ಉಡುಪಿ
Brahmavar-ಬ್ರಹ್ಮಾವರ: ರಾಡ್ ನಿಂದ ಹೊಡೆದು ರೌಡಿಶೀಟರ್ ಸುಜಿತ್ ಪಿಂಟೊನ ಬರ್ಬರ ಹತ್ಯೆ: ಆರೋಪಿಯ ಬಂಧನ
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಪ್ರಮೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಉಡುಪಿ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಪ್ರಮೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಸುಜಿತ್ ಪಿಂಟೊ, ಮನೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಿಕ್ಷಾ ಚಾಲಕ ಪ್ರಮೋದ್‌ಗೆ ಹಣ ನೀಡಲು ಬಾಕಿ ಇದ್ದುದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್, ಸುಜಿತ್‌ನನ್ನು ತಾನು ಇದ್ದ ಸ್ಥಳಕ್ಕೆ ಬರುವಂತೆ ಕರೆದಿದ್ದನು. ಅದರಂತೆ ಅಲ್ಲಿಗೆ ತೆರಳಿದ್ದ ಸುಜಿತ್ ಮತ್ತು ಪ್ರಮೋದ್ ಮದ್ಯದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದ ಪ್ರಮೋದ್, ಕಬ್ಬಿಣದ ರಾಡ್‌ನಿಂದ ಸುಜಿತ್‌ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ
ಸುಜಿತ್ ಪಿಂಟೊ ವಿರುದ್ಧ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲೂ ಸುಜಿತ್ ಆರೋಪಿಯಾಗಿದ್ದನು.
ನಿಧನ ವಾರ್ತೆ
Kota-ಕೋಟ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಆರೆಸ್ಸೆಸ್ ಮುಖಂಡ ಸಾವು
ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್‌ನಲ್ಲಿ ಸೋಮವಾರ ಮುಂಜಾನೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಕೋಟ ಮಣೂರು ನಿವಾಸಿ ಹಾಗೂ ಆರೆಸ್ಸೆಸ್ ಮುಖಂಡ ಬೇಳೂರು ಗುರುದಾಸ್ ಶೆಣೈ ಎಂದು ಗುರುತಿಸಲಾಗಿದೆ.

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್‌ನಲ್ಲಿ ಸೋಮವಾರ ಮುಂಜಾನೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಕೋಟ ಮಣೂರು ನಿವಾಸಿ ಹಾಗೂ ಆರೆಸ್ಸೆಸ್ ಮುಖಂಡ ಬೇಳೂರು ಗುರುದಾಸ್ ಶೆಣೈ ಎಂದು ಗುರುತಿಸಲಾಗಿದೆ.
ಗುರುದಾಸ್ ಶೆಣೈ ಅವರು ಕೋಟ ಜಂಕ್ಷನ್‌ನಲ್ಲಿ ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಯಿಂದ ಕುಂದಾಪುರದತ್ತ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸೈಕಲ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಾರು ಚಾಲಕನಿಗೆ ಗಂಭೀರ ಗಾಯ
ಅಪಘಾತದಲ್ಲಿ ಕಾರು ಚಾಲಕ, ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೋಟದ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಪರಾಧ
Arrested-ಉದ್ಯಮಿಗಳ ನಂಬರ್ ಕೊಟ್ಟಿದ್ದಕ್ಕೆ ₹5 ಲಕ್ಷ..!; ಹೇಮಂತ್ ಪೂಜಾರಿಗೆ ‘ಫೋನ್ ನಂಬರ್ ಪೂರೈಕೆದಾರ’ ಅರೆಸ್ಟ್; ಉದ್ಯಮಿಯ ಕೊಲೆಗೆ ಸ್ಕೆಚ್..!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರಿಗೆ ಜೀವ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲು ಸಂಚು ರೂಪಿಸಿದ ಜಾಲದ ಮತ್ತೊಂದು ಕೊಂಡಿ ಪೊಲೀಸರ ಬಲೆಗೆ ಬಿದ್ದಿದೆ. ಸುಲಿಗೆಗೆ ಗುರಿಯಾಗಬಹುದಾದ ಉದ್ಯಮಿಗಳ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ ಆ್ಯಪ್ ಮೂಲಕ ಹೇಮಂತ್ ಪೂಜಾರಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಕಾಪು ತಾಲ್ಲೂಕಿನ ಎರ್ಮಾಳು ಬಡಾ ಗ್ರಾಮದ ಸುರೇಶ್ ಅಮೀನ್ (38) ಎಂಬಾತನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಉಡುಪಿ, ಅ. 23: ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರಿಗೆ ಜೀವ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲು ಸಂಚು ರೂಪಿಸಿದ ಜಾಲದ ಮತ್ತೊಂದು ಕೊಂಡಿ ಪೊಲೀಸರ ಬಲೆಗೆ ಬಿದ್ದಿದೆ. ಸುಲಿಗೆಗೆ ಗುರಿಯಾಗಬಹುದಾದ ಉದ್ಯಮಿಗಳ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ ಆ್ಯಪ್ ಮೂಲಕ ಹೇಮಂತ್ ಪೂಜಾರಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಕಾಪು ತಾಲ್ಲೂಕಿನ ಎರ್ಮಾಳು ಬಡಾ ಗ್ರಾಮದ ಸುರೇಶ್ ಅಮೀನ್ (38) ಎಂಬಾತನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನಂಬರ್ ಕೊಟ್ಟಿದ್ದಕ್ಕೆ ₹5 ಲಕ್ಷ ಕಮಿಷನ್!
ಉದ್ಯಮಿಗಳ ಮೊಬೈಲ್ ನಂಬರ್ ಪೂರೈಸಿದರೆ ಸಾಕು, ಬಳಿಕ ನಡೆಯುವ ಸುಲಿಗೆಯಲ್ಲಿ ಪಾಲು ಸಿಗುತ್ತದೆ ಎಂಬ ಆಮಿಷಕ್ಕೆ ಆರೋಪಿ ಬಿದ್ದಿದ್ದ ಎನ್ನಲಾಗಿದೆ. ಹೇಮಂತ್ ಪೂಜಾರಿ ಸಂಪರ್ಕಿಸಿ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರ ನಂಬರ್‌ಗಳನ್ನು ಸಂಗ್ರಹಿಸಿ ನೀಡುವಂತೆ ಸೂಚಿಸಿದ್ದ. ಇದಕ್ಕಾಗಿ ಸುರೇಶ್ ಅಮೀನ್ ಖಾತೆಗೆ ಬರೋಬ್ಬರಿ ₹5 ಲಕ್ಷ ಜಮೆ ಮಾಡಲಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಉದ್ಯಮಿಗಳಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಬಳಿಕ ಅದರಲ್ಲಿ ಕಮಿಷನ್ ನೀಡುವುದಾಗಿಯೂ ಆಮಿಷವೊಡ್ಡಲಾಗಿತ್ತು ಎನ್ನಲಾಗಿದೆ. ಆರೋಪಿಯ ಖಾತೆಗೆ ಬಂದಿದ್ದ ₹5 ಲಕ್ಷದಲ್ಲಿ ಖರ್ಚಾದ ಹಣ ಹೊರತುಪಡಿಸಿ ಉಳಿದಿದ್ದ ₹4.13 ಲಕ್ಷವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಗೆ ಬ್ಯಾಂಕ್ ಮೂಲಕ ಹಣ ವರ್ಗಾಯಿಸಿದವರ ಬಗ್ಗೆಯೂ ತನಿಖೆ ಮುಂದುವರಿದಿದೆ.
ಎಂಟು ಪ್ರಕರಣಗಳ ನಂಟು!
ಹೇಮಂತ್ ಪೂಜಾರಿ ಮತ್ತೆ ಸಕ್ರಿಯನಾಗಿ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿ ಭಾರೀ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣಗಳು ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದವು. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಐದು, ಶಿರ್ವ ಠಾಣೆಯಲ್ಲಿ ಒಂದು, ಕಾಪು ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದವು.
ಬೆದರಿಕೆ ಕರೆಗಳ ಹಿಂದಿನ ಜಾಲವನ್ನು ಭೇದಿಸಲು ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಉದ್ಯಮಿಗಳು ಹಾಗೂ ಗುತ್ತಿಗೆದಾರರ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದವರ ಮೇಲೆ ನಿಗಾ ಇರಿಸಿದ್ದರು. ಈ ವೇಳೆ ಸುರೇಶ್ ಅಮೀನ್ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಅಕ್ಟೋಬರ್ 19ರಂದು ಎರ್ಮಾಳಿನಲ್ಲಿ ಆತನನ್ನು ಬಂಧಿಸಿದ ಪೊಲೀಸರು, ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ವಿಚಾರಣೆ ವೇಳೆ ಜಿಲ್ಲೆಯಲ್ಲಿ ದಾಖಲಾಗಿರುವ ಎಂಟು ಪ್ರಕರಣಗಳ ಪೈಕಿ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತಾನೇ ನಂಬರ್ ಪೂರೈಸಿದ್ದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಹಣ ಕೊಡದ ಉದ್ಯಮಿಯ ಕೊಲೆಗೆ ಸಂಚು!
ಈ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮತ್ತೊಂದು ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಆರೋಪಿ ಪೂರೈಸಿದ್ದ ನಂಬರ್ ಆಧರಿಸಿ ಹೇಮಂತ್ ಪೂಜಾರಿ ಸಂಪರ್ಕಿಸಿದ್ದ ಉದ್ಯಮಿಯೊಬ್ಬರು ಬೇಡಿಕೆಯಿಟ್ಟ ಹಣ ನೀಡಿರಲಿಲ್ಲ. ಬೆದರಿಕೆ ಕರೆಗಳನ್ನೂ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ.
ಇದರಿಂದ ಕೆರಳಿದ ಸುಲಿಗೆಕೋರರು ಆ ಉದ್ಯಮಿಯ ಮೇಲೆ ದಾಳಿ ನಡೆಸಿ ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು ಎಂಬುದು ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಅಪಾಯದ ಸುಳಿವು ಅರಿತ ಪೊಲೀಸರು ಸಂಬಂಧಪಟ್ಟ ಉದ್ಯಮಿಗೆ ಭದ್ರತೆ ಒದಗಿಸಿದ್ದಾರೆ.
ನಂಬರ್ ಪೂರೈಕೆದಾರರ ಜಾಲ ಇನ್ನೂ ದೊಡ್ಡದಿದೆಯೇ?
ಸುರೇಶ್ ಅಮೀನ್ ಬಂಧನದಿಂದ ಸುಲಿಗೆ ಜಾಲದ ಒಂದು ಕೊಂಡಿ ಪತ್ತೆಯಾಗಿದ್ದರೂ, ಪ್ರಕರಣದ ಹಿಂದೆ ಇನ್ನಷ್ಟು ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಹಲವು ಪ್ರಕರಣಗಳಿಗೆ ಈತ ನಂಬರ್ ಪೂರೈಸಿದ್ದಾನೆ ಎನ್ನಲಾಗಿದ್ದು, ಮೂಲ್ಕಿ ಪ್ರಕರಣ ಸೇರಿದಂತೆ ಉಳಿದ ಪ್ರಕರಣಗಳಲ್ಲಿ ಬೇರೆ ವ್ಯಕ್ತಿಗಳು ನಂಬರ್ ಪೂರೈಸಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಜಾಲದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಣ ವರ್ಗಾವಣೆ, ಮೊಬೈಲ್ ಸಂವಹನ ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.
ಉದ್ಯಮಿಗಳ ನಂಬರ್ ಸಂಗ್ರಹದಿಂದ ಆರಂಭವಾದ ಆಟ, ಜೀವ ಬೆದರಿಕೆ, ಕೋಟ್ಯಂತರ ರೂಪಾಯಿ ಸುಲಿಗೆ ಹಾಗೂ ಕೊಲೆಯ ಸಂಚಿನವರೆಗೆ ತಲುಪಿದೆಯೇ? ಈ ಜಾಲದ ಹಿಂದಿರುವ ಉಳಿದ ಮುಖಗಳು ಯಾರು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಸಿನೆಮಾ
Chetan D’Souza-‘ಜೈಲರ್ 2’ನಲ್ಲಿ ರಜನಿಕಾಂತ್ ಆ್ಯಕ್ಷನ್ ಹಿಂದಿರುವುದು ಉಡುಪಿಯ ಚೇತನ್ ಡಿಸೋಜಾ..! ಸಾಹಸ ನಿರ್ದೇಶಕನ ಆಸಕ್ತಿದಾಯಕ ಸಿನಿ ಪಯಣದ ಕಥೆ ಇಲ್ಲಿದೆ
ಉಡುಪಿ ಮೂಡುಬೆಳ್ಳೆಯ ಚೇತನ್ ಡಿಸೋಜಾ ಈಗ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಾಹಸ ನಿರ್ದೇಶಕರಲ್ಲಿ ಒಬ್ಬರು. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಮೂಲಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಚೇತನ್ ಅವರ ಸಿನಿ ಪಯಣ ಆಸಕ್ತಿದಾಯಕವಾಗಿದೆ.
ಉಡುಪಿ ಮೂಡುಬೆಳ್ಳೆಯ ಚೇತನ್ ಡಿಸೋಜಾ ಈಗ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಾಹಸ ನಿರ್ದೇಶಕರಲ್ಲಿ ಒಬ್ಬರು. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಮೂಲಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಚೇತನ್ ಅವರ ಸಿನಿ ಪಯಣ ಆಸಕ್ತಿದಾಯಕವಾಗಿದೆ.
‘ಜೈಲರ್ 2’ನಲ್ಲಿ ರಜನಿಕಾಂತ್‌ಗೆ ಭರ್ಜರಿ ಆ್ಯಕ್ಷನ್
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಅದರ ಮುಂದುವರಿದ ಭಾಗವಾದ ‘ಜೈಲರ್ 2’ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ರಜನಿಕಾಂತ್ ಅವರ ಸಾಹಸ ದೃಶ್ಯಗಳು ವಿಶೇಷ ಆಕರ್ಷಣೆಯಾಗಿವೆ. ಈ ಸಾಹಸ ದೃಶ್ಯಗಳ ಹಿಂದಿನ ಪ್ರಮುಖ ವ್ಯಕ್ತಿ ಉಡುಪಿ ಮೂಡುಬೆಳ್ಳೆಯ ಚೇತನ್ ಡಿಸೋಜಾ.
ಚಿತ್ರದ ಆರಂಭಿಕ ಟೀಸರ್‌ನಲ್ಲಿನ ಸಾಹಸ ದೃಶ್ಯಗಳಿಗೂ ಚೇತನ್ ಕೆಲಸ ಮಾಡಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ. ದಿಗ್ಗಜ ನಟನೊಂದಿಗೆ ಕೆಲಸ ಮಾಡಿರುವುದು ವಿಭಿನ್ನ ಅನುಭವವಾಗಿದ್ದು, ಅವರಂತಹ ಕಲಾವಿದರೊಂದಿಗೆ ಕೆಲಸ ಮಾಡುವುದೇ ಖುಷಿಯ ಸಂಗತಿ ಎಂಬ ಅರ್ಥದಲ್ಲಿ ಚೇತನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಧೂಮಮ್’ನಿಂದ ‘ಆವೇಶಂ’ವರೆಗೆ ಅವಕಾಶಗಳ ಪಯಣ
ಚೇತನ್ ಡಿಸೋಜಾ ಅವರಿಗೆ ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಒದಗಿಬಂದಿವೆ. ಪವನ್ ಕುಮಾರ್ ನಿರ್ದೇಶನದ ‘ಧೂಮಮ್’ ಚಿತ್ರದಲ್ಲಿ ಕೆಲಸ ಮಾಡುವಾಗ ಮಲಯಾಳಂ ನಟ ಫಹಾದ್ ಫಾಸಿಲ್ ಅವರೊಂದಿಗೆ ಪರಿಚಯವಾಯಿತು. ನಂತರ ‘ಆವೇಶಂ’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಅವಕಾಶವೂ ದೊರೆಯಿತು.
‘ಆವೇಶಂ’ನ ಸಾಹಸ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದವು. ಈ ಕೆಲಸ ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಗಮನಕ್ಕೂ ಬಂದಿದ್ದು, ‘ಜೈಲರ್ 2’ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿತು.
‘ಡ್ರ್ಯಾಗನ್’, ‘ಫೌಜಿ’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶನ
ಚೇತನ್ ಡಿಸೋಜಾ ಅವರ ಕೆಲಸದ ವ್ಯಾಪ್ತಿ ದಕ್ಷಿಣ ಭಾರತದ ಹಲವು ಚಿತ್ರರಂಗಗಳಿಗೆ ವಿಸ್ತರಿಸಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದೆ. ಪ್ರಭಾಸ್ ಅಭಿನಯದ ‘ಫೌಜಿ’ ಹಾಗೂ ಸೂರ್ಯ ಅಭಿನಯದ ‘ಸೀನ್’ ಚಿತ್ರಗಳ ಸಾಹಸ ನಿರ್ದೇಶನದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.
ಒಂದೊಂದು ಚಿತ್ರದ ಅನುಭವ ಮತ್ತೊಂದು ದೊಡ್ಡ ಅವಕಾಶಕ್ಕೆ ದಾರಿ ಮಾಡಿಕೊಟ್ಟಿದ್ದು, ಚೇತನ್ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ.
ಕನ್ನಡದ ಸ್ಟಾರ್ ನಟರ ಚಿತ್ರಗಳಿಗೂ ಸಾಹಸ ನಿರ್ದೇಶನ
ಕನ್ನಡ ಚಿತ್ರರಂಗದಲ್ಲೂ ಚೇತನ್ ಡಿಸೋಜಾ ಹಲವು ಪ್ರಮುಖ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ‘ಬಘೀರ’, ‘ಯುಐ’, ‘45’, ‘ಭೈರತಿ ರಣಗಲ್’ ಮತ್ತು ‘ಮ್ಯಾಕ್ಸ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಕೆಲಸ ಗುರುತಿಸಿಕೊಂಡಿದೆ. ಶಿವರಾಜ್‌ಕುಮಾರ್, ಶ್ರೀಮುರಳಿ, ಕಿಚ್ಚ ಸುದೀಪ್, ರಾಜ್ ಬಿ. ಶೆಟ್ಟಿ ಹಾಗೂ ಉಪೇಂದ್ರ ಅವರ ಚಿತ್ರಗಳಲ್ಲೂ ಸಾಹಸ ದೃಶ್ಯಗಳನ್ನು ರೂಪಿಸಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರದಲ್ಲೂ ಕೆಲಸ ಮಾಡಿರುವ ಚೇತನ್, ಅವರ ಸಹಕಾರದಿಂದಲೇ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗದಿಂದ ಸಾಹಸ ನಿರ್ದೇಶಕರವರೆಗೆ
ಚೇತನ್ ಡಿಸೋಜಾ ಅವರ ಸಿನಿ ಪಯಣ ಆರಂಭದಿಂದಲೇ ಚಿತ್ರರಂಗದ ಹಿನ್ನೆಲೆಯಲ್ಲಿರಲಿಲ್ಲ. ಇವರು ಉಡುಪಿಯಲ್ಲೇ ಕರಾಟೆ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಆರಂಭಿಸಿದ್ದರು. ಬಳಿಕ ಸಿನಿಮಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡು ಸಾಹಸ ನಿರ್ದೇಶನದ ಹಾದಿ ಹಿಡಿದರು.
ಅವರು ನಿರ್ಮಿಸಿದ ‘Wrong Move’ ಎಂಬ ಕಿರುಚಿತ್ರ ನಿರ್ದೇಶಕ ಪವನ್ ಕುಮಾರ್ ಅವರ ಗಮನ ಸೆಳೆಯಿತು. ನಂತರ ಪವನ್ ಕುಮಾರ್ ಅವರ ‘U Turn’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡರು.
ಸಾಫ್ಟ್‌ವೇರ್ ಕ್ಷೇತ್ರದಿಂದ ಆರಂಭವಾದ ಪಯಣ ಇಂದು ಭಾರತೀಯ ಚಿತ್ರರಂಗದ ಪ್ರಮುಖ ನಟರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡುವ ಹಂತಕ್ಕೆ ತಲುಪಿದೆ. ಉಡುಪಿಯ ಚೇತನ್ ಡಿಸೋಜಾ ಅವರ ಈ ಸಾಧನೆ ಕನ್ನಡಿಗರಿಗೂ ಹೆಮ್ಮೆಯ ಸಂಗತಿಯಾಗಿದೆ.
-
Uncategorized19 hours ago
ಸುರತ್ಕಲ್ : ಪೊಲೀಸ್ ವಿಚಾರಣೆಗೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ: ಠಾಣೆ ಎದುರು ಶವವಿಟ್ಟು ಪ್ರತಿಭಟನೆ, ಹೆದ್ದಾರಿ ಸಂಚಾರ ಸ್ಥಗಿತ | ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ
-
ನಿಧನ ವಾರ್ತೆ23 hours agoVitla-ವಿಟ್ಲ: ಒಕ್ಕೆತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ನಿಧನ
-
Uncategorized19 hours ago
ಸುರತ್ಕಲ್: ಸೋಮನಾಥ ಆ#ತ್ಮಹತ್ಯೆ ಪ್ರಕರಣ; ಪೊಲೀಸ್ ಠಾಣೆ ಎದುರು ಮೃತದೇಹವಿಟ್ಟು ಸ್ಥಳೀಯರ ಆಕ್ರೋಶ; ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆ- ಪ್ರತಿಭಟನೆ ಅಂತ್ಯ;
-
ದಕ್ಷಿಣ ಕನ್ನಡ18 hours ago
kukke Temple Contravercy: ಭಕ್ತರ ವಿರೋಧಕ್ಕೆ ಮಣಿದ ಕುಕ್ಕೆ ದೇಗುಲ ಆಡಳಿತ: ಅ.28ರಿಂದಲೇ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭ | ಮಾಜಿ ಟ್ರಸ್ಟಿ ಪ್ರಸನ್ನ ದರ್ಭೆ ಹೋರಾಟಕ್ಕೆ ಜಯ
-
ಬಿಗ್ ನ್ಯೂಸ್22 hours agoPuttur-ಪುತ್ತೂರು: ಕಾರು-ಆಕ್ಟಿವಾ ಡಿಕ್ಕಿ- ಸವಾರನಿಗೆ ಗಾಯ
-
ಬಿಗ್ ನ್ಯೂಸ್6 hours agoPuttur-ಪುತ್ತೂರು: ವಿಷ ಪದಾರ್ಥ ಸೇವಿಸಿ ನವವಿವಾಹಿತೆ ಸಾವು; ಇಬ್ಬರ ವಿರುದ್ಧ ಪ್ರಕರಣ ದಾಖಲು
-
ಅಪರಾಧ22 hours agoVitla-ವಿಟ್ಲ: ಮಟ್ಕಾ ಆಟದಲ್ಲಿ ನಿರತನಾಗಿದ್ದ ವ್ಯಕ್ತಿ ಪೊಲೀಸ್ ವಶ
-
ಅಪರಾಧ6 hours agoDeralkatte-ದೇರಳಕಟ್ಟೆ ಕಾಲೇಜಿನಲ್ಲಿ ರ್ಯಾಗಿಂಗ್ ಆರೋಪ: ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು


















