Connect with us

Uncategorized

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ : ಮಾಜಿ ಸಚಿವನ ಆಪ್ತೆ ಚಿತ್ರ ನಟಿ ಅರ್ಪಿತಾ ಮನೆಯಲ್ಲಿ ಕಂತೆ ಕಂತೆ ಹಣದ ಜತೆಗೆ ರಾಶಿ ರಾಶಿ ಲೈಂಗಿಕ ಆಟಿಕೆ

Published

on



Ad Widget

Ad Widget

Ad Widget

Ad Widget

ಕೋಲ್ಕತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಡಿ ಇಡಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಹಾಗೂ ನಟಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ರಾಶಿ ರಾಶಿ ಕ್ಯಾಶ್ ಜತೆಗೆ ಸೆಕ್ಸ್ ಟಾಯ್ಸ್ ಕೂಡ ಸಿಕ್ಕಿದೆಯಂತೆ

Ad Widget

Ad Widget

Ad Widget

Ad Widget

ಈ ಅಚ್ಚರಿಯ ವಿಷಯವನ್ನು ಬಹಿರಂಗ ಪಡಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಅರ್ಪಿತಾ ಮುಖರ್ಜಿ ಮನೆಯ ಮೇಲಿನ ದಾಳಿಯ ವೇಳೆ ಅಪಾರ ಪ್ರಮಾಣದ ಚಿನ್ನಾಭರಣಗಳು, 21 ಕೋಟಿ ರೂಪಾಯಿ ನಗದು ಹಾಗೂ ರಾಶಿ ರಾಶಿ ಸೆಕ್ಸ್​ ಟಾಯ್ಸ್​ (ಲೈಂಗಿಕ ಕ್ರಿಯೆಗೆ ಬಳಸುವ ಆಟಿಕೆಗಳು) ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ತೃಣಮೂಲದ ಮಾಜಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಇದಾಗಲೇ ಬಂಧಿಸಲಾಗಿದ್ದು, ಅವರನ್ನು ನಿನ್ನೆ (ಗುರುವಾರ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಚಿವ ಸ್ಥಾನದಿಂದ ವಜಾ ಕೂಡ ಮಾಡಿದ್ದಾರೆ. ಇದರ ನಡುವೆಯೇ, ಇದೀಗ ಲೈಂಗಿಕ ಆಟಿಕೆಗಳು ಸಿಕ್ಕಿರುವುದು ವರದಿಯಾಗಿದೆ.

Ad Widget

Ad Widget <> Ad Widget

ಇದನ್ನು ಅರ್ಪಿತಾ ಅವರ ಮನೆಗೆ ತಂದವರು ಯಾರು, ಏಕೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈ ಆಟಿಕೆಗಳ ಸಮೀಪವೇ ಬೆಳ್ಳಿಯ ಬಟ್ಟಲುಗಳು ಸಿಕ್ಕಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.



Ad Widget

ಏಕೆಂದರೆ, ಬಂಗಾಳಿ ಜನರು ಹೊಸದಾಗಿ ಮದುವೆಯಾದ ದಂಪತಿಗೆ ಬೆಳ್ಳಿಯ ಬಟ್ಟಲುಗಳನ್ನು ನೀಡುತ್ತಾರೆ. ಹೊಚ್ಚ ಹೊಸತಾಗಿರುವ ಬೆಳ್ಳಿಯ ಬಟ್ಟಲುಗಳು ಅರ್ಪಿತಾ ಮನೆಯಲ್ಲಿ ಏನು ಮಾಡುತ್ತಿವೆ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

Ad Widget

Ad Widget

ಸೆಕ್ಸ್ ಟಾಯ್ಸ್​ಗೆ ಸಂಬಂಧಿಸಿದಂತೆ ಅರ್ಪಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ಇಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದರ ನಡುವೆಯೇ, ಇಂಡಿಯಾ ಟುಡೇ ಕಾರ್ಯಕ್ರಮವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧಂಖರ್ ಅವರ ವಿಡಿಯೋ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಅನೇಕ ಮುಖ್ಯಮಂತ್ರಿಗಳು ಇದೇ ರೀತಿಯ ಆದರೆ ಇದಕ್ಕಿಂತ ಚಿಕ್ಕದಾದ ನೇಮಕಾತಿ ಹಗರಣಗಳಿಗಾಗಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಜಗದೀಪ್ ಧಂಖರ್ ನೀಡಿರುವ ಸಂದರ್ಶನ ಇದಾಗಿದೆ. ಬಿಜೆಪಿ ನಾಯಕ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣವನ್ನು ಎಲ್ಲಾ ಹಗರಣಗಳ ತಾಯಿ ಎಂದು ಕರೆಯಲಾಗುತ್ತಿದೆ.

ಏನಿದು ಹಗರಣ?

ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ
ಮಧ್ಯಪ್ರವೇಶಿಸಿದ ಇ.ಡಿ ಅರ್ಪಿತಾ ಹಾಗೂ ಸೇರಿದಂತೆ ಅನೇಕರ ಮನೆಗಳ ಮೇಲೆ ದಾಳಿ ನಡೆಸಿದೆ.

ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು. ಆದರೆ, ಅವರನ್ನು ವಜಾಗೊಳಿಸಲಾಗಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

Ad Widget
Click to comment

Leave a Reply

Uncategorized

Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿಗೆ ‘ಅಂಬಿಯೋರ- 2026’; ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’  ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’  ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ  ಸ್ವಿನಿಕಾ ವಿಯೋಲಾ ಕ್ರಾಸ್ತಾ ಹಾಗೂ ಧ್ಯಾನ್ ಬಿ ಪ್ರಥಮ, ಪ್ರಾಡಕ್ಟ್ ಇನ್ನೊವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಿವಾನಿ ಹಾಗೂ ಗಾನವಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅದ್ವಿತಿ ಜಿ ಹಾಗೂ ಎ ಜಿ ಕೃತಿಕಾ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವೇದಿತಾ ಕೆ ಮತ್ತು ತನುಶ್ರೀ ಬಿ ದ್ವಿತೀಯ, ಬಿಸ್ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ಹೆಫ್ಜಿಬಾ ಎಂ ರಿನ್ಸಾನ್ ಹಾಗೂ ಪ್ರೀತಾ ಎ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಜ್ನಾಜ್ ಮತ್ತು ಹಲೀಮತ್ ಸೌಧ ದ್ವಿತೀಯ ಹಾಗೂ ಮಿನಿ ಮಿಲಿಟಿಯ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಹಾದ್ ಅಜಾರ್ ಮತ್ತು ಮೊಹಮ್ಮದ್ ರಫಾಜ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.



Ad Widget
Ad Widget
Continue Reading

Uncategorized

Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ ಬಗ್ಗೆ ಮಾತ್ರವಲ್ಲ. ಇಲ್ಲಿ ವಿದ್ಯಾರ್ಥಿಗಳು ಉದ್ಯಮ ನಡೆಸುವಾಗ ಇರಬೇಕಾದ ಕೌಶಲ್ಯಗಳು, ಗ್ರಾಹಕರ ಮನಸ್ಥಿತಿ ಮತ್ತು ಅವರೊಂದಿಗೆ ವ್ಯವಹರಿಸಬೇಕಾದ ರೀತಿಯನ್ನು ಮೇಳಗಳಿಂದ ತಿಳಿದುಕೊಳ್ಳಬಹುದು. ಇದರ ನಡುವೆ ಬರುವ ಸೋಲು-ಗೆಲುವುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಬೇಕು ಎಂದು ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಗೌರವ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಉದ್ದಿಮೆಯ ಬಗ್ಗೆ ಸೈದ್ಧಾಂತಿಕವಾಗಿ ಕಲಿತ ವಿಚಾರಗಳು ಇಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಒಂದು ಉದ್ದಿಮೆಯನ್ನು ನಡೆಸಬೇಕಾದರೆ ಅದರಲ್ಲಿರುವಂತಹ ಕಷ್ಟ-ಸುಖಗಳನ್ನು ಅರಿಯಲು ಇಂತಹ ಮೇಳಗಳು ಅಗತ್ಯ ಎಂದು ಹೇಳಿದರು.



Ad Widget

ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಉಪಸ್ಥಿತರಿದ್ದರು.

Ad Widget

Ad Widget

ಸ್ವಾದಸಂಭ್ರಮ ಆಹಾರ ಮೇಳ-2026ರ ವಿಜೇತರು:

ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಫ್ರೋಜನ್ ಡಿಲೈಟ್ ತಂಡ ಪ್ರಥಮ ಸ್ಥಾನ, ಬೈಟ್ ಬೈ ಬೈಟ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ನೈರ್ಮಲ್ಯ ಕಾಪಾಡುವಿಕೆ ವಿಭಾಗದಲ್ಲಿ ಸ್ವದೇಶೀ ಸ್ವಾದ್ ತಂಡ, ಗ್ರಾಹಕರೊಂದಿಗೆ ಉತ್ತಮ ಸಂವಹನ ವಿಭಾಗದಲ್ಲಿ ಫ್ಲೇವರ್ ತಂಡ, ಉತ್ತಮ ಪೋಸ್ಟರ್ ವಿಭಾಗದಲ್ಲಿ ಫ್ಲೇವರ್ ಹಂಟರ್ಸ್ ತಂಡ ಹಾಗೂ ಉತ್ತಮ ರೀಲ್ಸ್ ವಿಭಾಗದಲ್ಲಿ ಸ್ವದ್ಘಾಮ್ ತಂಡ ಪ್ರಶಸ್ತಿ ಪಡೆದಿಕೊಂಡಿದೆ.

ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ಕೆ. ಕೃತಿಕಾ ನಿರ್ವಹಿಸಿದರು.

Ad Widget
Continue Reading

Uncategorized

Ashok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ

Published

on



Ad Widget

Ad Widget

Ad Widget

Ad Widget

ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಈ ಭಾಗದ ಜನರು ರಸ್ತೆಯಿಲ್ಲದೆ ಸುಮಾರು 50 ವರ್ಷಗಳಿಂದ ತೊಂದರೆಯಲ್ಲಿದ್ದರು, ಇಲ್ಲಿ ಸುಮಾರು ಹತ್ತು ಮನೆಗಳಿದೆ, ಮನೆ ಕಟ್ಟುವಾಗ ಇವರೆಲ್ಲಾ ಕಲ್ಲನ್ನು ಕಾಲು ದಾರಿಯ ಮೂಲಕ ಹೊತ್ತುಕೊಂಡೇ ಹೋಗಿದ್ದು, ವಾಹನ ಹತ್ತ ಬೇಕಾದರೆ ಒಂದಷ್ಟು ದೂರ ನಡೆದುಕೊಂಡೇ ಬರಬೇಕಾದ ಸ್ಥಿತಿ. ಇದು ಪೆರುವಾಯಿ ಗ್ರಾಮದ ಬದ್ಯಾರಿನ ಕಥೆ.

Ad Widget

Ad Widget

Ad Widget alt="Ad Widget"/>

Ad Widget

ಇವರು ರಸ್ತೆಗಾಗಿ ಮನವಿ ಹಾಗೂ ಹೋರಾಟವನ್ನು ಮಾಡುತ್ತಲೇ ಇದ್ದರು. ಆದರೆ ರಸ್ತೆ ನಿರ್ಮಾಣವಾಗುವಲ್ಲಿ ಖಾಸಗಿ ಜಾಗದ ತಕರಾರಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಅನೇಕ ಜನಪ್ರತಿನಿಧಿಗಳು ಪ್ರಯತ್ನ ಮಾಡಿದ್ದರು ಆದರೆ ಯಾರಿದಂಲೂ ಸಾಧ್ಯವಾಗಿಲ್ಲ, ಕೆಲವರು ಭರವಸೆಯನ್ನು ಮಾತ್ರ ಕೊಟ್ಟಿದ್ದರು.

Ad Widget

Ad Widget <> Ad Widget

ಶಾಸಕ ಅಶೋಕ್ ರೈ ಭೇಟಿ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.



Ad Widget

ಶಾಸಕರಿಗೆ ಸನ್ಮಾನ
ವಿವಾದ ಇತ್ಯರ್ಥಪಡಿಸಿ ೫೦ ವರ್ಷಗಳ ಹಿಂದಿನ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಬದ್ಯಾರು ರಸ್ತೆ ಫಲಾನುಭವಿಗಳು ಸನ್ಮಾನವನ್ನು ಮಾಡಿದ್ದಾರೆ.

Ad Widget

Ad Widget

ಬದ್ಯಾರ್‌ನಿವಾಸಿಗಳು ತಮ್ಮ ಕಷ್ಟವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ರಸ್ತೆ ಇಲ್ಲದೆ ಹತ್ತು ಕುಟುಂಬಗಳು ಸಂಕಷ್ಟದಲ್ಲಿತ್ತು ಮಾತ್ರವಲ್ಲದೆ ಪಕ್ಕದಲ್ಲೇ ಒಂದು ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಜಾಗದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿದಾಗ ಅವರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಮೂಲಕ ದೊಡ್ಡ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಬೇಡಿಕೆ ಈಡೇರಿಸಿದ್ದೇನೆ, ಅನುದಾನವನ್ನು ನೀಡಿದ್ದೇನೆ ಮುಂದೆ ಅವರೆಲ್ಲರೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು

ರಸ್ತೆ ಸಂಪರ್ಕ ಇಲ್ಲದೆ 50 ವರ್ಷದಿಂದ ಪರದಾಡುತ್ತಿದ್ದೇವೆ, ನಾವು ಬಿಜೆಪಿ ಶಾಸಕರಿಗೆ, ಮುಖಂಡರಿಗಳಿಗೆ ಮನವಿ ಮಾಡಿದ್ದೆವು, ನಾವು ಬಿಜೆಪಿ ಕಾರ್ಯಕರ್ತರಾದರೂ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿರಲಿಲ್ಲ. ನಾವು ಶಾಸಕ ಅಶೋಕ್ ರೈ ಕಚೇರಿಗೆ ಈ ವಿಚಾರವನ್ನು ತಿಳಿಸಲು ಹೋದಾಗ ಕೆಲವರು ನಮ್ಮನ್ನು ಛೇಡಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರಾದ ಕಾರಣ ನಿಮ್ಮ ಕೆಲಸ ಶಾಸಕರು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ನಾವು ಮುಂದೆ ಅಶೋಕ್ ರೈ ಜೊತೆ ಇರುತ್ತೇವೆ, ಶಾಸಕರು ಮಾಡಿದ ಈ ಉಪಕಾರವನ್ನು ಮರೆಯುವುದೇ ಇಲ್ಲ.
ಜಯರಾಮ, ಬದ್ಯಾರ್ ಫಲಾನುಭವಿ

ಯಾವ ಜನಪ್ರತಿನಿಧಿಯಿಂದಲೂ ಮಾಡಲಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಪಕ್ಷ ಬೇದವಿಲ್ಲದೆ ಬೇಡಿಕೆಯನ್ನು ಈಡೇರಿಸಿದ್ದಾರೆ, ಇವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವು ಖಂಡಿತಾ ಕೆಲಸ ಮಾಡುತ್ತೇವೆ.
ಶೀಲಾ ರೈ , ಫಲಾನುಭವಿ

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading