Connect with us

ಬಿಗ್ ನ್ಯೂಸ್

Puttur-ಪುತ್ತೂರಿಗರಿಗೆ ಭರ್ಜರಿ ಗುಡ್ ನ್ಯೂಸ್: ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ನಿಲುಗಡೆಗೆ ಅಧಿಕೃತ ಆದೇಶ

Published

on



Ad Widget

Ad Widget

Ad Widget

Ad Widget

ಪುತ್ತೂರಿಗರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸಲಿರುವ ನೂತನ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (26655/26656) ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ಕಲ್ಪಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ನೂತನ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿಗರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸಲಿರುವ ನೂತನ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (26655/26656) ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ಕಲ್ಪಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ನೂತನ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಹಿಂದೆ ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲನ್ನು ಇದೀಗ ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಪುತ್ತೂರು ಭಾಗದ ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಮಂಗಳೂರು ಜಂಕ್ಷನ್‌ಗೆ ಹೋಗುವ ಅಗತ್ಯವಿಲ್ಲ. ಕಬಕ ಪುತ್ತೂರು ನಿಲ್ದಾಣದಿಂದಲೇ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.
ರೈಲಿನ ವೇಳಾಪಟ್ಟಿ ಹೀಗಿದೆ

Ad Widget

Ad Widget <> Ad Widget

26655 ಯಶವಂತಪುರ–ಮಡಗಾಂವ್ ವಂದೇ ಭಾರತ್
ನಿಲ್ದಾಣ ಆಗಮನ / ನಿರ್ಗಮನ
ಯಶವಂತಪುರ ಬೆಳಗ್ಗೆ 7:35 ನಿರ್ಗಮನ
ಶ್ರವಣಬೆಳಗೊಳ 9:03
ಹಾಸನ 9:38 / 9:40
ಸಕಲೇಶಪುರ 10:20 / 10:22
ಸುಬ್ರಹ್ಮಣ್ಯ ರೋಡ್ 12:40 / 12:42
ಕಬಕ ಪುತ್ತೂರು 1:25 / 1:27
ಮಂಗಳೂರು ಜಂಕ್ಷನ್ 3:05 / 3:15
ಉಡುಪಿ 4:20 / 4:22
ಕುಂದಾಪುರ 4:38 / 4:40
ಮೂಕಾಂಬಿಕಾ ರೋಡ್ ಬೈಂದೂರು 5:20 / 5:22
ಮುರ್ಡೇಶ್ವರ 6:00 / 6:02
ಗೋಕರ್ಣ ರೋಡ್ 7:00 / 7:02
ಕಾರವಾರ 7:45 / 7:47
ಮಡಗಾಂವ್ ರಾತ್ರಿ 8:55 ಆಗಮನ



Ad Widget

26656 ಮಡಗಾಂವ್–ಯಶವಂತಪುರ ವಂದೇ ಭಾರತ್
ನಿಲ್ದಾಣ ಆಗಮನ / ನಿರ್ಗಮನ
ಮಡಗಾಂವ್ ಬೆಳಗ್ಗೆ 8:20 ನಿರ್ಗಮನ
ಕಾರವಾರ 9:03 / 9:05
ಗೋಕರ್ಣ ರೋಡ್ 9:48 / 9:50
ಮುರ್ಡೇಶ್ವರ 11:00 / 11:02
ಮೂಕಾಂಬಿಕಾ ರೋಡ್ ಬೈಂದೂರು 11:20 / 11:22
ಕುಂದಾಪುರ 11:48
ಉಡುಪಿ 12:18 / 12:20
ಮಂಗಳೂರು ಜಂಕ್ಷನ್ 1:50 / 2:00
ಕಬಕ ಪುತ್ತೂರು 2:43 / 2:45
ಸುಬ್ರಹ್ಮಣ್ಯ ರೋಡ್ 3:28 / 3:30
ಸಕಲೇಶಪುರ 5:30 / 5:32
ಹಾಸನ 6:13 / 6:15
ಶ್ರವಣಬೆಳಗೊಳ 6:43 / 6:45
ಯಶವಂತಪುರ ರಾತ್ರಿ 9:15 ಆಗಮನ

Ad Widget

Ad Widget

ನವೆಂಬರ್ ಮೂರನೇ ವಾರದಲ್ಲಿ ಚಾಲನೆ ಸಾಧ್ಯತೆ
ವಿಸ್ತರಿತ ವಂದೇ ಭಾರತ್ ರೈಲು ಸೇವೆಗೆ ನವೆಂಬರ್ ಮೂರನೇ ವಾರದೊಳಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಭರವಸೆ ನೀಡಿದ್ದಾರೆ. ಸಚಿವರು ಮಂಗಳೂರಿಗೆ ಆಗಮಿಸಿ ಸೇವೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.

ಬುಧವಾರ ನವದೆಹಲಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೆ ಸಚಿವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದರು.

ಸಂಸದರ ನಿರಂತರ ಪ್ರಯತ್ನಕ್ಕೆ ಫಲ
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಪ್ರಯತ್ನದಿಂದ ರೈಲು ವಿಸ್ತರಣೆ ಹಾಗೂ ಕಬಕ ಪುತ್ತೂರು ನಿಲುಗಡೆ ಸಾಧ್ಯವಾಗಿದೆ.

ಸಂಸದರು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದು, ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ತರುವ ಪ್ರಯತ್ನದಲ್ಲಿ ಅವರ ಪಾತ್ರವನ್ನೂ ಶ್ಲಾಘಿಸಿದ್ದಾರೆ.

ಮಂಗಳೂರು ಸೆಂಟ್ರಲ್ ವಂದೇ ಭಾರತ್ ಸೇವೆ ಸ್ಥಗಿತ
ಹೊಸ ರೈಲು ಸೇವೆ ಆರಂಭವಾಗುವುದರೊಂದಿಗೆ 20645/20646 ಸಂಖ್ಯೆಯ ಮಡಗಾಂವ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೆ ಸಚಿವಾಲಯ ಆದೇಶಿಸಿದೆ. ಹೊಸ ಸೇವೆಯನ್ನು ಅನುಕೂಲಕರ ದಿನಾಂಕದಿಂದ ಆರಂಭಿಸುವಂತೆ ಸಂಬಂಧಪಟ್ಟ ರೈಲ್ವೆ ವಲಯಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಉದ್ಘಾಟನಾ ರೈಲನ್ನು ವಿಶೇಷ ಸೇವೆಯಾಗಿ ಓಡಿಸಿ, ಬಳಿಕ ನಿಯಮಿತ ವೇಳಾಪಟ್ಟಿಗೆ ಸೇರಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಪಂಚಗಂಗಾ ಎಕ್ಸ್‌ಪ್ರೆಸ್‌ನ ರಾತ್ರಿ ಪ್ರಯಾಣದ ದಟ್ಟಣೆಗೆ ಪರ್ಯಾಯವಾಗಿ ಬೆಳಗಿನ ವೇಳೆಯಲ್ಲಿ ಕರಾವಳಿ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ಪುತ್ತೂರು ಭಾಗದ ಜನರಿಗೆ ವಂದೇ ಭಾರತ್ ರೈಲು ವೇಗದ ಹಾಗೂ ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.

Ad Widget
Click to comment

Leave a Reply

ಅಂತರ ರಾಜ್ಯ

Jammu-Kashmir CM-ಮತ್ತೆ ಹಸೆಮಣೆ ಏರಿದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..! ಪತ್ರಕರ್ತೆ ನಿಧಿ ರಜ್ದಾನ್ ಜೊತೆ ಹೊಸ ಜೀವನ ಆರಂಭ

Published

on



Ad Widget

Ad Widget

Ad Widget

Ad Widget

ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎರಡನೇ ವಿವಾಹವಾಗಿದ್ದಾರೆ. 1994ರ ಸೆಪ್ಟೆಂಬರ್ 1ರಂದು ಪಾಯಲ್ ಅಬ್ದುಲ್ಲಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ.

Ad Widget

Ad Widget

Ad Widget

Ad Widget

ಜೆ.ಕೆ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎರಡನೇ ವಿವಾಹವಾಗಿದ್ದಾರೆ. 1994ರ ಸೆಪ್ಟೆಂಬರ್ 1ರಂದು ಪಾಯಲ್ ಅಬ್ದುಲ್ಲಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

2009ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು
2026ರ ಜುಲೈ 31ರಂದು ಸುಪ್ರೀಂ ಕೋರ್ಟ್‌ನಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಲಾಯಿತು.

Ad Widget

Ad Widget <> Ad Widget

ನಿಧಿ ರಜ್ದಾನ್ ಯಾರು?
ಅವರು NDTVಯ ಮಾಜಿ ಹಿರಿಯ ಪತ್ರಕರ್ತೆ ಮತ್ತು ನಿರೂಪಕಿ.



Ad Widget

ಅಕ್ಟೋಬರ್ 30, 2026 ರಂದು ಖಾಸಗಿ ಸಮಾರಂಭದಲ್ಲಿ ಇವರ ವಿವಾಹ ನಡೆದಿದ್ದು, ಅಕ್ಟೋಬರ್ 31 ರಂದು ಒಮರ್ ಅಬ್ದುಲ್ಲಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

Ad Widget

Ad Widget

ಒಮರ್ ಅಬ್ದುಲ್ಲಾ ಅವರು ತಮ್ಮ ಮೊದಲ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಹಲವು ವರ್ಷಗಳ ಕಾನೂನಿನ ಹೋರಾಟದ ನಂತರ ಜುಲೈ 31, 2026 ರಂದು ಸುಪ್ರೀಂ ಕೋರ್ಟ್‌ನಿಂದ ವಿಚ್ಛೇದನ ಪಡೆದಿದ್ದರು.

“A new journey began yesterday” ಎಂಬ ಸಂದೇಶದೊಂದಿಗೆ ನಿಧಿ ರಾಜ್ದಾನ್ ಅವರನ್ನು ಟ್ಯಾಗ್ ಮಾಡಿ ಫೋಟೋವನ್ನು ಹಂಚಿಕೊಂಡಿದ್ದಾರೆ.

Ad Widget
Continue Reading

ಸ್ಥಳೀಯ

Soujanya case-ಸೌಜನ್ಯ ಪ್ರಕರಣ: ಎಸ್‌ಐಟಿಯಿಂದ ‘ಕ್ರೈಂ ಸೀನ್ ರೀ-ಕ್ರಿಯೇಷನ್’; ಮಣ್ಣಸಂಕದಲ್ಲಿ 5 ಗಂಟೆಗಳ ಕಾಲ ಪರಿಶೀಲನೆ, ಮಣ್ಣಿನ ಮಾದರಿ ಸಂಗ್ರಹ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದ್ದು, ಶನಿವಾರ ಧರ್ಮಸ್ಥಳದ ಮಣ್ಣಸಂಕದಲ್ಲಿ ಸುಮಾರು ಐದು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿದೆ. ಈ ವೇಳೆ ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಂ ಸೀನ್ ರೀ-ಕ್ರಿಯೇಷನ್) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದ್ದು, ಶನಿವಾರ ಧರ್ಮಸ್ಥಳದ ಮಣ್ಣಸಂಕದಲ್ಲಿ ಸುಮಾರು ಐದು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿದೆ. ಈ ವೇಳೆ ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಂ ಸೀನ್ ರೀ-ಕ್ರಿಯೇಷನ್) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

2012ರ ಅಕ್ಟೋಬರ್ 9ರಂದು ನಾಪತ್ತೆಯಾಗಿದ್ದ 17 ವರ್ಷದ ಸೌಜನ್ಯ ಅವರ ಮೃತದೇಹ ಮರುದಿನ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಮಣ್ಣಸಂಕದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೀಗ ಮರುತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಅಂದು ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದ್ದಾರೆ.

Ad Widget

Ad Widget <> Ad Widget

ಎಸ್‌ಐಟಿ ತನಿಖಾಧಿಕಾರಿ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ಹಾಗೂ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು, ಸೀನ್ ಆಫ್ ಕ್ರೈಂ ಆಫೀಸರ್ಸ್ (ಎಸ್‌ಒಸಿಒ) ತಂಡ, ಸರ್ಕಾರಿ ವೈದ್ಯರು, ಸ್ಥಳೀಯ ಗ್ರಾಮ ಆಡಳಿತಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.



Ad Widget

ಪರಿಶೀಲನೆ ವೇಳೆ ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳದಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಸ್‌ಒಸಿಒ ಮತ್ತು ಎಫ್‌ಎಸ್‌ಎಲ್ ತಂಡಗಳು ವೈಜ್ಞಾನಿಕ ಪರೀಕ್ಷೆಗಾಗಿ ಅಗತ್ಯ ಮಾದರಿಗಳನ್ನು ಸಂಗ್ರಹಿಸಿವೆ.

Ad Widget

Ad Widget

ಸ್ಥಳ ಮರುಸೃಷ್ಟಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ, 2012ರಲ್ಲಿ ಸೌಜನ್ಯ ಅವರ ಮೃತದೇಹ ಪತ್ತೆಯಾದ ಬಳಿಕ ಪೊಲೀಸರಿಗೆ ಮೊದಲ ಮಾಹಿತಿ ನೀಡಿದ್ದ ಅವರ ಮಾವ ಪುರಂದರ ಗೌಡ ಹಾಗೂ ಅಂದಿನ ಸ್ಥಳ ಮಹಜರಿನ ಪಂಚರು ಸ್ಥಳದಲ್ಲಿದ್ದರು. ಅವರು ಅಂದಿನ ಪರಿಸ್ಥಿತಿ ಮತ್ತು ಘಟನೆಗೆ ಸಂಬಂಧಿಸಿದ ವಿವರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತಂಡಕ್ಕೆ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವ ಗಡುವು ಇದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಸಾಕ್ಷ್ಯಾಧಾರಗಳ ಮರುಪರಿಶೀಲನೆ, ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಆದ್ಯತೆ ನೀಡಿದೆ.

ಐದು ಗಂಟೆಗಳ ಸುದೀರ್ಘ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ಸ್ಥಳದಿಂದ ತೆರಳಿದ್ದು, ಸಂಗ್ರಹಿಸಲಾದ ಮಣ್ಣಿನ ಮಾದರಿಗಳು ಸೇರಿದಂತೆ ವಿವಿಧ ಸಾಕ್ಷ್ಯಾಧಾರಗಳು ಮುಂದಿನ ತನಿಖೆಯಲ್ಲಿ ಮಹತ್ವ ಪಡೆಯುವ ನಿರೀಕ್ಷೆಯಿದೆ.

Ad Widget
Continue Reading

ಸ್ಥಳೀಯ

Mangalore-ಮಂಗಳೂರಿಗೆ ಕೆಲಸಕ್ಕೆಂದು ಹೋದ ಎಡಮಂಗಲದ ಯುವತಿ ನಾಪತ್ತೆ

Published

on



Ad Widget

Ad Widget

Ad Widget

Ad Widget

ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ವಸಂತಿ (26) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget

Ad Widget

Ad Widget

Ad Widget

ಬೆಳ್ಳಾರೆ: ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ವಸಂತಿ (26) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ವಸಂತಿ ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಕೆಎಫ್‌ಡಿಸಿ (KFDC) ಫಿಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ವಸತಿ ಕೊಠಡಿಯಲ್ಲಿ ವಾಸವಾಗಿದ್ದರು. ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಅವರು, ಅಕ್ಟೋಬರ್ 10ರಂದು ಮನೆಗೆ ಬಂದಿದ್ದರು. ಬಳಿಕ ಅಕ್ಟೋಬರ್ 13ರಂದು ಬೆಳಿಗ್ಗೆ ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದರು. ಆದರೆ, ನಂತರ ಮನೆಗೆ ಮರಳಿಲ್ಲ.

Ad Widget

Ad Widget <> Ad Widget

ಅಕ್ಟೋಬರ್ 27ರಂದು ಮನೆಯವರು ವಸಂತಿಗೆ ದೂರವಾಣಿ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಮಂಗಳೂರಿನಲ್ಲಿರುವ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಅಕ್ಟೋಬರ್ 10ರಂದು ರಜೆ ನಿಮಿತ್ತ ಮನೆಗೆ ತೆರಳಿದ್ದ ವಸಂತಿ ಮತ್ತೆ ಕೆಲಸಕ್ಕೆ ಹಾಜರಾಗಿಲ್ಲ ಎಂದು ಕಂಪನಿಯ ಮೇಲ್ವಿಚಾರಕರು ತಿಳಿಸಿದ್ದಾರೆ.



Ad Widget

ಈ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಸಂತಿ ಅವರ ಪತ್ತೆಗಾಗಿ ಮಾಹಿತಿ ಕೋರಿದ್ದಾರೆ.

Ad Widget

Ad Widget

ನಾಪತ್ತೆಯಾಗಿರುವ ವಸಂತಿ ಅವರ ಬಗ್ಗೆ ಯಾರಿಗಾದರೂ ಮಾಹಿತಿ ಲಭಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಬೆಳ್ಳಾರೆ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!