ರಾಜಕೀಯ
Grihalakshmi-ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಫ್ಟ್: ಒಂದೇ ಬಾರಿಗೆ 3 ಕಂತಿನ ಹಣ ಬಿಡುಗಡೆ..!
ರಾಜ್ಯದ ಗೃಹಲಕ್ಷ್ಮಿಯರಿಗೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸರ್ಕಾರ ಸಿಹಿಸುದ್ದಿ ನೀಡಿದೆ. ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತಿನ ಒಟ್ಟು 7,405.86 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿಯರಿಗೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸರ್ಕಾರ ಸಿಹಿಸುದ್ದಿ ನೀಡಿದೆ. ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತಿನ ಒಟ್ಟು 7,405.86 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 33 ಕಂತುಗಳ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿತ್ತು. ಇದೀಗ 34ನೇ ಕಂತಿನ 2,500 ಕೋಟಿ ರೂ., 35ನೇ ಕಂತಿನ 2,452.93 ಕೋಟಿ ರೂ. ಹಾಗೂ 36ನೇ ಕಂತಿನ 2,452.93 ಕೋಟಿ ರೂ. ಸೇರಿದಂತೆ ಒಟ್ಟು 7,405.86 ಕೋಟಿ ರೂ. ಹಣವನ್ನು ಏಕಕಾಲದಲ್ಲಿ ಬಿಡುಗಡೆಗೊಳಿಸಲಾಗಿದೆ.
ಇದರೊಂದಿಗೆ ಅಕ್ಟೋಬರ್‌ವರೆಗೆ ರಾಜ್ಯದ 1.24 ಕೋಟಿ ಮಹಿಳಾ ಫಲಾನುಭವಿಗಳಿಗೆ ಒಟ್ಟು 86,838.36 ಕೋಟಿ ರೂ. ಗೃಹಲಕ್ಷ್ಮಿ ಯೋಜನೆಯ ಹಣ ತಲುಪಲಿದೆ. ಈ ಮೂಲಕ ಪ್ರತಿ ಫಲಾನುಭವಿಗೆ ಒಟ್ಟು 72,000 ರೂ. ನೆರವು ದೊರೆತಂತಾಗಲಿದೆ.
ರಾಜ್ಯದಲ್ಲಿ ಬರಗಾಲದ ನಡುವೆಯೇ ದೀಪಾವಳಿ ಹಬ್ಬ ಎದುರಾಗಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ರಾಜಕೀಯ
Abdul Al-Sayeed-ಅಮೆರಿಕದ ಸೆನೆಟ್‌ಗೆ ಭಟ್ಕಳದ ಅಳಿಯ ಅಬ್ದುಲ್ ಅಲ್ ಸಯೀದ್ ಆಯ್ಕೆ..!
ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಅಬ್ದುಲ್ ಅಲ್ ಸಯೀದ್ ಅವರು ಮಿಶಿಗನ್ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮಿಶಿಗನ್ ಸೆನೆಟ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಬ್ದುಲ್ ಅವರು ರಿಪಬ್ಲಿಕನ್ ಪಕ್ಷ
ಅಮೆರಿಕ: ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಅಬ್ದುಲ್ ಅಲ್ ಸಯೀದ್ ಅವರು ಮಿಶಿಗನ್ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮಿಶಿಗನ್ ಸೆನೆಟ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಬ್ದುಲ್ ಅವರು ರಿಪಬ್ಲಿಕನ್ ಪಕ್ಷದ ಮಾಜಿ ಸಂಸದ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಬ್ದುಲ್ ಅವರ ಪರವಾಗಿ ಪ್ರಚಾರ ನಡೆಸಿ ಬೆಂಬಲ ಸೂಚಿಸಿದ್ದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ನಾಯಕರು ಅಬ್ದುಲ್ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದರು. ಅವರನ್ನು ಭಯೋತ್ಪಾದಕ ಎಂದು ಬಿಂಬಿಸುವುದರ ಜೊತೆಗೆ, ಅವರಿಂದ ಅಮೆರಿಕನ್ನರ ಸುರಕ್ಷತೆಗೆ ಅಪಾಯವಿದೆ ಎಂದು ಆರೋಪಿಸಿದ್ದರು. ಇಂತಹ ಟೀಕೆಗಳ ನಡುವೆಯೂ ಮಿಶಿಗನ್ ಮತದಾರರು ಅಬ್ದುಲ್ ಅವರಿಗೆ ಬೆಂಬಲ ನೀಡಿದ್ದಾರೆ.
ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದ ಅಬ್ದುಲ್, ಬೃಹತ್ ಜನಸಮೂಹವನ್ನು ಆಕರ್ಷಿಸಿದ್ದರು. ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿಯೂ ಜನರ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ರಾಜಕೀಯದಲ್ಲಿ ಹಣದ ಪ್ರಭಾವವನ್ನು ಕಡಿಮೆ ಮಾಡುವುದು ಹಾಗೂ ಜನರ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಪ್ರಮುಖ ಚುನಾವಣಾ ಭರವಸೆಗಳಾಗಿದ್ದವು.
ಭಟ್ಕಳದ ಅಳಿಯ ಅಬ್ದುಲ್
1984ರಲ್ಲಿ ಮಿಶಿಗನ್‌ನಲ್ಲಿ ಜನಿಸಿದ ಅಬ್ದುಲ್ ಅಲ್ ಸಯೀದ್ ಬಾಲ್ಯದಿಂದಲೇ ಅಲ್ಲಿಯೇ ಬೆಳೆದವರು. ಅವರ ತಂದೆ ಮೊಹಮ್ಮದ್ ಈಜಿಪ್ಟ್‌ನಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ಅಬ್ದುಲ್ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದು, ಪ್ರೌಢಶಾಲೆಯಲ್ಲಿ ಫುಟ್‌ಬಾಲ್, ಕುಸ್ತಿ ಮತ್ತು ಲ್ಯಾಕ್ರೋಸ್ ತಂಡಗಳ ನಾಯಕತ್ವ ವಹಿಸಿದ್ದರು.
ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಗಳಿಸಿದರು. ನಂತರ ಪ್ರತಿಷ್ಠಿತ ರೋಡ್ಸ್ ವಿದ್ಯಾರ್ಥಿವೇತನದಡಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಅವರ ಪತ್ನಿ ಸಾರಾ ಜುಕಾಕು ಅವರು ಮನೋವೈದ್ಯರಾಗಿದ್ದು, ಭಾರತೀಯ ವಲಸಿಗ ದಂಪತಿಯ ಪುತ್ರಿ. ಮಿಶಿಗನ್‌ನಲ್ಲೇ ಹುಟ್ಟಿ ಬೆಳೆದಿರುವ ಸಾರಾ ಅವರ ತಂದೆ ತಯೇಬ್ ಜುಕಾಕು ಅವರು ಮೂತ್ರಪಿಂಡ ತಜ್ಞರಾಗಿದ್ದು, ಕರ್ನಾಟಕದ ಭಟ್ಕಳ ಮೂಲದವರು.
ಸಾರಾ ಅವರ ತಾತ ಶಮ್ರುದ್ದೀನ್ ಜುಕಾಕು ಅವರು ಖ್ಯಾತ ವಕೀಲರಾಗಿದ್ದರು. ಅಲ್ಲದೆ, ಹಿಂದಿನ ಮೈಸೂರು ಸಂಸ್ಥಾನದಲ್ಲಿ ಉಪ ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಬ್ದುಲ್ ಮತ್ತು ಸಾರಾ ದಂಪತಿಗೆ ಎಮ್ಮಲೀ ಹಾಗೂ ಸೆರೀನ್ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಆರೋಗ್ಯ ಕ್ಷೇತ್ರದಿಂದ ರಾಜಕೀಯದತ್ತ ಪಯಣ
ಅಬ್ದುಲ್ ಅವರು 2015ರಿಂದ 2017ರವರೆಗೆ ಡೆಟ್ರಾಯಿಟ್ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ನಗರದ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಮಿಶಿಗನ್ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು.
2018ರ ಸೆಪ್ಟೆಂಬರ್‌ನಲ್ಲಿ ಮಿಶಿಗನ್‌ನಲ್ಲಿ ಪ್ರಗತಿಪರ ಅಭ್ಯರ್ಥಿಗಳ ಗೆಲುವಿಗೆ ನೆರವಾಗುವ ಉದ್ದೇಶದಿಂದ ‘ಸೌತ್‌ಪಾ ಮಿಶಿಗನ್’ (Southpaw Michigan) ಎಂಬ ರಾಜಕೀಯ ಕ್ರಿಯಾ ಸಮಿತಿಯನ್ನು ಸ್ಥಾಪಿಸಿದ್ದರು.
ಇದಲ್ಲದೆ, ಕೊಲಂಬಿಯಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
‘ಮೆಡಿಕೇರ್ ಫಾರ್ ಆಲ್: ಎ ಸಿಟಿಜನ್ಸ್ ಗೈಡ್’ ಎಂಬ ಪುಸ್ತಕವನ್ನು ಬರೆದಿರುವ ಅವರು, ಪ್ರತಿಯೊಬ್ಬ ಅಮೆರಿಕನ್ನರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆಯ ಕುರಿತು ವಿವರಿಸಿದ್ದಾರೆ. ‘ಹೀಲಿಂಗ್ ಪಾಲಿಟಿಕ್ಸ್: ಎ ಡಾಕ್ಟರ್ಸ್ ಜರ್ನಿ ಇಂಟು ದಿ ಹಾರ್ಟ್ ಆಫ್ ಅವರ್ ಪೊಲಿಟಿಕಲ್ ಎಪಿಡೆಮಿಕ್’ ಎಂಬ ಮತ್ತೊಂದು ಕೃತಿಯನ್ನೂ ರಚಿಸಿದ್ದಾರೆ.
2020ರಲ್ಲಿ ಅಂದಿನ ಅಧ್ಯಕ್ಷ ಜೋ ಬೈಡನ್ ಅವರ ಆರೋಗ್ಯ ನೀತಿ ಏಕತಾ ಕಾರ್ಯಪಡೆಗೆ ಆಯ್ಕೆಯಾಗಿದ್ದ ಅಬ್ದುಲ್, ಔಷಧಗಳ ಬೆಲೆ ಕಡಿಮೆ ಮಾಡುವ ನೀತಿಗಳ ರೂಪಿಸುವಿಕೆಯಲ್ಲಿ ಸಹಕರಿಸಿದ್ದರು.
ವೈದ್ಯಕೀಯ, ಶಿಕ್ಷಣ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಅಲ್ ಸಯೀದ್ ಅವರ ರಾಜಕೀಯ ಪಯಣ ಇದೀಗ ಅಮೆರಿಕದ ಸೆನೆಟ್ ಪ್ರವೇಶದೊಂದಿಗೆ ಹೊಸ ಮೈಲಿಗಲ್ಲು ತಲುಪಿದೆ. ಅವರ ಪತ್ನಿಯ ಕುಟುಂಬದ ಭಟ್ಕಳ ಮೂಲದ ನಂಟಿನಿಂದಾಗಿ ಈ ಸಾಧನೆ ಕರ್ನಾಟಕದ ಕರಾವಳಿಯಲ್ಲಿಯೂ ಗಮನ ಸೆಳೆದಿದೆ.
ರಾಜಕೀಯ
America-ಅಮೆರಿಕ ಮಧ್ಯಂತರ ಚುನಾವಣೆ: ಟ್ರಂಪ್‌ಗೆ ಹಿನ್ನಡೆ, ಡೆಮಾಕ್ರಟಿಕ್ ಪಕ್ಷ ಜಯ..!
ಅಮೆರಿಕದಲ್ಲಿ ನವೆಂಬರ್ 3ರಂದು ನಡೆದ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಆರಂಭಿಕ ಹಂತದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬೆಳವಣಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯ ಸೂಚನೆ ನೀಡಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್ 3ರಂದು ನಡೆದ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಆರಂಭಿಕ ಹಂತದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬೆಳವಣಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯ ಸೂಚನೆ ನೀಡಿದೆ.
ಓಹಿಯೋ, ಜಾರ್ಜಿಯಾ, ಕೆರೊಲಿನಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಫಲಿತಾಂಶಗಳು ಹೊರಬರುತ್ತಿವೆ. ಹಲವು ಕ್ಷೇತ್ರಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಜಯ ಸಾಧಿಸಿರುವುದು ಗಮನ ಸೆಳೆದಿದೆ.
ಈ ಫಲಿತಾಂಶಗಳು ಮುಂದಿನ ಎರಡು ವರ್ಷಗಳ ಆಡಳಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಿಪಬ್ಲಿಕನ್ ಪಕ್ಷವು ಕಾಂಗ್ರೆಸ್‌ನ ಎರಡೂ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್‌ನಲ್ಲಿ (ಮೇಲ್ಮನೆ) ತನ್ನ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.
ಜಾರ್ಜಿಯಾ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಜಾನ್ ಒಸಾಫ್ ಗೆಲುವು ಸಾಧಿಸಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಮೂಲದ ಪಿಯಾ ದಾಂಡಿಯಾ ಜಯಗಳಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪ್ರವೇಶಿಸಿದ್ದಾರೆ.
ಇನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಸಲಹೆಗಾರರಾಗಿದ್ದ ಸುಹಾಸ್ ಸುಬ್ರಹ್ಮಣ್ಯಂ ಅವರು ವರ್ಜೀನಿಯಾದಲ್ಲಿ ಗೆಲುವು ದಾಖಲಿಸಿದ್ದಾರೆ.
ಇಲಿನಾಯ್ಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಜೂಲಿಯಾನಾ ಸ್ಟ್ರಾಟನ್ ಹಾಗೂ ಪಶ್ಚಿಮ ವರ್ಜೀನಿಯಾದಲ್ಲಿ ರಿಪಬ್ಲಿಕನ್ ಪಕ್ಷದ ಶೆಲ್ಲಿ ಮೂರ್ ಕಾಪಿಟೊ ಅವರು ಸೆನೆಟರ್‌ಗಳಾಗಿ ಆಯ್ಕೆಯಾಗಿದ್ದಾರೆ.
ಆರಂಭಿಕ ಫಲಿತಾಂಶಗಳು ಡೆಮಾಕ್ರಟಿಕ್ ಪಕ್ಷದ ಪರವಾಗಿ ಕಂಡುಬರುತ್ತಿದ್ದು, ಅಂತಿಮ ಫಲಿತಾಂಶದ ಬಳಿಕ ಕಾಂಗ್ರೆಸ್‌ನ ಉಭಯ ಸದನಗಳಲ್ಲಿನ ರಾಜಕೀಯ ಬಲಾಬಲ ಸ್ಪಷ್ಟವಾಗಲಿದೆ.
ಅಂತರ ರಾಜ್ಯ
Rahul Gandhi-’24 ಗಂಟೆ ಕಳೆದರೂ ಚರ್ಚೆಗೆ ಬರುತ್ತಿಲ್ಲವೇಕೆ ಮೋದಿ ಜೀ?’ – ರಾಹುಲ್ ಗಾಂಧಿ ಮತ್ತೆ ಬಹಿರಂಗ ಸವಾಲು
“24 ಗಂಟೆಗಳು ಕಳೆದಿವೆ, ಮೋದಿ ಜೀ… ಇನ್ನೂ ಏಕೆ ಚರ್ಚೆಗೆ ಬರುತ್ತಿಲ್ಲ?” ಎಂದು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಚರ್ಚೆಯ ಸವಾಲನ್ನು ಮತ್ತೊಮ್ಮೆ ಹಾಕಿದ್ದಾರೆ. ವಿದೇಶಿ ಸಂಪರ್ಕಗಳ ಕುರಿತು ತಮ್ಮ ಆರೋಪಗಳಿಗೆ ಉತ್ತರ ನೀಡುವಂತೆ ಒತ್ತಾಯಿಸಿರುವ ಅವರು, ಚರ್ಚೆಗೆ ಪ್ರಧಾನಿ ಅವರೇ ವೇದಿಕೆ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿ ಎಂದಿದ್ದಾರೆ.
ಹೊಸದಿಲ್ಲಿ: “24 ಗಂಟೆಗಳು ಕಳೆದಿವೆ, ಮೋದಿ ಜೀ… ಇನ್ನೂ ಏಕೆ ಚರ್ಚೆಗೆ ಬರುತ್ತಿಲ್ಲ?” ಎಂದು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಚರ್ಚೆಯ ಸವಾಲನ್ನು ಮತ್ತೊಮ್ಮೆ ಹಾಕಿದ್ದಾರೆ. ವಿದೇಶಿ ಸಂಪರ್ಕಗಳ ಕುರಿತು ತಮ್ಮ ಆರೋಪಗಳಿಗೆ ಉತ್ತರ ನೀಡುವಂತೆ ಒತ್ತಾಯಿಸಿರುವ ಅವರು, ಚರ್ಚೆಗೆ ಪ್ರಧಾನಿ ಅವರೇ ವೇದಿಕೆ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿ ಎಂದಿದ್ದಾರೆ.
ದೀಪಾವಳಿ ಶುಭಾಶಯ ಕೋರುವ ನೆಪದಲ್ಲಿ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ವೀಡಿಯೋ ಬಿಡುಗಡೆ ಮಾಡಿರುವ ರಾಹುಲ್, ತಮ್ಮ ಹಿಂದಿನ ಸವಾಲಿಗೆ 24 ಗಂಟೆಗಳು ಕಳೆದಿವೆ ಎಂದು ನೆನಪಿಸಿದ್ದಾರೆ.
‘ಎಕ್ಸ್’ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, “ಮೋದಿ ಜೀ, 24 ಗಂಟೆಗಳು ಕಳೆದಿವೆ. ನಾನು ನಿಮಗೆ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ವಿರೋಧ ಪಕ್ಷದವರು ದೇಶವಿರೋಧಿಗಳು ಎಂದು ನೀವು ಹೇಳುತ್ತೀರಿ. ಹಾಗಿದ್ದರೆ, ನಿಮಗೆ ಇಷ್ಟವಾದ ವೇದಿಕೆ ಅಥವಾ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ ನನ್ನೊಂದಿಗೆ ಚರ್ಚೆಗೆ ಬನ್ನಿ” ಎಂದು ಹೇಳಿದ್ದಾರೆ.
“ದೇಶವಿರೋಧಿಗಳು ಯಾರು? ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರು ಯಾರು? ಅಂತಹ ಸಂಪರ್ಕಗಳ ಸ್ವರೂಪವೇನು? ಹಿಂಜರಿಯಬೇಡಿ, ಆದಷ್ಟು ಬೇಗ ಚರ್ಚೆಗೆ ಬನ್ನಿ” ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ ಅವರು ವಿದೇಶಿ ನೆರವಿನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂಬ ಆರೋಪದ ಕುರಿತು ರಾಹುಲ್ ಈ ಹಿಂದೆ ಮುಕ್ತ ಚರ್ಚೆಗೆ ಆಹ್ವಾನಿಸಿದ್ದರು. ಮೋದಿ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರುವುದಿಲ್ಲ ಎಂದೂ ಅವರು ಟೀಕಿಸಿದ್ದಾರೆ.
ಚರ್ಚೆಯಲ್ಲಿ ಇಬ್ಬರೂ ನಾಯಕರು ಒಂದೇ ಮೇಜಿನ ಎದುರು ಕುಳಿತು ತಮ್ಮ ವಾದಗಳನ್ನು ಮಂಡಿಸಬೇಕು. ಮಾಧ್ಯಮಗಳು ಮತ್ತು ದೇಶದ ಯುವಜನರು ಚರ್ಚೆಗೆ ಸಾಕ್ಷಿಯಾಗಬೇಕು ಎಂಬುದು ರಾಹುಲ್ ಅವರ ಪ್ರಸ್ತಾಪ. ಚರ್ಚೆಯ ತೀರ್ಪುಗಾರರನ್ನು ಪ್ರಧಾನಿ ಮೋದಿಯೇ ಆಯ್ಕೆ ಮಾಡಬಹುದು. ಬೇಕಿದ್ದರೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ನೇಮಿಸಬಹುದು ಎಂದೂ ಅವರು ಹೇಳಿದ್ದಾರೆ.
“ನಾವಿಬ್ಬರೂ ಒಂದೇ ಮೇಜಿನ ಎದುರು ಕುಳಿತು ಚರ್ಚೆ ನಡೆಸೋಣ. ಮಾಧ್ಯಮಗಳು ಮತ್ತು ದೇಶದ ಯುವಜನರು ಇರಲಿ. ನಿಮಗೆ ಯಾರನ್ನು ತೀರ್ಪುಗಾರರನ್ನಾಗಿ ನೇಮಿಸಬೇಕೆನಿಸುತ್ತದೆಯೋ ಅವರನ್ನು ಆಯ್ಕೆ ಮಾಡಿ. ಮೋಹನ್ ಭಾಗವತ್ ಅವರನ್ನೇ ಆ ಸ್ಥಾನದಲ್ಲಿ ಕೂರಿಸಿದರೂ ನನ್ನ ಅಭ್ಯಂತರವಿಲ್ಲ. ಬನ್ನಿ, ಚರ್ಚೆ ನಡೆಸೋಣ” ಎಂದು ರಾಹುಲ್ ಹೇಳಿದ್ದಾರೆ.
ಅಮೆರಿಕ ಒಪ್ಪಂದದಿಂದ ಅದಾನಿ ಪ್ರಕರಣದವರೆಗೆ ಚರ್ಚೆಗೆ ಆಹ್ವಾನ
ಚರ್ಚೆಯಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳನ್ನೂ ರಾಹುಲ್ ಪಟ್ಟಿ ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ಹಣಕಾಸು ರಚನೆ, ಅಮೆರಿಕದೊಂದಿಗಿನ ಒಪ್ಪಂದ, ಅದಾನಿ ಪ್ರಕರಣ ಹಾಗೂ ಜೆಫ್ರಿ ಎಪ್ಪಿನ್ ಪ್ರಕರಣಗಳ ಕುರಿತು ಚರ್ಚಿಸೋಣ ಎಂದು ಅವರು ಹೇಳಿದ್ದಾರೆ.
“ಅಮೆರಿಕದೊಂದಿಗಿನ ಒಪ್ಪಂದ ಹೇಗೆ ನಡೆಯಿತು? ಏಕೆ ನಡೆಯಿತು? ಅಷ್ಟು ತ್ವರಿತವಾಗಿ ಒಪ್ಪಂದ ಮಾಡಿಕೊಳ್ಳುವ ಅಗತ್ಯವೇನಿತ್ತು? ಈ ನಿರ್ಧಾರವನ್ನು ಪ್ರಧಾನಿ ಏಕೆ ಏಕಾಂಗಿಯಾಗಿ ತೆಗೆದುಕೊಂಡರು? ಸಂಪುಟಕ್ಕೆ ಏಕೆ ಮಾಹಿತಿ ನೀಡಲಿಲ್ಲ? ಅದಾನಿ ಪ್ರಕರಣವನ್ನು ಏಕೆ ಮುಚ್ಚಲಾಯಿತು? ಎಪ್ಪಿನ್ ಪ್ರಕರಣದ ಬಗ್ಗೆಯೂ ಚರ್ಚಿಸೋಣ. ದೇಶದ ಹಣಕಾಸು ವ್ಯವಸ್ಥೆ ಮತ್ತು ಅದರ ರಚನೆಯ ಬಗ್ಗೆಯೂ ಮಾತನಾಡೋಣ” ಎಂದು ರಾಹುಲ್ ಹೇಳಿದ್ದಾರೆ.
“ಧೈರ್ಯವಾಗಿ ಬನ್ನಿ, ಹೆದರಬೇಡಿ. ಚರ್ಚೆಯಿಂದ ಸತ್ಯ ಹೊರಬರಲಿ. ಸತ್ಯ ಮತ್ತು ಸುಳ್ಳು ಯಾವುದು ಎಂಬುದು ಸ್ಪಷ್ಟವಾಗಲಿ” ಎಂದು ಅವರು ಹೇಳಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗಳನ್ನೂ ಪ್ರಸ್ತಾಪಿಸಿರುವ ರಾಹುಲ್, ವಿದೇಶಿ ಸಂಪರ್ಕಗಳ ಕುರಿತ ತಮ್ಮ ಆರೋಪದ ಬಗ್ಗೆಯೂ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಪ್ರಧಾನಿಗೆ ಸವಾಲು ಹಾಕಿದ್ದಾರೆ.
“ನೀವು ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದೀರಿ. ಇತರ ವಿಷಯಗಳಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಿದ್ದೀರಿ. ಬಹುಶಃ ನನ್ನ ವಿರುದ್ಧ ಸುಮಾರು 45 ಮಾನನಷ್ಟ ಮೊಕದ್ದಮೆಗಳಿವೆ. ಆದರೆ, ವಿದೇಶಿ ಸಂಪರ್ಕಗಳ ಕುರಿತ ನನ್ನ ಆರೋಪದ ಬಗ್ಗೆ ಮಾತ್ರ ನೀವು ಮೊಕದ್ದಮೆ ದಾಖಲಿಸಿಲ್ಲ. ಧೈರ್ಯವಿದ್ದರೆ ಈ ವಿಚಾರದಲ್ಲೂ ಮೊಕದ್ದಮೆ ಹೂಡಿ. ಅದರ ಬಗ್ಗೆಯೂ ಮುಕ್ತ ಚರ್ಚೆ ನಡೆಸೋಣ” ಎಂದು ಹೇಳಿದ್ದಾರೆ.
ಚರ್ಚೆಯನ್ನು ಆದಷ್ಟು ಬೇಗ ನಡೆಸುವಂತೆ ಒತ್ತಾಯಿಸಿರುವ ರಾಹುಲ್, “ಹೆದರಬೇಡಿ, ಆದಷ್ಟು ಬೇಗ ಚರ್ಚೆ ನಡೆಸೋಣ” ಎಂದು ಹೇಳಿ ವೀಡಿಯೋ ಮುಕ್ತಾಯಗೊಳಿಸಿದ್ದಾರೆ. ಕೊನೆಯಲ್ಲಿ ಪ್ರಧಾನಿ ಮೋದಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ರಾಹುಲ್ಲೆ ರಿಜಿಜು ತಿರುಗೇಟು
ಪ್ರಧಾನಿ ಮೋದಿ ಅವರು ‘ವಿದೇಶಿ ನೆರವಿನಿಂದ’ ಪ್ರಧಾನಿಯಾದರು ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರವಾಗಿ ಟೀಕಿಸಿದ್ದಾರೆ. ರಿಜಿಜು ಅವರ ಟೀಕೆಯ ಕೆಲವೇ ಗಂಟೆಗಳ ಬಳಿಕ ರಾಹುಲ್ ಮತ್ತೆ ಮುಕ್ತ ಚರ್ಚೆಯ ಸವಾಲು ಹಾಕಿದ್ದಾರೆ.
ರಾಹುಲ್ ಅವರ ಹೇಳಿಕೆಗಳನ್ನು ಟೀಕಿಸಿರುವ ರಿಜಿಜು, ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡುವುದಕ್ಕೆ ಮತ್ತು ಪ್ರತ್ಯೇಕತಾವಾದಿಗಳು ಭಾರತೀಯ ಧ್ವಜ ಹಿಡಿಯುವುದಕ್ಕೆ ಹೋಲಿಕೆ ಮಾಡಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ” ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡುವುದು, ಪ್ರತ್ಯೇಕತಾವಾದಿಗಳು ಭಾರತೀಯ ಧ್ವಜ ಹಿಡಿಯುವುದು ಒಂದೇ ರೀತಿಯಾಗಿದೆ. ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸುವವರು ಅರಾಜಕತಾವಾದಿಗಳು. ಭಾರತದ ಶತ್ರುಗಳ ಕಾರ್ಯಸೂಚಿಯನ್ನು ಮುಂದಿಡುತ್ತಲೇ ಇತರರ ಮೇಲೆ ವಿದೇಶಿ ಬೆಂಬಲದ ಆರೋಪ ಮಾಡುವುದು ಹಾಸ್ಯಾಸ್ಪದ” ಎಂದು ಹೇಳಿದ್ದಾರೆ.
“ಉನ್ನತ ಮಟ್ಟದ ಚರ್ಚೆಗಳು ಪ್ರಬುದ್ಧ ವ್ಯಕ್ತಿಗಳ ನಡುವೆ ನಡೆಯುತ್ತವೆ” ಎಂದು ರಿಜಿಜು ರಾಹುಲ್ ಗೆ ತಿರುಗೇಟು ನೀಡಿದ್ದಾರೆ.
-
ಸ್ಥಳೀಯ8 hours agoKukke Subrahmanya-ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿ ಸಿಕ್ಕಿತು ಜೀವದಾನ..! ಸಾಯಲು ಹೋದವಳು ಬದುಕಿ ಬಂದ ವಿಚಿತ್ರ ಘಟನೆ..!
-
ಸ್ಥಳೀಯ13 hours agoKadaba-ಕಡಬ: ಆಟೋ ಬಾಡಿಗೆ ಹಣ ಕೇಳಿದ್ದಕ್ಕೆ ಚಾಲಕನ ಮೇಲೆ ಹಲ್ಲೆ
-
ರಾಜಕೀಯ14 hours agoAbdul Al-Sayeed-ಅಮೆರಿಕದ ಸೆನೆಟ್‌ಗೆ ಭಟ್ಕಳದ ಅಳಿಯ ಅಬ್ದುಲ್ ಅಲ್ ಸಯೀದ್ ಆಯ್ಕೆ..!
-
ಬಿಗ್ ನ್ಯೂಸ್14 hours agoGhee and butter price-ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ..! ತುಪ್ಪ, ಬೆಣ್ಣೆ ದರವೂ ಏರಿಕೆ
-
ಸ್ಥಳೀಯ8 hours agoFertilizer-ಸದ್ದಿಲ್ಲದೆ ರಸಗೊಬ್ಬರ ಧಾರಣೆ ಏರಿಕೆ – ಸ್ಟಾಕ್ ಖಾಲಿ : ಕೃಷಿಕರಿಗೆ ಶಾಕ್
-
ಶಿಕ್ಷಣ13 hours agoತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಕನಸುಗಳು 2026 ಕಾರ್ಯಕ್ರಮದಲ್ಲಿ ಹಲವಾರು ಪ್ರಶಸ್ತಿಗಳು
-
ಶಿಕ್ಷಣ13 hours agoVivekananda-ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕ್ರಾಸ್-ಕಂಟ್ರಿ ಸ್ಪರ್ಧೆಗೆ ಆಯ್ಕೆ
-
ಮಂಗಳೂರು16 hours ago
Mangalore LSD Drug Bus: ಬೆಂಗಳೂರು ಟು ಮಂಗಳೂರು ಡ್ರಗ್ಸ್ ನೆಟ್ವರ್ಕ್ ಪತ್ತೆ: 9 ಕೇಸ್ಗಳ ಆರೋಪಿ ಸಹಿತ ಇಬ್ಬರು ಅಂದರ್ ! ವಿದ್ಯಾರ್ಥಿಗಳೇ ಈ ಖದೀಮರ ಟಾರ್ಗೆಟ್


















