ಸ್ಥಳೀಯ
Arrested-ಬಿಸಿಲೆ ಘಾಟಿಯಲ್ಲಿ ಗರ್ಭಿಣಿ ಯುವತಿಯ ಕೊಲೆಗೆ ಯತ್ನ? ಹಲ್ಲೆ ನಡೆಸಿ ಚರಂಡಿಗೆ ಎಸೆದ ಪ್ರಿಯಕರ ಅರೆಸ್ಟ್
ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಗರ್ಭಿಣಿ ಯುವತಿಯೊಬ್ಬಳನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ ನಡೆಸಿ, ಮೃತಪಟ್ಟಿದ್ದಾಳೆಂದು ಭಾವಿಸಿ ಚರಂಡಿಗೆ ಎಸೆದು ಪರಾರಿಯಾದ ಘಟನೆ ನವೆಂಬರ್ 4ರಂದು ವರದಿಯಾಗಿದೆ.
ಕಡಬ: ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಗರ್ಭಿಣಿ ಯುವತಿಯೊಬ್ಬಳನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ ನಡೆಸಿ, ಮೃತಪಟ್ಟಿದ್ದಾಳೆಂದು ಭಾವಿಸಿ ಚರಂಡಿಗೆ ಎಸೆದು ಪರಾರಿಯಾದ ಘಟನೆ ನವೆಂಬರ್ 4ರಂದು ವರದಿಯಾಗಿದೆ.
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಯುವಕ ಹಾಗೂ ಕೊಂಬಾರು ಗ್ರಾಮದ ಯುವತಿಯ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ನವೆಂಬರ್ 4ರ ಸಂಜೆ ಇಬ್ಬರೂ ಬಿಸಿಲೆ ಘಾಟಿಗೆ ತೆರಳಿದ್ದರು. ಈ ವೇಳೆ ಯುವಕ ಯುವತಿಯ ಮೇಲೆ ಹಲ್ಲೆ ನಡೆಸಿ, ಆಕೆ ಪ್ರಜ್ಞೆ ತಪ್ಪಿದ ಬಳಿಕ ಮೃತಪಟ್ಟಿದ್ದಾಳೆಂದು ಭಾವಿಸಿ ಕಾಡಿನ ಮಧ್ಯೆ ಇರುವ ಚರಂಡಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಯುವತಿ ರಾತ್ರಿಯಿಡೀ ಕಾಡಿನ ನಡುವೆ ಚರಂಡಿಯಲ್ಲೇ ಕಳೆದಿದ್ದಾಳೆ. ಮರುದಿನ ಬೆಳಗ್ಗೆ ಅಲ್ಲಿಂದ ಹೊರಬಂದ ಯುವತಿ ಬಸ್ ಮೂಲಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು, ಆರೋಪಿ ಪ್ರಸಾದ್ ಎಂಬಾತನನ್ನು ನವೆಂಬರ್ 5ರಂದು ಸುಬ್ರಹ್ಮಣ್ಯದಲ್ಲಿನ ಆತ ಕೆಲಸ ಮಾಡುತ್ತಿದ್ದ ವಸತಿಗೃಹದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಯಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಯುವಕನಿಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯುವತಿಯೂ ಸುಬ್ರಹ್ಮಣ್ಯದಲ್ಲಿ ಖಾಸಗಿ ಉದ್ಯೋಗದಲ್ಲಿದ್ದಳು ಎನ್ನಲಾಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ದಕ್ಷಿಣ ಕನ್ನಡ
ಪುತ್ತೂರಿನಿಂದ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 8ರಂದು ದೀಪಾವಳಿ ಹಬ್ಬ – ನ. 9 ರಂದು ಸಾಮೂಹಿಕ ಗೋ ಪೂಜೆ

ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.8ರಂದು (ಭಾನುವಾರ) ರಾತ್ರಿ 7.30ಕ್ಕೆ ಶ್ರೀ ದೇವರ ಬಲಿ ಹೊರಕಾಣಿಕೆ ನಡೆಯಲಿದೆ. ಬಳಿಕ ನ.9ರಂದು (ಸೋಮವಾರ) ಸಂಜೆ 5 ಗಂಟೆಗೆ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ದೇವರ ಬಲಿ ಹೊರಕಾಣಿಕೆಯ ಬಳಿಕ ದೇವಸ್ಥಾನದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನ.9ರಂದು ನಡೆಯಲಿರುವ ಸಾಮೂಹಿಕ ಗೋಪೂಜೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಗೋವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಗೋಪೂಜೆಯ ಅಂಗವಾಗಿ ಅಂದು ಮಧ್ಯಾಹ್ನ 4.30ರಿಂದ ಗೋಶಾಲೆಯಲ್ಲಿ ಸಂಕಲ್ಪ ಹಾಗೂ ಪೂಜಾ ವಿಧಿವಿಧಾನಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಸಮಿತಿಯವರು ಮನವಿ ಮಾಡಿದ್ದಾರೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸನ್, ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಶಿಕ್ಷಣ
Vivekananda-ಅಂಚೆ ಇಲಾಖೆ ನಡೆಸಲ್ಪಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಿಗೆ ಬಹುಮಾನ
ಭಾರತೀಯ ಅಂಚೆ ಇಲಾಖೆ ಹಾಗೂ ಅಂಚೆ ಅಧೀಕ್ಷಕರ ಕಚೇರಿ, ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ “ಪ್ರಾಮಾಣಿಕತೆಯಿಂದ ಸಮೃದ್ಧಿ” ಎಂಬ ವಿಷಯದ ಕುರಿತು ನಡೆಸಲ್ಪಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಇವರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ದೀಪ್ತಿ ಕುಬಣುರಾಯ (ಸುಧಾಕರ ಕುಬಣುರಾಯ ಮತ್ತು ಸವಿತಾ ಸಾವಿತ್ರಿ ದಂಪತಿಗಳ ಪುತ್ರಿ ) ಇವರು ದ್ವಿತೀಯ ಬಹುಮಾನ ಹಾಗೂ ಕುಮಾರಿ ವೈಷ್ಣಿ ರೈ (ಜಗನ್ನಾಥ ಎಂ ಮತ್ತು ಸೀಮಾ ಜೆ ರೈ ದಂಪತಿಗಳ ಪುತ್ರಿ ) ಇವರು ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.
ಶಿಕ್ಷಣ
Narendra-ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ “ ವ್ಯವಹಾರ “ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಮಾರುಕಟ್ಟೆಯು ವಿವಿಧ ರೀತಿಯ ಉತ್ಪನ್ನಗಳು ಮತ್ತು ವ್ಯವಹಾರ ಕಲ್ಪನೆಗಳಿಂದ ತುಂಬಿರುವಾಗ, ಹೊಸತನವನ್ನು ಮಾಡಲು ಮತ್ತು ವಿಶಿಷ್ಟವಾದ ಮತ್ತು ಉತ್ತಮವಾದದ್ದನ್ನು ಮಾಡಲು ಯಾವಾಗಲೂ ಅವಕಾಶವಿರುತ್ತದೆ. ವ್ಯವಹಾರದ ಯಶಸ್ಸು ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ಅವಲಂಬಿಸಿರುತ್ತದೆ. ಅದ್ಭುತವಾದ ವ್ಯವಹಾರ ಕಲ್ಪನೆಯನ್ನು ಹೊಂದಿರುವುದು ಒಂದು ವಿಷಯ, ಆದರೆ ವ್ಯವಹಾರದ ಯಶಸ್ಸು ಕಲ್ಪನೆಯ ಕಾರ್ಯಗತಗೊಳಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಎಂದು ಪುತ್ತೂರಿನ ಉದ್ಯಮಿಗಳಾದ ಮತ್ತು ಮರಿಕೆ ಹೋಂ ಇಂಡಸ್ಟ್ರಿ ಇದರ ಮಾಲಕರಾದ ಸುಹಾಸ್ ಮರಿಕೆ ಇವರು ಹೇಳಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕರ‍್ಯಕ್ರಮ “ ವ್ಯವಹಾರ “ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯವಹಾರದ ಯಶಸ್ಸಿಗಾಗಿ ಮುಖ್ಯವಾದ ಅದರ ಸ್ವರೂಪದ ಬಗ್ಗೆ ವಿವರಿಸುತ್ತಾ, ಅವರು ಮಾತನಾಡಿದರು.
ವ್ಯವಹಾರದ ಯಶಸ್ಸಿಗೆ ಉತ್ತಮ ಯೋಜನೆ ಅಥವಾ ಕಾರ್ಯತಂತ್ರವನ್ನು ರೂಪಿಸುವುದು ಅತ್ಯಗತ್ಯ. ವ್ಯವಹಾರದ ಗುರಿಗಳು ಮತ್ತು ಉದ್ದೇಶಗಳು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳನ್ನು ವಿವರಿಸುವ ಸಮಗ್ರ ವ್ಯಾಪಾರ ಯೋಜನೆಯ ಬಗ್ಗೆ ತಿಳಿಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿ ಕೆಲವು ಸಲಹೆಗಳನ್ನು ನೀಡಿದರು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ‍್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಾನ್ವಿ ಸ್ವಾಗತಿಸಿ ವಂದಿಸಿದರು.
-
ಕ್ರೈಂ11 hours agoMurder case-ಬೆಂಗಳೂರಿನಲ್ಲಿ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ಕಾಡಿನಲ್ಲಿ 7 ವರ್ಷದ ಬಾಲಕನ ಮೃತದೇಹ ಪತ್ತೆ – ಉಳಿದವರಿಗಾಗಿ ಶೋಧ : ಬಾಲಕನಿಂದ ಮಹತ್ವದ ಸುಳಿವು : ಕೃತ್ಯಕ್ಕೆ ಆರೋಪಿಯ 17 ವರ್ಷದ ಮಗಳ ಸಾಥ್..!
-
ಕ್ರೈಂ13 hours agoBangalore-ಬೆಂಗಳೂರಿನಲ್ಲಿ ಭೀಕರ ಸಾಮೂಹಿಕ ಹತ್ಯೆ: ಪತ್ನಿ ಸಹಿತ ಕುಟುಂಬದ 7 ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಕೊಂದ ಕ್ಯಾಬ್ ಚಾಲಕ..!
-
ಮಂಗಳೂರು11 hours agoSoujanya Case-Big Breaking: ಸೌಜನ್ಯ ಪ್ರಕರಣ : ಸಂತೋಷ್ ರಾವೇ ನೈಜ ಆರೋಪಿ ಎಂದ ಬೆಂಗಳೂರಿನ ವಕೀಲ ಅಮೃತೇಶ್ ಎಸ್ಐಟಿ ಕಚೇರಿಗೆ – ದೂರು ದಾಖಲು..!
-
ನಿಧನ ವಾರ್ತೆ10 hours agoHormuz-ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ: ತಂದೆಯ ಹಾದಿಯಲ್ಲೇ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ಮಗ..!
-
ಬಿಗ್ ನ್ಯೂಸ್12 hours agoPuttur-Big Breaking : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನೇಮಕ ಆದೇಶ ಹಿಂಪಡೆದ ಸರ್ಕಾರ – ಎರಡು ದಿನದಲ್ಲಿ ಎರಡು ಆದೇಶ..!
-
ಅಪರಾಧ14 hours agoMangalore-ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಬಂಧನ; 3.8 ಕೆ.ಜಿ. ಗಾಂಜಾ, ಕಾರು ವಶಕ್ಕೆ
-
ಅಂತರ ರಾಜ್ಯ13 hours agoJnanesh Kumar-ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ಗೆ ಸಂಕಷ್ಟ: ಲಂಚ ಆರೋಪದ ತನಿಖೆಗೆ ಕೇರಳ ಸರಕಾರ ಅನುಮತಿ
-
Uncategorized6 hours agoPetrol-Big Breaking: ರಾಜ್ಯದಲ್ಲಿ ಪೆಟ್ರೋಲ್ ಗೆ ಶೇ.31.2 ಇಥನಾಲ್ ಮಿಶ್ರಣ ಪತ್ತೆ..! ಲ್ಯಾಬ್ ವರದಿಯಲ್ಲಿ ಆಘಾತಕಾರಿ ಅಂಶ ಬಯಲು..! ಗಂಭೀರ ಆರೋಪ ಮಾಡಿದ ಸಚಿವ ರಿಜ್ವಾನ್ – ಮೈಲೇಜ್ ಕಡಿತ ವಾಹನ ದುಸ್ಥಿತಿಗೆ ಇದೆ ಕಾರಣ.!


















