Connect with us

ಮಂಗಳೂರು

Prakash Raj-ಮಂಗಳೂರು : ಕರ್ನಾಟಕದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರಿದ್ದಾರೆ ಎಂದವರೇ, ಆ ಜನ ಎಲ್ಲಿದ್ದಾರೆ ತೋರಿಸಿ..! ನಟ ಪ್ರಕಾಶ್‌ ರಾಜ್‌

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಸೇರಿದಂತೆ ಇಡೀ ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು, ಪಾಕಿಸ್ತಾನಿಗಳು ಅಕ್ರಮವಾಗಿ ನುಸುಳಿದ್ದಾರೆ ಎಂದು ಬಿಜೆಪಿ ನಾಯಕರು ಕಟ್ಟುಕಥೆ ಕಟ್ಟಿ, ದ್ವೇಷ ಬಿತ್ತಿ ಭೀತಿ ಹುಟ್ಟಿಸಿದ್ದರು. ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು. ಲಕ್ಷಾಂತರ ನುಸುಳುಕೋರರು ಇದ್ದಾರೆ ಎಂದವರು ಈಗ ಎಲ್ಲಿದ್ದಾರೆ ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ ರಾಜ್ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget

Ad Widget

​ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಇಡೀ ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು, ಪಾಕಿಸ್ತಾನಿಗಳು ಅಕ್ರಮವಾಗಿ ನುಸುಳಿದ್ದಾರೆ ಎಂದು ಬಿಜೆಪಿ ನಾಯಕರು ಕಟ್ಟುಕಥೆ ಕಟ್ಟಿ, ದ್ವೇಷ ಬಿತ್ತಿ ಭೀತಿ ಹುಟ್ಟಿಸಿದ್ದರು. ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು. ಲಕ್ಷಾಂತರ ನುಸುಳುಕೋರರು ಇದ್ದಾರೆ ಎಂದವರು ಈಗ ಎಲ್ಲಿದ್ದಾರೆ ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ ರಾಜ್ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕೇವಲ ಇಬ್ಬರು ಹೆಣ್ಣುಮಕ್ಕಳನ್ನ ತೋರಿಸಲು ಕೋಟ್ಯಂತರ ರೂ. ಪೋಲು:
ದಕ್ಷಿಣ ಕನ್ನಡದ ಪ್ರತಿಯೊಬ್ಬ ಬಿಜೆಪಿ ನಾಯಕರೂ ‘ಲಕ್ಷಾಂತರ ಅಕ್ರಮ ನುಸುಳುಕೋರರು ಕರ್ನಾಟಕಕ್ಕೆ ಬಂದಿದ್ದಾರೆ, ಅದಕ್ಕಾಗಿಯೇ ಎಸ್‌ಐಆರ್‌ ಅಗತ್ಯ’ ಎಂದು ಭಾಷಣ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ನುಸುಳುಕೋರರ ಪಟ್ಟಿ ಕೇಳಿದಾಗ, ಆಯೋಗ ನೀಡಿದ 600-700 ಜನರ ಪಟ್ಟಿಯಲ್ಲಿ ಬರೀ ಇಬ್ಬರೇ ಇಬ್ಬರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹೆಣ್ಣುಮಕ್ಕಳಿದ್ದಾರೆ. ಅವರೂ ಕೂಡ ಮದುವೆಯಾಗಿ ಇಲ್ಲಿಗೆ ಬಂದವರು. ಇನ್ನುಳಿದವರು ಸೆಕ್ಯುರಿಟಿ ಗಾರ್ಡ್‌, ರೆಸ್ಟೋರೆಂಟ್‌ ಕೆಲಸಕ್ಕೆ ಬಂದ ನೇಪಾಳಿಗಳು ಮತ್ತು ಪಾಠ ಮಾಡಲು ಬಂದ ಜರ್ಮನ್‌/ಅಮೆರಿಕನ್‌ ಪ್ರಜೆಗಳು ಎಂದು ಲೇವಡಿ ಮಾಡಿದರು.

Ad Widget

Ad Widget <> Ad Widget

​ಐದುವರೆ ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ, ಲಕ್ಷಾಂತರ ನುಸುಳುಕೋರರಿದ್ದಾರೆ ಎಂದು ಬ್ರೇನ್‌ವಾಶ್‌ ಮಾಡಿ, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲು ಮಾಡಿ, ಕೋಟಿಗೂ ಅಧಿಕ ಜನರ ಹೆಸರನ್ನು ವೋಟರ್‌ ಲಿಸ್ಟ್‌ನಿಂದ ತೆಗೆದುಹಾಕಿ ಸಾಧಿಸಿದ್ದೇನು? ಕೇವಲ ಇಬ್ಬರು ಹೆಣ್ಣುಮಕ್ಕಳನ್ನಾ?”



Ad Widget

​ಕರ್ನಾಟಕದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದ ಅವರು, ದೇಶದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅಂದರೆ ಹತ್ತಿರ ಹತ್ತಿರ 98 ಲಕ್ಷದಿಂದ 1 ಕೋಟಿ ಮತದಾರರ ಹೆಸರುಗಳನ್ನು ಮ್ಯಾಪಿಂಗ್ ಇಲ್ಲ ಎಂಬ ನೆಪದಲ್ಲಿ ತೆಗೆದುಹಾಕಿದೆ. ಸುಮಾರು 20-22 ಲಕ್ಷ ಸತ್ತವರು ಹಾಗೂ ಡಬಲ್ ಎಂಟ್ರಿಗಳನ್ನು ಹೊರತುಪಡಿಸಿದರೂ, ಇಂದಿಗೂ 70 ಲಕ್ಷಕ್ಕೂ ಅಧಿಕ ಜೀವಂತ ಮತದಾರರು ‘ಆಬ್ಸೆಂಟ್, ಶಿಫ್ಟೆಡ್, ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನಲ್ಲಿ ಹಕ್ಕು ಕಳೆದುಕೊಂಡಿದ್ದಾರೆ.

Ad Widget

Ad Widget

​ಬೆಂಗಳೂರಿನಂತಹ ಮಹಾನಗರದಲ್ಲಿ ಶೇ. 50ರಷ್ಟು ಮತದಾರರನ್ನೇ ಪಟ್ಟಿಯಿಂದ ಹೊರಹಾಕಲಾಗಿದೆ. ಆಯೋಗದ ಲೆಕ್ಕಾಚಾರದಂತೆ ಬರೀ 53 ಲಕ್ಷ ಮತದಾರರಿದ್ದರೆ, ಸರ್ಕಾರ ನಗರದಲ್ಲಿ ಹೊಸ ರೋಡ್‌ಗಳನ್ನು, ಹೆಚ್ಚುವರಿ ಬಸ್‌ಗಳನ್ನು ಯಾಕೆ ತರಬೇಕು? ಇದೆಂತಹ ಹಾಸ್ಯಾಸ್ಪದ ಸಂಗತಿ ಎಂದರು.

Ad Widget
Click to comment

Leave a Reply

ಸ್ಥಳೀಯ

Soujanya case-ಸೌಜನ್ಯ ಪ್ರಕರಣ: ಎಸ್‌ಐಟಿಯಿಂದ ‘ಕ್ರೈಂ ಸೀನ್ ರೀ-ಕ್ರಿಯೇಷನ್’; ಮಣ್ಣಸಂಕದಲ್ಲಿ 5 ಗಂಟೆಗಳ ಕಾಲ ಪರಿಶೀಲನೆ, ಮಣ್ಣಿನ ಮಾದರಿ ಸಂಗ್ರಹ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದ್ದು, ಶನಿವಾರ ಧರ್ಮಸ್ಥಳದ ಮಣ್ಣಸಂಕದಲ್ಲಿ ಸುಮಾರು ಐದು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿದೆ. ಈ ವೇಳೆ ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಂ ಸೀನ್ ರೀ-ಕ್ರಿಯೇಷನ್) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದ್ದು, ಶನಿವಾರ ಧರ್ಮಸ್ಥಳದ ಮಣ್ಣಸಂಕದಲ್ಲಿ ಸುಮಾರು ಐದು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿದೆ. ಈ ವೇಳೆ ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಂ ಸೀನ್ ರೀ-ಕ್ರಿಯೇಷನ್) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

2012ರ ಅಕ್ಟೋಬರ್ 9ರಂದು ನಾಪತ್ತೆಯಾಗಿದ್ದ 17 ವರ್ಷದ ಸೌಜನ್ಯ ಅವರ ಮೃತದೇಹ ಮರುದಿನ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಮಣ್ಣಸಂಕದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೀಗ ಮರುತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಅಂದು ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದ್ದಾರೆ.

Ad Widget

Ad Widget <> Ad Widget

ಎಸ್‌ಐಟಿ ತನಿಖಾಧಿಕಾರಿ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ಹಾಗೂ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು, ಸೀನ್ ಆಫ್ ಕ್ರೈಂ ಆಫೀಸರ್ಸ್ (ಎಸ್‌ಒಸಿಒ) ತಂಡ, ಸರ್ಕಾರಿ ವೈದ್ಯರು, ಸ್ಥಳೀಯ ಗ್ರಾಮ ಆಡಳಿತಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.



Ad Widget

ಪರಿಶೀಲನೆ ವೇಳೆ ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳದಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಸ್‌ಒಸಿಒ ಮತ್ತು ಎಫ್‌ಎಸ್‌ಎಲ್ ತಂಡಗಳು ವೈಜ್ಞಾನಿಕ ಪರೀಕ್ಷೆಗಾಗಿ ಅಗತ್ಯ ಮಾದರಿಗಳನ್ನು ಸಂಗ್ರಹಿಸಿವೆ.

Ad Widget

Ad Widget

ಸ್ಥಳ ಮರುಸೃಷ್ಟಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ, 2012ರಲ್ಲಿ ಸೌಜನ್ಯ ಅವರ ಮೃತದೇಹ ಪತ್ತೆಯಾದ ಬಳಿಕ ಪೊಲೀಸರಿಗೆ ಮೊದಲ ಮಾಹಿತಿ ನೀಡಿದ್ದ ಅವರ ಮಾವ ಪುರಂದರ ಗೌಡ ಹಾಗೂ ಅಂದಿನ ಸ್ಥಳ ಮಹಜರಿನ ಪಂಚರು ಸ್ಥಳದಲ್ಲಿದ್ದರು. ಅವರು ಅಂದಿನ ಪರಿಸ್ಥಿತಿ ಮತ್ತು ಘಟನೆಗೆ ಸಂಬಂಧಿಸಿದ ವಿವರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತಂಡಕ್ಕೆ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವ ಗಡುವು ಇದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಸಾಕ್ಷ್ಯಾಧಾರಗಳ ಮರುಪರಿಶೀಲನೆ, ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಆದ್ಯತೆ ನೀಡಿದೆ.

ಐದು ಗಂಟೆಗಳ ಸುದೀರ್ಘ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ಸ್ಥಳದಿಂದ ತೆರಳಿದ್ದು, ಸಂಗ್ರಹಿಸಲಾದ ಮಣ್ಣಿನ ಮಾದರಿಗಳು ಸೇರಿದಂತೆ ವಿವಿಧ ಸಾಕ್ಷ್ಯಾಧಾರಗಳು ಮುಂದಿನ ತನಿಖೆಯಲ್ಲಿ ಮಹತ್ವ ಪಡೆಯುವ ನಿರೀಕ್ಷೆಯಿದೆ.

Ad Widget
Continue Reading

ಅಪರಾಧ

Mangalore-ಮಂಗಳೂರು: ನಕಲಿ mParivahan APK ಫೈಲ್ ಡೌನ್‌ಲೋಡ್; ಬ್ಯಾಂಕ್‌ ಖಾತೆಯಿಂದ ₹4.89 ಲಕ್ಷ ಕಳೆದುಕೊಂಡ ವ್ಯಕ್ತಿ

Published

on



Ad Widget

Ad Widget

Ad Widget

Ad Widget

ಸರ್ಕಾರಿ ಸಾರಿಗೆ ಇಲಾಖೆಯ ಅಧಿಕೃತ ಆ್ಯಪ್‌ನಂತೆ ಕಾಣುವ ನಕಲಿ ‘mParivahan’ APK ಫೈಲ್ ಡೌನ್‌ಲೋಡ್ ಮಾಡಿದ 50 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿ ಬರೋಬ್ಬರಿ ₹4,89,509 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ (CEN) ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಸರ್ಕಾರಿ ಸಾರಿಗೆ ಇಲಾಖೆಯ ಅಧಿಕೃತ ಆ್ಯಪ್‌ನಂತೆ ಕಾಣುವ ನಕಲಿ ‘mParivahan’ APK ಫೈಲ್ ಡೌನ್‌ಲೋಡ್ ಮಾಡಿದ 50 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿ ಬರೋಬ್ಬರಿ ₹4,89,509 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ (CEN) ಪ್ರಕರಣ ದಾಖಲಾಗಿದೆ.

Ad Widget

Ad Widget <> Ad Widget

ಅಕ್ಟೋಬರ್ 28ರಂದು ದೂರುದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹4,89,509 ಹಣ ಕಡಿತಗೊಂಡಿತ್ತು. ಖಾತೆಯಿಂದ ಭಾರಿ ಮೊತ್ತದ ಹಣ ವರ್ಗಾವಣೆಯಾಗಿರುವ ಬಗ್ಗೆ ಮೊಬೈಲ್‌ಗೆ ಬಂದ ಎಸ್‌ಎಂಎಸ್ ಗಮನಿಸಿದ ಅವರು ಆಘಾತಕ್ಕೊಳಗಾಗಿದ್ದಾರೆ. ಬಳಿಕ ಈ ವಿಚಾರವನ್ನು ಕುಟುಂಬದ ಸದಸ್ಯರ ಗಮನಕ್ಕೆ ತಂದಿದ್ದಾರೆ.



Ad Widget

ಕುಟುಂಬದ ಸದಸ್ಯರು ಮೊಬೈಲ್ ಪರಿಶೀಲಿಸಿದಾಗ, ಸಾರಿಗೆ ಇಲಾಖೆಯ ಅಧಿಕೃತ ಆ್ಯಪ್‌ನಂತೆ ಕಾಣುವ ‘mParivahan’ ಹೆಸರಿನ ನಕಲಿ APK ಫೈಲ್ ಡೌನ್‌ಲೋಡ್ ಆಗಿರುವುದು ಪತ್ತೆಯಾಗಿದೆ. ಸಂಚಾರ ನಿಯಮ ಉಲ್ಲಂಘನೆ ಅಥವಾ ಇ-ಚಲನ್ ಪಾವತಿಯ ನೆಪದಲ್ಲಿ ಸೈಬರ್ ವಂಚಕರು ಕಳುಹಿಸಿದ್ದ ಲಿಂಕ್ ಮೂಲಕ ಈ ಅಪಾಯಕಾರಿ ಆ್ಯಪ್ ಮೊಬೈಲ್‌ಗೆ ಇನ್‌ಸ್ಟಾಲ್ ಆಗಿರುವ ಶಂಕೆ ವ್ಯಕ್ತವಾಗಿದೆ.

Ad Widget

Ad Widget

ನಕಲಿ ಆ್ಯಪ್ ಮೂಲಕ ಮೊಬೈಲ್‌ನಲ್ಲಿನ ಮಾಹಿತಿಗೆ ಪ್ರವೇಶ ಪಡೆದು ಬ್ಯಾಂಕ್ ಖಾತೆಯ ಹಣವನ್ನು ವಂಚಕರು ದೋಚಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ವಂಚನೆಗೊಳಗಾಗಿರುವುದು ತಿಳಿಯುತ್ತಿದ್ದಂತೆಯೇ ಸಂತ್ರಸ್ತರು ತಕ್ಷಣವೇ ಸೈಬರ್ ಅಪರಾಧಗಳ ರಾಷ್ಟ್ರೀಯ ಸಹಾಯವಾಣಿ 1930ಕ್ಕೆ ಕರೆ ಮಾಡಿ, ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ.

Ad Widget
Continue Reading

ಅಪರಾಧ

Mangalore-ಫೇಸ್‌ಬುಕ್ ಲಾಟರಿ ಜಾಹೀರಾತಿಗೆ ಮರುಳಾಗಿ ₹7.22 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ..!

Published

on



Ad Widget

Ad Widget

Ad Widget

Ad Widget

ಫೇಸ್‌ಬುಕ್‌ನಲ್ಲಿ ಕೇರಳ ರಾಜ್ಯದ ಆನ್‌ಲೈನ್ ಲಾಟರಿ ಮಾರಾಟದ ಜಾಹೀರಾತು ನೋಡಿ ಲಾಟರಿ ಖರೀದಿಸಲು ಮುಂದಾದ 53 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹7,22,804 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ (CEN) ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಫೇಸ್‌ಬುಕ್‌ನಲ್ಲಿ ಕೇರಳ ರಾಜ್ಯದ ಆನ್‌ಲೈನ್ ಲಾಟರಿ ಮಾರಾಟದ ಜಾಹೀರಾತು ನೋಡಿ ಲಾಟರಿ ಖರೀದಿಸಲು ಮುಂದಾದ 53 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹7,22,804 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ (CEN) ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದೂರುದಾರರು ಸೆಪ್ಟೆಂಬರ್ 25, 2026ರಂದು ರಾತ್ರಿ ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಕೇರಳ ರಾಜ್ಯದ ಆನ್‌ಲೈನ್ ಲಾಟರಿ ಮಾರಾಟಕ್ಕೆ ಸಂಬಂಧಿಸಿದ ವೀಡಿಯೊ ಜಾಹೀರಾತನ್ನು ಗಮನಿಸಿದ್ದರು. ಬಳಿಕ ಸೆಪ್ಟೆಂಬರ್ 27ರಂದು ಲಾಟರಿ ಖರೀದಿಸುವ ಉದ್ದೇಶದಿಂದ ಜಾಹೀರಾತಿನಲ್ಲಿ ನೀಡಲಾಗಿದ್ದ 7797769038 ಸಂಖ್ಯೆಗೆ ಕರೆ ಮಾಡಿ ಮಾತನಾಡಿದ್ದರು.

Ad Widget

Ad Widget <> Ad Widget

ಈ ವೇಳೆ ವಂಚಕರು ವಾಟ್ಸಾಪ್ ಮೂಲಕ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ₹200 ಪಾವತಿಸುವ ಮೂಲಕ ಲಾಟರಿ ಟಿಕೆಟ್ ಖರೀದಿಸಿದ್ದರು. ಅದೇ ದಿನ ಸಂಜೆ ಸುಮಾರು 4 ಗಂಟೆಗೆ ಅದೇ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿದ್ದು, ಆನ್‌ಲೈನ್ ಲಾಟರಿಯಲ್ಲಿ ₹12 ಲಕ್ಷ ಮತ್ತು ₹5 ಲಕ್ಷ ಸೇರಿದಂತೆ ಒಟ್ಟು ₹17 ಲಕ್ಷ ಬಹುಮಾನ ಗೆದ್ದಿರುವುದಾಗಿ ವಂಚಕರು ತಿಳಿಸಿದ್ದಾರೆ.



Ad Widget

ಬಹುಮಾನದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಳ್ಳಲು ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿಸಬೇಕೆಂದು ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತರು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 27ರವರೆಗೆ ವಿವಿಧ ದಿನಗಳಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಂದ ಒಟ್ಟು ₹7,22,804 ಹಣವನ್ನು ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ.

Ad Widget

Ad Widget

ಆದರೆ, ಹಲವು ಬಾರಿ ಹಣ ಪಾವತಿಸಿದರೂ ಬಹುಮಾನದ ಮೊತ್ತ ಕೈ ಸೇರದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಅನುಮಾನ ಮೂಡಿದೆ. ಬಳಿಕ ತಾವು ವರ್ಗಾಯಿಸಿದ ಹಣವನ್ನು ವಾಪಸ್ ನೀಡುವಂತೆ ವಂಚಕರನ್ನು ಸಂಪರ್ಕಿಸಿದಾಗ ಅವರು ಹಣ ಹಿಂದಿರುಗಿಸದೆ, ಮೊಬೈಲ್ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ.

ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ಸಂತ್ರಸ್ತರು ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!