರ್ಯಕರ್ತರು ಕೂಡ ಇದಕ್ಕಾಗಿ ಒತ್ತಡ ಹಾಕಿದ್ದರು.  



Ad Widget

ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Ad Widget

Ad Widget

ಸಿಎಂ ಪುತ್ತೂರು  ಭೇಟಿಯ ಬಳಿಕ ಮತ್ತೆ  ಬಂಧಿತ ಇಬ್ಬರು ಅರೋಪಿಗಳನ್ನು ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು  5 ದಿನಗಳ ಕಾಲ  ತಮ್ಮ ಕಸ್ಟಡಿಗೆ   ಪಡೆದಿದ್ದರು. ಅವರಿಬ್ಬರನ್ನು ಗುಪ್ತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗಿತ್ತು.  ಅವರು ನೀಡಿದ ಮಾಹಿತಿಯನ್ನು ಆಧರಿಸಿ ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸಂಬಂಧಿಕರ ಹೊಟೇಲ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ  ಸದ್ದಾಂ ಹಾಗೂ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಹೊಂದಿದ್ದ ಹಾರೀಸ್‌ ಎಂಬವರನ್ನು ಬಂಧಿಸಿದ್ದರು.  ಇದೀಗ ಈ ನಾಲ್ಕು ಆರೋಪಿಗಳ ಪೈಕಿ ಶಫೀಕ್‌ ಹೊರತುಪಡಿಸಿ ಉಳಿದ ಮೂವರಿಗೆ ಸುಳ್ಯ ನ್ಯಾಯಾಲಯವು  ಅ .2 ರಂದು ನ್ಯಾಯಾಂಗ ಬಂಧನ ವಿಧಿಸಿದೆ. ಶಫೀಕ್‌ನ್ ಪೊಲೀಸ್‌ ಕಸ್ಟಡಿಯನ್ನು ಅ.7 ರವರೆಗೆ ವಿಸ್ತರಿಸಲಾಗಿದೆ.

ಹತ್ತಾರು ಪ್ರಶ್ನೆಗಳು

 ಪ್ರವೀಣ್‌ ಹತ್ಯೆಯಲ್ಲಿ ಈ ನಾಲ್ವರ ಪಾತ್ರದ ಬಗ್ಗೆ ಪೊಲೀಸ್‌ ಇಲಾಖೆ ತುಟ್ಟಿ ಬಿಚ್ಚಿಲ್ಲ. ಈ ಆರೋಪಿಗಳು ಹತ್ಯೆಯನ್ನು ಸಂಘಟಿಸಿದವರೇ? ಹಣಕಾಸಿನ ನೆರವು ನೀಡಿದವರೇ?  ಹತ್ಯೆಯಲ್ಲಿ ನೇರ ಭಾಗಿಯಾದವರೇ?  ಹಂತಕರಿಗೆ ಟಾರ್ಗೆಟ್‌ ಅನ್ನು ತೋರಿಸಿದವರೇ ? ಅಥಾವ ಹತ್ಯೆಯ ಬಳಿಕ ತಪ್ಪಿಸಿಕೊಳ್ಳಲು ನೆರವಾದವರೇ? ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸ್‌ ಇಲಾಖೆ ಇವರೆಗೆ ಬಹಿರಂಗ ಪಡಿಸಿಲ್ಲ. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಏನೇನು ಗೊತ್ತಿಲ್ಲ ಎನ್ನಲಾಗುತ್ತಿದೆ

ಮೂಲಗಳ ಪ್ರಕಾರ  ಕೃತ್ಯ ನಡೆದು 10 ದಿನ ಕಳೆದರೂ ತನಿಖೆಯಲ್ಲಿ ಪೊಲೀಸರಿಗೆ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಒಂದು ಮೂಲದ ಪ್ರಕಾರ ಕೃತ್ಯ ಎಸಗಿದ ದುಷ್ಕರ್ಮಿಗಳ ಗುರುತು ಪತ್ತೆಯಾಗಿದ್ದು , ಅದರೇ ಅವರು ಎಲ್ಲೋ ಹೋಗಿ  ತಲೆ ಮರೆಸಿಕೊಂಡಿರುವ ಹಿನ್ನಲೆಯಲ್ಲಿ ಪೊಲೀಸರಿಗೆ ಬಂಧಿಸಿಲ್ಲ ಸಾಧ್ಯವಾಗಿಲ್ಲ . ಆದರೇ ಇನ್ನು ಹಲವು ಮೂಲಗಳ ಪ್ರಕಾರ ಕೃತ್ಯದಲ್ಲಿ ನೇರವಾಗಿ  ಭಾಗಿಯಾದ ಆರೋಪಿಗಳನ್ನು ಗುರುತಿಸಲು ಇನ್ನು ಪೊಲೀಸರಿಗೆ ಸಾಧ್ಯವಾಗಿಲ್ಲ.  ಇದಕ್ಕೆ ಪುಷ್ಟಿ ನೀಡುವಂತೆ ಕೃತ್ಯಕ್ಕೆ ಬಳಸಿದ ಬೈಕ್‌, ಮಂಕಿ ಕ್ಯಾಪ್‌ , ಮಾರಕಾಯುದ್ದಗಳು , ಇವರನ್ನು ಅಡಗಿಸಿಟ್ಟವರು, ಅಡಗಿದ ಸ್ಥಳ ಯಾವುದು ಪತ್ತೆಯಾಗಿಲ್ಲ  

ದೊಡ್ಡ ತಲೆಗಳು ಭಾಗಿ ?

ದೊಡ್ಡ ದೊಡ್ಡ ಕೈಗಳು ಭಾಗಿಯಾಗಿ ಅರ್ಗನೈಸಡ್‌ ರೀತಿಯಲ್ಲಿ ಈ ಹತ್ಯೆಯನ್ನು ನಡೆಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಜ್ಯದ ಸಿಎಂ ಕೂಡ ಇದೊಂದು ಅರ್ಗನೈಸ್‌ ಡು ಕ್ರೈಮ್‌ ಎಂದಿದ್ದರು.  ಸಂಘಟನೆ ಹಾಗು ಪಕ್ಷವೊಂದರಲ್ಲಿ  ಗುರುತಿಸಿಕೊಂಡಿರುವ ಬೆಳ್ಳಾರೆಯ ದೊಡ್ಡ ತಲೆಗಳು ಈ ಹತ್ಯೆಗೆ ಹೊರ ರಾಜ್ಯದವರಿಗೆ  ಸುಫಾರಿ ನೀಡಿರಬಹುದು. ಆದರೇ ಆ ದೊಡ್ಡ ತಲೆಗಳನ್ನು ಟಚ್‌ ಮಾಡಲು ಪೊಲೀಸರು ಹೋಗಿಲ್ಲ ಎಂದು ಸ್ಥಳೀಯವಾಗಿ ಜನರು ಮಾತನಾಡುತ್ತಿದ್ದಾರೆ.

ಬೆಳ್ಳಾರೆಯಲ್ಲಿ ಕೋಮು ದ್ರವೀಕರಣದಲ್ಲಿ ಸಕ್ರಿಯವಾಗಿದ್ದ ಒಂದಿಬ್ಬರಿಗೆ ಹೊರ ರಾಜ್ಯಗಳ  ಸಂಪರ್ಕವಿದೆ. ಅವರು ಈ ಕೊಲೆಯ ಬಳಿಕ ಸ್ಥಳೀಯವಾಗಿ ಕಾಣಿಸುತ್ತಿಲ್ಲ. ಇವರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆಯೇ ಅಥಾವ ಕೇವಲ ಕಾಳಾಳುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಷ್ಟೇ ಸಿಮೀತವಾಗಿದ್ದಾರೆಯೇ ಎಂಬ ಬಗ್ಗೆಯೂ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿವೆ

ಸುಳಿವು ನೀಡದ ಸಿಸಿಟಿವಿ

ರಾತ್ರಿ ಹೊತ್ತು ಈ ಹತ್ಯೆ ನಡೆದಿದುದ್ದರಿಂದ ಸಿಸಿಟಿವಿಗಳಿಂದಲೂ ಪೊಲೀಸರಿಗೆ ಯಾವುದೇ ಪ್ರಯೋಜನವಾಗಿಲ್ಲ . ಹತ್ಯೆ ನಡೆದ ಸ್ಥಳಕ್ಕಿಂತ ತುಸು ದೂರದಲ್ಲಿರುವ ಪೆಟ್ರೋಲ್‌ ಪಂಪ್‌ ವೊಂದರ ಸಿಸಿಟಿವಿಯಲ್ಲಿ ಹತ್ಯೆಗಿಂತ ಕೆಲ ಸಮಯದ ಹಿಂದೆ ಬೈಕ್‌  ಹಾಗೂ ಸವಾರ ಅಲ್ಲಿ ತುಸು ಹೊತ್ತು ಅಸಹಜವಾಗಿ ನಿಂತಿರುವುದು ಕಾಣಿಸುತ್ತದೆ. ತುಂಬು ಕತ್ತಲಿನಲ್ಲಿ ಚಿತ್ರಿಕರಣಗೊಂಡ  ಆ ಸಿಸಿಟಿವಿಯಲ್ಲಿ ಬೈಕ್‌ ಆಗಲಿ ಅಥಾವ ಅದರಲ್ಲಿರುವ ಸವಾರನಾಗಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ . ಇದೇ ಬೈಕಿನಲ್ಲಿ ತೆರಳಿದವರೇ ಕೃತ್ಯ ಎಸಗಿದರೇ ಎನ್ನುವುದು ಖಚಿತಗೊಂಡಿಲ್ಲ

ಆರೋಪಿಗಳು ಕೃತ್ಯ ಎಸಗಿ ಕೇರಳಕ್ಕೆ ಓಡಿ ಹೋಗಿರಬಹುದು ಎಂಬ ಶಂಕೆ ಇದೆಯಾದರು ಇದನ್ನು ಪುಷ್ಟಿಕರಿಸುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿಲ್ಲ. ಈ ಮಾರ್ಗಗಳಲ್ಲಿ ಇರುವ ಬಹುತೇಕ ಚೆಕ್‌ ಪೋಸ್ಟ್‌ ಗಳಲ್ಲಿ ಇರುವ ಸಿಸಿಟಿವಿಗಳು ಮಾರ್ಗಕ್ಕೆ ಮುಖ ಮಾಡಿ ಇಲ್ಲ . ಮಾಮೂಲಿ ವಸೂಲಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಿಸಿಟಿವಿ ಮುಖವನ್ನು ಬೇರೆಡೆ ಉದ್ದೇಶಪೂರ್ವಕವಾಗಿ ತಿರುಗಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮಸೂದ್‌ ಹತ್ಯೆಯ ಬಳಿಕ ದೊಡ್ಡ ಪೊಳಿಸರು ನಿಯೋಜನೆಗೊಂಡಿದ್ದರು. ಜಿಲ್ಲೆಯಲ್ಲೂ ಪೊಲೀಸರನ್ನು ಸನ್ನದ ಸ್ಥಿತಿಯಲ್ಲಿಡಲಾಗಿತ್ತು. ಇದರ ಮಧ್ಯೆ ಅವರು ಕೇರಳಕ್ಕೆ ಓಡಿ ಹೋಗಿದ್ದು ಹೇಗೆ ? ಅದು ಸಹ ಹಲ್ಲೆ ನಡೆದ ಎರಡೇ ನಿಮಿಷದಲ್ಲಿ ಪೊಲೀಸರಿಗೆ ಕೃತ್ಯದ ಮಾಹಿತಿ ಸಿಕ್ಕಿದೆ . ಆ ಕೂಡಲೇ ಜಿಲ್ಲೆಯ ಪೊಲೀಸರನ್ನು ಅಲರ್ಟ್‌ ಮಾಡುತ್ತಿದ್ದರೇ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದರೇ? ಇದು ಉತ್ತರ ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆಗಳು  

ಕೇರಳ ನೊಂದಣಿಯ ನೇಮ್‌ ಪ್ಲೇಟ್‌ ಎಂಬ ಮರ್ಮ

ಬೈಕ್‌ ನಲ್ಲಿ ಕೃತ್ಯ ಎಸಗಿ ಬಳಿಕ ಬೈಕ್‌ ಅನ್ನು ತ್ಯಜಿಸಿ ಬೇರೆ ವಾಹನದಲ್ಲಿ ಪರಾರಿಯಾಗಿರಬಹುದು ಎಂಬ ಅನುಮಾನವನ್ನು ಹಲವರು ವ್ಯಕ್ತ ಪಡಿಸಿದರೂ ಈವರೆಗೆ ಕೃತ್ಯಕ್ಕೆ ಬಳಸಿದ ಬೈಕ್‌ ಪತ್ತೆಯಾಗಿಲ್ಲ .  ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳೀಯರ ಪ್ರಕಾರ ಹೀರೊ ಹೊಂಡಾ ಸ್ಪ್ಲೆಂಡರ್‌ ಬೈಕಿನಲ್ಲಿ ಬಂದ ಆರೋಪಿಗಳು ಮಂಕಿ ಕ್ಯಾಪ್‌ ಧರಿಸಿ ಬಂದು  ಕೃತ್ಯ ಎಸಗಿದ್ದಾರೆ.  ಆದರೇ ಅವರು ಮಂಕಿ ಕ್ಯಾಪ್‌ ಧರಿಸಿದ್ದೆಲ್ಲಿ?  ತೆಗೆದದ್ದೆಲ್ಲಿ ? ಇದನ್ನು ಯಾರು ಗಮನಿಸಿಲ್ಲವೇ ? ಓಡಿ ಹೋಗುವಾಗ  ಯಾರ ಕೈಯಿಂದಲೂ ಮಂಕಿಕ್ಯಾಪ್‌  ಉರುಳಿ ಬಿದ್ದಿಲ್ಲವೇ? ಅಥಾವ ಮಂಕಿ ಕ್ಯಾಪ್‌ ಬದಲು ಮಾಸ್ಕ್‌ ಧರಿಸಿದ್ದರೇ?  ಎಂಬ ಹತ್ತಾರು ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡುತ್ತಿದೆ.  ಇನ್ನು ಕೆಲವರ ಪ್ರಕಾರ ಈ ಸ್ಪ್ಲೆಂಡರ್‌ ಬೈಕನ್ನು ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ನೋಡಿದವರಿದ್ದಾರೆ. ಒಂದು ವೇಳೆ ಇದು ನಿಜವಾಗಿದ್ದರೇ ಜಿಲ್ಲೆಯಲ್ಲಿ ಬಳಸಲ್ಪಡುತ್ತಿದ್ದ ಬೈಕಿಗೆ ಕೇರಳ ನೊಂದಣಿಯ ನೇಮ್‌ ಪ್ಲೇಟ್‌ ಅಂಟಿಸಿ ಕೃತ್ಯ ಎಸಗಲಾಯಿತೇ ಎಂಬ ಶಂಕೆಗಳನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ

NIA ತನಿಖೆ ಆರಂಭಿಸಿದ್ದು ಹೌದೇ ?

ಇನ್ನು ಸಿಎಂ ಎನ್‌ಐಎ ತನಿಖೆ ಘೋಷಿಸಿದರೂ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಕೇಂದ್ರ ಗೃಹ ಇಲಾಖೆಗೆ ಸಲ್ಲಿಕೆಯಾಗಿಲ್ಲ. ಗೃಹ ಇಲಾಖೆಯ ಒಪ್ಪಿಗೆ ಸಿಕ್ಕಿದ ಬಳಿಕ ಅದರ ನಿರ್ದೇಶನದ ಮೇರೆಗೆ ಎನ್‌ ಐಎ ತನಿಖೆ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ಎನ್‌ ಐಎ ಬಳಿ ನೂರಾರು ಕೇಸ್ ಗಳಿವೆ. ಇದರ ಜತೆಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪ್ರಮುಖವಾಗಿ ಅದು ನೋಡಿಕೊಳ್ಳುತ್ತದೆ. ಅಲ್ಲೂ ಕೂಡ ಸಿಬ್ಬಂದಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಇದೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳ ಈ ಕೇಸನ್ನು ವಹಿಸಿಕೊಂಡರು ಅದರ ತನಿಖೆ ಕೈಗೆತ್ತಿಕೊಳ್ಳುವಾಗ ಇನ್ನಷ್ಟು ತಡವಾಗಬಹುದು ಎನ್‌ ಐಎ ತನಿಖೆಯ  ಪ್ರಾಥಮಿಕ ಮಾಹಿತಿ ಸಂಗ್ರಹಕ್ಕಾಗಿ ಅನವಪಚರಿಕವಾಗಿ  ಬೆಳ್ಳಾರೆಗೆ ಬಂದಿದ್ದಾರೆ ಎನ್ನುವುದು ಕೇವಲ ಊಹಾಪೋಹಾ ಅದರಲ್ಲಿ ಯಾವುದೇ ಹುರುಳಿಲ್ಲ ಎನ್ನುತ್ತಾರೆ ಪೊಲೀಸ್‌ ಮೂಲಗಳು.  ಸ್ಥಳೀಯ ಪೊಲೀಸ್‌ ಇಲಾಖೆಯ ಸಂಪರ್ಕಿಸದೇ NIA ಸಿಬ್ಬಂದಿಗಳು   ಈ ಪ್ರಕರಣದ ಮಾಹಿತಿ ಸಂಗ್ರಹ ಮಾಡುವುದು ಅಸಾಧ್ಯ ಎನ್ನಲಾಗುತ್ತಿದೆ  

ಪೊಲೀಸ್‌ ಇಲಾಖೆ ಎಡವಿದ್ದೆಲ್ಲಿ ?

ಇನ್ನು ಕೊಲೆ ಕೇಸ್‌ ಗಳನ್ನು ತನಿಖೆ ಮಾಡುವಲ್ಲಿ ಸಿಬಿಐ ಸಿಐಡಿ ಅಥಾವ ಎನ್‌ ಐಎಗಿಂತ ಸ್ಥಳೀಯ ಪೊಲೀಸರೇ ಹೆಚ್ಚು ಚಾಣಕ್ಷ್ಯತೆಯನ್ನು ಹೊಂದಿರುತ್ತಾರೆ.  ಅವರಿಗೆ ಸ್ಥಳೀಯ ಕ್ರಿಮಿನಲ್‌ ಗಳ ಚಲನವಲನಗಳ ಸಂಪೂರ್ಣ ಅರಿವಿರುತ್ತದೆ. ಅಲ್ಲದೇ ಸ್ಥಳೀಯವಾಗಿ ದೊರಕುವ ಸಣ್ಣ ಸಣ್ಣ ಕ್ಲೂಗಳನ್ನು ಗ್ರಹಿಸುವ, ತಮ್ಮ ಮಾಹಿತಿದಾರರ ಮೂಲಕ ಸಂಗ್ರಹಿಸುವ  ಸಾಮರ್ಥ್ಯ ಸ್ಥಳೀಯ ಪೊಲೀಸರಲ್ಲಿರುತ್ತದೆ. ಆದರೇ ಈ ಕೇಸ್‌ ಮೊದಲ ದಿನದಿಂದಲೂ ಹೈ ಪ್ರೋಪೈಲ್‌ ಎನಿಸಿದ ಕಾರಣ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಮೂಲಕ ಮೇಲಿನಿಂದ ಬೇಧಿಸಲು ಯತ್ನಿಸಲಾಯಿತು . ಸ್ತಳೀಯವಾಗಿ ಸಕ್ರಿಯವಾಗಿರುವ ಗುಪ್ತದಳದ ಪೊಲೀಸರನ್ನು,  ಹೆಡ್‌ ಕಾನ್ಸ್ಟೇಬಲ್‌ , ಎಎಸೈ ಮಟ್ಟದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರನ್ನು ತನಿಖೆಯ ಭಾಗವಾಗಿಸದೇ, ಅವರನ್ನು ಕತ್ತಲಲ್ಲಿಟ್ಟು  ದೊಡ್ಡ ದೊಡ್ಡ ಅಧಿಕಾರಿಗಳು ಮೇಲಿನಿಂದ ಹ್ಯಾಂಡಲ್‌ ಮಾಡಿದ್ದೆ ಈ ಪ್ರಕರಣ ಇಷ್ಟೊಂದು ಲಂಭಿಸಲು ಕಾರಣ ಎನ್ನುತ್ತಾರೆ ನಿವೃತ್ತ ಪೊಲೀಸ್‌ ಅಧಿಕಾರಿಗಳು. ಅವರಿಗೆ ಸ್ಥಳೀಯರ ಪರಿಚಯವು ಇಲ್ಲ, ಬೌಗೋಳಿಕವಾಗಿ ಇಲ್ಲಿಯ ಪರಿಚಯವಿಲ್ಲ.  ಹಾಗಾಗಿ ಅವರಿಗೆ ಅಗತ್ಯ ಸುಳಿವುಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಈಗಲೂ ಸ್ಥಳೀಯ 2- 3 ಠಾಣೆಯ ಸಿಬ್ಬಂದಿಗಳಿಗೆ ತನಿಖೆಯನ್ನು ವಹಿಸಿ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ಹಾಗೂ ತಾಂತ್ರಿಕ ಸಹಕಾರ ನೀಡಿದರೇ ಈ ತನಿಖೆ ಬಹಳ ಬೇಗ ಮುಗಿಯಲಿದೆ ಎನ್ನುತ್ತಾರೆ ನಿವೃತ್ತ ಪೊಲೀಸ್‌ ಅಧಿಕಾರಿ

ಕೇರಳ ಪೊಲೀಸರ ಅಸಹಕಾರ?

ಇನ್ನು ಕೇರಳ ನೋಂದಣಿ ಬೈಕನ್ನು ಬಳಸಿ ಕೃತ್ಯ ಎಸಗಲಾಯಿತು ಎಂಬ ವದಂತಿಗಳು ಹಬ್ಬಿದ್ದರೂ ಇದನ್ನು ಕೂಡ ಪೊಲೀಸ್‌ ಇಲಾಖೆ ಕೃತ್ಯ ನಡೆದ  ವಾರದ ಬಳಿಕವೂ ಖಚಿತಪಡಿಸಿಲ್ಲ. ಒಟ್ಟು 6 ತಂಡಗಳು ಅಧಿಕೃತವಾಗಿ ಈ ಕೊಲೆ ಕೇಸನ್ನು ತನಿಖೆ ನಡೆಸುತ್ತಿದ್ದರೂ ಸುಮಾರು 100ಕ್ಕೂ ಅಧಿಕ ಪೊಲೀಸರು 10ಕ್ಕೂ ಅಧಿಕ ತಂಡವಾಗಿ  ಆರೋಪಿಗಳ ಶೋಧದಲ್ಲಿ ತೊಡಗಿಸಿಕೊಂಡಿವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ ಒಂದು ತಂಡ ಕೇರಳಕ್ಕೂ ಹೋಗಿ ತನಿಖೆ ನಡೆಸಿದೆ. ಅವರಿಗೆ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗುತ್ತಿದೆ. ಇನ್ನು  ಕೇರಳ ಪೊಲೀಸರು ಕೂಡ ತನಿಖೆಗೆ ದೊಡ್ಡ ಸಹಕಾರ ನೀಡುತ್ತಿಲ್ಲ ಎಂಬ ಆರೋಪಗಳಿವೆ.  ಆದರೂ ಇದು ಪೂರ್ಣ ಸತ್ಯ ಅಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು. ಪ್ರತಿ ಪ್ರಕರಣದಲ್ಲೂ ಬೇರೆ ಠಾಣೆ ,ಜಿಲ್ಲೆ , ರಾಜ್ಯದ ಪೊಲೀಸರಿಂದ ನಿರೀಕ್ಷಿತ ಸಹಕಾರ ಸಿಗುವುದಿಲ್ಲ. ಪ್ರತಿ ಠಾಣೆಯ ಪೊಲೀಸರಿಗೆ  ಅವರವರ ಠಾಣೆಯ ಕೇಸಿಗೆ ಸಂಬಂಧಿಸಿದಂತೆ ಕಾರ್ಯ ಒತ್ತಡದಲ್ಲಿ ಇರುತ್ತಾರೆ . ಹಾಗಾಗಿ ಪೊಲೀಸರಿಂದ ಈ ರೀತಿಯ ವರ್ತನೆ ಸಹಜ ಎನ್ನುತ್ತಾರೆ ಅವರು        

Ad Widget
Click to comment

Leave a Reply

Uncategorized

Kural Tulu Touch-ತುಳು ಭಾಷೆಗೆ ಡಿಜಿಟಲ್‌ ಬಲ; ಆಂಡ್ರಾಯ್ಡ್‌ಗೆ ಬಂತು ‘ಕುರಲ್ ತುಳು ಟಚ್’ ಕೀಬೋರ್ಡ್‌

Published

on



Ad Widget

Ad Widget

Ad Widget

Ad Widget

ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್‌ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್‌ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ.6: ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್‌ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್‌ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಾಫ್ಟ್‌ವೇರ್‌ ಇಂಜಿನಿಯರ್‌ಗಳಾದ ಹರ್ಷಿತ್‌ ದೇವಾಡಿಗ ಹಾಗೂ ಚೈತ್ರಾ ಪೂಜಾರಿ ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್‌ ಅನ್ನು ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಲಾಯಿತು.

Ad Widget

Ad Widget <> Ad Widget

ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳಲ್ಲೂ ತುಳು ಲಿಪಿ
‘ಕುರಲ್ ತುಳು ಟಚ್’ ಕೀಬೋರ್ಡ್‌ ಸದ್ಯ ಆಂಡ್ರಾಯ್ಡ್‌ ಬಳಕೆದಾರರಿಗೆ ‘ಬಾರವು ಸಾರವು’ (Baravu Saravu) ಆ್ಯಪ್‌ ಮೂಲಕ ಲಭ್ಯವಿದೆ. ಆ್ಯಪ್‌ನಲ್ಲಿರುವ ‘New Keyboard’ ಆಯ್ಕೆಯನ್ನು ಸಕ್ರಿಯಗೊಳಿಸಿದ ಬಳಿಕ ವಾಟ್ಸಾಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ತುಳು ಲಿಪಿಯಲ್ಲಿ ಸಂದೇಶಗಳನ್ನು ಟೈಪ್‌ ಮಾಡಬಹುದು.



Ad Widget

ತುಳು ಕೀಬೋರ್ಡ್‌ನಿಂದ ಇತರ ಭಾಷೆಗಳ ಕೀಬೋರ್ಡ್‌ಗಳಿಗೆ ಸುಲಭವಾಗಿ ಬದಲಾಯಿಸುವ ಸೌಲಭ್ಯವೂ ಇದ್ದು, ಟೈಪ್‌ ಮಾಡಿದ ಪಠ್ಯವನ್ನು ಡಿಜಿಟಲ್‌ ಚಾಟ್‌ಗಳಲ್ಲಿ ಹಂಚಿಕೊಳ್ಳಬಹುದಾದ ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಆಯ್ಕೆಯೂ ಇದೆ.

Ad Widget

Ad Widget

ಅಕ್ಷರ, ಗುಣಿತಾಕ್ಷರ, ಒತ್ತಕ್ಷರಗಳಿಗೆ ಬೆಂಬಲ
ಸಾಮಾನ್ಯ ಮೊಬೈಲ್‌ ಕೀಬೋರ್ಡ್‌ಗಳ ಮಾದರಿಯಲ್ಲೇ ಸರಳವಾಗಿ ಬಳಸಬಹುದಾದ ವಿನ್ಯಾಸವನ್ನು ‘ಕುರಲ್ ತುಳು ಟಚ್’ ಹೊಂದಿದೆ. ತುಳು ಭಾಷೆಯ ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರಗಳು ಹಾಗೂ ಒತ್ತಕ್ಷರಗಳನ್ನು ಇದು ಬೆಂಬಲಿಸುತ್ತದೆ. ಹೀಗಾಗಿ ತುಳು ಲಿಪಿಯಲ್ಲಿ ಪದಗಳು ಹಾಗೂ ವಿವಿಧ ಅಕ್ಷರ ಸಂಯೋಜನೆಗಳನ್ನು ನಿಖರವಾಗಿ ಟೈಪ್‌ ಮಾಡಲು ಸಾಧ್ಯವಾಗಲಿದೆ.

ತುಳು ಲಿಪಿಯನ್ನು ಕೇವಲ ಶೈಕ್ಷಣಿಕ ಉದ್ದೇಶಗಳು ಅಥವಾ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್‌ ಸಂವಹನದಲ್ಲೂ ಪ್ರಾಯೋಗಿಕವಾಗಿ ಬಳಸುವಂತೆ ಮಾಡುವುದು ತಮ್ಮ ಉದ್ದೇಶ ಎಂದು ಡೆವಲಪರ್‌ಗಳು ತಿಳಿಸಿದ್ದಾರೆ.

ಆ್ಯಪ್‌ ಅಭಿವೃದ್ಧಿಗೆ ‘Flutter’ ಹಾಗೂ ಬ್ಯಾಕೆಂಡ್‌ ಬೆಂಬಲಕ್ಕೆ ‘Firebase’ ತಂತ್ರಜ್ಞಾನ ಬಳಸಲಾಗಿದ್ದು, ಕೀಬೋರ್ಡ್‌ ಅಭಿವೃದ್ಧಿಯನ್ನು ಕೇವಲ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗಿದೆ.

ಮೂರು ವರ್ಷಗಳ ಹಿಂದಿನ ತುಳು ಕಲಿಕಾ ಆ್ಯಪ್‌ ನೆರವು
ಮೂರು ವರ್ಷಗಳ ಹಿಂದೆ ರೂಪಿಸಿದ್ದ ‘ತುಳು ಕಲಿಕೆ ಆ್ಯಪ್‌’ ಈ ಯೋಜನೆಗೆ ಬಲವಾದ ಅಡಿಪಾಯವಾಯಿತು ಎಂದು ಹರ್ಷಿತ್‌ ದೇವಾಡಿಗ ತಿಳಿಸಿದ್ದಾರೆ. ಸಣ್ಣ ಮೊಬೈಲ್‌ ಪರದೆಯಲ್ಲಿ ತುಳು ಅಕ್ಷರಗಳನ್ನು ಸುಲಭವಾಗಿ ಗುರುತಿಸಿ ಟೈಪ್‌ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್‌ ಅನ್ನು ಕೀಬೋರ್ಡ್‌ ಲೇಔಟ್‌ಗೆ ನಿಖರವಾಗಿ ಮ್ಯಾಪ್‌ ಮಾಡುವುದು ಪ್ರಮುಖ ತಾಂತ್ರಿಕ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಜೈ ತುಳುನಾಡ್ ಸಂಸ್ಥಾಪಕ ಸದಸ್ಯ ಶರತ್‌ ಕೊಡವೂರು ಮಾತನಾಡಿ, ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ (CIIL) ಮಾನ್ಯತೆ ಪಡೆದ ತುಳು ಲಿಪಿಯನ್ನು ಡಿಜಿಟಲ್‌ ಜಗತ್ತಿಗೆ ತರುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಬಳಕೆದಾರರಿಗೆ ಗೊಂದಲವಾಗದಂತೆ ಅಕ್ಷರಗಳ ಸರಿಯಾದ ಮ್ಯಾಪಿಂಗ್‌ ಅತ್ಯಂತ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

‘ಬಾರವು ಸಾರವು’ನಲ್ಲಿ ತುಳು ಕಲಿಕೆಗೆ ಹಲವು ಸೌಲಭ್ಯ
‘ಬಾರವು ಸಾರವು’ ಆ್ಯಪ್‌ ಕೇವಲ ಕೀಬೋರ್ಡ್‌ ಒದಗಿಸುವುದಕ್ಕೆ ಸೀಮಿತವಾಗಿಲ್ಲ. ತುಳು ಕಲಿಯಲು ಆಸಕ್ತಿ ಹೊಂದಿರುವವರಿಗೆ ಸಮಗ್ರ ಕಲಿಕಾ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.

ಆ್ಯಪ್‌ನಲ್ಲಿ ತುಳು ನಿಘಂಟು, ಮೂಲಭೂತ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ತುಳು ಸಂಸ್ಕೃತಿಯನ್ನು ಪರಿಚಯಿಸುವ ಪಾರಂಪರಿಕ ಛಾಯಾಚಿತ್ರಗಳು ಲಭ್ಯವಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸುವ ಅವಕಾಶವೂ ಇದ್ದು, ಪರಿಶೀಲನೆಯ ಬಳಿಕ ಅವುಗಳನ್ನು ಸೇರಿಸಲಾಗುತ್ತದೆ.

ತುಳು ಲಿಪಿ ಕಲಿಕಾ ವಿಷಯಗಳು ಹಾಗೂ ವೀಡಿಯೊಗಳನ್ನು ಒದಗಿಸಿರುವ ಬನಶ್ರೀ ಅವಿನಾಶ್‌, ಪಾರಂಪರಿಕ ಲಿಪಿಯನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಆಸಕ್ತಿ ಹೊಂದಿರುವವರಿಗೆ ಈ ವೇದಿಕೆ ಪ್ರಾಯೋಗಿಕ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

ಯೂನಿಕೋಡ್‌ ಮಾನ್ಯತೆಯ ಬಳಿಕ ಮತ್ತೊಂದು ಮಹತ್ವದ ಹೆಜ್ಜೆ
ತುಳು-ತಿಗಳಾರಿ ಲಿಪಿಗೆ ಯೂನಿಕೋಡ್‌ ಮಾನ್ಯತೆ ದೊರೆತಿರುವುದು ಈ ತಾಂತ್ರಿಕ ಬೆಳವಣಿಗೆಗೆ ಪ್ರಮುಖ ಪ್ರೇರಣೆಯಾಗಿದೆ. 2024ರಲ್ಲಿ ಯೂನಿಕೋಡ್‌ ಕಾನ್ಸೋರ್ಟಿಯಂನ ‘ಯೂನಿಕೋಡ್‌ 16’ ಆವೃತ್ತಿಯಲ್ಲಿ 80 ತುಳು ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಇದರಿಂದ ಡಿಜಿಟಲ್‌ ವೇದಿಕೆಗಳಲ್ಲಿ ತುಳು ಲಿಪಿಗೆ ಬೆಂಬಲ ಕಲ್ಪಿಸಲು ಹಾಗೂ ಫಾಂಟ್‌ ಮತ್ತು ಕೀಬೋರ್ಡ್‌ ಅಭಿವೃದ್ಧಿಪಡಿಸಲು ತಾಂತ್ರಿಕ ಅಡಿಪಾಯ ಸೃಷ್ಟಿಯಾಯಿತು.

ತುಳು ವಿದ್ವಾಂಸರು ಹಾಗೂ ತುಳು ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಈ ತಾಂತ್ರಿಕ ಪ್ರಗತಿ ಸಾಧ್ಯವಾಗಿದೆ. ಇದೀಗ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿರುವ ಯುವ ಪೀಳಿಗೆಗೆ ಕನ್ನಡ ಅಥವಾ ಇಂಗ್ಲಿಷ್‌ ಲಿಪಿಯ ಬದಲು ತುಳು ಭಾಷೆಯನ್ನು ಅದರ ಮೂಲ ಲಿಪಿಯಲ್ಲೇ ಡಿಜಿಟಲ್‌ ಸಂವಹನದಲ್ಲಿ ಬಳಸಲು ಹೊಸ ಅವಕಾಶ ದೊರೆತಂತಾಗಿದೆ.

ಸದ್ಯ ‘ಕುರಲ್ ತುಳು ಟಚ್’ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ iOS ಬಳಕೆದಾರರಿಗೂ ಕೀಬೋರ್ಡ್‌ ಬಿಡುಗಡೆ ಮಾಡಲು ಡೆವಲಪರ್‌ಗಳು ಯೋಜಿಸಿದ್ದಾರೆ.

Ad Widget
Continue Reading

Uncategorized

Rahul Gandhi ;8 ಗಂಟೆಗಳ ಧರಣಿ ಬಳಿಕ ಪೊಲೀಸ್ ಆ್ಯಕ್ಷನ್: ರಾಹುಲ್–ಪ್ರಿಯಾಂಕಾ ಸೇರಿ 50 ಸಂಸದರು ವಶ

Published

on



Ad Widget

Ad Widget

Ad Widget

Ad Widget

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಕೈಗೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ಆಕಾಶವಾಣಿ ಭವನದ ಆವರಣದಲ್ಲಿ ಎಂಟು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಸುಮಾರು 250 ಮಂದಿಯನ್ನು ದೆಹಲಿ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ವಶಕ್ಕೆ ಪಡೆದವರಲ್ಲಿ ಸುಮಾರು 50 ಸಂಸದರೂ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರನ್ನು ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ನ್ಯೂ ಪೊಲೀಸ್ ಲೈನ್ಸ್‌ಗೆ ಕರೆದೊಯ್ಯಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಆಕಾಶವಾಣಿ ಭವನದ ಆವರಣವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ ಪೊಲೀಸರು, ರಾಹುಲ್ ಗಾಂಧಿ ಅವರೊಂದಿಗೆ ಕೆ.ಸಿ. ವೇಣುಗೋಪಾಲ್, ಪವನ್ ಖೇರಾ, ಕೆ. ಸುರೇಶ್, ಅಮರಿಂದರ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ಮತ್ತು ಮುಖಂಡರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದರು.

Ad Widget

Ad Widget <> Ad Widget

ಸಂಸತ್ ಭವನದ ರಸ್ತೆಯಲ್ಲಿರುವ ಆಕಾಶವಾಣಿ ಭವನದಿಂದ ಕೇವಲ 300 ಮೀಟರ್ ದೂರದಲ್ಲಿರುವ ಚುನಾವಣಾ ಆಯೋಗದ ಕಚೇರಿಯತ್ತ ವಿರೋಧ ಪಕ್ಷಗಳ ಸಂಸದರು ನಡೆಸುತ್ತಿದ್ದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದರು.



Ad Widget

ಇದರಿಂದಾಗಿ ರಾಹುಲ್ ಗಾಂಧಿ ಮತ್ತು ಇತರ ಮುಖಂಡರು ಆಕಾಶವಾಣಿ ಭವನದ ಆವರಣ ಪ್ರವೇಶಿಸಿ ಅಲ್ಲಿಯೇ ಧರಣಿ ಕುಳಿತಿದ್ದರು.

Ad Widget

Ad Widget

ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಎಸ್‌ಐಆರ್‌ನಲ್ಲಿ ಅಕ್ರಮಗಳು ನಡೆದಿವೆ ಎಂಬ ಮಾಧ್ಯಮ ವರದಿಗಳ ಆಧಾರದಲ್ಲಿ, ‘ವೋಟ್ ಚೋರಿ’ ಆರೋಪಿಸಿ ವಿರೋಧ ಪಕ್ಷಗಳ ಸಂಸದರು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದ ಧರಣಿಯ ಬಳಿಕ, ಪೊಲೀಸರು ಸ್ಥಳ ತೆರವುಗೊಳಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

Ad Widget
Continue Reading

Uncategorized

Puttur Piligobbu Season-4 : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮನ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು-2026 ಸೀಸನ್-4’ ಕಾರ್ಯಕ್ರಮಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿಜೆಪಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೀತಮ್ ಜೆ. ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ಹುಲಿವೇಷ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಸಮುದಾಯದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕಲೆಯ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೀಸನ್-4 ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹುಲಿವೇಷ ತಂಡಗಳು ಭಾಗವಹಿಸಲಿದ್ದು, ವಿಶೇಷ ಆಕರ್ಷಣೆಯಾಗಿ ಫುಡ್ ಫೆಸ್ಟ್ ಕೂಡ ನಡೆಯಲಿದೆ.

Ad Widget

Ad Widget <> Ad Widget

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.



Ad Widget

ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಶ್ರೀ ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪಿಲಿಗೊಬ್ಬು ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading