ದಕ್ಷಿಣ ಕನ್ನಡ
Puttur Piligobbu Season-4 :ಪುತ್ತೂರುದ ಪಿಲಿಗೊಬ್ಬು ಸೀಸನ್-4 ಯಶಸ್ಸಿಗೆ ಶ್ರಮಿಸಿದ ಸದಸ್ಯರಿಗೆ ಅಭಿನಂದನೆ

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆದ ‘ಪುತ್ತೂರುದ ಪಿಲಿಗೊಬ್ಬು ಸೀಸನ್-4’ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಸಂಸ್ಥೆಯ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವು ಪುತ್ತೂರಿನ ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸಹಜ್ ರೈ ಬಳಜ್ಜ ,ಪಿಲಿಗೊಬ್ಬು ಸೀಸನ್-4 ಕಾರ್ಯಕ್ರಮವು ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಲು ಸಂಸ್ಥೆಯ ಪ್ರತಿಯೊಬ್ಬ ಸದಸ್ಯರ ಸಂಘಟಿತ ಪ್ರಯತ್ನ, ಸಮರ್ಪಣಾ ಮನೋಭಾವ ಹಾಗೂ ನಿರಂತರ ಪರಿಶ್ರಮವೇ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಸದಸ್ಯರು ತೋರಿದ ಸಹಕಾರ ಮತ್ತು ಜವಾಬ್ದಾರಿಯುತ ಕಾರ್ಯನಿರ್ವಹಣೆ ಪ್ರಶಂಸನೀಯವಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ಒಗ್ಗಟ್ಟು ಹಾಗೂ ಉತ್ಸಾಹದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಶ್ರೀ ಸಹಜ್ ರೈ ಬಳಜ್ಜ, ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕೂರೇಲು ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ರತನ್ ರೈ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸದಸ್ಯರ ಸೇವೆ, ಸಹಕಾರ ಹಾಗೂ ಪರಿಶ್ರಮವನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ
Puttur Bjp Protest aganist Congress : ನ.2ರಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಣಕಹಳೆ! 33 ಕಡೆಗಳಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಜನಾಂದೋಲನ, ನ.19ಕ್ಕೆ ವಿಟ್ಲದಲ್ಲಿ ಸಮಾರೋಪ

ಪುತ್ತೂರು: ನ :1 :ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ನಡೆಸದಿರುವುದನ್ನು ಖಂಡಿಸಿ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಜನಾಂದೋಲನಕ್ಕೆ ಸಜ್ಜಾಗಿದೆ. ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಎಂಬ ಘೋಷವಾಕ್ಯದಡಿ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಎಂಬ ಹೆಸರಿನಲ್ಲಿ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನವೆಂಬರ್ 2ರಂದು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಜನಾಂದೋಲನಕ್ಕೆ ಚಾಲನೆ ದೊರೆಯಲಿದ್ದು, ನವೆಂಬರ್ 19ರಂದು ವಿಟ್ಲದಲ್ಲಿ ಸಮಾರೋಪ ನಡೆಯಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಳುವಾರಿನಿಂದ ಅಮರ್ ಜವಾನ್ ಜ್ಯೋತಿಯವರೆಗೆ ಪಾದಯಾತ್ರೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಸದರು, ಮಾಜಿ ಸಂಸದರು, ಬಿಜೆಪಿ ಜಿಲ್ಲಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.
33 ಕಡೆಗಳಲ್ಲಿ ಪ್ರತಿಭಟನೆ:
ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 31 ಗ್ರಾಮ ಪಂಚಾಯಿತಿಗಳು, ಒಂದು ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ಪ್ರತಿಭಟನೆ ಮತ್ತು ಜನಾಂದೋಲನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಮೂಲಕ ನಡೆಯುತ್ತಿರುವ ಆಡಳಿತದ ವಿರುದ್ಧ ಜನರ ಧ್ವನಿಯಾಗುವುದು ಈ ಹೋರಾಟದ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಪುತ್ತೂರಿಗೆ ಆಗಮಿಸಿ ಯಾವ ಸಭೆಗಳನ್ನು ನಡೆಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತಾಧಿಕಾರಿಗಳು ತಮಗೆ ವಹಿಸಿರುವ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಇದೆ. ಕಾಂಗ್ರೆಸ್ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಿಜವಾದ ವಿಶ್ವಾಸವಿದ್ದರೆ ತಕ್ಷಣ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದರು.
ಕೇಂದ್ರದ ಅನುದಾನ ಸ್ಥಗಿತಕ್ಕೆ ರಾಜ್ಯ ಸರ್ಕಾರವೇ ಹೊಣೆ!
ಸ್ಥಳೀಯಾಡಳಿತ ಚುನಾವಣೆಗಳನ್ನು ನಡೆಸದಿರುವುದರಿಂದ 16ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ಆಡಳಿತದ ವೈಫಲ್ಯ, ಸ್ಥಳೀಯ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಜನರ ಮುಂದಿಡುವ ಉದ್ದೇಶದಿಂದ ಈ ಹೋರಾಟ ರೂಪಿಸಲಾಗಿದೆ ಎಂದು ಮಠಂದೂರು ಹೇಳಿದರು.
ಚುನಾವಣೆಗೆ ಬಿಜೆಪಿ ಸಿದ್ಧ:
ಸ್ಥಳೀಯಾಡಳಿತ ಚುನಾವಣೆಗಳನ್ನು ಬಿಜೆಪಿ ಸಂತೋಷದಿಂದ ಸ್ವಾಗತಿಸುತ್ತದೆ. ಚುನಾವಣೆಯನ್ನು ಎದುರಿಸಲು ಪಕ್ಷಕ್ಕೆ ಯಾವುದೇ ಸಿದ್ಧತೆಯ ಕೊರತೆಯಿಲ್ಲ. ಬಿಜೆಪಿಯಲ್ಲಿ ಚುನಾವಣಾ ಅಭ್ಯರ್ಥಿಗಳು ಎಟಿಎಂ ಇದ್ದಂತೆ. ಮೊದಲೇ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ಗೆ ಪರೋಕ್ಷ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರು, ಶಿವಕುಮಾರ್, ಲೋಕೇಶ್ ಚಾಕೋಟೆ, ಶಶಿಧರ್ ನಾಯಕ್ ಹಾಗೂ ಮಹೇಶ್ ಕೇರಿ ಉಪಸ್ಥಿತರಿದ್ದರು.
ಪುತ್ತೂರು
ಗೋವಾ – ಕರ್ನಾಟಕ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಧಕರಿಗೆ ನೀಡುವ ‘ವೈದ್ಯಕೀಯ ಸೇವಾರತ್ನ ಪ್ರಶಸ್ತಿ – 2026’ ಪ್ರಶಸ್ತಿಗೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ಕಜೆ ಆಯ್ಕೆ
ಗೋವಾ – ಕರ್ನಾಟಕ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಧಕರಿಗೆ ನೀಡುವ ‘ವೈದ್ಯಕೀಯ ಸೇವಾರತ್ನ ಪ್ರಶಸ್ತಿ – 2026’ ಪ್ರಶಸ್ತಿಯನ್ನು ಪುತ್ತೂರಿನ ಪ್ರತಿಷ್ಠಿತ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ಕಜೆಯವರನ್ನು ಆಯ್ಕೆ ಮಾಡಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಮೂಲ್ಯ ಸೇವೆ, ರೋಗಿಗಳ ಆರೈಕೆಯಲ್ಲಿ, ತೋರುತ್ತಿರುವ ಕಾಳಜಿ ಹಾಗೂ ಸಮಾಜದ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಚೇತನ್ ಪ್ರಕಾಶ್ ಸಾಧನೆಯನ್ನು ಅಭಿನಂದಿಸುವ ನಿಟ್ಟಿನಲ್ಲಿ ಪ್ರಸ್ತುತಿ ಸಾಂಸ್ಕೃತಿಕ ಕಲಾಪರಿಷತ್ತು, ಗೋವಾ ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನೀಡಲಾಗುವ ವೈದ್ಯಕೀಯ ಸೇವಾರತ್ನ ಪ್ರಶಸ್ತಿ – 2026 ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಗೋವಾದ ವಾಸ್ಕೋ ಬೈನಾ ರವೀಂದ್ರ ಭವನದಲ್ಲಿ ನ.22ರಂದು ಭಾನುವಾರ ಮಧ್ಯಾಹ್ನ 2:30 ಗಂಟೆಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಚೇತನ್ ಪ್ರಕಾಶ್ ಅವರಿಗೆ ಇತ್ತೀಚೆಗೆ ಕನ್ನಡಪ್ರಭ ಸುವರ್ಣ ನ್ಯೂಸ್ ಆರೋಗ್ಯ ಸೇವಾ ವಿಭಾಗದಲ್ಲಿ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೂ ಭಾಜನವಾಗಿತ್ತು.
ಅಲರ್ಜಿ ಲ್ಯಾಬ್ ಎಂದೇ ಪ್ರಖ್ಯಾತಿ ಪಡೆದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿ ಇತ್ತೀಚೆಗೆ ತನ್ನ 11ನೇ ಶಾಖೆಯನ್ನು ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ತೆರೆಯುವ ಮೂಲಕ ಸಾಧನೆ ಮೆರೆದಿತ್ತು.
ರಾಜಕೀಯ
Ashok Rai-NIKHARA POLITICAL EXCLUSIVE: ಶಾಸಕ ಅಶೋಕ್ ರೈ ವಿರುದ್ಧ ತೊಡೆತಟ್ಟಿದ್ದ ಹಕೀಂ ಕೂರ್ನಡ್ಕ ಈಗ ದೋಸ್ತಿ?! ತೆರೆಮರೆಯಲ್ಲಿ ನಡೆದಿದ್ದೇನು ?
ಶಾಸಕ ಅಶೋಕ್ ರೈ ಅವರ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತಾ, ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಹಾಗೂ ಅಶೋಕ್ ರೈ ಅವರ ನಡುವಿನ ಮುನಿಸಿಗೆ ಕೊನೆಗೂ ತೆರೆ ಬಿದ್ದಿದೆಯೇ? ಇಬ್ಬರ ನಡುವೆ ರಾಜಿ ಸಂಧಾನ ನಡೆದಿದ್ದು, ಮತ್ತೆ ಒಂದಾಗುವ ಸೂಚನೆಗಳು ಕಾಣಿಸಿಕೊಂಡಿವೆ. ಈ ಕುರಿತು ನಿಖರ ನ್ಯೂಸ್‌ಗೆ Exclusive ಮಾಹಿತಿ ಲಭಿಸಿದೆ.
ಪುತ್ತೂರು: ಶಾಸಕ ಅಶೋಕ್ ರೈ ಅವರ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತಾ, ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಹಾಗೂ ಅಶೋಕ್ ರೈ ಅವರ ನಡುವಿನ ಮುನಿಸಿಗೆ ಕೊನೆಗೂ ತೆರೆ ಬಿದ್ದಿದೆಯೇ? ಇಬ್ಬರ ನಡುವೆ ರಾಜಿ ಸಂಧಾನ ನಡೆದಿದ್ದು, ಮತ್ತೆ ಒಂದಾಗುವ ಸೂಚನೆಗಳು ಕಾಣಿಸಿಕೊಂಡಿವೆ. ಈ ಕುರಿತು ನಿಖರ ನ್ಯೂಸ್‌ಗೆ Exclusive ಮಾಹಿತಿ ಲಭಿಸಿದೆ.

ಕಾಂಗ್ರೆಸ್‌ನ ಮೂಲ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಹಕೀಂ ಕೂರ್ನಡ್ಕ, ಒಂದು ಕಾಲದಲ್ಲಿ ಅಶೋಕ್ ರೈ ಅವರ ಬೆಂಬಲಿಗರಾಗಿದ್ದರು ಎನ್ನಲಾಗಿದೆ . ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕ್ ರೈ ಪರವಾಗಿ ಕೆಲಸ ಮಾಡಿದ್ದಾಗಿ ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ, ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ಬಳಿಕ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು.

ಶಾಸಕರಾಗಿ ಒಂದು ವರ್ಷ ಕಳೆಯುವಷ್ಟರಲ್ಲಿ ಇಬ್ಬರ ನಡುವಿನ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಹಕೀಂ ಕೂರ್ನಡ್ಕ ಅವರು ಅಶೋಕ್ ರೈ ಅವರ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅಶೋಕ್ ರೈಯವರನ್ನು ಟೀಕಿಸಲು ಬಿಜೆಪಿ ಹಾಗೂ ಪುತ್ತಿಲ ಪರಿವಾರದವರು ಹಿಂದೇಟು ಹಾಕುತ್ತಿದ್ದರು . ಆ ಕಾಲದಲ್ಲಿ ಅಶೋಕ್ ರೈ ವಿರೋಧಿಗಳ ಪಾಲಿಗೆ ಹಕೀಂ ಕೂರ್ನಡ್ಕ “ಓಯಸೀಸ್” ನಂತೆ ಗೋಚರಿಸಿದ್ದರು.

ಆಗ ಹಕೀಂ ಅವರು ಶಾಸಕರ ಕಾರ್ಯವೈಖರಿಯನ್ನು ಪ್ರಶ್ನಿಸಿ ಮಾಧ್ಯಮ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ವಾಯ್ಸ್ ಮೆಸೇಜ್‌ಗಳು ಹಾಗೂ ವಿವಿಧ ಆರೋಪಗಳ ಮೂಲಕ ನಿರಂತರ ವಾಗ್ದಾಳಿ ನಡೆಸುತ್ತಿದ್ದರು. ಅಶೋಕ್ ರೈ ಅವರನ್ನು” ಆರ್‌ಎಸ್‌ಎಸ್ ಬೆಂಬಲಿಗ” ಹಾಗೂ “ಮುಸ್ಲಿಂ ವಿರೋಧಿ” ಎಂಬಂತೆ ಬಿಂಬಿಸುವ ಪ್ರಯತ್ನವನ್ನೂ ತಮ್ಮ ಹೇಳಿಕೆಗಳಲ್ಲಿ ಮಾಡುತ್ತಿದ್ದರು.
ಯು.ಟಿ ಖಾದರ್ ಮಧ್ಯಸ್ಥಿಕೆಯಲ್ಲಿ ಈ ಹಿಂದೆಯೂ ಸಂಧಾನ:
ಈ ನಡುವೆ ಹಕೀಂ ಕೂರ್ನಡ್ಕ ಹಾಗೂ ಸಚಿವ ಯು.ಟಿ ಖಾದರ್ ಅವರ ನಡುವೆ ಆತ್ಮೀಯ ಒಡನಾಟವಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ, ಸುಮಾರು ಒಂದೂವರೆ ವರ್ಷದ ಹಿಂದೆ ಇಬ್ಬರ ನಡುವಿನ ಸಂಘರ್ಷ ತಾರಕಕ್ಕೇರಿದ್ದ ಸಂದರ್ಭದಲ್ಲಿ ಕೂರ್ನಡ್ಕ ಮಸೀದಿಗೆ ಭೇಟಿ ನೀಡಿದ್ದ ಖಾದರ್, ಅಶೋಕ್ ರೈ ಹಾಗೂ ಹಕೀಂ ಕೂರ್ನಡ್ಕ ಅವರ ನಡುವೆ ಹಸ್ತಲಾಘವ ಮಾಡಿಸಿ ಸಂಧಾನಕ್ಕೆ ಮುಂದಾಗಿದ್ದರು. ಆ ಬಳಿಕ ಸುಮಾರು ಒಂದು ವರ್ಷದವರೆಗೆ ಹಕೀಂ ಅವರು ಅಶೋಕ್ ರೈ ವಿರುದ್ಧ ಯಾವುದೇ ಬಹಿರಂಗ ಟೀಕೆಗಳನ್ನು ಮಾಡಿರಲಿಲ್ಲ.
ಆದರೆ, ಈ ಮೌನ ಹೆಚ್ಚು ಕಾಲ ಮುಂದುವರಿಯಲಿಲ್ಲ. ಮತ್ತೆ ತಮ್ಮ ಟೀಕಾ ಪ್ರವೃತ್ತಿಯನ್ನು ಆರಂಭಿಸಿದ ಹಕೀಂ, ಪತ್ರಿಕಾಗೋಷ್ಠಿ ಹಾಗೂ ಸಾಮಾಜಿಕ ಜಾಲತಾಣಗಳ ವಾಯ್ಸ್ ಮೆಸೇಜ್‌ಗಳ ಮೂಲಕ ಶಾಸಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದರು.
ಪ್ರೆಸ್ ಕ್ಲಬ್ ಎದುರಿನ ಗಲಾಟೆ ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು
ತಿಂಗಳ ಹಿಂದೆ ಪುತ್ತೂರು ಪ್ರೆಸ್ ಕ್ಲಬ್ ಮುಂಭಾಗ ಹಕೀಂ ಕೂರ್ನಡ್ಕ ಹಾಗೂ ಅಶೋಕ್ ರೈ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಘಟನೆಗೆ ಸಂಬಂಧಿಸಿದಂತೆ ಅಶೋಕ್ ರೈ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಕೀಂ ಕೂರ್ನಡ್ಕ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣವೂ ದಾಖಲಾಗಿತ್ತು. ಅಷ್ಟೇ ಅಲ್ಲದೆ, ತಮ್ಮನ್ನು ಕೊಲ್ಲಿಸುವ ಉದ್ದೇಶದಿಂದಲೇ ಅಶೋಕ್ ರೈ ಅವರು ಬೆಂಬಲಿಗರನ್ನು ಪ್ರೆಸ್ ಕ್ಲಬ್ ಬಳಿ ಕಳುಹಿಸಿದ್ದರು ಎಂಬ ಗಂಭೀರ ಆರೋಪವನ್ನೂ ಹಕೀಂ ಮಾಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಕೂಡ ಹಕೀಂ ಅವರ ಬೆಂಬಲಕ್ಕೆ ಪರೋಕ್ಷವಾಗಿ ನಿಂತಿತ್ತು.
ನಿರೀಕ್ಷಣಾ ಮಂದಿರದಲ್ಲಿ ಒಂದೂವರೆ ಗಂಟೆ ಮಾತುಕತೆ!
ಇಷ್ಟೆಲ್ಲ ರಾಜಕೀಯ ಸಂಘರ್ಷಗಳ ನಡುವೆಯೇ ಇದೀಗ ಇಬ್ಬರ ನಡುವೆ ಸಂಧಾನದ ಮಾತುಗಳು ಕೇಳಿಬರುತ್ತಿವೆ. ಪುತ್ತೂರಿನ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಮಧ್ಯಸ್ಥಿಕೆಯಲ್ಲಿ ಅಶೋಕ್ ರೈ ಹಾಗೂ ಹಕೀಂ ಕೂರ್ನಡ್ಕ ನಡುವೆ ರಾಜಿ ಮಾತುಕತೆ ನಡೆದಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.

ಪಕ್ಷದ ಮೂಲಗಳು ನಿಖರ ನ್ಯೂಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಶನಿವಾರ ಪುತ್ತೂರಿನ ನಿರೀಕ್ಷಣಾ ಮಂದಿರದಲ್ಲಿ ಅಶೋಕ್ ರೈ ಹಾಗೂ ಹಕೀಂ ಕೂರ್ನಡ್ಕ. ಮುಚ್ಚಿದ ಕೋಣೆಯೊಳಗೆ ಇಬ್ಬರೇ ಕೂತು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ ಈ ವೇಳೆ, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಕೂರ್ನಡ್ಕ ಪ್ರೀಮಿಯರ್ ಲೀಗ್‌ಗೆ ಅಶೋಕ್ ರೈ ಆಹ್ವಾನ!
ಇಬ್ಬರ ನಡುವಿನ ಸಂಬಂಧ ಸುಧಾರಿಸಿರುವುದಕ್ಕೆ ಮತ್ತೊಂದು ಬೆಳವಣಿಗೆಯೂ ಸಾಕ್ಷಿಯಾಗಿದೆ. ಹಕೀಂ ಕೂರ್ನಡ್ಕ ಪ್ರತಿವರ್ಷ ಆಯೋಜಿಸುವ ‘ಕೂರ್ನಡ್ಕ ಪ್ರೀಮಿಯರ್ ಲೀಗ್ – ನಾಡ ಹಬ್ಬ‘ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಸಚಿವ ಯುಟಿ ಖಾದರ್ ಅವರೊಂದಿಗೆ ಶಾಸಕ ಅಶೋಕ್ ರೈ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇಂದು (ಶನಿವಾರ) ಪುತ್ತೂರು ಶಾಸಕರ ಕಚೇರಿಗೆ ಭೇಟಿ ನೀಡಿದ ಹಕೀಂ ಕೂರ್ನಡ್ಕ, ಅಶೋಕ್ ರೈ ಅವರನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಈ ಬೆಳವಣಿಗೆ ಇಬ್ಬರ ನಡುವಿನ ಹಿಂದಿನ ಕಹಿ ಘಟನೆಗಳನ್ನು ಮರೆತು ಮತ್ತೆ ಸೌಹಾರ್ದ ಸಂಬಂಧ ಬೆಳೆಸುವ ಪ್ರಯತ್ನ ನಡೆಯುತ್ತಿರುವುದರ ಸ್ಪಷ್ಟ ಸೂಚನೆಯಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ, ನಿರಂತರ ಟೀಕೆ, ಆರೋಪ-ಪ್ರತ್ಯಾರೋಪ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ರಾಜಕೀಯ ಸಂಘರ್ಷಕ್ಕೆ ಈಗ ಸಂಧಾನದ ಮೂಲಕ ವಿರಾಮ ಸಿಗಲಿದೆಯೇ ಎಂಬ ಕುತೂಹಲ ಪುತ್ತೂರಿನ ಕಾಂಗ್ರೆಸ್ ವಲಯದಲ್ಲಿ ಮೂಡಿದೆ. ಈ ಸಂಧಾನ ಎಷ್ಟು ಕಾಲ ಮುಂದುವರಿಯಲಿದೆ? ಹಕೀಂ ಕೂರ್ನಡ್ಕ ಅವರು ಇನ್ನು ಮುಂದೆ ಅಶೋಕ್ ರೈ ವಿರುದ್ಧದ ಟೀಕಾಸ್ತ್ರಗಳನ್ನು ಕೆಳಗಿಡಲಿದ್ದಾರೆಯೇ? ಅಥವಾ ಇದು ತಾತ್ಕಾಲಿಕ ರಾಜಕೀಯ ಕದನ ವಿರಾಮವೇ? ಎಂಬುದನ್ನು ಕಾದು ನೋಡಬೇಕಿದೆ.
-
ರಾಜಕೀಯ22 hours agoAshok Rai-NIKHARA POLITICAL EXCLUSIVE: ಶಾಸಕ ಅಶೋಕ್ ರೈ ವಿರುದ್ಧ ತೊಡೆತಟ್ಟಿದ್ದ ಹಕೀಂ ಕೂರ್ನಡ್ಕ ಈಗ ದೋಸ್ತಿ?! ತೆರೆಮರೆಯಲ್ಲಿ ನಡೆದಿದ್ದೇನು ?
-
ಬಿಗ್ ನ್ಯೂಸ್23 hours agoPuttur-ಪುತ್ತೂರಿಗರಿಗೆ ಭರ್ಜರಿ ಗುಡ್ ನ್ಯೂಸ್: ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ನಿಲುಗಡೆಗೆ ಅಧಿಕೃತ ಆದೇಶ
-
ಅಂತರ ರಾಜ್ಯ22 hours agoJammu-Kashmir CM-ಮತ್ತೆ ಹಸೆಮಣೆ ಏರಿದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..! ಪತ್ರಕರ್ತೆ ನಿಧಿ ರಜ್ದಾನ್ ಜೊತೆ ಹೊಸ ಜೀವನ ಆರಂಭ
-
ಕಾರ್ಯಕ್ರಮಗಳು23 hours agoRajyotsava award-ಪುತ್ತೂರು: ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: ಪತ್ರಕರ್ತರಾದ ಶಶಿಧರ್ ರೈ ಎಸ್ ಹಾಗೂ ಸೇಷಪ್ಪ ಕಜೆಮಾರ್ ಗೆ ಒಲಿದ ಪ್ರಶಸ್ತಿ
-
ಸ್ಥಳೀಯ24 hours agoSoujanya case-ಸೌಜನ್ಯ ಪ್ರಕರಣ: ಎಸ್ಐಟಿಯಿಂದ ‘ಕ್ರೈಂ ಸೀನ್ ರೀ-ಕ್ರಿಯೇಷನ್’; ಮಣ್ಣಸಂಕದಲ್ಲಿ 5 ಗಂಟೆಗಳ ಕಾಲ ಪರಿಶೀಲನೆ, ಮಣ್ಣಿನ ಮಾದರಿ ಸಂಗ್ರಹ
-
ಮಂಗಳೂರು23 hours agoPrakash Raj-ಮಂಗಳೂರು : ಕರ್ನಾಟಕದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರಿದ್ದಾರೆ ಎಂದವರೇ, ಆ ಜನ ಎಲ್ಲಿದ್ದಾರೆ ತೋರಿಸಿ..! ನಟ ಪ್ರಕಾಶ್ ರಾಜ್
-
ಶಿಕ್ಷಣ23 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ 2026
-
ದಕ್ಷಿಣ ಕನ್ನಡ3 hours ago
Puttur Bjp Protest aganist Congress : ನ.2ರಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಣಕಹಳೆ! 33 ಕಡೆಗಳಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಜನಾಂದೋಲನ, ನ.19ಕ್ಕೆ ವಿಟ್ಲದಲ್ಲಿ ಸಮಾರೋಪ


















