ಬಿಗ್ ನ್ಯೂಸ್
Dr. Varadaraja Chandragiri-ಪುತ್ತೂರಿನ ವಿವೇಕಾನಂದ ಸ್ವಾಯತ್ತ ಪದವಿ ಕಾಲೇಜ್ ಗೆ ನೂತನ ಆಡಳಿತ ಮಂಡಳಿ – ಅಧ್ಯಕ್ಷರಾಗಿ ಡಾ. ವರದರಾಜ ಚಂದ್ರಗಿರಿ ಜವಬ್ದಾರಿ ಸ್ವೀಕಾರ
ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು, ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ.ವರದ ರಾಜ್ ಚಂದ್ರಗಿರಿ, ಸಂಚಾಲಕರಾಗಿ ಎ ಮೋಹನ್ ಜವಬ್ದಾರಿ ಸ್ವೀಕರಿಸಿದರು.
ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು, ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ.ವರದ ರಾಜ್ ಚಂದ್ರಗಿರಿ, ಸಂಚಾಲಕರಾಗಿ ಎ ಮೋಹನ್ ಜವಬ್ದಾರಿ ಸ್ವೀಕರಿಸಿದರು.

ಕೋಶಾಧಿಕಾರಿಗಳಾಗಿ ಸುಕುಮಾರ್ ರಾವ್ ಎನ್.ಎಸ್. ಹಾಗೂ ಸದಸ್ಯರುಗಳಾಗಿ ಯಶೋಧರ ಜೈನ್, ಎಸ್ ರಾಜಶೇಖರ್, ವೇಣುಗೋಪಾಲ ಭಟ್ ಎಂ, ಪೂರ್ಣ ಮಂಗಳ, ಮಾಲಿನಿ ಕಶ್ಯಪ್, ರಂಜಿತ್ ಜೈನ್ ಇವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣ ಕುಮಾರ್ ಶೆಟ್ಟಿ ಕಡಬ ದೀಪ ಪ್ರದಾನ ಮಾಡುವ ಮೂಲಕ ಜವಬ್ದಾರಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ, ಹಾಗೂ ಕಾಲೇಜಿನ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ ಎನ್, ಕಾಲೇಜಿನ ಪ್ರಾರ್ಚಾಯ ಶ್ರೀಕೃಷ್ಣ ಗಣರಾಜ ಭಟ್ ಎಸ್ ಹಾಗೂ ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಅಂತರ ರಾಜ್ಯ
Jammu-Kashmir CM-ಮತ್ತೆ ಹಸೆಮಣೆ ಏರಿದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..! ಪತ್ರಕರ್ತೆ ನಿಧಿ ರಜ್ದಾನ್ ಜೊತೆ ಹೊಸ ಜೀವನ ಆರಂಭ
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎರಡನೇ ವಿವಾಹವಾಗಿದ್ದಾರೆ. 1994ರ ಸೆಪ್ಟೆಂಬರ್ 1ರಂದು ಪಾಯಲ್ ಅಬ್ದುಲ್ಲಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ.
ಜೆ.ಕೆ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎರಡನೇ ವಿವಾಹವಾಗಿದ್ದಾರೆ. 1994ರ ಸೆಪ್ಟೆಂಬರ್ 1ರಂದು ಪಾಯಲ್ ಅಬ್ದುಲ್ಲಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ.
2009ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು
2026ರ ಜುಲೈ 31ರಂದು ಸುಪ್ರೀಂ ಕೋರ್ಟ್ನಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಲಾಯಿತು.
ನಿಧಿ ರಜ್ದಾನ್ ಯಾರು?
ಅವರು NDTVಯ ಮಾಜಿ ಹಿರಿಯ ಪತ್ರಕರ್ತೆ ಮತ್ತು ನಿರೂಪಕಿ.
ಅಕ್ಟೋಬರ್ 30, 2026 ರಂದು ಖಾಸಗಿ ಸಮಾರಂಭದಲ್ಲಿ ಇವರ ವಿವಾಹ ನಡೆದಿದ್ದು, ಅಕ್ಟೋಬರ್ 31 ರಂದು ಒಮರ್ ಅಬ್ದುಲ್ಲಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಬಿಗ್ ನ್ಯೂಸ್
Puttur-ಪುತ್ತೂರಿಗರಿಗೆ ಭರ್ಜರಿ ಗುಡ್ ನ್ಯೂಸ್: ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ನಿಲುಗಡೆಗೆ ಅಧಿಕೃತ ಆದೇಶ
ಪುತ್ತೂರಿಗರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸಲಿರುವ ನೂತನ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ (26655/26656) ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ಕಲ್ಪಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ನೂತನ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.
ಪುತ್ತೂರು: ಪುತ್ತೂರಿಗರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸಲಿರುವ ನೂತನ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ (26655/26656) ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ಕಲ್ಪಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ನೂತನ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.
ಈ ಹಿಂದೆ ಮಂಗಳೂರು ಸೆಂಟ್ರಲ್ನಿಂದ ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲನ್ನು ಇದೀಗ ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಪುತ್ತೂರು ಭಾಗದ ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಮಂಗಳೂರು ಜಂಕ್ಷನ್ಗೆ ಹೋಗುವ ಅಗತ್ಯವಿಲ್ಲ. ಕಬಕ ಪುತ್ತೂರು ನಿಲ್ದಾಣದಿಂದಲೇ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.
ರೈಲಿನ ವೇಳಾಪಟ್ಟಿ ಹೀಗಿದೆ
26655 ಯಶವಂತಪುರ–ಮಡಗಾಂವ್ ವಂದೇ ಭಾರತ್
ನಿಲ್ದಾಣ ಆಗಮನ / ನಿರ್ಗಮನ
ಯಶವಂತಪುರ ಬೆಳಗ್ಗೆ 7:35 ನಿರ್ಗಮನ
ಶ್ರವಣಬೆಳಗೊಳ 9:03
ಹಾಸನ 9:38 / 9:40
ಸಕಲೇಶಪುರ 10:20 / 10:22
ಸುಬ್ರಹ್ಮಣ್ಯ ರೋಡ್ 12:40 / 12:42
ಕಬಕ ಪುತ್ತೂರು 1:25 / 1:27
ಮಂಗಳೂರು ಜಂಕ್ಷನ್ 3:05 / 3:15
ಉಡುಪಿ 4:20 / 4:22
ಕುಂದಾಪುರ 4:38 / 4:40
ಮೂಕಾಂಬಿಕಾ ರೋಡ್ ಬೈಂದೂರು 5:20 / 5:22
ಮುರ್ಡೇಶ್ವರ 6:00 / 6:02
ಗೋಕರ್ಣ ರೋಡ್ 7:00 / 7:02
ಕಾರವಾರ 7:45 / 7:47
ಮಡಗಾಂವ್ ರಾತ್ರಿ 8:55 ಆಗಮನ
26656 ಮಡಗಾಂವ್–ಯಶವಂತಪುರ ವಂದೇ ಭಾರತ್
ನಿಲ್ದಾಣ ಆಗಮನ / ನಿರ್ಗಮನ
ಮಡಗಾಂವ್ ಬೆಳಗ್ಗೆ 8:20 ನಿರ್ಗಮನ
ಕಾರವಾರ 9:03 / 9:05
ಗೋಕರ್ಣ ರೋಡ್ 9:48 / 9:50
ಮುರ್ಡೇಶ್ವರ 11:00 / 11:02
ಮೂಕಾಂಬಿಕಾ ರೋಡ್ ಬೈಂದೂರು 11:20 / 11:22
ಕುಂದಾಪುರ 11:48
ಉಡುಪಿ 12:18 / 12:20
ಮಂಗಳೂರು ಜಂಕ್ಷನ್ 1:50 / 2:00
ಕಬಕ ಪುತ್ತೂರು 2:43 / 2:45
ಸುಬ್ರಹ್ಮಣ್ಯ ರೋಡ್ 3:28 / 3:30
ಸಕಲೇಶಪುರ 5:30 / 5:32
ಹಾಸನ 6:13 / 6:15
ಶ್ರವಣಬೆಳಗೊಳ 6:43 / 6:45
ಯಶವಂತಪುರ ರಾತ್ರಿ 9:15 ಆಗಮನ
ನವೆಂಬರ್ ಮೂರನೇ ವಾರದಲ್ಲಿ ಚಾಲನೆ ಸಾಧ್ಯತೆ
ವಿಸ್ತರಿತ ವಂದೇ ಭಾರತ್ ರೈಲು ಸೇವೆಗೆ ನವೆಂಬರ್ ಮೂರನೇ ವಾರದೊಳಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಭರವಸೆ ನೀಡಿದ್ದಾರೆ. ಸಚಿವರು ಮಂಗಳೂರಿಗೆ ಆಗಮಿಸಿ ಸೇವೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಬುಧವಾರ ನವದೆಹಲಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೆ ಸಚಿವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದರು.
ಸಂಸದರ ನಿರಂತರ ಪ್ರಯತ್ನಕ್ಕೆ ಫಲ
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಪ್ರಯತ್ನದಿಂದ ರೈಲು ವಿಸ್ತರಣೆ ಹಾಗೂ ಕಬಕ ಪುತ್ತೂರು ನಿಲುಗಡೆ ಸಾಧ್ಯವಾಗಿದೆ.
ಸಂಸದರು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದು, ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ತರುವ ಪ್ರಯತ್ನದಲ್ಲಿ ಅವರ ಪಾತ್ರವನ್ನೂ ಶ್ಲಾಘಿಸಿದ್ದಾರೆ.
ಮಂಗಳೂರು ಸೆಂಟ್ರಲ್ ವಂದೇ ಭಾರತ್ ಸೇವೆ ಸ್ಥಗಿತ
ಹೊಸ ರೈಲು ಸೇವೆ ಆರಂಭವಾಗುವುದರೊಂದಿಗೆ 20645/20646 ಸಂಖ್ಯೆಯ ಮಡಗಾಂವ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೆ ಸಚಿವಾಲಯ ಆದೇಶಿಸಿದೆ. ಹೊಸ ಸೇವೆಯನ್ನು ಅನುಕೂಲಕರ ದಿನಾಂಕದಿಂದ ಆರಂಭಿಸುವಂತೆ ಸಂಬಂಧಪಟ್ಟ ರೈಲ್ವೆ ವಲಯಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಉದ್ಘಾಟನಾ ರೈಲನ್ನು ವಿಶೇಷ ಸೇವೆಯಾಗಿ ಓಡಿಸಿ, ಬಳಿಕ ನಿಯಮಿತ ವೇಳಾಪಟ್ಟಿಗೆ ಸೇರಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
ಪಂಚಗಂಗಾ ಎಕ್ಸ್ಪ್ರೆಸ್ನ ರಾತ್ರಿ ಪ್ರಯಾಣದ ದಟ್ಟಣೆಗೆ ಪರ್ಯಾಯವಾಗಿ ಬೆಳಗಿನ ವೇಳೆಯಲ್ಲಿ ಕರಾವಳಿ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ಪುತ್ತೂರು ಭಾಗದ ಜನರಿಗೆ ವಂದೇ ಭಾರತ್ ರೈಲು ವೇಗದ ಹಾಗೂ ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.
ಸ್ಥಳೀಯ
Soujanya case-ಸೌಜನ್ಯ ಪ್ರಕರಣ: ಎಸ್ಐಟಿಯಿಂದ ‘ಕ್ರೈಂ ಸೀನ್ ರೀ-ಕ್ರಿಯೇಷನ್’; ಮಣ್ಣಸಂಕದಲ್ಲಿ 5 ಗಂಟೆಗಳ ಕಾಲ ಪರಿಶೀಲನೆ, ಮಣ್ಣಿನ ಮಾದರಿ ಸಂಗ್ರಹ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದ್ದು, ಶನಿವಾರ ಧರ್ಮಸ್ಥಳದ ಮಣ್ಣಸಂಕದಲ್ಲಿ ಸುಮಾರು ಐದು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿದೆ. ಈ ವೇಳೆ ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಂ ಸೀನ್ ರೀ-ಕ್ರಿಯೇಷನ್) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದ್ದು, ಶನಿವಾರ ಧರ್ಮಸ್ಥಳದ ಮಣ್ಣಸಂಕದಲ್ಲಿ ಸುಮಾರು ಐದು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿದೆ. ಈ ವೇಳೆ ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಂ ಸೀನ್ ರೀ-ಕ್ರಿಯೇಷನ್) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.
2012ರ ಅಕ್ಟೋಬರ್ 9ರಂದು ನಾಪತ್ತೆಯಾಗಿದ್ದ 17 ವರ್ಷದ ಸೌಜನ್ಯ ಅವರ ಮೃತದೇಹ ಮರುದಿನ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಮಣ್ಣಸಂಕದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೀಗ ಮರುತನಿಖೆಯ ಭಾಗವಾಗಿ ಎಸ್ಐಟಿ ಅಧಿಕಾರಿಗಳು ಅಂದು ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದ್ದಾರೆ.
ಎಸ್ಐಟಿ ತನಿಖಾಧಿಕಾರಿ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ಹಾಗೂ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಜ್ಞರು, ಸೀನ್ ಆಫ್ ಕ್ರೈಂ ಆಫೀಸರ್ಸ್ (ಎಸ್ಒಸಿಒ) ತಂಡ, ಸರ್ಕಾರಿ ವೈದ್ಯರು, ಸ್ಥಳೀಯ ಗ್ರಾಮ ಆಡಳಿತಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.
ಪರಿಶೀಲನೆ ವೇಳೆ ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳದಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಸ್ಒಸಿಒ ಮತ್ತು ಎಫ್ಎಸ್ಎಲ್ ತಂಡಗಳು ವೈಜ್ಞಾನಿಕ ಪರೀಕ್ಷೆಗಾಗಿ ಅಗತ್ಯ ಮಾದರಿಗಳನ್ನು ಸಂಗ್ರಹಿಸಿವೆ.
ಸ್ಥಳ ಮರುಸೃಷ್ಟಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ, 2012ರಲ್ಲಿ ಸೌಜನ್ಯ ಅವರ ಮೃತದೇಹ ಪತ್ತೆಯಾದ ಬಳಿಕ ಪೊಲೀಸರಿಗೆ ಮೊದಲ ಮಾಹಿತಿ ನೀಡಿದ್ದ ಅವರ ಮಾವ ಪುರಂದರ ಗೌಡ ಹಾಗೂ ಅಂದಿನ ಸ್ಥಳ ಮಹಜರಿನ ಪಂಚರು ಸ್ಥಳದಲ್ಲಿದ್ದರು. ಅವರು ಅಂದಿನ ಪರಿಸ್ಥಿತಿ ಮತ್ತು ಘಟನೆಗೆ ಸಂಬಂಧಿಸಿದ ವಿವರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ತಂಡಕ್ಕೆ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವ ಗಡುವು ಇದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಸಾಕ್ಷ್ಯಾಧಾರಗಳ ಮರುಪರಿಶೀಲನೆ, ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಆದ್ಯತೆ ನೀಡಿದೆ.
ಐದು ಗಂಟೆಗಳ ಸುದೀರ್ಘ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ಸ್ಥಳದಿಂದ ತೆರಳಿದ್ದು, ಸಂಗ್ರಹಿಸಲಾದ ಮಣ್ಣಿನ ಮಾದರಿಗಳು ಸೇರಿದಂತೆ ವಿವಿಧ ಸಾಕ್ಷ್ಯಾಧಾರಗಳು ಮುಂದಿನ ತನಿಖೆಯಲ್ಲಿ ಮಹತ್ವ ಪಡೆಯುವ ನಿರೀಕ್ಷೆಯಿದೆ.
-
ಬಿಗ್ ನ್ಯೂಸ್22 hours ago‘ಸ್ಟಿಂಗ್’ ತಲ್ಲಣ : ‘ಪುತ್ತೂರು’ ಟಿಕೆಟ್ ಆಕಾಂಕ್ಷಿ ಕೃಪಾ ಆಳ್ವ ಕಾಂಗ್ರೆಸ್ ನಿಂದ ಉಚ್ಚಾಟನೆ
-
ನಿಧನ ವಾರ್ತೆ11 hours agoMudubidire-ಮೂಡುಬಿದಿರೆ: ಖಾಸಗಿ ಬಸ್–ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ; 19ರ ಹರೆಯದ ಯುವಕ ದುರ್ಮರಣ
-
ನಿಧನ ವಾರ್ತೆ11 hours agoHelicopter crash-ಬದ್ರಿನಾಥ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಹೆಲಿಕಾಪ್ಟರ್ ಪತನ: ಕರ್ನಾಟಕದ ಐವರು ಸೇರಿ 6 ಮಂದಿ ದುರ್ಮರಣ
-
ರಾಜಕೀಯ10 hours agoYatnal-ಬಿಜೆಪಿ ಸೇರ್ಪಡೆಗೆ ಯತ್ನಾಳ್ರಿಂದ ಎರಡು ಷರತ್ತು? ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದೇನು?
-
ಸ್ಥಳೀಯ5 hours agoMangalore-ಮಂಗಳೂರಿಗೆ ಕೆಲಸಕ್ಕೆಂದು ಹೋದ ಎಡಮಂಗಲದ ಯುವತಿ ನಾಪತ್ತೆ
-
ಅಪರಾಧ11 hours agoPuttur-ಪುತ್ತೂರು: ಫೌಂಡೇಶನ್ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಮಕ್ಕಳನ್ನು ಕೊಡಿಸುವುದಾಗಿ ವಂಚಿಸಲು ಯತ್ನಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶ
-
ಸ್ಥಳೀಯ8 hours agoSoujanya case-ಸೌಜನ್ಯ ಮೃತದೇಹ ಸಿಕ್ಕ ಸ್ಥಳಕ್ಕೆ ಎಸ್ಐಟಿ ತಂಡ ಭೇಟಿ; ಸ್ಥಳದಲ್ಲಿ ಬಿಗಿ ಭದ್ರತೆ
-
ನಿಧನ ವಾರ್ತೆ6 hours agoUdupi-ಉಡುಪಿ: ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತ ಆತ್ಮಹತ್ಯೆಗೆ ಶರಣು..!; ಪ್ರೇಮ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡ ಯುವಕನ ಮೇಲೆ ಯುವತಿಯ ಮನೆಯವರಿಂದ ಹಲ್ಲೆ ಆರೋಪ..!


















