ರಾಜಕೀಯ
Aryapu-ಅಶೋಕ ಜನಮನ: ಆರ್ಯಾಪು ಎಸ್ ಎಸ್ ಟಿ ಕಾಲನಿಯಲ್ಲಿ ಪ್ರಚಾರ ಸಭೆ
ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ ಅಶೋಕ ಜನಮನ ಕಾರ್ಯಕ್ರಮದ ಅಂಗವಾಗಿ ಆರ್ಯಾಪು (ಮರಿಕೆ) ಗ್ರಾಮದ ಎಸ್.ಎಸ್.ಟಿ. ಕಾಲೋನಿಯಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ನಡೆಯಿತು.
ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ ಅಶೋಕ ಜನಮನ ಕಾರ್ಯಕ್ರಮದ ಅಂಗವಾಗಿ ಆರ್ಯಾಪು (ಮರಿಕೆ) ಗ್ರಾಮದ ಎಸ್.ಎಸ್.ಟಿ. ಕಾಲೋನಿಯಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ನಿಹಾಲ್ ಪಿ ಶೆಟ್ಟಿಯವರು ದೀಪಾವಳಿಯ ಸಂತೋಷವನ್ನು ಸಮಾಜದ ಪ್ರತಿಯೊಂದು ಕುಟುಂಬದೊಂದಿಗೆ ಹಂಚಿಕೊಳ್ಳುವ ಸದುದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಜನರೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆಯುವ ಹಾಗೂ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನು ಬಲಪಡಿಸುವ ಮಹತ್ವದ ಪ್ರಯತ್ನವಾಗಿದೆ.
ಅಶೋಕ ಜನಮನ ಎನ್ನುವುದು ಕೇವಲ ಸೀರೆ ಮತ್ತು ತಟ್ಟೆಗಳನ್ನು ವಿತರಿಸುವ ಕಾರ್ಯಕ್ರಮವಲ್ಲ. ಪ್ರತಿಯೊಂದು ಕುಟುಂಬದೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ, ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಗೌರವ ನೀಡುವ ಆತ್ಮೀಯ ಪ್ರಯತ್ನವಾಗಿದೆ. ಈ ದೀಪಾವಳಿಯ ಬೆಳಕು ಪ್ರತಿಯೊಂದು ಮನೆಯಲ್ಲೂ ಸಂತೋಷವನ್ನು ಮೂಡಿಸಲಿ ಎಂಬುದೇ ನಮ್ಮ ಆಶಯ” ಎಂದು ತಿಳಿಸಿದರು.
ಗ್ರಾಮದ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಮುಂಬರುವ ಜನಮಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು.
ಅಂತರ ರಾಜ್ಯ
Nagpur-RSS ಭದ್ರಕೋಟೆ ನಾಗ್ಪುರದಲ್ಲಿ ಬಿಜೆಪಿಗೆ ಶಾಕ್ : ಪದವೀಧರ ಕ್ಷೇತ್ರ ಕಾಂಗ್ರೆಸ್ ಪಾಲು
ಮಹಾರಾಷ್ಟ್ರ ವಿಧಾನ ಪರಿಷತ್‌ನ ನಾಗಪುರ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಬಿಜೆಪಿಗೆ ಆಘಾತ ನೀಡಿದೆ.
ನಾಗಪುರ: ಮಹಾರಾಷ್ಟ್ರ ವಿಧಾನ ಪರಿಷತ್‌ನ ನಾಗಪುರ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಬಿಜೆಪಿಗೆ ಆಘಾತ ನೀಡಿದೆ.
ಸುದೀರ್ಘ ಮತ ಎಣಿಕೆ ಪ್ರಕ್ರಿಯೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಗೋವಿಂದರಾವ್ ವಂಜಾರಿ ಅವರು ಬಿಜೆಪಿಯ ಸುಧಾಕರ್ ಕೊಣ್ಣೆ ಅವರನ್ನು 3,271 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ನಗರವಾಗಿರುವ ನಾಗಪುರವು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವೂ ಆಗಿದೆ. ಅಲ್ಲದೆ, ಆರೆಸ್ಸೆಸ್‌ನ ಕೇಂದ್ರ ಕಚೇರಿಯೂ ಇದೇ ನಗರದಲ್ಲಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಬಲ ಹಿಡಿತ ಹೊಂದಿರುವ ಪ್ರದೇಶದಲ್ಲಿ ಕಾಂಗ್ರೆಸ್ ಸಾಧಿಸಿರುವ ಈ ಗೆಲುವು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ನಾಲ್ಕು ರಾಜ್ಯಗಳ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೊದಲ ಗೆಲುವು
ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಈ ಗೆಲುವಿನೊಂದಿಗೆ ತನ್ನ ಖಾತೆ ತೆರೆದಿದೆ.
ವಕೀಲ ಹಾಗೂ ಶಿಕ್ಷಣ ತಜ್ಞರಾಗಿರುವ ಅಭಿಜಿತ್ ವಂಜಾರಿ ಅವರು 2020ರಲ್ಲಿಯೂ ನಾಗಪುರ ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದೀಗ ಸತತ ಎರಡನೇ ಬಾರಿಗೆ ಆಯ್ಕೆಯಾಗುವ ಮೂಲಕ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಮತ್ತೊಂದು ಅವಧಿಗೆ ಪ್ರವೇಶ ಪಡೆದಿದ್ದಾರೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಪ್ರತಿಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ವಂಜಾರಿ ಕಣಕ್ಕಿಳಿದಿದ್ದರು.
ಮತ ಎಣಿಕೆ ವೇಳೆ ಘರ್ಷಣೆ
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮತ ಎಣಿಕೆ ನಡೆಯುತ್ತಿದ್ದ ಮಾನಕಾಪುರ ಒಳಾಂಗಣ ಕ್ರೀಡಾಂಗಣದ ಹೊರಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಯೂ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದರು.
ಮತದಾರರು ನಮ್ಮ ಕೈಹಿಡಿದರು: ವಂಜಾರಿ
ಗೆಲುವಿನ ಬಳಿಕ ಅಕ್ಟೋಬರ್ 28ರಂದು ಪ್ರತಿಕ್ರಿಯಿಸಿದ ಅಭಿಜಿತ್ ವಂಜಾರಿ, ನಾಗಪುರದಲ್ಲಿ ಬಿಜೆಪಿ ತನ್ನ ಎಲ್ಲ ನಾಯಕರು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತ್ತು. ಆದರೂ ಮತದಾರರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದರು.
ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿತ್ತು. ಪಕ್ಷದ ಎಲ್ಲ ಪ್ರಮುಖ ನಾಯಕರು ನಾಗಪುರದಲ್ಲಿಯೇ ಬೀಡುಬಿಟ್ಟಿದ್ದರು. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ವಂಜಾರಿ ಸಂತಸ ವ್ಯಕ್ತಪಡಿಸಿದರು.
ಅಂತರ ರಾಜ್ಯ
Hardeep Singh Puri-ಮಧ್ಯಪ್ರದೇಶ ರಾಜ್ಯಸಭೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ : ಎಪ್ಸ್ಟೀನ್ ಜೊತೆಗಿದ್ದ ಫೋಟೋ ವೈರಲ್ ಬೆನ್ನಲ್ಲೇ ಘೋಷಣೆ
ನವೆಂಬರ್ 12ರಂದು ನಡೆಯಲಿರುವ ರಾಜ್ಯಸಭೆ ಉಪಚುನಾವಣೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. 74 ವರ್ಷದ ಹರ್ದೀಪ್ ಸಿಂಗ್ ಪುರಿ ಅವರು ಪ್ರಸ್ತುತ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಅವರ ಅಧಿಕಾರಾವಧಿ ನವೆಂಬರ್ 25ರಂದು ಮುಕ್ತಾಯಗೊಳ್ಳಲಿದೆ.
ಮಧ್ಯಪ್ರದೇಶ: ನವೆಂಬರ್ 12ರಂದು ನಡೆಯಲಿರುವ ರಾಜ್ಯಸಭೆ ಉಪಚುನಾವಣೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಪುರಿ ಅವರ ಉಮೇದುವಾರಿಕೆಗೆ ಅನುಮೋದನೆ ನೀಡಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
74 ವರ್ಷದ ಹರ್ದೀಪ್ ಸಿಂಗ್ ಪುರಿ ಅವರು ಪ್ರಸ್ತುತ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಅವರ ಅಧಿಕಾರಾವಧಿ ನವೆಂಬರ್ 25ರಂದು ಮುಕ್ತಾಯಗೊಳ್ಳಲಿದೆ.
ಕೇಂದ್ರ ಸಚಿವರಾಗಿದ್ದ ಎಲ್. ಮುರುಗನ್ ಅವರು ಅಕ್ಟೋಬರ್ 14ರಂದು ರಾಜ್ಯಸಭಾ ಸದಸ್ಯತ್ವಕ್ಕೆ ಹಾಗೂ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ನಡೆಯುತ್ತಿದೆ. ಅವರು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇತ್ತೀಚೆಗೆ ವಿವಾದಿತ ಶಿಶು ಲೈಂಗಿಕ ಹಗರಣದ ರೂವಾರಿ ಎಪ್ಸ್ಟೀನ್ ಜೊತೆ ಏಕಾಂಗಿಯಾಗಿ ಕುಳಿತುಕೊಂಡ ಚಿತ್ರ ಬಿಡುಗಡೆಯಾಗಿ ಭಾರಿ ರಾಜಕೀಯ ಜಿದ್ದಜಿದ್ದಿಗೆ ಕಾರಣವಾಗಿತ್ತು.
ಮುರುಗನ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಏಪ್ರಿಲ್ 2, 2030ರವರೆಗೆ ಇತ್ತು. ಆದರೆ, ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸುವತ್ತ ಗಮನಹರಿಸುವ ಉದ್ದೇಶದಿಂದ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದರು.
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವ ನಿರೀಕ್ಷೆಯಿದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ಆಯ್ಕೆ ಮಾಡುತ್ತಾರೆ.
ಚುನಾವಣಾ ವೇಳಾಪಟ್ಟಿ
ನವೆಂಬರ್ 12ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಅಂತರ ರಾಜ್ಯ
MLC Election-ಎಂಎಲ್‌ಸಿ ಚುನಾವಣೆ: ಯೋಗಿ ತವರು ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು; ಮೋದಿ ಕ್ಷೇತ್ರ ವಾರಾಣಸಿಯಲ್ಲಿ ಬಿಜೆಪಿಗೆ ಶಾಕ್
ಉತ್ತರ ಪ್ರದೇಶದ 11 ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಸಮಾಜವಾದಿ ಪಕ್ಷ (ಎಸ್‌ಪಿ) 3 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಉಳಿದ 2 ಕ್ಷೇತ್ರಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು, ಎಸ್‌ಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಅಂತಿಮ ಫಲಿತಾಂಶ ತಡರಾತ್ರಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಖನೌ: ಉತ್ತರ ಪ್ರದೇಶದ 11 ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಸಮಾಜವಾದಿ ಪಕ್ಷ (ಎಸ್‌ಪಿ) 3 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಉಳಿದ 2 ಕ್ಷೇತ್ರಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು, ಎಸ್‌ಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಅಂತಿಮ ಫಲಿತಾಂಶ ತಡರಾತ್ರಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಖನೌ, ಮೀರತ್–ಸಹಾರನ್‌ಪುರ, ಬರೇಲಿ–ಮೊರಾದಾಬಾದ್ ಮತ್ತು ಗೋರಖ್‌ಪುರ–ಫೈಜಾಬಾದ್ ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಾರಾಣಸಿ ಮತ್ತು ಆಗ್ರಾ ಶಿಕ್ಷಕರ ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಯೋಗಿ ತವರು ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ಬಿಜೆಪಿ ಅಭ್ಯರ್ಥಿ ಧ್ರುವ ತ್ರಿಪಾಠಿ ಅವರು ಪಕ್ಷೇತರ ಅಭ್ಯರ್ಥಿ ರಾಜೀವ್ ಯಾದವ್ ವಿರುದ್ಧ 307 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇಲ್ಲಿ ಎಸ್‌ಪಿ ಅಭ್ಯರ್ಥಿ ಲಾಲ್ ಬಹದ್ದೂರ್ ಯಾದವ್ ಅವರು ಬಿಜೆಪಿ ಅಭ್ಯರ್ಥಿ ಪ್ರಮೋದ್ ಮಿಶ್ರಾ ವಿರುದ್ಧ 5,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಾರಾಣಸಿ ಪದವೀಧರ ಕ್ಷೇತ್ರದಲ್ಲೂ ಎಸ್‌ಪಿ ಅಭ್ಯರ್ಥಿ ಆಶುತೋಷ್ ಸಿನ್ಹಾ ಮುನ್ನಡೆ ಸಾಧಿಸಿದ್ದಾರೆ.
ಆಗ್ರಾ ಮತ್ತು ಮೀರತ್–ಸಹಾರನ್‌ಪುರ ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಅಲಹಾಬಾದ್–ಜಾನ್ಸಿ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಲಖನೌ ಪದವೀಧರ ಕ್ಷೇತ್ರದಲ್ಲೂ ಎಸ್‌ಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.
‘ಬಿಜೆಪಿಯ ವೈಫಲ್ಯಗಳ ರೋಡ್ ಶೋ’: ಅಖಿಲೇಶ್ ಯಾದವ್
ವಾರಾಣಸಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿರುವುದನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಶ್ಲಾಘಿಸಿದ್ದಾರೆ. ಈ ಫಲಿತಾಂಶವು ಬಿಜೆಪಿಯ ವೈಫಲ್ಯಗಳ ರೋಡ್ ಶೋ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
ಚುನಾವಣಾ ಫಲಿತಾಂಶವನ್ನು ಬದಲಿಸಲು ಬಿಜೆಪಿ ನಾಯಕರು ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಆರೋಪಿಸಿರುವ ಅಖಿಲೇಶ್ ಯಾದವ್, ಪಕ್ಷದ ಕಾರ್ಯಕರ್ತರು ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಎಸ್‌ಪಿ ಪರ ಮೃದು ಧೋರಣೆ ಹೊಂದಿರುವ ಅಧಿಕಾರಿಗಳಿಂದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ನಿರೀಕ್ಷಿತ ಫಲಿತಾಂಶ ಬಂದಿಲ್ಲ: ಕೇಶವ್ ಪ್ರಸಾದ್ ಮೌರ್ಯ
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪಕ್ಷದ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ ಎಂದು ಹೇಳಿದ್ದಾರೆ.
ವಾರಾಣಸಿ ಕ್ಷೇತ್ರದ ಫಲಿತಾಂಶವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಎಸ್‌ಪಿ ಗೆಲ್ಲಬಾರದು ಎಂದು ನಿರೀಕ್ಷಿಸಿದ್ದ ಕ್ಷೇತ್ರಗಳಲ್ಲೇ ಆ ಪಕ್ಷ ಗೆಲುವು ಸಾಧಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
-
ಅಪರಾಧ23 hours ago
Rakesh Murder :ಮಂಗಳೂರು : ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ: ಮೂವರು ಹಂತಕರಿಗೆ ಜೀವಾವಧಿ ಶಿಕ್ಷೆ!
-
Uncategorized21 hours ago
Puttur Pocso Case : ಅಪ್ರಾಪ್ತಗೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
-
ಅಂತರ ರಾಜ್ಯ9 hours agoBlack money-ಸಾಮಾನ್ಯ ಕುಟುಂಬದ ಸಹೋದರರ ಮನೆಯಲ್ಲಿ ಕಪ್ಪು ಹಣ? ಮನೆಯ ನೆಲದಡಿ 3 ಡ್ರಮ್ಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆ..! ಮನೆ ಸೀಲ್, ಓರ್ವನ ಬಂಧನ
-
ಬಿಗ್ ನ್ಯೂಸ್8 hours agoSoujanya case-ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಎಸ್ಐಟಿ ಮುಖ್ಯಸ್ಥರನ್ನು ಮನೆಗೆ ಕರೆಸಿಕೊಂಡು ಸಿಎಂ ಡಿಕೆಶಿ ಮಾಹಿತಿ ಪಡೆದುಕೊಂಡ ಆರೋಪ – ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತೆ..!
-
ಬಿಗ್ ನ್ಯೂಸ್10 hours agoKrupa Alva-ವಿಚಾರಣೆಗೆ ಹಾಜರಾದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ? ಅಮೆರಿಕಕ್ಕೆ ತೆರಳಿರುವ ಶಂಕೆ..!
-
ಬಿಗ್ ನ್ಯೂಸ್10 hours agoSiddaramaiah-ಸ್ಟಿಂಗ್ ಆಪರೇಷನ್ : ತನಿಖೆಯಲ್ಲಿ ಸಿದ್ದರಾಮಯ್ಯಗೆ ‘ಕ್ಲೀನ್ ಚೀಟ್’ : ತಿರುವು ನೀಡಿದ ಮುಸುಕುಧಾರಿ ಮಹಿಳೆಯ ಹೇಳಿಕೆ..! ಈ ಮಹಿಳೆಯನ್ನು ಪತ್ತೆ ಹಚ್ಚಿದ್ದೆಲ್ಲಿ ಗೊತ್ತೇ..?
-
ಮಂಗಳೂರು4 hours agoSoujanya Case-Big Breaking : ಸೌಜನ್ಯ ಪ್ರಕರಣ : ಶಶಿಕುಮಾರ್ ಸ್ಥಾನಕ್ಕೆ ಚೇತನ್ ರಾಥೋಡ್ – ವೆಂಕಟೇಶ್ ಪ್ರಸನ್ನ ಸ್ಥಾನಕ್ಕೆ ಶ್ರೀನಿಧಿ ನೇಮಕ
-
ಸ್ಥಳೀಯ9 hours agoNew toll pass rules-ನ.1ರಿಂದ ಹೊಸ ಟೋಲ್ ಪಾಸ್ ನಿಯಮ ಜಾರಿ: ಸ್ಥಳೀಯರಿಗೆ ₹350 ಮಾಸಿಕ ಪಾಸ್ ಬದಲು ₹1,500 ವಾರ್ಷಿಕ ಪಾಸ್


















