ಕಾರ್ಯಕ್ರಮಗಳು
Rajyotsava award-ಪುತ್ತೂರು: ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: ಪತ್ರಕರ್ತರಾದ ಶಶಿಧರ್ ರೈ ಎಸ್ ಹಾಗೂ ಸೇಷಪ್ಪ ಕಜೆಮಾರ್ ಗೆ ಒಲಿದ ಪ್ರಶಸ್ತಿ
ನವೆಂಬರ್ 1ರಂದು ನಡೆಯಲಿರುವ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಯನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ.
ಪುತ್ತೂರು: ನವೆಂಬರ್ 1ರಂದು ನಡೆಯಲಿರುವ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಯನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರ್, ಸಮಿತಿ ಸಂಚಾಲಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆ ಪೌರಾಯುಕ್ತರು ಮತ್ತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಒಳಗೊಂಡ ಆಯ್ಕೆ ಸಮಿತಿಯು ಸಭೆ ನಡೆಸಿ ಪ್ರಶಸ್ತಿ ಪುರಸ್ಕೃತರನ್ನು ಅಂತಿಮಗೊಳಿಸಿದೆ.
2026ರ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
- ಎಂ.ಪಿ. ಅಬೂಬಕ್ಕರ್, ಸಂಚಾಲಕರು, ಎಂ.ಪಿ.ಎಂ. ವಿದ್ಯಾಲಯ, ಮುರ ನೆಹರು ನಗರ, ಪುತ್ತೂರು – ಶಿಕ್ಷಣ ಕ್ಷೇತ್ರ,
- ಉಮೇಶ್ ದೇವಾಡಿಗ, , ಸ್ಯಾಕ್ಸೋಫೋನ್ ವಾದಕರು, ಮೇಲ್ಮಜಲು ಮನೆ, ಬನ್ನೂರು – ವಾದ್ಯ ಸಂಗೀತ ಕ್ಷೇತ್ರ
- ಬಿ. ಶೇಖರ ಭಂಡಾರಿ, ನೆಕ್ಕಿಲ ಮನೆ, ಬನ್ನೂರು – ಯಕ್ಷಗಾನ ಕ್ಷೇತ್ರ
- ರವಿಚಂದ್ರ ರೈ, ಮುಂಡೂರು – ರಂಗಭೂಮಿ ಕ್ಷೇತ್ರ
- ನಾರಾಯಣ ರೈ ಕುಕ್ಕುವಳ್ಳಿ – ಮಕ್ಕಳ ಸಾಹಿತ್ಯ ಕ್ಷೇತ್ರ, ದರ್ಬೆ
- ಶೇಷಪ್ಪ ಕಜೆಮಾರ್ (ಸಿಶೇ) ಕೆದಂಬಾಡಿ – ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರ
- ತನುಜಾ ಕ್ಷೇವಿಯರ್,ಕೆಮ್ಮಿಂಜೆ – ದಿವ್ಯಾಂಗ ಮಕ್ಕಳ ಸೇವೆ
- ನಯನಾ ರೈ ನೆಲ್ಲಿಕಟ್ಟೆ – ಸಮಾಜ ಸೇವೆ,
- ಶಶಿಧರ ರೈ ಪುತ್ತೂರು – ಪತ್ರಿಕೋದ್ಯಮ ಕ್ಷೇತ್ರ
- ದೀಪಕ್ ಕುಮಾರ್, ಮೂಕಾಂಬಿಕ ನೃತ್ಯ ಶಾಲೆ, ದರ್ಬೆ – ಭರತನಾಟ್ಯ ಕ್ಷೇತ್ರ
- ಧನ್ವಿ ರೈ ಕೆ.,ಕೋಟೆ ಮನೆ, ಪಾಣಾಜೆ – ಬಾಲ ಪ್ರತಿಭೆ
ಸಂಸ್ಥೆ ವಿಭಾಗ:
ರೋಟರಿ ಕ್ಲಬ್ ಪುತ್ತೂರು ಯುವ – ಅಧ್ಯಕ್ಷೆ ವಚನಾ ಜಯರಾಮ್.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರ ಕಿರುಪರಿಚಯ:
ಶಶಿಧರ್ ರೈ ಎಸ್. ( ಕ್ಷೇತ್ರ : ಪತ್ರಿಕೋದ್ಯಮ )
ಪುತ್ತೂರು ತಾಲೂಕಿನ ಕುತ್ಯಾಳ ಹೊಸಮನೆ ಪಡುವನ್ನೂರು ಗ್ರಾಮದ ದಿ. ಕೊರಗಪ್ಪ ರೈ ಸಜಂಕಾಡಿ- ಹಾಗೂ ಶ್ರೀಮತಿ ಗಿರಿಜಾ ಎಸ್ ರೈ ಸುಪುತ್ರನಾದ ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಆಗಿನ ಮಂಗಳ ವಾರಪತ್ರಿಕೆ, ಕಾಲೇಜಿನ ಅಂತರಂಗ ಮತ್ತು ಫಿಲೋವಾಣಿ ಸಂಚಿಕೆಯಲ್ಲಿ ಹಲವಾರು ಚುಟುಕು,ಕವನ, ಕಥೆಗಳು ಪ್ರಕಟವಾಗಿದೆ. ಸ್ಥಳೀಯ ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ಚುಟುಕು, ಕವನಗಳು ಪ್ರಕಟವಾಗಿದ್ದು, ಸುದ್ದಿ ಬಿಡುಗಡೆಗೆ ಕೆಲವೊಂದು ಕಾರ್ಯಕ್ರಮಗಳ ಸುದ್ದಿಯನ್ನು ಮಾಡಿಕೊಡುತ್ತಿದ್ದು,.ಈ ನಂಟಿನಿಂದಾಗಿಯೇ ಪದವಿ ಶಿಕ್ಷಣ ಮುಗಿದ ಬೆನ್ನಲ್ಲೇ ಪುತ್ತೂರಿನ ಸುದ್ದಿಬಿಡುಗಡೆ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ.
ಬಳಿಕ ಸಂಯುಕ್ತ ಕರ್ನಾಟಕ, ಉಷಾಕಿರಣ ಪತ್ರಿಕೆಗಳಲ್ಲಿ ಪುತ್ತೂರು ತಾಲೂಕು ವರದಿಗಾರನಾಗಿ, ಕಳೆದ 18 ವರ್ಷಗಳಿಂದ ಪ್ರಜಾವಾಣಿ ಪುತ್ತೂರು ತಾಲೂಕು ವರದಿಗಾರನಾಗಿ, ಜತೆಗೆ ವಿಜಯವಾಣಿ ಪತ್ರಿಕೆಯ ಪುತ್ತೂರು ಗ್ರಾಮಾಂತರ ವರದಿಗಾರನಾಗಿ, ಉದಯಕಾಲ ಪತ್ರಿಕೆಯ ಹಾಗೂ ಕರಾವಳಿ ಅಲೆ ಪತ್ರಿಕೆಯ ತಾಲೂಕು ವಾರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.. ಕಳೆದ 32 ವರ್ಷಗಳಲ್ಲಿ ಪತ್ರಿಕಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದು, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 3 ಬಾರಿ ಸಂಘದ ಅಧ್ಯಕ್ಷನಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು, ನೆಟ್ಟಣಿಗೆ ಮುಡ್ನೂರು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಬಾರಿ ಅಧ್ಯಕ್ಷನಾಗಿ, ಮೇನಾಲ ಮಂಗಳಾ ಯುವಕ ಮಂಡಲದ ಪ್ರಧಾನ ಕಾರ್ಯಯಾಗಿ, ಸಜಂಕಾಡಿ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಶೈಕ್ಷಣಿಕ ಸಂಸ್ಥೆಯ (ಪ್ರೌಢ ಶಾಲೆಯ) ಆಡಳಿತ ಮಂಡಳಿಯ ನಿರ್ದೇಶನಾಗಿ, ಪಂಚಲಿಂಗೇಶ್ವರ ಪ್ರೌಢ ಶಾಲೆಯ ದಶಮಾನೋತ್ಸ ಸಮಿತಿಯ ಅಧ್ಯಕ್ಷನಾಗಿ, ಆದಿ ಪಡುಮಲೆ ಖ್ಯಾತಿಯ ಪೂಮಾಣಿ-ಕಿನ್ನಿಮಾಣಿ, ವ್ಯಾಫ್ರಚಾಮುಂಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇಷಪ್ಪ ಕಜೆಮಾರ್ ( ಕ್ಷೇತ್ರ ಪತ್ರಿಕೋದ್ಯಮ -ಸಾಹಿತ್ಯ)
ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮ ನಿವಾಸಿ ಆಗಿದ್ದು, ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಪುತ್ತೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಪತ್ರಿಕೆಗಳಲ್ಲಿ ಹಲವಾರು ಉತ್ತಮ ಸಾಹಿತ್ಯಕ ಲೇಖನಗಳನ್ನು ಬರೆದಿದ್ದಾರೆ ಪ್ರಸ್ತುತ ಪುತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ನವೆಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯೋತ್ಸವ ಆಚರಣೆಯನ್ನು ಯಶಸ್ವಿಗೊಳಿಸುವಂತೆ ತಾಲೂಕು ಆಡಳಿತ ಮನವಿ ಮಾಡಿದೆ.
ಕಾರ್ಯಕ್ರಮಗಳು
Deepotsava 2026-ಶಾಶ್ವತ ವೇದಿಕೆಯಲ್ಲಿ ಪ್ರತಿಭೆಗಳಿಗೆ ಅವಕಾಶ; ಅಶೋಕ್ ಕುಮಾರ್ ರೈ ಅಭಿಪ್ರಾಯ | ದೀಪೋತ್ಸವ 2026 ಲೋಗೋ ಹಾಗೂ ಆಮಂತ್ರಣ ಬಿಡಗಡೆ
ಕರಾವಳಿಯ ಭಾಗದಲ್ಲಿ ಆಗದಂತಹ ಕಾರ್ಯಕ್ರಮ ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ನಡೆಯಬೇಕು. ದೇವಸ್ಥಾನಕ್ಕೆ ಶಾಶ್ವತ ವೇದಿಕೆಯಾಗಿ, ಪ್ರತಿಭೆಗಳಿಗೆ ಅವಕಾಶವಾಗಬೇಕು. ಜನರಿಗೆ ನಿತ್ಯ ಸಾಂಸ್ಕೃತಿಕ ಮನರಂಜನೆ ಸಿಗಬೇಕು. ಈ ಮೂಲಕ ಪುತ್ತೂರು ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು: ಕರಾವಳಿಯ ಭಾಗದಲ್ಲಿ ಆಗದಂತಹ ಕಾರ್ಯಕ್ರಮ ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ನಡೆಯಬೇಕು. ದೇವಸ್ಥಾನಕ್ಕೆ ಶಾಶ್ವತ ವೇದಿಕೆಯಾಗಿ, ಪ್ರತಿಭೆಗಳಿಗೆ ಅವಕಾಶವಾಗಬೇಕು. ಜನರಿಗೆ ನಿತ್ಯ ಸಾಂಸ್ಕೃತಿಕ ಮನರಂಜನೆ ಸಿಗಬೇಕು. ಈ ಮೂಲಕ ಪುತ್ತೂರು ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ದೀಪೋತ್ಸವ ಸಮಿತಿಯ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಡಿ.8ರಂದು ನಡೆಯುವ ಪುತ್ತೂರು ದೀಪೋತ್ಸವ 2026 ಲೋಗೋ ಹಾಗೂ ಆಮಂತ್ರಣ ಬಿಡಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಜಿ. ಎಲ್. ಬಲರಾಮ ಆಚಾರ್ಯ ಮಾತನಾಡಿ ದೇವಸ್ಥಾನ ಸರ್ವತೋಮುಖ ಅಭಿವೃದ್ಧಿಯಾಗಬೇಕು. ದೀಪೋತ್ಸವ ದೊಡ್ಡ ಮಟ್ಟದಲ್ಲಿ ನಡೆಯುವ ಮೂಲಕ ಇನ್ನಷ್ಟು ಜನರು ಇತ್ತ ಬರುವಂತಾಗಬೇಕು ಎಂದು ತಿಳಿಸಿದರು.
ಲೋಗೋ ಲೋಕಾರ್ಪಣೆಯನ್ನು ಎಲುಬು ತಜ್ಞ ಡಾ. ಅಜಯ್ ಮಾಡಿದರು. ಆಮಂತ್ರಣ ಬಿಡುಗಡೆಯನ್ನು ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ನಡೆಸಿದರು.
ಸ್ಥಳೀಯ
Dharmasthala-ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ; ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ-ರಾಘವೇಂದ್ರ ಶ್ರೀನಿವಾಸ ಭಟ್
ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಮಾತನಾಡಿದರು.
ಉಜಿರೆ: ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಾತ್ವಿಕತ್ಯಾಗದೊಂದಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾಕಾರ್ಯ ಹಾಗೂ ಸಾಧನೆ ಆದರ್ಶ ಹಾಗೂ ಅನುಕರಣೀಯವಾಗಿದ್ದು ವಿಶ್ವಮಾನ್ಯವಾಗಿದೆ ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
ಸಮಾಜಮುಖಿ ಚಿಂತನೆಯೊಂದಿಗೆ, ಧರ್ಮದ ತಳಹದಿಯಲ್ಲಿ ಮಾನವೀಯಮೌಲ್ಯಗಳೊಂದಿಗೆ ವಿಶೇಷವಾಗಿ ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಅಸಹಾಯಕರಿಗೆ ಅಭಯದಾನದೊಂದಿಗೆ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಸೇವಾಕಾರ್ಗಯಳು ಅಪೂರ್ವವಾಗಿದ್ದು ಅವರಿಗೆ “ರಾಜರ್ಷಿ” ಬಿರುದು ಅನ್ವರ್ಥಕವೂ, ಅರ್ಥಪೂರ್ಣವು ಆಗಿದೆ ಎಂದರು.
ಧರ್ಮಸ್ಥಳಕ್ಕೂ ಕರ್ಣಾಟಕ ಬ್ಯಾಂಕ್‌ಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಅವರು ಹೆಗ್ಗಡೆಯವರು ಹಾಗೂ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ನಿರ್ದೇಶಕರಾಗಿ ಬ್ಯಾಂಕ್‌ನ ಪ್ರಗತಿಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.
ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿ ರಾಜಯೋಗಿಯಾಗಿಯೂ, ಕರ್ಮಯೋಗಿಯಾಗಿಯೂ ಸಮಾಜಕ್ಕಾಗಿ ಹೆಗ್ಗಡೆಯವರು ಮಾಡುತ್ತಿರುವ ಸೇವೆಯನ್ನು ಕೃತಜ್ಞತೆಯೊಂದಿಗೆ ಉಪಕಾರಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಂಸೆ ಹೊಸನೆಲ ಎಸ್ಟೇಟ್‌ನ ಪ್ರಬಂಧಕ ಶ್ರೀವರ್ಮ ಸೇರಿದಂತೆ ೨೬ ಮಂದಿ ಹಿರಿಯ ನೌಕರರÀನ್ನು ಹೆಗ್ಗಡೆಯವರು ಸನ್ಮಾನಿಸಿದರು.
ಡಾ. ಪವನ್ ಬರೆದ “ಮುಹೂರ್ತ ಪದವೀ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಹೆಗ್ಗಡೆಯವರ ಹೊಸ ಯೋಜನೆಗಳು:
ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿ ನಿಲಯ ನಿರ್ಮಾಣ, ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾವಸತಿ ನಿಲಯ, ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜು ಪ್ರಾರಂಭ, ಶಿಕ್ಷಣ ಸಂಸ್ಥೆಗಳ ಹಳೇಕಟ್ಟಡಗಳ ನವೀಕರಣ, ಉಜಿರೆಯಲ್ಲಿ ಸಿಂಥೆಟಿಕ್ ಟ್ರಾಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಅನುಕೂಲಕ್ಕಾಗಿ ಎ.ಟಿ.ಎಂ. ಬಳಕೆ, ಉಜಿರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ, ಕೆರೆಗಳ ಪುನಶ್ಚೇತನ, ಎಸ್.ಡಿ.ಎಂ. ಆಸ್ಪತ್ರೆ, ಉಜಿರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಆರಂಭ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು ₹.11.00 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ (Cath Lab) ಸೌಲಭ್ಯವನ್ನು ಪ್ರಾರಂಭಿಸಲಾಗುತ್ತದೆ. ಈ ಸೌಲಭ್ಯದ ಮೂಲಕ ಹೃದಯ ಸಂಬAಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆಂಜಿಯೋಗ್ರಾಮ್ (Angiogram) ಮತ್ತು ಆಂಜಿಯೋಪ್ಲಾಸ್ಟಿ (Angioplasty) ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿದ್ದು ಯೋಜನೆಗಳನ್ನು ಸದ್ಯದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಅಲ್ಲದೆ ಭಾನುವಾರ/ಸೋಮವಾರಗಳಲ್ಲಿ ಧರ್ಮಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ನೆರವು ಕೋರಿದವರಿಗೆ ಸೂಕ್ತ ಸಹಾಯ ನೀಡಲಾಗುತ್ತದೆ.
ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆ ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಪಾರಂಪರಿಕ ಚಿಕಿತ್ಸಾ ಪದ್ಧತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್ ಮತ್ತು ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡಬಿದ್ರೆ ಇದ್ದರು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು.
ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಗಳು
Puttur Deepothsava-ಪುತ್ತೂರು ದೀಪೋತ್ಸವ 2026ಕ್ಕೆ ಸಿದ್ಧತೆ ಚುರುಕು; ಅ.26ರಂದು ಲೋಗೋ, ಆಮಂತ್ರಣ ಪತ್ರಿಕೆ ಬಿಡುಗಡೆ..!
ಧಾರ್ಮಿಕ ಶ್ರದ್ಧೆಯ ಬೆಳಕು, ಸಾಂಸ್ಕೃತಿಕ ವೈಭವದ ಮೆರುಗು ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲು ಸಜ್ಜಾಗುತ್ತಿರುವ ಪುತ್ತೂರು ದೀಪೋತ್ಸವ 2026ಕ್ಕೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡುವ ನಿಟ್ಟಿನಲ್ಲಿ ಅಕ್ಟೋಬರ್ 26ರಂದು ದೀಪೋತ್ಸವದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಪುತ್ತೂರು: ಧಾರ್ಮಿಕ ಶ್ರದ್ಧೆಯ ಬೆಳಕು, ಸಾಂಸ್ಕೃತಿಕ ವೈಭವದ ಮೆರುಗು ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲು ಸಜ್ಜಾಗುತ್ತಿರುವ ಪುತ್ತೂರು ದೀಪೋತ್ಸವ 2026ಕ್ಕೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡುವ ನಿಟ್ಟಿನಲ್ಲಿ ಅಕ್ಟೋಬರ್ 26ರಂದು ದೀಪೋತ್ಸವದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಯಲಿರುವ ದೀಪೋತ್ಸವವು ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಸೊಬಗನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ದೀಪೋತ್ಸವದ ಲೋಗೋ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.
ಅ. 26ರಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಅಕ್ಟೋಬರ್ 26ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ದೀಪೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಸಮಿತಿಯ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲುಬು ತಜ್ಞ ಡಾ. ಅಜಯ್ ಅವರು ದೀಪೋತ್ಸವದ ಲೋಗೋವನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಅವರು ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಲಿದ್ದಾರೆ.
ಧಾರ್ಮಿಕ ಪರಂಪರೆ, ಸಾಮರಸ್ಯದ ಸಂದೇಶ
ಧಾರ್ಮಿಕ ಪರಂಪರೆಯ ಸಂರಕ್ಷಣೆ, ಸಾಂಸ್ಕೃತಿಕ ವೈಭವದ ಅನಾವರಣ ಹಾಗೂ ಸಮಾಜದಲ್ಲಿ ಸಾಮರಸ್ಯದ ಭಾವನೆ ಬಲಪಡಿಸುವ ಆಶಯದೊಂದಿಗೆ ಪುತ್ತೂರು ದೀಪೋತ್ಸವ 2026 ಆಯೋಜನೆಗೊಳ್ಳುತ್ತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ದೀಪೋತ್ಸವದ ಪೂರ್ವಭಾವಿಯಾಗಿ ನಡೆಯುವ ಈ ಬಿಡುಗಡೆ ಸಮಾರಂಭವು ಮುಂದಿನ ಕಾರ್ಯಕ್ರಮಗಳ ಸಿದ್ಧತೆಗೆ ಮಹತ್ವದ ಹೆಜ್ಜೆಯಾಗಲಿದೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೀಪೋತ್ಸವದ ಸಿದ್ಧತೆಗಳಿಗೆ ಪ್ರೋತ್ಸಾಹ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.
-
ಬಿಗ್ ನ್ಯೂಸ್23 hours ago‘ಸ್ಟಿಂಗ್’ ತಲ್ಲಣ : ‘ಪುತ್ತೂರು’ ಟಿಕೆಟ್ ಆಕಾಂಕ್ಷಿ ಕೃಪಾ ಆಳ್ವ ಕಾಂಗ್ರೆಸ್ ನಿಂದ ಉಚ್ಚಾಟನೆ
-
ನಿಧನ ವಾರ್ತೆ11 hours agoMudubidire-ಮೂಡುಬಿದಿರೆ: ಖಾಸಗಿ ಬಸ್–ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ; 19ರ ಹರೆಯದ ಯುವಕ ದುರ್ಮರಣ
-
ನಿಧನ ವಾರ್ತೆ11 hours agoHelicopter crash-ಬದ್ರಿನಾಥ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಹೆಲಿಕಾಪ್ಟರ್ ಪತನ: ಕರ್ನಾಟಕದ ಐವರು ಸೇರಿ 6 ಮಂದಿ ದುರ್ಮರಣ
-
ರಾಜಕೀಯ11 hours agoYatnal-ಬಿಜೆಪಿ ಸೇರ್ಪಡೆಗೆ ಯತ್ನಾಳ್ರಿಂದ ಎರಡು ಷರತ್ತು? ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದೇನು?
-
ಸ್ಥಳೀಯ6 hours agoMangalore-ಮಂಗಳೂರಿಗೆ ಕೆಲಸಕ್ಕೆಂದು ಹೋದ ಎಡಮಂಗಲದ ಯುವತಿ ನಾಪತ್ತೆ
-
ನಿಧನ ವಾರ್ತೆ6 hours agoUdupi-ಉಡುಪಿ: ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತ ಆತ್ಮಹತ್ಯೆಗೆ ಶರಣು..!; ಪ್ರೇಮ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡ ಯುವಕನ ಮೇಲೆ ಯುವತಿಯ ಮನೆಯವರಿಂದ ಹಲ್ಲೆ ಆರೋಪ..!
-
ಅಪರಾಧ11 hours agoPuttur-ಪುತ್ತೂರು: ಫೌಂಡೇಶನ್ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಮಕ್ಕಳನ್ನು ಕೊಡಿಸುವುದಾಗಿ ವಂಚಿಸಲು ಯತ್ನಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶ
-
ಸ್ಥಳೀಯ9 hours agoSoujanya case-ಸೌಜನ್ಯ ಮೃತದೇಹ ಸಿಕ್ಕ ಸ್ಥಳಕ್ಕೆ ಎಸ್ಐಟಿ ತಂಡ ಭೇಟಿ; ಸ್ಥಳದಲ್ಲಿ ಬಿಗಿ ಭದ್ರತೆ


















