ಮಂಗಳೂರು
Chetan Singh Rathod-Big Breaking: ಸೌಜನ್ಯ ಎಸ್ಐಟಿ : ನೂತನ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಆಗಮನ – ಮಧ್ಯಾಹ್ನ ಸೌಜನ್ಯ ಕುಟುಂಬಸ್ಥರ ವಿಚಾರಣೆ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (SIT) ನೂತನ ಮುಖ್ಯಸ್ಥರಾಗಿ ನೇಮಕಗೊಂಡಿರುವ ಪೊಲೀಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರು ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (SIT) ನೂತನ ಮುಖ್ಯಸ್ಥರಾಗಿ ನೇಮಕಗೊಂಡಿರುವ ಪೊಲೀಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರು ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನಲ್ಲಿರುವ SIT ಕಚೇರಿಗೆ ಆಗಮಿಸಿದ ಅವರು ಇಂದಿನಿಂದ ತನಿಖೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರಕರಣದ ತನಿಖೆಯ ಪ್ರಗತಿ ಹಾಗೂ ಇದುವರೆಗೆ ಸಂಗ್ರಹಿಸಿರುವ ಮಾಹಿತಿಗಳ ಕುರಿತು ಸಮಗ್ರ ವಿವರ ಪಡೆಯಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
SIT ಅಧಿಕಾರಿಗಳಾದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್ ಹಾಗೂ ಲೋಕೇಶ್ ಜಗಲಸಾರ್ ಅವರೊಂದಿಗೆ ಸಭೆ ನಡೆಸಿ ಪ್ರಕರಣದ ತನಿಖೆಯ ವಿವಿಧ ಆಯಾಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಅಧಿಕಾರಿಗಳ ಸಭೆಯ ಬಳಿಕ ಸೌಜನ್ಯ ಅವರ ಪೋಷಕರ ವಿಚಾರಣೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಹಾಗೂ ಮಾವ ವಿಠಲ ಗೌಡ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಮಂಗಳೂರು
Soujanya Case-Big Breaking: ಸೌಜನ್ಯ ಪ್ರಕರಣ : ಸಂತೋಷ್ ರಾವೇ ನೈಜ ಆರೋಪಿ ಎಂದ ಬೆಂಗಳೂರಿನ ವಕೀಲ ಅಮೃತೇಶ್ ಎಸ್ಐಟಿ ಕಚೇರಿಗೆ – ದೂರು ದಾಖಲು..!
ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಹಿರಿಯ ಹೈಕೋರ್ಟ್ ವಕೀಲ ಅಮೃತೇಶ್ ಅವರು ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಸೌಜನ್ಯ ತಂದೆ ತಾಯಿ ಪ್ರಕರಣದಿಂದ ಹಣ ಮಾಡಿದ್ದಾರೆ. ಸಂತೋಷ್ ರಾವೇ ನೈಜ ಆರೋಪಿ ಎಂದು ಅಮೃತೇಶ್ ಆರೋಪಿಸಿದ್ದರು.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಹಿರಿಯ ಹೈಕೋರ್ಟ್ ವಕೀಲ ಅಮೃತೇಶ್ ಅವರು ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳನ್ನು ಭೇಟಿಯಾಗಿದ್ದಾರೆ.
ಸೌಜನ್ಯ ತಂದೆ ತಾಯಿ ಪ್ರಕರಣದಿಂದ ಹಣ ಮಾಡಿದ್ದಾರೆ. ಸಂತೋಷ್ ರಾವೇ ನೈಜ ಆರೋಪಿ ಎಂದು ಅಮೃತೇಶ್ ಆರೋಪಿಸಿದ್ದರು.
ಈ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸೌಜನ್ಯ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಹಿರಿಯ ವಕೀಲ ಅಮೃತೇಶ್ ಅವರು ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಅವರು ನೀಡಿರುವ ದೂರಿನಲ್ಲಿರುವ ಅಂಶಗಳು ಹಾಗೂ ಮುಂದಿನ ತನಿಖೆಯಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುದರ ಬಗ್ಗೆ ಆಸಕ್ತಿ ಹೆಚ್ಚಾಗಿದೆ.
ಅಪರಾಧ
Mangalore-ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಬಂಧನ; 3.8 ಕೆ.ಜಿ. ಗಾಂಜಾ, ಕಾರು ವಶಕ್ಕೆ
ಗಾಂಜಾ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ತೂಕದ ಗಾಂಜಾ ಸೇರಿದಂತೆ ಒಟ್ಟು 3.94 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು: ಗಾಂಜಾ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ತೂಕದ ಗಾಂಜಾ ಸೇರಿದಂತೆ ಒಟ್ಟು 3.94 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟಕ್ಕೆ ತಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಹಾಗೂ ಪಣಂಬೂರು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದರು.
ಈ ವೇಳೆ ಪುತ್ತೂರು ತಾಲೂಕಿನ ಪಡ್ನೂರು ಅಂಚೆ ವ್ಯಾಪ್ತಿಯ ಪಡ್ಡಾಯೂರು ಹೌಸ್ ನಿವಾಸಿ ಹಂಜಾ ಅವರ ಪುತ್ರ ಮೊಹಮ್ಮದ್ ನಿಸಾರ್ (23) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯಿಂದ ಅಂದಾಜು 1.90 ಲಕ್ಷ ರೂ. ಮೌಲ್ಯದ 3.8 ಕೆ.ಜಿ. ಗಾಂಜಾ, 4 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಕೆಎಲ್ 14 1662 ನೋಂದಣಿ ಸಂಖ್ಯೆಯ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಈ ಹಿಂದೆಯೂ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 137/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಮಂಗಳೂರು
Mangalore LSD Drug Bus: ಬೆಂಗಳೂರು ಟು ಮಂಗಳೂರು ಡ್ರಗ್ಸ್ ನೆಟ್‌ವರ್ಕ್ ಪತ್ತೆ: 9 ಕೇಸ್‌ಗಳ ಆರೋಪಿ ಸಹಿತ ಇಬ್ಬರು ಅಂದರ್ ! ವಿದ್ಯಾರ್ಥಿಗಳೇ ಈ ಖದೀಮರ ಟಾರ್ಗೆಟ್

Mangalore LSD Drug Bust: ಮಂಗಳೂರು: ಕರಾವಳಿ ಭಾಗದಲ್ಲಿ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ನಿಷೇಧಿತ LSD (Lysergic Acid Diethylamide) ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3 ಲಕ್ಷ ರೂ. ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ನಗರದಿಂದ LSD ಮಾದಕವಸ್ತುಗಳನ್ನು ಖರೀದಿಸಿ ಮಂಗಳೂರಿಗೆ ತಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಮಧ್ಯಾಹ್ನ ಮಂಗಳೂರು ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಯಾರು?
ಮಂಗಳೂರು ಅಳಪೆ, ಪಡೀಲ್‌ನ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30) ಹಾಗೂ ಉರ್ವಸ್ಟೋರ್‌ನ ದಡ್ಡಲಕಾಡ್ ನಿವಾಸಿ ಸಿದ್ದಾರ್ಥ ಶೆಟ್ಟಿ (35) ಬಂಧಿತ ಆರೋಪಿಗಳು.
ಆರೋಪಿಗಳಿಂದ ಸುಮಾರು 3 ಲಕ್ಷ ರೂ. ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್‌ಗಳು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3.35 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದಾರ್ಥ ಶೆಟ್ಟಿ ವಿರುದ್ಧ 9 ಪ್ರಕರಣ!
ಬಂಧಿತ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ ವಿರುದ್ಧ ಈ ಹಿಂದೆ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು.
ಇನ್ನು ಸಿದ್ದಾರ್ಥ ಶೆಟ್ಟಿ ವಿರುದ್ಧ ಮಂಗಳೂರಿನ ಬರ್ಕೆ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಹಲವರ ಕೈವಾಡದ ಶಂಕೆ; ತನಿಖೆ ಮುಂದುವರಿಕೆ
ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದಲ್ಲಿ ಮಾದಕವಸ್ತು ಜಾಲದ ವಿರುದ್ಧ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸೂಚನೆ: ಆರೋಪಿಗಳು ಎಂಬ ಉಲ್ಲೇಖವನ್ನು ತನಿಖಾ ಹಂತದ ಆರೋಪದ ಆಧಾರದಲ್ಲಿ ಬಳಸಲಾಗಿದೆ. ಅಪರಾಧ ಸಾಬೀತಾಗುವವರೆಗೆ ಆರೋಪಿಗಳು ನಿರಪರಾಧಿಗಳೆಂಬ ಕಾನೂನು ತತ್ವ ಅನ್ವಯಿಸುತ್ತದೆ.
-
ಕ್ರೈಂ14 hours agoMurder case-ಬೆಂಗಳೂರಿನಲ್ಲಿ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ಕಾಡಿನಲ್ಲಿ 7 ವರ್ಷದ ಬಾಲಕನ ಮೃತದೇಹ ಪತ್ತೆ – ಉಳಿದವರಿಗಾಗಿ ಶೋಧ : ಬಾಲಕನಿಂದ ಮಹತ್ವದ ಸುಳಿವು : ಕೃತ್ಯಕ್ಕೆ ಆರೋಪಿಯ 17 ವರ್ಷದ ಮಗಳ ಸಾಥ್..!
-
ಕ್ರೈಂ17 hours agoBangalore-ಬೆಂಗಳೂರಿನಲ್ಲಿ ಭೀಕರ ಸಾಮೂಹಿಕ ಹತ್ಯೆ: ಪತ್ನಿ ಸಹಿತ ಕುಟುಂಬದ 7 ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಕೊಂದ ಕ್ಯಾಬ್ ಚಾಲಕ..!
-
ಮಂಗಳೂರು15 hours agoSoujanya Case-Big Breaking: ಸೌಜನ್ಯ ಪ್ರಕರಣ : ಸಂತೋಷ್ ರಾವೇ ನೈಜ ಆರೋಪಿ ಎಂದ ಬೆಂಗಳೂರಿನ ವಕೀಲ ಅಮೃತೇಶ್ ಎಸ್ಐಟಿ ಕಚೇರಿಗೆ – ದೂರು ದಾಖಲು..!
-
ನಿಧನ ವಾರ್ತೆ14 hours agoHormuz-ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ: ತಂದೆಯ ಹಾದಿಯಲ್ಲೇ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ಮಗ..!
-
ಬಿಗ್ ನ್ಯೂಸ್16 hours agoPuttur-Big Breaking : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನೇಮಕ ಆದೇಶ ಹಿಂಪಡೆದ ಸರ್ಕಾರ – ಎರಡು ದಿನದಲ್ಲಿ ಎರಡು ಆದೇಶ..!
-
ಸ್ಥಳೀಯ10 hours agoArrested-ಬಿಸಿಲೆ ಘಾಟಿಯಲ್ಲಿ ಗರ್ಭಿಣಿ ಯುವತಿಯ ಕೊಲೆಗೆ ಯತ್ನ? ಹಲ್ಲೆ ನಡೆಸಿ ಚರಂಡಿಗೆ ಎಸೆದ ಪ್ರಿಯಕರ ಅರೆಸ್ಟ್
-
Uncategorized10 hours agoPetrol-Big Breaking: ರಾಜ್ಯದಲ್ಲಿ ಪೆಟ್ರೋಲ್ ಗೆ ಶೇ.31.2 ಇಥನಾಲ್ ಮಿಶ್ರಣ ಪತ್ತೆ..! ಲ್ಯಾಬ್ ವರದಿಯಲ್ಲಿ ಆಘಾತಕಾರಿ ಅಂಶ ಬಯಲು..! ಗಂಭೀರ ಆರೋಪ ಮಾಡಿದ ಸಚಿವ ರಿಜ್ವಾನ್ – ಮೈಲೇಜ್ ಕಡಿತ ವಾಹನ ದುಸ್ಥಿತಿಗೆ ಇದೆ ಕಾರಣ.!
-
ಅಪರಾಧ18 hours agoMangalore-ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಬಂಧನ; 3.8 ಕೆ.ಜಿ. ಗಾಂಜಾ, ಕಾರು ವಶಕ್ಕೆ


















