Connect with us

ಮಂಗಳೂರು

SIT-ಸೌಜನ್ಯ ಪ್ರಕರಣ: ನೂತನ ಎಸ್‌ಐಟಿ ಮುಖ್ಯಸ್ಥರ ಮುಂದೆ ಕುಟುಂಬಸ್ಥರ ಮಹತ್ವದ ಮಾಹಿತಿ..!

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೌಜನ್ಯ ಕುಟುಂಬಸ್ಥರು ನೂತನ ಎಸ್‌ಐಟಿ ಮುಖ್ಯಸ್ಥ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡಿದರು.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೌಜನ್ಯ ಕುಟುಂಬಸ್ಥರು ನೂತನ ಎಸ್‌ಐಟಿ ಮುಖ್ಯಸ್ಥ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡಿದರು.

Ad Widget

Ad Widget

Ad Widget alt="Ad Widget"/>

Ad Widget

ಸಾಮಾನ್ಯ ಭೇಟಿಗಾಗಿ ಕುಟುಂಬಸ್ಥರನ್ನು ಬರುವಂತೆ ಎಸ್‌ಐಟಿ ಅಧಿಕಾರಿಗಳು ಆಹ್ವಾನಿಸಿದ್ದು, ಅದರಂತೆ ಸೌಜನ್ಯ ಅವರ ತಾಯಿ ಕುಸುಮಾವತಿ, ಮಾವಂದಿರಾದ ಪುರಂದರ ಗೌಡ ಮತ್ತು ವಿಠಲ ಗೌಡ, ಸಂಬಂಧಿ ಜಗದೀಶ್ ಗೌಡ ಹಾಗೂ ಸಾಕ್ಷಿದಾರೆ ಯಶೋಧಾ ಅವರು ಭೇಟಿ ನೀಡಿದರು.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಕುಟುಂಬಸ್ಥರು ಪ್ರಕರಣದ ಕುರಿತು ನೂತನ ಎಸ್‌ಐಟಿ ಮುಖ್ಯಸ್ಥರೊಂದಿಗೆ ಚರ್ಚಿಸಿ, ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಂಡರು. ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಬಳಿಕ ಕುಟುಂಬಸ್ಥರು ಅಲ್ಲಿಂದ ವಾಪಸ್ಸಾದರು.



Ad Widget
Ad Widget
Click to comment

Leave a Reply

ಮಂಗಳೂರು

Mangalore LSD Drug Bus: ಬೆಂಗಳೂರು ಟು ಮಂಗಳೂರು ಡ್ರಗ್ಸ್ ನೆಟ್‌ವರ್ಕ್ ಪತ್ತೆ: 9 ಕೇಸ್‌ಗಳ ಆರೋಪಿ ಸಹಿತ ಇಬ್ಬರು ಅಂದರ್ ! ವಿದ್ಯಾರ್ಥಿಗಳೇ ಈ ಖದೀಮರ ಟಾರ್ಗೆಟ್

Published

on



Ad Widget

Ad Widget

Ad Widget

Ad Widget

Mangalore LSD Drug Bust: ಮಂಗಳೂರು: ಕರಾವಳಿ ಭಾಗದಲ್ಲಿ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ನಿಷೇಧಿತ LSD (Lysergic Acid Diethylamide) ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3 ಲಕ್ಷ ರೂ. ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು ನಗರದಿಂದ LSD ಮಾದಕವಸ್ತುಗಳನ್ನು ಖರೀದಿಸಿ ಮಂಗಳೂರಿಗೆ ತಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಮಧ್ಯಾಹ್ನ ಮಂಗಳೂರು ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬಂಧಿತರು ಯಾರು?

Ad Widget

Ad Widget <> Ad Widget

ಮಂಗಳೂರು ಅಳಪೆ, ಪಡೀಲ್‌ನ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30) ಹಾಗೂ ಉರ್ವಸ್ಟೋರ್‌ನ ದಡ್ಡಲಕಾಡ್ ನಿವಾಸಿ ಸಿದ್ದಾರ್ಥ ಶೆಟ್ಟಿ (35) ಬಂಧಿತ ಆರೋಪಿಗಳು.



Ad Widget

ಆರೋಪಿಗಳಿಂದ ಸುಮಾರು 3 ಲಕ್ಷ ರೂ. ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್‌ಗಳು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3.35 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

ಸಿದ್ದಾರ್ಥ ಶೆಟ್ಟಿ ವಿರುದ್ಧ 9 ಪ್ರಕರಣ!

ಬಂಧಿತ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ ವಿರುದ್ಧ ಈ ಹಿಂದೆ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು.

ಇನ್ನು ಸಿದ್ದಾರ್ಥ ಶೆಟ್ಟಿ ವಿರುದ್ಧ ಮಂಗಳೂರಿನ ಬರ್ಕೆ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಹಲವರ ಕೈವಾಡದ ಶಂಕೆ; ತನಿಖೆ ಮುಂದುವರಿಕೆ

ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದಲ್ಲಿ ಮಾದಕವಸ್ತು ಜಾಲದ ವಿರುದ್ಧ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಸೂಚನೆ: ಆರೋಪಿಗಳು ಎಂಬ ಉಲ್ಲೇಖವನ್ನು ತನಿಖಾ ಹಂತದ ಆರೋಪದ ಆಧಾರದಲ್ಲಿ ಬಳಸಲಾಗಿದೆ. ಅಪರಾಧ ಸಾಬೀತಾಗುವವರೆಗೆ ಆರೋಪಿಗಳು ನಿರಪರಾಧಿಗಳೆಂಬ ಕಾನೂನು ತತ್ವ ಅನ್ವಯಿಸುತ್ತದೆ.

Ad Widget
Continue Reading

ಮಂಗಳೂರು

Mangalore-ಮಂಗಳೂರು: ಬೈಕಂಪಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ: 16 ಗೋವುಗಳ ರಕ್ಷಣೆ, ಲಾರಿ ವಶಕ್ಕೆ

Published

on



Ad Widget

Ad Widget

Ad Widget

Ad Widget

ಮಂಗಳೂರು ನಗರದ ಬೈಕಂಪಾಡಿ ಸಮೀಪ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪಣಂಬೂರು ಪೊಲೀಸರು ತಡೆದು 16 ಗೋವುಗಳನ್ನು ರಕ್ಷಿಸಿದ್ದಾರೆ. ಬುಧವಾರ ಮುಂಜಾನೆ ಬಜರಂಗದಳದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಬೈಕಂಪಾಡಿ ಸಮೀಪ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪಣಂಬೂರು ಪೊಲೀಸರು ತಡೆದು 16 ಗೋವುಗಳನ್ನು ರಕ್ಷಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬುಧವಾರ ಮುಂಜಾನೆ ಬಜರಂಗದಳದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೈಕಂಪಾಡಿ ಪರಿಸರದಲ್ಲಿ KA-19-AB-2715 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

Ad Widget

Ad Widget <> Ad Widget

ತಕ್ಷಣ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ಲಾರಿಯಲ್ಲಿದ್ದ 16 ಗೋವುಗಳನ್ನು ರಕ್ಷಿಸಿದ್ದು, ವಾಹನವನ್ನು ವಶಕ್ಕೆ ಪಡೆದಿದ್ದಾರೆ.



Ad Widget

ಮಂಗಳೂರು ಸುತ್ತಮುತ್ತ ಅಕ್ರಮ ಗೋ ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Continue Reading

ಶಿಕ್ಷಣ

Mangalore-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾಟ

Published

on



Ad Widget

Ad Widget

Ad Widget

Ad Widget

ಕಬಡ್ಡಿ ಮಣ್ಣಿನ ಆಟ, ಆದರೆ ಕಾಲಕ್ಕೆ ತಕ್ಕಂತೆ ಪರಿವರ್ತನೆ ಹೊಂದಿ ಮ್ಯಾಟ್ ಅಂಕಣದಲ್ಲಿ ಆಡುವಂತಾಗಿದೆ, ನಿಯಮಗಳೂ ಬದಲಾಗಿದೆ. ಹೀಗಿದ್ದರೂ ಆಟದ ಗುಣಗಳು ಸಂಸ್ಕಾರಗಳು ಬದಲಾಗಿಲ್ಲ ಎಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸುಜಿತ್ ಕುಮಾರ್ ಕೊಟ್ಟಾರಿ ಹೇಳಿದರು.

Ad Widget

Ad Widget

Ad Widget

Ad Widget

ಪುತ್ತೂರು: ಕಬಡ್ಡಿ ಮಣ್ಣಿನ ಆಟ, ಆದರೆ ಕಾಲಕ್ಕೆ ತಕ್ಕಂತೆ ಪರಿವರ್ತನೆ ಹೊಂದಿ ಮ್ಯಾಟ್ ಅಂಕಣದಲ್ಲಿ ಆಡುವಂತಾಗಿದೆ, ನಿಯಮಗಳೂ ಬದಲಾಗಿದೆ. ಹೀಗಿದ್ದರೂ ಆಟದ ಗುಣಗಳು ಸಂಸ್ಕಾರಗಳು ಬದಲಾಗಿಲ್ಲ ಎಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸುಜಿತ್ ಕುಮಾರ್ ಕೊಟ್ಟಾರಿ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆಯುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತಾಡಿದರು. ಶಾರೀರಿಕ ಕ್ಷಮತೆ, ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಜಾಣತನ ಕಬಡ್ಡಿಗೆ ಆವಶ್ಯಕ. ಈ ಕ್ರೀಡೆಯಿಂದ ಪರಸ್ಪರ ಹೊಂದಾಣಿಕೆ, ಒಗ್ಗಟ್ಟು, ಮನೋಸ್ಥೈರ್ಯ ಮತ್ತು ನಾಯಕತ್ವ ಗುಣಗಳು ವೃದ್ದಿಸುತ್ತವೆ ಎಂದು ಹೇಳಿದರು. ಎದುರಾಳಿಗೆ ಗೌರವವನ್ನು ನೀಡುತ್ತಾ ಕ್ರೀಡಾಸ್ಪೂರ್ತಿಯಿಂದ ಆಟವನ್ನು ಆನಂದಿಸಿ. ಆಟದ ಸಮಯದಲ್ಲಿ ಗೆಲುವೊಂದೇ ಗುರಿಯಾಗಿರಲಿ ಎಂದರು.

Ad Widget

Ad Widget <> Ad Widget

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಶುಭ ಹಾರೈಸಿದರು.



Ad Widget

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಕ್ರೀಡಾ ಸಂಯೋಜಕ ಪ್ರೊ.ದಿನೇಶ್ ಪ್ರಸನ್ನ ವಂದಿಸಿದರು. ಮೂಲ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಅನುಪಮಾ.ಟಿ ಕಾರ್ಯಕ್ರಮ ನಿರ್ವಹಿಸಿದರು.

Ad Widget

Ad Widget

ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಮಹಿಳೆಯರ 7 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!